Psalms · chapter 83 · verse 9
Psalm 83:9 in Kannada
ಮಿದ್ಯಾನಿಗೂ ಸೀಸೆರನಿಗೂ ಯಾಬೀನನಿಗೂ ಕೀಷೋನ್ ಹಳ್ಳದಲ್ಲಿ ಮಾಡಿದ ಹಾಗೆ ಅವರಿಗೆ ಮಾಡು.
Midyaanigoo seeseranigoo yaabeenanigoo keeshon halladalli maadida haage avarige maadu.
Psalm 83:9 in English
- King James Version (KJV)
- Do unto them as [unto] the Midianites; as [to] Sisera, as [to] Jabin, at the brook of Kison:
- World English Bible (WEB)
- Do to them as you did to Midian, as to Sisera, as to Jabin, at the river Kishon;
- American Standard Version (ASV)
- Do thou unto them as unto Midian, As to Sisera, as to Jabin, at the river Kishon;
- Bible in Basic English (BBE)
- Do to them what you did to the Midianites; what you did to Sisera and Jabin, at the stream of Kishon:
- Darby Translation (DBY)
- Do unto them as to Midian; as to Sisera, as to Jabin, at the torrent of Kishon:
- Webster's Bible (WBS)
- Do to them as [to] the Midianites; as [to] Sisera, as [to] Jabin, at the brook of Kison:
- Young's Literal Translation (YLT)
- Do to them as [to] Midian, As [to] Sisera, as [to] Jabin, at the stream Kishon.
Read in context
- 7ಗೆಬಾಲ್ಯರೂ ಅಮ್ಮೋನಿ ಯರೂ ಮಾಲೇಕ್ಯರೂ ತೂರಿನ ನಿವಾಸಿಗಳು ಸಹಿತವಾಗಿ ಫಿಲಿಷ್ಟಿಯರದೇ;
- 8ಅಶ್ಶೂರ್ಯರೂ ಸಹ ಅವ ರಲ್ಲಿ ಕೂಡಿಕೊಂಡು; ಅವರು ಲೋಟನ ಮಕ್ಕಳಿಗೆ ಸಹಾಯ ಮಾಡಿದ್ದಾರೆ ಸೆಲಾ.
- 9ಮಿದ್ಯಾನಿಗೂ ಸೀಸೆರನಿಗೂ ಯಾಬೀನನಿಗೂ ಕೀಷೋನ್ ಹಳ್ಳದಲ್ಲಿ ಮಾಡಿದ ಹಾಗೆ ಅವರಿಗೆ ಮಾಡು.
- 10ಇವರು ಎಂದೋರಿನಲ್ಲಿ ನಾಶವಾಗಿ ಭೂಮಿಗೆ ಗೊಬ್ಬರವಾದರು.
- 11ಅವರನ್ನೂ ಅವರ ಅಧಿಪತಿಗಳನ್ನೂ ಓರೇಬ್ ಜೇಬ್ ಹಾಗೆಯೂ ಅವರ ಪ್ರಮುಖರೆಲ್ಲರನ್ನು ಜೇಬಹ ಚಲ್ಮುನ್ನರ ಹಾಗೆಯೂ ಮಾಡು.
Cross references
- Isaiah 9:4 ಯೆಶಾಯ 9:4ಅವನ ನೊಗವನ್ನೂ ಬೆನ್ನನ್ನು ಹೊಡೆದ ಕೋಲನ್ನೂ ಬಿಟ್ಟಿಹಿಡಿದವನ ದೊಣ್ಣೆಯನ್ನೂ ಮಿದ್ಯಾ ನಿನ ದಿನದಲ್ಲಿ ಮುರಿದಂತೆ ಮುರಿದುಬಿಟ್ಟಿದ್ದೀ.
- Judges 4:15–24 ನ್ಯಾಯಸ್ಥಾಪಕರು 4:15–24ಕರ್ತನು ಸೀಸೆರನನ್ನೂ ಅವನ ಎಲ್ಲಾ ರಥಗಳನ್ನೂ ಎಲ್ಲಾ ಸೈನ್ಯವನ್ನೂ ಬಾರಾಕನ ಮುಂದೆ ಕತ್ತಿಯಿಂದ ಚದರಿಸಿದನು. ಆಗ ಸೀಸೆರನು ರಥವನ್ನು ಬಿಟ್ಟು ಇಳಿದು ಕಾಲು ನಡೆಯಾಗಿ ಓಡಿ ಹೋದನು. ಆದರೆ ಬಾರಾಕನು ರಥಗಳನ್ನೂ ಸೈನ್ಯ ವನ್ನೂ ಅನ್ಯಜನಾಂಗಗಳ ಹರೋಷೆತಿನ ಮಟ್ಟಿಗೂ ಹಿಂದಟ್ಟಿದನು. ಸೀಸೆರನ ಸೈನ್ಯವೆಲ್ಲಾ ಕತ್ತಿಯಿಂದ ಹತ ವಾಗಿ ಬಿತ್ತು; ಒಬ್ಬನಾದರೂ ಉಳಿಯಲಿಲ್ಲ. ಆದರೆ ಸೀಸೆರನು ಕಾಲುನಡೆಯಾಗಿ ಕೇನ್ಯನಾದ ಹೆಬೆರನ ಹೆಂಡತಿಯಾದ ಯಾಯೇಲಳ ಗುಡಾರಕ್ಕೆ ಓಡಿಬಂದನು. ಯಾಬೀನನೆಂಬ ಹಾಚೋರಿನ ಅರಸ ನಿಗೂ ಕೇನ್ಯನಾದ ಹೆಬೆರನ ಮನೆಗೂ ನಡುವೆ ಸಮಾ ಧಾನ ಇತ್ತು. ಆಗ ಯಾಯೇಲಳು ಸೀಸೆರನನ್ನು ಎದುರುಗೊಳ್ಳುವದಕ್ಕೆ ಹೋಗಿ ಅವನಿಗೆ--ಒಳಗೆ ಬಾ, ನನ್ನ ಪ್ರಭುವೇ; ನನ್ನ ಬಳಿಗೆ ಬಾ; ಭಯಪಡಬೇಡ ಎಂದು ಹೇಳಿದಳು. ಅವನು ಗುಡಾರದಲ್ಲಿರುವ ಅವಳ ಬಳಿಗೆ ಬಂದಾಗ ಅವಳು ಅವನನ್ನು ಒಂದು ಜಮಖಾನ ದಿಂದ ಮುಚ್ಚಿದಳು. ಸೀಸೆರನು ಅವಳಿಗೆ--ದಯ ವಿಟ್ಟು ನನಗೆ ಕುಡಿಯುವದಕ್ಕೆ ಸ್ವಲ್ಪ ನೀರು ಕೊಡು, ನನಗೆ ದಾಹವಾಗಿದೆ ಅಂದನು. ಅವಳು ಹಾಲಿನ ಬುದ್ದಲಿಯನ್ನು ತೆರೆದು ಅವನಿಗೆ ಕುಡಿಯಲು ಕೊಟ್ಟು ಅವನನ್ನು ಮುಚ್ಚಿದಳು. ತಿರಿಗಿ ಅವನು ಅವಳಿಗೆನೀನು ಬಾಗಲಲ್ಲಿ ನಿಂತಿರು; ಯಾವನಾದರೂ ಬಂದು ಇಲ್ಲಿ ಯಾರಾದರೂ ಇದ್ದಾರೋ ಎಂದು ನಿನ್ನನ್ನು ಕೇಳಿದರೆ ಇಲ್ಲ ಎಂದು ಹೇಳು ಅಂದನು. ಹೆಬೆರನ ಹೆಂಡತಿಯಾದ ಯಾಯೇಲಳು ಗುಡಾರದ ಮೊಳೆ ಯನ್ನು ತೆಗೆದು ತನ್ನ ಕೈಯಲ್ಲಿ ಸುತ್ತಿಗೆಯನ್ನು ಹಿಡಿದು ಕೊಂಡು ಅವನು ಆಯಾಸದಿಂದ ಬಹಳ ನಿದ್ರೆ ಮಾಡುತ್ತಿರುವಾಗ ಮೆಲ್ಲಗೆ ಅವನ ಬಳಿಗೆ ಬಂದು ಅವನ ಕಣತಲೆಯಲ್ಲಿ ಆ ಮೊಳೆಯನ್ನು ಹೊಡೆದು ನೆಲದಲ್ಲಿ ನಾಟಿದಳು, ಅವನು ಸತ್ತನು. ಇಗೋ, ಸೀಸೆರನನ್ನು ಹಿಂದಟ್ಟುವ ಬಾರಾಕನು ಬಂದನು. ಆಗ ಯಾಯೇಲಳು ಅವನನ್ನು ಎದುರುಗೊಳ್ಳುವದಕ್ಕೆ ಹೊರಟುಹೋಗಿ ಅವನಿಗೆ--ಬಾ; ನೀನು ಹುಡುಕುವ ಮನುಷ್ಯನನ್ನು ನಾನು ನಿನಗೆ ತೋರಿಸುವೆನು ಎಂದು ಹೇಳಿದಳು. ಅವನು ಅವಳ ಬಳಿಗೆ ಬಂದಾಗ ಇಗೋ, ಸೀಸೆರನು ಸತ್ತು ಬಿದ್ದಿದ್ದನು; ಮೊಳೆಯು ಅವನ ಕಣತಲೆಯಲ್ಲಿ ಹೊಡೆದಿತ್ತು. ಹೀಗೆಯೇ ದೇವರು ಆ ದಿನದಲ್ಲಿ ಕಾನಾನ್ಯರ ಅರಸನಾದ ಯಾಬೀನನನ್ನು ಇಸ್ರಾಯೇಲ್ ಮಕ್ಕಳ ಮುಂದೆ ತಗ್ಗಿಸಿದನು.ಇಸ್ರಾ ಯೇಲ್ ಮಕ್ಕಳ ಕೈ ಕಾನಾನ್ಯರ ಅರಸನಾದ ಯಾಬೀನ ನನ್ನು ಕೊಂದುಬಿಡುವ ಮಟ್ಟಿಗೂ ಹೆಚ್ಚಿ ಜಯ ಹೊಂದಿತು. ಇಸ್ರಾ ಯೇಲ್ ಮಕ್ಕಳ ಕೈ ಕಾನಾನ್ಯರ ಅರಸನಾದ ಯಾಬೀನ ನನ್ನು ಕೊಂದುಬಿಡುವ ಮಟ್ಟಿಗೂ ಹೆಚ್ಚಿ ಜಯ ಹೊಂದಿತು.
- Judges 5:21 ನ್ಯಾಯಸ್ಥಾಪಕರು 5:21ಕೀಷೋನ್ ನದಿಯು, ಆ ಹಳೇದಾದ ಕೀಷೋನ್ ನದಿಯು ಅವರನ್ನು ಬಡಕೊಂಡು ಹೋಯಿತು. ಓ ನನ್ನ ಪ್ರಾಣವೇ, ನೀನು ಬಲವನ್ನು ತುಳಿದು ಹಾಕಿದಿ.
- Numbers 31:7–8 ಅರಣ್ಯಕಾಂಡ 31:7–8ಕರ್ತನು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಅವರು ಮಿದ್ಯಾನ್ಯರ ಮೇಲೆ ಯುದ್ಧಮಾಡಿ ಗಂಡಸರೆಲ್ಲರನ್ನು ಕೊಂದುಹಾಕಿದರು. ಕೊಲ್ಲಲ್ಪಟ್ಟವರಲ್ಲದೆ ಮಿದ್ಯಾನಿನ ಅರಸರನ್ನು ಕೊಂದು ಹಾಕಿದರು. ಯಾರಂದರೆ, ಮಿದ್ಯಾ ನಿನ ಐದು ಮಂದಿ ಅರಸರಾಗಿರುವ ಎವೀ, ರೆಕೆಮ್, ಚೂರ್, ಹೂರ್, ರೆಬಾ, ಬೆಯೋರನ ಮಗನಾದ ಬಿಳಾಮನನ್ನೂ ಕತ್ತಿಯಿಂದ ಕೊಂದುಹಾಕಿದರು.
