Psalms · chapter 65 · verse 8
Psalm 65:8 in Kannada
ಭೂಮಿಯ ಕಟ್ಟಕಡೆಗಳಲ್ಲಿ ವಾಸಿಸುವವರು ಸಹ ನಿನ್ನ ಗುರುತುಗಳಿಗೆ ಭಯಪಡುವರು. ಉದಯಾಸ್ತ ಮಾನ ಸಮಯಗಳನ್ನು ಉತ್ಸಾಹಧ್ವನಿಗೈಯುವಂತೆ ನೀನು ಮಾಡುತ್ತೀ.
Bhoomiya kattakadegalalli vaasisuvavaru saha ninna gurutugalige bhayapaduvaru. Udayaasta maana samayagalannu utsaahadhvanigaiyuvante neenu maaduttee.
Psalm 65:8 in English
- King James Version (KJV)
- They also that dwell in the uttermost parts are afraid at thy tokens: thou makest the outgoings of the morning and evening to rejoice.
- World English Bible (WEB)
- They also who dwell in faraway places are afraid at your wonders. You call the morning’s dawn and the evening with songs of joy.
- American Standard Version (ASV)
- They also that dwell in the uttermost parts are afraid at thy tokens: Thou makest the outgoings of the morning and evening to rejoice.
- Bible in Basic English (BBE)
- Those in the farthest parts of the earth have fear when they see your signs: the outgoings of the morning and evening are glad because of you.
- Darby Translation (DBY)
- And they that dwell in the uttermost parts are afraid at thy tokens; thou makest the outgoings of the morning and evening to rejoice.
- Webster's Bible (WBS)
- They also that dwell in the uttermost parts are afraid at thy tokens: thou makest the outgoings of the morning and evening to rejoice.
- Young's Literal Translation (YLT)
- And the inhabitants of the uttermost parts From Thy signs are afraid, The outgoings of morning and evening Thou causest to sing.
Read in context
- 6ಬೆಟ್ಟಗಳನ್ನು ತನ್ನ ಶಕ್ತಿಯಿಂದ ನಿಲ್ಲಿಸುವಾತನೇ, ಪರಾಕ್ರಮದಿಂದ ನಡುಕಟ್ಟಿಕೊಂಡಾತನೇ,
- 7ಸಮುದ್ರ ಗಳ ಘೋಷವನ್ನೂ ಅವುಗಳ ತೆರೆಗಳ ಘೋಷವನ್ನೂ ಪ್ರಜೆಗಳ ಕೋಲಾಹಲವನ್ನೂ ಅಣಗಿಸುವಾತನೇ,
- 8ಭೂಮಿಯ ಕಟ್ಟಕಡೆಗಳಲ್ಲಿ ವಾಸಿಸುವವರು ಸಹ ನಿನ್ನ ಗುರುತುಗಳಿಗೆ ಭಯಪಡುವರು. ಉದಯಾಸ್ತ ಮಾನ ಸಮಯಗಳನ್ನು ಉತ್ಸಾಹಧ್ವನಿಗೈಯುವಂತೆ ನೀನು ಮಾಡುತ್ತೀ.
- 9ನೀನು ಭೂಮಿಯನ್ನು ಕಟಾಕ್ಷಿಸಿ ಅದನ್ನು ತೋಯಿಸಿ ನೀರಿನಿಂದ ತುಂಬಿರುವಂತೆ ದೇವರ ನದಿ ಯಿಂದ ಅದನ್ನು ಚೆನ್ನಾಗಿ ಹದಗೊಳಿಸುತ್ತೀ; ಹೀಗೆ ಭೂಮಿಯನ್ನು ಸಿದ್ಧಮಾಡಿ ಮನುಷ್ಯರಿಗೆ ಧಾನ್ಯವನ್ನು ಒದಗಿಸುತ್ತೀ.
- 10ಉಳುವೆಯ ಸಾಲುಗಳನ್ನು ಸಮೃದ್ಧಿ ಯಾಗಿ ತ್ಯಾವಿಸುತ್ತೀ; ನೇಗಿಲ ಸಾಲುಗಳನ್ನು ಸಮಮಾಡುತ್ತೀ; ಸುರಿಯುವ ಮಳೆಯಿಂದ ಅದನ್ನು ಮೃದು ಮಾಡುತ್ತೀ; ಅದರ ಮೊಳಿಕೆಯನ್ನು ಆಶೀರ್ವದಿಸುತ್ತೀ.
Cross references
- Psalm 148:3 ಕೀರ್ತನೆಗಳು 148:3ಸೂರ್ಯ ಚಂದ್ರರೇ, ಆತನನ್ನು ಸ್ತುತಿಸಿರಿ; ಹೊಳೆಯುವ ನಕ್ಷತ್ರಗಳೇ, ಆತ ನನ್ನು ಸ್ತುತಿಸಿರಿ.
- Psalm 136:8 ಕೀರ್ತನೆಗಳು 136:8ಹಗಲನ್ನು ಆಳುವದಕ್ಕೆ ಸೂರ್ಯನನ್ನು ಉಂಟು ಮಾಡಿದಾತನನ್ನು ಕೊಂಡಾಡಿರಿ; ಆತನ ಕರುಣೆಯು ಎಂದೆಂದಿಗೂ ಅದೆ.
- Psalm 104:20–23 ಕೀರ್ತನೆಗಳು 104:20–23ನೀನು ಕತ್ತಲನ್ನು ಬರಮಾಡುತ್ತೀ; ಆಗ ರಾತ್ರಿಯಾಗುತ್ತದೆ; ಅದರಲ್ಲಿ ಅಡವಿಯ ಮೃಗ ಗಳೆಲ್ಲಾ ಸಂಚರಿಸುತ್ತವೆ. ಸಿಂಹದ ಮರಿಗಳು ಬೇಟೆ ಗೋಸ್ಕರವೂ ದೇವರಿಂದ ತಮ್ಮ ಆಹಾರವನ್ನು ಹುಡು ಕುವದಕ್ಕೋಸ್ಕರವೂ ಗರ್ಜಿಸುತ್ತವೆ. ಸೂರ್ಯನು ಹುಟ್ಟಲು ಅವು ಕೂಡಿ ಬಂದು ತಮ್ಮ ಗವಿಗಳಲ್ಲಿ ಮಲಗುತ್ತವೆ. ಮನುಷ್ಯನು ತನ್ನ ಕೆಲಸಕ್ಕೂ ಸಾಯಂ ಕಾಲದ ವರೆಗೆ ತನ್ನ ಪ್ರಯಾಸಕ್ಕೂ ಹೊರಡುತ್ತಾನೆ.
- Deuteronomy 4:19 ಧರ್ಮೋಪದೇಶಕಾಂಡ 4:19ನೀನು ನಿನ್ನ ಕಣ್ಣು ಗಳನ್ನು ಆಕಾಶದ ಕಡೆಗೆ ಎತ್ತಿ ಸೂರ್ಯ, ಚಂದ್ರ, ನಕ್ಷತ್ರಗಳ ಆಕಾಶ ಸೈನ್ಯವನ್ನೆಲ್ಲಾ ನೋಡಲಾಗಿ ನಿನ್ನ ದೇವರಾದ ಕರ್ತನು ಆಕಾಶದ ಕೆಳಗಿರುವ ಎಲ್ಲಾ ಜನಾಂಗಗಳಿಗೆ ಹಂಚಿಕೊಟ್ಟ ಇವುಗಳಿಗೆ ಅಡ್ಡಬಿದ್ದು ಇವುಗಳನ್ನು ಸೇವಿಸುವದಕ್ಕೆ ನಡಿಸಲ್ಪಡದಂತೆಯೂ ನೋಡಿಕೊಳ್ಳಿರಿ.
- Psalm 74:16 ಕೀರ್ತನೆಗಳು 74:16ಹಗಲು ನಿನ್ನದು; ರಾತ್ರಿಯು ಸಹ ನಿನ್ನದು; ನೀನು ಬೆಳಕನ್ನೂ ಸೂರ್ಯ ನನ್ನೂ ಸಿದ್ಧಮಾಡಿದ್ದೀ.
- Psalm 48:5–6 ಕೀರ್ತನೆಗಳು 48:5–6ಅವರು ಅದನ್ನು ನೋಡಿ ಆಶ್ಚ ರ್ಯಪಟ್ಟರು; ಅವರು ಕಳವಳಪಟ್ಟು ಓಡಿ ಹೋದರು. ಭೀತಿಯೂ ಹೆರುವವಳ ಹಾಗೆ ನೋವೂ ಅಲ್ಲಿ ಅವರನ್ನು ಹಿಡಿಯಿತು.
- Psalm 126:2 ಕೀರ್ತನೆಗಳು 126:2ಆಗ ನಮ್ಮ ಬಾಯಿ ನಗೆಯಿಂದಲೂ ನಾಲಿಗೆ ಉತ್ಸಾಹ ಧ್ವನಿಯಿಂದಲೂ ತುಂಬಿದ್ದವು; ಆಗ ಅನ್ಯಜನರು--ಕರ್ತನು ಇವರಿಗೆ ಮಹತ್ಕಾರ್ಯಗಳನ್ನು ಮಾಡಿದ್ದಾನೆ ಎಂದು ಹೇಳಿದರು.
- Joshua 2:9–11 ಯೆಹೋಶುವ 2:9–11ಕರ್ತನು ನಿಮಗೆ ದೇಶವನ್ನು ಕೊಟ್ಟಿದ್ದಾನೆಂದೂ ನಿಮ್ಮ ನಿಮಿತ್ತ ನಮಗೆ ಮಹಾಭೀತಿ ಯಾಗಿದೆ ಎಂದೂ ನಿಮಗೋಸ್ಕರ ದೇಶದ ನಿವಾಸಿ ಗಳೆಲ್ಲರು ಕಂಗೆಟ್ಟು ಹೋಗಿದ್ದಾರೆಂದೂ ನಾನು ಬಲ್ಲೆನು. ನೀವು ಐಗುಪ್ತದಿಂದ ಹೊರಡುವಾಗ ಕರ್ತನು ನಿಮಗೋಸ್ಕರ ಕೆಂಪು ಸಮುದ್ರದ ನೀರನ್ನು ಬತ್ತಿಹೋಗ ಮಾಡಿದ್ದನ್ನೂ ಯೊರ್ದನಿಗೆ ಆಚೆಯಲ್ಲಿದ್ದ ಅಮೋರಿ ಯರ ಇಬ್ಬರು ಅರಸುಗಳಾದ ಸೀಹೋನನನ್ನು ಓಗನನ್ನು ನೀವು ಸಂಪೂರ್ಣ ನಿರ್ಮೂಲ ಮಾಡಿದ್ದನ್ನೂ ನಾವು ಕೇಳಿದ್ದೇವೆ. ಇವುಗಳನ್ನು ನಾವು ಕೇಳಿದಾಗಲೇ ನಮ್ಮ ಹೃದಯವು ಕರಗಿಹೋಯಿತು. ಇನ್ನು ನಿಮ್ಮ ನಿಮಿತ್ತ ಯಾವನಲ್ಲಿಯೂ ಧೈರ್ಯವಿಲ್ಲದೆ ಹೋಯಿತು. ಯಾಕಂದರೆ ನಿಮ್ಮ ದೇವರಾದ ಕರ್ತನೇ ಮೇಲಿರುವ ಆಕಾಶದಲ್ಲಿಯೂ ಕೆಳಗಿರುವ ಭೂಮಿಯ ಮೇಲೆಯೂ ದೇವರಾಗಿದ್ದಾನೆ.
- Psalm 66:3 ಕೀರ್ತನೆಗಳು 66:3ದೇವರಿಗೆ--ನಿನ್ನ ಕೆಲಸಗಳಿಂದ ನೀನು ಎಷ್ಟು ಭಯಂಕರನಾಗಿದ್ದೀ ಎಂದು ಹೇಳಿರಿ. ನಿನ್ನ ಮಹಾಬಲದ ನಿಮಿತ್ತ ನಿನ್ನ ಶತ್ರುಗಳು ತಾವೇ ನಿನಗೆ ಅಧೀನರಾಗುವರು;
- Revelation 11:13 ಪ್ರಕಟನೆ 11:13ಅದೇ ತಾಸಿನಲ್ಲಿ ಮಹಾಭೂಕಂಪವುಂಟಾಗಿ ಆ ಪಟ್ಟಣದ ಹತ್ತರಲ್ಲೊಂದ ಂಶವು ಬಿದ್ದು ಹೋಯಿತು; ಆ ಭೂಕಂಪದಲ್ಲಿ ಏಳು ಸಾವಿರ ಮಂದಿ ಹತರಾದರು ಉಳಿದವರು ಭಯ ಗ್ರಸ್ಥರಾಗಿ ಪರಲೋಕದ ದೇವರನ್ನು ಮಹಿಮೆ ಪಡಿಸಿದರು.
