Skip to content
ThuthiThuthiThuthi
Psalms · chapter 83 of 150 · 18 verses

Psalm 83 in Kannada

ಕೀರ್ತನೆಗಳು 83

  1. ಓ ದೇವರೇ, ಮೌನವಾಗಿರಬೇಡ; ಓ ದೇವರೇ, ಮೌನವಾಗಿರಬೇಡ; ಸುಮ್ಮ ನಿರಬೇಡ.

    A Song [or] Psalm of Asaph. Keep not thou silence, O God: hold not thy peace, and be not still, O God.

  2. ಇಗೋ, ನಿನ್ನ ಶತ್ರುಗಳು ಗದ್ದಲ ಮಾಡು ತ್ತಾರೆ; ನಿನ್ನ ಹಗೆಯವರು ತಲೆ ಎತ್ತುತ್ತಾರೆ.

    For, lo, thine enemies make a tumult: and they that hate thee have lifted up the head.

  3. ನಿನ್ನ ಜನರಿಗೆ ವಿರೋಧವಾಗಿ ಉಪಾಯದ ಯುಕ್ತಿಯನ್ನು ಕಲ್ಪಿಸುತ್ತಾರೆ. ನೀನು ಅಡಗಿಸಿಟ್ಟವರಿಗೆ ವಿರೋಧಿಗಳು ಆಲೋಚಿಸಿಕೊಳ್ಳುತ್ತಾರೆ.

    They have taken crafty counsel against thy people, and consulted against thy hidden ones.

  4. ಅವರು--ಬನ್ನಿರಿ, ಅವ ರನ್ನು ಜನಾಂಗವಾಗಿರದ ಹಾಗೆ ನಾವು ಅವರನ್ನು ನಿರ್ಮೂಲ ಮಾಡೋಣ; ಇಸ್ರಾಯೇಲಿನ ಹೆಸರು ಇನ್ನು ಜ್ಞಾಪಕಕ್ಕೆ ಬಾರದಿರಲಿ ಅನ್ನುತ್ತಾರೆ.

    They have said, Come, and let us cut them off from [being] a nation; that the name of Israel may be no more in remembrance.

  5. ಅವರು ಕೂಡ ಏಕಮನಸ್ಸಾಗಿ ಆಲೋಚನೆ ಮಾಡಿಕೊಂಡಿ ದ್ದಾರೆ; ನಿನಗೆ ವಿರೋಧವಾಗಿ ಒಡಂಬಟ್ಟಿದ್ದಾರೆ.

    For they have consulted together with one consent: they are confederate against thee:

  6. ಎದೋಮ್ಯರ ಮತ್ತು ಇಷ್ಮಾಯೇಲ್ಯರ ಗುಡಾರಗಳೂ ಮೋವಾಬೂ ಹಗ್ರೀಯರೂ

    The tabernacles of Edom, and the Ishmaelites; of Moab, and the Hagarenes;

  7. ಗೆಬಾಲ್ಯರೂ ಅಮ್ಮೋನಿ ಯರೂ ಮಾಲೇಕ್ಯರೂ ತೂರಿನ ನಿವಾಸಿಗಳು ಸಹಿತವಾಗಿ ಫಿಲಿಷ್ಟಿಯರದೇ;

    Gebal, and Ammon, and Amalek; the Philistines with the inhabitants of Tyre;

  8. ಅಶ್ಶೂರ್ಯರೂ ಸಹ ಅವ ರಲ್ಲಿ ಕೂಡಿಕೊಂಡು; ಅವರು ಲೋಟನ ಮಕ್ಕಳಿಗೆ ಸಹಾಯ ಮಾಡಿದ್ದಾರೆ ಸೆಲಾ.

    Assur also is joined with them: they have holpen the children of Lot. Selah.

  9. ಮಿದ್ಯಾನಿಗೂ ಸೀಸೆರನಿಗೂ ಯಾಬೀನನಿಗೂ ಕೀಷೋನ್‌ ಹಳ್ಳದಲ್ಲಿ ಮಾಡಿದ ಹಾಗೆ ಅವರಿಗೆ ಮಾಡು.

    Do unto them as [unto] the Midianites; as [to] Sisera, as [to] Jabin, at the brook of Kison:

  10. ಇವರು ಎಂದೋರಿನಲ್ಲಿ ನಾಶವಾಗಿ ಭೂಮಿಗೆ ಗೊಬ್ಬರವಾದರು.

    [Which] perished at Endor: they became [as] dung for the earth.

  11. ಅವರನ್ನೂ ಅವರ ಅಧಿಪತಿಗಳನ್ನೂ ಓರೇಬ್‌ ಜೇಬ್‌ ಹಾಗೆಯೂ ಅವರ ಪ್ರಮುಖರೆಲ್ಲರನ್ನು ಜೇಬಹ ಚಲ್ಮುನ್ನರ ಹಾಗೆಯೂ ಮಾಡು.

    Make their nobles like Oreb, and like Zeeb: yea, all their princes as Zebah, and as Zalmunna:

  12. ಅವರು--ನಾವು ದೇವರ ನಿವಾಸಗಳನ್ನು ಸ್ವತಂತ್ರಿಸಿಕೊಳ್ಳೋಣ ಅನ್ನುತ್ತಾರೆ.

    Who said, Let us take to ourselves the houses of God in possession.

  13. ಓ ನನ್ನ ದೇವರೇ, ಅವರನ್ನು ಚಕ್ರದ ಹಾಗೆಯೂ ಗಾಳಿಯ ಮುಂದಿರುವ ಕಸದ ಹಾಗೆಯೂ ಮಾಡು.

    O my God, make them like a wheel; as the stubble before the wind.

  14. ಕಾಡನ್ನು ಸುಡುವ ಬೆಂಕಿಯ ಹಾಗೆಯೂ ಬೆಟ್ಟಗಳನ್ನು ದಹಿಸುವ ಜ್ವಾಲೆಯ ಹಾಗೆಯೂ

    As the fire burneth a wood, and as the flame setteth the mountains on fire;

  15. ನಿನ್ನ ಬಿರುಗಾಳಿಯಿಂದ ಅವರನ್ನು ಹಿಂಸಿಸಿ ನಿನ್ನ ಸುಳಿ ಗಾಳಿಯಿಂದ ಅವರನ್ನು ತಲ್ಲಣ ಪಡಿಸು.

    So persecute them with thy tempest, and make them afraid with thy storm.

  16. ಓ ಕರ್ತನೇ, ನಿನ್ನ ನಾಮವನ್ನು ಅವರು ಹುಡುಕುವ ಹಾಗೆ ಅವರ ಮುಖಗಳನ್ನು ನಾಚಿಕೆ ಯಿಂದ ತುಂಬಿಸು.

    Fill their faces with shame; that they may seek thy name, O LORD.

  17. ಅವರು ನಾಚಿಕೆಪಟ್ಟು ಎಂದೆಂ ದಿಗೂ ಕಳವಳಗೊಳ್ಳಲಿ; ಹೌದು, ಅವರು ಲಜ್ಜೆ ಯಿಂದ ನಾಶವಾಗಲಿ.ನೀನು ಮಾತ್ರ ಯೆಹೋವ ನೆಂಬ ಹೆಸರುಳ್ಳ ನೀನು ಸಮಸ್ತ ಭೂಮಿಯ ಮೇಲೆ ಮಹೋನ್ನತನಾಗಿದ್ದೀ ಎಂದು ತಿಳುಕೊಳ್ಳಲಿ.

    Let them be confounded and troubled for ever; yea, let them be put to shame, and perish:

  18. ನೀನು ಮಾತ್ರ ಯೆಹೋವ ನೆಂಬ ಹೆಸರುಳ್ಳ ನೀನು ಸಮಸ್ತ ಭೂಮಿಯ ಮೇಲೆ ಮಹೋನ್ನತನಾಗಿದ್ದೀ ಎಂದು ತಿಳುಕೊಳ್ಳಲಿ.

    That [men] may know that thou, whose name alone [is] JEHOVAH, [art] the most high over all the earth.

All chapters of Psalms · Kannada Bible · Psalm 83 in Tamil

Kannada Bible: Kannada Old Version, public domain.

King James Version: public domain.