Psalms · chapter 80 · verse 13
Psalm 80:13 in Kannada
ಅಡವಿಯಿಂದ ಬಂದ ಹಂದಿಯು ಅದನ್ನು ಹಾಳುಮಾಡುತ್ತದೆ ಕಾಡಿನ ಮೃಗವು ಅದನ್ನು ಮೇಯ್ದು ಬಿಡುತ್ತದೆ.
Adaviyinda banda handiyu adannu haalumaaduttade kaadina mrugavu adannu meydu biduttade.
Psalm 80:13 in English
- King James Version (KJV)
- The boar out of the wood doth waste it, and the wild beast of the field doth devour it.
- World English Bible (WEB)
- The boar out of the wood ravages it. The wild animals of the field feed on it.
- American Standard Version (ASV)
- The boar out of the wood doth ravage it, And the wild beasts of the field feed on it.
- Bible in Basic English (BBE)
- It is uprooted by the pigs from the woods, the beasts of the field get their food from it.
- Darby Translation (DBY)
- The boar out of the forest doth waste it, and the beast of the field doth feed off it.
- Webster's Bible (WBS)
- The boar from the wood doth waste it, and the wild beast of the field doth devour it.
- Young's Literal Translation (YLT)
- A boar out of the forest doth waste it, And a wild beast of the fields consumeth it.
Read in context
- 11ಅದು ತನ್ನ ರೆಂಬೆಗಳನ್ನು ಸಮುದ್ರದ ವರೆಗೂ ತನ್ನ ಬಳ್ಳಿಗಳನ್ನು ನದಿಗೂ ಹರಡಿಸಿತು.
- 12ಮಾರ್ಗ ದಲ್ಲಿ ಹಾದು ಹೋಗುವವರೆಲ್ಲರು ಅದನ್ನು ಕೀಳುವ ಹಾಗೆ ಯಾಕೆ ಅದರ ಬೇಲಿಗಳನ್ನು ನೀನು ಮುರಿದು ಬಿಟ್ಟಿದ್ದೀ?
- 13ಅಡವಿಯಿಂದ ಬಂದ ಹಂದಿಯು ಅದನ್ನು ಹಾಳುಮಾಡುತ್ತದೆ ಕಾಡಿನ ಮೃಗವು ಅದನ್ನು ಮೇಯ್ದು ಬಿಡುತ್ತದೆ.
- 14ಓ ಸೈನ್ಯಗಳ ದೇವರೇ, ತಿರುಗಿಕೋ ಎಂದು ನಾವು ನಿನ್ನನ್ನು ಬೇಡುತ್ತೇವೆ. ಆಕಾಶದಿಂದ ದೃಷ್ಟಿಸಿ ನೋಡು; ಈ ದ್ರಾಕ್ಷೇಗಿಡವನ್ನೂ
- 15ನಿನ್ನ ಬಲಗೈ ನೆಟ್ಟ ಸಸಿಯನ್ನೂ ನೀನು ನಿನಗೆ ಬಲಪಡಿಸಿ ಕೊಂಡ ಕೊಂಬೆಯನ್ನೂ ಪರಾಮರಿಸು.
Cross references
- Jeremiah 4:7 ಯೆರೆಮೀಯ 4:7ಸಿಂಹವು ತನ್ನ ಅಡವಿಯೊಳಗಿಂದ ಏರಿ ಬರುತ್ತದೆ, ಅನ್ಯ ಜನಾಂಗ ಗಳನ್ನು ನಾಶಮಾಡುವವನು ಹೊರಟಿದ್ದಾನೆ, ನಿನ್ನ ದೇಶವನ್ನು ಹಾಳು ಮಾಡುವದಕ್ಕೆ ತನ್ನ ಸ್ಥಳವನ್ನು ಬಿಟ್ಟಿದ್ದಾನೆ; ನಿನ್ನ ಪಟ್ಟಣಗಳು ನಿವಾಸಿ ಇಲ್ಲದೆ ಪಾಳು ಬೀಳುವದು.
- Jeremiah 5:6 ಯೆರೆಮೀಯ 5:6ಹೀಗಿರುವದರಿಂದ ಅಡವಿಯ ಸಿಂಹವು ಅವರನ್ನು ಕೊಲ್ಲುವದು; ಸಂಜೆಯ ತೋಳವು ಅವರನ್ನು ಸೂರೆ ಮಾಡುವದು; ಚಿರತೆ ಅವರ ಪಟ್ಟಣಗಳ ಮೇಲೆ ಕಾವಲಾಗಿರುವದು; ಅಲ್ಲಿಂದ ಹೊರಗೆ ಬರುವವ ರೆಲ್ಲರೂ ಸೀಳಲ್ಪಡುವರು; ಅವರ ದ್ರೋಹಗಳು ಬಹಳವಾಗಿವೆ; ಅವರ ಹಿಂತಿರುಗುವಿಕೆಯು ಹೆಚ್ಚಾಗಿದೆ.
- 2 Kings 18:1–19 2 ಅರಸುಗಳು 18:1–19ಇಸ್ರಾಯೇಲಿನ ಅರಸನಾಗಿರುವ ಏಲನ ಮಗನಾದ ಹೋಶೇಯನ ಆಳ್ವಿಕೆಯ ಮೂರನೇ ವರುಷದಲ್ಲಿ ಯೆಹೂದದ ಅರಸನಾಗಿರುವ ಆಹಾಜನ ಮಗನಾದ ಹಿಜ್ಕೀಯನು ಆಳಲು ಆರಂಭಿ ಸಿದನು. ಅವನು ಆಳಲು ಆರಂಭಿಸಿದಾಗ ಇಪ್ಪ ತ್ತೈದು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಇಪ್ಪ ತ್ತೊಂಭತ್ತು ವರುಷ ಆಳಿದನು. ಅವನ ತಾಯಿಯ ಹೆಸರು ಅಬಿಯು; ಅವಳು ಜೆಕರ್ಯನ ಮಗಳಾಗಿದ್ದಳು. ಅವನು ತನ್ನ ತಂದೆಯಾದ ದಾವೀದನು ಮಾಡಿದ ಹಾಗೆ ಕರ್ತನ ದೃಷ್ಟಿಗೆ ಒಳ್ಳೆಯದನ್ನು ಮಾಡಿದನು. ಅವನು ಉನ್ನತ ಸ್ಥಳಗಳನ್ನು ತೆಗೆದುಹಾಕಿ, ವಿಗ್ರಹ ಗಳನ್ನು ಒಡೆದುಬಿಟ್ಟು, ತೋಪುಗಳನ್ನು ಕಡಿದುಹಾಕಿ, ಮೋಶೆಯು ಮಾಡಿದ ತಾಮ್ರದ ಸರ್ಪವನ್ನು ಚೂರುಚೂರು ಮಾಡಿದನು. ಆ ದಿವಸಗಳ ವರೆಗೂ ಇಸ್ರಾ ಯೇಲಿನ ಮಕ್ಕಳು ಅದಕ್ಕೆ ಧೂಪಸುಡುತ್ತಿದ್ದರು. ಅದನ್ನು ತಾಮ್ರದ ತುಂಡು ಎಂದು ಅವನು ಕರೆದನು. ಅವನು ಇಸ್ರಾಯೇಲಿನ ದೇವರಾದ ಕರ್ತನಲ್ಲಿ ಭರವಸವುಳ್ಳ ವನಾಗಿದ್ದನು; ಅವನಿಗೆ ಮುಂಚೆ ಇದ್ದವರಲ್ಲಿಯೂ ಅವನ ತರುವಾಯ ಯೆಹೂದದ ಎಲ್ಲಾ ಅರಸುಗಳ ಲ್ಲಿಯೂ ಅವನ ಹಾಗೆ ಇದ್ದವನು ಒಬ್ಬನೂ ಇಲ್ಲ. ಅವನು ಕರ್ತನನ್ನು ಹಿಂಬಾಲಿಸುವದನ್ನು ಬಿಟ್ಟುಬಿಡದೆ ಆತನಿಗೆ ಹೊಂದಿಕೊಂಡು ಕರ್ತನು ಮೋಶೆಗೆ ಆಜ್ಞಾ ಪಿಸಿದ ಆಜ್ಞೆಗಳನ್ನು ಕೈಕೊಂಡನು. ಕರ್ತನು ಅವನ ಸಂಗಡ ಇದ್ದನು; ಅವನು ಯಾವ ಕಡೆಗೆ ಹೋದರೂ ಅವನಿಗೆ ಸಫಲವಾಗುತ್ತಿತ್ತು. ಅವನು ಅಶ್ಶೂರಿನ ಅರಸ ನನ್ನು ಸೇವಿಸದೆ ಅವನ ಮೇಲೆ ತಿರುಗಿ ಬಿದ್ದನು. ಅವನು ಫಿಲಿಷ್ಟಿಯರನ್ನು ಗಾಜದ ವರೆಗೂ ಅದರ ಮೇರೆಗಳ ವರೆಗೂ ಕಾವಲುಗಾರರ ಬುರುಜುಗಳ ಮೊದಲುಗೊಂಡು ಕೋಟೆಯುಳ್ಳ ಪಟ್ಟಣದ ವರೆಗೂ ಸಂಹರಿಸಿದನು. ಇಸ್ರಾಯೇಲಿನ ಅರಸನಾಗಿರುವ ಏಲನ ಮಗ ನಾದ ಹೋಶೇಯನ ಆಳ್ವಿಕೆಯ ಏಳನೇ ವರುಷದಲ್ಲಿ, ಅರಸನಾಗಿರುವ ಹಿಜ್ಕೀಯನ ನಾಲ್ಕನೇ ವರುಷದಲ್ಲಿ ಏನಾಯಿತಂದರೆ, ಅಶ್ಶೂರಿನ ಅರಸನಾದ ಶಲ್ಮನೆಸೆರನು ಸಮಾರ್ಯದ ಮೇಲೆ ಬಂದು ಅದನ್ನು ಮುತ್ತಿಗೆ ಹಾಕಿದನು. ಮೂರು ವರುಷವಾದ ತರುವಾಯ ಅವರು ಅದನ್ನು ತೆಗೆದುಕೊಂಡರು. ಇಸ್ರಾಯೇಲಿನ ಅರಸನಾಗಿರುವ ಹೋಶೇಯನ ಆಳ್ವಿಕೆಯ ಒಂಭತ್ತನೇ ವರುಷವಾದ ಹಿಜ್ಕೀಯನ ಆರನೇ ವರುಷದಲ್ಲಿ ಸಮಾ ರ್ಯವು ತೆಗೆದುಕೊಳ್ಳಲ್ಪಟ್ಟಿತು. ಅಶ್ಶೂರಿನ ಅರಸನು ಅಶ್ಶೂರಕ್ಕೆ ಇಸ್ರಾಯೇಲನ್ನು ಸೆರೆಯಾಗಿ ಒಯ್ದು ಗೋಜಾನ್ ನದಿಯ ಬಳಿಯಲ್ಲಿ ಹಲಹುನಲ್ಲಿಯೂ ಹಾಬೋರಿನಲ್ಲಿಯೂ ಮೇದ್ಯರ ಪಟ್ಟಣಗಳಲ್ಲಿಯೂ ಅವರನ್ನು ಇರಿಸಿದನು. ಅವರು ತಮ್ಮ ದೇವರಾದ ಕರ್ತನ ಶಬ್ದವನ್ನು ಕೇಳದೆ ಆತನ ಒಡಂಬಡಿಕೆಯನ್ನೂ ಕರ್ತನ ಸೇವಕನಾದ ಮೋಶೆಯು ಆಜ್ಞಾಪಿಸಿದ್ದ ಎಲ್ಲ ವನ್ನೂ ವಿಾರಿದರು; ಅವುಗಳನ್ನು ಕೇಳದೆಯೂ ಮಾಡ ದೆಯೂ ಹೋದರು. ಅರಸನಾದ ಹಿಜ್ಕೀಯನ ಆಳ್ವಿಕೆಯ ಹದಿನಾಲ್ಕನೇ ವರುಷದಲ್ಲಿ ಅಶ್ಶೂರಿನ ಅರಸನಾದ ಸನ್ಹೇರೀಬನು ಯೆಹೂದದ ಕೋಟೆಯುಳ್ಳ ಸಕಲ ಪಟ್ಟಣಗಳ ಮೇಲೆ ಬಂದು ಅವುಗಳನ್ನು ವಶಪಡಿಸಿಕೊಂಡನು. ಆಗ ಯೆಹೂದದ ಅರಸನಾದ ಹಿಜ್ಕೀಯನು ಲಾಕೀ ಷನ ಬಳಿಯಲ್ಲಿದ್ದ ಅಶ್ಶೂರಿನ ಅರಸನಿಗೆ--ನಾನು ಪಾಪಮಾಡಿದ್ದೇನೆ; ನನ್ನನ್ನು ಬಿಟ್ಟು ಹಿಂತಿರಿಗಿ ಹೋಗು; ನೀನು ನನ್ನ ಮೇಲೆ ಹೊರಿಸುವದನ್ನು ನಾನು ತಾಳಿಕೊಳ್ಳುತ್ತೇನೆ ಎಂದು ಹೇಳಿ ಕಳುಹಿಸಿ ದನು. ಆಗ ಅಶ್ಶೂರಿನ ಅರಸನು ಯೆಹೂದದ ಅರಸನಾದ ಹಿಜ್ಕೀಯನಿಗೆ ಮುನ್ನೂರು ತಲಾಂತು ಬೆಳ್ಳಿಯನ್ನೂ ಮೂವತ್ತು ತಲಾಂತು ಬಂಗಾರವನ್ನೂ ಕೊಡಲು ನೇಮಕ ಮಾಡಿದನು. ಆದದರಿಂದ ಹಿಜ್ಕೀಯನು ಕರ್ತನ ಮನೆಯಲ್ಲಿಯೂ ಅರಸನ ಮನೆಯ ಬೊಕ್ಕಸಗಳಲ್ಲಿಯೂ ಸಿಕ್ಕಿದ ಎಲ್ಲಾ ಬೆಳ್ಳಿ ಯನ್ನು ಕೊಟ್ಟನು. ಆ ಕಾಲದಲ್ಲಿ ಯೆಹೂದದ ಅರಸನಾದ ಹಿಜ್ಕೀಯನು ಕರ್ತನ ಮಂದಿರದ ಕದ ಗಳ ಮೇಲೆಯೂ ಸ್ತಂಭಗಳ ಮೇಲೆಯೂ ತಾನು ಹೊದಿಸಿದ್ದ ಬಂಗಾರವನ್ನು ಕತ್ತರಿಸಿ ಅಶ್ಶೂರಿನ ಅರಸ ನಿಗೆ ಕೊಟ್ಟನು. ಅಶ್ಶೂರಿನ ಅರಸನು ಲಾಕೀಷಿನಿಂದ ತರ್ತಾನ ನನ್ನೂ ರಬ್ಸಾರೀಸನನ್ನೂ ರಬ್ಷಾಕೆಯನ್ನೂ ದೊಡ್ಡ ದಂಡನ್ನೂ ಯೆರೂಸಲೇಮಿನಲ್ಲಿದ್ದ ಅರಸನಾದ ಹಿಜ್ಕೀ ಯನ ಬಳಿಗೆ ಕಳುಹಿಸಿದನು. ಅವರು ಯೆರೂಸಲೇಮಿಗೆ ಬಂದು ಅರಸನ ಹೊಲದ ರಾಜ ಮಾರ್ಗದಲ್ಲಿರುವ ಮೇಲಿನ ಕೆರೆಯ ಕಾಲುವೆಯ ಬಳಿಯಲ್ಲಿ ನಿಂತರು. ಅವರು ಅರಸನನ್ನು ಕರೇ ಕಳುಹಿಸಿದರು. ಆದರೆ ಮನೆವಾರ್ತೆಯವನಾದ ಹಿಲ್ಕೀಯನ ಮಗನಾದ ಎಲ್ಯಾ ಕೀಮನೂ ಲೇಖಕನಾದ ಶೆಬ್ನನೂ ಸಂಪ್ರತಿಯವನಾದ ಆಸಾಫನ ಮಗನಾದ ಯೋವನೂ ಅವರ ಬಳಿಗೆ ಬಂದರು. ಆಗ ರಬ್ಷಾಕೆಯು ಅವರಿಗೆ--ನೀವು ಹಿಜ್ಕೀಯನಿಗೆ ಹೇಳಬೇಕಾದದ್ದೇನಂದರೆ, ಮಹಾ ಅರಸನಾದ ಅಶ್ಶೂರಿನ ಅರಸನು ಹೇಳುವದೇನಂದರೆ, ಭರವಸವಾಗಿರುವ ಈ ನಂಬಿಕೆಯೇನು?
- Jeremiah 39:1–3 ಯೆರೆಮೀಯ 39:1–3ಯೆಹೂದದ ಅರಸನಾದ ಚಿದ್ಕೀಯನ ಒಂಭತ್ತನೇ ವರುಷದ ಹತ್ತನೇ ತಿಂಗಳಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನೂ ಅವನ ಸೈನ್ಯವೆಲ್ಲವೂ ಯೆರೂಸಲೇಮಿಗೆ ವಿರೋಧವಾಗಿ ಬಂದು ಅದನ್ನು ಮುತ್ತಿಗೆ ಹಾಕಿದರು. ಚಿದ್ಕೀಯನ ಹನ್ನೊಂದನೇ ವರುಷದಲ್ಲಿ ನಾಲ್ಕನೇ ತಿಂಗಳಿನ ಒಂಭ ತ್ತನೇ ದಿವಸದಲ್ಲಿ ಪಟ್ಟಣವು ಒಡೆಯಲ್ಪಟ್ಟಿತು. ಆಗ ಬಾಬೆಲಿನ ಅರಸನ ಪ್ರಧಾನರೆಲ್ಲರೂ ನೇರ್ಗಲ್ಸ ರೇಚರನೂ ಸಮ್ಗರ್ನೆಬೋವನೂ ಸರ್ಸೆಕೀಮನೂ ನೇರ್ಗೆಲ್ಸರೆಚರನೂ ರಬ್ಶರೀಸ್ ಉಳಿದ ಬಾಬೆಲಿನ ಅರಸನ ಪ್ರಧಾನರೆಲ್ಲರೂ ಬಂದು ನಡುಬಾಗಲಲ್ಲಿ ಕೂತುಕೊಂಡರು.
