Psalms · chapter 59 · verse 3
Psalm 59:3 in Kannada
ಓ ಕರ್ತನೇ, ನನ್ನ ಅಪರಾಧಕ್ಕಾಗಿ ಇಲ್ಲವೆ ನನ್ನ ಪಾಪಕ್ಕಾಗಿ ಅಲ್ಲ; ಆದರೂ ಇಗೋ, ಅವರು ನನ್ನ ಪ್ರಾಣಕ್ಕೆ ಹೊಂಚುಹಾಕುತ್ತಾರೆ; ಪರಾಕ್ರಮಶಾಲಿಗಳು ನನಗೆ ವಿರೋಧವಾಗಿ ಕೂಡಿ ಕೊಳ್ಳುತ್ತಾರೆ.
O kartane, nanna aparaadhakkaagi illave nanna paapakkaagi alla; aadaroo igo, avaru nanna praanakke honchuhaakuttaare; paraakramashaaligalu nanage virodhavaagi koodi kolluttaare.
Psalm 59:3 in English
- King James Version (KJV)
- For, lo, they lie in wait for my soul: the mighty are gathered against me; not [for] my transgression, nor [for] my sin, O LORD.
- World English Bible (WEB)
- For, behold, they lie in wait for my soul. The mighty gather themselves together against me, not for my disobedience, nor for my sin, LORD.
- American Standard Version (ASV)
- For, lo, they lie in wait for my soul; The mighty gather themselves together against me: Not for my transgression, nor for my sin, O Jehovah.
- Bible in Basic English (BBE)
- For see, they are watching in secret for my soul; the strong have come together against me? but not because of my sin, or my evil-doing, O Lord.
- Darby Translation (DBY)
- For behold, they lie in wait for my soul; strong ones are gathered against me: not for my transgression, nor for my sin, O Jehovah.
- Webster's Bible (WBS)
- For lo, they lie in wait for my soul: the mighty are gathered against me; not [for] my transgression, nor [for] my sin, O LORD.
- Young's Literal Translation (YLT)
- For, lo, they laid wait for my soul, Assembled against me are strong ones, Not my transgression nor my sin, O Jehovah.
Read in context
- 1ಓ ನನ್ನ ದೇವರೇ, ನನ್ನ ಶತ್ರುಗಳಿಂದ ನನ್ನನ್ನು ಬಿಡಿಸು; ನನಗೆ ವಿರೋಧವಾಗಿ ಎದ್ದವರಿಂದ ನನ್ನನ್ನು ರಕ್ಷಿಸು.
- 2ಅಪರಾಧ ಮಾಡುವವರಿಂದ ನನ್ನನ್ನು ಬಿಡಿಸು; ಕೊಲೆಪಾತಕರಿಂದ ನನ್ನನ್ನು ರಕ್ಷಿಸು.
- 3ಓ ಕರ್ತನೇ, ನನ್ನ ಅಪರಾಧಕ್ಕಾಗಿ ಇಲ್ಲವೆ ನನ್ನ ಪಾಪಕ್ಕಾಗಿ ಅಲ್ಲ; ಆದರೂ ಇಗೋ, ಅವರು ನನ್ನ ಪ್ರಾಣಕ್ಕೆ ಹೊಂಚುಹಾಕುತ್ತಾರೆ; ಪರಾಕ್ರಮಶಾಲಿಗಳು ನನಗೆ ವಿರೋಧವಾಗಿ ಕೂಡಿ ಕೊಳ್ಳುತ್ತಾರೆ.
- 4ನನ್ನಲ್ಲಿ ತಪ್ಪು ಇಲ್ಲದಿದ್ದರೂ ಅವರು ಓಡಾಡಿ ಸಿದ್ಧರಾಗುತ್ತಾರೆ; ನನಗೆ ಸಹಾಯ ಮಾಡುವದಕ್ಕೆ ಎಚ್ಚತ್ತು ನೋಡು.