- Habakkuk 3:3–19 ಹಬಕ್ಕೂಕ 3:3–19ದೇವರು ತೇಮಾನಿ ನಿಂದಲೂ ಪರಿಶುದ್ಧನು ಪಾರಾನ್ ಪರ್ವತದಿಂದಲೂ ಬಂದನು. ಸೆಲಾ. ಆತನ ಮಹಿಮೆ ಆಕಾಶಗಳನ್ನು ಮುಚ್ಚಿತು: ಆತನ ಸ್ತೋತ್ರವು ಭೂಮಿಯನ್ನು ತುಂಬಿ ಸಿತು. ಆತನ ಪ್ರಕಾಶವು ಬೆಳಕಿನ ಹಾಗಿತ್ತು; ಆತನಿಗೆ ತನ್ನ ಕೈಯೊಳಗಿಂದ ಕೊಂಬುಗಳು ಬಂದವು; ಅಲ್ಲಿ ಆತನ ಅಧಿಕಾರವನ್ನು ಮರೆಮಾಡುವದಾಗಿತ್ತು. ಆತನ ಮುಂದೆ ಜಾಡ್ಯವು ಹೋಯಿತು. ಆತನ ಕಾಲುಗಳಿಂದ ಉರಿ ಕೆಂಡಗಳು ಹೊರಟವು. ಆತನು ನಿಂತುಕೊಂಡು ಭೂಮಿಯನ್ನು ಅಳೆದನು. ಆತನು ನೋಡಿ ಜನಾಂಗ ಗಳನ್ನು ಓಡಿಸಿಬಿಟ್ಟನು; ಶಾಶ್ವತವಾದ ಪರ್ವತಗಳು ಚದುರಿಸಲ್ಪಟ್ಟವು; ನಿತ್ಯವಾದ ಗುಡ್ಡಗಳು ನಡುಗಿ ದವು; ಆತನ ಮಾರ್ಗಗಳು ನಿತ್ಯವಾದವುಗಳೇ. ಕೂಷಾನಿನ ಡೇರೆಗಳನ್ನು ಕಷ್ಟದೊಳಗೆ ನೋಡಿ ದೆನು; ಮಿದ್ಯಾನಿನ ದೇಶದ ತೆರೆಗಳು ನಡುಗಿದವು. ಕರ್ತನು ನದಿಗಳ ಮೇಲೆ ಉರಿಗೊಂಡನೋ? ನದಿಗಳ ಮೇಲೆ ನಿನ್ನ ಕೋಪವಿತ್ತೋ? ಸಮುದ್ರದ ಮೇಲೆ ನಿನ್ನ ರೌದ್ರ ವಿತ್ತೋ? ಇದಕ್ಕಾಗಿ ನಿನ್ನ ಕುದುರೆ ಗಳ ಮೇಲೆ ಸವಾರಿ ಮಾಡಿ ನಿನ್ನ ರಕ್ಷಣೆಯ ರಥಗ ಳಲ್ಲಿ ಹತ್ತಿದಿಯೋ? ನೀನು ಗೋತ್ರಗಳಿಗೆ ಆಣೆ ಯಿಟ್ಟ ವಾಕ್ಯದ ಪ್ರಕಾರ ನಿನ್ನ ಬಿಲ್ಲು ಪೂರ್ಣ ಬರಿದಾ ಯಿತು. ಸೆಲಾ. ಭೂಮಿಯನ್ನು ನದಿಗಳಿಂದ ಸೀಳಿದಿ. ಬೆಟ್ಟಗಳು ನಿನ್ನನ್ನು ನೋಡಿ ನಡುಗಿದವು; ಜಲ ಪ್ರವಾಹವು ಹಾದು ಹೋಯಿತು; ಅಗಾಧವು ತನ್ನ ಶಬ್ದವನ್ನು ಕೊಟ್ಟಿತು; ತನ್ನ ಕೈಗಳನ್ನು ಮೇಲಕ್ಕೆ ಎತ್ತಿ ಕೊಂಡಿತು. ಸೂರ್ಯ ಚಂದ್ರಗಳು ತಮ್ಮ ನಿವಾಸ ದಲ್ಲಿ ಕದಲದೆ ನಿಂತುಬಿಟ್ಟವು. ನಿನ್ನ ಬಾಣಗಳು ಬೆಳಕಿ ನಿಂದಲೂ ನಿನ್ನ ಈಟಿಯು ಮಿಂಚುವ ಪ್ರಕಾಶದಿಂದಲೂ ಹೊರಟವು. ನೀನು ಸಿಟ್ಟಿನಿಂದ ದೇಶದ ಮೇಲೆ ನಡೆದುಹೋಗಿ ಕೋಪದಿಂದ ಅನ್ಯಜನಾಂಗಗಳನ್ನು ತುಳಿದುಹಾಕಿದ್ದೀ. ನಿನ್ನ ಜನರ ರಕ್ಷಣೆಗೋಸ್ಕರವೂ ನಿನ್ನ ಅಭಿಷಿಕ್ತರ ರಕ್ಷಣೆಗೊಸ್ಕರವೂ ನೀನು ಹೊರಟು ಹೋಗಿ ಕುತ್ತಿಗೆಯ ವರೆಗೂ ಆಸ್ತಿವಾರವನ್ನು ಬರಿದು ಮಾಡಿದ ಹಾಗೆ ದುಷ್ಟರ ಮನೆಯ ತಲೆಯನ್ನು ಗಾಯ ಮಾಡಿಬಿಟ್ಟಿದ್ದೀ. ಸೆಲಾ. ಅವನ ದೊಣ್ಣೆಗಳಿಂದಲೇ ತನ್ನ ಹಳ್ಳಿಗಳ ಮುಖ್ಯಸ್ಥನನ್ನು ಹೊಡೆದಿದ್ದೀ; ಅವರು ನನ್ನನ್ನು ಚದುರಿಸುವದಕ್ಕೆ ಬಿರುಗಾಳಿಯಂತೆ ಬಂದರು; ಬಡವರನ್ನು ಅಂತರಂಗದಲ್ಲಿ ನುಂಗಿಬಿಡುವ ಹಾಗೆ ಅವರಿಗೆ ಸಂತೋಷವು ಇರುವದು. ನೀನು ನಿನ್ನ ಕುದುರೆಗಳ ಸಂಗಡ ಸಮುದ್ರದಲ್ಲಿಯೂ ಮಹಾಜಲ ಗಳ ಸಮೂಹದಲ್ಲಿಯೂ ನಡೆದುಹೋದಿ. ನಾನು ಕೇಳಿದಾಗ ನನ್ನ ಹೊಟ್ಟೆಯು ತಳಮಳಗೊಂಡಿತು, ಆ ಶಬ್ದಕ್ಕೆ ನನ್ನ ತುಟಿಗಳು ಅದರಿದವು; ಇಕ್ಕಟ್ಟಿನ ದಿನದಲ್ಲಿ ನಾನು ವಿಶ್ರಾಂತಿಯನ್ನು ಹೊಂದುವ ಹಾಗೆ ಕೊಳೆಯುವಿಕೆಯು ನನ್ನ ಎಲುಬುಗಳಲ್ಲಿ ಸೇರಿತು, ನಾನು ನಿಂತ ಹಾಗೆಯೇ ನಡುಗಿದೆನು; ಆತನು ಜನರ ಬಳಿಗೆ ಬರುವಾಗ ತನ್ನ ಸೈನ್ಯಗಳ ಕೂಡ ಅವರ ಮೇಲೆ ದಾಳಿ ಮಾಡುವನು. ಅಂಜೂರದ ಮರವು ಚಿಗುರ ದಿದ್ದರೂ ದ್ರಾಕ್ಷೇಬಳ್ಳಿಗಳಲ್ಲಿ ಹಣ್ಣು ಇಲ್ಲದಿದ್ದರೂ ಎಣ್ಣೇ ಮರಗಳ ಉತ್ಪತ್ತಿಯು ನಿಂತುಹೋದರೂ ಹೊಲಗಳು