Psalms · chapter 118 · verse 10
Psalm 118:10 in Kannada
ಎಲ್ಲಾ ಜನಾಂಗದವರು ನನ್ನನ್ನು ಸುತ್ತಿಕೊಂಡರು; ನಾನು ಕರ್ತನ ಹೆಸರಿನಲ್ಲಿ ಅವರನ್ನು ನಾಶಮಾಡು ವೆನು.
Ellaa janaangadavaru nannannu suttikondaru; naanu kartana hesarinalli avarannu naashamaadu venu.
Psalm 118:10 in English
- King James Version (KJV)
- All nations compassed me about: but in the name of the LORD will I destroy them.
- World English Bible (WEB)
- All the nations surrounded me, but in the LORD’s name I cut them off.
- American Standard Version (ASV)
- All nations compassed me about: In the name of Jehovah I will cut them off.
- Bible in Basic English (BBE)
- All the nations have come round me; but in the name of the Lord I will have them cut down.
- Darby Translation (DBY)
- All nations encompassed me; but in the name of Jehovah have I destroyed them.
- Webster's Bible (WBS)
- All nations encompassed me: but in the name of the LORD will I destroy them.
- Young's Literal Translation (YLT)
- All nations have compassed me about, In the name of Jehovah I surely cut them off.
Read in context
- 8ಮನುಷ್ಯರಲ್ಲಿ ಭರ ವಸವಿಡುವದಕ್ಕಿಂತ ಕರ್ತನಲ್ಲಿ ನಂಬಿಕೆಯಿಡುವದು ಒಳ್ಳೇದು.
- 9ಅಧಿಪತಿಗಳಲ್ಲಿ ಭರವಸವಿಡುವದಕ್ಕಿಂತ ಕರ್ತನನ್ನು ನಂಬಿಕೊಳ್ಳುವದು ಒಳ್ಳೇದು.
- 10ಎಲ್ಲಾ ಜನಾಂಗದವರು ನನ್ನನ್ನು ಸುತ್ತಿಕೊಂಡರು; ನಾನು ಕರ್ತನ ಹೆಸರಿನಲ್ಲಿ ಅವರನ್ನು ನಾಶಮಾಡು ವೆನು.
- 11ಅವರು ನನ್ನನ್ನು ಸುತ್ತಿಕೊಂಡರು; ಹೌದು, ನನ್ನನ್ನು ಸುತ್ತಿಕೊಂಡರು; ಕರ್ತನ ಹೆಸರಿನಲ್ಲಿ ಅವ ರನ್ನು ಸಂಹರಿಸುವೆನು.
- 12ಜೇನ್ನೊಣಗಳ ಹಾಗೆ ನನ್ನನ್ನು ಸುತ್ತಿಕೊಂಡರೂ ಅವರು ಮುಳ್ಳುಗಳ ಬೆಂಕಿಯ ಹಾಗೆ ಆರಿಹೋಗುತ್ತಾರೆ, ಕರ್ತನ ಹೆಸರಿನಲ್ಲಿ ನಾನು ಅವ ರನ್ನು ಸಂಹರಿಸುವೆನು.
Cross references
- Psalm 88:17 ಕೀರ್ತನೆಗಳು 88:17ನೀರಿನ ಹಾಗೆ ಅವು ಬಂದು ನನ್ನನ್ನು ದಿನವೆಲ್ಲಾ ಸುತ್ತಿಕೊಂಡಿವೆ; ಏಕವಾಗಿ ನನ್ನನ್ನು ಮುತ್ತಿಕೊಂಡಿವೆ.ಪ್ರಿಯನನ್ನೂ ಸ್ನೇಹಿತನನೂ ನನಗೆ ದೂರ ಮಾಡಿದ್ದೀ; ನನ್ನ ಕತ್ತಲೆಯ ಸ್ಥಳವೇ ನನ್ನ ಪರಿಚಿತರು.
- Revelation 20:8–9 ಪ್ರಕಟನೆ 20:8–9ಅವನು ಹೊರಗೆ ಬಂದು ಭೂಮಿಯ ನಾಲ್ಕು ದಿಕ್ಕುಗಳಲ್ಲಿರುವ ಗೋಗ್ ಮಾಗೋಗ್ ಎಂಬ ಜನಾಂಗಗಳನ್ನು ಮರುಳುಗೊಳಿಸಿ ಅವರನ್ನು ಯುದ್ಧಕ್ಕೆ ಕೂಡಿಸುವನು; ಅವರ ಸಂಖ್ಯೆಯು ಸಮುದ್ರದ ಮರಳಿನಷ್ಟಿರುವದು. ಅವರು ಭೂಮಿಯಲ್ಲೆಲ್ಲಾ ಹರಡಿಕೊಂಡು ಪರಿಶುದ್ಧರ ದಂಡಿಗೂ ಆ ಪ್ರಿಯ ಪಟ್ಟಣಕ್ಕೂ ಮುತ್ತಿಗೆ ಹಾಕಿದರು. ಆಗ ದೇವರ ಬಳಿಯಿಂದ ಬೆಂಕಿಯು ಪರಲೋಕ ದೊಳಗಿಂದ ಇಳಿದು ಬಂದು ಅವರನ್ನು ನುಂಗಿಬಿಟ್ಟಿತು.
