Psalms · chapter 68 · verse 11
Psalm 68:11 in Kannada
ಕರ್ತನು ವಾಕ್ಯ ವನ್ನು ಕೊಟ್ಟನು; ಅದನ್ನು ಪ್ರಕಟಿಸಿದವರ ಗುಂಪು ದೊಡ್ಡದಾಗಿತ್ತು.
Kartanu vaakya vannu kottanu; adannu prakatisidavara gumpu doddadaagittu.
Psalm 68:11 in English
- King James Version (KJV)
- The Lord gave the word: great [was] the company of those that published [it].
- World English Bible (WEB)
- The Lord announced the word. The ones who proclaim it are a great company.
- American Standard Version (ASV)
- The Lord giveth the word: The women that publish the tidings are a great host.
- Bible in Basic English (BBE)
- The Lord gives the word; great is the number of the women who make it public.
- Darby Translation (DBY)
- The Lord gives the word: great the host of the publishers.
- Webster's Bible (WBS)
- The LORD gave the word: great [was] the company of those that published [it] .
- Young's Literal Translation (YLT)
- The Lord doth give the saying, The female proclaimers [are] a numerous host.
Read in context
- 9ಓ ದೇವರೇ, ನೀನು ಸಮೃದ್ಧಿಯಾಗಿ ಮಳೆಯನ್ನು ಸುರಿಸಿದಿ; ಇದರಿಂದ ದಣಿದ ನಿನ್ನ ಬಾಧ್ಯ ತೆಯನ್ನು ನೀನು ಸ್ಥಿರಪಡಿಸಿದಿ.
- 10ನಿನ್ನ ಸಭೆಯು ಅದರಲ್ಲಿ ವಾಸಮಾಡಿತು; ಓ ದೇವರೇ, ನಿನ್ನ ಸಮೃದ್ಧಿ ಯಿಂದ ಬಡವರನ್ನು ತೃಪ್ತಿಪಡಿಸಿದಿ.
- 11ಕರ್ತನು ವಾಕ್ಯ ವನ್ನು ಕೊಟ್ಟನು; ಅದನ್ನು ಪ್ರಕಟಿಸಿದವರ ಗುಂಪು ದೊಡ್ಡದಾಗಿತ್ತು.
- 12ಸೈನ್ಯಗಳ ಅರಸರು ತ್ವರೆಯಾಗಿ ಓಡಿಹೋದರು; ಮನೆಯಲ್ಲಿ ವಾಸಿಸುವವಳು ಕೊಳ್ಳೆ ಯನ್ನು ಪಾಲು ಮಾಡಿಕೊಂಡಳು.
- 13ನೀವು ಮಡಿಕೆ ಗಳ ಮಧ್ಯದಲ್ಲಿ ಮಲಗಿದಾಗ್ಯೂ ಬೆಳ್ಳಿಯಿಂದಲೂ ಅದರ ರೆಕ್ಕೆಗಳು ಹಳದಿ ಚಿನ್ನದಿಂದಲೂ ಮುಚ್ಚಿದ ಪಾರಿವಾಳದ ರೆಕ್ಕೆಗಳ ಹಾಗಿದ್ದೀರಿ.
Cross references
- Exodus 15:20 ವಿಮೋಚನಕಾಂಡ 15:20ಆಗ ಪ್ರವಾದಿನಿಯಾಗಿದ್ದ ಆರೋನನ ಸಹೋ ದರಿ ಮಿರ್ಯಾಮಳು ಕೈಯಲ್ಲಿ ದಮ್ಮಡಿಯನ್ನು ತೆಗೆದು ಕೊಂಡಳು. ಸ್ತ್ರೀಯರೆಲ್ಲರೂ ದಮ್ಮಡಿಗಳನ್ನು ಹಿಡಿದು ಕೊಂಡು ನಾಟ್ಯವಾಡುತ್ತಾ ಆಕೆಯನ್ನು ಹಿಂಬಾಲಿಸಿ ಹೋದರು.
