Lamentations · chapter 3 · verse 39
Lamentations 3:39 in Kannada
ಬದುಕುವ ಮನುಷ್ಯನು ತನ್ನ ಪಾಪಗಳ ಶಿಕ್ಷೆಗಾಗಿ ಗುಣು ಗುಟ್ಟುವದೇಕೆ?
Badukuva manushyanu tanna paapagala shikshegaagi gunu guttuvadeke?
Lamentations 3:39 in English
- King James Version (KJV)
- Wherefore doth a living man complain, a man for the punishment of his sins?
- World English Bible (WEB)
- Why should a living man complain, a man for the punishment of his sins?
- American Standard Version (ASV)
- Wherefore doth a living man complain, a man for the punishment of his sins?
- Bible in Basic English (BBE)
- What protest may a living man make, even a man about the punishment of his sin?
- Darby Translation (DBY)
- Wherefore doth a living man complain, a man for the punishment of his sins?
- Webster's Bible (WBS)
- Why doth a living man complain, a man for the punishment of his sins?
- Young's Literal Translation (YLT)
- What — sigh habitually doth a living man, A man for his sin?
Read in context
- 37ಕರ್ತನು ಆಜ್ಞಾಪಿಸದಿರು ವಾಗ ಸಂಭವಿಸಿ ನಡೆಯುವ ಹಾಗೆ ಹೇಳುವವನು ಯಾರು?
- 38ಮಹೋನ್ನತನ ಬಾಯಿಂದ ಕೆಟ್ಟದ್ದೂ ಒಳ್ಳೆಯದೂ ಹೊರಡುವದಿಲ್ಲವೇ?
- 39ಬದುಕುವ ಮನುಷ್ಯನು ತನ್ನ ಪಾಪಗಳ ಶಿಕ್ಷೆಗಾಗಿ ಗುಣು ಗುಟ್ಟುವದೇಕೆ?
- 40ನಾವು ನಮ್ಮ ಮಾರ್ಗಗಳನ್ನು ಶೋಧಿಸಿ ಪರೀಕ್ಷಿಸಿ ಕೊಂಡು ಮತ್ತೆ ಕರ್ತನ ಬಳಿಗೆ ತಿರುಗಿಕೊಳ್ಳೋಣ.
- 41ನಮ್ಮ ಹೃದಯವನ್ನು ಕೈಗಳೊಂದಿಗೆ ಪರಲೋಕದ ದೇವರ ಕಡೆಗೆ ಎತ್ತಿಕೊಳ್ಳೋಣ.
Cross references
- Micah 7:9 ಮೀಕ 7:9ನಾನು ಕರ್ತನಿಗೆ ವಿರೋಧ ವಾಗಿ ಪಾಪ ಮಾಡಿದ್ದರಿಂದ ಆತನು ತನ್ನ ವ್ಯಾಜ್ಯವಾಡಿ ನನ್ನ ನ್ಯಾಯವನ್ನು ನಡಿಸುವ ತನಕ ಆತನ ಕೋಪವನ್ನು ತಾಳುವೆನು; ಆತನು ನನ್ನನ್ನು ಬೆಳಕಿಗೆ ತರುವನು, ಆತನ ನೀತಿಯನ್ನು ನೋಡುವೆನು.
- Proverbs 19:3 ಜ್ಞಾನೋಕ್ತಿಗಳು 19:3ಮನುಷ್ಯನ ಬುದ್ಧಿಹೀನತೆ ತನ್ನ ದಾರಿಯನ್ನು ತಪ್ಪಿಸುತ್ತದೆ; ಅವನ ಹೃದಯವು ಕರ್ತನಿಗೆ ವಿರೋಧವಾಗಿ ಉರಿಗೊಳ್ಳುತ್ತದೆ.
