Psalms · chapter 83 · verse 6
Psalm 83:6 in Kannada
ಎದೋಮ್ಯರ ಮತ್ತು ಇಷ್ಮಾಯೇಲ್ಯರ ಗುಡಾರಗಳೂ ಮೋವಾಬೂ ಹಗ್ರೀಯರೂ
Edomyara mattu ishmaayelyara gudaaragaloo movaaboo hagreeyaroo
Psalm 83:6 in English
- King James Version (KJV)
- The tabernacles of Edom, and the Ishmaelites; of Moab, and the Hagarenes;
- World English Bible (WEB)
- The tents of Edom and the Ishmaelites; Moab, and the Hagrites;
- American Standard Version (ASV)
- The tents of Edom and the Ishmaelites; Moab, and the Hagarenes;
- Bible in Basic English (BBE)
- The tents of Edom and the Ishmaelites; Moab and the Hagarites;
- Darby Translation (DBY)
- The tents of Edom and the Ishmaelites, Moab and the Hagarites;
- Webster's Bible (WBS)
- The tabernacles of Edom, and the Ishmaelites; of Moab, and the Hagarenes;
- Young's Literal Translation (YLT)
- Tents of Edom, and Ishmaelites, Moab, and the Hagarenes,
Read in context
- 4ಅವರು--ಬನ್ನಿರಿ, ಅವ ರನ್ನು ಜನಾಂಗವಾಗಿರದ ಹಾಗೆ ನಾವು ಅವರನ್ನು ನಿರ್ಮೂಲ ಮಾಡೋಣ; ಇಸ್ರಾಯೇಲಿನ ಹೆಸರು ಇನ್ನು ಜ್ಞಾಪಕಕ್ಕೆ ಬಾರದಿರಲಿ ಅನ್ನುತ್ತಾರೆ.
- 5ಅವರು ಕೂಡ ಏಕಮನಸ್ಸಾಗಿ ಆಲೋಚನೆ ಮಾಡಿಕೊಂಡಿ ದ್ದಾರೆ; ನಿನಗೆ ವಿರೋಧವಾಗಿ ಒಡಂಬಟ್ಟಿದ್ದಾರೆ.
- 6ಎದೋಮ್ಯರ ಮತ್ತು ಇಷ್ಮಾಯೇಲ್ಯರ ಗುಡಾರಗಳೂ ಮೋವಾಬೂ ಹಗ್ರೀಯರೂ
- 7ಗೆಬಾಲ್ಯರೂ ಅಮ್ಮೋನಿ ಯರೂ ಮಾಲೇಕ್ಯರೂ ತೂರಿನ ನಿವಾಸಿಗಳು ಸಹಿತವಾಗಿ ಫಿಲಿಷ್ಟಿಯರದೇ;
- 8ಅಶ್ಶೂರ್ಯರೂ ಸಹ ಅವ ರಲ್ಲಿ ಕೂಡಿಕೊಂಡು; ಅವರು ಲೋಟನ ಮಕ್ಕಳಿಗೆ ಸಹಾಯ ಮಾಡಿದ್ದಾರೆ ಸೆಲಾ.
Cross references
- 1 Chronicles 5:10 1 ಪೂರ್ವಕಾಲವೃತ್ತಾಂತ 5:10ಸೌಲನ ದಿವಸಗಳಲ್ಲಿ ಅವರು ಹಗ್ರಿ ಯರ ಸಂಗಡ ಯುದ್ಧಮಾಡಿ ಅವರನ್ನು ಸಂಹರಿಸಿದರು; ಅವರು ಗಿಲ್ಯಾದಿನ ಸಮಸ್ತವಾದ ಮೂಡಣ ದಿಕ್ಕಿನ ಮೇರೆಯಲ್ಲಿ ತಮ್ಮ ಡೇರೆಗಳೊಳಗೆ ವಾಸವಾಗಿದ್ದರು.
- 2 Chronicles 20:10–11 2 ಪೂರ್ವಕಾಲವೃತ್ತಾಂತ 20:10–11ಈಗ ಇಗೋ, ಅಮ್ಮೋನ್ ಮೋವಾಬ್, ಸೇಯಾರ್ ಬೆಟ್ಟದ ಮಕ್ಕಳನ್ನು ನೋಡು; ಇಸ್ರಾಯೇಲ್ಯರು ಐಗುಪ್ತದೇಶ ದೊಳಗಿಂದ ಹೊರಟು ಬರುವಾಗ ಅವರ ಕಡೆಗೆ ಹೋಗಲು ನೀನು ಇವರಿಗೆ ಅಪ್ಪಣೆಕೊಡದೆ ಇದ್ದದ ರಿಂದ ಇವರು ತೊಲಗಿ ಅವರನ್ನು ನಾಶಮಾಡದೆ ಹೋದರು. ಇಗೋ, ನಮಗೆ ನೀನು ಸ್ವಾಧೀನ ಮಾಡಿಕೊಳ್ಳಲು ಕೊಟ್ಟ ನಿನ್ನ ಸ್ವಾಸ್ಥ್ಯದೊಳಗಿಂದ ಅವರು ಬಂದು ನಮ್ಮನ್ನು ಹೊರಡಿಸಬೇಕೆಂದು ನಮಗೆ ಪ್ರತೀಕಾರ ಮಾಡುತ್ತಾರೆ.
