Psalms · chapter 94 · verse 20
Psalm 94:20 in Kannada
ವಿಧಿಯಿಂದ ಕೇಡನ್ನು ಕಲ್ಪಿಸುವ ಅಪರಾಧದ ಸಿಂಹಾಸನವು ನಿನ್ನ ಸಂಗಡ ಅನ್ಯೋನ್ಯವಾಗಿರು ವದೋ?
Vidhiyinda kedannu kalpisuva aparaadhada sinhaasanavu ninna sangada anyonyavaagiru vado?
Psalm 94:20 in English
- King James Version (KJV)
- Shall the throne of iniquity have fellowship with thee, which frameth mischief by a law?
- World English Bible (WEB)
- Shall the throne of wickedness have fellowship with you, which brings about mischief by statute?
- American Standard Version (ASV)
- Shall the throne of wickedness have fellowship with thee, Which frameth mischief by statute?
- Bible in Basic English (BBE)
- What part with you has the seat of sin, which makes evil into a law?
- Darby Translation (DBY)
- Shall the throne of wickedness be united to thee, which frameth mischief into a law?
- Webster's Bible (WBS)
- Shall the throne of iniquity have fellowship with thee, which frameth mischief by a law?
- Young's Literal Translation (YLT)
- Is a throne of mischief joined [with] Thee? A framer of perverseness by statute?
Read in context
- 18ನನ್ನ ಕಾಲುಜಾರಿತೋ ಎಂದು ನಾನು ಅಂದಾಗಲೇ ಓ ಕರ್ತನೇ, ನಿನ್ನ ಕರುಣೆಯು ನನ್ನನ್ನು ಎತ್ತಿಹಿಡಿಯಿತು.
- 19ನನ್ನ ಚಿಂತೆಗಳು ಅಂತರಂಗದಲ್ಲಿ ಹೆಚ್ಚುವಾಗ ನಿನ್ನ ಆದರಣೆಗಳು ನನ್ನ ಪ್ರಾಣವನ್ನು ಆನಂದಪಡಿಸುತ್ತವೆ.
- 20ವಿಧಿಯಿಂದ ಕೇಡನ್ನು ಕಲ್ಪಿಸುವ ಅಪರಾಧದ ಸಿಂಹಾಸನವು ನಿನ್ನ ಸಂಗಡ ಅನ್ಯೋನ್ಯವಾಗಿರು ವದೋ?
- 21ನೀತಿವಂತನ ಪ್ರಾಣಕ್ಕೆ ವಿರೋಧವಾಗಿ ಅವರು ಕೂಡಿಕೊಳ್ಳುತ್ತಾರೆ; ನಿರಪರಾಧಿಯ ರಕ್ತವನ್ನು ಖಂಡಿಸುತ್ತಾರೆ.
- 22ಆದರೆ ಕರ್ತನು ನನಗೆ ದುರ್ಗವೂ ನನ್ನ ದೇವರು ನನ್ನ ಆಶ್ರಯದ ಬಂಡೆಯೂ ಆಗಿದ್ದಾನೆ.ಅವರ ಅಪರಾಧವನ್ನು ಅವರ ಮೇಲೆ ತಿರಿಗಿ ಬರಮಾಡುವನು; ಅವರ ಕೇಡಿನಲ್ಲಿ ಅವರನ್ನು ಸಂಹರಿಸುವನು; ನಮ್ಮ ದೇವರಾದ ಕರ್ತನು ಅವರನ್ನು ಸಂಹರಿಸುವನು.
Cross references
- Isaiah 10:1 ಯೆಶಾಯ 10:1ಅನೀತಿಯ ನೇಮಕಗಳನ್ನು ನೇಮಿಸಿ, ಕ್ರೂರವಾದ ಬರಹ ಬರೆಯುವವರಿಗೆ ಅಯ್ಯೋ!
- Psalm 58:2 ಕೀರ್ತನೆಗಳು 58:2ಹೌದು, ನಿಮ್ಮ ಹೃದಯದಲ್ಲಿ ದುಷ್ಟತ್ವ ವನ್ನು ಮಾಡುತ್ತೀರಲ್ಲಾ, ಲೋಕದಲ್ಲಿ ನಿಮ್ಮ ಕೈಗಳ ಬಲಾತ್ಕಾರವನ್ನು ತೂಗುತ್ತೀರಲ್ಲಾ.
