Psalms · chapter 83 · verse 4
Psalm 83:4 in Kannada
ಅವರು--ಬನ್ನಿರಿ, ಅವ ರನ್ನು ಜನಾಂಗವಾಗಿರದ ಹಾಗೆ ನಾವು ಅವರನ್ನು ನಿರ್ಮೂಲ ಮಾಡೋಣ; ಇಸ್ರಾಯೇಲಿನ ಹೆಸರು ಇನ್ನು ಜ್ಞಾಪಕಕ್ಕೆ ಬಾರದಿರಲಿ ಅನ್ನುತ್ತಾರೆ.
Avaru--banniri, ava rannu janaangavaagirada haage naavu avarannu nirmoola maadona; israayelina hesaru innu jnyaapakakke baaradirali annuttaare.
Psalm 83:4 in English
- King James Version (KJV)
- They have said, Come, and let us cut them off from [being] a nation; that the name of Israel may be no more in remembrance.
- World English Bible (WEB)
- “Come,” they say, “let’s destroy them as a nation, that the name of Israel may be remembered no more.”
- American Standard Version (ASV)
- They have said, Come, and let us cut them off from being a nation; That the name of Israel may be no more in remembrance.
- Bible in Basic English (BBE)
- They have said, Come, let us put an end to them as a nation; so that the name of Israel may go out of man's memory.
- Darby Translation (DBY)
- They say, Come, and let us cut them off from being a nation, and let the name of Israel be mentioned no more.
- Webster's Bible (WBS)
- They have said, Come, and let us cut them off from [being] a nation; that the name of Israel may be no more in remembrance.
- Young's Literal Translation (YLT)
- They have said, 'Come, And we cut them off from [being] a nation, And the name of Israel is not remembered any more.'
Read in context
- 2ಇಗೋ, ನಿನ್ನ ಶತ್ರುಗಳು ಗದ್ದಲ ಮಾಡು ತ್ತಾರೆ; ನಿನ್ನ ಹಗೆಯವರು ತಲೆ ಎತ್ತುತ್ತಾರೆ.
- 3ನಿನ್ನ ಜನರಿಗೆ ವಿರೋಧವಾಗಿ ಉಪಾಯದ ಯುಕ್ತಿಯನ್ನು ಕಲ್ಪಿಸುತ್ತಾರೆ. ನೀನು ಅಡಗಿಸಿಟ್ಟವರಿಗೆ ವಿರೋಧಿಗಳು ಆಲೋಚಿಸಿಕೊಳ್ಳುತ್ತಾರೆ.
- 4ಅವರು--ಬನ್ನಿರಿ, ಅವ ರನ್ನು ಜನಾಂಗವಾಗಿರದ ಹಾಗೆ ನಾವು ಅವರನ್ನು ನಿರ್ಮೂಲ ಮಾಡೋಣ; ಇಸ್ರಾಯೇಲಿನ ಹೆಸರು ಇನ್ನು ಜ್ಞಾಪಕಕ್ಕೆ ಬಾರದಿರಲಿ ಅನ್ನುತ್ತಾರೆ.
- 5ಅವರು ಕೂಡ ಏಕಮನಸ್ಸಾಗಿ ಆಲೋಚನೆ ಮಾಡಿಕೊಂಡಿ ದ್ದಾರೆ; ನಿನಗೆ ವಿರೋಧವಾಗಿ ಒಡಂಬಟ್ಟಿದ್ದಾರೆ.
- 6ಎದೋಮ್ಯರ ಮತ್ತು ಇಷ್ಮಾಯೇಲ್ಯರ ಗುಡಾರಗಳೂ ಮೋವಾಬೂ ಹಗ್ರೀಯರೂ
Cross references
- Jeremiah 48:2 ಯೆರೆಮೀಯ 48:2ಮೋವಾಬಿನ ಕೀರ್ತಿ ಇನ್ನು ಮೇಲೆ ಇರುವದೇ ಇಲ್ಲ; ಹೆಷ್ಬೋನಿನಲ್ಲಿ ಅದಕ್ಕೆ ವಿರೋಧವಾಗಿ ಕೇಡನ್ನು ಆಲೋಚಿಸಿದ್ದಾರೆ; ಬನ್ನಿ, ಜನಾಂಗವಿಲ್ಲದ ಹಾಗೆ ಅದನ್ನು ಕಡಿದುಬಿಡೋಣ, ಮದ್ಮೆನೇ, ನೀನು ಸಹ ಕಡಿಯಲ್ಪಡುವಿ; ಕತ್ತಿಯು ನಿನ್ನನ್ನು ಹಿಂದಟ್ಟುವದು.
- Jeremiah 11:19 ಯೆರೆಮೀಯ 11:19ಆದರೆ ನಾನು ವಧೆಗೆ ತಕ್ಕೊಂಡು ಹೋಗುವ ಕುರಿಯಹಾಗೆ ಇಲ್ಲವೆ ಎತ್ತಿನ ಹಾಗೆ ಇದ್ದೆನು; ನನಗೆ ವಿರೋಧವಾಗಿ ಕಲ್ಪನೆಗಳನ್ನು ಕಲ್ಪಿಸು ತ್ತಾರೆಂದೂ ಮರವನ್ನೂ ಅದರ ಫಲವನ್ನೂ ಕೆಡಿಸಿ ಅವನ ಹೆಸರು ಇನ್ನು ಜ್ಞಾಪಕಮಾಡಲ್ಪಡದ ಹಾಗೆ ಜೀವಿತರ ದೇಶದೊಳಗಿಂದ ಅವನನ್ನು ಕಡಿದು ಬಿಡೋಣ ಎಂದು ಅಂದುಕೊಳ್ಳುತ್ತಾರೆಂದೂ ನನಗೆ ತಿಳಿಯಲಿಲ್ಲ.
- Esther 3:6–9 ಎಸ್ತೇರಳು 3:6–9ಆದರೆ ಮೊರ್ದೆಕೈಯ ಮೇಲೆ ಮಾತ್ರ ಕೈ ಹಾಕುವದು ಅವನಿಗೆ ಅಲ್ಪವಾಗಿ ತೋರಿತು. ಯಾಕಂದರೆ ಅವರು ಮೊರ್ದೆಕೈ ಜನವನ್ನು ಅವನಿಗೆ ತೋರಿಸಿದ್ದರು. ಆದದರಿಂದ ಹಾಮಾನನು ಅಹಷ್ವೇರೋಷನ ಸಮಸ್ತ ರಾಜ್ಯದಲ್ಲಿರುವ ಮೊರ್ದೆಕೈಯ ಜನವಾದ ಯೆಹೂದ್ಯರನ್ನೆಲ್ಲಾ ನಾಶಮಾಡಲು ಯೋಚಿ ಸಿದನು. ಅರಸನಾದ ಅಹಷ್ವೇರೋಷನ ಹನ್ನೆರಡನೆ ವರುಷದಲ್ಲಿ ನೀಸಾನ್ ಎಂಬ ಮೊದಲನೇ ತಿಂಗಳಲ್ಲಿ ಹಾಮಾನನ ಮುಂದೆ ಪೂರ್ ಎಂಬ ಚೀಟನ್ನು ದಿನ ದಿನಕ್ಕೂ ತಿಂಗಳು ತಿಂಗಳಿಗೂ ಅಡಾರ್ ಎಂಬ ಹನ್ನೆರಡನೆ ತಿಂಗಳ ವರೆಗೆ ಹಾಕಿದರು. ಆಗ ಹಾಮಾ ನನು ಅರಸನಾದ ಅಹಷ್ವೇರೋಷನಿಗೆ ಹೇಳಿ ದ್ದೇನಂದರೆ--ನಿನ್ನ ರಾಜ್ಯದ ಸಕಲ ಪ್ರಾಂತ್ಯಗಳಲ್ಲಿರುವ ಜನರೊಳಗೆ ಚದುರಿಸಲ್ಪಟ್ಟು ವ್ಯಾಪಿಸಿರುವ ಜನರಿ ದ್ದಾರೆ. ಅವರ ನ್ಯಾಯ ಪ್ರಮಾಣಗಳು ಸಕಲ ಜನರಿಗೆ ಪ್ರತಿಕೂಲವಾಗಿವೆ. ಅವರು ಅರಸನ ಆಜ್ಞೆಗಳನ್ನು ಕೈಕೊಳ್ಳುವದಿಲ್ಲ. ಆದಕಾರಣ ಅವರನ್ನು ಇರಗೊಡಿ ಸುವದು ಅರಸನ ಪ್ರಯೋಜನಕ್ಕೆ ತಕ್ಕದ್ದಲ್ಲ. ಅದು ಅರಸನಿಗೆ ಸಮ್ಮತಿಯಾದರೆ ಅವರು ಸಂಹರಿಸಲ್ಪಡುವ ಹಾಗೆ ಬರೆಯಲ್ಪಡಲಿ. ಆಗ ನಾನು ಅರಸನ ಬೊಕ್ಕಸಕ್ಕೆ ತರುವದಕ್ಕೆ ಈ ಕೆಲಸ ಮಾಡುವವರ ಕೈಗಳಲ್ಲಿ ಹತ್ತು ಸಾವಿರ ಬೆಳ್ಳಿಯ ತಲಾಂತುಗಳನ್ನು ಕೊಡು ವೆನು ಅಂದನು.