- Judges 4:7 ನ್ಯಾಯಸ್ಥಾಪಕರು 4:7ನಾನು ಯಾಬೀನನ ಸೇನಾಧಿಪತಿಯಾದ ಸೀಸೆರನನ್ನೂ ಅವನ ರಥಗಳನ್ನೂ ಅವನ ಸೈನ್ಯವನ್ನೂ ಕೀಷೋನಿನ ಬಳಿಗೆ ಬರಮಾಡಿ ಅವನನ್ನು ನಿನ್ನ ಕೈ ಯಲ್ಲಿ ಒಪ್ಪಿಸಿಕೊಡುವೆನು ಅಂದಳು.
- Isaiah 10:26 ಯೆಶಾಯ 10:26ಸೈನ್ಯಗಳ ಕರ್ತನು ಓರೇಬನ ಬಂಡೆಯ ಬಳಿಯಲ್ಲಿ ಮಿದ್ಯಾನ್ಯರನ್ನು ಹತಮಾಡಿದಂತೆ ಆತನು ಕೋಲನ್ನು ಸಮುದ್ರದ ಮೇಲೆ ಚಾಚಿ, ಐಗುಪ್ತ್ಯರ ಮೇಲೆ ಎತ್ತಿದಂತೆ ಎತ್ತುವನು.
- Judges 7:1–25 ನ್ಯಾಯಸ್ಥಾಪಕರು 7:1–25ಗಿದ್ಯೋನನೆಂಬ ಯೆರುಬ್ಬಾಳನೂ ಅವನ ಸಂಗಡ ಇದ್ದ ಜನರೆಲ್ಲರೂ ಉದಯದಲ್ಲಿ ಎದ್ದು ಹರೋದಿನ ಬಾವಿಯ ಬಳಿಯಲ್ಲಿ ದಂಡಿಳಿದರು. ಮಿದ್ಯಾನ್ಯರ ದಂಡು ಅವರಿಗೆ ಉತ್ತರಕ್ಕೆ ಮೋರೆ ಬೆಟ್ಟದ ತಗ್ಗಿನಲ್ಲಿ ಇಳಿದಿತ್ತು. ಆಗ ಕರ್ತನು ಗಿದ್ಯೋನನಿಗೆ--ನಾನು ಮಿದ್ಯಾನ್ಯ ರನ್ನು ಜನರ ಕೈಗಳಿಗೆ ಒಪ್ಪಿಸಿಕೊಡುವದಕ್ಕೆ ನಿನ್ನ ಸಂಗಡ ಇರುವ ಜನರು ಬಹಳವಾಗಿದ್ದಾರೆ; ಇಸ್ರಾಯೇಲ್ಯರುನನ್ನ ಕೈ ನನ್ನನ್ನು ರಕ್ಷಿಸಿತು ಎಂದು ನನಗೆ ವಿರೋಧವಾಗಿ ಹೆಚ್ಚಳ ಪಟ್ಟಾರು. ಆದದರಿಂದ ನೀನು ಹೋಗಿ ಜನರು ಕೇಳುವ ಹಾಗೆ--ಯಾವನಿಗೆ ಭಯವೂ ಹೆದರಿ ಕೆಯೂ ಉಂಟೋ ಅವನು ತಿರಿಗಿ ತ್ವರೆಯಾಗಿ ಗಿಲ್ಯಾದ್ ಬೆಟ್ಟದಿಂದ ಹೋಗಲಿ ಎಂದು ಪ್ರಕಟಮಾಡು ಅಂದನು. ಆಗ ಜನರಲ್ಲಿ ಇಪ್ಪತ್ತೆರಡು ಸಾವಿರ ತಿರುಗಿ ಹೋದರು; ಹತ್ತು ಸಾವಿರ ಮಂದಿ ಉಳಿದರು. ಕರ್ತನು ಗಿದ್ಯೋನನಿಗೆ--ಜನರು ಇನ್ನೂ ಬಹಳ ವಾಗಿದ್ದಾರೆ; ಅವರನ್ನು ಜಲದ ಸವಿಾಪಕ್ಕೆ ಇಳಿದು ಹೋಗುವಂತೆ ಮಾಡು. ಅಲ್ಲಿ ನಾನು ಅವರನ್ನು ನಿನಗೋಸ್ಕರ ಪರೀಕ್ಷೆಮಾಡುವೆನು; ಯಾರು ನಿನ್ನ ಸಂಗಡ ಹೋಗಬಹುದೆಂದು ಅಲ್ಲಿ ಯಾವನನ್ನು ಕುರಿತು ಹೇಳುವೆನೋ ಅವನು ನಿನ್ನ ಸಂಗಡ ಹೋಗಲಿ. ಆದರೆ ನಾನು--ನಿನ್ನ ಸಂಗಡ ಬರಬಾರದೆಂದು ಯಾವನ ಕುರಿತಾಗಿ ಹೇಳುವೆನೋ ಅವನು ಹೋಗಬಾರದು ಅಂದನು. ಗಿದ್ಯೋನನು ಜನರನ್ನು ಜಲದ ಬಳಿಗೆ ಕರಕೊಂಡು ಬಂದನು. ಆಗ ಕರ್ತನು ಗಿದ್ಯೋನನಿಗೆನಾಯಿ ನೆಕ್ಕುವ ಹಾಗೆ ಜಲವನ್ನು ತನ್ನ ನಾಲಿಗೆಯಿಂದ ನೆಕ್ಕುವ ಪ್ರತಿಯೊಬ್ಬನನ್ನೂ ಕುಡಿಯುವದಕ್ಕೆ ಮೊಣ ಕಾಲೂರಿ ಬೊಗ್ಗುವ ಪ್ರತಿಯೊಬ್ಬನನ್ನೂ ಬೇರೆ ಬೇರೆ ಯಾಗಿ ನಿಲ್ಲಿಸು ಅಂದನು. ಆಗ ತಮ್ಮ ಕೈಯಿಂದ ತೆಗೆದುಕೊಂಡು ತಮ್ಮ ಬಾಯಿಗೆ ಎತ್ತಿ ನೆಕ್ಕಿದವರ ಲೆಕ್ಕವು ಮುನ್ನೂರು ಜನವಾಗಿತ್ತು. ಉಳಿದ ಜನರೆಲ್ಲಾ ನೀರು ಕುಡಿಯುವದಕ್ಕೆ ಮೊಣಕಾಲೂರಿ ಬೊಗ್ಗಿದರು. ಆಗ ಕರ್ತನು ಗಿದ್ಯೋನನಿಗೆ--ನೆಕ್ಕಿ ಕುಡಿದ ಆ ಮುನ್ನೂರು ಜನರಿಂದ ನಾನು ನಿಮ್ಮನ್ನು ರಕ್ಷಿಸಿ ಮಿದ್ಯಾನ್ಯರನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಡುವೆನು; ಇತರ ಜನರೆಲ್ಲಾ ತಮ್ಮ ತಮ್ಮ ಸ್ಥಳಗಳಿಗೆ ಹೋಗಲಿ ಅಂದನು. ಆಗ ಜನರು ಆಹಾರವನ್ನೂ ತಮ್ಮ ತುತೂರಿಗಳನ್ನೂ ತಮ್ಮ ಕೈಗಳಲ್ಲಿ ತೆಗೆದುಕೊಂಡರು; ಆದರೆ ಅವನು ಇಸ್ರಾಯೇಲ್ಯರನ್ನೆಲ್ಲಾ ಅವರವರ ಗುಡಾರಗಳಿಗೆ ಕಳುಹಿಸಿ ಆ ಮುನ್ನೂರು ಜನರನ್ನು ಇಟ್ಟುಕೊಂಡನು. ಮಿದ್ಯಾನ್ಯರ ದಂಡು ಅವನಿಗೆ ಕೆಳ ಭಾಗವಾದ ತಗ್ಗಿನಲ್ಲಿ ಇತ್ತು. ಅದೇ ರಾತ್ರಿಯಲ್ಲಿ ಆದದ್ದೇನಂದರೆ, ಕರ್ತನು ಅವನಿಗೆ--ನೀನು ಎದ್ದು ದಂಡಿಗೆ ಇಳಿದು ಹೋಗು; ಅದನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದೇನೆ. ಇಳಿದು ಹೋಗುವದಕ್ಕೆ ನೀನು ಭಯಪಟ್ಟರೆ (ಮೊದಲು) ನೀನು ನಿನ್ನ ಸೇವಕನಾದ ಪುರನ ಸಂಗಡ ದಂಡಿಗೆ ಇಳಿದು ಹೋಗಿ ಅವರು ಮಾತನಾಡುವದನ್ನು ಕೇಳು; ತರುವಾಯ ದಂಡಿಗೆ ಇಳಿದು ಹೋಗುವದಕ್ಕೆ ನಿನ್ನ ಕೈಗಳು ಬಲಗೊಳ್ಳುವವು ಅಂದನು. ಹಾಗೆಯೇ ಅವನು ತನ್ನ ಸೇವಕನಾದ ಪುರನ ಸಂಗಡ ದಂಡಿನ ಹೊರಗಿರುವ ಯುದ್ಧಸ್ಥರ ಬಳಿಗೆ ಹೋದನು. ಮಿದ್ಯಾನ್ಯರೂ ಅಮಾಲೇಕ್ಯರೂ ಸಕಲ ಮೂಡ ಣದ ಮಕ್ಕಳೂ ಮಿಡತೆಗಳಷ್ಟು ಗುಂಪಾಗಿ ತಗ್ಗಿನಲ್ಲಿ ಇಳು ಕೊಂಡಿದ್ದದರು. ಅವರ ಒಂಟೆಗಳಿಗೆ ಲೆಕ್ಕವಿಲ್ಲ. ಅವು ಸಮುದ್ರದ ಮರಳಿನ ಹಾಗೆ ಗುಂಪಾಗಿದ್ದವು. ಗಿದ್ಯೋನನು ಬಂದಾಗ ಇಗೋ, ಒಬ್ಬನು ತನ್ನ ಜೊತೆಗಾರನಿಗೆ ತನಗಾದ ಸ್ವಪ್ನವನ್ನು ವಿವರಿಸಿ ಹೇಳಿದ್ದೇ ನಂದರೆ--ಇಗೋ, ನಾನು ಒಂದು ಕನಸನ್ನು ಕಂಡೆನು. ಇಗೋ, ಒಂದು ಜವೆಗೋಧಿಯ ರೊಟ್ಟಿಯು ಮಿದ್ಯಾ ನ್ಯರ ದಂಡಿನ ಮೇಲೆ ಹೊರಳಿ ಒಂದು ಡೇರೆಯಮೇಲೆ ಬಂದು ಅದು ಬೀಳುವ ಹಾಗೆ ಅದನ್ನು ಹೊಡೆದು ಕೆಡವಿಹಾಕಿತು; ಆಗ ಡೇರೆಯು ಬಿದ್ದುಹೋಯಿತು ಅಂದನು. ಅವನ ಜೊತೆಗಾರನು ಪ್ರತ್ಯುತ್ತರ ಕೊಟ್ಟು --ಇದು ಯೋವಾಷನ ಮಗನಾದ ಗಿದ್ಯೋನನೆಂಬ ಇಸ್ರಾಯೇಲ್ನ ಮನುಷ್ಯನ ಕತ್ತಿಯೇ ಹೊರತು ಬೇರೆ ಯಲ್ಲ. ದೇವರು ಮಿದ್ಯಾನ್ಯರನ್ನೂ ಈ ಸಮಸ್ತ ದಂಡನ್ನೂ ಅವನ ಕೈಯಲ್ಲಿ ಒಪ್ಪಿಸಿಕೊಟ್ಟನು ಅಂದನು. ಗಿದ್ಯೋನನು ಆ ಕನಸಿನ ವಿವರವನ್ನೂ ಅದರ ಅರ್ಥವನ್ನೂ ಕೇಳಿದಾಗ ಅವನು ಆರಾಧಿಸಿ ಇಸ್ರಾ ಯೇಲ್ ದಂಡಿಗೆ ತಿರುಗಿ ಬಂದು--ಏಳಿರಿ, ಯಾಕಂದರೆ ಕರ್ತನು ಮಿದ್ಯಾನ್ಯರ ದಂಡನ್ನು ನಿಮ್ಮ ಕೈಗೆ ಒಪ್ಪಿಸಿ ಕೊಟ್ಟಿದ್ದಾನೆ ಎಂದು ಹೇಳಿದನು. ಆ ಮುನ್ನೂರು ಜನರನ್ನು ಮೂರು ಗುಂಪಾಗಿ ವಿಭಾಗಿಸಿ ಎಲ್ಲರ ಕೈಯಲ್ಲಿ ತುತೂರಿಗಳನ್ನೂ ಬರಿದಾದ ಕೊಡಗಳನ್ನೂ ಅವುಗಳಲ್ಲಿ ಇಡುವ ಪಂಜುಗಳನ್ನೂ ಕೊಟ್ಟು ಅವರಿಗೆ ಹೇಳಿದ್ದೇ ನಂದರೆ-- ನಾನು ಮಾಡುವದನ್ನು ನೋಡಿ ಹಾಗೆಯೇ ನೀವೂ ಮಾಡಿರಿ. ಇಗೋ, ನಾನು ದಂಡಿನ ಹೊರಗೆ ಬಂದಾಗ ಹೇಗೆ ಮಾಡುವೆನೋ ಹಾಗೆಯೇ ನೀವೂ ಮಾಡಿರಿ. ನಾನೂ ನನ್ನ ಸಂಗಡ ಇರುವವ ರೆಲ್ಲರೂ ತುತೂರಿಯನ್ನು ಊದುವಾಗ ನೀವೆಲ್ಲರೂ ದಂಡಿನ ಸುತ್ತಲೂ ಎಲ್ಲಾ ಕಡೆಯಲ್ಲೂ ತುತೂರಿಗಳನ್ನು ಊದಿ ಕರ್ತನ ಕತ್ತಿ, ಗಿದ್ಯೋನನ ಕತ್ತಿ ಎಂದು ಹೇಳಿರಿ ಅಂದನು. ಮಧ್ಯ ರಾತ್ರಿ ಮೊದಲನೆಯ ಜಾವದಲ್ಲಿ ಕಾವಲು ಗಾರರನ್ನು ಬದಲಾಯಿಸಿದಾಗ ಗಿದ್ಯೋನನೂ ಅವನ ಸಂಗಡ ಇದ್ದ ನೂರು ಮಂದಿಯೂ ದಂಡಿನ ಹೊರಗೆ ಬಂದು ತುತೂರಿಗಳನ್ನು ಊದಿ ತಮ್ಮ ಕೈಯಲ್ಲಿದ್ದ ಕೊಡಗಳನ್ನು ಒಡೆದರು. ಈ ಮೂರು ಗುಂಪಿನ ಜನರು ತುತೂರಿಗಳನ್ನು ಊದಿ ಆ ಕೊಡಗಳನ್ನು ಒಡೆದುಬಿಟ್ಟು ಪಂಜುಗಳನ್ನು ತಮ್ಮ ಎಡಗೈಯಲ್ಲಿಯೂ ಊದುವ ತುತೂರಿಗಳನ್ನು ತಮ್ಮ ಬಲಗೈಯಲ್ಲಿಯೂ ಹಿಡಿದು--ಕರ್ತನ ಕತ್ತಿ, ಗಿದ್ಯೋನನ ಕತ್ತಿ ಎಂದು ಕೂಗಿ ದಂಡಿನ ಸುತ್ತಲೂ ಅವರವರು ತಮ್ಮ ಸ್ಥಳದಲ್ಲಿ ನಿಂತರು. ಆಗ ದಂಡೆಲ್ಲಾ ಕಿರಿಚಿಕೊಂಡು ಓಡಿ ಹೋದರು. ಮುನ್ನೂರು