Psalms · chapter 78 · verse 46
Psalm 78:46 in Kannada
ಅವರ ಬೆಳೆ ಯನ್ನು ಕಂಬಳಿ ಹುಳಗಳಿಗೂ ವ್ಯವಸಾಯವನ್ನು ಮಿಡಿತೆಗಳಿಗೂ ಕೊಟ್ಟು
Avara bele yannu kambali hulagaligoo vyavasaayavannu miditegaligoo kottu
Psalm 78:46 in English
- King James Version (KJV)
- He gave also their increase unto the caterpiller, and their labour unto the locust.
- World English Bible (WEB)
- He also gave their increase to the caterpillar, and their labor to the locust.
- American Standard Version (ASV)
- He gave also their increase unto the caterpillar, And their labor unto the locust.
- Bible in Basic English (BBE)
- He gave the increase of their fields to worms, the fruits of their industry to the locusts.
- Darby Translation (DBY)
- And he gave their increase unto the caterpillar, and their labour unto the locust;
- Webster's Bible (WBS)
- He gave also their increase to the caterpillar, and their labor to the locust.
- Young's Literal Translation (YLT)
- And giveth to the caterpillar their increase, And their labour to the locust.
Read in context
- 44ಅವರು ಕುಡಿ ಯಲಾರದ ಹಾಗೆ ಅವರ ನದಿಗಳನ್ನೂ ಹೊಳೆಗ ಳನ್ನೂ ಆತನು ರಕ್ತಕ್ಕೆ ಮಾರ್ಪಡಿಸಿದನು.
- 45ಅವರಲ್ಲಿ ವಿವಿಧ ಹುಳಗಳನ್ನು ಕಳುಹಿಸಿದನು, ಅವು ಅವರನ್ನು ತಿಂದು ಬಿಟ್ಟವು; ಕಪ್ಪೆಗಳನ್ನು ಸಹ ಕಳುಹಿಸಿದನು; ಅವು ಅವರನ್ನು ನಾಶಮಾಡಿದವು.
- 46ಅವರ ಬೆಳೆ ಯನ್ನು ಕಂಬಳಿ ಹುಳಗಳಿಗೂ ವ್ಯವಸಾಯವನ್ನು ಮಿಡಿತೆಗಳಿಗೂ ಕೊಟ್ಟು
- 47ಅವರ ದ್ರಾಕ್ಷೇ ಬಳ್ಳಿಗ ಳನ್ನು ಕಲ್ಮಳೆಯಿಂದಲೂ ಆಲದ ಮರಗಳನ್ನು ಮಂಜಿ ನಿಂದಲೂ ನಾಶ ಮಾಡಿ
- 48ಅವರ ದನಗಳನ್ನು ಕಲ್ಮ ಳೆಗೂ ಮಂದೆಗಳನ್ನು ಸಿಡಿಲಿಗೂ ಒಪ್ಪಿಸಿಬಿಟ್ಟನು.
Cross references
- Exodus 10:12–15 ವಿಮೋಚನಕಾಂಡ 10:12–15ಆಗ ಕರ್ತನು ಮೋಶೆಗೆ--ಮಿಡತೆಗಳಿಗಾಗಿ ನಿನ್ನ ಕೈಯನ್ನು ಐಗುಪ್ತದ ಮೇಲೆ ಚಾಚು. ಅವು ಐಗುಪ್ತದ ಮೇಲೆ ಬಂದು ಆ ದೇಶದಲ್ಲಿರುವ ಹಸುರಾದದ್ದನ್ನೆಲ್ಲಾ ಅಂದರೆ ಆನೆಕಲ್ಲಿನ ಮಳೆಯು ಉಳಿಸಿದ್ದದನ್ನೆಲ್ಲಾ ತಿಂದು ಬಿಡಲಿ ಅಂದನು. ಮೋಶೆಯು ತನ್ನ ಕೋಲನ್ನು ಐಗುಪ್ತದೇಶದ ಮೇಲೆ ಚಾಚಿದಾಗ ಕರ್ತನು ಹಗಲಿರುಳೂ ಮೂಡಣಗಾಳಿಯನ್ನು ಬರಮಾಡಿದನು. ಉದ ಯವಾದಾಗ ಆ ಮೂಡಣ ಗಾಳಿಯು ಮಿಡತೆಗಳನ್ನು ಅಟ್ಟಿಕೊಂಡು ಬಂದಿತು. ಹೀಗೆ ಮಿಡತೆಗಳು ಐಗುಪ್ತ ದೇಶದಲ್ಲೆಲ್ಲಾ ಬಂದು ಐಗುಪ್ತದ ಎಲ್ಲಾ ಮೇರೆಗಳಲ್ಲಿ ದೊಡ್ಡ ಸಮೂಹವಾಗಿ ಸೇರಿಕೊಂಡವು. ಅವು ಕ್ರೂರ ವಾದವುಗಳಾಗಿದ್ದವು. ಅವುಗಳಂತೆ ಹಿಂದೆ ಎಂದಿಗೂ ಇರಲಿಲ್ಲ, ಅನಂತರವೂ ಇರಲಾರವು. ಅವು ಭೂ ಮುಖವನ್ನೆಲ್ಲಾ ಮುತ್ತಿಕೊಂಡದ್ದರಿಂದ ಆ ದೇಶವು ಕತ್ತಲಾಯಿತು. ಅವು ಭೂಮಿಯ ಎಲ್ಲಾ ಸೊಪ್ಪನ್ನೂ ಆನೆಕಲ್ಲಿನ ಮಳೆಯು ಉಳಿಸಿದ ಮರಗಳ ಎಲ್ಲಾ ಫಲವನ್ನೂ ತಿಂದುಬಿಟ್ಟವು. ಮರಗಳಲ್ಲಾದರೂ ಹೊಲದ ಗಿಡಗಳಲ್ಲಾದರೂ ಹಸುರಾದದ್ದು ಐಗುಪ್ತ ದೇಶದಲ್ಲೆಲ್ಲಿಯೂ ಉಳಿಯಲಿಲ್ಲ.
- Psalm 105:34–35 ಕೀರ್ತನೆಗಳು 105:34–35ಆತನು ಹೇಳಲು ಮಿಡಿತೆಗಳೂ ಲೆಕ್ಕವಿಲ್ಲದ ಕಂಬಳಿ ಹುಳಗಳೂ ಬಂದವು, ಅವು ಅವರ ದೇಶದಲ್ಲಿ ಎಲ್ಲಾ ಪಲ್ಯಗಳನ್ನು ನುಂಗಿಬಿಟ್ಟು; ಭೂಮಿಯ ಫಲಗಳನ್ನು ತಿಂದುಬಿಟ್ಟವು.
