Psalms · chapter 80 · verse 6
Psalm 80:6 in Kannada
ನಮ್ಮ ನೆರೆಯವರಿಗೆ ನೀನು ನಮ್ಮನ್ನು ವಿವಾದಕ್ಕೆ ಕಾರಣ ಮಾಡುತ್ತೀ; ನಮ್ಮ ಶತ್ರುಗಳು ತಮ್ಮಲ್ಲಿ ತಾವೇ ನಗುತ್ತಾರೆ.
Namma nereyavarige neenu nammannu vivaadakke kaarana maaduttee; namma shatrugalu tammalli taave naguttaare.
Psalm 80:6 in English
- King James Version (KJV)
- Thou makest us a strife unto our neighbours: and our enemies laugh among themselves.
- World English Bible (WEB)
- You make us a source of contention to our neighbors. Our enemies laugh among themselves.
- American Standard Version (ASV)
- Thou makest us a strife unto our neighbors; And our enemies laugh among themselves.
- Bible in Basic English (BBE)
- You make us a cause of war among our neighbours; our haters are laughing at us among themselves.
- Darby Translation (DBY)
- Thou hast made us a strife unto our neighbours, and our enemies mock among themselves.
- Webster's Bible (WBS)
- Thou makest us a strife to our neighbors: and our enemies laugh among themselves.
- Young's Literal Translation (YLT)
- Thou makest us a strife to our neighbours, And our enemies mock at it.
Read in context
- 4ಸೈನ್ಯಗಳ ದೇವರಾದ ಓ ಕರ್ತನೇ, ಎಷ್ಟರವರೆಗೆ ನಿನ್ನ ಜನರ ಪ್ರಾರ್ಥನೆಗೆ ವಿರೋಧವಾಗಿ ಕೋಪ ಗೊಳ್ಳುತ್ತೀ?
- 5ಕಣ್ಣೀರಿನ ರೊಟ್ಟಿಯನ್ನು ಅವರಿಗೆ ತಿನ್ನಿಸಿ, ದೊಡ್ಡ ಅಳತೆಯಿಂದ ಕಣ್ಣೀರನ್ನು ಕುಡಿಯಲು ಕೊಡುತ್ತೀ.
- 6ನಮ್ಮ ನೆರೆಯವರಿಗೆ ನೀನು ನಮ್ಮನ್ನು ವಿವಾದಕ್ಕೆ ಕಾರಣ ಮಾಡುತ್ತೀ; ನಮ್ಮ ಶತ್ರುಗಳು ತಮ್ಮಲ್ಲಿ ತಾವೇ ನಗುತ್ತಾರೆ.
- 7ಸೈನ್ಯಗಳ ಓ ದೇವರೇ, ನೀನು ನಮ್ಮನ್ನು ಮತ್ತೆ ತಿರಿಗಿಸಿ ನಿನ್ನ ಮುಖವನ್ನು ಪ್ರಕಾಶಿಸ ಮಾಡು; ಆಗ ನಾವು ರಕ್ಷಿಸಲ್ಪಡುವೆವು.
- 8ನೀನು ದ್ರಾಕ್ಷೇಗಿಡವನ್ನು ಐಗುಪ್ತದಿಂದ ತಂದಿ; ಜನಾಂಗಗಳನ್ನು ಹೊರಡಿಸಿ ಅದನ್ನು ನೆಟ್ಟಿ.
Cross references
- Psalm 79:4 ಕೀರ್ತನೆಗಳು 79:4ನಮ್ಮ ನೆರೆಯವರಿಗೆ ನಿಂದೆಯೂ ನಮ್ಮ ಸುತ್ತಲಿರುವವರಿಗೆ ಗೇಲಿಯೂ ಹಾಸ್ಯವೂ ಆಗಿದ್ದೇವೆ.
