Revelation · chapter 10 · verse 1
Revelation 10:1 in Kannada
ಮೇಘವನ್ನು ಧರಿಸಿಕೊಂಡಿದ್ದ ಬಲಿಷ್ಠ ನಾದ ಮತ್ತೊಬ್ಬ ದೂತನು ಪರಲೋಕ ದಿಂದ ಇಳಿದು ಬರುವದನ್ನು ನಾನು ಕಂಡೆನು. ಅವನ ತಲೆಯ ಮೇಲೆ ಮಳೆ ಬಿಲ್ಲು ಇತ್ತು; ಅವನ ಮುಖವು ಸೂರ್ಯನಂತಿತ್ತು; ಅವನ ಪಾದಗಳು ಬೆಂಕಿಯ ಕಂಬಗಳಂತಿದ್ದವು;
Meghavannu dharisikondidda balishtha naada mattobba dootanu paraloka dinda ilidu baruvadannu naanu kandenu. Avana taleya mele male billu ittu; avana mukhavu sooryanantittu; avana paadagalu benkiya kambagalantiddavu;
Revelation 10:1 in English
- King James Version (KJV)
- And I saw another mighty angel come down from heaven, clothed with a cloud: and a rainbow [was] upon his head, and his face [was] as it were the sun, and his feet as pillars of fire:
- World English Bible (WEB)
- I saw a mighty angel coming down out of the sky, clothed with a cloud. A rainbow was on his head. His face was like the sun, and his feet like pillars of fire.
- American Standard Version (ASV)
- And I saw another strong angel coming down out of heaven, arrayed with a cloud; and the rainbow was upon his head, and his face was as the sun, and his feet as pillars of fire;
- Bible in Basic English (BBE)
- And I saw another strong angel coming down out of heaven, clothed with a cloud; and an arch of coloured light was round his head, and his face was like the sun, and his feet like pillars of fire;
- Darby Translation (DBY)
- And I saw another strong angel coming down out of the heaven, clothed with a cloud, and the rainbow upon his head, and his countenance as the sun, and his feet as pillars of fire,
- Webster's Bible (WBS)
- And I saw another mighty angel come down from heaven, clothed with a cloud: and a rainbow [was] upon his head, and his face [was] as it were the sun, and his feet as pillars of fire:
- Young's Literal Translation (YLT)
- And I saw another strong messenger coming down out of the heaven, arrayed with a cloud, and a rainbow upon the head, and his face as the sun, and his feet as pillars of fire,
Read in context
- 1ಮೇಘವನ್ನು ಧರಿಸಿಕೊಂಡಿದ್ದ ಬಲಿಷ್ಠ ನಾದ ಮತ್ತೊಬ್ಬ ದೂತನು ಪರಲೋಕ ದಿಂದ ಇಳಿದು ಬರುವದನ್ನು ನಾನು ಕಂಡೆನು. ಅವನ ತಲೆಯ ಮೇಲೆ ಮಳೆ ಬಿಲ್ಲು ಇತ್ತು; ಅವನ ಮುಖವು ಸೂರ್ಯನಂತಿತ್ತು; ಅವನ ಪಾದಗಳು ಬೆಂಕಿಯ ಕಂಬಗಳಂತಿದ್ದವು;
- 2ತೆರೆದಿದ್ದ ಒಂದು ಚಿಕ್ಕ ಪುಸ್ತಕವು ಅವನ ಕೈಯಲ್ಲಿ ಇತ್ತು; ಅವನು ತನ್ನ ಬಲಗಾಲನ್ನು ಸಮುದ್ರದ ಮೇಲೆಯೂ ಎಡಗಾಲನ್ನು ಭೂಮಿಯ ಮೇಲೆಯೂ ಇಟ್ಟು
- 3ಸಿಂಹವು ಗರ್ಜಿಸುವ ಪ್ರಕಾರ ಮಹಾಶಬ್ದದಿಂದ ಕೂಗಿದನು. ಅವನು ಕೂಗಿದಾಗ ಏಳು ಗುಡುಗುಗಳು ತಮ್ಮ ಧ್ವನಿಕೊಟ್ಟವು.
Cross references
- Ezekiel 1:28 ಯೆಹೆಜ್ಕೇಲನು 1:28ಮಳೆ ಬೀಳುವ ದಿನದಲ್ಲಿ ಮೇಘ ದೊಳಗೆ ಬಿಲ್ಲು ಹೇಗೆ ಕಾಣಿಸಲ್ಪಡುವದೋ ಹಾಗೆಯೇ ಅದರ ಸುತ್ತ ಆ ಪ್ರಕಾಶವು ಕಾಣಿಸಿತು. ಇದೇ ಕರ್ತನ ಮಹಿಮೆಯ ರೂಪದ ದರ್ಶನವಾಗಿತ್ತು. ಅದನ್ನು ನಾನು ನೋಡಿದಾಗ ನನ್ನ ಮುಖವನ್ನು ಕೆಳಗೆಮಾಡಿ ಬಿದ್ದೆನು. ಆಗ ಮಾತನಾಡುವ ಒಬ್ಬನ ಸ್ವರವನ್ನು ಕೇಳಿದೆನು.
