Psalms · chapter 105 · verse 34
Psalm 105:34 in Kannada
ಆತನು ಹೇಳಲು ಮಿಡಿತೆಗಳೂ ಲೆಕ್ಕವಿಲ್ಲದ ಕಂಬಳಿ ಹುಳಗಳೂ ಬಂದವು,
Aatanu helalu miditegaloo lekkavillada kambali hulagaloo bandavu,
Psalm 105:34 in English
- King James Version (KJV)
- He spake, and the locusts came, and caterpillers, and that without number,
- World English Bible (WEB)
- He spoke, and the locusts came with the grasshoppers, without number.
- American Standard Version (ASV)
- He spake, and the locust came, And the grasshopper, and that without number,
- Bible in Basic English (BBE)
- At his word the locusts came, and young locusts more than might be numbered,
- Darby Translation (DBY)
- He spoke, and the locust came, and the cankerworm, even without number;
- Webster's Bible (WBS)
- He spoke, and the locusts came, and caterpillars, and that without number,
- Young's Literal Translation (YLT)
- He hath said, and the locust cometh, And the cankerworm — innumerable,
Read in context
- 32ಅವರ ಮಳೆಗಾಗಿ ಕಲ್ಮಳೆಯನ್ನೂ ಅಗ್ನಿಜ್ವಾಲೆಗಳನ್ನೂ ದೇಶದಲ್ಲಿ ಬರಮಾಡಿದನು.
- 33ಅವರ ದ್ರಾಕ್ಷೇ ಬಳ್ಳಿಯನ್ನೂ ಅಂಜೂರದ ಗಿಡಗಳನ್ನೂ ಹೊಡೆದು ಮೇರೆಗಳ ಮರ ಗಳನ್ನು ಮುರಿದನು.
- 34ಆತನು ಹೇಳಲು ಮಿಡಿತೆಗಳೂ ಲೆಕ್ಕವಿಲ್ಲದ ಕಂಬಳಿ ಹುಳಗಳೂ ಬಂದವು,
- 35ಅವು ಅವರ ದೇಶದಲ್ಲಿ ಎಲ್ಲಾ ಪಲ್ಯಗಳನ್ನು ನುಂಗಿಬಿಟ್ಟು; ಭೂಮಿಯ ಫಲಗಳನ್ನು ತಿಂದುಬಿಟ್ಟವು.
- 36ಅವರ ದೇಶದಲ್ಲಿಯ ಎಲ್ಲಾ ಚೊಚ್ಚಲುಗಳನ್ನೂ ಬಲವುಳ್ಳ ಎಲ್ಲಾ ಪ್ರಮುಖರನ್ನೂ ಹೊಡೆದನು.
Cross references
- Exodus 10:12–15 ವಿಮೋಚನಕಾಂಡ 10:12–15ಆಗ ಕರ್ತನು ಮೋಶೆಗೆ--ಮಿಡತೆಗಳಿಗಾಗಿ ನಿನ್ನ ಕೈಯನ್ನು ಐಗುಪ್ತದ ಮೇಲೆ ಚಾಚು. ಅವು ಐಗುಪ್ತದ ಮೇಲೆ ಬಂದು ಆ ದೇಶದಲ್ಲಿರುವ ಹಸುರಾದದ್ದನ್ನೆಲ್ಲಾ ಅಂದರೆ ಆನೆಕಲ್ಲಿನ ಮಳೆಯು ಉಳಿಸಿದ್ದದನ್ನೆಲ್ಲಾ ತಿಂದು ಬಿಡಲಿ ಅಂದನು. ಮೋಶೆಯು ತನ್ನ ಕೋಲನ್ನು ಐಗುಪ್ತದೇಶದ ಮೇಲೆ ಚಾಚಿದಾಗ ಕರ್ತನು ಹಗಲಿರುಳೂ ಮೂಡಣಗಾಳಿಯನ್ನು ಬರಮಾಡಿದನು. ಉದ ಯವಾದಾಗ ಆ ಮೂಡಣ ಗಾಳಿಯು ಮಿಡತೆಗಳನ್ನು ಅಟ್ಟಿಕೊಂಡು ಬಂದಿತು. ಹೀಗೆ ಮಿಡತೆಗಳು ಐಗುಪ್ತ ದೇಶದಲ್ಲೆಲ್ಲಾ ಬಂದು ಐಗುಪ್ತದ ಎಲ್ಲಾ ಮೇರೆಗಳಲ್ಲಿ ದೊಡ್ಡ ಸಮೂಹವಾಗಿ ಸೇರಿಕೊಂಡವು. ಅವು ಕ್ರೂರ ವಾದವುಗಳಾಗಿದ್ದವು. ಅವುಗಳಂತೆ ಹಿಂದೆ ಎಂದಿಗೂ ಇರಲಿಲ್ಲ, ಅನಂತರವೂ ಇರಲಾರವು. ಅವು ಭೂ ಮುಖವನ್ನೆಲ್ಲಾ ಮುತ್ತಿಕೊಂಡದ್ದರಿಂದ ಆ ದೇಶವು ಕತ್ತಲಾಯಿತು. ಅವು ಭೂಮಿಯ ಎಲ್ಲಾ ಸೊಪ್ಪನ್ನೂ ಆನೆಕಲ್ಲಿನ ಮಳೆಯು ಉಳಿಸಿದ ಮರಗಳ ಎಲ್ಲಾ ಫಲವನ್ನೂ ತಿಂದುಬಿಟ್ಟವು. ಮರಗಳಲ್ಲಾದರೂ ಹೊಲದ ಗಿಡಗಳಲ್ಲಾದರೂ ಹಸುರಾದದ್ದು ಐಗುಪ್ತ ದೇಶದಲ್ಲೆಲ್ಲಿಯೂ ಉಳಿಯಲಿಲ್ಲ.
