Psalms · chapter 89 · verse 51
Psalm 89:51 in Kannada
ಕರ್ತನೇ, ನಿನ್ನ ಶತ್ರುಗಳು ನಿಂದಿಸುತ್ತಾ ರಲ್ಲಾ? ನಿನ್ನ ಅಭಿಷಿಕ್ತನ ಹೆಜ್ಜೆಗಳನ್ನು ನಿಂದಿಸುತ್ತಾ ರಲ್ಲಾ?ಕರ್ತನಿಗೆ ಯುಗಯುಗಕ್ಕೂ ಸ್ತುತಿಯಾಗಲಿ. ಆಮೆನ್, ಅಮೆನ್.
Kartane, ninna shatrugalu nindisuttaa rallaa? Ninna abhishiktana hejjegalannu nindisuttaa rallaa?kartanige yugayugakkoo stutiyaagali. Aamen, amen.
Psalm 89:51 in English
- King James Version (KJV)
- Wherewith thine enemies have reproached, O LORD; wherewith they have reproached the footsteps of thine anointed.
- World English Bible (WEB)
- With which your enemies have mocked, LORD, with which they have mocked the footsteps of your anointed one.
- American Standard Version (ASV)
- Wherewith thine enemies have reproached, O Jehovah, Wherewith they have reproached the footsteps of thine anointed.
- Bible in Basic English (BBE)
- The bitter words of your haters, O Lord, shaming the footsteps of your king.
- Darby Translation (DBY)
- Wherewith thine enemies, O Jehovah, have reproached, wherewith they have reproached the footsteps of thine anointed.
- Webster's Bible (WBS)
- With which thy enemies have reproached, O LORD; with which they have reproached the footsteps of thy anointed
- Young's Literal Translation (YLT)
- Wherewith Thine enemies reproached, O Jehovah, Wherewith they have reproached The steps of Thine anointed.
Read in context
- 49ಕರ್ತನೇ, ನಿನ್ನ ಸತ್ಯದಲ್ಲಿ ನೀನು ದಾವೀದನಿಗೆ ಆಣೆ ಇಟ್ಟ ನಿನ್ನ ಮುಂಚಿನ ಪ್ರೀತಿ ಕರುಣೆಯು ಎಲ್ಲಿ?
- 50ಕರ್ತನೇ, ನಿನ್ನ ಸೇವಕರ ನಿಂದೆ ಯನ್ನು, ಎಲ್ಲಾ ಪರಾಕ್ರಮಿಗಳ ನಿಂದೆಯನ್ನು ನಾನು ಹೇಗೆ ನನ್ನ ಎದೆಯಲ್ಲಿ ಹೊತ್ತೆನೆಂದೂ ಜ್ಞಾಪಕ ಮಾಡಿಕೋ.
- 51ಕರ್ತನೇ, ನಿನ್ನ ಶತ್ರುಗಳು ನಿಂದಿಸುತ್ತಾ ರಲ್ಲಾ? ನಿನ್ನ ಅಭಿಷಿಕ್ತನ ಹೆಜ್ಜೆಗಳನ್ನು ನಿಂದಿಸುತ್ತಾ ರಲ್ಲಾ?ಕರ್ತನಿಗೆ ಯುಗಯುಗಕ್ಕೂ ಸ್ತುತಿಯಾಗಲಿ. ಆಮೆನ್, ಅಮೆನ್.
- 52ಕರ್ತನಿಗೆ ಯುಗಯುಗಕ್ಕೂ ಸ್ತುತಿಯಾಗಲಿ. ಆಮೆನ್, ಅಮೆನ್.
Cross references
- 1 Peter 4:14–16 1 ಪೇತ್ರನು 4:14–16ನೀವು ಕ್ರಿಸ್ತನ ಹೆಸರಿನ ನಿಮಿತ್ತ ನಿಂದೆಗೆ ಗುರಿಯಾದರೆ ಸಂತೋಷಪಡಿರಿ; ಯಾಕಂದರೆ ಮಹಿಮೆ ಯುಳ್ಳ ದೇವರ ಆತ್ಮನು ನಿಮ್ಮ ಮೇಲೆ ನೆಲೆಗೊಂಡಿ ದ್ದಾನಲ್ಲಾ. ಅವರ ವಿಷಯದಲ್ಲಿ ಆತನು ದೂಷಿಸ ಲ್ಪಡುತ್ತಾನೆ; ಆದರೆ ನಿಮ್ಮ ವಿಷಯದಲ್ಲಿ ಆತನು ಮಹಿಮೆ ಹೊಂದುತ್ತಾನೆ. ನಿಮ್ಮಲ್ಲಿ ಯಾವನಾದರೂ ಕೊಲೆಗಾರನು ಕಳ್ಳನು ದುಷ್ಟನು ಪರರಕಾರ್ಯಗಳಲ್ಲಿ ತಲೆಹಾಕುವವನು ಆಗಿದ್ದು ಬಾಧೆಯನ್ನನುಭವಿಸ ಬಾರದು. ಕ್ರೈಸ್ತನಾಗಿ ಬಾಧೆಪಟ್ಟರೆ ಅವನು ನಾಚಿಕೆ ಪಡದೆ ಅದರಲ್ಲಿಯೇ ದೇವರನ್ನು ಘನಪಡಿಸಲಿ.
- Psalm 74:10 ಕೀರ್ತನೆಗಳು 74:10ಓ ದೇವರೇ, ವೈರಿಯು ನಿಂದಿಸುವದು ಎಷ್ಟರ ವರೆಗೆ? ಶತ್ರುವು ನಿನ್ನ ಹೆಸರನ್ನು ಎಂದೆಂದಿಗೂ ದೂಷಿ ಸುವನೋ?
- 1 Corinthians 4:12–13 1 ಕೊರಿಂಥದವರಿಗೆ 4:12–13ಈ ಗಳಿಗೆಯ ವರೆಗೂ ನಾವು ಹಸಿದವರೂ ಬಾಯಾರಿಕೆಯುಳ್ಳವರೂ ವಸ್ತ್ರವಿಲ್ಲದವರೂ ಗುದ್ದುತಿನ್ನುವವರೂ ಮನೆಯಿಲ್ಲ ದವರೂ ಅಪಕೀರ್ತಿ ಹೊಂದಿ ಬೇಡಿಕೊಳ್ಳುತ್ತೇವೆ. ನಾವು ಈಗಿನವರೆಗೂ ಲೋಕದ ಕಸವೋ ಎಲ್ಲಾದರ ಹೊಲಸೋ ಎಂಬಂತೆ ಮಾಡಲ್ಪಟ್ಟಿದ್ದೇವೆ.
- 2 Samuel 16:7–8 2 ಸಮುವೇಲನು 16:7–8ಶಿಮ್ಮಿ ಅವನನ್ನು ದೂಷಿಸುತ್ತಾ--ರಕ್ತದ ಮನುಷ್ಯನೇ, ಬೆಲಿಯಾಳನ ಮನುಷ್ಯನೇ, ಹೊರಟು ಬಾ, ಹೊರಟು ಬಾ. ಕರ್ತನು ಸೌಲನ ಮನೆಯವರ ರಕ್ತವನ್ನು ಸೌಲನಿಗೆ ಪ್ರತಿಯಾಗಿ ಅರಸನಾದ ನಿನ್ನ ಮೇಲೆ ತಿರಿಗಿ ಬರಮಾಡಿ ರಾಜ್ಯವನ್ನು ನಿನ್ನ ಮಗನಾದ ಅಬ್ಷಾಲೋಮನ ಕೈಯಲ್ಲಿ ಒಪ್ಪಿಸಿಕೊಟ್ಟನು; ನೀನು ರಕ್ತದ ಮನುಷ್ಯನಾದದರಿಂದ ಇಗೋ, ನಿನ್ನ ಕೇಡಿನಲ್ಲಿ ಸಿಕ್ಕಿಕೊಂಡಿ ಅಂದನು.
- 1 Peter 2:20–21 1 ಪೇತ್ರನು 2:20–21ತಪ್ಪುಮಾಡಿ ಗುದ್ದು ತಿನ್ನುವದರಲ್ಲಿ ನೀವು ತಾಳ್ಮೆ ಯಿಂದಿದ್ದರೆ ಅದರಿಂದೇನು ಹೆಚ್ಚಳ? ಆದರೆ ಒಳ್ಳೇ ದನ್ನು ಮಾಡಿ ಬಾಧೆಪಡುವದರಲ್ಲಿ ನೀವು ತಾಳ್ಮೆಯಿಂದಿ ದ್ದರೆ ಇದು ದೇವರಿಗೆ ಅಂಗೀಕೃತವಾಗಿದೆ. ಇದ ಕ್ಕಾಗಿಯೇ ನೀವು ಕರೆಯಲ್ಪಟ್ಟಿರಿ; ಕ್ರಿಸ್ತನು ಸಹ ನಮಗೋಸ್ಕರ ಬಾಧೆಯನ್ನನುಭವಿಸಿ ನೀವು ತನ್ನ ಹೆಜ್ಜೆಯ ಜಾಡಿನಲ್ಲಿ ನಡೆಯಬೇಕೆಂದು ನಮಗೆ ಮಾದರಿಯನ್ನು ಬಿಟ್ಟು ಹೋದನು.
- Hebrews 10:33 ಇಬ್ರಿಯರಿಗೆ 10:33ಕೆಲವು ಸಾರಿ ನೀವು ಎರಡನ್ನು ಅಂದರೆ ನಿಂದೆಗಳನ್ನೂ ಉಪ ದ್ರವಗಳನ್ನೂ ಅನುಭವಿಸಿ ಹಾಸ್ಯದ ನೋಟಕ್ಕೆ ಗುರಿ ಯಾದಿರಿ; ಕೆಲವು ಸಾರಿ ಅಂಥವುಗಳನ್ನು ಅನುಭವಿಸು ವವರ ಜೊತೆಗಾರರಾದಿರಿ.
- Matthew 12:24 ಮತ್ತಾಯನು 12:24ಆದರೆ ಫರಿಸಾಯರು ಇದನ್ನು ಕೇಳಿದಾಗ--ಇವನು ದೆವ್ವಗಳ ಅಧಿಪತಿಯಾಗಿರುವ ಬೆಲ್ಜೆಬೂಲನಿಂದಲೇ ಹೊರತು ದೆವ್ವಗಳನ್ನು ಬಿಡಿಸು ವದಿಲ್ಲ ಅಂದರು.
- Psalm 56:5–6 ಕೀರ್ತನೆಗಳು 56:5–6ಪ್ರತಿದಿನ ಅವರು ನನ್ನ ಮಾತುಗಳನ್ನು ಅಪಾರ್ಥ ಮಾಡುತ್ತಾರೆ. ನನಗೆ ವಿರೋಧವಾಗಿರುವ ಅವರ ಆಲೋಚನೆಗಳೆಲ್ಲಾ ನನ್ನ ಕೇಡಿಗಾಗಿವೆ. ಅವರು ಕೂಡಿಕೊಂಡು ಹೊಂಚುಹಾಕುತ್ತಾರೆ; ನನ್ನ ಪ್ರಾಣಕ್ಕೆ ಕಾಯುವವರಾಗಿ ನನ್ನ ಹೆಜ್ಜೆಗಳನ್ನು ಗುರುತಿಸುತ್ತಾರೆ.
- John 8:48 ಯೋಹಾನನು 8:48ಆಗ ಯೆಹೂದ್ಯರು ಪ್ರತ್ಯುತ್ತರವಾಗಿ ಆತನಿಗೆ--ನೀನು ಸಮಾರ್ಯನು ಮತ್ತು ನಿನಗೆ ದೆವ್ವ ಹಿಡಿದದೆ ಎಂದು ನಾವು ಹೇಳುವದು ಸರಿಯಲ್ಲವೋ ಎಂದು ಹೇಳಿದರು.
- Acts 5:41 ಅಪೊಸ್ತಲರ ಕೃತ್ಯಗಳು 5:41ಆತನ ಹೆಸರಿಗಾಗಿ ಅವಮಾನಪಡುವದಕ್ಕೆ ತಾವು ಯೋಗ್ಯರೆಂದು ಎಣಿಸ ಲ್ಪಟ್ಟದ್ದಕ್ಕಾಗಿ ಅವರು ಸಂತೋಷಿಸುತ್ತಾ ಆಲೋಚನಾ ಸಭೆಯಿಂದ ಹೊರಟುಹೋದರು.ಪ್ರತಿದಿನ ದೇವಾಲಯದಲ್ಲಿಯೂ ಪ್ರತಿಯೊಂದು ಮನೆಯ ಲ್ಲಿಯೂ ಯೇಸು ಕ್ರಿಸ್ತನ ವಿಷಯವಾಗಿ ಎಡೆಬಿಡದೆ ಬೋಧಿಸುತ್ತಾ ಸಾರುತ್ತಾ ಇದ್ದರು.
- Matthew 5:10–12 ಮತ್ತಾಯನು 5:10–12ನೀತಿಯ ನಿಮಿತ್ತವಾಗಿ ಹಿಂಸಿಸಲ್ಪಡುವವರು ಧನ್ಯರು; ಯಾಕಂದರೆ ಪರಲೋಕರಾಜ್ಯವು ಅವರದು. ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ದೂಷಿಸಿ ಹಿಂಸಿಸಿ ನಿಮಗೆ ವಿರೋಧವಾಗಿ ಎಲ್ಲಾ ತರದ ಕೆಟ್ಟದ್ದನ್ನು ಸುಳ್ಳಾಗಿ ಹೇಳಿದರೆ ನೀವು ಧನ್ಯರು. ಸಂತೋಷಿಸಿರಿ, ಅತಿ ಉಲ್ಲಾಸದಿಂದಿರ್ರಿ; ಯಾಕಂದರೆ ಪರಲೋಕದಲ್ಲಿ ನಿಮ್ಮ ಪ್ರತಿಫಲವು ದೊಡ್ಡದಾಗಿದೆ; ನಿಮಗಿಂತ ಮುಂಚೆ ಇದ್ದ ಪ್ರವಾದಿ ಗಳನ್ನು ಅವರು ಹೀಗೆಯೇ ಹಿಂಸಿಸಿದರಲ್ಲಾ.
- Hebrews 11:36 ಇಬ್ರಿಯರಿಗೆ 11:36ಬೇರೆ ಕೆಲವರು ಅಪಹಾಸ್ಯ ಕೊರಡೆಯಪೆಟ್ಟು, ಹೌದು, ಇನ್ನು ಬೇಡಿ ಸೆರೆಮನೆ ಇವುಗಳನ್ನು ಅನುಭವಿಸಿದರು.