- Genesis 4:5–7 ಆದಿಕಾಂಡ 4:5–7ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ಆತನು ಗೌರವಿಸಲಿಲ್ಲ. ಆಗ ಕಾಯಿ ನನು ಬಹು ಕೋಪಗೊಂಡನು, ಅವನ ಮುಖವು ಕಳೆಗುಂದಿತು. ಆಗ ಕರ್ತನು ಕಾಯಿನನಿಗೆ--ಯಾಕೆ ಕೋಪಗೊಂಡಿದ್ದೀ? ಯಾಕೆ ನಿನ್ನ ಮುಖವು ಕಳೆಗುಂದಿತು? ನೀನು ಒಳ್ಳೆಯದನ್ನು ಮಾಡಿದರೆ ಅಂಗೀಕರಿಸಲ್ಪಡುವದಿಲ್ಲವೇ? ನೀನು ಒಳ್ಳೆಯದನ್ನು ಮಾಡದೆ ಹೋದರೆ ಪಾಪವು ಬಾಗಲಲ್ಲಿ ಹೊಂಚಿ ಕೊಂಡಿರುವದು; ನಿನ್ನ ಮೇಲೆ ಅದಕ್ಕೆ ಆಶೆ ಇರುವದು, ನೀನು ಅದನ್ನು ಆಳಬೇಕು ಎಂದು ಹೇಳಿದನು.
- Jeremiah 30:15 ಯೆರೆಮೀಯ 30:15ನಿನ್ನ ಗಾಯದ ನೋವಿನ ನಿಮಿತ್ತ ಯಾಕೆ ಕೂಗುತ್ತೀ? ನಿನ್ನ ದುಃಖವು ಗುಣವಾಗ ದಂಥದ್ದೇ; ನಿನ್ನ ಅಕ್ರಮಗಳು ಬಹಳವಾಗಿರುವದ ರಿಂದಲೂ ನಿನ್ನ ಪಾಪಗಳು ಪ್ರಬಲವಾಗಿರುವದ ರಿಂದಲೂ ಇವುಗಳನ್ನು ನಿನಗೆ ಮಾಡಿದ್ದೇನೆ.
- Numbers 11:11 ಅರಣ್ಯಕಾಂಡ 11:11ಆದದರಿಂದ ಮೋಶೆಯು ಕರ್ತನಿಗೆ ಹೇಳಿದ್ದೇ ನಂದರೆ--ಈ ಸಮಸ್ತ ಜನರ ಭಾರವನ್ನು ನನ್ನ ಮೇಲೆ ಹಾಕುವದಕ್ಕೆ ನೀನು ನಿನ್ನ ಸೇವಕನಿಗೆ ಯಾಕೆ ಉಪದ್ರ ಮಾಡಿದ್ದೀ? ನಿನ್ನ ದೃಷ್ಟಿಯಲ್ಲಿ ನನಗೆ ಯಾಕೆ ದಯೆ ದೊರಕಲಿಲ್ಲ?
- Leviticus 26:43 ಯಾಜಕಕಾಂಡ 26:43ಅವರು ದೇಶದೊಳಗಿಂದ ಹೊರಡಿಸಲ್ಪಟ್ಟು ಅವರಿಲ್ಲದೆ ಹಾಳಾದ ವೇಳೆಯಲ್ಲಿ ಅದು ತನ್ನ ಸಬ್ಬತ್ತು ಗಳನ್ನು ಅನುಭವಿಸುವದು; ಅವರು ತಮ್ಮ ಅಕ್ರಮ ದಿಂದಾದ ಶಿಕ್ಷೆಗೆ ಒಪ್ಪಿಕೊಳ್ಳುವರು; ಅವರು ನನ್ನ ನ್ಯಾಯಗಳನ್ನು ಹೇಸಿ, ತಮ್ಮ ಹೃದಯಗಳಲ್ಲಿ ನನ್ನ ನಿಯಮಗಳನ್ನು ಅಸಹ್ಯಿಸಿದ್ದರಿಂದಲೇ.