- 2 Samuel 8:1–18 2 ಸಮುವೇಲನು 8:1–18ಇದಾದ ಮೇಲೆ ಏನಾಯಿತಂದರೆ, ದಾವೀದನು ಫಿಲಿಷ್ಟಿಯರನ್ನು ಹೊಡೆದು ಅವರನ್ನು ಅಣಗಿಸಿ ಅವರ ಕೈಯಿಂದ ಮೇತೆಗಮ್ಮವನ್ನು ತಕ್ಕೊಂಡನು. ಇದಲ್ಲದೆ ಅವನು ಮೋವಾಬ್ಯರನ್ನು ಹೊಡೆದು ಅವರನ್ನು ಹಗ್ಗದಿಂದ ಅಳೆದು ನೆಲಕ್ಕೆ ಬೀಳಮಾಡಿದನು; ಅವರನ್ನು ಕೊಲ್ಲುವದಕ್ಕೆ ಎರಡು ದಾರಗಳಿಂದ, ಜೀವದಲ್ಲಿಡುವದಕ್ಕೆ ಒಂದು ಪೂರ್ಣ ವಾದ ಹಗ್ಗದಿಂದ ಅಳೆದನು. ಹಾಗೆಯೇ ಮೋವಾಬ್ಯರು ದಾವೀದನಿಗೆ ದಾಸರಾಗಿ ಅವನಿಗೆ ಕಪ್ಪವನ್ನು ತಂದರು. ಇದಲ್ಲದೆ ಚೋಬದ ಅರಸನಾಗಿರುವ ರೆಹೋಬನ ಮಗನಾದ ಹದದೆಜೆರನು ತನ್ನ ಮೇರೆಯನ್ನು ಕಟ್ಟಿ ಕೊಳ್ಳುವದಕ್ಕೆ ಹೋದಾಗ ದಾವೀದನು ಯೂಫ್ರೇ ಟಿಸ್ ನದಿಯ ಬಳಿಯಲ್ಲಿ ಅವನಿಗಿದ್ದ ಸಾವಿರ ರಥ ಗಳನ್ನೂ ಏಳು ನೂರು ಕುದುರೆ ರಾಹುತರನ್ನೂ ಇಪ್ಪತ್ತು ಸಾವಿರ ಕಾಲಾಳುಗಳನ್ನೂ ಹಿಡಿದು ನೂರು ರಥಗಳಿಗೆ ತಕ್ಕ ಕುದುರೆಗಳನ್ನು ಉಳಿಸಿ ಇತರ ಕುದುರೆಗಳ ಕಾಲಿನ ನರಗಳನ್ನು ಕೊಯ್ದುಬಿಟ್ಟನು. ಆದರೆ ದಮಸ್ಕದಲ್ಲಿರುವ ಅರಾಮ್ಯರು ಚೋಬದ ಅರಸನಾದ ಹದದೆಜೆರನಿಗೆ ಸಹಾಯಮಾಡುವದಕ್ಕೆ ಬಂದಾಗ ದಾವೀದನು ಅರಾಮ್ಯರಲ್ಲಿ ಇಪ್ಪತ್ತೆರಡು ಸಾವಿರ ಜನರನ್ನು ಕೊಂದು ಹಾಕಿದನು. ತರುವಾಯ ಕಾವಲುದಂಡುಗಳನ್ನು ದಾವೀದನು ದಮಸ್ಕಕ್ಕೆ ಹೊಂದಿದ ಅರಾಮ್ಯದ ಠಾಣ ಗಳಲ್ಲಿ ಇಟ್ಟನು. ಹಾಗೆಯೇ ಅರಾಮ್ಯರು ದಾವೀದ ನಿಗೆ ದಾಸರಾಗಿ ಕಪ್ಪಗಳನ್ನು ತಂದರು; ದಾವೀದನು ಹೋದ ಸ್ಥಳಗಳಲ್ಲೆಲ್ಲಾ ಕರ್ತನು ಅವನನ್ನು ಕಾಪಾಡಿ ದನು. ಆದರೆ ದಾವೀದನು ಹದದೆಜೆರನ ಸೇವಕ ರಿಗಿದ್ದ ಬಂಗಾರದ ಡಾಲುಗಳನ್ನು ತೆಗೆದುಕೊಂಡು ಅವುಗಳನ್ನು ಯೆರೂಸಲೇಮಿಗೆ ತಂದನು. ಇದಲ್ಲದೆ ಹದದೆಜೆರನ ಪಟ್ಟಣಗಳಾದ ಬೆಟಹದಿಂದಲೂ ಬೇರೋತೈಯಿಂದಲೂ ಅರಸನಾದ ದಾವೀದನು ಅತ್ಯ ಧಿಕವಾಗಿ ಹಿತ್ತಾಳೆಯನ್ನು ತೆಗೆದುಕೊಂಡು ಬಂದನು. ದಾವೀದನು ಹದದೆಜೆರನ ಎಲ್ಲಾ ಸೈನ್ಯವನ್ನು ಹೊಡೆದನೆಂದು ಹಮಾತಿನ ಅರಸನಾದ ತೋವು ಕೇಳಿದಾಗ ಅವನು ದಾವೀದನನ್ನು ವಂದಿಸುವ ದಕ್ಕೂ ಹರಸುವದಕ್ಕೂ ತನ್ನ ಮಗನಾದ ಯೋರಾಮ ನನ್ನು ಕಳುಹಿಸಿದನು; ಯಾಕಂದರೆ ತೋವಿಗೂ ಹದ ದೆಜೆರನಿಗೂ ವಿರೋಧವಾಗಿ ಯುದ್ಧಮಾಡಿದಾಗ ದಾವೀದನು ಅವನನ್ನು ಹೊಡೆದಿದ್ದನು; ಹದದೆಜೆರನಿಗೆ ತೋವು ಸಂಗಡ ಯುದ್ಧಗಳಿದ್ದವು. ಯೋರಾಮನು ಬೆಳ್ಳಿ ಬಂಗಾರ ಹಿತ್ತಾಳೆಯ ಪಾತ್ರೆಗಳನ್ನೂ ತನ್ನೊಂದಿಗೆ ತಂದನು. ಇವುಗಳನ್ನು