- Matthew 17:2 ಮತ್ತಾಯನು 17:2ಅಲ್ಲಿ ಆತನು ಅವರ ಮುಂದೆ ರೂಪಾಂತರ ಗೊಂಡನು. ಆತನ ಮುಖವು ಸೂರ್ಯನಂತೆ ಪ್ರಕಾಶಿಸಿತು; ಮತ್ತು ಆತನ ಉಡುಪು ಬೆಳಕಿನಂತೆ ಬೆಳ್ಳಗಿತ್ತು.
- Revelation 1:15–16 ಪ್ರಕಟನೆ 1:15–16ಆತನ ಪಾದಗಳು ಕುಲುಮೆ ಯಲ್ಲಿ ಕಾಯಿಸಿದ ಶುದ್ಧವಾದ ತಾಮ್ರದಂತೆಯೂ ಆತನ ಧ್ವನಿಯು ಜಲಪ್ರವಾಹದ ಘೋಷದಂತೆಯೂ ಇದ್ದವು. ಆತನ ಬಲಗೈಯಲ್ಲಿ ಏಳು ನಕ್ಷತ್ರಗಳಿದ್ದವು; ಆತನ ಬಾಯೊಳಗಿಂದ ಹದವಾದ ಇಬ್ಬಾಯಿ ಕತ್ತಿಯು ಹೊರಟಿತು. ಆತನ ಮುಖವು ಸೂರ್ಯನು ತನ್ನ ಬಲದಲ್ಲಿ ಪ್ರಕಾಶಿಸುವಂತಿತ್ತು.
- Revelation 5:2 ಪ್ರಕಟನೆ 5:2ಇದಲ್ಲದೆ ಬಲಿಷ್ಠನಾದ ಒಬ್ಬ ದೂತನು--ಈ ಪುಸ್ತಕವನ್ನು ತೆರೆಯುವದಕ್ಕೂ ಇದರ ಮುದ್ರೆಗಳನ್ನು ಬಿಚ್ಚುವದಕ್ಕೂ ಯಾವನು ಯೋಗ್ಯನು ಎಂದು ಮಹಾಶಬ್ದದಿಂದ ಸಾರುವದನ್ನು ಕಂಡೆನು.
- Daniel 10:6 ದಾನಿಯೇಲನು 10:6ಆತನ ದೇಹವು ತಾರ್ಷೀಷ್ ಕಲ್ಲಿನ ಹಾಗೆಯೂ ಆತನ ಮುಖವು ಮಿಂಚಿನಂತೆಯೂ ಹೊಳೆಯುತ್ತಿತ್ತು. ಪೀತರತ್ನದ ಹಾಗೆ ಅವನ ಕಣ್ಣುಗಳು ಉರಿಯುವ ಬೆಂಕಿಯ ದೀಪದಂತೆ ಇದ್ದವು. ಅವನ ತೋಳುಗಳೂ ಕಾಲುಗಳೂ ಬೆಳಗಿನ ಕಂಚಿನ ಕಾಂತಿಯಾಗಿಯೂ ಆತನ ಮಾತುಗಳ ಶಬ್ದವು ಜನಸಮೂಹದ ಹಾಗೆಯೂ ಇದ್ದವು.
- Revelation 4:3 ಪ್ರಕಟನೆ 4:3ಕೂತಿದ್ದಾತನು ಸೂರ್ಯಕಾಂತ ಪದ್ಮರಾಗ ಕಲ್ಲುಗಳಂತೆ ಕಾಣುತ್ತಿದ್ದನು; ಸಿಂಹಾಸನದ ಸುತ್ತಲೂ ಪಚ್ಚೆಯಂತೆ ತೋರುತ್ತಿದ್ದ ಮಳೆ ಬಿಲ್ಲು ಇತ್ತು.