- 2 Chronicles 20:1 2 ಪೂರ್ವಕಾಲವೃತ್ತಾಂತ 20:1ಇದರ ತರುವಾಯ ಏನಾಯಿತಂದರೆ, ಮೋವಾಬಿನ ಮಕ್ಕಳೂ ಅಮ್ಮೋನಿನ ಮಕ್ಕಳೂ ಅಮ್ಮೋನ್ಯರ ಕೊಡ ಇತರರೂ ಯೆಹೋ ಷಾಫಾಟನ ಮೇಲೆ ಯುದ್ಧಮಾಡಲು ಬಂದರು.
- Psalm 137:7 ಕೀರ್ತನೆಗಳು 137:7ಹಾಳುಮಾಡಿರಿ, ಅದರ ಅಸ್ತಿವಾರದ ವರೆಗೆ ಹಾಳು ಮಾಡಿರಿ ಎಂದು ಹೇಳಿದ ಎದೋಮಿನ ಮಕ್ಕಳನ್ನು ಯೆರೂಸಲೇಮಿನ ದಿವಸದಲ್ಲಿ ಕರ್ತನೇ, ಜ್ಞಾಪಕ ಮಾಡಿಕೋ.
- Genesis 25:12–18 ಆದಿಕಾಂಡ 25:12–18ಸಾರಳ ದಾಸಿಯಾದ ಐಗುಪ್ತ್ಯದ ಹಾಗರಳು ಅಬ್ರಹಾಮನಿಗೆ ಹೆತ್ತ ಅಬ್ರಹಾಮನ ಮಗನಾದ ಇಷ್ಮಾಯೇಲನ ವಂಶಾವಳಿಗಳು. ಅವರ ವಂಶಾ ವಳಿಗಳ ಪ್ರಕಾರ ಇಷ್ಮಾಯೇಲನ ಕುಮಾರರ ಹೆಸರು ಗಳು ಇವೇ: ಇಷ್ಮಾಯೇಲನ ಚೊಚ್ಚಲಮಗನು ನೆಬಾಯೋತ್ ಕೇದಾರ್ ಅದ್ಬಯೇಲ್ ಮಿಬ್ಸಾಮ್ ಮಿಷ್ಮಾ ದೂಮಾ ಮಸ್ಸಾ ಹದದ್ ತೇಮಾ ಯಟೂರ್ ನಾಫೀಷ್ ಕೇದ್ಮಾ. ಇವರೇ ಇಷ್ಮಾಯೇಲನ ಕುಮಾರರು; ಇವುಗಳೇ ಅವರ ಗ್ರಾಮಗಳ ಕೋಟೆಗಳ ಪ್ರಕಾರವಾಗಿ ಇರುವ ಅವರ ಹೆಸರುಗಳು. ಅವರು ತಮ್ಮ ಜನಾಂಗಗಳ ಪ್ರಕಾರ ಹನ್ನೆರಡು ಮಂದಿ ಪ್ರಭುಗಳು. ಇಷ್ಮಾಯೇಲನು ಬದುಕಿದ ವರುಷಗಳು ನೂರ ಮೂವತ್ತೇಳು ವರುಷಗಳು; ಅವನು ಪ್ರಾಣಬಿಟ್ಟು ಸತ್ತು ತನ್ನ ಜನರೊಂದಿಗೆ ಸೇರಿಸಲ್ಪಟ್ಟನು. ಇದಲ್ಲದೆ ಅವರು ಹವೀಲ ಮೊದಲುಗೊಂಡು ಅಶ್ಶೂರಿಗೆ ಹೋಗುವ ಮಾರ್ಗದಲ್ಲಿ ಐಗುಪ್ತಕ್ಕೆ ಮುಂದೆ ಇರುವ ಶೂರಿನ ವರೆಗೆ ವಾಸಮಾಡಿದರು. ಅವನು ತನ್ನ ಸಹೋದರರೆಲ್ಲರ ಎದುರಿನಲ್ಲಿಯೇ ಸತ್ತನು.
- 1 Chronicles 5:19–20 1 ಪೂರ್ವಕಾಲವೃತ್ತಾಂತ 5:19–20ಇವರು ಹಗ್ರೀಯರಾದ ಯೆಟೂರನು ನಾಫೀಷನು ನೋದಾ ಬನು ಎಂಬ ಇವರ ಸಂಗಡ ಯುದ್ಧಮಾಡಿದರು. ಇವರು ಅವರಿಗೆ ವಿರೋಧವಾಗಿ ಸಹಾಯಹೊಂದಿ ದ್ದರಿಂದ ಹಗ್ರೀಯರೂ ಅವರ ಸಂಗಡ ಕೂಡಿದ್ದ ವರೆಲ್ಲರೂ ಇವರ ಕೈಯಲ್ಲಿ ಒಪ್ಪಿಸಲ್ಪಟ್ಟರು. ಯಾಕಂದರೆ ಅವರು ಯುದ್ಧದಲ್ಲಿ ದೇವರಿಗೆ ಮೊರೆಯಿಟ್ಟು ಆತನಲ್ಲಿ ಭರವಸವಿಟ್ಟದ್ದರಿಂದ ಆತನು ಅವರ ಮನವಿಯನ್ನು ಕೇಳಿದನು.