Psalms · chapter 78 · verse 24
Psalm 78:24 in Kannada
ಉಣ್ಣುವದಕ್ಕೆ ಮನ್ನವನ್ನು ಅವರ ಮೇಲೆ ಸುರಿಸಿ ಪರಲೋಕದ ಧಾನ್ಯವನ್ನು ಅವರಿಗೆ ಕೊಟ್ಟನು.
Unnuvadakke mannavannu avara mele surisi paralokada dhaanyavannu avarige kottanu.
Psalm 78:24 in English
- King James Version (KJV)
- And had rained down manna upon them to eat, and had given them of the corn of heaven.
- World English Bible (WEB)
- He rained down manna on them to eat, and gave them food from the sky.
- American Standard Version (ASV)
- And he rained down manna upon them to eat, And gave them food from heaven.
- Bible in Basic English (BBE)
- And he sent down manna like rain for their food, and gave them the grain of heaven.
- Darby Translation (DBY)
- And had rained down manna upon them to eat, and had given them the corn of the heavens.
- Webster's Bible (WBS)
- And had rained down manna upon them to eat, and had given them of the corn of heaven.
- Young's Literal Translation (YLT)
- And He raineth on them manna to eat, Yea, corn of heaven He hath given to them.
Read in context
- 22ಅವರು ದೇವರಲ್ಲಿ ನಂಬಿಕೆ ಇಡಲಿಲ್ಲ; ಆತನ ರಕ್ಷಣೆಯಲ್ಲಿ ಭರವಸವಿಡಲಿಲ್ಲ.
- 23ಆದರೆ ಆತನು ಮೇಲಿರುವ ಮೇಘಗಳಿಗೆ ಆಜ್ಞಾಪಿಸಿ ಪರಲೋಕದ ಕದಗಳನ್ನು ತೆರೆದನು.
- 24ಉಣ್ಣುವದಕ್ಕೆ ಮನ್ನವನ್ನು ಅವರ ಮೇಲೆ ಸುರಿಸಿ ಪರಲೋಕದ ಧಾನ್ಯವನ್ನು ಅವರಿಗೆ ಕೊಟ್ಟನು.
- 25ಮನುಷ್ಯನು ದೂತರ ಆಹಾರ ವನ್ನು ತಿಂದನು; ತೃಪ್ತಿಯಾಗುವಷ್ಟು ಆಹಾರವನ್ನು ಅವರಿಗೆ ಆತನು ಕಳುಹಿಸಿದನು.
- 26ಮೂಡಣ ಗಾಳಿ ಯನ್ನು ಆಕಾಶದಲ್ಲಿ ಹುಟ್ಟಿಸಿ ತನ್ನ ಬಲದಿಂದ ದಕ್ಷಿಣ ಗಾಳಿಯನ್ನು ತಂದನು.
Cross references
- Exodus 16:4 ವಿಮೋಚನಕಾಂಡ 16:4ಆಗ ಕರ್ತನು ಮೋಶೆಗೆ--ಇಗೋ, ರೊಟ್ಟಿಯನ್ನು ನಿಮಗಾಗಿ ನಾನು ಆಕಾಶದಿಂದ ಸುರಿಸುತ್ತೇನೆ; ಅವರು ನನ್ನ ನ್ಯಾಯಪ್ರಮಾಣದ ಪ್ರಕಾರ ನಡೆದುಕೊಳ್ಳುವರೋ ಇಲ್ಲವೋ ಎಂದು ನಾನು ಅವರನ್ನು ಪರೀಕ್ಷಿಸುವ ಹಾಗೆ ಜನರು ಹೊರಗೆಹೋಗಿ ಪ್ರತಿದಿನ ಆ ದಿನಕ್ಕೆ ಬೇಕಾದ ದ್ದನ್ನು ಕೂಡಿಸಲಿ.
- Psalm 105:40 ಕೀರ್ತನೆಗಳು 105:40ಅವರು ಕೇಳಿದಾಗ ಲಾವಕ್ಕಿಗಳನ್ನು ಬರಮಾಡಿ, ಪರಲೋಕದ ರೊಟ್ಟಿಯಿಂದ ಅವರನ್ನು ತೃಪ್ತಿಪಡಿಸಿದನು.