ಅರಸನಾದ ದಾವೀದನು ವಶಮಾಡಿಕೊಂಡು ಅರಾಮ್ಯರೂ ಮೋವಾಬ್ಯರೂ ಅಮ್ಮೋನನ ಮಕ್ಕಳೂ ಫಿಲಿಷ್ಟಿಯರೂ ಅಮಾಲೇಕ್ಯರೂ ಎಂಬ ಸಕಲ ಜನಾಂಗಗಳಿಂದ ತೆಗೆದು ಪ್ರತಿಷ್ಠೆ ಮಾಡಿದ ಬೆಳ್ಳಿ ಬಂಗಾರದ ಸಂಗಡಲೂ ಚೋಬದ ಅರಸನಾಗಿರುವ ರೆಹೋಬನ ಮಗನಾದ ಹದದೆಜೆರನ ಬಳಿಯಲ್ಲಿ ಕೊಳ್ಳೆ ಇಟ್ಟದರ ಸಂಗಡಲೂ ಕರ್ತನಿಗೆ ಪ್ರತಿಷ್ಠೆಮಾಡಿ ಇಟ್ಟನು. ದಾವೀದನು ಉಪ್ಪಿನ ತಗ್ಗಿನಲ್ಲಿ ಹದಿನೆಂಟು ಸಾವಿರ ಅರಾಮ್ಯರನ್ನು ಹೊಡೆದು ಹಿಂತಿರುಗಿದಾಗ ಹೆಸರುಗೊಂಡನು. ಎದೋಮಿ ನಲ್ಲಿ ಕಾವಲುದಂಡುಗಳನ್ನು ಇಟ್ಟನು. ಎಲ್ಲಾ ಎದೋಮಿ ನಲ್ಲಿ ಅವನು ಕಾವಲುದಂಡುಗಳನ್ನು ಇಟ್ಟದ್ದರಿಂದ ಎದೋಮ್ಯರೆಲ್ಲರೂ ದಾವೀದನಿಗೆ ದಾಸರಾದರು. ದಾವೀದನು ಹೋದಲ್ಲೆಲ್ಲಾ ಕರ್ತನು ಅವನನ್ನು ಕಾಪಾಡಿದನು. ಹೀಗೆಯೇ ದಾವೀದನು ಎಲ್ಲಾ ಇಸ್ರಾಯೇಲಿನ ಮೇಲೆ ಆಳಿ ತನ್ನ ಎಲ್ಲಾ ಜನರಿಗೂ ನೀತಿ ನ್ಯಾಯಗಳನ್ನು ನಡಿಸುತ್ತಾ ಬಂದನು. ಚೆರೂಯಳ ಮಗನಾದ ಯೋವಾಬನು ಸೈನ್ಯಾಧಿಪತಿಯಾಗಿದ್ದನು; ಅಹೀಲೂ ದನ ಮಗನಾದ ಯೆಹೋಷಾಫಾಟನು ಲೇಖಕನಾ ಗಿದ್ದನು. ಅಹೀಟೂಬನ ಮಗನಾದ ಚಾದೋಕನೂ ಎಬ್ಯಾತಾರನ ಮಗನಾದ ಅಹೀಮೆಲೆಕನೂ ಯಾಜ ಕರಾಗಿದ್ದರು; ಸೆರಾಯನು ಮಂತ್ರಿಯಾಗಿದ್ದನು.ಯೆಹೋಯಾದಾವನ ಮಗನಾದ ಬೆನಾಯನು ಕೆರೇತ್ಯರ ಪೆಲೇತ್ಯರ ಮೇಲೆ ಯಜಮಾನನಾಗಿದ್ದನು. ಆದರೆ ದಾವೀದನ ಕುಮಾರರು ಮುಖ್ಯ ಪ್ರಭು ಗಳಾಗಿದ್ದರು. ಯೆಹೋಯಾದಾವನ ಮಗನಾದ ಬೆನಾಯನು ಕೆರೇತ್ಯರ ಪೆಲೇತ್ಯರ ಮೇಲೆ ಯಜಮಾನನಾಗಿದ್ದನು. ಆದರೆ ದಾವೀದನ ಕುಮಾರರು ಮುಖ್ಯ ಪ್ರಭು ಗಳಾಗಿದ್ದರು.
- Psalm 18:40 ಕೀರ್ತನೆಗಳು 18:40ನನ್ನ ಹಗೆಯವರನ್ನು ನಾಶಮಾಡುವಂತೆ ಶತ್ರುಗಳ ಕುತ್ತಿಗೆಗಳನ್ನು ನೀನು ನನಗೆ ಕೊಟ್ಟಿದ್ದೀ.
- Zechariah 14:1–3 ಜೆಕರ್ಯ 14:1–3ಇಗೋ, ಕರ್ತನ ದಿನವು ಬರುತ್ತದೆ. ಆಗ ನಿನ್ನ ಕೊಳ್ಳೆಯು ನಿನ್ನ ಮಧ್ಯದಲ್ಲಿ ವಿಭಾಗಿಸ ಲ್ಪಡುವದು; ನಾನು ಜನಾಂಗಗಳನ್ನೆಲ್ಲಾ ಯೆರೂಸ ಲೇಮಿಗೆ ವಿರೋಧವಾಗಿ ಯುದ್ಧಕ್ಕೆ ಕೂಡಿಸುವೆನು; ಪಟ್ಟಣವು ಹಿಡಿಯಲ್ಪಡುವದು; ಮನೆಗಳು ಸುಲು ಕೊಳ್ಳಲ್ಪಡುವವು, ಹೆಂಗಸರು ಕೆಡಿಸಲ್ಪಡುವರು, ಪಟ್ಟಣದ ಅರವಾಸಿ ಜನರು ಸೆರೆಗೆ ಹೋಗುವರು; ಆದರೆ ಉಳಿದ ಜನರೆಲ್ಲರು ಪಟ್ಟಣದೊಳಗಿಂದ ತೆಗೆದುಬಿಡಲ್ಪಡುವದಿಲ್ಲ. ಆಗ ಕರ್ತನು ಹೊರಟು ಯುದ್ಧದ ದಿನದಲ್ಲಿ ಕಾದಾಟಮಾಡಿದ ಪ್ರಕಾರವೇ ಆ ಜನಾಂಗಗಳ ಸಂಗಡ ಆತನು ಕಾದಾಟ ಮಾಡುವನು.