- Psalm 74:8 ಕೀರ್ತನೆಗಳು 74:8ಅವುಗಳನ್ನು ಒಟ್ಟಾಗಿ ಕೆಡವಿ ಬಿಡೋಣ ಎಂದು ತಮ್ಮ ಹೃದಯದಲ್ಲಿ ಹೇಳಿಕೊಳ್ಳುತ್ತಾರೆ; ದೇಶದಲ್ಲಿರುವ ದೇವರ ಸಭಾಸ್ಥಾನಗಳನ್ನೆಲ್ಲಾ ಸುಟ್ಟುಬಿಡು ತ್ತಾರೆ.
- Exodus 1:10 ವಿಮೋಚನಕಾಂಡ 1:10ಬನ್ನಿ, ಅವರು ಹೆಚ್ಚಾಗದ ಹಾಗೆಯೂ ನಮಗೆ ಯುದ್ಧ ಸಂಭವಿಸಿದರೆ ಅವರು ನಮ್ಮ ಶತ್ರುಗಳ ಸಂಗಡ ಕೂಡಿಕೊಂಡು ನಮಗೆ ವಿರೋಧವಾಗಿ ಯುದ್ಧಮಾಡಿ ದೇಶವನ್ನು ಬಿಟ್ಟು ಹೋಗದ ಹಾಗೆಯೂ ಅವ ರೊಂದಿಗೆ ಬುದ್ಧಿವಂತಿಕೆಯಿಂದ ವರ್ತಿಸೋಣ ಎಂದು ಹೇಳಿದನು.
- Acts 9:1–2 ಅಪೊಸ್ತಲರ ಕೃತ್ಯಗಳು 9:1–2ಸೌಲನು ಕರ್ತನ ಶಿಷ್ಯರಿಗೆ ಇನ್ನೂ ವಿರೋಧವಾಗಿ ಬೆದರಿಕೆಯ ಮಾತುಗಳ ನ್ನಾಡುತ್ತಾ ಅವರನ್ನು ಸಂಹರಿಸಬೇಕೆಂದು ಮಹಾ ಯಾಜಕನ ಬಳಿಗೆ ಹೋಗಿ ಆ ಮಾರ್ಗದಲಿ ಇದ್ದವರು ಗಂಡಸರಾದರೂ ಸರಿಯೇ ಹೆಂಗಸರಾದರೂ ಸರಿಯೇ ತಾನು ಅವರನ್ನು ಬಂಧಿಸಿ ಯೆರೂಸಲೇಮಿಗೆ ತರುವಂತೆ ದಮಸ್ಕದಲ್ಲಿರುವ ಆಯಾ ಸಭಾಮಂದಿರ ದವರಿಗೆ ಪತ್ರಗಳನ್ನು ಕೊಡಬೇಕೆಂದು ಅವನನ್ನು ಬೇಡಿಕೊಂಡನು.
- Daniel 7:25 ದಾನಿಯೇಲನು 7:25ಅವನು ಮಹೋನ್ನತನಿಗೆ ವಿರೋಧವಾಗಿ ಕೊಚ್ಚಿಕೊಂಡು ಮಾತುಗಳನ್ನಾಡಿ ಪರಿ ಶುದ್ಧರನ್ನು ಬಾಧಿಸಿ, ಕಾಲನಿಯಮಗಳನ್ನು ಬದಲಾಯಿ ಸುವದಕ್ಕೆ ಯೋಚಿಸುವನು; ಕಾಲವು ಕಾಲನಿಯಮವು ವಿಭಾಗಿಸುವ ತನಕ ಅವರು ಅವನ ಕೈಯಲ್ಲಿ ಒಪ್ಪಿಸ ಲ್ಪಡುವರು.
