Psalms · chapter 56 · verse 6
Psalm 56:6 in Kannada
ಅವರು ಕೂಡಿಕೊಂಡು ಹೊಂಚುಹಾಕುತ್ತಾರೆ; ನನ್ನ ಪ್ರಾಣಕ್ಕೆ ಕಾಯುವವರಾಗಿ ನನ್ನ ಹೆಜ್ಜೆಗಳನ್ನು ಗುರುತಿಸುತ್ತಾರೆ.
Avaru koodikondu honchuhaakuttaare; nanna praanakke kaayuvavaraagi nanna hejjegalannu gurutisuttaare.
Psalm 56:6 in English
- King James Version (KJV)
- They gather themselves together, they hide themselves, they mark my steps, when they wait for my soul.
- World English Bible (WEB)
- They conspire and lurk, watching my steps. They are eager to take my life.
- American Standard Version (ASV)
- They gather themselves together, they hide themselves, They mark my steps, Even as they have waited for my soul.
- Bible in Basic English (BBE)
- They come together, they are waiting in secret places, they take note of my steps, they are waiting for my soul.
- Darby Translation (DBY)
- They gather themselves together, they hide themselves; they mark my steps, because they wait for my soul.
- Webster's Bible (WBS)
- They assemble themselves, they hide themselves, they mark my steps, when they wait for my soul.
- Young's Literal Translation (YLT)
- They assemble, they hide, they watch my heels, When they have expected my soul.
Read in context
- 4ದೇವರಲ್ಲಿ ಆತನ ವಾಕ್ಯವನ್ನು ನಾನು ಸ್ತುತಿಸುವೆನು; ದೇವರಲ್ಲಿ ನಾನು ಭರವಸವಿಟ್ಟಿದ್ದೇನೆ; ನಾನು ಭಯಪಡೆನು, ಮನುಷ್ಯನು ನನಗೆ ಏನು ಮಾಡಬಲ್ಲನು?
- 5ಪ್ರತಿದಿನ ಅವರು ನನ್ನ ಮಾತುಗಳನ್ನು ಅಪಾರ್ಥ ಮಾಡುತ್ತಾರೆ. ನನಗೆ ವಿರೋಧವಾಗಿರುವ ಅವರ ಆಲೋಚನೆಗಳೆಲ್ಲಾ ನನ್ನ ಕೇಡಿಗಾಗಿವೆ.
- 6ಅವರು ಕೂಡಿಕೊಂಡು ಹೊಂಚುಹಾಕುತ್ತಾರೆ; ನನ್ನ ಪ್ರಾಣಕ್ಕೆ ಕಾಯುವವರಾಗಿ ನನ್ನ ಹೆಜ್ಜೆಗಳನ್ನು ಗುರುತಿಸುತ್ತಾರೆ.
- 7ಅಪರಾಧದಿಂದ ಅವರು ತಪ್ಪಿಸಿಕೊಂಡಾರೋ? ಓ ದೇವರೇ, ಕೋಪದಿಂದ ಜನರನ್ನು ಕೆಡವಿಹಾಕು.
- 8ನನ್ನ ಅಲೆದಾಡುವಿಕೆಗಳನ್ನು ನೀನು ಲೆಕ್ಕಿಸಿದ್ದೀ; ನನ್ನ ಕಣ್ಣೀರನ್ನು ನಿನ್ನ ಬುದ್ದಲಿಯಲ್ಲಿ ಹಾಕು; ಅದು ನಿನ್ನ ಪುಸ್ತಕದಲ್ಲಿ ಇಲ್ಲವೋ?
Cross references
- Psalm 59:3 ಕೀರ್ತನೆಗಳು 59:3ಓ ಕರ್ತನೇ, ನನ್ನ ಅಪರಾಧಕ್ಕಾಗಿ ಇಲ್ಲವೆ ನನ್ನ ಪಾಪಕ್ಕಾಗಿ ಅಲ್ಲ; ಆದರೂ ಇಗೋ, ಅವರು ನನ್ನ ಪ್ರಾಣಕ್ಕೆ ಹೊಂಚುಹಾಕುತ್ತಾರೆ; ಪರಾಕ್ರಮಶಾಲಿಗಳು ನನಗೆ ವಿರೋಧವಾಗಿ ಕೂಡಿ ಕೊಳ್ಳುತ್ತಾರೆ.
- Psalm 71:10 ಕೀರ್ತನೆಗಳು 71:10ನನ್ನ ಶತ್ರುಗಳು ನನಗೆ ವಿರೋಧವಾಗಿ ಮಾತನಾಡುತ್ತಾರೆ; ನನ್ನ ಪ್ರಾಣಕ್ಕೆ ಹೊಂಚು ಹಾಕುವ ವರು ಕೂಡಿಕೊಂಡು ಆಲೋಚನೆ ಮಾಡುತ್ತಾ--
- Psalm 140:2 ಕೀರ್ತನೆಗಳು 140:2ಅವರು ಹೃದಯದಲ್ಲಿ ಕೇಡು ಗಳನ್ನು ಕಲ್ಪಿಸುತ್ತಾರೆ; ಅವರು ತಪ್ಪದೆ ಯುದ್ಧಕ್ಕೆ ಕೂಡಿಕೊಳ್ಳುತ್ತಾರೆ.
- Luke 20:20 ಲೂಕನು 20:20ಅವರು ಆತನನ್ನು ಹೊಂಚಿ ನೋಡಿದವರಾಗಿ ಮಾತಿನಲ್ಲಿ ಆತನನ್ನು ಸಿಕ್ಕಿಸುವಂತೆಯೂ ಅಧಿಪತಿಯ ಬಲಕ್ಕೆ ಮತ್ತು ಅಧಿಕಾರಕ್ಕೆ ಒಪ್ಪಿಸುವಂತೆಯೂ ತಾವು ನೀತಿವಂತರೆಂದು ನಟಿಸುವ ಗೂಢಾಚಾರರನ್ನು ಕಳುಹಿಸಿದರು.
- Acts 23:12–14 ಅಪೊಸ್ತಲರ ಕೃತ್ಯಗಳು 23:12–14ಬೆಳಗಾದ ಮೇಲೆ ಯೆಹೂದ್ಯರಲ್ಲಿ ಕೆಲವರು ಒಗ್ಗಟ್ಟಾಗಿ ಕೂಡಿ ತಾವು ಪೌಲನನ್ನು ಕೊಲ್ಲುವ ತನಕ ಅನ್ನಪಾನಗಳನ್ನು ತೆಗೆದುಕೊಳ್ಳುವದಿಲ್ಲವೆಂದು ಹೇಳಿ ಶಪಥಮಾಡಿಕೊಂಡರು. ಈ ಒಳಸಂಚನ್ನು ಮಾಡಿ ದವರು ನಾಲ್ವತ್ತು ಮಂದಿಗಿಂತ ಹೆಚ್ಚಾಗಿದ್ದರು. ಅವರು ಪ್ರಧಾನಯಾಜಕರ ಮತ್ತು ಹಿರಿಯರ ಬಳಿಗೆ ಬಂದು--ನಾವು ಪೌಲನನ್ನು ಕೊಲ್ಲುವ ತನಕ ಯಾವದನ್ನೂ ತಿನ್ನುವದಿಲ್ಲವೆಂದು ನಮಗೆ ನಾವೇ ದೊಡ್ಡ ಶಪಥವನ್ನು ಮಾಡಿಕೊಂಡಿದ್ದೇವೆ.
- Daniel 6:4 ದಾನಿಯೇಲನು 6:4ಹೀಗಿರಲು ಪ್ರಧಾನಿಗಳೂ ದೇಶಾಧಿಪತಿಗಳೂ ರಾಜ್ಯ ಭಾರದ ವಿಷಯವಾಗಿ ದಾನಿಯೇಲನ ವಿರೋಧವಾಗಿ ತಪ್ಪುಹೊರಿಸುವದಕ್ಕೆ ಸಂದರ್ಭ ಹುಡುಕುತ್ತಿದ್ದರು. ಆದರೆ ಅವನು ನಂಬಿಗಸ್ತನಾಗಿದ್ದು ಅವನಲ್ಲಿ ತಪ್ಪು ದೋಷವು ಇಲ್ಲದಿದ್ದದ್ದರಿಂದ ಅವರಿಗೆ ಯಾವ ತಪ್ಪೂ ಸಿಗಲಾರದೆ ಹೋಯಿತು.
- Acts 4:5–6 ಅಪೊಸ್ತಲರ ಕೃತ್ಯಗಳು 4:5–6ಮರುದಿನ ಅವರ ಅಧಿಕಾರಿಗಳೂ ಹಿರಿಯರೂ ಶಾಸ್ತ್ರಿಗಳೂ ಮಹಾಯಾಜಕನಾದ ಅನ್ನನೂ ಕಾಯಫನೂ ಯೋಹಾನನೂ ಅಲೆಕ್ಸಾಂದ್ರನೂ ಮಹಾಯಾಜಕನ ಸಂಬಂಧಿಕರೆಲ್ಲರೂ ಯೆರೂಸ ಲೇಮಿನಲ್ಲಿ ಕೂಡಿಬಂದರು.
- Psalm 89:51 ಕೀರ್ತನೆಗಳು 89:51ಕರ್ತನೇ, ನಿನ್ನ ಶತ್ರುಗಳು ನಿಂದಿಸುತ್ತಾ ರಲ್ಲಾ? ನಿನ್ನ ಅಭಿಷಿಕ್ತನ ಹೆಜ್ಜೆಗಳನ್ನು ನಿಂದಿಸುತ್ತಾ ರಲ್ಲಾ?ಕರ್ತನಿಗೆ ಯುಗಯುಗಕ್ಕೂ ಸ್ತುತಿಯಾಗಲಿ. ಆಮೆನ್, ಅಮೆನ್.