- Jonah 4:8–9 ಯೋನ 4:8–9ಆದದ್ದೇನಂದರೆ, ಸೂರ್ಯೋದಯವಾದಾಗ ದೇವರು ಉಗ್ರವಾದ ಮೂಡಣ ಗಾಳಿಯನ್ನು ಸಿದ್ಧ ಮಾಡಿದನು; ಆಗ ಬಿಸಿಲು ಯೋನನ ತಲೆಯ ಮೇಲೆ ಬಡಿದದ್ದರಿಂದ ಅವನು ಮೂರ್ಛೆಹೋಗಿ ತನ್ನಲ್ಲಿ ಮರಣವನ್ನು ಕೇಳಿಕೊಂಡು--ನಾನು ಬದುಕುವದಕ್ಕಿಂತ ಸಾಯುವದು ಒಳ್ಳೇದು ಅಂದನು. ಆಗ ದೇವರು ಯೋನನಿಗೆ--ನೀನು ಸೋರೇ ಗಿಡವನ್ನು ಕುರಿತು ಕೋಪಮಾಡುವದು ಒಳ್ಳೇದೋ ಅಂದನು. ಅವನು --ನಾನು ಸಾಯುವಷ್ಟು ಕೋಪಮಾಡುವದು ಒಳ್ಳೇದೇ ಅಂದನು.
- 2 Kings 3:13 2 ಅರಸುಗಳು 3:13ಎಲೀ ಷನು ಇಸ್ರಾಯೇಲಿನ ಅರಸನಿಗೆ -- ನಿನ್ನೊಂದಿಗೆ ನಾನೇನು ಮಾಡಬೇಕು? ನೀನು ನಿನ್ನ ತಂದೆ ತಾಯಿಯ ಪ್ರವಾದಿಗಳ ಬಳಿಗೆ ಹೋಗು ಅಂದನು. ಇಸ್ರಾಯೇ ಲಿನ ಅರಸನು ಅವನಿಗೆ--ಇಲ್ಲ, ಕರ್ತನು ಈ ಮೂರು ಮಂದಿ ಅರಸರುಗಳನ್ನು ಮೋವಾಬ್ಯರ ಕೈಯಲ್ಲಿ ಒಪ್ಪಿಸಿ ಕೊಡುವದಕ್ಕೆ ಒಟ್ಟಾಗಿ ಕರೆದಿದ್ದಾನಲ್ಲಾ ಅಂದನು.
- Numbers 17:12 ಅರಣ್ಯಕಾಂಡ 17:12ಆಗ ಇಸ್ರಾಯೇಲ್ ಮಕ್ಕಳು ಮೋಶೆಯ ಸಂಗಡ ಮಾತನಾಡಿ--ಇಗೋ, ಸಾಯುತ್ತೇವೆ. ನಾಶವಾಗು ತ್ತೇವೆ: ನಾವೆಲ್ಲರೂ ನಾಶವಾಗುತ್ತೇವೆ.ಕರ್ತನ ಗುಡಾರದ ಸವಿಾಪಕ್ಕೆ ಬರುವವರೆಲ್ಲರೂ ಸಾಯುವರು. ಸಾಯುವದರಿಂದ ನಾವು ನಾಶವಾಗಬೇಕೋ ಎಂದು ಹೇಳಿದರು.