- Jeremiah 52:12–14 ಯೆರೆಮೀಯ 52:12–14ಬಾಬೆಲಿನ ಅರಸನಾದ ನೆಬೂಕದೇಚ್ಚರನ ಹತ್ತೊಂಭತ್ತನೇ ವರುಷದ, ಐದನೇ ತಿಂಗಳಿನ, ಹತ್ತನೇ ದಿವಸದಲ್ಲಿ, ಬಾಬೆಲಿನ ಅರಸನ ಸೇವಕನೂ ಕಾವಲಿನ ಅಧಿಪತಿಯೂ ಆಗಿದ್ದ ನೆಬೂಜರದಾನನು ಯೆರೂ ಸಲೇಮಿಗೆ ಬಂದು, ಕರ್ತನ ಆಲಯವನ್ನೂ ಅರಸನ ಮನೆಯನ್ನೂ ಯೆರೂಸಲೇಮಿನ ಎಲ್ಲಾ ಮನೆಗಳನ್ನೂ ದೊಡ್ಡವರ ಎಲ್ಲಾ ಮನೆಗಳನ್ನೂ ಬೆಂಕಿಯಿಂದ ಸುಟ್ಟು ಬಿಟ್ಟನು; ಸುತ್ತಲಿರುವ ಯೆರೂಸಲೇಮಿನ ಗೋಡೆ ಗಳನ್ನೆಲ್ಲಾ ಕಾವಲಿನವರ ಅಧಿಪತಿಯ ಸಂಗಡ ಇದ್ದ ಕಸ್ದೀಯರ ದಂಡೆಲ್ಲಾ ಕೆಡವಿ ಹಾಕಿತು.
- 2 Chronicles 36:1–23 2 ಪೂರ್ವಕಾಲವೃತ್ತಾಂತ 36:1–23ಆಗ ದೇಶದ ಜನರು ಯೋಷೀಯನ ಮಗನಾದ ಯೆಹೋವಾಹಾಜನನ್ನು, ತಕ್ಕೊಂಡು ಯೆರೂಸಲೇಮಿನಲ್ಲಿ ಅವನ ತಂದೆಗೆ ಬದ ಲಾಗಿ ಅವನನ್ನು ಅರಸನಾಗಿ ಮಾಡಿದರು. ಯೆಹೋ ವಾಹಾಜನು ಆಳಲು ಆರಂಭಿಸಿದಾಗ ಇಪ್ಪತ್ತಮೂರು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಮೂರು ತಿಂಗಳು ಆಳಿದನು. ಐಗುಪ್ತದ ಅರಸನು ಯೆರೂಸಲೇ ಮಿನಲ್ಲಿ ಅವನನ್ನು ತೆಗೆದುಹಾಕಿ ದೇಶದಿಂದ ನೂರು ತಲಾಂತು ಬೆಳ್ಳಿಯನ್ನೂ ಒಂದು ತಲಾಂತು ಬಂಗಾರ ವನ್ನೂ ದಂಡ ತಕ್ಕೊಂಡನು. ಇದಲ್ಲದೆ ಐಗುಪ್ತದ ಅರಸನು ಅವನ ಸಹೋದರನಾದ ಎಲ್ಯಾಕೀಮ ನನ್ನು ಯೆಹೂದದ ಯೆರೂಸಲೇಮಿನ ಮೇಲೆ ಅರಸ ನಾಗಿ ಮಾಡಿ ಯೆಹೋಯಾಕೀಮನೆಂಬ ಬದಲು ಹೆಸರನ್ನು ಅವನಿಗೆ ಇಟ್ಟನು. ನೆಕೋ ಅವನ ಸಹೋ ದರನಾದ ಯೆಹೋವಾಹಾಜನನ್ನು ತಕ್ಕೊಂಡು ಐಗುಪ್ತಕ್ಕೆ ಒಯ್ದನು. ಯೆಹೋಯಾಕೀಮನು ಆಳಲು ಆರಂಭಿಸಿದಾಗ ಇಪ್ಪತ್ತೈದು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಹನ್ನೊಂದು ವರುಷ ಆಳಿದನು. ಆದರೆ ತನ್ನ ದೇವ ರಾದ ಕರ್ತನ ಸಮ್ಮುಖದಲ್ಲಿ ಅವನು ಕೆಟ್ಟದ್ದನ್ನು ಮಾಡಿ ದನು. ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಅವನ ಮೇಲೆ ಬಂದು ಬಾಬೆಲಿಗೆ ಒಯ್ಯುವ ಹಾಗೆ ಅವನಿಗೆ ಸಂಕೋಲೆಗಳನ್ನು ಹಾಕಿಸಿದನು. ಇದಲ್ಲದೆ ನೆಬೂಕದ್ನೆಚ್ಚರನು ಕರ್ತನ ಮನೆಯ ಪಾತ್ರೆಗಳಲ್ಲಿ ಕೆಲವನ್ನು ಬಾಬೆಲಿಗೆ ತಕ್ಕೊಂಡು ಹೋಗಿ ಬಾಬೆಲಿ ನಲ್ಲಿರುವ ತನ್ನ ಮಂದಿರದಲ್ಲಿ ಇರಿಸಿದನು. ಆದರೆ ಯೆಹೋಯಾಕೀಮನ ಮಿಕ್ಕಾದ ಕ್ರಿಯೆಗಳೂ ಅವನು ಮಾಡಿದ ಅಸಹ್ಯಗಳೂ ಅವನಲ್ಲಿ ಕಂಡು ಕೊಂಡದ್ದೂ ಇಗೋ, ಅವು ಇಸ್ರಾಯೇಲ್ ಯೆಹೂದದ ಅರಸುಗಳ ಪುಸ್ತಕದಲ್ಲಿ ಬರೆಯಲ್ಪಟ್ಟಿವೆ. ಅವನಿಗೆ ಬದಲಾಗಿ ಅವನ ಮಗನಾದ ಯೆಹೋಯಾಕೀನನು ಆಳಿದನು. ಯೆಹೋಯಾಕೀನನು ಆಳಲು ಆರಂಭಿಸಿದಾಗ ಹದಿನೆಂಟು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಮೂರು ತಿಂಗಳು ಹತ್ತು ದಿವಸ ಆಳಿದನು. ಅವನು ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿದನು. ಆದರೆ ಒಂದು ವರುಷವು ತೀರಿದ ಮೇಲೆ ಅರಸನಾದ ನೆಬೂಕದ್ನೆಚ್ಚರನು ಜನರನ್ನು ಕಳುಹಿಸಿ ಅವನನ್ನೂ ಕರ್ತನ ಆಲಯದ ಬೆಲೆಯುಳ್ಳ ಪಾತ್ರೆಗಳನ್ನೂ ಬಾಬೆ ಲಿಗೆ ತಕ್ಕೊಂಡು ತರಿಸಿಕೊಂಡು ಅವನ ಸಹೋದರ ನಾದ ಚಿದ್ಕೀಯನನ್ನು ಯೆಹೂದ ಯೆರೂಸಲೇಮಿನ ಮೇಲೆ ಅರಸನಾಗಿ ಮಾಡಿದನು. ಚಿದ್ಕೀಯನು ಆಳಲು ಆರಂಭಿಸಿದಾಗ ಅವನು ಇಪ್ಪತ್ತೊಂದು ವರುಷದವನಾಗಿದ್ದು ಯೆರೂಸಲೇಮಿ ನಲ್ಲಿ ಹನ್ನೊಂದು ವರುಷ ಆಳಿದನು. ಅವನು ತನ್ನ ದೇವರಾದ ಕರ್ತನ ಸಮ್ಮುಖದಲ್ಲಿ ಕೆಟ್ಟದ್ದನ್ನು ಮಾಡಿ ಕರ್ತನ ಬಾಯಿ ಮಾತು ಹೇಳಿದ ಪ್ರವಾದಿ ಯಾದ ಯೆರೆವಿಾಯನ ಮುಂದೆ ತನ್ನನ್ನು ತಗ್ಗಿಸಿಕೊಳ್ಳದೆ ಇದ್ದನು. ಇದಲ್ಲದೆ ಅವನು ದೇವರ ಮೇಲೆ ಆಣೆ ಇಡುವಂತೆ ಮಾಡಿದ ಅರಸನಾದ ನೆಬೂಕದ್ನೆಚ್ಚರನಿಗೆ ತಿರುಗಿ ಬಿದ್ದನು. ಹೇಗಂದರೆ ಅವನು ಇಸ್ರಾಯೇಲಿನ ದೇವರಾದ ಕರ್ತನ ಕಡೆಗೆ ತಿರುಗದೆಯೂ ತನ್ನ ಕುತ್ತಿಗೆ ಯನ್ನು ಬೊಗ್ಗಿಸದೆಯೂ ತನ್ನ ಹೃದಯವನ್ನು ಕಠಿಣ ಮಾಡಿಕೊಂಡನು. ಇದಲ್ಲದೆ ಯಾಜಕರಲ್ಲಿರುವ ಎಲ್ಲಾ ಪ್ರಧಾನರೂ ಜನರೂ ಜನಾಂಗಗಳ ಅಸಹ್ಯ ಗಳನ್ನು ಹಿಂಬಾಲಿಸಿ ಬಹಳವಾಗಿ ಅಪರಾಧ ಮಾಡಿ ಕರ್ತನು ಯೆರೂಸಲೇಮಿನಲ್ಲಿ ಪರಿಶುದ್ಧ ಮಾಡಿದ ಆತನ ಆಲಯವನ್ನು ಹೊಲೆ ಮಾಡಿದರು. ಅವರ ಪಿತೃಗಳ ಕರ್ತನಾದ ದೇವರು ತನ್ನ ಸೇವಕರನ್ನು ಅವನ ಬಳಿಗೆ ಕಳುಹಿಸಿದನು, ಹೊತ್ತಾರೆಯಿಂದ ಕಳುಹಿಸುತ್ತಾ ಬಂದನು, ಯಾಕಂದರೆ ಆತನು ತನ್ನ ಜನರ ಮೇಲೆಯೂ ತನ್ನ ನಿವಾಸಸ್ಥಾನದ ಮೇಲೆಯೂ ಕನಿಕರಪಟ್ಟನು. ಆದರೆ ಕರ್ತನ ಕೋಪವು ತನ್ನ ಜನರಿಗೆ ವಿರೋಧ ವಾಗಿ ಏಳುವ ವರೆಗೂ ಅಂದರೆ ಪರಿಹಾರವಾಗದಷ್ಟೂ ಅವರು ದೇವರ ಸೇವಕರನ್ನು ಅಪಹಾಸ್ಯಮಾಡಿ ಆತನ ವಾಕ್ಯಗಳನ್ನು ತಿರಸ್ಕರಿಸಿ ಆತನ ಪ್ರವಾದಿಗಳಿಗೆ ವಂಚನೆ ಮಾಡಿದರು. ಆದದರಿಂದ ಆತನು ಅವರ ಮೇಲೆ ಕಸ್ದೀಯರ ಅರಸನನ್ನು ಬರಮಾಡಿದನು. ಅವನು ಅವರ ಪರಿಶುದ್ಧ ಸ್ಥಾನವಾದ ಆಲಯದಲ್ಲಿ ಅವರ ಪ್ರಾಯಸ್ಥರನ್ನು ಕತ್ತಿಯಿಂದ ಕೊಂದುಹಾಕಿದನು. ಪ್ರಾಯಸ್ಥನ ಮೇಲಾದರೂ ಕನ್ಯಾ ಸ್ತ್ರೀಯ ಮೇಲಾ ದರೂ ವೃದ್ಧನ ಮೇಲಾದರೂ ಅತೀ ವೃದ್ಧನ ಮೇಲಾ ದರೂ ಕನಿಕರಪಡಲಿಲ್ಲ. ಆತನು ಸಮಸ್ತವನ್ನು ಅವನ ಕೈಯಲ್ಲಿ ಒಪ್ಪಿಸಿದನು. ಇದಲ್ಲದೆ ದೊಡ್ಡವೂ ಸಣ್ಣವೂ ಆದ ಕರ್ತನ ಮನೆಯ ಎಲ್ಲಾ ಸಾಮಾನುಗಳು ಕರ್ತನ ಆಲಯದ ಬೊಕ್ಕಸಗಳು ಅರಸನ ಬೊಕ್ಕಸಗಳು ಅವನ ಪ್ರಧಾನರ ಬೊಕ್ಕಸಗಳು ಇವುಗಳನ್ನೆಲ್ಲಾ ಬಾಬೆಲಿಗೆ ತರಿಸಿದನು. ಅವರು ದೇವರ ಆಲಯವನ್ನು ಸುಟ್ಟು ಬಿಟ್ಟು ಯೆರೂಸಲೇಮಿನ ಗೋಡೆಯನ್ನು ಕೆಡವಿ ಹಾಕಿ ಅದರ ಅರಮನೆಗಳನ್ನು ಸುಟ್ಟು ಬಿಟ್ಟು ಅದರ ಬೆಲೆಯುಳ್ಳ ಸಾಮಾನುಗಳನ್ನೆಲ್ಲಾ ಕೆಡಿಸಿದರು. ಇದ ಲ್ಲದೆ ಕತ್ತಿಗೆ ತಪ್ಪಿದವರನ್ನು ಅವನು ಬಾಬೆಲಿಗೆ ಒಯ್ದನು. ಅವರು ಅಲ್ಲಿ ಪಾರಸಿಯ ರಾಜ್ಯದ ಆಳ್ವಿಕೆಯ ಪರ್ಯಂತರ, ದೇಶವು ಅದರ ಸಬ್ಬತ್ತುಗಳನ್ನು ಅನುಭವಿ ಸುವ ಪರ್ಯಂತರ, ಯೆರೆವಿಾಯನ ಮುಖಾಂತರವಾಗಿ ಹೇಳಿದ ಕರ್ತನ ವಾಕ್ಯವು ಈಡೇರುವದಕ್ಕೆ ಅವನಿಗೂ ಅವನ ಮಕ್ಕಳಿಗೂ ಸೇವಕರಾಗಿದ್ದರು. ದೇಶವು ಎಪ್ಪತ್ತು ವರುಷ ತೀರುವ ಪರ್ಯಂತರ ಹಾಳಾಗಿದ್ದು ಸಬ್ಬತ್ತನ್ನು ಅನುಭವಿಸುತ್ತಾ ಇತ್ತು. ಆದರೆ ಪಾರಸಿಯ ಅರಸನಾದ ಕೊರೇಷನ ಮೊದಲನೇ ವರುಷದಲ್ಲಿ ಕರ್ತನು ಯೆರೆವಿಾಯನ ಮೂಲಕವಾಗಿ ಹೇಳಿದ ವಾಕ್ಯವು ಈಡೇರುವ ಹಾಗೆ ಕರ್ತನು ಪಾರಸಿಯ ಅರಸನಾದ ಕೊರೇಷನ ಆತ್ಮ ವನ್ನು ಪ್ರೇರೇಪಿಸಿದ್ದರಿಂದ ಅವನು ತನ್ನ ರಾಜ್ಯದಲ್ಲೆಲ್ಲಾ ಸಾರೋಣದಿಂದಲೂ ಬರಹದಿಂದಲೂ ಹೇಳಿದ್ದೇ ನಂದರೆ --ಪಾರಸಿಯ ಅರಸನಾದ ಕೊರೇಷನು ಹೀಗೆ ಹೇಳುತ್ತಾನೆ--ಪರಲೋಕದ ದೇವರಾದ ಕರ್ತನು ಭೂಲೋಕದ ರಾಜ್ಯಗಳನ್ನೆಲ್ಲಾ ನನಗೆ ಕೊಟ್ಟಿದ್ದಾನೆ; ಆತನು ಯೆಹೂದ ದೇಶದೊಳಗೆ ಯೆರೂಸಲೇಮಿನಲ್ಲಿ ತನಗೆ ಆಲಯವನ್ನು ಕಟ್ಟಿಸಲು ನನಗೆ ಆಜ್ಞಾಪಿಸಿದ್ದಾನೆ. ಆತನ ಸಮಸ್ತ ಜನರಾದ ನಿಮ್ಮಲ್ಲಿ ಹೋಗುವವರು ಯಾರು? ಅವನು ಹೋಗಲಿ, ಅವನ ದೇವರಾದ ಕರ್ತನು ಅವನ ಸಂಗಡ ಇರಲಿ ಅಂದನು. ಪಾರಸಿಯ ಅರಸನಾದ ಕೊರೇಷನು ಹೀಗೆ ಹೇಳುತ್ತಾನೆ--ಪರಲೋಕದ ದೇವರಾದ ಕರ್ತನು ಭೂಲೋಕದ ರಾಜ್ಯಗಳನ್ನೆಲ್ಲಾ ನನಗೆ ಕೊಟ್ಟಿದ್ದಾನೆ; ಆತನು ಯೆಹೂದ ದೇಶದೊಳಗೆ ಯೆರೂಸಲೇಮಿನಲ್ಲಿ ತನಗೆ ಆಲಯವನ್ನು ಕಟ್ಟಿಸಲು ನನಗೆ ಆಜ್ಞಾಪಿಸಿದ್ದಾನೆ. ಆತನ ಸಮಸ್ತ ಜನರಾದ ನಿಮ್ಮಲ್ಲಿ ಹೋಗುವವರು ಯಾರು? ಅವನು ಹೋಗಲಿ, ಅವನ ದೇವರಾದ ಕರ್ತನು ಅವನ ಸಂಗಡ ಇರಲಿ ಅಂದನು.
- Jeremiah 51:34 ಯೆರೆಮೀಯ 51:34ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ನನ್ನನ್ನು ನುಂಗಿಬಿಟ್ಟಿದ್ದಾನೆ; ಜಜ್ಜಿದ್ದಾನೆ; ಬರಿದಾದ ಪಾತ್ರೆಯಾಗಿ ಮಾಡಿದ್ದಾನೆ; ಘಟಸರ್ಪದ ಹಾಗೆ ನುಂಗಿಬಿಟ್ಟಿದ್ದಾನೆ; ನನ್ನ ರಮ್ಯವಾದವುಗಳಿಂದ ತನ್ನ ಹೊಟ್ಟೆ ತುಂಬಿಸಿದ್ದಾನೆ; ನನ್ನನ್ನು ತಳ್ಳಿಬಿಟ್ಟಿದ್ದಾನೆ.
