Psalms · chapter 56 · verse 4
Psalm 56:4 in Kannada
ದೇವರಲ್ಲಿ ಆತನ ವಾಕ್ಯವನ್ನು ನಾನು ಸ್ತುತಿಸುವೆನು; ದೇವರಲ್ಲಿ ನಾನು ಭರವಸವಿಟ್ಟಿದ್ದೇನೆ; ನಾನು ಭಯಪಡೆನು, ಮನುಷ್ಯನು ನನಗೆ ಏನು ಮಾಡಬಲ್ಲನು?
Devaralli aatana vaakyavannu naanu stutisuvenu; devaralli naanu bharavasavittiddene; naanu bhayapadenu, manushyanu nanage enu maadaballanu?
Psalm 56:4 in English
- King James Version (KJV)
- In God I will praise his word, in God I have put my trust; I will not fear what flesh can do unto me.
- World English Bible (WEB)
- In God, I praise his word. In God, I put my trust. I will not be afraid. What can flesh do to me?
- American Standard Version (ASV)
- In God (I will praise his word), In God have I put my trust, I will not be afraid; What can flesh do unto me?
- Bible in Basic English (BBE)
- In God will I give praise to his word; in God have I put my hope; I will have no fear of what flesh may do to me.
- Darby Translation (DBY)
- In God will I praise his word, in God I put my confidence: I will not fear; what can flesh do unto me?
- Webster's Bible (WBS)
- In God I will praise his word, in God I have put my trust; I will not fear what flesh can do to me.
- Young's Literal Translation (YLT)
- In God I praise His word, in God I have trusted, I fear not what flesh doth to me.
Read in context
- 2ಓ ಅತ್ಯುನ್ನತನೇ, ನನ್ನ ವಿರೋಧಿಗಳು ದಿನವೆಲ್ಲಾ ನನ್ನನ್ನು ನುಂಗಬೇಕೆಂದಿದ್ದಾರೆ; ನನಗೆ ವಿರೋಧವಾಗಿ ಗರ್ವದಿಂದ ಯುದ್ಧಮಾಡುವವರು ಅನೇಕರಾಗಿದ್ದಾರೆ.
- 3ನನಗೆ ಹೆದರಿಕೆ ಉಂಟಾದಾಗ ನಿನ್ನಲ್ಲಿ ಭರವಸವಿ ಡುವೆನು.
- 4ದೇವರಲ್ಲಿ ಆತನ ವಾಕ್ಯವನ್ನು ನಾನು ಸ್ತುತಿಸುವೆನು; ದೇವರಲ್ಲಿ ನಾನು ಭರವಸವಿಟ್ಟಿದ್ದೇನೆ; ನಾನು ಭಯಪಡೆನು, ಮನುಷ್ಯನು ನನಗೆ ಏನು ಮಾಡಬಲ್ಲನು?
- 5ಪ್ರತಿದಿನ ಅವರು ನನ್ನ ಮಾತುಗಳನ್ನು ಅಪಾರ್ಥ ಮಾಡುತ್ತಾರೆ. ನನಗೆ ವಿರೋಧವಾಗಿರುವ ಅವರ ಆಲೋಚನೆಗಳೆಲ್ಲಾ ನನ್ನ ಕೇಡಿಗಾಗಿವೆ.
- 6ಅವರು ಕೂಡಿಕೊಂಡು ಹೊಂಚುಹಾಕುತ್ತಾರೆ; ನನ್ನ ಪ್ರಾಣಕ್ಕೆ ಕಾಯುವವರಾಗಿ ನನ್ನ ಹೆಜ್ಜೆಗಳನ್ನು ಗುರುತಿಸುತ್ತಾರೆ.
Cross references
- Hebrews 13:6 ಇಬ್ರಿಯರಿಗೆ 13:6ಆದದರಿಂದ--ಕರ್ತನು ನನ್ನ ಸಹಾಯಕನು, ಭಯಪಡೆನು, ಮನುಷ್ಯನು ನನಗೆ ಏನು ಮಾಡಾನು ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು.
- Psalm 118:6 ಕೀರ್ತನೆಗಳು 118:6ಕರ್ತನು ನನ್ನ ಪರವಾಗಿದ್ದಾನೆ; ನಾನು ಭಯಪಡೆನು; ಮನುಷ್ಯನು ನನಗೆ ಏನು ಮಾಡುವನು?
- Romans 8:31–39 ರೋಮಾಪುರದವರಿಗೆ 8:31–39ಹಾಗಾದರೆ ಈ ವಿಷಯಗಳಲ್ಲಿ ನಾವು ಏನು ಹೇಳೋಣ? ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು? ದೇವರು ತನ್ನ ಸ್ವಂತ ಮಗನನ್ನು ಉಳಿಸಿಕೊಳ್ಳದೆ ಆತನನ್ನು ನಮ್ಮೆಲ್ಲರಿಗೊಸ್ಕರ ಒಪ್ಪಿಸಿಕೊಟ್ಟ ಮೇಲೆ ಆತನೊಂದಿಗೆ ಎಲ್ಲವುಗಳನ್ನು ಉಚಿತವಾಗಿ ನಮಗೆ ಕೊಡದೆ ಇರುವನೇ? ದೇವರಾದುಕೊಂಡವರ ಮೇಲೆ ಯಾರು ತಪ್ಪು ಹೊರಿಸಾರು? ದೇವರೇ ನಮ್ಮನ್ನು ನೀತಿವಂತರೆಂದು ನಿರ್ಣಯಿಸುವವನಾಗಿದ್ದಾನೆ. ಅಪರಾಧಿಗಳೆಂದು ನಿರ್ಣಯಿಸುವವರು ಯಾರು? ಕ್ರಿಸ್ತನು ಮರಣವನ್ನು ಹೊಂದಿದ್ದಲ್ಲದೆ (ಜೀವಿತನಾಗಿ) ಎದ್ದು ದೇವರ ಬಲಗಡೆಯಲ್ಲಿ ನಮಗೋಸ್ಕರ ವಿಜ್ಞಾಪನೆ ಮಾಡು ವಾತನಾಗಿದ್ದಾನೆ; ಕ್ರಿಸ್ತನ ಪ್ರೀತಿಯಿಂದ ನಮ್ಮನ್ನು ಅಗಲಿಸುವವರು ಯಾರು? ಕಷ್ಟವೋ ಸಂಕಟವೋ ಹಿಂಸೆಯೋ ಬರಗಾಲವೋ ವಸ್ತ್ರವಿಲ್ಲದಿರುವದೋ ಗಂಡಾಂತರವೋ ಖಡ್ಗವೋ? ನಾವು ನಿನ್ನ ನಿಮಿತ್ತ ದಿನವೆಲ್ಲಾ ಕೊಲೆಗೆ ಗುರಿಯಾಗಿದ್ದೇವೆ; ನಾವು ಕೊಯ್ಗುರಿಗಳಂತೆ ಎಣಿಸಲ್ಪಡುತ್ತಿದ್ದೇವೆ ಎಂದು ಬರೆಯಲ್ಪಟ್ಟಿದೆ. ಹೌದು, ನಮ್ಮನ್ನು ಪ್ರಿತಿಸಿದಾತನ ಮೂಲಕವಾಗಿ ನಾವು ಈ ಎಲ್ಲವುಗಳಲ್ಲಿ ಜಯಶಾಲಿ ಗಳಿಗಿಂತಲೂ ಹೆಚ್ಚಿನವರಾಗಿದ್ದೇವೆ. ಹೇಗಂದರೆ ಮರಣವಾಗಲಿ ಜೀವವಾಗಲಿ ದೂತರಾಗಲಿ ರಾಜತ್ವಗಳಾಗಲಿ ಅಧಿಕಾರಗಳಾಗಲಿ ಈಗಿನವುಗಳಾ ಗಲಿ ಮುಂಬರುವವುಗಳಾಗಲಿಉನ್ನತವಾಗಲಿ ಅಗಾಧವಾಗಲಿ ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ದೇವರ ಪ್ರೀತಿಯಿಂದ ಅಗಲಿಸಲಾರವೆಂದು ನನಗೆ ನಿಶ್ಚಯ ಉಂಟು. ಉನ್ನತವಾಗಲಿ ಅಗಾಧವಾಗಲಿ ಬೇರೆ ಯಾವ ಸೃಷ್ಟಿಯಾಗಲಿ ನಮ್ಮನ್ನು ನಮ್ಮ ಕರ್ತನಾದ ಕ್ರಿಸ್ತ ಯೇಸುವಿನಲ್ಲಿರುವ ದೇವರ ಪ್ರೀತಿಯಿಂದ ಅಗಲಿಸಲಾರವೆಂದು ನನಗೆ ನಿಶ್ಚಯ ಉಂಟು.
