Psalms · chapter 61 · verse 5
Psalm 61:5 in Kannada
ಓ ದೇವರೇ, ನೀನು ನನ್ನ ಹರಕೆಗಳನ್ನು ಕೇಳಿದ್ದೀ; ನಿನ್ನ ಹೆಸರಿಗೆ ಭಯಪಡುವವರಿಗೆ ಸ್ವಾಸ್ಥ್ಯವನ್ನು ಕೊಟ್ಟಂತೆ ನನಗೂ ಕೊಟ್ಟಿದ್ದೀ.
O devare, neenu nanna harakegalannu keliddee; ninna hesarige bhayapaduvavarige svaasthyavannu kottante nanagoo kottiddee.
Psalm 61:5 in English
- King James Version (KJV)
- For thou, O God, hast heard my vows: thou hast given [me] the heritage of those that fear thy name.
- World English Bible (WEB)
- For you, God, have heard my vows. You have given me the heritage of those who fear your name.
- American Standard Version (ASV)
- For thou, O God, hast heard my vows: Thou hast given [me] the heritage of those that fear thy name.
- Bible in Basic English (BBE)
- For you, O God, have made answer to my prayers; you have given me the heritage of those who give honour to your name.
- Darby Translation (DBY)
- For thou, O God, hast heard my vows; thou hast given [me] the inheritance of those that fear thy name.
- Webster's Bible (WBS)
- For thou, O God, hast heard my vows: thou hast given [me] the heritage of those that fear thy name.
- Young's Literal Translation (YLT)
- For Thou, O God, hast hearkened to my vows, Thou hast appointed the inheritance Of those fearing Thy name.
Read in context
- 3ನೀನು ನನಗೆ ಆಶ್ರಯವೂ ಶತ್ರುವಿನಿಂದ ತಪ್ಪಿಸುವ ಬಲವಾದ ಬುರುಜೂ ಆಗಿದ್ದೀ;
- 4ನಿನ್ನ ಗುಡಾರದಲ್ಲಿ ನಾನು ಎಂದೆಂದಿಗೂ ವಾಸಿಸುವೆನು; ನಿನ್ನ ರೆಕ್ಕೆಗಳ ಮರೆಯಲ್ಲಿ ಭರವಸವುಳ್ಳವನಾಗಿರುವೆನು. ಸೆಲಾ.
- 5ಓ ದೇವರೇ, ನೀನು ನನ್ನ ಹರಕೆಗಳನ್ನು ಕೇಳಿದ್ದೀ; ನಿನ್ನ ಹೆಸರಿಗೆ ಭಯಪಡುವವರಿಗೆ ಸ್ವಾಸ್ಥ್ಯವನ್ನು ಕೊಟ್ಟಂತೆ ನನಗೂ ಕೊಟ್ಟಿದ್ದೀ.
- 6ಅರಸನ ಆಯುಷ್ಯ ವನ್ನು ಹೆಚ್ಚಿಸುವಿ; ಅವನ ವರುಷಗಳು ಅನೇಕ ತಲ ತಲಾಂತರಗಳ ಹಾಗೆ ಇರುವವು.
- 7ಅವನು ಎಂದಿಗೂ ದೇವರ ಮುಂದೆ ವಾಸಿಸುವನು; ಅವನನ್ನು ಕಾಯು ವದಕ್ಕೆ ಕರುಣೆಯನ್ನೂ ಸತ್ಯವನ್ನೂ ಸಿದ್ಧಮಾಡು.ಹಾಗಾದರೆ ನನ್ನ ಹರಕೆಗಳನ್ನು ದಿನ ದಿನಕ್ಕೆ ಸಲ್ಲಿ ಸುವ ಹಾಗೆ ನಿನ್ನ ಹೆಸರನ್ನು ಎಂದೆಂದಿಗೂ ನಾನು ಕೀರ್ತಿಸುವೆನು.
Cross references
- Psalm 56:12 ಕೀರ್ತನೆಗಳು 56:12ಓ ದೇವರೇ, ನಿನ್ನ ಪ್ರಮಾಣಗಳು ನನ್ನ ಮೇಲೆ ಇವೆ; ನಾನು ಸ್ತೋತ್ರಗಳನ್ನು ನಿನಗೆ ಸಲ್ಲಿಸುವೆನು.ನನ್ನ ಪ್ರಾಣವನ್ನು ಮರಣದಿಂದ ಬಿಡಿಸಿದ್ದೀ, ಹಾಗೆ ನಾನು ಜೀವಿತರ ಬೆಳಕಿನಲ್ಲಿ ದೇವರ ಮುಂದೆ ನಡೆಯುವ ನನ್ನ ಪಾದಗಳನ್ನು ಬೀಳದಂತೆ ನೀನು ತಪ್ಪಿಸುವದಿಲ್ಲವೋ?