- John 11:57 ಯೋಹಾನನು 11:57ಆಗ ಪ್ರಧಾನಯಾಜಕರೂ ಫರಿಸಾಯ ರೂ ಆತನನ್ನು ಹಿಡಿಯುವಂತೆ ಆತನಿರುವ ಸ್ಥಳವು ಯಾರಿಗಾದರೂ ತಿಳಿದರೆ ಅವರು ತಮಗೆ ತೋರಿಸ ಬೇಕೆಂದು ಅಪ್ಪಣೆ ಕೊಟ್ಟಿದ್ದರು.
- Revelation 13:15–17 ಪ್ರಕಟನೆ 13:15–17ಮೃಗದ ವಿಗ್ರಹವು ಮಾತನಾಡುವಂತೆಯೂ ಆ ಮೃಗದ ವಿಗ್ರಹವನ್ನು ಯಾರಾರು ಆರಾಧಿಸುವದಿಲ್ಲವೋ ಅವರನ್ನು ಕೊಲ್ಲಿಸು ವಂತೆಯೂ ಆ ಮೃಗದ ವಿಗ್ರಹಕ್ಕೆ ಜೀವ ಕೊಡುವ ಅಧಿಕಾರವು ಅದಕ್ಕೆ ಇತ್ತು. ಅದು ಚಿಕ್ಕವರು ದೊಡ್ಡ ವರು ಐಶ್ವರ್ಯವಂತರು ಬಡವರು ಸ್ವತಂತ್ರರು ದಾಸರು ಎಲ್ಲರೂ ತಮ್ಮ ತಮ್ಮ ಬಲಗೈಯ ಮೇಲಾಗಲಿ ಹಣೆಗಳ ಮೇಲಾಗಲಿ ಗುರುತು ಹೊಂದಬೇಕೆಂತಲೂ ಆ ಗುರುತಾಗಲಿ ಮೃಗದ ಹೆಸರಾಗಲಿ ಅದರ ಹೆಸರಿನ ಅಂಕೆಯಾಗಲಿ ಇಲ್ಲದವನು ಕ್ರಯ ವಿಕ್ರಯಗಳನ್ನು ಮಾಡದಂತೆಯೂ ಅದು ಮಾಡುತ್ತದೆ.ಇದರಲ್ಲಿ ಜ್ಞಾನವಿದೆ. ತಿಳುವಳಿಕೆಯುಳ್ಳವನು ಆ ಮೃಗದ ಅಂಕೆಯನ್ನು ಎಣಿಸಲಿ; ಯಾಕಂದರೆ ಅದು ಒಬ್ಬ ಮನುಷ್ಯನ ಅಂಕೆಯಾಗಿದೆ; ಅವನ ಅಂಕೆಯು ಆರುನೂರ ಅರವತ್ತಾರು.
- Ecclesiastes 3:16 ಪ್ರಸಂಗಿ 3:16ಕೆಟ್ಟದ್ದು ಇತ್ತೆಂದು ಸೂರ್ಯನ ಕೆಳಗೆ ನ್ಯಾಯ ತೀರ್ಪಿನ ಸ್ಥಳವನ್ನು ಮತ್ತು ದುಷ್ಕೃತ್ಯ ಇದೆಯೆಂದು ನೀತಿಯ ಸ್ಥಾನವನ್ನು ನಾನು ಕಂಡೆನು.
- Micah 6:16 ಮೀಕ 6:16ಒಮ್ರಿಯ ನಿಯಮಗಳನ್ನೂ ಅಹಾಬನ ಮನೆಯ ಸಮಸ್ತ ಕ್ರಿಯೆಗಳನ್ನೂ ಕೈಕೊಳ್ಳುತ್ತೀರಿ; ನಾನು ನಿನ್ನನ್ನು ಹಾಳಾ ಗಿಯೂ ಅದರ ನಿವಾಸಿಗಳನ್ನು ಸಿಳ್ಳಿಡುವಿಕೆಗಾಗಿಯೂ ಮಾಡುವ ಹಾಗೆ ಅವರ ಆಲೋಚನೆಗಳಲ್ಲಿ ನಡ ಕೊಳ್ಳುತ್ತೀರಿ; ಆದದರಿಂದ ನನ್ನ ಜನರ ನಿಂದೆಯನ್ನು ಹೊರುವಿರಿ.