- Ezekiel 36:4 ಯೆಹೆಜ್ಕೇಲನು 36:4ಆದ ದರಿಂದ ಇಸ್ರಾಯೇಲ್ ಪರ್ವತಗಳೇ, ನೀವು ದೇವ ರಾದ ಕರ್ತನ ವಾಕ್ಯವನ್ನು ಕೇಳಿರಿ--ಹೀಗೆ ಪರ್ವತ ಗಳಿಗೂ ಬೆಟ್ಟಗಳಿಗೂ ನದಿಗಳಿಗೂ ಕಣಿವೆಗಳಿಗೂ ಹಾಳಾದ ಒಣಭೂಮಿಗೂ ಸುತ್ತಣ ಅನ್ಯಜನಾಂಗ ಗಳಲ್ಲಿ ಉಳಿದವರು ಕೊಳ್ಳೆಹೊಡೆದು ತೊರೆದು ಬಿಡುವ ಹಾಳು ಪಟ್ಟಣಗಳಿಗೂ ದೇವರಾದ ಕರ್ತನು ಹೇಳು ತ್ತಾನೆ.
- Isaiah 36:8 ಯೆಶಾಯ 36:8ಹಾಗಾದರೆ ಈಗ ನನ್ನ ಯಜಮಾನನಾದ ಅಶ್ಶೂ ರಿನ ಅರಸನಿಗೆ ಹೊಣೆಗಾರರನ್ನು ಕೊಡು ಎಂದು ಬೇಡಿಕೊಳ್ಳುತ್ತೇನೆ. ಆಗ ನೀನು ಅವುಗಳ ಮೇಲೆ ಸವಾರಿಮಾಡುವದಕ್ಕೆ ಜನರನ್ನು ಕೊಡುವದಕ್ಕಾದರೆ ನಿನಗೆ ಎರಡು ಸಾವಿರ ಕುದುರೆಗಳನ್ನು ನಾನು ಕೊಡು ವೆನು.
- Psalm 44:13–14 ಕೀರ್ತನೆಗಳು 44:13–14ನಮ್ಮ ನೆರೆಯವರಿಗೆ ನಮ್ಮನ್ನು ನಿಂದೆಗೂ ಸುತ್ತಲಿರುವವರಿಗೆ ಗೇಲಿಯಾಗಿಯೂ ಹಾಸ್ಯವಾಗಿಯೂ ನಮ್ಮನ್ನು ಇಡುತ್ತೀ. ಅನ್ಯಜನಾಂಗಗಳಲ್ಲಿ ಗಾದೆಯಾಗಿಯೂ ಪ್ರಜೆಗಳಲ್ಲಿ ತಲೆಯಾಡಿಸುವಂತೆ ನಮ್ಮನ್ನು ಇಡುತ್ತೀ.
- Isaiah 36:12–20 ಯೆಶಾಯ 36:12–20ಆದರೆ ರಬ್ಷಾಕೆಯು--ನನ್ನ ಯಜ ಮಾನನು ನಿಮ್ಮ ಸಂಗಡವಾಗಲಿ ನಿಮ್ಮ ಯಜಮಾ ನನ ಸಂಗಡವಾಗಲಿ ಈ ಮಾತುಗಳನ್ನು ಹೇಳುವ ದಕ್ಕೆ ಕಳುಹಿಸಿದನೋ? ತಮ್ಮ ಸ್ವಂತ ಮಲವನ್ನು ತಿಂದು ಸ್ವಂತ ಮೂತ್ರವನ್ನು ಕುಡಿಯಬೇಕೆಂದು ಈ ಗೋಡೆಯ ಮೇಲೆ ಕೂತಿರುವ ಮನುಷ್ಯರ ಸಂಗಡ ಮಾತನಾಡಲು ಅವನು ನನ್ನನ್ನು ಕಳುಹಿಸಲಿಲ್ಲವೋ ಅಂದನು. ಆಗ ರಬ್ಷಾಕನು ನಿಂತುಕೊಂಡು ಯೆಹೂ ದ್ಯರ ಭಾಷೆಯಲ್ಲಿ ಗಟ್ಟಿಯಾದ ಶಬ್ದದಿಂದ ಕೂಗಿ ಹೇಳಿದ್ದೇನಂದರೆ--ಅಶ್ಶೂರಿನ ಅರಸನಾದ ಮಹಾ ರಾಜನ ಮಾತುಗಳನ್ನು ಕೇಳಿರಿ. ಇವನು ನಿಮಗೆ--ಹಿಜ್ಕೀಯನು ನಿಮಗೆ ಮೋಸಮಾಡದಿರಲಿ, ಅವನು ನಿಮ್ಮನ್ನು ಬಿಡಿಸಲು ಶಕ್ತನಲ್ಲ. ಇಲ್ಲವೇ ಕರ್ತನು ನಿಶ್ಚಯವಾಗಿ ನಮ್ಮನ್ನು ತಪ್ಪಿಸುವನು; ಈ ಪಟ್ಟಣವು ಅಶ್ಶೂರದ ಅರಸನ ವಶವಾಗುವದಿಲ್ಲ ಎಂದು ಹೇಳಿ ನೀವು ಕರ್ತನಲ್ಲಿ ಭರವಸೆ ಇಡುವಂತೆ ಮಾಡಿದರೂ; ಹಿಜ್ಕೀಯನ ಮಾತುಗಳಿಗೆ ಕಿವಿಗೊಡಬೇಡಿರಿ; ಅಶ್ಶೂರದ ಅರಸನು ಹೇಳುವದೇನಂದರೆ, ನನ್ನೊಡನೆ ಒಡಂಬಡಿಕೆ ಮಾಡಿಕೊಂಡು ನನ್ನ ಬಳಿಗೆ ಹೊರಗೆ ಬನ್ನಿರಿ, ನಿಮ್ಮಲ್ಲಿ ಪ್ರತಿಯೊಬ್ಬನು ತನ್ನ ತನ್ನ ಅಂಜೂರದ ಮರ, ದ್ರಾಕ್ಷಾಲತೆ ಇವುಗಳ ಫಲಗಳನ್ನು ತಿಂದು ತನ್ನ ತನ್ನ ಬಾವಿಯ ನೀರನ್ನು ಕುಡಿಯುವಿರಿ. ಸ್ವಲ್ಪ ಕಾಲವಾದ ನಂತರ ನಾನು ಬಂದು ನಿಮ್ಮನ್ನು ಧಾನ್ಯ, ದ್ರಾಕ್ಷಾರಸ, ಆಹಾರ, ದ್ರಾಕ್ಷೇತೋಟ ಇವು ಸಮೃದ್ಧಿ ಯಾಗಿರುವ ನಿಮ್ಮ ದೇಶಕ್ಕೆ ಸಮಾನವಾಗಿರುವ ಇನ್ನೊಂದು ದೇಶಕ್ಕೆ ಕರಕೊಂಡು ಹೋಗುವೆನು. ಕರ್ತನು ನಮ್ಮನ್ನು ತಪ್ಪಿಸುವನು ಎಂದು ಹೇಳಿ ಹಿಜ್ಕೀಯನು ನಿಮ್ಮನ್ನು ಪ್ರೇರೇಪಿಸದಂತೆ ಎಚ್ಚರಿಕೆ ಯಾಗಿರ್ರಿ. ಯಾವ ಜನಾಂಗದ ದೇವರುಗಳಾದರೂ ತನ್ನ ದೇಶಗಳನ್ನು ಅಶ್ಶೂರದ ಅರಸನ ಕೈಯಿಂದ ಬಿಡಿಸಿದವೋ? ಹಮಾತ್, ಅರ್ಪಾದ್, ಸೆಫರ್ವ ಯಿಮ್ನ ದೇವರುಗಳು ಎಲ್ಲಿ? ಅವು ಸಮಾರ್ಯವ ನ್ನಾದರೂ ನನ್ನ ಕೈಯಿಂದ ತಪ್ಪಿಸಿದವೋ? ಈ ದೇಶಗಳ ಎಲ್ಲಾ ದೇವರುಗಳಲ್ಲಿ ಯಾರೂ ತಮ್ಮ ದೇಶವನ್ನು ನನ್ನ ಕೈಯಿಂದ ಬಿಡಿಸಲಾರದ ಮೇಲೆ ಕರ್ತನು ಯೆರೂಸಲೇಮನ್ನು ನನ್ನ ಕೈಯಿಂದ ಬಿಡಿಸು ವನೋ ಅನ್ನುತ್ತಾನೆ ಎಂದು ಹೇಳಿದನು.