- Psalm 78:46 ಕೀರ್ತನೆಗಳು 78:46ಅವರ ಬೆಳೆ ಯನ್ನು ಕಂಬಳಿ ಹುಳಗಳಿಗೂ ವ್ಯವಸಾಯವನ್ನು ಮಿಡಿತೆಗಳಿಗೂ ಕೊಟ್ಟು
- Joel 2:25 ಯೋವೇಲ 2:25ನಾನು ನಿಮ್ಮಲ್ಲಿ ಕಳುಹಿಸದಂಥ, ನನ್ನ ದೊಡ್ಡ ಸೈನ್ಯವಾದ ಹುಳವೂ ಕಂಬಳಿ ಹುಳವೂ ಒಳಗೆ ನಾಶಮಾಡುವ ಹುಳವೂ ಮಿಡತೆಗಳೂ ತಿಂದ ವರುಷಗಳಿಗೆ ಬದಲಾಗಿ ನಿಮಗೆ ಕೊಡುವೆನು.
- Joel 1:4–7 ಯೋವೇಲ 1:4–7ಹುಳವು ಉಳಿಸಿದ್ದನ್ನು ಮಿಡತೆ ತಿಂದುಬಿಟ್ಟಿದೆ; ಮಿಡತೆ ಉಳಿಸಿದ್ದನ್ನು ಒಳಗೆ ನಾಶ ಮಾಡುವ ಹುಳವು ತಿಂದುಬಿಟ್ಟಿದೆ; ಅದು ಉಳಿಸಿದ್ದನ್ನು ಕಂಬಳಿ ಹುಳವು ತಿಂದುಬಿಟ್ಟಿದೆ. ಅಮಲೇರಿದವರೇ, ನೀವು ಎಚ್ಚತ್ತು ಅಳಿರಿ; ದ್ರಾಕ್ಷಾರಸ ಕುಡಿಯುವವರೆಲ್ಲರೇ, ಹೊಸ ದ್ರಾಕ್ಷಾ ರಸದ ನಿಮಿತ್ತ ಗೋಳಾಡಿರಿ; ಅದು ನಿಮ್ಮ ಬಾಯಿ ಯೊಳಗಿಂದ ತೆಗೆಯಲ್ಪಟ್ಟಿದೆ. ನನ್ನ ದೇಶದ ಮೇಲೆ ಒಂದು ಜನಾಂಗವು ಏರಿ ಬಂತು; ಅದು ಬಲವಾದದ್ದೂ ಲೆಕ್ಕವಿಲ್ಲದ್ದೂ; ಅದರ ಹಲ್ಲುಗಳು ಸಿಂಹದ ಹಲ್ಲುಗಳು, ದೊಡ್ಡ ಸಿಂಹದ ದವಡೆ ಹಲ್ಲುಗಳು ಅದಕ್ಕೆ ಉಂಟು. ಅದು ನನ್ನ ದ್ರಾಕ್ಷೇ ಬಳ್ಳಿಯನ್ನು ಹಾಳುಮಾಡಿ ನನ್ನ ಅಂಜೂರದ ಗಿಡವನ್ನು ಮುರಿದು ಹಾಕಿದೆ; ಅದನ್ನು ಸಂಪೂರ್ಣ ಸುಲಿದು ಬಿಸಾಡಿಬಿಟ್ಟಿದೆ; ಅದರ ಕೊಂಬೆ ಗಳು ಬಿಳುಪಾದವು.