- 2 Samuel 10:1–19 2 ಸಮುವೇಲನು 10:1–19ಇದರ ತರುವಾಯ ಏನಾಯಿತಂದರೆ, ಅಮ್ಮೋನನ ಮಕ್ಕಳ ಅರಸನು ಸತ್ತನು; ಅವನ ಮಗನಾದ ಹಾನೂನನು ಅವನಿಗೆ ಬದಲಾಗಿ ಅರಸನಾದನು. ದಾವೀದನು--ಹಾನೂನನ ತಂದೆಯಾದ ನಾಹಾಷನು ನನಗೆ ದಯೆತೋರಿಸಿದ ಹಾಗೆಯೇ ನಾನೂ ಅವನ ಮಗನಾದ ಹಾನೂನನಿಗೆ ದಯೆತೋರಿಸುವೆನು ಅಂದನು. ದಾವೀದನು ಅವನ ತಂದೆಗೋಸ್ಕರ ಅವನಿಗೆ ಆದರಣೆ ಹೇಳುವದಕ್ಕೆ ತನ್ನ ಸೇವಕರನ್ನು ಕಳುಹಿಸಿದನು. ದಾವೀದನ ಸೇವಕರು ಅಮ್ಮೋನನ ಮಕ್ಕಳ ದೇಶಕ್ಕೆ ಬಂದಾಗ ಅಮ್ಮೋನನ ಮಕ್ಕಳ ಪ್ರಧಾನರು ತಮ್ಮ ಯಜಮಾನನಾದ ಹಾನೂನ ನಿಗೆ--ದಾವೀದನು ಆದರಣೆ ಹೇಳುವವರನ್ನು ನಿನ್ನ ಬಳಿಗೆ ಕಳುಹಿಸಿದ್ದರಿಂದ ನಿನ್ನ ತಂದೆಯನ್ನು ಘನ ಪಡಿಸುತ್ತಾನೆಂದು ಯೋಚಿಸುತ್ತೀಯೋ? ಈ ಪಟ್ಟಣ ವನ್ನು ಶೋಧಿಸುವದಕ್ಕೂ ಪಾಳತಿನೋಡುವದಕ್ಕೂ ಅದನ್ನು ಕೆಡವಿಹಾಕುವದಕ್ಕೂ ದಾವೀದನು ತನ್ನ ಸೇವಕರನ್ನು ನಿನ್ನ ಬಳಿಗೆ ಕಳುಹಿಸಿದ್ದಲ್ಲವೋ ಅಂದರು. ಆದದರಿಂದ ಹಾನೂನನು ದಾವೀದನ ಸೇವಕರನ್ನು ಹಿಡಿದು ಅವರ ಅರ್ಧ ಗಡ್ಡವನ್ನು ಬೋಳಿಸಿ ಅವರ ವಸ್ತ್ರಗಳನ್ನು ಮಧ್ಯದಲ್ಲಿ ಕುಂಡಿಯ ವರೆಗೆ ಕತ್ತರಿಸಿ ಅವರನ್ನು ಕಳುಹಿಸಿದನು. ಅವರು ಅದನ್ನು ದಾವೀದ ನಿಗೆ ತಿಳಿಸಿದಾಗ ಆ ಜನರು ಬಹಳ ನಾಚಿಕೆಪಟ್ಟದ್ದ ರಿಂದ ದಾವೀದನು ಕೆಲವರನ್ನು ಅವರಿಗೆದುರಾಗಿ ಕಳು ಹಿಸಿ--ನಿಮ್ಮ ಗಡ್ಡಗಳು ಬೆಳೆಯುವವರೆಗೆ ನೀವು ಯೆರಿಕೋವಿನಲ್ಲಿ ಕಾದಿದ್ದು ತರುವಾಯ ಬನ್ನಿರಿ ಎಂದು ಹೇಳಿದನು. ಅಮ್ಮೋನನ ಮಕ್ಕಳು ತಾವು ದಾವೀದನಿಗೆ ಅಸಹ್ಯ ವಾದೆವೆಂದು ತಿಳುಕೊಂಡಾಗ ಅವರು (ದೂತರನ್ನು) ಕಳುಹಿಸಿ ಬೇತ್ರೆಹೋಬ್ನಲ್ಲಿಯೂ ಚೋಬಾದ ಲ್ಲಿಯೂ ಇರುವ ಇಪ್ತತ್ತು ಸಾವಿರ ಕಾಲಾಳುಗಳಾದ ಅರಾಮ್ಯರನ್ನೂ ಅರಸನಾದ ಮಾಕನ ಬಳಿಯಿಂದ ಸಾವಿರ ಜನರನ್ನೂ ಇಷ್ಟೋಬ್ನಿಂದ ಹನ್ನೆರಡು ಸಾವಿರ ಜನರನ್ನೂ ಕೂಲಿಗೆ ತೆಗೆದುಕೊಂಡರು. ದಾವೀದನು ಅದನ್ನು ಕೇಳಿದಾಗ ಅವನು ಯೋವಾಬನನ್ನೂ ಪರಾ ಕ್ರಮಶಾಲಿಗಳಾದ ಸಕಲ ಶೂರಸೈನಿಕರನ್ನು ಕಳುಹಿ ಸಿದನು. ಆಗ ಅಮ್ಮೋನನ ಮಕ್ಕಳು ಹೊರಟು ಪಟ್ಟಣದ ಬಾಗಲ ಮುಂದೆ ವ್ಯೂಹಕಟ್ಟಿದರು. ಆದರೆ ಚೋಬಾದಿಂದಲೂ ರೆಹೋಬ್ನಿಂದಲೂ ಇಷ್ಟೋಬ್ ನಿಂದಲೂ ಮಾಕನಿಂದಲೂ ಬಂದ ಅರಾಮ್ಯರು ಹೊರಗೆ ಬೈಲಿನಲ್ಲಿ ಬೇರೆ ಇಳಿದಿದ್ದರು. ಯೋವಾಬನು ಯುದ್ಧದ ಮುಖವು ಹಿಂದೆ ಮುಂದೆ ತನಗೆ ಎದುರಾ ಗಿರುವದನ್ನು ನೋಡಿದಾಗ ಅವನು ಇಸ್ರಾಯೇಲಿನ ಆಯಲ್ಪಟ್ಟ ಎಲ್ಲಾ ಜನರನ್ನು ಆದುಕೊಂಡು ಅರಾಮ್ಯ ರಿಗೆ ಎದುರಾಗಿ ವ್ಯೂಹಕಟ್ಟಿದನು. ಆದರೆ ಮಿಕ್ಕಾದ ವರು ಅಮ್ಮೋನನ ಮಕ್ಕಳಿಗೆದುರಾಗಿ ವ್ಯೂಹಕಟ್ಟುವ ಹಾಗೆ ಅವರನ್ನು ತನ್ನ ಸಹೋದರನಾದ ಅಬೀಷೈಯ ಕೈಯಲ್ಲಿ ಒಪ್ಪಿಸಿಕೊಟ್ಟು-- ಅರಾಮ್ಯರು ನನಗಿಂತ ಬಲವುಳ್ಳವರಾದರೆ ನೀನು ನನಗೆ ಸಹಾಯ ಕೊಡ ಬೇಕು; ಅಮ್ಮೋನನ ಮಕ್ಕಳು ನಿನಗಿಂತ ಬಲವುಳ್ಳವ ರಾದರೆ ನಾನು ಬಂದು ನಿನಗೆ ಸಹಾಯ ಮಾಡುವೆನು. ಬಲವಾಗಿರು; ನಾವು ನಮ್ಮ ಜನರಿಗೋಸ್ಕರವೂ ನಮ್ಮ ದೇವರ ಪಟ್ಟಣಗಳಿಗೋಸ್ಕರವೂ ಬಲಗೊ ಳ್ಳೋಣ. ಕರ್ತನು ತನ್ನ ದೃಷ್ಟಿಗೆ ಉತ್ತಮವಾದದ್ದನ್ನು ಮಾಡಲಿ ಅಂದನು. ಆಗ ಯೋವಾಬನೂ ಅವನ ಸಂಗಡ ಇದ್ದ ಜನರೂ ಅರಾಮ್ಯರ ಮೇಲೆ ಯುದ್ಧ ಮಾಡುವದಕ್ಕೆ ಸವಿಾಪಕ್ಕೆ ಬಂದರು. ಅವರು ಅವನ ಎದುರಿನಿಂದ ಓಡಿಹೋದರು. ಅರಾಮ್ಯರು ಓಡಿ ಹೋದದ್ದನ್ನು ಅಮ್ಮೋನನ ಮಕ್ಕಳು ನೋಡಿದಾಗ ಅವರು ಅಬೀಷೈಯ ಎದುರಿನಿಂದ ಓಡಿ ಪಟ್ಟಣ ದೊಳಗೆ ಹೊಕ್ಕರು. ಆಗ ಯೋವಾಬನು ಅಮ್ಮೊನನ ಮಕ್ಕಳನ್ನು ಬಿಟ್ಟು ತಿರುಗಿ ಯೆರೂಸಲೇಮಿಗೆ ಬಂದನು. ಅರಾಮ್ಯರು ತಾವು ಇಸ್ರಾಯೇಲ್ಯರ ಮುಂದೆ ಹೊಡೆಯಲ್ಪಟ್ಟದ್ದನ್ನು ಕಂಡಾಗ ಅವರು ಒಟ್ಟಾಗಿ ಕೂಡಿದರು. ಇದಲ್ಲದೆ ಹದದೆಜೆರನು ನದಿಗೆ ಆಚೆ ಇದ್ದ ಅರಾಮ್ಯರನ್ನು ಕರೇಕಳುಹಿಸಿದ್ದರಿಂದ ಅವರು ಹೇಲಾಮಿಗೆ ಬಂದರು; ಹದದೆಜೆರನ ಸೈನ್ಯಕ್ಕೆ ಅಧಿ ಪತಿಯಾದ ಶೋಬಕನು ಅವರ ಮುಂದೆ ನಡೆದನು. ಅದು ದಾವೀದನಿಗೆ ತಿಳಿಸಲ್ಪಟ್ಟಾಗ ಅವನು ಇಸ್ರಾ ಯೇಲ್ಯರೆಲ್ಲರನ್ನು ಕೂಡಿಸಿಕೊಂಡು ಯೊರ್ದನನ್ನು ದಾಟಿ ಹೇಲಾಮಿಗೆ ಬಂದನು. ಅರಾಮ್ಯರು ದಾವೀದ ನಿಗೆದುರಾಗಿ ವ್ಯೂಹಕಟ್ಟಿ ಯುದ್ಧಮಾಡಿದರು. ಆಗ ಅರಾಮ್ಯರು ಇಸ್ರಾಯೇಲ್ಯರ ಎದುರಿನಿಂದ ಓಡಿದರು. ದಾವೀದನು ಅರಾಮ್ಯರಲ್ಲಿ ಏಳು ನೂರು ಮಂದಿ ಸಾರಥಿಗಳನ್ನೂ ನಾಲ್ವತ್ತು ಸಾವಿರ ಕುದುರೆ ರಾಹುತ ರನ್ನೂ ಕೊಂದು ಅವರ ಸೈನ್ಯದ ಯಜಮಾನನಾದ ಶೋಬಕನನ್ನು ಹೊಡೆದನು; ಅವನು ಅಲ್ಲಿಯೇ ಸತ್ತನು.ಹದದೆಜೆರನ ಸೇವಕರಾದ ಅರಸುಗಳೆ ಲ್ಲರೂ ತಾವು ಇಸ್ರಾಯೇಲ್ಯರ ಮುಂದೆ ಹೊಡೆಯ ಲ್ಪಟ್ಟದ್ದನ್ನು ಕಂಡಾಗ ಅವರು ಇಸ್ರಾಯೇಲ್ಯರ ಸಂಗಡ ಸಮಾಧಾನಮಾಡಿಕೊಂಡು ಅವರನ್ನು ಸೇವಿಸಿದರು.ಹೀಗೆ ಅರಾಮ್ಯರು ಅಮ್ಮೋನನ ಮಕ್ಕಳಿಗೆ ಇನ್ನು ಸಹಾಯಮಾಡುವದಕ್ಕೆ ಭಯಪಟ್ಟರು. ಹದದೆಜೆರನ ಸೇವಕರಾದ ಅರಸುಗಳೆ ಲ್ಲರೂ ತಾವು ಇಸ್ರಾಯೇಲ್ಯರ ಮುಂದೆ ಹೊಡೆಯ ಲ್ಪಟ್ಟದ್ದನ್ನು ಕಂಡಾಗ ಅವರು ಇಸ್ರಾಯೇಲ್ಯರ ಸಂಗಡ ಸಮಾಧಾನಮಾಡಿಕೊಂಡು ಅವರನ್ನು ಸೇವಿಸಿದರು.ಹೀಗೆ ಅರಾಮ್ಯರು ಅಮ್ಮೋನನ ಮಕ್ಕಳಿಗೆ ಇನ್ನು ಸಹಾಯಮಾಡುವದಕ್ಕೆ ಭಯಪಟ್ಟರು.