- Isaiah 38:17–19 ಯೆಶಾಯ 38:17–19ಇಗೋ, ಆ ಬಹು ವ್ಯಥೆಯು ನನ್ನ ಸಮಾಧಾನಕ್ಕಾಗಿಯೇ ಆಯಿತು; ಆದರೆ ನನ್ನ ಆತ್ಮವನ್ನು ನಾಶಕೂಪದಿಂದ ಬಿಡುಗಡೆ ಮಾಡಿದ್ದು ನಿನ್ನ ಪ್ರೀತಿಯೇ. ನನ್ನ ಪಾಪಗಳನ್ನೆಲ್ಲಾ ನಿನ್ನ ಬೆನ್ನಿನ ಹಿಂದೆ ಹಾಕಿಬಿಟ್ಟಿದ್ದೀ. ಸಮಾಧಿಯು ನಿನ್ನನ್ನು ಹೊಗಳುವದಿಲ್ಲ, ಮರಣವು ನಿನ್ನನ್ನು ಕೊಂಡಾಡುವದಿಲ್ಲ; ಕುಣಿಯೊಳಕ್ಕೆ ಹೋಗುವವರು ನಿನ್ನ ಸತ್ಯತೆಯಲ್ಲಿ ಭರವಸವಿಡಲಾರರು. ನಾನು ಈ ಹೊತ್ತು ಮಾಡುವ ಪ್ರಕಾರ, ಜೀವಂತನು ಹೌದು, ಜೀವಂತನೇ, ನಿನ್ನನ್ನು ಹೊಗಳುವನು; ತಂದೆಯು ಮಕ್ಕಳಿಗೆ ನಿನ್ನ ಸತ್ಯತೆಯನ್ನು ತಿಳಿಯ ಪಡಿಸುವನು.
- Joshua 7:6–13 ಯೆಹೋಶುವ 7:6–13ಆಗ ಯೆಹೋಶುವನು ತನ್ನ ವಸ್ತ್ರಗಳನ್ನು ಹರಿದುಕೊಂಡು ತಾನೂ ಇಸ್ರಾಯೇಲಿನ ಹಿರಿಯರೂ ತಮ್ಮ ತಲೆಗಳ ಮೇಲೆ ಧೂಳನ್ನು ಹಾಕಿಕೊಂಡು ಸಾಯಂಕಾಲದ ವರೆಗೆ ಕರ್ತನ ಮಂಜೂಷದ ಮುಂದೆ ನೆಲದಮೇಲೆ ಬೋರಲು ಬಿದ್ದರು. ಇದಲ್ಲದೆ ಯೆಹೋಶುವನು--ಅಯ್ಯೋ, ಓ ಕರ್ತನಾದ ದೇವರೇ, ನಮ್ಮನ್ನು ನಾಶಮಾಡುವ ಹಾಗೆ ಅಮೋರಿ ಯರ ಕೈಯಲ್ಲಿ ಒಪ್ಪಿಸಿ ಕೊಡುವದಕ್ಕಾಗಿ ನೀನು ಈ ಜನರು ಯೊರ್ದನನ್ನು ದಾಟಮಾಡಿದ್ದೇನು? ನಮಗೆ ಇಷ್ಟೇ ಸಾಕೆಂದು ನಾವು ಯೊರ್ದನಿನ ಆಚೆಯಲ್ಲಿ ಇದ್ದರೆ ಒಳ್ಳೇದಾಗಿತ್ತು. ಓ ಕರ್ತನೇ, ಈಗ ನಾನೇನು ಹೇಳಲಿ? ಇಸ್ರಾಯೇಲ್ಯರು ತಮ್ಮ ಶತ್ರುಗಳಿಗೆ ಬೆನ್ನು ತಿರುಗಿಸಿದ್ದಾರಲ್ಲಾ. ಯಾಕಂದರೆ ಕಾನಾನ್ಯರೂ ದೇಶ ವಾಸಿಗಳೆಲ್ಲರೂ ಇದನ್ನು ಕೇಳಿ ನಮ್ಮ ಸುತ್ತಲೂ ಸುತ್ತಿ ಕೊಂಡು ನಮ್ಮ ಹೆಸರನ್ನು