- Matthew 27:62–66 ಮತ್ತಾಯನು 27:62–66ಮರುದಿನ ಅಂದರೆ ಸೌರಣೆಯ ದಿನ ಕಳೆದ ಮೇಲೆ ಪ್ರಧಾನಯಾಜಕರು ಮತ್ತು ಫರಿಸಾಯರು ಒಟ್ಟಾಗಿ ಪಿಲಾತನ ಬಳಿಗೆ ಬಂದು-- ಅಯ್ಯಾ, ಆ ಮೋಸಗಾರನು ಇನ್ನೂ ಜೀವದಿಂದಿದ್ದಾಗ-- ಮೂರು ದಿನಗಳಾದ ಮೇಲೆ ನಾನು ತಿರಿಗಿ ಏಳುತ್ತೇನೆ ಎಂದು ಹೇಳಿದ್ದು ನಮ್ಮ ನೆನಪಿಗೆ ಬರುತ್ತದೆ. ಅವನ ಶಿಷ್ಯರು ರಾತ್ರಿಯಲ್ಲಿ ಬಂದು ಅವನನ್ನು ಕದ್ದುಕೊಂಡು ಹೋಗಿ--ಅವನು ಸತ್ತವರೊ ಳಗಿಂದ ಎದ್ದಿದ್ದಾನೆ ಎಂದು ಜನರಿಗೆ ಹೇಳಿದರೆ ಕೊನೆಯ ತಪ್ಪು ಮೊದಲನೆಯದಕ್ಕಿಂತಲೂ ಕೆಟ್ಟದ್ದಾಗು ವದು. ಆದಕಾರಣ ಮೂರನೆಯ ದಿನದ ವರೆಗೆ ಸಮಾಧಿಯನ್ನು ಭದ್ರಪಡಿಸುವಂತೆ ಅಪ್ಪಣೆ ಕೊಡ ಬೇಕು ಅಂ ಪಿಲಾತನು ಅವರಿಗೆ--ಕಾವಲು ಗಾರರು ನಿಮಗೆ ಇದ್ದಾರಲ್ಲಾ, ನೀವು ಹೋಗಿ ನಿಮಗೆ ಸಾಧ್ಯವಾದ ಮಟ್ಟಿಗೆ ಅದನ್ನು ಭದ್ರಪಡಿಸಿರಿ ಅಂದನು.ಅವರು ಹೋಗಿ ಸಮಾಧಿಯನ್ನು ಭದ್ರಪಡಿಸಿ ಕಲ್ಲಿಗೆ ಮುದ್ರೆಹಾಕಿ ಕಾವಲನ್ನು ಇಟ್ಟರು. ಅವರು ಹೋಗಿ ಸಮಾಧಿಯನ್ನು ಭದ್ರಪಡಿಸಿ ಕಲ್ಲಿಗೆ ಮುದ್ರೆಹಾಕಿ ಕಾವಲನ್ನು ಇಟ್ಟರು.
- Proverbs 1:12 ಜ್ಞಾನೋಕ್ತಿಗಳು 1:12ಗುಂಡಿಯೊಳಕ್ಕೆ ಹೋಗುವವರನ್ನು ನುಂಗುವಂತೆ ಸಂಪೂರ್ಣವಾಗಿ ನಾವು ಅವರನ್ನು ಸಮಾಧಿಯಂತೆ ನುಂಗಿಬಿಡೋಣ.
- Jeremiah 31:36 ಯೆರೆಮೀಯ 31:36ಈ ನಿಯಮಗಳು ನನ್ನ ಸನ್ನಿಧಿ ಯಿಂದ ಯಾವಾಗ ಇಲ್ಲದೆ ಹೋಗುವವೋ ಆಗ ಇಸ್ರಾಯೇಲಿನ ಸಂತಾನವು ಸಹ ಸದಾಕಾಲ ನನ್ನ ಮುಂದೆ ಜನಾಂಗವಾಗಿರದ ಹಾಗೆ ನಿಂತು ಹೋಗುವ ದೆಂದು ಕರ್ತನು ಅನ್ನುತ್ತಾನೆ.
- Acts 4:17 ಅಪೊಸ್ತಲರ ಕೃತ್ಯಗಳು 4:17ಆದರೆ ಇದು ಜನ ರಲ್ಲಿ ಇನ್ನೂ ಹಬ್ಬದಂತೆ ಇಂದಿನಿಂದ ಅವರು ಯಾವ ಮನುಷ್ಯನ ಸಂಗಡ ಈ ಹೆಸರಿನಲ್ಲಿ ಮಾತನಾಡ ಬಾರದೆಂದು ನಾವು ಖಂಡಿತವಾಗಿ ಅವರನ್ನು ಗದರಿ ಸೋಣ ಎಂದು ಅಂದುಕೊಂಡು