- Psalm 40:3 ಕೀರ್ತನೆಗಳು 40:3ನನ್ನ ಬಾಯಲ್ಲಿ ನೂತನ ಹಾಡನ್ನು ಇಟ್ಟಿದ್ದಾನೆ; ಅದು ನಮ್ಮ ದೇವರ ಸ್ತೋತ್ರವೇ; ಅನೇಕರು ಇದನ್ನು ನೋಡಿ ಭಯಪಟ್ಟು ಕರ್ತನಲ್ಲಿ ಭರವಸವಿಡುವರು.
- Psalm 68:25 ಕೀರ್ತನೆಗಳು 68:25ಹಾಡು ವವರು ಮುಂದಾಗಿಯೂ ಬಾರಿಸುವವರು ಹಿಂದಾ ಗಿಯೂ ಹೋದರು, ಅವರಲ್ಲಿ ದಮ್ಮಡಿ ಬಾರಿಸುವ ಕನ್ಯೆಯರು ಇದ್ದರು.
- Exodus 17:9–16 ವಿಮೋಚನಕಾಂಡ 17:9–16ಆಗ ಮೋಶೆಯು ಯೆಹೋಶುವನಿಗೆ--ನೀನು ನಮ ಗಾಗಿ ಮನುಷ್ಯರನ್ನು ಆರಿಸಿಕೊಂಡು ಅಮಾಲೇಕ್ಯರ ಸಂಗಡ ಯುದ್ಧಮಾಡುವದಕ್ಕೆ ಹೊರಟುಹೋಗು; ನಾಳೆ ನಾನು ದೇವರ ಕೋಲನ್ನು ಕೈಯಲ್ಲಿ ಹಿಡಿದು ಕೊಂಡು ಗುಡ್ಡದ ಮೇಲೆ ನಿಂತುಕೊಳ್ಳುವೆನು ಅಂದನು. ಮೋಶೆಯು ತನಗೆ ಹೇಳಿದಂತೆ ಯೆಹೋಶುವನು ಅಮಾಲೇಕ್ಯರೊಂದಿಗೆ ಯುದ್ಧಮಾಡಿದನು. ಮೋಶೆ ಯೂ ಆರೋನನೂ ಹೂರನೂ ಗುಡ್ಡದ ಮೇಲೆ ಏರಿಹೋದರು. ಮೋಶೆಯು ತನ್ನ ಕೈಯನ್ನು ಎತ್ತಿದಾಗ ಇಸ್ರಾಯೇಲ್ಯರು ಜಯಿಸಿದರು. ಅವನು ತನ್ನ ಕೈಯನ್ನು ಇಳಿಸಿದಾಗ ಅಮಾಲೇಕ್ಯರು ಜಯಿಸಿದರು. ಆದರೆ ಮೋಶೆಯ ಕೈಗಳು ಭಾರವಾಗಿರಲಾಗಿ ಅವರು ಒಂದು ಕಲ್ಲನ್ನು ತಂದು ಅವನ ಕೆಳಗೆ ಇಟ್ಟಾಗ ಅವನು ಅದರ ಮೇಲೆ ಕೂತುಕೊಂಡನು. ಆರೋನನೂ ಹೂರನೂ ಒಬ್ಬನು ಒಂದು ಕಡೆಯಲ್ಲಿಯೂ ಇನ್ನೊಬ್ಬನು ಇನ್ನೊಂದು ಕಡೆಯಲ್ಲಿಯೂ ಅವನ ಕೈಗಳಿಗೆ ಆಧಾರ ಕೊಟ್ಟರು. ಹೀಗೆ ಸೂರ್ಯನು ಮುಳುಗುವ ವರೆಗೆ ಅವನ ಕೈಗಳು ಇಳಿಯದೇ ಇದ್ದವು. ಯೆಹೋಶು ವನು ಅಮಾಲೇಕ್ಯನನ್ನೂ ಅವನ ಜನರನ್ನೂ ಕತ್ತಿಯಿಂದ ಸೋಲಿಸಿದನು. ಆಗ ಕರ್ತನು ಮೋಶೆಗೆ--ಇದನ್ನು ಜ್ಞಾಪಕಾರ್ಥ ವಾಗಿ ಪುಸ್ತಕದಲ್ಲಿ ಬರೆ; ನಾನು ಅಮಾಲೇಕ್ಯರ ನೆನಪು ಆಕಾಶದ ಕೆಳಗೆ ಇರದಂತೆ ಸಂಪೂರ್ಣವಾಗಿ ಅಳಿಸಿ ಬಿಡುವೆನು. ಇದನ್ನು ತಿರಿಗಿ ಯೆಹೋಶುವನಿಗೆ ಹೇಳು ಅಂದನು. ಇದಾದ ಮೇಲೆ ಮೋಶೆಯು ಯಜ್ಞವೇದಿಯನ್ನು ಕಟ್ಟಿ ಅದಕ್ಕೆ ಯೆಹೋವ ನಿಸ್ಸಿ ಎಂದು ಹೆಸರಿಟ್ಟನು.ಆತನು--ಅಮಾಲೇಕ್ಯರ ಕೂಡ ಕರ್ತನಿಗೆ ತಲ ತಲಾಂತರಗಳಲ್ಲಿ ಯುದ್ಧವಿರುವದು ಎಂದು ಕರ್ತನು ಆಣೆ ಇಟ್ಟಿದ್ದಾನೆ ಅಂದನು. ಆತನು--ಅಮಾಲೇಕ್ಯರ ಕೂಡ ಕರ್ತನಿಗೆ ತಲ ತಲಾಂತರಗಳಲ್ಲಿ ಯುದ್ಧವಿರುವದು ಎಂದು ಕರ್ತನು ಆಣೆ ಇಟ್ಟಿದ್ದಾನೆ ಅಂದನು.
- Exodus 14:15 ವಿಮೋಚನಕಾಂಡ 14:15ಆಗ ಕರ್ತನು ಮೋಶೆಗೆ--ನೀನು ನನಗೆ ಯಾಕೆ ಮೊರೆಯಿಡುತ್ತೀ? ಇಸ್ರಾಯೇಲ್ ಮಕ್ಕಳು ಮುಂದಕ್ಕೆ ಹೋಗಬೇಕೆಂದು ಹೇಳು.
- Judges 4:6–31 ನ್ಯಾಯಸ್ಥಾಪಕರು 4:6–31ಅವಳು ಕೆದೆಷ್ ನಫ್ತಾಲಿಯಲ್ಲಿರುವ ಅಬೀನೋವ ಮನ ಮಗನಾದ ಬಾರಾಕನನ್ನು ಕರೇಕಳುಹಿಸಿ ಅವನ ಸಂಗಡ--ನಿನಗೆ ಇಸ್ರಾಯೇಲ್ ದೇವರಾದ ಕರ್ತನು ಆಜ್ಞಾಪಿಸಿದ್ದೇನಂದರೆ--ನೀನು ನಫ್ತಾಲಿಯ ಮಕ್ಕಳ ಲ್ಲಿಯೂ ಜೆಬುಲೂನನ ಮಕ್ಕಳಲ್ಲಿಯೂ ಹತ್ತು ಸಾವಿರ ಜನರನ್ನು ಕೂಡಿಸಿಕೊಂಡು ತಾಬೋರ್ ಬೆಟ್ಟಕ್ಕೆ ಹೋಗು. ನಾನು ಯಾಬೀನನ ಸೇನಾಧಿಪತಿಯಾದ ಸೀಸೆರನನ್ನೂ ಅವನ ರಥಗಳನ್ನೂ ಅವನ ಸೈನ್ಯವನ್ನೂ ಕೀಷೋನಿನ ಬಳಿಗೆ ಬರಮಾಡಿ ಅವನನ್ನು ನಿನ್ನ ಕೈ ಯಲ್ಲಿ ಒಪ್ಪಿಸಿಕೊಡುವೆನು ಅಂದಳು. ಬಾರಾಕನು ಅವಳಿಗೆ--ನೀನು ನನ್ನ ಸಂಗಡ ಬಂದರೆ ನಾನು ಹೋಗುವೆನು; ನೀನು ನನ್ನ ಸಂಗಡ ಬಾರದೆ ಇದ್ದರೆ ನಾನು ಹೋಗುವದಿಲ್ಲ ಅಂದನು. ಅದಕ್ಕವಳುನಾನು ನಿನ್ನ ಸಂಗಡ ನಿಶ್ಚಯವಾಗಿ ಬರುವೆನು; ಆದರೆ ನೀನು ಹೋಗುವ ಪ್ರಯಾಣದಿಂದ ಉಂಟಾಗುವ ಘನವು ನಿನ್ನದಾಗಿರುವದಿಲ್ಲ; ಕರ್ತನು ಒಬ್ಬ ಸ್ತ್ರೀಯ ಕೈಗೆ ಸೀಸೆರನನ್ನು ಮಾರಿಬಿಡುವನು ಎಂದು ಹೇಳಿ ದಳು. ದೆಬೋರಳು ಎದ್ದು ಬಾರಾಕನ ಕೂಡ ಕೆದೆಷಿಗೆ ಹೋದಳು. ಬಾರಾಕನು ಜೆಬುಲೂನ್ಯರನ್ನೂ ನಫ್ತಾಲ್ಯರಯನ್ನೂ ಕೆದೆಷಿಗೆ ಕರೆದನು; ಅವನು ಹತ್ತು ಸಾವಿರ ಜನರ ಸಹಿತವಾಗಿ ಹೋದನು. ದೆಬೋರಳು ಅವನ ಸಂಗಡ ಹೋದಳು. ಮೋಶೆಯ ಮಾವ ನಾದ ಹೋಬಾಬನ ಮಕ್ಕಳಲ್ಲಿ ಸೇರಿದ ಕೇನ್ಯನಾದ ಹೆಬೆರೆಂಬವನು ಕೇನ್ಯರನ್ನು ಬಿಟ್ಟು ತನ್ನನ್ನು ಪ್ರತ್ಯೇಕಿಸಿ ತನ್ನ ಗುಡಾರವನ್ನು ಕೆದೆಷಿನ ಬಳಿಯಲ್ಲಿರುವ ಚಾನನ್ನೀಮೆಂಬ ಬೈಲಿನಲ್ಲಿ ಹಾಕಿಕೊಂಡಿದ್ದನು. ಆಗ ಅಬೀನೋವಮನ ಮಗನಾದ ಬಾರಾಕನು ತಾಬೋರ್ ಬೆಟ್ಟವನ್ನೇರಿದನೆಂದು ಸೀಸೆರನಿಗೆ ತಿಳಿಸ ಲ್ಪಟ್ಟಿತು. ಆದದರಿಂದ ಸೀಸೆರನು ಒಂಭೈನೂರು ಕಬ್ಬಿಣದ ರಥಗಳಾದ ತನ್ನ ಎಲ್ಲಾ ರಥಗಳನ್ನೂ ತನ್ನ ಸಂಗಡ ಇರುವ ಎಲ್ಲಾ ಜನವನ್ನೂ ಅನ್ಯಜನಾಂಗಗಳ ಹರೋಷೆತಿನಿಂದ ಕೀಷೋನ್ ನದಿಗೆ ಬರಮಾಡಿ ದನು. ದೆಬೋರಳು ಬಾರಾಕನಿಗೆ--ನೀನು ಏಳು; ಕರ್ತನು ಸೀಸೆರನನ್ನು ನಿನ್ನ ಕೈಗೆ ಒಪ್ಪಿಸಿಕೊಡುವ ದಿನವು ಇದೇ; ಕರ್ತನು ನಿನ್ನ ಮುಂದೆ ಹೊರಡಲಿಲ್ಲವೋ ಅಂದಳು. ಹೀಗೆ ಬಾರಾಕನು ತನ್ನ ಹಿಂದೆ ಹತ್ತು ಸಾವಿರ ಜನರನ್ನು ತೆಗೆದುಕೊಂಡು ತಾಬೋರ್ ಬೆಟ್ಟ ದಿಂದ ಇಳಿದನು. ಕರ್ತನು ಸೀಸೆರನನ್ನೂ ಅವನ ಎಲ್ಲಾ ರಥಗಳನ್ನೂ ಎಲ್ಲಾ ಸೈನ್ಯವನ್ನೂ ಬಾರಾಕನ ಮುಂದೆ ಕತ್ತಿಯಿಂದ ಚದರಿಸಿದನು. ಆಗ ಸೀಸೆರನು