ಭೂಮಿಯಿಂದ ತೆಗೆದು ಬಿಡುವರು; ಆಗ ನಿನ್ನ ಮಹತ್ತಾದ ಹೆಸರಿಗೆ ಏನು ಮಾಡುವಿ ಅಂದನು. ಆಗ ಕರ್ತನು ಯೆಹೋಶುವನಿಗೆ--ನೀನು ಎದ್ದೇಳು; ನೀನು ಈ ಪ್ರಕಾರ ಬೋರಲು ಬಿದ್ದಿರುವ ದೇನು? ಇಸ್ರಾಯೇಲ್ಯರು ಪಾಪಮಾಡಿ ನಾನು ನಿಮಗೆ ಆಜ್ಞಾಪಿಸಿದ ನನ್ನ ಒಡಂಬಡಿಕೆಯನ್ನು ವಿಾರಿದರು; ಅವರು ವಂಚನೆಮಾಡಿ ಶಾಪಕ್ಕೀಡಾದ ದ್ದರಲ್ಲಿ ಕಳವುಮಾಡಿ ತೆಗೆದುಕೊಂಡು ಅದನ್ನು ತಮ್ಮ ಸಾಮಾನುಗಳಲ್ಲಿ ಬಚ್ಚಿಟ್ಟುಕೊಂಡಿದ್ದಾರೆ. ಆದದ ರಿಂದ ಇಸ್ರಾಯೇಲ್ ಮಕ್ಕಳು ತಮ್ಮ ಶತ್ರುಗಳ ಮುಂದೆ ನಿಲ್ಲಲಾರದೆ ತಮ್ಮ ಶತ್ರುಗಳಿಗೆ ಬೆನ್ನುಕೊಟ್ಟರು. ಯಾಕಂದರೆ ಅವರು ಶಾಪಕ್ಕೀಡಾದರು. ನೀವು ಶಾಪ ಕ್ಕೀಡಾದದ್ದನ್ನು ನಿಮ್ಮ ಮಧ್ಯದಲ್ಲಿಂದ ನಾಶಮಾಡದೆ ಇದ್ದರೆ ಇನ್ನು ಮೇಲೆ ನಾನು ನಿಮ್ಮ ಸಂಗಡ ಇರುವದಿಲ್ಲ. ನೀನು ಎದ್ದು ಜನರನ್ನು ಪರಿಶುದ್ಧ ಮಾಡಿ ಹೇಳ ಬೇಕಾದದ್ದೇನಂದರೆ--ನಾಳೆಗೆ ನಿಮ್ಮನ್ನು ಪರಿಶುದ್ಧ ಮಾಡಿಕೊಳ್ಳಿರಿ; ಇಸ್ರಾಯೇಲೇ, ನಿನ್ನ ಮಧ್ಯದಲ್ಲಿ ಶಾಪಕ್ಕೆ ಕಾರಣವಾದದ್ದು ಉಂಟು; ಅದನ್ನು ನಿಮ್ಮಲ್ಲಿಂದ ತೆಗೆದುಹಾಕುವ ಪರಿಯಂತರ ನೀನು ನಿನ್ನ ಶತ್ರುಗಳ ಮುಂದೆ ನಿಲ್ಲಲಾರಿರಿ ಎಂದು ಇಸ್ರಾಯೇಲ್ ಕರ್ತನಾದ ದೇವರು ಹೇಳುತ್ತಾನೆ.
- Ezra 9:13 ಎಜ್ರನು 9:13ನಮ್ಮ ದುಷ್ಕರ್ಮಗಳಿಗೋಸ್ಕರವೂ ನಮ್ಮ ಮಹಾ ಅಪರಾಧಕ್ಕೋಸ್ಕರವೂ ನಮ್ಮ ಮೇಲೆ ಬಂದದ್ದೆಲ್ಲ ಬಂದ ತರುವಾಯ ನಮ್ಮ ದೇವರಾಗಿರುವ ನೀನು ನಮ್ಮ ಅಕ್ರಮಗಳಿಗೆ ತಕ್ಕಹಾಗೆ ನಮ್ಮನ್ನು ಶಿಕ್ಷಿಸದೆ ಈಗ ಇರುವ ಪ್ರಕಾರ ನಮಗೆ ವಿಮೋಚನೆಯನ್ನು ಕೊಟ್ಟ ತರುವಾಯ