- 2 Kings 24:1–20 2 ಅರಸುಗಳು 24:1–20ಅವನ ದಿವಸಗಳಲ್ಲಿ ಬಾಬೆಲಿನ ಅರಸನಾದ ನೆಬೂಕದ್ನೆಚರನು ಬಂದನು. ಯೆಹೋಯಾಕೀಮನು ಮೂರು ವರುಷ ಅವನ ಸೇವಕನಾಗಿದ್ದು ತರುವಾಯ ಅವನ ಮೇಲೆ ತಿರುಗಿ ಬಿದ್ದನು. ಆದರೆ ಕರ್ತನು ಕಸ್ದೀಯರ, ಅರಾಮ್ಯರ, ಮೋವಾಬ್ಯರ, ಅಮ್ಮೋನ್ಯರ ಗುಂಪುಗಳನ್ನೂ ಅವನ ಮೇಲೆ ಕಳುಹಿಸಿದನು. ಕರ್ತನು ಪ್ರವಾದಿಗಳಾದ ತನ್ನ ಸೇವಕರ ಮುಖಾಂತರ ಹೇಳಿದ ಮಾತಿನ ಪ್ರಕಾರ ಯೆಹೂದವನ್ನು ನಾಶ ಮಾಡುವಂತೆ ಅದರ ಮೇಲೆ ಅವರನ್ನು ಬರಮಾಡಿದನು. ನಿಶ್ಚಯವಾಗಿ ಕರ್ತನ ಅಪ್ಪಣೆಯಿಂದ ಇದು ಯೆಹೂದದ ಮೇಲೆ ಆಯಿತು. ಅದೇನಂದರೆ, ಮನಸ್ಸೆಯು ತನ್ನ ಎಲ್ಲಾ ಕೃತ್ಯಗಳಿಂದ ಮಾಡಿದ ಪಾಪಗಳ ನಿಮಿತ್ತ ಅವರನ್ನು ಆತನು ತನ್ನ ಸಮ್ಮುಖದಿಂದ ತೆಗೆದು ಹಾಕುವದಕ್ಕೋಸ್ಕರವೇ. ಇದಲ್ಲದೆ ಅವನು ಚೆಲ್ಲಿದ ನಿರಪರಾಧದ ರಕ್ತದ ನಿಮಿತ್ತ ಇದು ಉಂಟಾಯಿತು. ಅವನು ನಿರಪರಾಧದ ರಕ್ತದಿಂದ ಯೆರೂಸಲೇಮನ್ನು ತುಂಬಿಸಿದ್ದನು. ಕರ್ತನು ಅದನ್ನು ಮನ್ನಿಸಲೊಲ್ಲದೆ ಇದ್ದನು. ಯೆಹೋಯಾ ಕೀಮನ ಇತರ ಕ್ರಿಯೆಗಳೂ ಅವನು ಮಾಡಿದ ಎಲ್ಲವೂ ಯೆಹೂದದ ಅರಸುಗಳ ವೃತ್ತಾಂತಗಳ ಪುಸ್ತಕದಲ್ಲಿ ಬರೆಯಲ್ಪಡಲಿಲ್ಲವೋ? ಯೆಹೋಯಾಕೀಮನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವನ ಮಗನಾದ ಯೆಹೋಯಾಖೀನನು ಅವನಿಗೆ ಬದಲಾಗಿ ಅರಸ ನಾದನು. ಆದರೆ ಐಗುಪ್ತದ ಅರಸನು ತನ್ನ ದೇಶದಿಂದ ತಿರಿಗಿ ಬರಲಿಲ್ಲ. ಯಾಕಂದರೆ ಐಗುಪ್ತದ ನದಿ ಮೊದಲು ಗೊಂಡು ಯೂಫ್ರೇಟೀಸ್ ನದಿಯ ವರೆಗೂ ಐಗು ಪ್ತದ ಅರಸನಿಗೆ ಇದ್ದದ್ದೆಲ್ಲಾ ಬಾಬೆಲಿನ ಅರಸನು ಹಿಡಿದಿದ್ದನು. ಯೆಹೋಯಾಖೀನನು ಆಳಲು ಆರಂಭಿಸಿದಾಗ ಹದಿನೆಂಟು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಮೂರು ತಿಂಗಳು ಆಳಿದನು. ಅವನ ತಾಯಿಯು ಯೆರೂಸಲೇಮಿನ ಎಲ್ನಾತಾನನ ಮಗಳಾಗಿದ್ದು ನೆಹು ಷ್ಟಾಳೆಂಬವಳು. ಅವನು ತನ್ನ ತಂದೆಯು ಮಾಡಿದ ಪ್ರಕಾರವೆಲ್ಲಾ ಕರ್ತನ ದೃಷ್ಟಿಗೆ ಕೆಟ್ಟದ್ದನ್ನು ಮಾಡಿದನು. ಆ ಕಾಲದಲ್ಲಿ ಬಾಬೆಲಿನ ಅರಸನಾದ ನೆಬೂಕ ದ್ನೆಚರನ ಸೇವಕರು ಯೆರೂಸಲೇಮಿಗೆ ವಿರೋಧವಾಗಿ ಬಂದಾಗ ಆ ಪಟ್ಟಣವು ಮುತ್ತಿಗೆ ಹಾಕಲ್ಪಟ್ಟಿತು. ಬಾಬೆಲಿನ ಅರಸನಾದ ನೆಬೂಕದ್ನೆಚ್ಚರನು ಪಟ್ಟಣಕ್ಕೆ ವಿರೋಧವಾಗಿ ಬಂದನು; ಅವನ ಸೇವಕರು ಅದನ್ನು ಮುತ್ತಿಗೆ ಹಾಕಿದರು. ಆಗ ಯೆಹೂದದ ಅರಸನಾದ ಯೆಹೋಯಾಖೀನನೂ ಅವನ ತಾಯಿಯೂ ಸೇವ ಕರೂ ಪ್ರಧಾನರೂ ಕಂಚುಕಿಯರೂ ಅಧಿಕಾರಿಗಳ ಸಹಿತವಾಗಿ ಬಾಬೆಲಿನ ಅರಸನ ಬಳಿಗೆ ಹೋದರು. ಬಾಬೆಲಿನ ಅರಸನು ತನ್ನ ಆಳಿಕೆಯ ಎಂಟನೇ ವರುಷ ದಲ್ಲಿ ಅವನನ್ನು ಸೆರೆಹಿಡಿದನು. ಕರ್ತನು ಹೇಳಿದ ಪ್ರಕಾರವೇ ಅವನು ಅಲ್ಲಿಂದ ಕರ್ತನ ಮನೆಯ ಎಲ್ಲಾ ಬೊಕ್ಕಸಗಳನ್ನೂ ಅರಮನೆಯ ಬೊಕ್ಕಸಗಳನ್ನೂ ಇಸ್ರಾಯೇಲಿನ ಅರಸನಾದ ಸೊಲೊಮೋನನು ಕರ್ತನ ಮನೆಯಲ್ಲಿ ಮಾಡಿದ ಬಂಗಾರದ ಎಲ್ಲಾ ಪಾತ್ರೆಗಳನ್ನೂ ತುಂಡು ತುಂಡಾಗಿ ಕತ್ತರಿಸಿಬಿಟ್ಟನು. ಅವನು ಯೆರೂಸಲೇಮಿನವರೆಲ್ಲರನ್ನೂ ಎಲ್ಲಾ ಪ್ರಧಾನರನ್ನೂ ಎಲ್ಲಾ ಸ್ಥಿತಿಯುಳ್ಳ ಪರಾಕ್ರಮಶಾಲಿ ಗಳನ್ನೂ ಹತ್ತು ಸಾವಿರ ಸೆರೆಯವರನ್ನೂ ಮತ್ತು ಎಲ್ಲಾ ಕೌಶಲ್ಯಗಾರರನ್ನೂ ಕಮ್ಮಾರರನ್ನೂ ಅಲ್ಲಿಂದ ಒಯ್ದನು; ದೇಶದ ಬಡವರ ಹೊರತು ಉಳಿದವರು ಯಾರೂ ಅಲ್ಲಿ ಇರಲಿಲ್ಲ. ಯೆಹೋಯಾಖೀನನನ್ನು ಬಾಬೆ ಲಿಗೆ ಒಯ್ದನು; ಅವನು ಅರಸನ ತಾಯಿಯನ್ನೂ ಅರಸನ ಹೆಂಡತಿಯರನ್ನೂ ಅವನ ಅಧಿಕಾರಿಗಳನ್ನೂ ದೇಶದ ಬಲಶಾಲಿಗಳನ್ನೂ ಯೆರೂಸಲೇಮಿನಿಂದ ಬಾಬೆಲಿಗೆ ಸೆರೆಯಾಗಿ ಒಯ್ದನು. ಬಾಬೆಲಿನ ಅರಸನು ಎಲ್ಲಾ ಸ್ಥಿತಿವಂತರಾದ ಏಳುಸಾವಿರ ಜನರನ್ನೂ ಕೌಶಲ್ಯಗಾರರೂ ಮತ್ತು ಕಮ್ಮಾರರೂ ಆದ ಸಾವಿರ ಜನರನ್ನೂ ಬಲವುಳ್ಳ ಯುದ್ಧ ಮಾಡತಕ್ಕವರೆಲ್ಲರನ್ನೂ ಬಾಬೆಲಿಗೆ ಸೆರೆಯಾಗಿ ಒಯ್ದನು. ಬಾಬೆಲಿನ ಅರ ಸನು ಯೆಹೋಯಾಖೀನನ ಚಿಕ್ಕಪ್ಪನಾದ ಮತ್ತನ್ಯ ನನ್ನು ಅವನಿಗೆ ಬದಲಾಗಿ ಅರಸನನ್ನಾಗಿ ಮಾಡಿ ಅವನಿಗೆ ಚಿದ್ಕೀಯ ಎಂಬ ಹೆಸರನ್ನಿಟ್ಟನು. ಚಿದ್ಕೀಯನು ಆಳಲು ಆರಂಭಿಸಿದಾಗ ಇಪ್ಪ ತ್ತೊಂದು ವರುಷದವನಾಗಿದ್ದು ಯೆರೂಸಲೇಮಿನಲ್ಲಿ ಹನ್ನೊಂದು ವರುಷ ಆಳಿದನು. ಅವನ ತಾಯಿ ಲಿಬ್ನದ ಯೆರೆವಿಾಯನ ಮಗಳಾಗಿದ್ದ ಹಮೂಟಲ್ ಎಂಬ ವಳು. ಅವನು ಯೆಹೋಯಾಕೀಮನು ಮಾಡಿದ ಎಲ್ಲಾದರ ಪ್ರಕಾರ ಕರ್ತನ ದೃಷ್ಟಿಗೆ ಕೆಟ್ಟದ್ದನ್ನು ಮಾಡಿ ದನು.ಕರ್ತನು ಅವರನ್ನು ತನ್ನ ಸಮ್ಮುಖದಿಂದ ದೊಬ್ಬಿ ಹಾಕುವ ವರೆಗೆ ಯೆರೂಸಲೇಮಿನ ಮತ್ತು ಯೆಹೂದದ ಮೇಲೆ ಉಂಟಾದ ಆತನ ಕೋಪದ ನಿಮಿತ್ತ ಚಿದ್ಕೀಯನು ಬಾಬೆಲಿನ ಅರಸನ ಮೇಲೆ ತಿರುಗಿಬಿದ್ದನು. ಕರ್ತನು ಅವರನ್ನು ತನ್ನ ಸಮ್ಮುಖದಿಂದ ದೊಬ್ಬಿ ಹಾಕುವ ವರೆಗೆ ಯೆರೂಸಲೇಮಿನ ಮತ್ತು ಯೆಹೂದದ ಮೇಲೆ ಉಂಟಾದ ಆತನ ಕೋಪದ ನಿಮಿತ್ತ ಚಿದ್ಕೀಯನು ಬಾಬೆಲಿನ ಅರಸನ ಮೇಲೆ ತಿರುಗಿಬಿದ್ದನು.