ರಥವನ್ನು ಬಿಟ್ಟು ಇಳಿದು ಕಾಲು ನಡೆಯಾಗಿ ಓಡಿ ಹೋದನು. ಆದರೆ ಬಾರಾಕನು ರಥಗಳನ್ನೂ ಸೈನ್ಯ ವನ್ನೂ ಅನ್ಯಜನಾಂಗಗಳ ಹರೋಷೆತಿನ ಮಟ್ಟಿಗೂ ಹಿಂದಟ್ಟಿದನು. ಸೀಸೆರನ ಸೈನ್ಯವೆಲ್ಲಾ ಕತ್ತಿಯಿಂದ ಹತ ವಾಗಿ ಬಿತ್ತು; ಒಬ್ಬನಾದರೂ ಉಳಿಯಲಿಲ್ಲ. ಆದರೆ ಸೀಸೆರನು ಕಾಲುನಡೆಯಾಗಿ ಕೇನ್ಯನಾದ ಹೆಬೆರನ ಹೆಂಡತಿಯಾದ ಯಾಯೇಲಳ ಗುಡಾರಕ್ಕೆ ಓಡಿಬಂದನು. ಯಾಬೀನನೆಂಬ ಹಾಚೋರಿನ ಅರಸ ನಿಗೂ ಕೇನ್ಯನಾದ ಹೆಬೆರನ ಮನೆಗೂ ನಡುವೆ ಸಮಾ ಧಾನ ಇತ್ತು. ಆಗ ಯಾಯೇಲಳು ಸೀಸೆರನನ್ನು ಎದುರುಗೊಳ್ಳುವದಕ್ಕೆ ಹೋಗಿ ಅವನಿಗೆ--ಒಳಗೆ ಬಾ, ನನ್ನ ಪ್ರಭುವೇ; ನನ್ನ ಬಳಿಗೆ ಬಾ; ಭಯಪಡಬೇಡ ಎಂದು ಹೇಳಿದಳು. ಅವನು ಗುಡಾರದಲ್ಲಿರುವ ಅವಳ ಬಳಿಗೆ ಬಂದಾಗ ಅವಳು ಅವನನ್ನು ಒಂದು ಜಮಖಾನ ದಿಂದ ಮುಚ್ಚಿದಳು. ಸೀಸೆರನು ಅವಳಿಗೆ--ದಯ ವಿಟ್ಟು ನನಗೆ ಕುಡಿಯುವದಕ್ಕೆ ಸ್ವಲ್ಪ ನೀರು ಕೊಡು, ನನಗೆ ದಾಹವಾಗಿದೆ ಅಂದನು. ಅವಳು ಹಾಲಿನ ಬುದ್ದಲಿಯನ್ನು ತೆರೆದು ಅವನಿಗೆ ಕುಡಿಯಲು ಕೊಟ್ಟು ಅವನನ್ನು ಮುಚ್ಚಿದಳು. ತಿರಿಗಿ ಅವನು ಅವಳಿಗೆನೀನು ಬಾಗಲಲ್ಲಿ ನಿಂತಿರು; ಯಾವನಾದರೂ ಬಂದು ಇಲ್ಲಿ ಯಾರಾದರೂ ಇದ್ದಾರೋ ಎಂದು ನಿನ್ನನ್ನು ಕೇಳಿದರೆ ಇಲ್ಲ ಎಂದು ಹೇಳು ಅಂದನು. ಹೆಬೆರನ ಹೆಂಡತಿಯಾದ ಯಾಯೇಲಳು ಗುಡಾರದ ಮೊಳೆ ಯನ್ನು ತೆಗೆದು ತನ್ನ ಕೈಯಲ್ಲಿ ಸುತ್ತಿಗೆಯನ್ನು ಹಿಡಿದು ಕೊಂಡು ಅವನು ಆಯಾಸದಿಂದ ಬಹಳ ನಿದ್ರೆ ಮಾಡುತ್ತಿರುವಾಗ ಮೆಲ್ಲಗೆ ಅವನ ಬಳಿಗೆ ಬಂದು ಅವನ ಕಣತಲೆಯಲ್ಲಿ ಆ ಮೊಳೆಯನ್ನು ಹೊಡೆದು ನೆಲದಲ್ಲಿ ನಾಟಿದಳು, ಅವನು