- Psalm 27:1 ಕೀರ್ತನೆಗಳು 27:1ಕರ್ತನು ನನ್ನ ಬೆಳಕೂ ರಕ್ಷಣೆಯೂ ಆಗಿದ್ದಾನೆ; ನಾನು ಯಾರಿಗೆ ಭಯಪಡು ವೆನು? ಕರ್ತನು ನನ್ನ ಜೀವದ ಬಲವಾಗಿದ್ದಾನೆ; ನಾನು ಯಾರಿಗೆ ಹೆದರುವೆನು?
- Isaiah 41:10 ಯೆಶಾಯ 41:10ನೀನಂತೂ ಹೆದರಬೇಡ; ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು. ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿ ಸುತ್ತೇನೆ; ಹೌದು, ನಾನು ನಿನಗೆ ಸಹಾಯ ಮಾಡು ತ್ತೇನೆ. ಹೌದು, ನನ್ನ ನೀತಿಯ ಬಲಗೈಯಿಂದ ನಿನ್ನನ್ನು ಎತ್ತಿ ಹಿಡಿಯುತ್ತೇನೆ.
- Luke 12:4–5 ಲೂಕನು 12:4–5ನನ್ನ ಸ್ನೇಹಿತರಾದ ನಿಮಗೆ ನಾನು ಹೇಳುವದೇನಂದರೆ--ದೇಹವನ್ನು ಕೊಂದು ಅದಕ್ಕಿಂತ ಹೆಚ್ಚೇನೂ ಮಾಡಲಾರ ದವರಿಗೆ ಹೆದರಬೇಡಿರಿ. ಆದರೆ ಯಾರಿಗೆ ನೀವು ಭಯಪಡಬೇಕೆಂದು ಮುಂದಾಗಿ ನಾನು ನಿಮ್ಮನ್ನು ಎಚ್ಚರಿಸುತ್ತೇನೆ; ಕೊಂದಮೇಲೆ ನರಕದಲ್ಲಿ ಹಾಕುವದಕ್ಕೆ ಅಧಿಕಾರವಿರುವಾತನಿಗೇ ಭಯಪಡಿರಿ; ಹೌದು, ಆತನಿಗೆ ಭಯಪಡಿರಿ ಎಂದು ನಾನು ನಿಮಗೆ ಹೇಳುತ್ತೇನೆ.
- Psalm 56:10–11 ಕೀರ್ತನೆಗಳು 56:10–11ದೇವ ರಲ್ಲಿ ಆತನ ವಾಕ್ಯವನ್ನು ನಾನು ಸ್ತುತಿಸುವೆನು; ಕರ್ತ ನಲ್ಲಿ ಆತನ ವಾಕ್ಯವನ್ನು ನಾನು ಸ್ತುತಿಸುವೆನು. ದೇವರಲ್ಲಿ ನಾನು ಭರವಸವಿಟ್ಟಿದ್ದೇನೆ; ನಾನು ಭಯ ಪಡೆನು; ಮನುಷ್ಯನು ನನಗೆ ಏನು ಮಾಡಬಲ್ಲನು?
