Psalms · chapter 77 · verse 3
Psalm 77:3 in Kannada
ನಾನು ವ್ಯಥೆಪಡುತ್ತಾ ದೇವರನ್ನು ಜ್ಞಾಪಕಮಾಡಿಕೊಂಡೆನು. ನಾನು ಚಿಂತಿ ಸುವದರಿಂದ ನನ್ನ ಆತ್ಮವು ಬಳಲಿ ಹೋಗಿದೆ ಸೆಲಾ.
Naanu vyathepaduttaa devarannu jnyaapakamaadikondenu. Naanu chinti suvadarinda nanna aatmavu balali hogide selaa.
Psalm 77:3 in English
- King James Version (KJV)
- I remembered God, and was troubled: I complained, and my spirit was overwhelmed. Selah.
- World English Bible (WEB)
- I remember God, and I groan. I complain, and my spirit is overwhelmed. Selah.
- American Standard Version (ASV)
- I remember God, and am disquieted: I complain, and my spirit is overwhelmed. [Selah
- Bible in Basic English (BBE)
- I will keep God in memory, with sounds of grief; my thoughts are troubled, and my spirit is overcome. (Selah.)
- Darby Translation (DBY)
- I remembered God, and I moaned; I complained, and my spirit was overwhelmed. Selah.
- Webster's Bible (WBS)
- I remembered God, and was troubled: I complained, and my spirit was overwhelmed. Selah.
- Young's Literal Translation (YLT)
- I remember God, and make a noise, I meditate, and feeble is my spirit. Selah.
Read in context
- 1ನನ್ನ ಸ್ವರದಿಂದ ದೇವರಿಗೆ ಮೊರೆಯಿಟ್ಟೆನು, ದೇವರಿಗೆ ನನ್ನ ಸ್ವರದಿಂದ ಮೊರೆಯಿಟ್ಟೆನು; ಆತನು ನನ್ನ ಮೊರೆಯನ್ನು ಆಲೈಸಿದನು.
- 2ನನ್ನ ಇಕ್ಕ ಟ್ಟಿನ ದಿವಸದಲ್ಲಿ ಕರ್ತನನ್ನು ಹುಡುಕಿದೆನು; ನಾನು ರಾತ್ರಿಯೆಲ್ಲಾ ವ್ಯಥೆಪಟ್ಟದ್ದರಿಂದ ನನ್ನ ಪ್ರಾಣವು ಆದರಣೆ ಹೊಂದಲೊಲ್ಲದು.
- 3ನಾನು ವ್ಯಥೆಪಡುತ್ತಾ ದೇವರನ್ನು ಜ್ಞಾಪಕಮಾಡಿಕೊಂಡೆನು. ನಾನು ಚಿಂತಿ ಸುವದರಿಂದ ನನ್ನ ಆತ್ಮವು ಬಳಲಿ ಹೋಗಿದೆ ಸೆಲಾ.
- 4ನನ್ನ ಕಣ್ಣುಗಳನ್ನು ಮುಚ್ಚದಂತೆ ನೀನು ಹಿಡಿಯುತ್ತೀ; ನಾನು ಮಾತಾಡದಂತೆ ಕಳವಳಪಟ್ಟಿದ್ದೇನೆ.
- 5ಪುರಾ ತನ ದಿವಸಗಳನ್ನೂ ಆದಿಕಾಲದ ವರುಷಗಳನ್ನೂ ಯೋಚಿಸಿದೆನು.
Cross references
- Psalm 61:2 ಕೀರ್ತನೆಗಳು 61:2ನನ್ನ ಹೃದಯವು ಕುಂದಿಹೋಗಿರಲಾಗಿ, ಭೂಮಿಯ ಕಡೇ ಭಾಗದಿಂದ ನಿನ್ನನ್ನು ಕೂಗುವೆನು; ನನಗಿಂತ ಎತ್ತರ ವಾದ ಬಂಡೆಗೆ ನನ್ನನ್ನು ನಡಿಸು.
- Psalm 142:2–3 ಕೀರ್ತನೆಗಳು 142:2–3ಆತನ ಮುಂದೆ ನನ್ನ ಚಿಂತೆಯನ್ನು ಹೊಯ್ದಿದ್ದೇನೆ; ನನ್ನ ಇಕ್ಕಟ್ಟನ್ನು ಆತನ ಮುಂದೆ ತಿಳಿಸಿದ್ದೇನೆ. ನನ್ನ ಆತ್ಮವು ನನ್ನಲ್ಲಿ ಕುಂದಿ ಹೋದಾಗ ನೀನು ನನ್ನ ದಾರಿಯನ್ನು ತಿಳುಕೊಂಡಿದ್ದೀ; ನಾನು ನಡೆಯುವ ದಾರಿಯಲ್ಲಿ ಗುಪ್ತವಾಗಿ ನನಗೆ ಉರ್ಲನ್ನು ಒಡ್ಡಿದ್ದಾರೆ.
- Job 7:11 ಯೋಬನು 7:11ಆದದರಿಂದ ನಾನು ನನ್ನ ಬಾಯಿಯನ್ನು ಮುಚ್ಚು ವದಿಲ್ಲ; ನಾನು ಆತ್ಮ ವೇದನೆಯಿಂದ ಮಾತನಾಡು ವೆನು; ನನ್ನ ಮನೋವ್ಯಥೆಯಲ್ಲಿ ನಾನು ಗುಣುಗುಟ್ಟು ವೆನು.
- Job 31:23 ಯೋಬನು 31:23ದೇವರಿಂದ ಬರುವ ನಾಶವು ನನಗೆ ಹೆದರಿಕೆಯಾಗಿತ್ತು; ಆತನ ಉನ್ನತ ಕ್ಕೋಸ್ಕರ ನಾನು ತಾಳಲಾರದೆ ಇದ್ದೆನು.
- Psalm 55:4–5 ಕೀರ್ತನೆಗಳು 55:4–5ನನ್ನ ಹೃದಯವು ನನ್ನ ಅಂತ ರಂಗದಲ್ಲಿ ನೊಂದುಕೊಳ್ಳುತ್ತದೆ; ಮರಣದ ಬೆದರಿಕೆ ಗಳು ನನ್ನ ಮೇಲೆ ಬಿದ್ದವೆ. ಭಯವೂ ನಡುಗೂ ನನಗೆ ಬಂದವೆ; ಭೀತಿಯು ನನ್ನನ್ನು ಮುಚ್ಚಿಯದೆ.
- Psalm 143:4–5 ಕೀರ್ತನೆಗಳು 143:4–5ನನ್ನ ಆತ್ಮವು ನನ್ನಲ್ಲಿ ಕುಂದಿಹೋಗಿದೆ; ನನ್ನೊಳಗೆ ನನ್ನ ಹೃದಯವು ಹಾಳಾಗಿದೆ. ಪೂರ್ವಕಾಲದ ದಿವಸಗಳನ್ನು ಜ್ಞಾಪಕಮಾಡಿಕೊಂಡು ನಿನ್ನ ಎಲ್ಲಾ ಕ್ರಿಯೆಗಳಲ್ಲಿ ಧ್ಯಾನಮಾಡಿ, ನಿನ್ನ ಕೈಗಳ ಕೆಲಸವನ್ನು ಆಲೋಚಿಸುತ್ತೇನೆ.
- Psalm 102:3–28 ಕೀರ್ತನೆಗಳು 102:3–28ನನ್ನ ದಿವಸಗಳು ಹೊಗೆಯಂತೆ ಕಳೆದುಹೋಗು ತ್ತವೆ; ನನ್ನ ಎಲುಬುಗಳು ಕೊಳ್ಳಿಯ ಹಾಗೆ ಸುಟ್ಟು ಹೋಗಿವೆ. ನನ್ನ ಹೃದಯವು ಹೊಡೆಯಲ್ಪಟ್ಟ ಹುಲ್ಲಿನ ಹಾಗೆ ಒಣಗಿಹೋಗಿದೆ; ಆದದರಿಂದ ನಾನು ನನ್ನ ರೊಟ್ಟಿಯನ್ನು ತಿನ್ನುವದಕ್ಕೆ ಮರೆತುಬಿಡುತ್ತೇನೆ. ನನ್ನ ಮೂಲುಗುವಿಕೆಯ ಸ್ವರದಿಂದ ಎಲುಬುಗಳು ನನ್ನ ಮಾಂಸಕ್ಕೆ ಅಂಟುತ್ತವೆ. ನಾನು ಅರಣ್ಯದ ಬಕಕ್ಕೆ ಸಮಾನನಾಗಿದ್ದೇನೆ; ನಾನು ಅರಣ್ಯದ ಗೂಬೆಯ ಹಾಗಿದ್ದೇನೆ. ನಾನು ಎಚ್ಚರವಾಗಿದ್ದೂ; ಮಾಳಿಗೆಯ ಮೇಲಿರುವ ಒಂಟಿಯಾದ ಪಕ್ಷಿಯ ಹಾಗಿದ್ದೇನೆ. ದಿನವೆಲ್ಲಾ ನನ್ನ ಶತ್ರುಗಳು ನನ್ನನ್ನು ನಿಂದಿಸುತ್ತಾರೆ; ನನ್ನ ಮೇಲೆ ಕೋಪಿಸಿಕೊಳ್ಳುವವರು ನನಗೆ ವಿರೋಧ ವಾಗಿ ಆಣೆ ಇಡುತ್ತಾರೆ. ನಿನ್ನ ರೋಷದ ಮತ್ತು ನಿನ್ನ ರೌದ್ರದ ನಿಮಿತ್ತವೇ ಬೂದಿಯನ್ನು ರೊಟ್ಟಿಯಂತೆ ತಿಂದಿದ್ದೇನೆ; ನನ್ನ ಪಾನವನ್ನು ಕಣ್ಣೀರಿನಿಂದ ಬೆರೆಸಿ ದ್ದೇನೆ. ನನ್ನನ್ನು ನೀನು ಎತ್ತಿ ಕೆಡವಿ ಹಾಕಿದ್ದೀ; ನನ್ನ ದಿವಸಗಳು ನೀಳದ ನೆರಳಿನ ಹಾಗಿವೆ; ನಾನು ಹುಲ್ಲಿನ ಹಾಗೆ ಒಣಗುತ್ತೇನೆ. ಆದರೆ ಓ ಕರ್ತನೇ, ನೀನು ಎಂದೆಂದಿಗೂ ಇರುವವನಾಗಿದ್ದೀ, ನಿನ್ನ ಸ್ಮರಣೆಯು ತಲತಲಾಂತ ರಕ್ಕೂ ಅದೆ. ನೀನು ಎದ್ದು, ಚೀಯೋನನ್ನು ಕನಿ ಕರಿಸುವಿ; ಯಾಕಂದರೆ ಅದನ್ನು ಕರುಣಿಸುವದಕ್ಕೆ ಕಾಲವಾಯಿತು; ಹೌದು ನಿರ್ಣಯಿಸಿದ ಸಮಯವು ಬಂದಿದೆ. ನಿನ್ನ ಸೇವಕರು ಅದರ ಕಲ್ಲುಗಳಲ್ಲಿ ಇಷ್ಟಪಡುತ್ತಾರೆ. ಅದರ ಧೂಳನ್ನು ಕರುಣಿಸುತ್ತಾರೆ. ಜನಾಂಗವು ಕರ್ತನ ಹೆಸರಿಗೂ ಭೂರಾಜರೆಲ್ಲರು ನಿನ್ನ ಮಹಿಮೆಗೂ ಭಯಪಡುವರು. ಕರ್ತನು ಚೀಯೋನನ್ನು ಕಟ್ಟುವನು; ಆತನು ತನ್ನ ಮಹಿಮೆಯಲ್ಲಿ ಕಾಣಿಸಿಕೊಳ್ಳುವನು. ದಿಕ್ಕಿಲ್ಲದವನ ಪ್ರಾರ್ಥನೆಗೆ ಕಿವಿಗೊಡುತ್ತಾನೆ; ಅವರ ಪ್ರಾರ್ಥನೆಯನ್ನು ತಿರಸ್ಕರಿ ಸುವದಿಲ್ಲ. ಇದು ಮುಂದಿನ ಸಂತತಿಗೋಸ್ಕರ ಬರೆಯಲ್ಪಡುವದು; ಹುಟ್ಟಲಿಕ್ಕಿರುವ ಜನರು ಕರ್ತನನ್ನು ಸ್ತುತಿಸುವರು. ಜನಾಂಗಗಳೂ ರಾಜ್ಯಗಳೂ ಕರ್ತ ನನ್ನು ಸೇವಿಸುವದಕ್ಕೆ ಒಟ್ಟಾಗಿ ಕೂಡಿ ಬರುವಾಗ ಚೀಯೋನಿನಲ್ಲಿ ಕರ್ತನ ಹೆಸರೂ ಯೆರೂಸಲೇಮಿ ನಲ್ಲಿ ಆತನ ಸ್ತೋತ್ರವೂ ಸಾರಲ್ಪಡುವ ಹಾಗೆ. ಕರ್ತನು ಸೆರೆಯವರ ನರಳುವಿಕೆಯನ್ನು ಕೇಳುವ ದಕ್ಕೂ ಮರಣಕ್ಕೆ ನೇಮಕವಾದವರನ್ನು ಬಿಡಿಸು ವದಕ್ಕೂ ತನ್ನ ಪರಿಶುದ್ಧವಾದ ಉನ್ನತ ಸ್ಥಳದಿಂದ ಕಣ್ಣಿಟ್ಟು ಆಕಾಶದಿಂದ ಭೂಮಿಯನ್ನು ನೋಡಿದ್ದಾನೆ. ಆತನು ನನ್ನ ಶಕ್ತಿಯನ್ನು ಮಾರ್ಗದಲ್ಲಿ ಕುಂದಿಸಿ ನನ್ನ ದಿವಸಗಳನ್ನು ಕಡಿಮೆ ಮಾಡಿದನು. ಓ ನನ್ನ ದೇವರೇ, ನನ್ನ ದಿವಸಗಳ ಮಧ್ಯದಲ್ಲಿ ನನ್ನನ್ನು ಒಯ್ಯಬೇಡ; ನಿನ್ನ ವರುಷಗಳು ತಲತಲಾಂತರಗಳಿಗೂ ಅವೆ ಅಂದೆನು. ನೀನು ಪೂರ್ವಕಾಲದಲ್ಲಿ ಭೂಮಿ ಯನ್ನು ಸ್ಥಾಪಿಸಿದಿ; ಆಕಾಶಗಳು ನಿನ್ನ ಕೈ ಕೆಲಸಗಳಾ ಗಿವೆ. ಅವು ನಾಶವಾಗುವವು; ಆದರೆ ನೀನು ಸ್ಥಿರ ವಾಗಿರುತ್ತೀ; ಹೌದು, ಅವುಗಳೆಲ್ಲಾ ವಸ್ತ್ರದ ಹಾಗೆ ಜೀರ್ಣವಾಗುವವು; ಉಡುಪಿನ ಹಾಗೆ ಅವುಗ ಳನ್ನು ಬದಲಾಯಿಸುವಿ; ಆಗ ಅವು ಬದಲಾಗುವವು. ಆದರೆ ನೀನು ಏಕ ರೀತಿಯಾಗಿರುತ್ತೀ; ನಿನ್ನ ವರುಷಗಳು ಮುಗಿಯವು.ನಿನ್ನ ಸೇವಕರ ಮಕ್ಕಳು ನೆಲೆಯಾಗಿದ್ದು ಅವರ ಸಂತತಿಯು ನಿನ್ನ ಮುಂದೆ ಸ್ಥಾಪಿಸಲ್ಪಡುವದು. ನಿನ್ನ ಸೇವಕರ ಮಕ್ಕಳು ನೆಲೆಯಾಗಿದ್ದು ಅವರ ಸಂತತಿಯು ನಿನ್ನ ಮುಂದೆ ಸ್ಥಾಪಿಸಲ್ಪಡುವದು.
- Job 6:4 ಯೋಬನು 6:4ಸರ್ವ ಶಕ್ತನ ಬಾಣಗಳು ನನ್ನಲ್ಲಿ ಇವೆ; ಅವುಗಳ ವಿಷವು ನನ್ನ ಆತ್ಮವನ್ನು ಕುಡಿಯುತ್ತವೆ; ದೇವರ ಹೆದರಿಕೆಗಳು ನನಗೆ ವಿರೋಧವಾಗಿ ನನ್ನ ಸುತ್ತಲೂ ಇಳಿದವು.
- Lamentations 3:39 ಪ್ರಲಾಪಗಳು 3:39ಬದುಕುವ ಮನುಷ್ಯನು ತನ್ನ ಪಾಪಗಳ ಶಿಕ್ಷೆಗಾಗಿ ಗುಣು ಗುಟ್ಟುವದೇಕೆ?
- Jeremiah 17:17 ಯೆರೆಮೀಯ 17:17ನೀನು ನನಗೆ ಭಯಾಸ್ಪದವಾಗಬೇಡ; ಕೆಟ್ಟ ದಿನದಲ್ಲಿ ನೀನೇ ನನ್ನ ನಿರೀಕ್ಷೆಯು.
- Psalm 42:5 ಕೀರ್ತನೆಗಳು 42:5ನನ್ನ ಪ್ರಾಣವೇ,ನೀನು ಕುಗ್ಗಿಹೋಗಿರುವದೇನು? ನನ್ನಲ್ಲಿ ನೀನು ಯಾಕೆ ವ್ಯಾಕುಲಪಡುತ್ತೀ? ದೇವರನ್ನು ನಿರೀಕ್ಷಿಸು; ನಾನು ಆತನ ಸಹಾಯಕ್ಕಾಗಿ ಆತನನ್ನು ಇನ್ನೂ ಕೊಂಡಾಡುವೆನು.
- Psalm 43:5 ಕೀರ್ತನೆಗಳು 43:5ಓ ನನ್ನ ಪ್ರಾಣವೇ, ಕುಗ್ಗಿಹೋಗಿರುವದೇನು? ಯಾಕೆ ನನ್ನಲ್ಲಿ ವ್ಯಾಕುಲಪಡುತ್ತೀ? ದೇವರನ್ನು ನಿರೀಕ್ಷಿಸು. ನನ್ನ ಮುಖದ ಲಕ್ಷಣವೂ ನನ್ನ ದೇವರೂ ಆಗಿರುವಾತನನ್ನು ಇನ್ನೂ ಕೊಂಡಾಡುವೆನು.