- Revelation 9:2–11 ಪ್ರಕಟನೆ 9:2–11ಅವನು ಆ ತಳವಿಲ್ಲದ ತಗ್ಗನ್ನು ತೆರೆದಾಗ ಅಲ್ಲಿಂದ ದೊಡ್ಡ ಕುಲುಮೆಯ ಹೊಗೆಯಂತೆ ಆ ತಗ್ಗಿನೊಳಗಿಂದ ಹೊಗೆಯು ಏರಿತು; ಆ ತಗ್ಗಿನ ಹೊಗೆಯ ದೆಸೆಯಿಂದ ಸೂರ್ಯನು ವಾಯು ಮಂಡಲವು ಕತ್ತಲಾದವು. ಹೊಗೆಯೊಳಗಿಂದ ಮಿಡಿತೆಗಳು ಭೂಮಿಯ ಮೇಲೆ ಹೊರಟು ಬಂದವು. ಭೂಮಿಯಲ್ಲಿರುವ ಚೇಳುಗಳಿಗೆ ಬಲವಿರುವ ಪ್ರಕಾರ ಅವುಗಳಿಗೆ ಬಲವು ಕೊಡಲ್ಪಟ್ಟಿತು. ಭೂಮಿಯ ಮೇಲಿರುವ ಹುಲ್ಲನ್ನಾಗಲೀ ಯಾವ ಹಸುರಾದ ದ್ದನ್ನಾಗಲೀ ಯಾವ ಮರವನ್ನಾಗಲೀ ಕೆಡಿಸದೆ ಹಣೆಯಮೇಲೆ ದೇವರ ಮುದ್ರೆಯಿಲ್ಲದ ಮನುಷ್ಯರನ್ನು ಮಾತ್ರ ಬಾಧಿಸಬೇಕೆಂದು ಅವುಗಳಿಗೆ ಅಪ್ಪಣೆಯಾಯಿತು. ಅವರನ್ನು (ಮುದ್ರೆಯಿಲ್ಲದವರನ್ನು) ಕೊಲ್ಲದೆ ಐದು ತಿಂಗಳುಗಳವರೆಗೂ ಯಾತನೆಪಡಿಸಬೇಕೆಂದಾ ಯಿತು. ಅವರಿಗುಂಟಾದ ಯಾತನೆಯು ಮನುಷ್ಯನನ್ನು ಹೊಡೆಯುವ ಚೇಳಿನ ಯಾತನೆಯ ಹಾಗೆ ಇತ್ತು. ಆ ದಿನಗಳಲ್ಲಿ ಮನುಷ್ಯರು ಮರಣವನ್ನು ಹುಡುಕಿ ಅದನ್ನು ಕಾಣದೆ ಇರುವರು; ಸಾಯಬೇಕೆಂದು ಕೋರು ವರು, ಆದರೆ ಮೃತ್ಯುವು ಅವರ ಬಳಿಯಿಂದ ಓಡಿ ಹೋಗುವದು ಆ ಮಿಡಿತೆಗಳ ಆಕಾರಗಳು ಯುದ್ಧಕ್ಕೆ ಸನ್ನದ್ಧವಾಗಿರುವ ಕುದುರೆಗಳ ಆಕಾರದಂತೆ ಇದ್ದವು ಅವುಗಳ ತಲೆಯ ಮೇಲೆ ಚಿನ್ನದ ಕಿರೀಟಗಳೋ ಎಂಬಂತೆ ಇದ್ದವು; ಅವುಗಳ ಮುಖಗಳು ಮನುಷ್ಯರ ಮುಖಗಳ ಹಾಗೆ ಇದ್ದವು. ಸ್ತ್ರೀಯರ ಕೂದಲಿ ನಂತಿರುವ ಕೂದಲು ಅವುಗಳಿಗೆ ಇತ್ತು; ಅವುಗಳ ಹಲ್ಲುಗಳು ಸಿಂಹದ ಹಲ್ಲುಗಳ ಹಾಗಿದ್ದವು. ಅವುಗಳಿಗೆ ಕಬ್ಬಿಣದ ಕವಚಗಳಂತಿದ್ದ ಕವಚಗಳು ಇದ್ದವು; ಅವುಗಳ ರೆಕ್ಕೆಗಳ ಶಬ್ದವು ಯುದ್ಧಕ್ಕೆ ಓಡುವ ಅನೇಕ ರಥಾಶ್ವಗಳ ಶಬ್ದದ ಹಾಗೆ ಇತ್ತು. ಚೇಳಿಗಿರುವಂತೆ ಅವುಗಳಿಗೆ ಬಾಲಗಳೂ ಆ ಬಾಲಗಳಲ್ಲಿ ಕೊಂಡಿಗಳೂ ಇದ್ದವು; ಮನುಷ್ಯರನ್ನು ಐದು ತಿಂಗಳುಗಳ ವರೆಗೂ ಬಾಧಿಸುವ ಬಲವು ಅವುಗಳಿಗೆ ಇತ್ತು. ತಳವಿಲ್ಲದ ತಗ್ಗಿನ ದೂತನು ಅವುಗಳನ್ನಾಳುವ ಅರಸನು; ಅವನಿಗೆ ಇಬ್ರಿಯ ಭಾಷೆಯಲ್ಲಿ ಅಬದ್ದೋನನೆಂತಲೂ ಗ್ರೀಕ್ ಭಾಷೆಯಲ್ಲಿ ಅಪೊಲ್ಲುವೋನನೆಂತಲೂ ಹೆಸರು.