- Psalm 46:1–2 ಕೀರ್ತನೆಗಳು 46:1–2ನಮ್ಮ ಆಶ್ರಯವೂ ಬಲವೂ ಆಗಿರುವ ದೇವರು ಇಕ್ಕಟ್ಟಿನಲ್ಲಿ ನಮಗೆ ವಿಶೇಷ ಸಹಾಯಕನು. ಆದದರಿಂದ ಭೂಮಿಯು ತೆಗೆದು ಹಾಕಲ್ಪಟ್ಟರೂ ಬೆಟ್ಟಗಳು ಸಮುದ್ರದ ಮಧ್ಯಕ್ಕೆ ಒಯ್ಯ ಲ್ಪಟ್ಟರೂ
- Psalm 119:89–90 ಕೀರ್ತನೆಗಳು 119:89–90ಓ ಕರ್ತನೇ, ಎಂದೆಂದಿಗೂ ನಿನ್ನ ವಾಕ್ಯವು ಪರಲೋಕದಲ್ಲಿ ಸ್ಥಿರವಾಗಿದೆ. ತಲತಲಾಂತರಕ್ಕೂ ನಿನ್ನ ನಂಬಿಗಸ್ತಿಕೆಯು ಇರುವದು; ನೀನು ಭೂಮಿ ಯನ್ನು ಸ್ಥಾಪಿಸಿದಿ; ಅದು ನೆಲೆಯಾಗಿದೆ.
- Isaiah 31:3 ಯೆಶಾಯ 31:3ಐಗು ಪ್ತ್ಯರು ಮನುಷ್ಯಮಾತ್ರದವರೇ, ದೇವರಲ್ಲ; ಅವರ ಅಶ್ವಗಳು ಆತ್ಮವಲ್ಲ, ಮಾಂಸಮಯವೇ; ಹೀಗಿರುವದ ರಿಂದ ಕರ್ತನು ತನ್ನ ಕೈಚಾಚುವಾಗ ಸಹಾಯ ಮಾಡಿ ದವನು ಮತ್ತು ಸಹಾಯಪಡೆದವನೂ ಬಿದ್ದುಹೋಗು ವನು, ಅಂತೂ ಎಲ್ಲರೂ ಒಟ್ಟಿಗೆ ಲಯವಾಗುವರು.
- Psalm 19:7–8 ಕೀರ್ತನೆಗಳು 19:7–8ಕರ್ತನ ನ್ಯಾಯಪ್ರಮಾಣವು ಸಂಪೂರ್ಣವಾಗಿದ್ದು ಪ್ರಾಣಕ್ಕೆ ಜೀವಕರವಾಗಿದೆ: ಕರ್ತನ ಸಾಕ್ಷಿಯು ಮೂರ್ಖರನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ. ಕರ್ತನ ಕಟ್ಟಳೆಗಳು ನ್ಯಾಯವಾದವುಗಳಾಗಿದ್ದು ಹೃದಯಕ್ಕೆ ಸಂತೋಷಕರವಾಗಿವೆ; ಕರ್ತನ ಆಜ್ಞೆಯು ಶುದ್ಧವಾ ದದ್ದು; ಕಣ್ಣುಗಳನ್ನು ಬೆಳಗಿಸುತ್ತದೆ.
- Psalm 119:160 ಕೀರ್ತನೆಗಳು 119:160ಆದಿ ಯಿಂದಲೂ ನಿನ್ನ ವಾಕ್ಯವು ಸತ್ಯವೇ; ನಿನ್ನ ನೀತಿಯ ನ್ಯಾಯವಿಧಿಗಳೆಲ್ಲಾ ನಿತ್ಯವಾಗಿವೆ.