- Jeremiah 15:10 ಯೆರೆಮೀಯ 15:10ನನ್ನ ತಾಯಿಯೇ, ನನಗೆ ಅಯ್ಯೋ, ನೀನು ನನ್ನನ್ನು ಭೂಮಿಯ ಮೇಲೆಲ್ಲಾ ವ್ಯಾಜ್ಯಗಾರನಾಗಿಯೂ ತರ್ಕದವನಾಗಿಯೂ ಹೆತ್ತಿದ್ದೀಯಲ್ಲಾ? ನಾನು ಬಡ್ಡಿಗೆ ಸಾಲ ಕೊಡಲಿಲ್ಲ ಇಲ್ಲವೆ ಮನುಷ್ಯರು ಬಡ್ಡಿಗಾಗಿ ನನಗೆ ಸಾಲ ಕೊಡಲಿಲ್ಲ. ಆದಾಗ್ಯೂ ಅವರೆಲ್ಲರು ನನ್ನನ್ನು ಶಪಿಸುತ್ತಾರೆ.
- Judges 16:25 ನ್ಯಾಯಸ್ಥಾಪಕರು 16:25ತರುವಾಯ ಅವರ ಹೃದಯಗಳು ಸಂಭ್ರಮವಾಗಿ ರುವಾಗ--ನಮ್ಮ ಮುಂದೆ ವಿನೋದ ಮಾಡುವ ಹಾಗೆ ಸಂಸೋನನನ್ನು ಕರಕೊಂಡು ಬನ್ನಿರಿ ಅಂದರು. ಅವರು ಸಂಸೋನನನ್ನು ಸೆರೆಮನೆಯಿಂದ ಕರತಂದಾಗ ಅವನು ಅವರ ಮುಂದೆ ವಿನೋದ ಮಾಡಿದನು; ಅವರು ಅವನನ್ನು ಸ್ತಂಭಗಳ ನಡುವೆ ನಿಲ್ಲಿಸಿದ್ದರು.
- Revelation 11:10 ಪ್ರಕಟನೆ 11:10ಈ ಇಬ್ಬರು ಪ್ರವಾದಿಗಳು ಭೂಮಿಯ ಮೇಲೆ ವಾಸ ಮಾಡುವವರನ್ನು ಯಾತನೆ ಪಡಿಸಿದ್ದರಿಂದ ಇವರ ವಿಷಯದಲ್ಲಿ ಭೂನಿವಾಸಿಗಳು ಸಂತೋಷಿಸಿ ಸಂಭ್ರಮಗೊಂಡು ಒಬ್ಬರಿಗೊಬ್ಬರು ದಾನಗಳನ್ನು ಕಳುಹಿಸುವರು ಎಂದು ಹೇಳಿದನು.
- Isaiah 37:23 ಯೆಶಾಯ 37:23ನೀನು ಯಾರನ್ನು ನಿಂದಿಸಿ ದೂಷಿಸಿದ್ದೀ? ಯಾರಿಗೆ ವಿರೋಧವಾಗಿ ನಿನ್ನ ಸ್ವರವೆತ್ತಿ ನೀನು ಸೊಕ್ಕಿನಿಂದ ನೋಡಿದ್ದು ಯಾರನ್ನು? ಇಸ್ರಾ ಯೇಲಿನ ಪರಿಶುದ್ಧನಿಗಲ್ಲವೋ?
- Jeremiah 48:27 ಯೆರೆಮೀಯ 48:27ನಿನ್ನೊಳಗೆ ಇಸ್ರಾಯೇಲೂ ಹಾಸ್ಯಕಾಗಿರಲಿಲ್ಲವೋ? ಅದು ಕಳ್ಳರೊಳಗೆ ಸಿಕ್ಕಿತೇನೋ, ನೀನು ಅವರ ವಿಷಯ ಯಾವಾಗ ಮಾತನಾಡಿದಂದಿನಿಂದ ಸಂತೋಷಕ್ಕಾಗಿ ತಲೆ ಅಲ್ಲಾಡಿಸಿದಿಯಲ್ಲಾ.