- 2 Samuel 5:1–25 2 ಸಮುವೇಲನು 5:1–25ಇದಾದ ಮೇಲೆ ಇಸ್ರಾಯೇಲ್ ಗೋತ್ರ ಗಳೆಲ್ಲಾ ಹೆಬ್ರೋನಿನಲ್ಲಿದ್ದ ದಾವೀದನ ಬಳಿಗೆ ಬಂದು--ಇಗೋ, ನಾವು ನಿನ್ನ ಎಲುಬೂ ನಿನ್ನ ಮಾಂಸವೂ ಆಗಿದ್ದೇವೆ. ಇದಲ್ಲದೆ ಪೂರ್ವದಲ್ಲಿ ಸೌಲನು ನಮ್ಮ ಮೇಲೆ ಅರಸನಾಗಿದ್ದಾಗ ನೀನು ಇಸ್ರಾಯೇಲನ್ನು ಹೊರಗೆ ನಡಿಸುವವನಾಗಿಯೂ ಒಳಗೆ ತರುವವನಾಗಿಯೂ ಆಗಿದ್ದಿ. ಆದದರಿಂದ ಕರ್ತನು ನಿನಗೆ--ನೀನು ನನ್ನ ಜನರಾದ ಇಸ್ರಾಯೇ ಲನ್ನು ಮೇಯಿಸುವಿ; ಇಸ್ರಾಯೇಲಿನ ಮೇಲೆ ನಾಯಕನಾಗಿರುವಿ ಎಂದು ಹೇಳಿದನು ಅಂದರು. ಹಾಗೆಯೇ ಇಸ್ರಾಯೇಲಿನ ಹಿರಿಯರೆಲ್ಲರೂ ಹೆಬ್ರೋನಿನಲ್ಲಿರುವ ಅರಸನ ಬಳಿಗೆ ಬಂದಾಗ ಅರಸ ನಾದ ದಾವೀದನು ಹೆಬ್ರೋನಿನಲ್ಲಿ ಕರ್ತನ ಮುಂದೆ ಅವರ ಸಂಗಡ ಒಡಂಬಡಿಕೆಯನ್ನು ಮಾಡಿದನು. ಅವರು ದಾವೀದನನ್ನು ಇಸ್ರಾಯೇಲಿನ ಮೇಲೆ ಅರಸ ನಾಗಿರಲು ಅಭಿಷೇಕಮಾಡಿದರು. ದಾವೀದನು ಆಳಲು ಪ್ರಾರಂಭಿಸಿದಾಗ ಮೂವತ್ತು ವರುಷದವ ನಾಗಿದ್ದನು; ಅವನು ನಾಲ್ವತ್ತು ವರುಷ ಆಳಿದನು. ಅವನು ಹೆಬ್ರೋನಿನಲ್ಲಿ ಯೆಹೂದ ಜನರ ಮೇಲೆ ಏಳುವರೆ ವರುಷ ಆಳಿದನು. ಯೆರೂಸಲೇಮಿನಲ್ಲಿ ಎಲ್ಲಾ ಇಸ್ರಾಯೇಲ್ಯರ ಮೇಲೆಯೂ ಎಲ್ಲಾ ಯೆಹೂ ದದ ಜನರ ಮೇಲೆಯೂ ಮೂವತ್ತುಮೂರು ವರುಷ ಆಳಿದನು. ಆಗ ಅರಸನೂ ಅವನ ಜನರೂ ದೇಶದ ನಿವಾಸಿ ಗಳಾದ ಯೆಬೂಸಿಯರು ಒಳಗೆ ಯೆರೂಸಲೇಮಿಗೆ ಬಂದರು. ದಾವೀದನು ಇದರಲ್ಲಿ ಬರಲಾರನೆಂದು ಅವರು ನೆನಸಿ ದಾವೀದನಿಗೆ--ನೀನು ಕುರುಡರನ್ನೂ ಕುಂಟರನ್ನೂ ತೆಗೆದುಹಾಕದ ಹೊರತು ನೀನು ಇಲ್ಲಿಗೆ ಬರಲಾರಿ ಅಂದರು. ಆದಾಗ್ಯೂ ದಾವೀದನು ಚೀಯೋನಿನ ಕೋಟೆಯನ್ನು ಹಿಡುಕೊಂಡನು. ಅದೇ ದಾವೀದನ ಪಟ್ಟಣವು. ಆ ದಿವಸದಲ್ಲಿ ದಾವೀದನುಕಂದಕವನ್ನು ದಾಟಿ ಯೆಬೂಸಿಯರನ್ನು ಅಂದರೆ ದಾವೀದನ ಪ್ರಾಣ ದ್ವೇಷಿಗಳಾದ ಕುಂಟರನ್ನೂ ಕುರು ಡರನ್ನೂ ಹೊಡೆಯುವವನು (ಮುಖ್ಯಸ್ಥನೂ ಅಧಿ ಪತಿಯೂ ಆಗಿರುವನು) ಎಂದು ಹೇಳಿದ್ದನು. ಅದಕ್ಕೆ ಅವರು--ಕುರುಡರೂ ಕುಂಟರೂ ಮನೆಯೊಳಗೆ ಬರಕೂಡದು ಅಂದರು. ದಾವೀದನು ಕೋಟೆಯಲ್ಲಿ ವಾಸಮಾಡಿ ಅದಕ್ಕೆ ದಾವೀದನ ಪಟ್ಟಣವೆಂದು ಹೆಸರಿಟ್ಟನು. ಇದಲ್ಲದೆ ದಾವೀದನು ಮಿಲ್ಲೋವಿನ ಸುತ್ತಲಾಗಿ ಪ್ರಾರಂಭಿಸಿ ಒಳಪಾರ್ಶ್ವದಲ್ಲಿ ಇರುವದನ್ನು ಕಟ್ಟಿಸಿದನು. ಹೀಗೆ ಯೇ ದಾವೀದನು ದಿನದಿನಕ್ಕೆ ದೊಡ್ಡವನಾಗುತ್ತಾ ಇದ್ದನು; ಸೈನ್ಯಗಳ ದೇವರಾದ ಕರ್ತನು ಅವನ ಸಂಗಡ ಇದ್ದನು. ಆಗ ತೂರಿನ ಅರಸನಾದ ಹೀರಾ ಮನು ದಾವೀದನ ಬಳಿಗೆ ದೂತರನ್ನೂ ದೇವದಾರು ಮರಗಳನ್ನೂ ಬಡಿಗೆಯವರನ್ನೂ ಶಿಲ್ಪಿಗಳನ್ನೂ ಕಳು ಹಿಸಿದನು. ಅವರು ದಾವೀದನಿಗೆ ಮನೆಯನ್ನು ಕಟ್ಟಿ ದರು. ದಾವೀದನು ತನ್ನನ್ನು ಕರ್ತನು ಇಸ್ರಾಯೇ ಲಿನ ಮೇಲೆ ಅರಸನನ್ನಾಗಿ ಸ್ಥಿರಪಡಿಸಿದನೆಂದೂ ತನ್ನ ಜನವಾದ ಇಸ್ರಾಯೇಲಿನ ನಿಮಿತ್ತ ತನ್ನ ರಾಜ್ಯವನ್ನು ಉನ್ನತಕ್ಕೇರಿಸಿದನೆಂದೂ ತಿಳಿದುಕೊಂಡನು. ದಾವೀದನು ಹೆಬ್ರೋನನ್ನು ಬಿಟ್ಟುಹೋದ ತರುವಾಯ ಯೆರೂಸಲೇಮಿನಿಂದ ಇನ್ನೂ ಕೆಲವು ಮಂದಿ ಉಪಪತ್ನಿಯರನ್ನೂ ಹೆಂಡತಿಯರನ್ನೂ ಮಾಡಿಕೊಂಡನು; ದಾವೀದನಿಗೆ ಇನ್ನೂ ಕುಮಾ ರರೂ ಕುಮಾರ್ತೆಯರೂ ಹುಟ್ಟಿದರು. ಯೆರೂಸ ಲೇಮಿನಲ್ಲಿ ಅವನಿಗೆ ಹುಟ್ಟಿದವರ ಹೆಸರುಗಳು ಯಾವವೆಂದರೆ; ಶಮ್ಮೂವ ಶೊಬಾಬ್ ನಾತಾನ್ ಸೊಲೊಮೋನ್ ಇಬ್ಹಾರ್ ಎಲೀಷೂವ ನೆಫೆಗ್ ಯಾಫೀಯ ಎಲೀಷಾಮ ಎಲ್ಯಾದ ಎಲೀಫೆ ಲೆಟ್ ಇವರೇ. ಅವರು ದಾವೀದನನ್ನು ಇಸ್ರಾಯೇಲಿನ ಮೇಲೆ ಅರಸನಾಗಲು ಅಭಿಷೇಕಮಾಡಿದ್ದಾರೆಂದು ಫಿಲಿಷ್ಟಿ ಯರು ಕೇಳಿದಾಗ ಅವರೆಲ್ಲರು ದಾವೀದನನ್ನು ಹುಡುಕು ವದಕ್ಕೆ ಬಂದರು. ಅದನ್ನು ದಾವೀದನು ಕೇಳಿ ಗಡಿ ಸ್ಥಳಕ್ಕೆ ಹೋದನು. ಆದರೆ ಫಿಲಿಷ್ಟಿಯರು ಬಂದು ರೆಫಾಯಾಮ್ ತಗ್ಗಿನಲ್ಲಿ ಇಳುಕೊಂಡರು. ಆಗ ದಾವೀದನು--ನಾನು ಫಿಲಿಷ್ಟಿಯರ ಮೇಲೆ ಹೋಗ ಬೇಕೋ? ಅವರನ್ನು ನನ್ನ ಕೈಯಲ್ಲಿ ಒಪ್ಪಿಸಿಕೊಡು ವಿಯೋ ಎಂದು ಕರ್ತನನ್ನು ಕೇಳಿದನು. ಅದಕ್ಕೆ ಕರ್ತನು ದಾವೀದನಿಗೆ--ಹೋಗು; ಫಿಲಿಷ್ಟಿಯರನ್ನು ನಿನ್ನ ಕೈ ಯಲ್ಲಿ ಖಂಡಿತಾ ಕೊಡುವೆನು ಎಂದು ಹೇಳಿದನು. ಆದಕಾರಣ ದಾವೀದನು ಬಾಳ್ಪೆರಾಚೀಮಿಗೆ ಬಂದು ಅಲ್ಲಿ ಅವರನ್ನು ಹೊಡೆದು--ನೀರು ಕಟ್ಟೆ ಒಡೆದು ಹರಿಯುವ ಹಾಗೆ ಕರ್ತನು ನನ್ನ ಮುಂದೆ ನನ್ನ ಶತ್ರುಗಳ ಮೇಲೆ ಹರಿದು ಬಿದ್ದಿದ್ದಾನೆ ಎಂದು ಹೇಳಿ ಆ ಸ್ಥಳಕ್ಕೆ ಬಾಳ್ಪೆರಾಚೀಮ್ ಎಂದು ಹೆಸರಿ ಟ್ಟನು. ಅಲ್ಲಿ ಫಿಲಿಷ್ಟಿಯರು ತಮ್ಮ ವಿಗ್ರಹಗಳನ್ನು ಬಿಟ್ಟುಹೋದದರಿಂದ ದಾವೀದನೂ ಅವನ ಜನರೂ ಅವುಗಳನ್ನು