Psalms · chapter 71 · verse 10
Psalm 71:10 in Kannada
ನನ್ನ ಶತ್ರುಗಳು ನನಗೆ ವಿರೋಧವಾಗಿ ಮಾತನಾಡುತ್ತಾರೆ; ನನ್ನ ಪ್ರಾಣಕ್ಕೆ ಹೊಂಚು ಹಾಕುವ ವರು ಕೂಡಿಕೊಂಡು ಆಲೋಚನೆ ಮಾಡುತ್ತಾ--
Nanna shatrugalu nanage virodhavaagi maatanaaduttaare; nanna praanakke honchu haakuva varu koodikondu aalochane maaduttaa--
Psalm 71:10 in English
- King James Version (KJV)
- For mine enemies speak against me; and they that lay wait for my soul take counsel together,
- World English Bible (WEB)
- For my enemies talk about me. Those who watch for my soul conspire together,
- American Standard Version (ASV)
- For mine enemies speak concerning me; And they that watch for my soul take counsel together,
- Bible in Basic English (BBE)
- For my haters are waiting secretly for me; and those who are watching for my soul are banded together in their evil designs,
- Darby Translation (DBY)
- For mine enemies speak against me, and they that watch for my soul consult together,
- Webster's Bible (WBS)
- For my enemies speak against me; and they that lay wait for my soul take counsel together,
- Young's Literal Translation (YLT)
- For mine enemies have spoken against me, And those watching my soul have taken counsel together,
Read in context
- 8ನನ್ನ ಬಾಯಿ ನಿನ್ನ ಸ್ತೋತ್ರದಿಂದಲೂ ದಿನವೆಲ್ಲಾ ನಿನ್ನ ಗೌರವದಿಂದಲೂ ತುಂಬಿರಲಿ.
- 9ನನ್ನ ಮುಪ್ಪಿನ ಕಾಲದಲ್ಲಿ ನನ್ನನ್ನು ತಳ್ಳಿಬಿಡಬೇಡ. ನನ್ನ ಶಕ್ತಿಯು ಕುಂದಿಹೋಗುವಾಗ ನನ್ನನ್ನು ಕೈಬಿಡ ಬೇಡ.
- 10ನನ್ನ ಶತ್ರುಗಳು ನನಗೆ ವಿರೋಧವಾಗಿ ಮಾತನಾಡುತ್ತಾರೆ; ನನ್ನ ಪ್ರಾಣಕ್ಕೆ ಹೊಂಚು ಹಾಕುವ ವರು ಕೂಡಿಕೊಂಡು ಆಲೋಚನೆ ಮಾಡುತ್ತಾ--
- 11ದೇವರು ಅವನನ್ನು ಕೈ ಬಿಟ್ಟಿದ್ದಾನೆ; ಅವನನ್ನು ಹಿಂಸಿಸಿ, ಹಿಡಿದುಕೊಳ್ಳಿರಿ; ಅವನನ್ನು ಬಿಡಿಸುವವನು ಯಾರೂ ಇಲ್ಲ ಎಂದು ಅವರು ಅನ್ನುತ್ತಾರೆ.
- 12ಓ ದೇವರೇ, ನನ್ನಿಂದ ದೂರವಾಗಿರ ಬೇಡ. ಓ ದೇವರೇ, ನನ್ನ ಸಹಾಯಕ್ಕೆ ತ್ವರೆಪಡು.
Cross references
- Psalm 83:3 ಕೀರ್ತನೆಗಳು 83:3ನಿನ್ನ ಜನರಿಗೆ ವಿರೋಧವಾಗಿ ಉಪಾಯದ ಯುಕ್ತಿಯನ್ನು ಕಲ್ಪಿಸುತ್ತಾರೆ. ನೀನು ಅಡಗಿಸಿಟ್ಟವರಿಗೆ ವಿರೋಧಿಗಳು ಆಲೋಚಿಸಿಕೊಳ್ಳುತ್ತಾರೆ.
- Psalm 56:6 ಕೀರ್ತನೆಗಳು 56:6ಅವರು ಕೂಡಿಕೊಂಡು ಹೊಂಚುಹಾಕುತ್ತಾರೆ; ನನ್ನ ಪ್ರಾಣಕ್ಕೆ ಕಾಯುವವರಾಗಿ ನನ್ನ ಹೆಜ್ಜೆಗಳನ್ನು ಗುರುತಿಸುತ್ತಾರೆ.
- Psalm 31:13 ಕೀರ್ತನೆಗಳು 31:13ನಾನು ಅನೇಕರ ಚಾಡಿಯನ್ನು ಕೇಳಿದ್ದೇನೆ; ಸುತ್ತಲೂ ಭಯ ಅದೆ; ನನಗೆ ವಿರೋಧ ವಾಗಿ ಆಲೋಚನೆ ಮಾಡಿ ನನ್ನ ಪ್ರಾಣ ತೆಗೆದು ಕೊಳ್ಳುವದಕ್ಕೆ ಅವರು ಯೋಚಿಸುತ್ತಾರೆ.