- Revelation 9:3–10 ಪ್ರಕಟನೆ 9:3–10ಹೊಗೆಯೊಳಗಿಂದ ಮಿಡಿತೆಗಳು ಭೂಮಿಯ ಮೇಲೆ ಹೊರಟು ಬಂದವು. ಭೂಮಿಯಲ್ಲಿರುವ ಚೇಳುಗಳಿಗೆ ಬಲವಿರುವ ಪ್ರಕಾರ ಅವುಗಳಿಗೆ ಬಲವು ಕೊಡಲ್ಪಟ್ಟಿತು. ಭೂಮಿಯ ಮೇಲಿರುವ ಹುಲ್ಲನ್ನಾಗಲೀ ಯಾವ ಹಸುರಾದ ದ್ದನ್ನಾಗಲೀ ಯಾವ ಮರವನ್ನಾಗಲೀ ಕೆಡಿಸದೆ ಹಣೆಯಮೇಲೆ ದೇವರ ಮುದ್ರೆಯಿಲ್ಲದ ಮನುಷ್ಯರನ್ನು ಮಾತ್ರ ಬಾಧಿಸಬೇಕೆಂದು ಅವುಗಳಿಗೆ ಅಪ್ಪಣೆಯಾಯಿತು. ಅವರನ್ನು (ಮುದ್ರೆಯಿಲ್ಲದವರನ್ನು) ಕೊಲ್ಲದೆ ಐದು ತಿಂಗಳುಗಳವರೆಗೂ ಯಾತನೆಪಡಿಸಬೇಕೆಂದಾ ಯಿತು. ಅವರಿಗುಂಟಾದ ಯಾತನೆಯು ಮನುಷ್ಯನನ್ನು ಹೊಡೆಯುವ ಚೇಳಿನ ಯಾತನೆಯ ಹಾಗೆ ಇತ್ತು. ಆ ದಿನಗಳಲ್ಲಿ ಮನುಷ್ಯರು ಮರಣವನ್ನು ಹುಡುಕಿ ಅದನ್ನು ಕಾಣದೆ ಇರುವರು; ಸಾಯಬೇಕೆಂದು ಕೋರು ವರು, ಆದರೆ ಮೃತ್ಯುವು ಅವರ ಬಳಿಯಿಂದ ಓಡಿ ಹೋಗುವದು ಆ ಮಿಡಿತೆಗಳ ಆಕಾರಗಳು ಯುದ್ಧಕ್ಕೆ ಸನ್ನದ್ಧವಾಗಿರುವ ಕುದುರೆಗಳ ಆಕಾರದಂತೆ ಇದ್ದವು ಅವುಗಳ ತಲೆಯ ಮೇಲೆ ಚಿನ್ನದ ಕಿರೀಟಗಳೋ ಎಂಬಂತೆ ಇದ್ದವು; ಅವುಗಳ ಮುಖಗಳು ಮನುಷ್ಯರ ಮುಖಗಳ ಹಾಗೆ ಇದ್ದವು. ಸ್ತ್ರೀಯರ ಕೂದಲಿ ನಂತಿರುವ ಕೂದಲು ಅವುಗಳಿಗೆ ಇತ್ತು; ಅವುಗಳ ಹಲ್ಲುಗಳು ಸಿಂಹದ ಹಲ್ಲುಗಳ ಹಾಗಿದ್ದವು. ಅವುಗಳಿಗೆ ಕಬ್ಬಿಣದ ಕವಚಗಳಂತಿದ್ದ ಕವಚಗಳು ಇದ್ದವು; ಅವುಗಳ ರೆಕ್ಕೆಗಳ ಶಬ್ದವು ಯುದ್ಧಕ್ಕೆ ಓಡುವ ಅನೇಕ ರಥಾಶ್ವಗಳ ಶಬ್ದದ ಹಾಗೆ ಇತ್ತು. ಚೇಳಿಗಿರುವಂತೆ ಅವುಗಳಿಗೆ ಬಾಲಗಳೂ ಆ ಬಾಲಗಳಲ್ಲಿ ಕೊಂಡಿಗಳೂ ಇದ್ದವು; ಮನುಷ್ಯರನ್ನು ಐದು ತಿಂಗಳುಗಳ ವರೆಗೂ ಬಾಧಿಸುವ ಬಲವು ಅವುಗಳಿಗೆ ಇತ್ತು.