ಆಹಾರ ಕೊಡದಿದ್ದರೂ ಹಟ್ಟಿಯೊಳಗಿಂದ ಮಂದೆಗಳು ಕಡಿದು ಬಿಡಲ್ಪಟ್ಟಿದ್ದರೂ ಗೋದಲಿಗಳಲ್ಲಿ ಮಂದೆ ಇಲ್ಲದಿದ್ದರೂ ನಾನು ಕರ್ತನಲ್ಲಿ ಸಂತೋಷಿ ಸುವೆನು, ನನ್ನ ರಕ್ಷಣೆಯ ದೇವರಲ್ಲಿ ಉಲ್ಲಾಸಪಡು ವೆನು.ಕರ್ತನಾದ ದೇವರು ನನ್ನ ಬಲವಾಗಿದ್ದಾನೆ. ಆತನು ನನ್ನ ಕಾಲುಗಳನ್ನು ಜಿಂಕೆಯ ಕಾಲುಗಳ ಹಾಗೆ ಮಾಡಿ ನನ್ನ ಉನ್ನತ ಸ್ಥಳಗಳಲ್ಲಿ ನಾನು ನಡೆಯುವಂತೆ ಆತನು ಮಾಡುವನು. ಪ್ರಧಾನ ಗಾಯಕನ ಕೀರ್ತನ ಸಂಗ್ರಹದಿಂದ ತೆಗೆದದ್ದು: ನನ್ನ ತಂತಿವಾದ್ಯದೊಡನೆ ಹಾಡತಕ್ಕದ್ದು. ಕರ್ತನಾದ ದೇವರು ನನ್ನ ಬಲವಾಗಿದ್ದಾನೆ. ಆತನು ನನ್ನ ಕಾಲುಗಳನ್ನು ಜಿಂಕೆಯ ಕಾಲುಗಳ ಹಾಗೆ ಮಾಡಿ ನನ್ನ ಉನ್ನತ ಸ್ಥಳಗಳಲ್ಲಿ ನಾನು ನಡೆಯುವಂತೆ ಆತನು ಮಾಡುವನು. ಪ್ರಧಾನ ಗಾಯಕನ ಕೀರ್ತನ ಸಂಗ್ರಹದಿಂದ ತೆಗೆದದ್ದು: ನನ್ನ ತಂತಿವಾದ್ಯದೊಡನೆ ಹಾಡತಕ್ಕದ್ದು.
- Exodus 15:14–16 ವಿಮೋಚನಕಾಂಡ 15:14–16ಜನರು ಇದನ್ನು ಕೇಳಿ ಭಯಪಡುವರು; ದುಃಖವು ಫಿಲಿಷ್ಟಿಯದಲ್ಲಿ ವಾಸಿಸುವವರನ್ನು ಹಿಡಿಯುವದು. ಆಗ ಎದೋಮಿನ ಪ್ರಭುಗಳು ದಿಗ್ಭ್ರಮೆಗೊಳ್ಳು ವರು; ಮೋವಾಬಿನ ಬಲಿಷ್ಠರನ್ನು ಕಂಪನವು ಹಿಡಿಯು ವದು. ಕಾನಾನಿನ ನಿವಾಸಿಗಳೆಲ್ಲಾ ಕರಗಿ ಹೋಗುವರು. ಭಯವೂ ಹೆದರಿಕೆಯೂ ಅವರ ಮೇಲೆ ಬೀಳು ವದು; ನಿನ್ನ ಜನರು ದಾಟಿ ಹೋಗುವ ವರೆಗೆ ಓ ಕರ್ತನೇ, ನೀನು ಕೊಂಡುಕೊಂಡ ಜನರು ದಾಟಿ ಹೋಗುವ ವರೆಗೆ ನಿನ್ನ ಬಾಹುವಿನ ದೊಡ್ಡಸ್ತಿಕೆಯಿಂದ ಅವರು ಕಲ್ಲಿನಂತೆ ಸ್ತಬ್ಧರಾಗುವರು.