- Jeremiah 52:7 ಯೆರೆಮೀಯ 52:7ಆಗ ಪಟ್ಟಣವು ವಿಭಾಗವಾಯಿತು; ಯುದ್ಧಸ್ಥರೆಲ್ಲರು ಓಡಿಹೋಗಿ, ಅರಸನ ತೋಟದ ಬಳಿಯಲ್ಲಿದ್ದ ಎರಡು ಗೋಡೆಗಳ ಮಧ್ಯದ ಬಾಗಲಿನ ಮಾರ್ಗವಾಗಿ ರಾತ್ರಿಯಲ್ಲಿ ಪಟ್ಟಣವನ್ನು ಬಿಟ್ಟು ಹೊರಟು, ಬೈಲು ಸೀಮೆಯ ಮಾರ್ಗವಾಗಿ ಹೋದರು. ಆದರೆ ಕಸ್ದೀಯರು ಪಟ್ಟಣದ ಸುತ್ತಲೂ ಇದ್ದರು.
- 2 Chronicles 32:1–33 2 ಪೂರ್ವಕಾಲವೃತ್ತಾಂತ 32:1–33ಈ ಕಾರ್ಯಗಳೂ ಇವುಗಳ ಸ್ಥಾಪನೆಯೂ ಆದ ತರುವಾಯ ಅಶ್ಶೂರಿನ ಅರಸನಾದ ಸನ್ಹೇರೀಬನು ಹೊರಟು ಬಂದು ಯೆಹೂದದಲ್ಲಿ ಪ್ರವೇಶಿಸಿ ಕೋಟೆಯುಳ್ಳ ಪಟ್ಟಣಗಳ ಬಳಿಯಲ್ಲಿ ದಂಡಿಳಿದು ಅವುಗಳನ್ನು ತನಗಾಗಿ ಜಯಿಸಬೇಕೆಂದು ಅಂದುಕೊಂಡನು. ಸನ್ಹೇರೀಬನು ಬಂದದ್ದನ್ನೂ ಅವನು ಯೆರೂಸಲೇಮಿನ ಮೇಲೆ ಯುದ್ಧಮಾಡಲು ಮುಖ ತಿರುಗಿಸಿದ್ದನ್ನೂ ಹಿಜ್ಕೀಯನು ಕಂಡಾಗ ಅವನು ಪಟ್ಟಣದ ಹೊರಗಿರುವ ನೀರು ಬುಗ್ಗೆಗ ಳನ್ನು ಮುಚ್ಚಿಸುವದಕ್ಕೆ ತನ್ನ ಪ್ರಧಾನರ ಸಂಗಡಲೂ ತನ್ನ ಪರಾಕ್ರಮಶಾಲಿಗಳ ಸಂಗಡಲೂ ಯೋಚಿಸಿ ಕೊಂಡನು. ಅವರು ಅವನಿಗೆ ಸಹಾಯಕೊಟ್ಟರು. ಆದದರಿಂದ ಅನೇಕ ಜನರು ಕೂಡಿಕೊಂಡು ನೀರು ಬುಗ್ಗೆಗಳನ್ನೂ ದೇಶದ ಮಧ್ಯದಲ್ಲಿ ಹರಿಯುವ ಹಳ್ಳ ವನ್ನೂ ಮುಚ್ಚಿಬಿಟ್ಟು--ಅಶ್ಶೂರಿನ ಅರಸುಗಳು ಬಂದು ಬಹಳ ನೀರು ದೊರಕಿಸಿಕೊಳ್ಳುವದು ಯಾಕೆ ಅಂದರು. ಇದಲ್ಲದೆ ಅವನು ತನ್ನನ್ನು ಬಲಪಡಿಸಿಕೊಂಡು ಕೆಡವಲ್ಪಟ್ಟ ಗೋಡೆಯನ್ನೆಲ್ಲಾ ಕಟ್ಟಿಸಿ ಗೋಪುರಗಳ ಪರ್ಯಂತರ ಅದನ್ನು ಎತ್ತರ ಮಾಡಿ ಅದರ ಹೊರ ಭಾಗದಲ್ಲಿ ಮತ್ತೊಂದು ಗೋಡೆಯನ್ನು ಕಟ್ಟಿಸಿ ದಾವೀ ದನ ಪಟ್ಟಣದಲ್ಲಿರುವ ಮಿಲ್ಲೋವನ್ನು ದುರಸ್ತುಮಾಡಿ ಈಟಿಗಳನ್ನೂ ಗುರಾಣಿಗಳನ್ನೂ ಬಹಳವಾಗಿ ಮಾಡಿಸಿ ದನು. ಜನರ ಮೇಲೆ ಯುದ್ಧದ ಸೈನ್ಯಗಳ ಅಧಿಪತಿ ಗಳನ್ನು ಇರಿಸಿ ಪಟ್ಟಣದ ಬಾಗಲ ಬೀದಿಯಲ್ಲಿ ತನ್ನ ಬಳಿಗೆ ಅವರನ್ನು ಕೂಡಿಸಿಕೊಂಡು ಸಮಾಧಾನವಾಗಿ ಅವರ ಸಂಗಡ ಮಾತನಾಡಿ-- ಬಲಗೊಳ್ಳಿರಿ; ಧೈರ್ಯ ವಾಗಿರ್ರಿ; ಅಶ್ಶೂರಿನ ಅರಸನ ನಿಮಿತ್ತವೂ ಅವನ ಸಂಗಡ ಕೂಡಿರುವ ಮಹಾಗುಂಪಿನ ನಿಮಿತ್ತವೂ ಭಯ ಪಡಬೇಡಿರಿ; ಹೆದರಬೇಡಿರಿ. ಯಾಕಂದರೆ ಅವನ ಸಂಗಡ ಇರುವವರಿಗಿಂತ ನಮ್ಮ ಸಂಗಡ ಅನೇಕರು ಇದ್ದಾರೆ. ಅವನ ಸಂಗಡ ಮಾಂಸದ ತೋಳು; ಆದರೆ ನಮ್ಮ ಸಂಗಡ ನಮಗೆ ಸಹಾಯ ಕೊಡುವದಕ್ಕೂ ನಮ್ಮ ಯುದ್ಧಗಳನ್ನು ನಡಿಸುವದಕ್ಕೂ ನಮ್ಮ ದೇವರಾದ ಕರ್ತನು ತಾನೇ ಇದ್ದಾನೆ ಎಂದು ಹೇಳಿದನು. ಆದ ದರಿಂದ ಜನರು ಯೆಹೂದದ ಅರಸನಾದ ಹಿಜ್ಕೀಯನ ಮಾತುಗಳಲ್ಲಿ ಆತುಕೊಂಡರು. ಇದರ ತರುವಾಯ ಅಶ್ಶೂರಿನ ಅರಸನಾದ ಸನ್ಹೇ ರೀಬನೂ ಅವನ ಸಂಗಡ ಕೂಡಿರುವ ಅವನ ಸಮಸ್ತ ಬಲವೂ ಲಾಕೀಷನ್ನು ಮುತ್ತಿಗೆ ಹಾಕಿದಾಗ ಅವನು ಯೆರೂಸಲೇಮಿನಲ್ಲಿ ಯೆಹೂದದ ಅರಸನಾದ ಹಿಜ್ಕೀ ಯನ ಬಳಿಗೂ ಯೆರೂಸಲೇಮಿನಲ್ಲಿರುವ ಸಮಸ್ತ ಯೆಹೂದದವರ ಬಳಿಗೂ ತನ್ನ ಸೇವಕರನ್ನು ಕಳು ಹಿಸಿ--ಅಶ್ಶೂರಿನ ಅರಸನಾದ ಸನ್ಹೇರೀಬನು ಹೀಗೆ ಹೇಳುತ್ತಾನೆ-- ನೀವು ಯೆರೂಸಲೇಮಿನ ಮುತ್ತಿಗೆ ಯಲ್ಲಿ ವಾಸವಾಗಿರುವ ಹಾಗೆ ಯಾವದರ ಮೇಲೆ ಭರವಸವುಳ್ಳವರಾಗಿದ್ದೀರಿ? ನಮ್ಮ ದೇವರಾದ ಕರ್ತನು ಅಶ್ಶೂರಿನ ಅರಸನ ಕೈಯಿಂದ ನಮ್ಮನ್ನು ಬಿಡಿಸುವನೆಂದು ಹಿಜ್ಕೀಯನು ಹೇಳಿ ಹಸಿವೆ ಯಿಂದಲೂ ದಾಹದಿಂದಲೂ ಸಾಯುವದಕ್ಕೆ ನಿಮ್ಮನ್ನು ಒಪ್ಪಿಸಿಕೊಡಲು ಪ್ರೇರೇಪಿಸುತ್ತಾನಲ್ಲವೇ? ಈ ಹಿಜ್ಕೀಯನು ಉನ್ನತ ಸ್ಥಳಗಳನ್ನೂ ಬಲಿಪೀಠಗಳನ್ನೂ ತೆಗೆದುಹಾಕಿ ಯೆಹೂದದವರಿಗೂ ಯೆರೂಸಲೇಮಿ ನವರಿಗೂ--ನೀವು ಒಂದೇ ಬಲಿಪೀಠದ ಮುಂದೆ ಅಡ್ಡಬಿದ್ದು ಅದರ ಮೇಲೆ ಧೂಪವನ್ನರ್ಪಿಸಬೇಕೆಂದು ಹೇಳಿದ್ದಾನಲ್ಲವೇ? ನಾನೂ ನನ್ನ ಪಿತೃಗಳೂ ದೇಶ ಗಳ ಜನರಿಗೆ ಮಾಡಿದ್ದನ್ನು ನೀವು ತಿಳಿಯಲಿಲ್ಲವೋ? ಆ ದೇಶಗಳ ಜನಾಂಗಗಳ ದೇವರುಗಳು ಆ ದೇಶ ಗಳನ್ನು ನನ್ನ ಕೈಯೊಳಗಿಂದ ಹೇಗಾದರೂ ಬಿಡಿಸಲು ಸಾಮರ್ಥ್ಯವುಳ್ಳವುಗಳಾಗಿದ್ದವೋ? ನನ್ನ ಪಿತೃಗಳು ನಿರ್ಮೂಲ ಮಾಡಿದ ಆ ಜನಾಂಗಗಳ ಸಮಸ್ತ ದೇವ ರುಗಳಲ್ಲಿ ನನ್ನ ಕೈಯೊಳಗಿಂದ ತನ್ನ ಜನರನ್ನು ಬಿಡಿಸಲು ಸಾಮರ್ಥ್ಯವುಳ್ಳದ್ದು ಯಾವದು? ಹಾಗಾದರೆ ನಿಮ್ಮ ದೇವರು ನನ್ನ ಕೈಯೊಳಗಿಂದ ನಿಮ್ಮನ್ನು ಹೇಗೆ ಬಿಡಿಸ ಬಹುದು? ಆದದರಿಂದ ಹಿಜ್ಕೀಯನು ನಿಮ್ಮನ್ನು ವಂಚಿಸಿ ಈ ಪ್ರಕಾರ ನಿಮ್ಮನ್ನು ಪ್ರೇರೇಪಿಸದಿರಲಿ; ಅವನ ಮಾತು ನಂಬಬೇಡಿರಿ. ಯಾಕಂದರೆ ನನ್ನ ಕೈಯೊಳಗಿಂದಲೂ ನನ್ನ ಪಿತೃಗಳ ಕೈಯೊಳಗಿಂದಲೂ ತಮ್ಮ ಜನರನ್ನು ಬಿಡಿಸಲು ಸಕಲ ಜನಾಂಗ, ರಾಜ್ಯಗಳ ದೇವರುಗಳಲ್ಲಿ ಸಾಮರ್ಥ್ಯವುಳ್ಳ ದೇವರು ಒಂದೂ ಇಲ್ಲ. ನನ್ನ ಕೈಯೊಳಗಿಂದ ನಿಮ್ಮನ್ನು ಬಿಡಿಸಲು ನಿಮ್ಮ ದೇವರು ಎಷ್ಟರವನು ಅನ್ನುತ್ತಾನೆ. ಹೀಗೆ ಅವನ ಸೇವಕರು ಇನ್ನೂ ಕರ್ತನಾದ ದೇವರಿಗೆ ವಿರೋಧ ವಾಗಿಯೂ ಆತನ ಸೇವಕನಾದ ಹೀಜ್ಕೀಯನಿಗೆ ವಿರೋ ಧವಾಗಿಯೂ ಮಾತನಾಡಿದರು. ಇದಲ್ಲದೆ ಅವನು ಇಸ್ರಾಯೇಲಿನ ದೇವರಾದ ಕರ್ತನನ್ನು ನಿಂದಿಸುವ ದಕ್ಕೂ ಆತನಿಗೆ ವಿರೋಧವಾಗಿ ಮಾತನಾಡುವದಕ್ಕೂ ಪತ್ರಗಳನ್ನು ಬರೆದನು. ಏನಂದರೆ--ಇತರ ದೇಶಗಳ ಜನಾಂಗಗಳ ದೇವರುಗಳು ತಮ್ಮ ಜನರನ್ನು ನನ್ನ ಕೈಯೊಳಗಿಂದ ಹೇಗೆ ಬಿಡಿಸಲಿಲ್ಲವೋ ಹಾಗೆಯೇ ಹಿಜ್ಕೀಯನ ದೇವರು ತನ್ನ ಜನರನ್ನು ನನ್ನ ಕೈಯೊಳಗಿಂದ ಬಿಡಿಸಲಾರನು. ಇದಲ್ಲದೆ ಅವರು ಪಟ್ಟಣ ವನ್ನು ಹಿಡಿಯುವ ಹಾಗೆ ಗೋಡೆಯ ಮೇಲೆ ಇರುವ ಯೆರೂಸಲೇಮಿನಲ್ಲಿರುವ ಜನರನ್ನು ಭಯಪಡಿಸುವ ದಕ್ಕೂ ಅವರನ್ನು ಕಳವಳಪಡಿಸುವದಕ್ಕೂ ಯೆಹೂದ್ಯರ ಭಾಷೆಯಲ್ಲಿ ಗಟ್ಟಿಯಾದ ಶಬ್ದದಿಂದ ಕೂಗಿ ಹೇಳಿ ದರು. ಮನುಷ್ಯರ ಕೈ ಕೆಲಸವಾದ ಭೂಮಿಯ ಜನಗಳ ದೇವರುಗಳಿಗೆ ವಿರೋಧವಾಗಿ ಮಾತನಾಡಿದ ಹಾಗೆ ಯೆರೂಸಲೇಮಿನ ದೇವರಿಗೆ ವಿರೋಧವಾಗಿ ಮಾತನಾಡಿದರು. ಇದರ ನಿಮಿತ್ತ ಅರಸನಾದ ಹಿಜ್ಕೀಯನೂ ಆಮೋ ಚನ ಮಗನಾಗಿರುವ ಪ್ರವಾದಿಯಾದ ಯೆಶಾಯನೂ ಪ್ರಾರ್ಥನೆಮಾಡಿ ಪರಲೋಕಕ್ಕೆ ಕೂಗಿದರು. ಆಗ ಕರ್ತನು ತನ್ನ ದೂತನನ್ನು ಕಳುಹಿಸಿದನು; ಅವನು ಅಶ್ಶೂರಿನ ಅರಸನ ದಂಡಿನಲ್ಲಿರುವ ಸಮಸ್ತ ಪರಾ ಕ್ರಮಶಾಲಿಗಳನ್ನೂ ನಾಯಕರನ್ನೂ ಅಧಿಪತಿಗಳನ್ನೂ ನಿರ್ಮೂಲಮಾಡಿದನು. ಹೀಗೆ ಇವನು ಲಜ್ಜಾ ಮುಖದಿಂದ ತನ್ನ ದೇಶಕ್ಕೆ ತಿರುಗಿದನು. ಅವನು ತನ್ನ ದೇವರ ಮನೆಯಲ್ಲಿ ಪ್ರವೇಶಿಸಿದಾಗ ಅವನ ಹೊಟ್ಟೆಯಲ್ಲಿ ಹುಟ್ಟಿದವರು ಅವನನ್ನು ಕತ್ತಿಯಿಂದ ಕೊಂದುಹಾಕಿದರು. ಹೀಗೆಯೇ ಕರ್ತನು ಹಿಜ್ಕೀಯ ನನ್ನೂ ಯೆರೂಸಲೇಮಿನ ನಿವಾಸಿಗಳನ್ನೂ ಅಶ್ಶೂರಿನ ಅರಸನಾದ ಸನ್ಹೇರೀಬನ ಕೈಯೊಳಗಿಂದಲೂ ಸಮಸ್ತರ ಕೈಯೊಳಗಿಂದಲೂ ರಕ್ಷಿಸಿ ಸಮಸ್ತ ಕಡೆಯಿಂದ ಅವ ರನ್ನು ನಡಿಸಿದನು. ಅನೇಕರು ಯೆರೂಸಲೇಮಿ ನಲ್ಲಿರುವ ಕರ್ತನಿಗೆ ಅರ್ಪಣೆಗಳನ್ನೂ ಯೆಹೂದದ ಅರಸನಾದ ಹಿಜ್ಕೀಯನಿಗೆ ವಸ್ತುಗಳನ್ನೂ ತಂದರು. ಅಂದಿನಿಂದ ಅವನು ಸಮಸ್ತ ಜನಾಂಗಗಳ ಸಮ್ಮುಖ ದಲ್ಲಿ ಉನ್ನತಕ್ಕೇರಿಸಲ್ಪಟ್ಟನು. ಆ ದಿನಗಳಲ್ಲಿ ಹಿಜ್ಕೀಯನು ಸಾಯುವ ರೋಗ ದಲ್ಲಿದ್ದದ್ದರಿಂದ ಅವನು ಕರ್ತನಿಗೆ ಪ್ರಾರ್ಥನೆ ಮಾಡಿ ದನು. ಆಗ ಆತನು ಅವನ ಸಂಗಡ ಮಾತನಾಡಿ ಅವನಿಗೆ ಗುರುತನ್ನು ಕೊಟ್ಟನು. ಆದರೆ ಹಿಜ್ಕೀ ಯನು ತನಗೆ ಆದ ಉಪಕಾರಕ್ಕೆ ತಕ್ಕಂತೆ ನಡೆಯದೆ ಇದ್ದನು; ಅವನ ಹೃದಯದಲ್ಲಿ ಅಹಂಕಾರ ತುಂಬಿತ್ತು; ಆದದರಿಂದ ಅವನ ಮೇಲೆಯೂ ಯೆಹೂದ ಯೆರೂ ಸಲೇಮಿನ ಮೇಲೆಯೂ ರೌದ್ರ ಉಂಟಾಯಿತು. ಆದಾಗ್ಯೂ ಹಿಜ್ಕೀಯನೂ ಯೆರೂಸಲೇಮಿನ ನಿವಾಸಿಗಳೂ ತಮ್ಮ ಹೃದಯದ ಗರ್ವದ ವಿಷಯ ತಮ್ಮನ್ನು ತಾವು ತಗ್ಗಿಸಿಕೊಂಡದ್ದರಿಂದ ಹಿಜ್ಕೀಯನ ದಿವಸಗಳಲ್ಲಿ ಕರ್ತನ ರೌದ್ರವು ಅವರ ಮೇಲೆ ಬರಲಿಲ್ಲ. ಹಿಜ್ಕೀಯನಿಗೆ ಅತ್ಯಧಿಕವಾದ ಐಶ್ವರ್ಯವೂ ಘನವೂ ಇದ್ದದ್ದರಿಂದ ಅವನು ಬೆಳ್ಳಿಬಂಗಾರ ರತ್ನ ಸುಗಂಧದ್ರವ್ಯ ಗುರಾಣಿಗಳಿಗೋಸ್ಕರವೂ ಎಲ್ಲಾ ವಿಧದ ಮನೋಹರವಾದ ಆಭರಣಗಳಿಗೋಸ್ಕರವೂ ತನಗೆ ಬೊಕ್ಕಸಗಳನ್ನು ಕಟ್ಟಿಸಿದನು. ಇದಲ್ಲದೆ ಧಾನ್ಯದ ಹುಟ್ಟುವಳಿಯೂ ದ್ರಾಕ್ಷಾರಸವೂ ಎಣ್ಣೆಯೂ ಇವುಗಳ ನಿಮಿತ್ತವಾಗಿ ಉಗ್ರಾಣಗಳನ್ನೂ ಸಕಲವಿಧ ವಾದ ಪಶುಗಳ ನಿಮಿತ್ತವಾಗಿ ಕೊಟ್ಟಿಗೆಗಳನ್ನೂ ಕುರಿ ಮಂದೆಯ ನಿಮಿತ್ತವಾಗಿ ಹಟ್ಟಿಗಳನ್ನೂ ಮಾಡಿದನು. ಇದಲ್ಲದೆ ತನಗೆ ಪಟ್ಟಣಗಳನ್ನೂ ದನಕುರಿಗಳ ಸ್ವಾಸ್ತ್ಯವನ್ನೂ ಬಹಳವಾಗಿ ಮಾಡಿಕೊಂಡನು. ದೇವರು ಅವನಿಗೆ ಬಹು ಹೆಚ್ಚಾಗಿ ಸಂಪತ್ತನ್ನು ಕೊಟ್ಟನು. ಈ ಹಿಜ್ಕೀಯನು ಗೀಹೋನೆಂಬ ಮೇಲಿನ ಕಾಲುವೆಯನ್ನು ಮುಚ್ಚಿಬಿಟ್ಟು ಅದನ್ನು ದಾವೀದನ ಪಟ್ಟಣದಲ್ಲಿ ಪಶ್ಚಿಮ ದಿಕ್ಕಿಗೆ ಕಾಲುವೆಯಾಗಿ ಬರಮಾಡಿದನು. ಹೀಗೆಯೇ ಹಿಜ್ಕೀಯನು ತನ್ನ ಸಮಸ್ತ ಕ್ರಿಯೆಗಳಲ್ಲಿ ವೃದ್ಧಿಹೊಂದಿ ದನು. ಆದರೆ ದೇಶದಲ್ಲಿ ಅದ್ಭುತಕ್ಕೋಸ್ಕರ ವಿಚಾ ರಣೆ ಮಾಡಲು ಬಾಬೆಲಿನ ಅಧಿಪತಿಗಳಿಂದ ತನ್ನ ಬಳಿಗೆ ಕಳುಹಿಸಲ್ಪಟ್ಟ ರಾಯಭಾರಿಗಳ ಕಾರ್ಯದಲ್ಲಿ ಅವನು ತನ್ನ ಹೃದಯದೊಳಗಿದ್ದದ್ದನ್ನೆಲ್ಲಾ ತಿಳುಕೊಳ್ಳುವ ಹಾಗೆ ಅವನನ್ನು ಶೋಧಿಸುವದಕ್ಕೆ ದೇವರು ಅವನನ್ನು ಬಿಟ್ಟುಬಿಟ್ಟನು. ಹಿಜ್ಕೀಯನ ಮಿಕ್ಕಾದ ಕಾರ್ಯಗಳೂ ಅವನ ಒಳ್ಳೆಯತನವೂ ಇಗೋ, ಅವು ಆಮೋಚನ ಮಗನೂ ಪ್ರವಾದಿಯೂ ಆದ ಯೆಶಾಯನ ದರ್ಶನದ ಪುಸ್ತಕ ದಲ್ಲಿಯೂ ಯೆಹೂದ ಇಸ್ರಾಯೇಲ್ ಅರಸುಗಳ ಪುಸ್ತಕದಲ್ಲಿಯೂ ಬರೆಯಲ್ಪಟ್ಟಿವೆ.ಹಿಜ್ಕೀಯನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವರು ದಾವೀದನ ಮಕ್ಕಳ ಸಮಾಧಿಗಳಲ್ಲಿರುವ ಶ್ರೇಷ್ಠವಾದದರಲ್ಲಿ ಅವ ನನ್ನು ಹೂಣಿಟ್ಟರು. ಅವನ ಮರಣದಲ್ಲಿ ಸಮಸ್ತ ಯೆಹೂದದವರೂ ಯೆರೂಸಲೇಮಿನ ನಿವಾಸಿಗಳೂ ಅವನನ್ನು ಘನಪಡಿಸಿದರು. ಅವನ ಮಗನಾದ ಮನ ಸ್ಸೆಯು ಅವನಿಗೆ ಬದಲಾಗಿ ಆಳಿದನು. ಹಿಜ್ಕೀಯನು ತನ್ನ ಪಿತೃಗಳ ಸಂಗಡ ನಿದ್ರಿಸಿದನು; ಅವರು ದಾವೀದನ ಮಕ್ಕಳ ಸಮಾಧಿಗಳಲ್ಲಿರುವ ಶ್ರೇಷ್ಠವಾದದರಲ್ಲಿ ಅವ ನನ್ನು ಹೂಣಿಟ್ಟರು. ಅವನ ಮರಣದಲ್ಲಿ ಸಮಸ್ತ ಯೆಹೂದದವರೂ ಯೆರೂಸಲೇಮಿನ ನಿವಾಸಿಗಳೂ ಅವನನ್ನು ಘನಪಡಿಸಿದರು. ಅವನ ಮಗನಾದ ಮನ ಸ್ಸೆಯು ಅವನಿಗೆ ಬದಲಾಗಿ ಆಳಿದನು.