- Amos 7:1–2 ಆಮೋಸ 7:1–2ದೇವರಾದ ಕರ್ತನು ನನಗೆ ಹೀಗೆ ತೋರಿಸಿದನು; ಇಗೋ, ಹಿಂಗಾರು ಮಳೆ ಬಿದ್ದು ಪೈರು ಸೊಂಪಾಗುವದಕ್ಕೆ ಆರಂಭವಾದಾಗ ಅಂದರೆ, ರಾಜಾದಾಯದ ಹುಲ್ಲನ್ನು ಕೊಯ್ದ ಮೇಲೆ ಬೆಳೆಯು ವೃದ್ಧಿಯಾಗುತ್ತಿದ್ದಾಗ ಇಗೋ, ಕರ್ತನು ಮಿಡತೆಗಳನ್ನು ಉಂಟುಮಾಡಿದನು. ಆದದ್ದೇ ನಂದರೆ, ಅವು ಆ ದೇಶದ ಹುಲ್ಲನ್ನು ತಿಂದು ಮುಗಿಸಿದ ಮೇಲೆ ನಾನು--ಓ ಕರ್ತನಾದ ದೇವರೇ, ನನ್ನನ್ನು ಮನ್ನಿಸು; ಯಾಕೋಬನು ಹೇಗೆ ನಿಲ್ಲುವನು? ಅದು ಸಣ್ಣ ಜನಾಂಗ ಎಂದು ವಿಜ್ಞಾಪಿಸಿ ಕೊಳ್ಳಲು
- Joel 2:25 ಯೋವೇಲ 2:25ನಾನು ನಿಮ್ಮಲ್ಲಿ ಕಳುಹಿಸದಂಥ, ನನ್ನ ದೊಡ್ಡ ಸೈನ್ಯವಾದ ಹುಳವೂ ಕಂಬಳಿ ಹುಳವೂ ಒಳಗೆ ನಾಶಮಾಡುವ ಹುಳವೂ ಮಿಡತೆಗಳೂ ತಿಂದ ವರುಷಗಳಿಗೆ ಬದಲಾಗಿ ನಿಮಗೆ ಕೊಡುವೆನು.
- Joel 1:4–7 ಯೋವೇಲ 1:4–7ಹುಳವು ಉಳಿಸಿದ್ದನ್ನು ಮಿಡತೆ ತಿಂದುಬಿಟ್ಟಿದೆ; ಮಿಡತೆ ಉಳಿಸಿದ್ದನ್ನು ಒಳಗೆ ನಾಶ ಮಾಡುವ ಹುಳವು ತಿಂದುಬಿಟ್ಟಿದೆ; ಅದು ಉಳಿಸಿದ್ದನ್ನು ಕಂಬಳಿ ಹುಳವು ತಿಂದುಬಿಟ್ಟಿದೆ. ಅಮಲೇರಿದವರೇ, ನೀವು ಎಚ್ಚತ್ತು ಅಳಿರಿ; ದ್ರಾಕ್ಷಾರಸ ಕುಡಿಯುವವರೆಲ್ಲರೇ, ಹೊಸ ದ್ರಾಕ್ಷಾ ರಸದ ನಿಮಿತ್ತ ಗೋಳಾಡಿರಿ; ಅದು ನಿಮ್ಮ ಬಾಯಿ ಯೊಳಗಿಂದ ತೆಗೆಯಲ್ಪಟ್ಟಿದೆ. ನನ್ನ ದೇಶದ ಮೇಲೆ ಒಂದು ಜನಾಂಗವು ಏರಿ ಬಂತು; ಅದು ಬಲವಾದದ್ದೂ ಲೆಕ್ಕವಿಲ್ಲದ್ದೂ; ಅದರ ಹಲ್ಲುಗಳು ಸಿಂಹದ ಹಲ್ಲುಗಳು, ದೊಡ್ಡ ಸಿಂಹದ ದವಡೆ ಹಲ್ಲುಗಳು ಅದಕ್ಕೆ ಉಂಟು. ಅದು ನನ್ನ ದ್ರಾಕ್ಷೇ ಬಳ್ಳಿಯನ್ನು ಹಾಳುಮಾಡಿ ನನ್ನ ಅಂಜೂರದ ಗಿಡವನ್ನು ಮುರಿದು ಹಾಕಿದೆ; ಅದನ್ನು ಸಂಪೂರ್ಣ ಸುಲಿದು ಬಿಸಾಡಿಬಿಟ್ಟಿದೆ; ಅದರ ಕೊಂಬೆ ಗಳು ಬಿಳುಪಾದವು.