- Deuteronomy 8:3 ಧರ್ಮೋಪದೇಶಕಾಂಡ 8:3ನಿನ್ನನ್ನು ಕುಂದಿಸಿ ಹಸಿ ಯುವಂತೆ ಆತನು ಮಾಡಿದನು. ರೊಟ್ಟಿ ಮಾತ್ರದಿಂದ ಮನುಷ್ಯನು ಬದುಕುವದಿಲ್ಲವೆಂದೂ ಕರ್ತನ ಬಾಯಿ ಯೊಳಗಿಂದ ಹೊರಡುವ ಪ್ರತಿಯೊಂದು ಮಾತಿ ನಿಂದಲೂ ಮನುಷ್ಯನು ಬದುಕುತ್ತಾನೆಂದು ನಿನಗೆ ತಿಳಿಸುವ ಹಾಗೆ ನೀನು ತಿಳಿಯದಂಥ ಮತ್ತು ನಿನ್ನ ಪಿತೃಗಳು ತಿಳಿಯದಂಥ ಮನ್ನವನ್ನು ನಿನಗೆ ಉಣ್ಣಲು ಕೊಟ್ಟನು.
- John 6:31–71 ಯೋಹಾನನು 6:31–71ತಿನ್ನುವದಕ್ಕಾಗಿ ಆತನು ಅವರಿಗೆ ಪರಲೋಕದಿಂದ ರೊಟ್ಟಿಯನ್ನು ಕೊಟ್ಟನು ಎಂದು ಬರೆದಿರುವ ಪ್ರಕಾರ ನಮ್ಮ ಪಿತೃಗಳು ಅಡವಿ ಯಲ್ಲಿ ಮನ್ನಾ ತಿಂದರು ಎಂದು ಹೇಳಿದರು. ಆಗ ಯೇಸು ಅವರಿಗೆ--ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ. ಮೋಶೆಯು ನಿಮಗೆ ಪರಲೋಕದಿಂದ ರೊಟ್ಟಿ ಕೊಡಲಿಲ್ಲ; ಆದರೆ ನನ್ನ ತಂದೆಯು ನಿಮಗೆ ನಿಜವಾದ ರೊಟ್ಟಿಯನ್ನು ಪರಲೋಕದಿಂದ ಕೊಡು ತ್ತಾನೆ. ಪರಲೋಕದಿಂದ ಕೆಳಗೆ ಬಂದು ಲೋಕಕ್ಕೆ ಜೀವವನ್ನು ಕೊಡುವಾತನೇ ದೇವರ ರೊಟ್ಟಿಯಾಗಿದ್ದಾನೆ ಅಂದನು. ಅದಕ್ಕವರು ಆತನಿಗೆ--ಕರ್ತನೇ, ಈ ರೊಟ್ಟಿಯನ್ನು ನಮಗೆ ಯಾವಾಗಲೂ ಕೊಡು ಅಂದರು. ಅದಕ್ಕೆ ಯೇಸು ಅವರಿಗೆ--ನಾನೇ ಆ ಜೀವದ ರೊಟ್ಟಿ; ನನ್ನ ಬಳಿಗೆ ಬರುವವನಿಗೆ ಎಂದಿಗೂ ಹಸಿವೆಯಾಗುವದಿಲ್ಲ ಮತ್ತು ನನ್ನ ಮೇಲೆ ನಂಬಿಕೆ ಇಡುವವನಿಗೆ ಎಂದಿಗೂ ನೀರಡಿಕೆಯಾಗುವದಿಲ್ಲ. ಆದರೆ--ನೀವು ನನ್ನನ್ನು ನೋಡಿಯೂ ನಂಬಲಿಲ್ಲ ಎಂದು ನಾನು ನಿಮಗೆ ಹೇಳಿದೆನು. ತಂದೆಯು ನನಗೆ ಕೊಡುವಂಥವರೆಲ್ಲರೂ ನನ್ನ ಬಳಿಗೆ ಬರು ವರು; ನನ್ನ ಬಳಿಗೆ ಬರುವವನನ್ನು ನಾನು ಹೊರಗೆ ತಳ್ಳಿಬಿಡುವದೇ ಇಲ್ಲ. ನಾನು ನನ್ನ ಸ್ವಂತ ಚಿತ್ತವನ್ನಲ್ಲ; ಆದರೆ ನನ್ನನ್ನು ಕಳುಹಿಸಿದಾತನ ಚಿತ್ತವನ್ನೇ ಮಾಡುವದಕ್ಕೆ ಪರಲೋಕದಿಂದ ಬಂದೆನು. ನನ್ನನ್ನು ಕಳುಹಿಸಿದ ತಂದೆಯ ಚಿತ್ತವೇನಂದರೆ, ಆತನು ನನಗೆ ಕೊಟ್ಟವರಲ್ಲಿ ನಾನು ಒಬ್ಬನನ್ನೂ ಕಳಕೊಳ್ಳದೆ ಕಡೇ ದಿನದಲ್ಲಿ ಅವನನ್ನು ತಿರಿಗಿ ಎಬ್ಬಿಸುವದೇ. ನನ್ನನ್ನು ಕಳುಹಿಸದಾತನ ಚಿತ್ತವೇನಂದರೆ, ಮಗನನ್ನು ನೋಡಿ ಆತನ ಮೇಲೆ ನಂಬಿಕೆ ಇಡುವ ಪ್ರತಿಯೊಬ್ಬನು ನಿತ್ಯ ಜೀವವನ್ನು ಹೊಂದುವದೇ; ನಾನು ಅವನನ್ನು ಕಡೇ ದಿನದಲ್ಲಿ ಎಬ್ಬಿಸುವೆನು ಎಂದು ಹೇಳಿದನು. ಪರಲೋಕದಿಂದ ಇಳಿದು ಬಂದ ರೊಟ್ಟಿ ನಾನೇ ಎಂದು ಆತನು ಹೇಳಿದ್ದಕ್ಕೆ ಯೆಹೂದ್ಯರು ಆತನ ವಿಷಯವಾಗಿ ಗುಣುಗುಟ್ಟಿ-- ಇವನು ಯೋಸೇಫನ ಮಗನಾದ ಯೇಸು ಅಲ್ಲವೇ? ಇವನ ತಂದೆ ತಾಯಿ ಗಳನ್ನು ನಾವು ಬಲ್ಲೆವಲ್ಲವೇ? ಹಾಗಾದರೆ--ನಾನು ಪರಲೋಕದಿಂದ ಇಳಿದು ಬಂದೆನು ಎಂದು ಇವನು ಹೇಳುವದು ಹೇಗೆ ಅಂದರು. ಯೇಸು ಪ್ರತ್ಯುತ್ತರ ವಾಗಿ ಅವರಿಗೆ--ನಿಮ್ಮ ನಿಮ್ಮೊಳಗೆ ಗುಣುಗುಟ್ಟ ಬೇಡಿರಿ. ನನ್ನನ್ನು ಕಳುಹಿಸಿದ ತಂದೆಯು ಎಳೆಯದ ಹೊರತು ಯಾವನೂ ನನ್ನ ಬಳಿಗೆ ಬರಲಾರನು. ನಾನು ಅವನನ್ನು ಕಡೇ ದಿನದಲ್ಲಿ ಎಬ್ಬಿಸುವೆನು. ಅವರೆಲ್ಲರು ದೇವರಿಂದ ಬೋಧಿಸಲ್ಪಡುವರೆಂದು ಪ್ರವಾದನೆಗಳಲ್ಲಿ ಬರೆಯಲ್ಪಟ್ಟಿದೆ. ಆದಕಾರಣ ತಂದೆಯಿಂದ ಕೇಳಿ ಕಲಿತ ಪ್ರತಿಯೊಬ್ಬ ಮನುಷ್ಯನು ನನ್ನ ಬಳಿಗೆ ಬರುತ್ತಾನೆ. ದೇವರಿಗೆ ಸಂಬಂಧಪಟ್ಟ ವನೇ ತಂದೆಯನ್ನು ನೋಡಿದ್ದಾನೆ ಹೊರತು ಬೇರೆ ಯಾವನೂ ತಂದೆಯನ್ನು ನೋಡಲಿಲ್ಲ. ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ನನ್ನ ಮೇಲೆ ನಂಬಿಕೆ ಇಡುವವನು ನಿತ್ಯಜೀವವನ್ನು ಹೊಂದಿದ್ದಾನೆ. ನಾನೇ ಆ ಜೀವದ ರೊಟ್ಟಿಯಾಗಿದ್ದೇನೆ. ನಿಮ್ಮ ಪಿತೃಗಳು ಅಡವಿಯಲ್ಲಿ ಮನ್ನಾ ತಿಂದಾಗ್ಯೂ ಸತ್ತು ಹೋದರು. ಮನುಷ್ಯನು ತಿಂದು ಸಾಯದೇ ಇರು ವಂತೆ ಪರಲೋಕದಿಂದ ಕೆಳಗೆ ಇಳಿದು ಬಂದ ರೊಟ್ಟಿ ಇದೇ. ಪರಲೋಕದಿಂದ ಇಳಿದುಬಂದ ಜೀವದ ರೊಟ್ಟಿಯು ನಾನೇ; ಈ ರೊಟ್ಟಿಯನ್ನು ಯಾವನಾದರೂ ತಿಂದರೆ ಅವನು ಎಂದೆಂದಿಗೂ ಬದುಕುವನು; ನಾನು ಕೊಡುವ ರೊಟ್ಟಿಯು ನನ್ನ ಮಾಂಸವೇ; ಅದನ್ನು ನಾನು ಲೋಕದ ಜೀವಕ್ಕಾಗಿ ಕೊಡುವೆನು ಅಂದನು. ಇದರಿಂದ ಯೆಹೂದ್ಯರು ತಮ್ಮತಮ್ಮೊಳಗೆ ವಾಗ್ವಾದ ಮಾಡುತ್ತಾ--ಈ ಮನುಷ್ಯನು ತನ್ನ ಮಾಂಸ ವನ್ನು ತಿನ್ನುವದಕ್ಕೆ ನಮಗೆ ಹೇಗೆ ಕೊಡುತ್ತಾನೆ ಅಂದರು. ಆಗ ಯೇಸು ಅವರಿಗೆ--ನಿಮಗೆ ನಿಜ ನಿಜವಾಗಿ ಹೇಳುತ್ತೇನೆ, ನೀವು ಮನುಷ್ಯಕುಮಾರನ ಮಾಂಸವನ್ನು ತಿಂದು ಆತನ ರಕ್ತವನ್ನು ಕುಡಿಯದ ಹೊರತು ನಿಮ್ಮೊಳಗೆ ಜೀವವಿಲ್ಲ. ಯಾವನು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾನೋ ಅವನು ನಿತ್ಯಜೀವವನ್ನು ಹೊಂದಿದ್ದಾನೆ; ನಾನು ಅವ ನನ್ನು ಕಡೇ ದಿನದಲ್ಲಿ ಎಬ್ಬಿಸುವೆನು. ಯಾಕಂದರೆ ನನ್ನ ಮಾಂಸವು ನಿಜವಾದ ಆಹಾರವೂ ನನ್ನ ರಕ್ತವು ನಿಜವಾದ ಪಾನವೂ ಆಗಿದೆ. ಯಾವನು ನನ್ನ ಮಾಂಸವನ್ನು ತಿಂದು ನನ್ನ ರಕ್ತವನ್ನು ಕುಡಿಯುತ್ತಾನೋ ಅವನು ನನ್ನಲ್ಲಿ ವಾಸಿಸುತ್ತಾನೆ; ನಾನು ಅವನಲ್ಲಿ ವಾಸಿ ಸುತ್ತೇನೆ. ಜೀವವುಳ್ಳ ತಂದೆಯು ನನ್ನನ್ನು ಕಳುಹಿಸಿ ರಲಾಗಿ ನಾನು ತಂದೆಯ ಮೂಲಕ ಜೀವಿಸುವಂತೆಯೇ ನನ್ನನ್ನು ತಿನ್ನುವವನು ನನ್ನ ಮೂಲಕವಾಗಿಯೇ ಜೀವಿ ಸುವನು. ಪರಲೋಕದಿಂದ ಇಳಿದು ಬಂದ ರೊಟ್ಟಿಯು ಇದೆ; ನಿಮ್ಮ ಪಿತೃಗಳು ಮನ್ನಾ ತಿಂದಾಗ್ಯೂ ಸತ್ತುಹೋದಂತೆ ಅಲ್ಲ; ಆದರೆ ಈ ರೊಟ್ಟಿಯನ್ನು ತಿನ್ನುವವನು ಎಂದೆಂದಿಗೂ ಜೀವಿಸುವನು