- Amos 6:3 ಆಮೋಸ 6:3ನೀವು ಕೆಟ್ಟ ದಿನವನ್ನು ದೂರಮಾಡಿ ಕೊಂಡು ಬಲಾತ್ಕಾರದ ಪೀಠವನ್ನು ಹತ್ತಿರ ಮಾಡಿಕೊ ಳ್ಳುತ್ತೀರಿ.
- Psalm 50:16 ಕೀರ್ತನೆಗಳು 50:16ಆದರೆ ದುಷ್ಟನಿಗೆ ದೇವರು ಹೇಳುವದೇನಂದರೆ --ನನ್ನ ನಿಯಮಗಳನ್ನು ಪ್ರಕಟಿಸುವದು ನಿನಗೇನು? ಇಲ್ಲವೆ ನನ್ನ ಒಡಂಬಡಿಕೆಯನ್ನು ನಿನ್ನ ಬಾಯಲ್ಲಿ ಉಚ್ಚರಿಸುವದೇಕೆ?
- Daniel 3:4–7 ದಾನಿಯೇಲನು 3:4–7ಆಗ ಸಾರುವವನು ಗಟ್ಟಿ ಯಾಗಿ ಕೂಗಿ--ಓ ಪ್ರಜೆಗಳೇ, ಜನಾಂಗಗಳೇ ಮತ್ತು ನಾನಾ ಭಾಷೆಯವರೇ, ನಿಮಗೆ ಆಜ್ಞಾಪಿಸುವದೇ ನಂದರೆ-- ನೀವು ಕೊಂಬು, ಪಿಳ್ಳಂಗೋವಿ, ತಂಬೂರಿ, ವೀಣೆ, ಕಿನ್ನರಿ, ನಾದಸ್ವರ ಮೊದಲಾದ ವಾದ್ಯಗಳ ಶಬ್ದವನ್ನು ಕೇಳುವಾಗ ಅರಸನಾದ ನೆಬೂಕ ದ್ನೆಚ್ಚರನು ನಿಲ್ಲಿಸಿದ್ದ ಬಂಗಾರದ ಪ್ರತಿಮೆಯ ಮುಂದೆ ಅಡ್ಡಬಿದ್ದು ಆರಾಧಿಸಬೇಕು. ಯಾವನು ಅಡ್ಡಬೀಳ ದೆಯೂ ನಮಸ್ಕರಿಸದೆಯೂ ಇರುವನೋ ಅವನು ಅದೇ ಗಳಿಗೆಯಲ್ಲಿ ಉರಿಯುವ ಬೆಂಕಿಯ ಆವಿಗೆಯ ಮಧ್ಯದಲ್ಲಿ ಹಾಕಲ್ಪಡುವನು ಅಂದನು. ಆದದರಿಂದ ಆ ಸಮಯದಲ್ಲಿ ಜನರೆಲ್ಲರು ಕೊಂಬು, ಕೊಳಲು, ತಂಬೂರಿ, ವೀಣೆ, ಕಿನ್ನರಿ ನಾದಸ್ವರ ಮೊದಲಾದವುಗಳ ಶಬ್ದವನ್ನು ಕೇಳುವಾಗ ಎಲ್ಲಾ ಪ್ರಜೆಗಳು ಜನಾಂಗಗಳು, ಭಾಷೆಯವರು ಅಡ್ಡಬಿದ್ದು ಅರಸನಾದ ನೆಬೂಕದ್ನೆ ಚ್ಚರನು ನಿಲ್ಲಿಸಿದ ಪ್ರತಿಮೆಯನ್ನು ಆರಾಧಿಸಿದರು.
- Daniel 6:7–9 ದಾನಿಯೇಲನು 6:7–9ರಾಜ್ಯದ ಎಲ್ಲಾ ದೇಶಾಧಿಪತಿಗಳೂ ರಾಜ್ಯಪಾಲರೂ ನಾಯ ಕರೂ ಪ್ರಧಾನರೂ ಆಲೋಚನೆಗಾರರೂ ಒಟ್ಟುಗೂಡಿ ಆಲೋಚಿಸಿದ್ದೇನಂದರೆ--ಓ ಅರಸನೇ, ಯಾರಾದರೂ ಮೂವತ್ತು ದಿವಸಗಳವರೆಗೂ ನಿನ್ನನ್ನು ಬಿಟ್ಟು ಬೇರೆ ಯಾವ ದೇವರಿಗಾಗಲಿ ಮನುಷ್ಯರಿಗಾಗಲಿ ವಿಜ್ಞಾ ಪನೆ ಮಾಡಿದ್ದಾದರೆ ಅಂತವರು ಸಿಂಹದ ಗವಿಯಲ್ಲಿ ಹಾಕಲ್ಪಡುವರೆಂಬ ರಾಜಾಜ್ಞೆಯನ್ನು ವಿಧಿಸಿ, ಸ್ಥಿರ ಕಟ್ಟಳೆ ಯನ್ನು ಕೊಡತಕ್ಕದ್ದು. ಓ ರಾಜನೇ, ಈಗ ನೀನು ಈ ನಿಬಂಧನೆಯನ್ನು ವಿಧಿಸಿ ಇದು ಬದಲಾಗದಂತೆ ಮೇದ್ಯಯರ ಮತ್ತು ಪಾರಸೀಯರ ನ್ಯಾಯಪ್ರಮಾಣದ ಪ್ರಕಾರ ಇದು ಬೇರೆಯಾಗದಂತೆ ನಿರ್ಣಯವನ್ನು ರೂಪಿಸಿ ಬರಹಕ್ಕೆ ರುಜುಹಾಕು ಅಂದರು. ಆದಕಾರಣ ದಾರ್ಯಾವೆಷನು ಆ ಬರಹಕ್ಕೂ ನಿರ್ಣಯಕ್ಕೂ ರುಜು ಹಾಕಿದನು.
- Esther 3:6–12 ಎಸ್ತೇರಳು 3:6–12ಆದರೆ ಮೊರ್ದೆಕೈಯ ಮೇಲೆ ಮಾತ್ರ ಕೈ ಹಾಕುವದು ಅವನಿಗೆ ಅಲ್ಪವಾಗಿ ತೋರಿತು. ಯಾಕಂದರೆ ಅವರು ಮೊರ್ದೆಕೈ ಜನವನ್ನು ಅವನಿಗೆ ತೋರಿಸಿದ್ದರು. ಆದದರಿಂದ ಹಾಮಾನನು ಅಹಷ್ವೇರೋಷನ ಸಮಸ್ತ ರಾಜ್ಯದಲ್ಲಿರುವ ಮೊರ್ದೆಕೈಯ ಜನವಾದ ಯೆಹೂದ್ಯರನ್ನೆಲ್ಲಾ ನಾಶಮಾಡಲು ಯೋಚಿ ಸಿದನು. ಅರಸನಾದ ಅಹಷ್ವೇರೋಷನ ಹನ್ನೆರಡನೆ ವರುಷದಲ್ಲಿ ನೀಸಾನ್ ಎಂಬ ಮೊದಲನೇ ತಿಂಗಳಲ್ಲಿ ಹಾಮಾನನ ಮುಂದೆ ಪೂರ್ ಎಂಬ ಚೀಟನ್ನು ದಿನ ದಿನಕ್ಕೂ ತಿಂಗಳು ತಿಂಗಳಿಗೂ ಅಡಾರ್ ಎಂಬ ಹನ್ನೆರಡನೆ ತಿಂಗಳ ವರೆಗೆ ಹಾಕಿದರು. ಆಗ ಹಾಮಾ ನನು ಅರಸನಾದ ಅಹಷ್ವೇರೋಷನಿಗೆ ಹೇಳಿ ದ್ದೇನಂದರೆ--ನಿನ್ನ ರಾಜ್ಯದ ಸಕಲ ಪ್ರಾಂತ್ಯಗಳಲ್ಲಿರುವ ಜನರೊಳಗೆ ಚದುರಿಸಲ್ಪಟ್ಟು ವ್ಯಾಪಿಸಿರುವ ಜನರಿ ದ್ದಾರೆ. ಅವರ ನ್ಯಾಯ ಪ್ರಮಾಣಗಳು ಸಕಲ ಜನರಿಗೆ ಪ್ರತಿಕೂಲವಾಗಿವೆ. ಅವರು ಅರಸನ ಆಜ್ಞೆಗಳನ್ನು ಕೈಕೊಳ್ಳುವದಿಲ್ಲ. ಆದಕಾರಣ ಅವರನ್ನು ಇರಗೊಡಿ ಸುವದು ಅರಸನ ಪ್ರಯೋಜನಕ್ಕೆ ತಕ್ಕದ್ದಲ್ಲ. ಅದು ಅರಸನಿಗೆ ಸಮ್ಮತಿಯಾದರೆ ಅವರು ಸಂಹರಿಸಲ್ಪಡುವ ಹಾಗೆ ಬರೆಯಲ್ಪಡಲಿ. ಆಗ ನಾನು ಅರಸನ ಬೊಕ್ಕಸಕ್ಕೆ ತರುವದಕ್ಕೆ ಈ ಕೆಲಸ ಮಾಡುವವರ ಕೈಗಳಲ್ಲಿ ಹತ್ತು ಸಾವಿರ ಬೆಳ್ಳಿಯ ತಲಾಂತುಗಳನ್ನು ಕೊಡು ವೆನು ಅಂದನು. ಆಗ ಅರಸನು ತನ್ನ ಕೈಯಲ್ಲಿದ್ದ ಉಂಗುರವನ್ನು ತೆಗೆದು ಯೆಹೂದ್ಯರ ವೈರಿಯಾದ ಅಗಾಗನಾದ ಹಮ್ಮೆದಾತನ ಮಗನಾದ ಹಾಮಾನನಿಗೆ ಕೊಟ್ಟನು. ಅರಸನು ಹಾಮಾನನಿಗೆ, ಬೆಳ್ಳಿಯನ್ನೂ ಆ ಜನವನ್ನೂ ನಿನಗೆ ಸರಿಯಾಗಿ ತೋರುವ ಹಾಗೆ ಅವರಿಗೆ ಮಾಡುವದಕ್ಕೆ ನಿನ್ನ ಕೈಯಲ್ಲಿ ಅವು ಒಪ್ಪಿಸ ಲ್ಪಟ್ಟಿವೆ ಅಂದನು. ಆಗ ಮೊದಲನೇ ತಿಂಗಳ ಹದಿಮೂರನೇ ದಿವಸದಲ್ಲಿ ಅರಸನ ಲೇಖಕರು ಕರೆಯಲ್ಪಟ್ಟರು. ಹಾಮಾನನು ಆಜ್ಞಾಪಿಸಿದ ಎಲ್ಲಾದರ ಪ್ರಕಾರ ಪ್ರತಿ ಪ್ರಾಂತ್ಯದ ಮೇಲಿರುವ ಅರಸನ ಕೈ ಕೆಳಗಿನ ಉಪ ರಾಜರುಗಳಿಗೂ ಅಧಿಪತಿಗಳಿಗೂ ಪ್ರತಿ ಪ್ರಾಂತ್ಯದಲ್ಲಿ ಜನರ ಮೇಲಿರುವ ಅಧಿಕಾರಿಗೂ ಅದರದರ ಬರಹದ ಪ್ರಕಾರವಾಗಿಯೂ ಜನರ ಪ್ರತಿಯೊಬ್ಬರ ಭಾಷೆಯ ಪ್ರಕಾರವಾಗಿಯೂ ಬರೆಯಲ್ಪಟ್ಟಿತು. ಅದು ಅರಸನಾದ ಅಹಷ್ವೇರೋಷನ ಹೆಸರಿನಲ್ಲಿ ಬರೆಯಲ್ಪಟ್ಟು ಅರಸನ ಉಂಗುರದಿಂದ ಮುದ್ರೆ ಹಾಕಲ್ಪಟ್ಟಿತು.
- Ecclesiastes 5:8 ಪ್ರಸಂಗಿ 5:8ಬಡವರ ಹಿಂಸೆಯನ್ನೂ ಒಬ್ಬ ಅಧಿಪತಿಯಲ್ಲಿ ನೀತಿ ನ್ಯಾಯಗಳ ಬಲಾತ್ಕಾರದ ವಕ್ರತೆಯನ್ನೂ ನೀನು ನೋಡಿದರೆ ಆ ಸಂಗತಿಯಲ್ಲಿ ಆಶ್ಚರ್ಯಪಡಬೇಡ; ಉನ್ನತೋನ್ನತನು ಲಕ್ಷಿಸುತ್ತಾನೆ; ಅವರಿಗಿಂತ ಉನ್ನತವಾ ದವರು ಇದ್ದಾರೆ.