ಜನರು ತುತೂರಿಗಳನ್ನು ಊದುವಾಗ ಕರ್ತನು ದಂಡಿನಲ್ಲಿ ಎಲ್ಲೆಲ್ಲಿಯೂ ಒಬ್ಬನ ಕತ್ತಿಯನ್ನು ಒಬ್ಬನ ಮೇಲೆ ಬರಮಾಡಿದನು. ದಂಡು ಚೆರೇರಿನಲ್ಲಿರುವ ಬೇತ್ಷಿಟ್ಟದ ಮಟ್ಟಿಗೂ ಟಬ್ಬಾತಿನ ಬಳಿಯಲ್ಲಿರುವ ಆಬೇಲ್ಮೆಹೋಲಾದ ಮೇರೆಯ ವರೆಗೂ ಓಡಿಹೋಯಿತು. ನಫ್ತಾಲಿ ಯಿಂದಲೂ ಆಶೇರನಿಂದಲೂ ಸಮಸ್ತ ಮನಸ್ಸೆಯ ವರೆಲ್ಲರೂ ಕೂಡಿಬಂದು ಮಿದ್ಯಾನ್ಯರನ್ನು ಹಿಂದಟ್ಟಿದರು. ಇದಲ್ಲದೆ ಗಿದ್ಯೋನನು ಎಫ್ರಾಯಾಮ್ ಬೆಟ್ಟ ದಲ್ಲೆಲ್ಲಾ ದೂತರನ್ನು ಕಳುಹಿಸಿ--ನೀವು ಮಿದ್ಯಾನ್ಯರಿಗೆ ಎದುರಾಗಿ ಇಳಿದು ಹೋಗಿ ಬೇತ್ಬಾರ ಮತ್ತು ಯೊರ್ದನ್ ವರೆಗಿರುವ ನೀರುಗಳನ್ನು ಅವರಿಗೆ ಮುಂದಾಗಿ ಹಿಡಿಯಿರಿ ಎಂದು ಹೇಳಿದನು. ಹಾಗೆಯೇ ಎಫ್ರಾಯಾಮ್ ಮನುಷ್ಯರೆಲ್ಲರು ಕೂಡಿಕೊಂಡು ಬೇತ್ಬಾರ ಮತ್ತು ಯೊರ್ದನ್ ವರೆಗೆ ನೀರುಗಳನ್ನು ಹಿಡಿದರು.ಮಿದ್ಯಾನ್ಯರ ಇಬ್ಬರು ಅಧಿಪತಿಗಳಾದ ಓರೇಬನ್ನೂ ಜೇಬನ ಹಿಡಿದು ಓರೇಬನ್ನು ಓರೇಬೆಂಬ ಬಂಡೆಯಲ್ಲಿಯೂ ಜೇಬನ್ನು ಜೇಬನ ದ್ರಾಕ್ಷೇ ಆಲೆಯ ಬಳಿಯಲ್ಲಿಯೂ ಕೊಂದುಹಾಕಿ ಮಿದ್ಯಾನ್ಯರನ್ನು ಹಿಂದಟ್ಟಿ ಓರೇಬ ಜೇಬರ ತಲೆಗಳನ್ನು ಯೊರ್ದನಿಗೆ ಈಚೆಯಲ್ಲಿದ್ದ ಗಿದ್ಯೋನನ ಬಳಿಗೆ ತಂದರು. ಮಿದ್ಯಾನ್ಯರ ಇಬ್ಬರು ಅಧಿಪತಿಗಳಾದ ಓರೇಬನ್ನೂ ಜೇಬನ ಹಿಡಿದು ಓರೇಬನ್ನು ಓರೇಬೆಂಬ ಬಂಡೆಯಲ್ಲಿಯೂ ಜೇಬನ್ನು ಜೇಬನ ದ್ರಾಕ್ಷೇ ಆಲೆಯ ಬಳಿಯಲ್ಲಿಯೂ ಕೊಂದುಹಾಕಿ ಮಿದ್ಯಾನ್ಯರನ್ನು ಹಿಂದಟ್ಟಿ ಓರೇಬ ಜೇಬರ ತಲೆಗಳನ್ನು ಯೊರ್ದನಿಗೆ ಈಚೆಯಲ್ಲಿದ್ದ ಗಿದ್ಯೋನನ ಬಳಿಗೆ ತಂದರು.