ಸತ್ತನು. ಇಗೋ, ಸೀಸೆರನನ್ನು ಹಿಂದಟ್ಟುವ ಬಾರಾಕನು ಬಂದನು. ಆಗ ಯಾಯೇಲಳು ಅವನನ್ನು ಎದುರುಗೊಳ್ಳುವದಕ್ಕೆ ಹೊರಟುಹೋಗಿ ಅವನಿಗೆ--ಬಾ; ನೀನು ಹುಡುಕುವ ಮನುಷ್ಯನನ್ನು ನಾನು ನಿನಗೆ ತೋರಿಸುವೆನು ಎಂದು ಹೇಳಿದಳು. ಅವನು ಅವಳ ಬಳಿಗೆ ಬಂದಾಗ ಇಗೋ, ಸೀಸೆರನು ಸತ್ತು ಬಿದ್ದಿದ್ದನು; ಮೊಳೆಯು ಅವನ ಕಣತಲೆಯಲ್ಲಿ ಹೊಡೆದಿತ್ತು. ಹೀಗೆಯೇ ದೇವರು ಆ ದಿನದಲ್ಲಿ ಕಾನಾನ್ಯರ ಅರಸನಾದ ಯಾಬೀನನನ್ನು ಇಸ್ರಾಯೇಲ್ ಮಕ್ಕಳ ಮುಂದೆ ತಗ್ಗಿಸಿದನು.ಇಸ್ರಾ ಯೇಲ್ ಮಕ್ಕಳ ಕೈ ಕಾನಾನ್ಯರ ಅರಸನಾದ ಯಾಬೀನ ನನ್ನು ಕೊಂದುಬಿಡುವ ಮಟ್ಟಿಗೂ ಹೆಚ್ಚಿ ಜಯ ಹೊಂದಿತು. ಇಸ್ರಾ ಯೇಲ್ ಮಕ್ಕಳ ಕೈ ಕಾನಾನ್ಯರ ಅರಸನಾದ ಯಾಬೀನ ನನ್ನು ಕೊಂದುಬಿಡುವ ಮಟ್ಟಿಗೂ ಹೆಚ್ಚಿ ಜಯ ಹೊಂದಿತು.
- Revelation 19:13 ಪ್ರಕಟನೆ 19:13ಆತನು ರಕ್ತದಲ್ಲಿ ಅದ್ದಿದ ವಸ್ತ್ರವನ್ನು ಧರಿಸಿ ಕೊಂಡಿದ್ದನು. ಆತನ ಹೆಸರು ದೇವರವಾಕ್ಯ ವೆಂದು ಕರೆಯಲ್ಪಡುತ್ತದೆ.
- Ephesians 4:11 ಎಫೆಸದವರಿಗೆ 4:11ಪರಿಶುದ್ಧರನ್ನು ಯೋಗ್ಯಸ್ಥಿತಿಗೆ ತರುವ ಕೆಲಸಕ್ಕೋಸ್ಕರವೂ ಸೇವೆಯ ಕೆಲಸಕ್ಕೋಸ್ಕರವೂ ಕ್ರಿಸ್ತನ ದೇಹವು ಅಭಿವೃದ್ಧಿಯಾಗುವದಕ್ಕೂಸ್ಕರವೂ
- 1 Samuel 18:6 1 ಸಮುವೇಲನು 18:6ಆದರೆ ದಾವೀದನು ಫಿಲಿಷ್ಟಿಯನನ್ನು ಸಂಹರಿಸಿ ಜನರ ಸಹಿತವಾಗಿ ಬರುವಾಗ ಇಸ್ರಾಯೇಲ್ಯರ ಎಲ್ಲಾ ಪಟ್ಟಣಗಳಿಂದ ಸ್ತ್ರೀಯರು ಸಂತೋಷದಿಂದ ಹೊರಟು ದಮ್ಮಡಿಗಳಿಂದಲೂ ಸಂಗೀತವಾದ್ಯಗಳಿಂದಲೂ ಹಾಡುತ್ತಾ ನಾಟ್ಯವಾಡುತ್ತಾ ಅರಸನಾದ ಸೌಲನನ್ನು ಎದುರುಗೊಳ್ಳಲು ಬಂದರು.