ಅಂದನು. ಕಪೆರ್ನೌಮಿನಲ್ಲಿ ಬೋಧಿಸುತ್ತಿರುವಾಗ ಸಭಾ ಮಂದಿರದಲ್ಲಿ ಆತನು ಇವುಗಳನ್ನು ಹೇಳಿದನು. ಆದದರಿಂದ ಆತನ ಶಿಷ್ಯರಲ್ಲಿ ಅನೇಕರು ಇದನ್ನು ಕೇಳಿ--ಇದು ಕಠಿಣವಾದ ಮಾತು; ಇದನ್ನು ಯಾರು ಕೇಳಾರು ಅಂದರು. ತನ್ನ ಶಿಷ್ಯರೂ ಇದಕ್ಕೆ ಗುಣು ಗುಟ್ಟುತ್ತಾರೆಂದು ಯೇಸು ತನ್ನಲ್ಲಿ ತಿಳಿದುಕೊಂಡು ಅವರಿಗೆ--ಇದು ನಿಮಗೆ ಅಭ್ಯಂತರವಾಯಿತೋ? ಹಾಗಾದರೆ ಮನುಷ್ಯಕುಮಾರನು ತಾನು ಮೊದಲು ಇದ್ದಲ್ಲಿಗೆ ಏರಿಹೋಗುವದನ್ನು ನೀವು ನೋಡಿದರೆ ಏನನ್ನುವಿರಿ? ಬದುಕಿಸುವಂಥದ್ದು ಆತ್ಮವೇ; ಮಾಂಸವು ಯಾವದಕ್ಕೂ ಪ್ರಯೋಜನವಾಗುವದಿಲ್ಲ; ನಾನು ನಿಮಗೆ ಹೇಳುವ ಮಾತುಗಳೇ ಆತ್ಮವಾಗಿಯೂ ಜೀವವಾಗಿಯೂ ಇವೆ. ಆದರೆ ನಂಬದವರು ಕೆಲವರು ನಿಮ್ಮಲ್ಲಿ ಇದ್ದಾರೆ ಅಂದನು. ಯಾಕಂದರೆ ನಂಬದವರು ಯಾರೆಂದೂ ತನ್ನನ್ನು ಹಿಡುಕೊಡು ವವನು ಯಾರೆಂದೂ ಮೊದಲಿನಿಂದಲೇ ಯೇಸು ತಿಳಿದಿದ್ದನು. ಆತನು--ನನ್ನ ತಂದೆಯಿಂದ ಒಬ್ಬನಿಗೆ ಕೊಡಲ್ಪಟ್ಟ ಹೊರತು ಯಾವನೂ ನನ್ನ ಬಳಿಗೆ ಬರ ಲಾರನು; ಇದಕ್ಕೋಸ್ಕರವೇ ನಾನು ನಿಮಗೆ ಹೇಳಿದೆನು ಅಂದನು. ಅಂದಿನಿಂದ ಆತನ ಶಿಷ್ಯರಲ್ಲಿ ಅನೇಕರು ಹಿಂದಕ್ಕೆ ಹೊರಟುಹೋಗಿ ಮತ್ತೆ ಅವರು ಆತನ ಸಂಗಡ ಎಂದಿಗೂ ಸಂಚರಿಸಲೇ ಇಲ್ಲ. ಆಗ ಯೇಸು ಹನ್ನೆ ರಡು ಮಂದಿಗೆ--ನೀವು ಸಹ ಹೊರಟು ಹೋಗಬೇಕೆಂ ದಿದ್ದೀರೋ ಎಂದು ಕೇಳಲು ಸೀಮೋನ್ ಪೇತ್ರನು ಪ್ರತ್ಯುತ್ತರವಾಗಿ ಆತನಿಗೆ--ಕರ್ತನೇ, ನಾವು ಯಾರ ಬಳಿಗೆ ಹೋಗೋಣ? ನಿನ್ನಲ್ಲಿ ನಿತ್ಯಜೀವದ ವಾಕ್ಯಗಳು ಉಂಟಲ್ಲಾ. ನೀನು ಜೀವವುಳ್ಳ ದೇವರಮಗನಾದ ಆ ಕ್ರಿಸ್ತನೆಂದು ನಾವು ಖಂಡಿತವಾಗಿ ನಂಬಿದ್ದೇವೆ ಅಂದನು. ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವ ರಿಗೆ--ಹನ್ನೆರಡು ಮಂದಿಯಾದ ನಿಮ್ಮನ್ನು ನಾನು ಆರಿಸಿ ಕೊಂಡೆನಲ್ಲವೇ? ಆದರೆ ನಿಮ್ಮಲ್ಲಿ ಒಬ್ಬನು ಸೈತಾನನಾ ಗಿದ್ದಾನೆ ಅಂದನು.ಸೀಮೋನನ ಮಗನಾದ ಇಸ್ಕರಿಯೋತ್ ಯೂದನ ವಿಷಯವಾಗಿ ಆತನು ಹೇಳಿ ದನು. ಯಾಕಂದರೆ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಇವನು ಆತನನ್ನು ಹಿಡುಕೊಡುವದಕ್ಕಿದ್ದನು. ಸೀಮೋನನ ಮಗನಾದ ಇಸ್ಕರಿಯೋತ್ ಯೂದನ ವಿಷಯವಾಗಿ ಆತನು ಹೇಳಿ ದನು. ಯಾಕಂದರೆ ಹನ್ನೆರಡು ಮಂದಿಯಲ್ಲಿ ಒಬ್ಬನಾದ ಇವನು ಆತನನ್ನು ಹಿಡುಕೊಡುವದಕ್ಕಿದ್ದನು.
- Nehemiah 9:15 ನೆಹೆಮೀಯ 9:15ಅವರ ಹಸಿವೆಗೋಸ್ಕರ ಆಕಾಶದಿಂದ ರೊಟ್ಟಿಯನ್ನೂ ಕೊಟ್ಟಿ; ಅವರ ದಾಹಕ್ಕೋಸ್ಕರ ಬಂಡೆಯಿಂದ ನೀರನ್ನು ಬರಮಾಡಿ ನೀನು ಅವರಿಗೆ ಕೊಡಲು ಪ್ರಮಾಣ ಮಾಡಿದ ದೇಶವನ್ನು ಸ್ವಾಧೀನ ಪಡಿಸಿಕೊಳ್ಳುವ ಹಾಗೆ ಅವರಿಗೆ ವಾಗ್ದಾನಮಾಡಿದಿ.
- Nehemiah 9:20 ನೆಹೆಮೀಯ 9:20ಇದಲ್ಲದೆ ನೀನು ಅವರಿಗೆ ಬೋಧಿ ಸುವ ಹಾಗೆ ನಿನ್ನ ಒಳ್ಳೇ ಆತ್ಮನನ್ನು ಕೊಟ್ಟಿ; ಅವರ ಬಾಯಿಗೆ ನಿನ್ನ ಮನ್ನವನ್ನು ಹಿಂದೆಗೆಯಲಿಲ್ಲ. ಅವರ ದಾಹಕ್ಕೆ ನೀರನ್ನು ಕೊಟ್ಟಿ.
- Exodus 16:14 ವಿಮೋಚನಕಾಂಡ 16:14ಬಿದ್ದಿದ್ದ ಮಂಜು ಹೋದ ಮೇಲೆ ಇಗೋ, ಗಟ್ಟಿ ಯಾದ ಪದಾರ್ಥವು ಮಂಜಿನ ಹನಿಯಷ್ಟು ಚಿಕ್ಕ ದಾದದ್ದೂ ಗುಂಡಾದದ್ದೂ ಅರಣ್ಯದ ಭೂಮಿಯ ಮೇಲೆ ಹರಡಿತ್ತು.
- 1 Corinthians 10:3 1 ಕೊರಿಂಥದವರಿಗೆ 10:3ಅವರೆಲ್ಲರೂ ಆತ್ಮಿಕವಾದ ಒಂದೇ ಆಹಾರವನ್ನು ತಿಂದರು;
- Psalm 68:9 ಕೀರ್ತನೆಗಳು 68:9ಓ ದೇವರೇ, ನೀನು ಸಮೃದ್ಧಿಯಾಗಿ ಮಳೆಯನ್ನು ಸುರಿಸಿದಿ; ಇದರಿಂದ ದಣಿದ ನಿನ್ನ ಬಾಧ್ಯ ತೆಯನ್ನು ನೀನು ಸ್ಥಿರಪಡಿಸಿದಿ.