- Malachi 3:16–18 ಮಲಾಕಿಯ 3:16–18ಆಗ ಕರ್ತನಿಗೆ ಭಯಪಡುವವರು ಒಬ್ಬರ ಸಂಗಡಲೊಬ್ಬರು ಆಗಾಗ್ಗೆ ಮಾತಾಡಿಕೊಂಡರು; ಕರ್ತನು ಕಿವಿಗೊಟ್ಟು ಅದನ್ನು ಕೇಳಿದನು; ಇದಲ್ಲದೆ ಕರ್ತನಿಗೆ ಭಯಪಡುವವರಿಗೋಸ್ಕರವೂ ಆತನ ಹೆಸರನ್ನು ನೆನಸುವವರಿಗೋಸ್ಕರವೂ ಆತನ ಮುಂದೆ ಜ್ಞಾಪಕದ ಪುಸ್ತಕವು ಬರೆಯಲ್ಪಟ್ಟಿತು. ನಾನು ನನ್ನ ಆಭರಣಗಳನ್ನು ಕೂಡಿಸಿಕೊಳ್ಳುವ ಆ ದಿನದಲ್ಲಿ ಅವರು ನನ್ನವರಾಗಿರುವರೆಂದೂ ಒಬ್ಬನು ತನಗೆ ಸೇವೆ ಮಾಡುವ ತನ್ನ ಮಗನನ್ನು ಕನಿಕರಿಸುವ ಪ್ರಕಾರ ಅವರನ್ನು ಕನಿಕರಿಸುವೆನೆಂದೂ ಸೈನ್ಯಗಳ ಕರ್ತನು ಹೇಳುತ್ತಾನೆ.ಆಗ ನೀವು ತಿಳುಕೊಂಡು ನೀತಿವಂತ ನಿಗೂ ದುಷ್ಟನಿಗೂ ದೇವರ ಸೇವೆಮಾಡುವವನಿಗೂ ಮಾಡದವನಿಗೂ ಇರುವ ಹೆಚ್ಚುಕಡಿಮೆಯನ್ನು ತಿಳುಕೊಳ್ಳುವಿರಿ. ಆಗ ನೀವು ತಿಳುಕೊಂಡು ನೀತಿವಂತ ನಿಗೂ ದುಷ್ಟನಿಗೂ ದೇವರ ಸೇವೆಮಾಡುವವನಿಗೂ ಮಾಡದವನಿಗೂ ಇರುವ ಹೆಚ್ಚುಕಡಿಮೆಯನ್ನು ತಿಳುಕೊಳ್ಳುವಿರಿ.
- Psalm 86:11 ಕೀರ್ತನೆಗಳು 86:11ಓ ಕರ್ತನೆ, ನಿನ್ನ ಮಾರ್ಗವನ್ನು ನನಗೆ ಬೋಧಿಸು; ನಿನ್ನ ಸತ್ಯದಲ್ಲಿ ನಡೆದುಕೊಳ್ಳುವೆನು; ನಿನ್ನ ಹೆಸರಿಗೆ ಭಯಪಡುವ ಹಾಗೆ ನನ್ನ ಹೃದಯವನ್ನು ಐಕ್ಯಪಡಿಸು.
- Psalm 115:13 ಕೀರ್ತನೆಗಳು 115:13ಕರ್ತನಿಗೆ ಭಯ ಪಡುವವರಾದ ಹಿರಿಯರ ಸಂಗಡ ಕಿರಿಯರನ್ನು ಆಶೀರ್ವದಿಸುವನು.
- Psalm 66:19 ಕೀರ್ತನೆಗಳು 66:19ಆದರೆ ನಿಜವಾಗಿ ನನ್ನ ಪ್ರಾರ್ಥನೆಯನ್ನು ದೇವರು ಕೇಳಿದ್ದಾನಲ್ಲಾ! ಆತನು ನನ್ನ ಪ್ರಾರ್ಥನೆಯ ಸ್ವರವನ್ನು ಆಲೈಸಿದ್ದಾನಲ್ಲಾ!ನನ್ನ ಪ್ರಾರ್ಥನೆಯನ್ನೂ ನನ್ನ ಬಳಿಯಿಂದ ತನ್ನ ಕರುಣೆಯನ್ನೂ ತೊಲಗಿಸದೆ ಇರುವ ದೇವರಿಗೆ ಸ್ತೋತ್ರವಾಗಲಿ.
- Psalm 65:1 ಕೀರ್ತನೆಗಳು 65:1ದೇವರೇ, ಚೀಯೋನಿನಲ್ಲಿ ನಿನಗೋಸ್ಕರ ಸ್ತೋತ್ರವು ಕಾದಿದೆ. ನಿನಗೆ ಅಲ್ಲಿ ಪ್ರಮಾ ಣವು ಸಲ್ಲಿಸಲ್ಪಡುವದು.
- Acts 10:35 ಅಪೊಸ್ತಲರ ಕೃತ್ಯಗಳು 10:35ಆದರೆ ಪ್ರತಿ ಯೊಂದು ಜನಾಂಗದವರಲ್ಲಿ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವನು ಆತನಿಗೆ ಮೆಚ್ಚಿಕೆಯಾ ಗಿದ್ದಾನೆ.
- Psalm 16:5–6 ಕೀರ್ತನೆಗಳು 16:5–6ಕರ್ತನು ನನ್ನ ಪಾಲಿನ ಮತ್ತು ನನ್ನ ಪಾತ್ರೆಯ ಭಾಗವಾಗಿದ್ದಾನೆ; ನೀನು ನನ್ನ ಸ್ವಾಸ್ತ್ಯವನ್ನು ಸ್ಥಿರವಾಗಿ ಕಾಪಾಡುತ್ತೀ. ರಮ್ಯ ಸ್ಥಳಗಳಲ್ಲಿ ನನಗೆ ಪಾಲು ಸಿಕ್ಕಿತು, ಹೌದು, ರಮಣೀಯವಾದ ಬಾಧ್ಯತೆ ನನಗೆ ಅದೆ.