- 5ಸೈನ್ಯಗಳ ದೇವ ರಾದ ಓ ಕರ್ತನೇ, ಇಸ್ರಾಯೇಲಿನ ದೇವರೇ, ನೀನು ಎಲ್ಲಾ ಜನಾಂಗಗಳನ್ನು ದರ್ಶಿಸುವದಕ್ಕೆ ಎಚ್ಚರವಾಗು; ದುಷ್ಟರಾದ ಅಪರಾಧಿಗಳಲ್ಲಿ ಯಾರಿಗಾದರೂ ಕರುಣೆ ತೋರಿಸಬೇಡ. ಸೆಲಾ.
Cross references
- Psalm 56:6 ಕೀರ್ತನೆಗಳು 56:6ಅವರು ಕೂಡಿಕೊಂಡು ಹೊಂಚುಹಾಕುತ್ತಾರೆ; ನನ್ನ ಪ್ರಾಣಕ್ಕೆ ಕಾಯುವವರಾಗಿ ನನ್ನ ಹೆಜ್ಜೆಗಳನ್ನು ಗುರುತಿಸುತ್ತಾರೆ.
- Psalm 69:4 ಕೀರ್ತನೆಗಳು 69:4ಕಾರಣವಿಲ್ಲದೆ ನನ್ನನ್ನು ಹಗೆ ಮಾಡು ವವರು ನನ್ನ ತಲೆಯ ಕೂದಲುಗಳಿಗಿಂತ ಹೆಚ್ಚಾಗಿ ದ್ದಾರೆ; ನನ್ನನ್ನು ಅನ್ಯಾಯವಾಗಿ ಸಂಹರಿಸುವ ನನ್ನ ಶತ್ರುಗಳೂ ಪ್ರಬಲವಾಗಿದ್ದಾರೆ; ನಾನು ತೆಗೆದು ಕೊಳ್ಳದ್ದನ್ನು ನನ್ನಿಂದ ದೋಚಿಕೊಂಡರು.
- 1 Samuel 24:11 1 ಸಮುವೇಲನು 24:11ಇದಲ್ಲದೆ ನನ್ನ ತಂದೆಯೇ, ನೋಡು; ಹೌದು, ನನ್ನ ಕೈಯಲ್ಲಿರುವ ನಿನ್ನ ನಿಲುವಂಗಿಯ ಅಂಚನ್ನು ನೋಡು. ನಾನು ನಿನ್ನನ್ನು ಕೊಂದುಹಾಕದೆ ನಿನ್ನ ನಿಲುವಂಗಿಯ ಅಂಚನ್ನು ಕತ್ತರಿಸಿಕೊಂಡದ್ದರಿಂದ ನನ್ನಲ್ಲಿ ಕೆಟ್ಟತನವು ದ್ರೋಹವು ಇಲ್ಲವೆಂದು ನಾನು ನಿನಗೆ ವಿರೋಧವಾಗಿ ಪಾಪಮಾಡ ಲಿಲ್ಲವೆಂದೂ ತಿಳಿದುಕೊಂಡು ನೋಡು. ಹೀಗಿದ್ದರೂ ನೀನು ನನ್ನ ಪ್ರಾಣವನ್ನು ತೆಗೆಯಲು ಬೇಟೆಯಾಡುತ್ತೀ.
- John 15:25 ಯೋಹಾನನು 15:25ಆದರೆ--ಅವರು ನನ್ನನ್ನು ನಿಷ್ಕಾರಣವಾಗಿ ದ್ವೇಷ ಮಾಡಿದರೆಂದು ಅವರ ನ್ಯಾಯಪ್ರಮಾಣದಲ್ಲಿ ಬರೆದಿರುವ ಮಾತು ನೆರವೇರುವಂತೆ ಹೀಗಾಯಿತು.
- Proverbs 12:6 ಜ್ಞಾನೋಕ್ತಿಗಳು 12:6ದುಷ್ಟರ ಮಾತುಗಳು ರಕ್ತಕ್ಕಾಗಿ ಹೊಂಚು ಹಾಕುತ್ತವೆ; ಯಥಾರ್ಥವಂತರ ಬಾಯಿಯು ಅವರನ್ನು ಬಿಡಿಸುವದು.