- Matthew 26:3–4 ಮತ್ತಾಯನು 26:3–4ಆಗ ಪ್ರಧಾನ ಯಾಜಕರೂ ಶಾಸ್ತ್ರಿಗಳೂ ಜನರ ಹಿರಿಯರೂ ಒಟ್ಟಾಗಿ ಸೇರಿ ಕಾಯಫನೆಂಬ ಮಹಾಯಾಜಕನ ಭವನಕ್ಕೆ ಬಂದು ತಾವು ಕುಯುಕ್ತಿಯಿಂದ ಯೇಸುವನ್ನು ಹಿಡಿದು ಕೊಲ್ಲಬೇಕೆಂದು ಆಲೋಚನೆ ಮಾಡಿಕೊಂಡರು.
- Jeremiah 20:10 ಯೆರೆಮೀಯ 20:10ಅನೇಕರ ಚಾಡಿಯನ್ನು ಕೇಳಿದೆನು; ಸುತ್ತಲೂ ಭಯವದೆ--ತಿಳಿಸಿರಿ, ಆಗ ಅದನ್ನು ನಾವು ತಿಳಿಸುತ್ತೇವೆ ಎಂದು ಅನ್ನುತ್ತಾರೆ; ನನ್ನ ಆಪ್ತರೆಲ್ಲರೂ ನಾನು ಕುಂಟುವದನ್ನು ನೋಡಿಕೊಳ್ಳುತ್ತಾ--ಒಂದು ವೇಳೆ ಅವನು ಮೋಸ ಗೊಂಡಾನು; ಆಗ ನಾವು ಅವನನ್ನು ಗೆದ್ದು ಅವನಲ್ಲಿ ಮುಯ್ಯಿ ತೀರಿಸಿಕೊಳ್ಳುವೆವು ಅನ್ನುತ್ತಾರೆ.
- Psalm 37:32–33 ಕೀರ್ತನೆಗಳು 37:32–33ದುಷ್ಟನು ನೀತಿವಂತನಿಗಾಗಿ ಹೊಂಚು ಹಾಕು ತ್ತಾನೆ. ಅವನನ್ನು ಕೊಲ್ಲಲು ಹುಡುಕುತ್ತಾನೆ. ಕರ್ತನು ಅವನನ್ನು ದುಷ್ಟನ ಕೈಯಲ್ಲಿ ಬಿಡುವದಿಲ್ಲ; ಇಲ್ಲವೆ ನ್ಯಾಯವಿಚಾರಣೆಯಲ್ಲಿ ಅವನು ದುಷ್ಟನೆಂದು ತೀರ್ಪು ಹೊಂದುವದಿಲ್ಲ.
- Matthew 27:1 ಮತ್ತಾಯನು 27:1ಬೆಳಗಾದಾಗ ಎಲ್ಲಾ ಪ್ರಧಾನ ಯಾಜಕರೂ ಜನರ ಹಿರಿಯರೂ ಯೇಸುವನ್ನು ಕೊಲ್ಲಿಸುವದಕ್ಕೆ ಆತನಿಗೆ ವಿರೋಧವಾಗಿ ಆಲೋಚನೆ ಮಾಡಿಕೊಂಡರು.