ಸುಟ್ಟುಬಿಟ್ಟರು. ಫಿಲಿಷ್ಟಿಯರು ತಿರಿಗಿ ಬಂದು ರೆಫಾಯಾಮ್ ತಗ್ಗಿನಲ್ಲಿ ವಿಸ್ತಾರವಾಗಿ ಹರಡಿಕೊಂಡರು. ದಾವೀ ದನು ಕರ್ತನನ್ನು ಕೇಳಿಕೊಂಡಾಗ ಆತನು ಅವನಿಗೆನೀನು ಹೋಗದೆ ಅವರ ಹಿಂದುಗಡೆ ಸುತ್ತಿಕೊಂಡು ಹೋಗಿ ಹಿಪ್ಪಲಿ ಗಿಡಗಳಿಗೆದುರಾಗಿ ಅವರ ಮೇಲೆ ಬರಬೇಕು. ಹಿಪ್ಪಲಿ ಗಿಡಗಳ ಶಿಖರಗಳಲ್ಲಿ ನಡೆದು ಬರುವ ಶಬ್ದವನ್ನು ನೀನು ಕೇಳಿದಾಗ ಚೇತರಿಸಿಕೊಳ್ಳ ಬೇಕು. ಯಾಕಂದರೆ ಆಗಲೇ ಕರ್ತನು ಫಿಲಿಷ್ಟಿಯರ ದಂಡನ್ನು ಹೊಡೆಯಲು ನಿನ್ನ ಮುಂದಾಗಿ ಹೊರಡು ವನು ಅಂದನು.ಆಗ ಕರ್ತನು ತನಗೆ ಆಜ್ಞಾಪಿಸಿದ ಪ್ರಕಾರಮಾಡಿ ದಾವೀದನು, ಗೆಬದಿಂದ ಗೆಜೆರಿನ ವರೆಗೆ ಫಿಲಿಷ್ಟಿಯರನ್ನು ಕೊಂದನು. ಆಗ ಕರ್ತನು ತನಗೆ ಆಜ್ಞಾಪಿಸಿದ ಪ್ರಕಾರಮಾಡಿ ದಾವೀದನು, ಗೆಬದಿಂದ ಗೆಜೆರಿನ ವರೆಗೆ ಫಿಲಿಷ್ಟಿಯರನ್ನು ಕೊಂದನು.
- Zechariah 12:3 ಜೆಕರ್ಯ 12:3ಆ ದಿನದಲ್ಲಿ ನಾನು ಯೆರೂಸಲೇಮನ್ನು ಎಲ್ಲಾ ಜನರಿಗೆ ಭಾರವಾದ ಕಲ್ಲಾಗಿ ಮಾಡುತ್ತೇನೆ; ಅದನ್ನು ಎತ್ತುವವರೆಲ್ಲರು ಜಜ್ಜಲ್ಪಡುವರು; ಆದರೆ ಅದಕ್ಕೆ ವಿರೋಧವಾಗಿ ಭೂಮಿಯ ಜನಾಂಗಗಳೆಲ್ಲಾ ಒಟ್ಟುಗೂಡಿಕೊಳ್ಳುವವು.
- Revelation 19:19–21 ಪ್ರಕಟನೆ 19:19–21ತರುವಾಯ ಆ ಮೃಗವೂ ಭೂರಾಜರೂ ಅವರ ಸೈನ್ಯಗಳೂ ಆ ಕುದುರೆಯ ಮೇಲೆ ಕೂತಿದ್ದಾತನ ಮೇಲೆಯೂ ಆತನ ಸೈನ್ಯದ ಮೇಲೆಯೂ ಯುದ್ಧ ಮಾಡುವದಕ್ಕಾಗಿ ಕೂಡಿಬಂದಿರುವದನ್ನು ನಾನು ಕಂಡೆನು. ಆಗ ಮೃಗವು ಸೆರೆಸಿಕ್ಕಿತು; ಇದಲ್ಲದೆ ಮೃಗದ ಮುಂದೆ ಮಹತ್ಕಾರ್ಯಗಳನ್ನು ಮಾಡಿ ಮೃಗದ ಗುರುತು ಹಾಕಿಸಿಕೊಂಡವರನ್ನೂ ಅದರ ವಿಗ್ರಹವನ್ನು ಆರಾಧಿಸಿದವರನ್ನೂ ಮರುಳುಗೊಳಿಸಿದ ಆ ಸುಳ್ಳು ಪ್ರವಾದಿಯೂ ಆದರ ಜೊತೆಯಲ್ಲಿ ಸೆರೆ ಸಿಕ್ಕಿದನು. ಇವರಿಬ್ಬರೂ ಜೀವಸಹಿತವಾಗಿ ಗಂಧಕ ದಿಂದಮಿಕ್ಕಾದವರು ಆ ಕುದುರೆಯ ಮೇಲೆ ಕೂತಿದ್ದಾತನ ಕತ್ತಿಯಿಂದ ಅಂದರೆ ಆತನ ಬಾಯಿಂದ ಬಂದ ಕತ್ತಿ ಯಿಂದ ಹತರಾದರು; ಹಕ್ಕಿಗಳೆಲ್ಲಾ ಅವರ ಮಾಂಸವನು ಹೊಟ್ಟೆತುಂಬಾ ತಿಂದವು. ಮಿಕ್ಕಾದವರು ಆ ಕುದುರೆಯ ಮೇಲೆ ಕೂತಿದ್ದಾತನ ಕತ್ತಿಯಿಂದ ಅಂದರೆ ಆತನ ಬಾಯಿಂದ ಬಂದ ಕತ್ತಿ ಯಿಂದ ಹತರಾದರು; ಹಕ್ಕಿಗಳೆಲ್ಲಾ ಅವರ ಮಾಂಸವನು ಹೊಟ್ಟೆತುಂಬಾ ತಿಂದವು.