- Psalm 37:32–33 ಕೀರ್ತನೆಗಳು 37:32–33ದುಷ್ಟನು ನೀತಿವಂತನಿಗಾಗಿ ಹೊಂಚು ಹಾಕು ತ್ತಾನೆ. ಅವನನ್ನು ಕೊಲ್ಲಲು ಹುಡುಕುತ್ತಾನೆ. ಕರ್ತನು ಅವನನ್ನು ದುಷ್ಟನ ಕೈಯಲ್ಲಿ ಬಿಡುವದಿಲ್ಲ; ಇಲ್ಲವೆ ನ್ಯಾಯವಿಚಾರಣೆಯಲ್ಲಿ ಅವನು ದುಷ್ಟನೆಂದು ತೀರ್ಪು ಹೊಂದುವದಿಲ್ಲ.
- Micah 7:2 ಮೀಕ 7:2ಒಳ್ಳೆಯವನು ಭೂಮಿಯೊಳ ಗಿಂದ ನಾಶವಾಗಿದ್ದಾನೆ; ಮನುಷ್ಯರಲ್ಲಿ ಯಥಾರ್ಥನು ಇಲ್ಲ; ಅವರೆಲ್ಲರು ರಕ್ತಕ್ಕೆ ಹೊಂಚಿ ನೋಡುತ್ತಾರೆ; ತಮ್ಮ ತಮ್ಮ ಸಹೋದರರನ್ನು ಬಲೆಹಾಕಿ ಬೇಟೆ ಆಡುತ್ತಾರೆ.
- 1 Samuel 19:1 1 ಸಮುವೇಲನು 19:1ಸೌಲನು ದಾವೀದನನ್ನು ಕೊಂದುಹಾಕುವ ಹಾಗೆ ತನ್ನ ಮಗನಾದ ಯೋನಾತಾನನ ಸಂಗಡವೂ ತನ್ನ ಸಮಸ್ತ ಸೇವಕರ ಸಂಗಡವೂ ಮಾತನಾಡಿದನು.
- Psalm 2:2 ಕೀರ್ತನೆಗಳು 2:2ಕರ್ತನಿಗೆ ವಿರೋಧ ವಾಗಿಯೂ ಆತನ ಅಭಿಷಕ್ತನಿಗೆ ವಿರೋಧವಾಗಿಯೂ ಭೂರಾಜರು ನಿಂತುಕೊಳ್ಳುತ್ತಾರೆ; ಪ್ರಭುಗಳು ಒಟ್ಟಾಗಿ ಆಲೋಚಿಸುತ್ತಾರೆ.
- 1 Samuel 24:17 1 ಸಮುವೇಲನು 24:17ದಾವೀದನಿಗೆ--ನೀನು ನನಗಿಂತ ನೀತಿವಂತನು; ನೀನು ನನಗೆ ಒಳ್ಳೇದನ್ನು ಮಾಡಿದಿ; ಆದರೆ ನಾನು ನಿನಗೆ ಕೇಡನ್ನು ಮಾಡಿದೆನು.
- Psalm 38:12 ಕೀರ್ತನೆಗಳು 38:12ನನ್ನ ಪ್ರಾಣವನ್ನು ಹುಡುಕುವವರು ಬಲೆ ಒಡ್ಡುತ್ತಾರೆ; ನನ್ನ ಕೇಡನ್ನು ಹುಡುಕುವವರು ಕೇಡಿನ ಮಾತುಗಳನ್ನಾಡುತ್ತಾರೆ; ದಿನವೆಲ್ಲಾ ಮೋಸಗಳನ್ನು ಕಲ್ಪಿಸುತ್ತಾರೆ.
- 1 Samuel 26:18 1 ಸಮುವೇಲನು 26:18ನನ್ನ ಒಡೆಯನು ತನ್ನ ಸೇವಕ ನನ್ನು ಹೀಗೆ ಹಿಂದಟ್ಟುವದೇನು? ನಾನೇನು ಮಾಡಿ ದೆನು? ನನ್ನ ಕೈಯಲ್ಲಿ ಏನು ಕೆಟ್ಟತನ ಅದೆ?