- 2 Samuel 17:1–14 2 ಸಮುವೇಲನು 17:1–14ಇದಲ್ಲದೆ ಅಹೀತೋಫೆಲನು ಅಬ್ಷಾ ಲೋಮನಿಗೆ--ಅಪ್ಪಣೆಯಾದರೆ ನಾನು ಹನ್ನೆರಡು ಸಾವಿರ ಜನರನ್ನು ಆದುಕೊಳ್ಳುವೆನು. ಅವನು ದಣಿದವನೂ ಧೈರ್ಯಗುಂದಿದವನೂ ಆಗಿ ರುವಾಗಲೇ ಫಕ್ಕನೆ ಅವನ ಮೇಲೆ ಬಿದ್ದು ಅವನನ್ನು ಬೆದರಿಸುವೆನು, ಅವನ ಜನರೆಲ್ಲರೂ ಓಡಿಹೋಗು ವರು. ಆಗ ನಾನು ಅರಸನನ್ನು ಮಾತ್ರ ಕೊಂದು ಜನರೆಲ್ಲರನ್ನು ತಿರಿಗಿ ನಿನ್ನ ಬಳಿಗೆ ತಕ್ಕೊಂಡು ಬರು ವೆನು. ನೀನು ಹುಡುಕುವವನು ಸಿಕ್ಕಿದರೆ ಜನರೆಲ್ಲರೂ ಹಿಂತಿರುಗಿದ ಹಾಗೆ ಆಗುವದು; ಜನರೆಲ್ಲರೂ ಸಮಾ ಧಾನವಾಗಿರುವರು ಅಂದನು. ಈ ಮಾತು ಅಬ್ಷಾಲೋಮನಿಗೂ ಇಸ್ರಾಯೇಲಿನ ಎಲ್ಲಾ ಹಿರಿಯರ ದೃಷ್ಟಿಗೂ ಸರಿಯಾಗಿತ್ತು. ಆದರೆ ಅಬ್ಷಾಲೋಮನು ಅರ್ಕೀಯನಾದ ಹೂಷೈಯನ್ನು ನಾವು ಕೇಳುವ ಹಾಗೆ ಅವನನ್ನು ಕರೆಯಿರಿ ಅಂದನು. ಹೂಷೈಯು ಅಬ್ಷಾಲೋಮನ ಬಳಿಗೆ ಬಂದಾಗ ಅಬ್ಷಾಲೋಮನು ಅವನಿಗೆ--ಅಹೀತೋಫೆಲನು ಈ ಪ್ರಕಾರ ಹೇಳಿದ್ದಾನೆ. ಅವನ ಮಾತಿನ ಪ್ರಕಾರ ಮಾಡೋಣವೋ? ಬೇಡವಾದರೆ, ನೀನು ಮಾತ ನಾಡು ಅಂದನು. ಆಗ ಹೂಷೈ ಅಬ್ಷಾಲೋಮ ನಿಗೆ--ಅಹೀತೋಫೆಲನು ಹೇಳಿದ ಆಲೋಚನೆಯು ಈ ವೇಳೆಗೆ ಒಳ್ಳೇದಲ್ಲ. ನಿನ್ನ ತಂದೆಯೂ ಅವನ ಜನರೂ ಪರಾಕ್ರಮಶಾಲಿಗಳು; ಅವರು ಅಡವಿಯಲ್ಲಿ ಮರಿಗಳನ್ನು ಕಳಕೊಂಡ ಕರಡಿಯ ಹಾಗೆ ರೋಷ ವುಳ್ಳವರಾಗಿದ್ದಾರೆಂದು ನೀನು ಬಲ್ಲೆ. ಇದಲ್ಲದೆ ನಿನ್ನ ತಂದೆಯು ಶೂರನು; ಅವನು ರಾತ್ರಿಯಲ್ಲಿ ಜನರ ಸಂಗಡ ತಂಗುವದಿಲ್ಲ. ಇಗೋ, ಅವನು ಈಗ ಒಂದು ಗವಿಯಲ್ಲಾದರೂ ಒಂದು ಸ್ಥಳದಲ್ಲಾದರೂ ಅಡಗಿಕೊಂಡಿರುವನು. ಮೊದಲೇ ಇವರಲ್ಲಿ ಕೆಲವರು ಸತ್ತರೆ ಅದನ್ನು ಕೇಳು ವವರು ಅಬ್ಷಾಲೋಮನನ್ನು ಹಿಂಬಾಲಿಸುವ ಜನರಲ್ಲಿ ಸಂಹಾರವಾಯಿತೆಂದು ಹೇಳುವರು. ಆಗ ಸಿಂಹದ ಹೃದಯವುಳ್ಳ ಪರಾಕ್ರಮಶಾಲಿಯ ಹೃದಯವೂ ಸಹ ಸಂಪೂರ್ಣ ಕರಗುವದು. ಇದಲ್ಲದೆ ನಿನ್ನ ತಂದೆಯು ಶೂರನೆಂದೂ ಅವನ ಸಂಗಡ ಇರುವವರು ಪರಾ ಕ್ರಮಶಾಲಿಗಳೆಂದೂ ಇಸ್ರಾಯೇಲ್ಯರೆಲ್ಲರು ಬಲ್ಲರು. ನಾನು ಹೇಳುವ ಆಲೋಚನೆ ಏನಂದರೆ, ದಾನಿ ನಿಂದ ಬೇರ್ಷೆಬದ ವರೆಗೂ ಇರುವ ಸಮುದ್ರದ ಮರಳಿನಷ್ಟು ಅಸಂಖ್ಯವಾದ ಇಸ್ರಾಯೇಲ್ಯರು ನಿನ್ನ ಬಳಿಯಲ್ಲಿ ಕೂಡಿಸಲ್ಪಟ್ಟ ತರುವಾಯ ನೀನೇ ಯುದ್ಧಕ್ಕೆ ಹೋಗಬೇಕು. ಆಗ ನಾವು ಅವನನ್ನು ಕಂಡು ಕೊಳ್ಳುವ ಸ್ಥಳದಲ್ಲಿ ಅವನ ಮೇಲೆ ಬಂದು ಭೂಮಿಯ ಮೇಲೆ ಮಂಜು ಬೀಳುವ ಹಾಗೆ ಅವನ ಮೇಲೆ ಬೀಳುವೆವು. ಅವನೂ ಅವನ ಸಂಗಡವಿರುವ ಎಲ್ಲಾ ಜನರಲ್ಲಿ ಒಬ್ಬನಾದರೂ ಉಳಿಯುವದಿಲ್ಲ. ಅವನು ಒಂದು ವೇಳೆ ಒಂದು ಪಟ್ಟಣದಲ್ಲಿ ಹೊಕ್ಕರೆ ಇಸ್ರಾಯೇಲ್ಯರೆಲ್ಲರು ಆ ಪಟ್ಟಣಕ್ಕೆ ಹಗ್ಗಗಳನ್ನು ತಂದು ಹಾಕಿದ ತರುವಾಯ ನಾವು ಒಂದು ಹರಳಾದರೂ ಅಲ್ಲಿ ಕಾಣದ ಹಾಗೆ ಅದನ್ನು ನದಿಗೆ ಎಳೆದು ಹಾಕುವೆವು ಅಂದನು. ಆಗ ಅಬ್ಷಾ ಲೋಮನೂ ಇಸ್ರಾಯೇಲಿನ ಎಲ್ಲಾ ಜನರೂಅಹೀತೋಫೆಲನ ಆಲೋಚನೆಗಿಂತ ಅರ್ಕೀಯನಾದ ಹೂಷೈಯ ಆಲೋಚನೆ ಒಳ್ಳೇದು ಅಂದರು. ತಾನು ಅಬ್ಷಾಲೋಮನ ಮೇಲೆ ಕೇಡನ್ನು ಬರಮಾಡುವ ಹಾಗೆ ಅಹೀತೋಫೆಲನ ಒಳ್ಳೇ ಆಲೋಚನೆಯನ್ನು ವ್ಯರ್ಥಮಾಡುವದಕ್ಕೆ ಕರ್ತನು ನೇಮಿಸಿದ್ದನು.
- 1 Samuel 19:11 1 ಸಮುವೇಲನು 19:11ಆದರೆ ದಾವೀದನಿಗಾಗಿ ಕಾದುಕೊಂಡಿದ್ದು ಉದಯ ದಲ್ಲಿ ಅವನನ್ನು ಕೊಂದುಹಾಕುವ ಹಾಗೆ ಸೌಲನು ಅವನ ಮನೆಗೆ ದೂತರನ್ನು ಕಳುಹಿಸಿದನು. ಆಗ ಅವನ ಹೆಂಡತಿಯಾದ ವಿಾಕಲಳು ಅವನಿಗೆ--ನೀನು ಈ ರಾತ್ರಿಯಲ್ಲಿ ನಿನ್ನ ಪ್ರಾಣವನ್ನು ತಪ್ಪಿಸಿಕೊಳ್ಳದೆ ಹೋದರೆ ನಾಳೆ ಕೊಲ್ಲಲ್ಪಡುವಿ ಎಂದು ಹೇಳಿ
- Psalm 2:2 ಕೀರ್ತನೆಗಳು 2:2ಕರ್ತನಿಗೆ ವಿರೋಧ ವಾಗಿಯೂ ಆತನ ಅಭಿಷಕ್ತನಿಗೆ ವಿರೋಧವಾಗಿಯೂ ಭೂರಾಜರು ನಿಂತುಕೊಳ್ಳುತ್ತಾರೆ; ಪ್ರಭುಗಳು ಒಟ್ಟಾಗಿ ಆಲೋಚಿಸುತ್ತಾರೆ.
- Proverbs 1:11 ಜ್ಞಾನೋಕ್ತಿಗಳು 1:11ಅವರು--ನಮ್ಮೊಂದಿಗೆ ಬಾ, ರಕ್ತಕ್ಕಾಗಿ ಹೊಂಚು ಹಾಕೋಣ, ನಿರಪರಾಧಿಗಳಿಗಾಗಿ ನಿಷ್ಕಾರಣದಿಂದ ರಹಸ್ಯವಾಗಿ ಅಡಗಿಕೊಳ್ಳೋಣ.
- Psalm 10:9 ಕೀರ್ತನೆಗಳು 10:9ಗವಿಯಲ್ಲಿರುವ ಸಿಂಹದ ಹಾಗೆ ಮರೆಯಲ್ಲಿ ಹೊಂಚು ಹಾಕುತ್ತಾನೆ; ಬಡವನನ್ನು ಹಿಡಿ ಯುವದಕ್ಕೆ ಹೊಂಚು ಹಾಕುತ್ತಾನೆ; ಬಡವನನ್ನು ತನ್ನ ಬಲೆಯಲ್ಲಿ ಎಳೆದು ಹಿಡಿಯುತ್ತಾನೆ.