- Matthew 27:1 ಮತ್ತಾಯನು 27:1ಬೆಳಗಾದಾಗ ಎಲ್ಲಾ ಪ್ರಧಾನ ಯಾಜಕರೂ ಜನರ ಹಿರಿಯರೂ ಯೇಸುವನ್ನು ಕೊಲ್ಲಿಸುವದಕ್ಕೆ ಆತನಿಗೆ ವಿರೋಧವಾಗಿ ಆಲೋಚನೆ ಮಾಡಿಕೊಂಡರು.
- Psalm 10:8–10 ಕೀರ್ತನೆಗಳು 10:8–10ಅವನು ಹೊಂಚು ಹಾಕುವ ಗ್ರಾಮಗಳ ಸ್ಥಳಗಳಲ್ಲಿ ಕೂತುಕೊಂಡು ಗುಪ್ತವಾದ ಸ್ಥಳಗಳಲ್ಲಿ ನಿರಪರಾಧಿಯನ್ನು ಕೊಲ್ಲು ತ್ತಾನೆ. ಅವನ ಕಣ್ಣುಗಳು ಗತಿಯಿಲ್ಲದವನನ್ನು ಹೊಂಚಿ ನೋಡು ತ್ತವೆ; ಗವಿಯಲ್ಲಿರುವ ಸಿಂಹದ ಹಾಗೆ ಮರೆಯಲ್ಲಿ ಹೊಂಚು ಹಾಕುತ್ತಾನೆ; ಬಡವನನ್ನು ಹಿಡಿ ಯುವದಕ್ಕೆ ಹೊಂಚು ಹಾಕುತ್ತಾನೆ; ಬಡವನನ್ನು ತನ್ನ ಬಲೆಯಲ್ಲಿ ಎಳೆದು ಹಿಡಿಯುತ್ತಾನೆ. ಅವನು ಕುಗ್ಗಿ ಬೊಗ್ಗುತ್ತಾನೆ; ಆದದರಿಂದ ಗತಿಯಿಲ್ಲದವರು ಅವನ ಬಲದಿಂದ ಬೀಳುತ್ತಾರೆ.
- Job 14:16 ಯೋಬನು 14:16ಈಗ ನನ್ನ ಹೆಜ್ಜೆಗಳನ್ನು ಎಣಿಕೆ ಮಾಡುತ್ತೀ; ನೀನು ನನ್ನ ಪಾಪವನ್ನು ನೋಡಿ ಕೊಳ್ಳುತ್ತೀಯಲ್ಲವೋ?
- Psalm 64:2–6 ಕೀರ್ತನೆಗಳು 64:2–6ದುರ್ಮಾರ್ಗಿಗಳ ಗುಪ್ತವಾದ ಆಲೋಚನೆಗಳಿಗೂ ದುಷ್ಟರ ಹೊಂಚಿಗೂ ನನ್ನನ್ನು ಮರೆಮಾಡು. ಅವರು ತಮ್ಮ ನಾಲಿಗೆಯನ್ನು ಕತ್ತಿಯ ಹಾಗೆ ಮಸೆಯುತ್ತಾರೆ. ಕಹಿ ಮಾತುಗಳೆಂಬ ಬಾಣಗಳನ್ನು ಹೂಡುತ್ತಾರೆ. ನಿರ್ದೋಷಿಯ ಕಡೆಗೆ ಗುಪ್ತವಾಗಿ ಫಕ್ಕನೆ ಎಸೆಯುವದಕ್ಕೆ ಅವರು ಭಯ ಪಡುವದಿಲ್ಲ. ಕೆಟ್ಟಕಾರ್ಯದಲ್ಲಿ ಅವರು ತಮ್ಮನ್ನು ತಾವೇ ಪ್ರೋತ್ಸಾಹ ಮಾಡಿಕೊಳ್ಳುತ್ತಾರೆ; ಬಲೆಗಳನ್ನು ಒಡ್ಡು ವದಕ್ಕೆ ಮಾತನಾಡುತ್ತಾ--ನಮ್ಮನ್ನು ನೋಡುವವ ರಾರೆಂದು ಹೇಳುತ್ತಾರೆ. ಅವರು ದ್ರೋಹಗಳನ್ನು ಹುಡುಕುತ್ತಾರೆ; ಎಚ್ಚರಿಕೆಯಿಂದ ಹುಡುಕಿದ್ದನ್ನು ಅವರು ಪೂರೈಸುತ್ತಾರೆ; ಅವರೆಲ್ಲರ ಅಂತರಗವೂ ಹೃದಯವೂ ಅಶೋದ್ಯವಾಗಿವೆ.