- Revelation 8:2–5 ಪ್ರಕಟನೆ 8:2–5ಆಗ ದೇವರ ಸನ್ನಿಧಿಯಲ್ಲಿ ನಿಂತಿರುವ ಏಳು ಮಂದಿ ದೂತರನ್ನು ಕಂಡೆನು; ಅವರಿಗೆ ಏಳು ತುತೂರಿಗಳು ಕೊಡಲ್ಪಟ್ಟಿದ್ದವು. ಆಮೇಲೆ ಚಿನ್ನದ ಧೂಪದ ಪಾತ್ರೆಯಿದ್ದ ಮತ್ತೊಬ್ಬ ದೂತನು ಬಂದು ಯಜ್ಞವೇದಿಯ ಬಳಿ ಯಲ್ಲಿ ನಿಂತನು; ಸಿಂಹಾಸನದ ಮುಂದೆ ಇದ್ದ ಚಿನ್ನದ ಧೂಪವೇದಿಯ ಮೇಲೆ ಪರಿಶುದ್ಧರೆಲ್ಲರ ಪ್ರಾರ್ಥನೆಗಳ ಜೊತೆಯಲ್ಲಿ ಸಮರ್ಪಿಸುವದಕ್ಕಾಗಿ ಅವನಿಗೆ ಬಹಳ ಧೂಪ ಕೊಡಲ್ಪಟ್ಟಿತು. ಆಗ ಧೂಪದ ಹೊಗೆಯು ದೂತನ ಕೈಯೊಳಗಿಂದ ಹೊರಟು ಪರಿಶುದ್ಧರ ಪ್ರಾರ್ಥನೆಗಳೊಂದಿಗೆ ಕೂಡಿ ದೇವರ ಸನ್ನಿಧಾನಕ್ಕೆ ಏರಿಹೋಯಿತು. ತರುವಾಯ ಆ ದೇವದೂತನು ಧೂಪದ ಪಾತ್ರೆಯನ್ನು ತೆಗೆದುಕೊಂಡು ಯಜ್ಞವೇದಿಯ ಬೆಂಕಿಯಿಂದ ಅದನ್ನು ತುಂಬಿಸಿ ಭೂಮಿಗೆ ಬಿಸಾಡಿದನು. ಆಗ ವಾಣಿಗಳೂ ಗುಡುಗುಗಳೂ ಮಿಂಚುಗಳೂ ಭೂ ಕಂಪವೂ ಉಂಟಾದವು.
- Revelation 8:13 ಪ್ರಕಟನೆ 8:13ಆಮೇಲೆ ನಾನು ನೋಡಲಾಗಿ ಇಗೋ, ಒಬ್ಬ ದೂತನು ಆಕಾಶ ಮಧ್ಯದಲ್ಲಿ ಹಾರುತ್ತಾ--ಇನ್ನೂ ಊದಬೇಕಾಗಿರುವ ಮೂವರು ದೂತರ ಮಿಕ್ಕಾದ ತುತೂರಿಯ ಧ್ವನಿಗಳು ಉಂಟಾಗುವಾಗ ಭೂನಿವಾಸಿ ಗಳಿಗೆ ಅಯ್ಯೋ, ಅಯ್ಯೋ, ಅಯ್ಯೋ ಎಂದು ಮಹಾ ಶಬ್ದದಿಂದ ಹೇಳುವದನ್ನು ಕೇಳಿದೆನು.
- Revelation 9:13–14 ಪ್ರಕಟನೆ 9:13–14ಆರನೆಯ ದೂತನು ಊದಿದಾಗ ದೇವರ ಸಮ್ಮುಖದಲ್ಲಿರುವ ಚಿನ್ನದ ವೇದಿಗಿದ್ದ ನಾಲ್ಕು ಕೊಂಬು ಗಳಿಂದ ಬಂದ ಧ್ವನಿಯನ್ನು ನಾನು ಕೇಳಿದೆನು. ಅದು ತುತೂರಿಯನ್ನು ಹಿಡಿದಿದ್ದ ಆರನೆಯ ದೂತನಿಗೆ--ಯೂಫ್ರೇಟೀಸ್ ಮಹಾ ನದಿಯಲ್ಲಿ ಬಂಧಿಸಲ್ಪಟ್ಟಿರುವ ನಾಲ್ಕು ಮಂದಿ ದೂತರನ್ನು ಬಿಚ್ಚಿಬಿಡು ಎಂದು ಹೇಳಿತು.
- Genesis 9:11–17 ಆದಿಕಾಂಡ 9:11–17ನನ್ನ ಒಡಂಬಡಿಕೆಯನ್ನು ನಿಮ್ಮ ಸಂಗಡ ಸ್ಥಾಪಿಸುತ್ತೇನೆ. ಅದೇನಂದರೆ, ಇನ್ನು ಮೇಲೆ ಜಲಪ್ರಳಯದಿಂದ ಶರೀರಗಳಾವವೂ ನಾಶವಾಗುವದಿಲ್ಲ. ಭೂಮಿಯನ್ನು ಹಾಳುಮಾಡುವದಕ್ಕೆ ಇನ್ನು ಜಲಪ್ರಳಯವು ಇರುವ ದಿಲ್ಲ ಎಂಬದೇ. ದೇವರು--ನನಗೂ ನಿಮಗೂ ನಿಮ್ಮ ಸಂಗಡ ಇರುವ ಎಲ್ಲಾ ಜೀವಜಂತುಗಳಿಗೂ ಮಧ್ಯದಲ್ಲಿ ತಲತಲಾಂತರಗಳ ವರೆಗೆ ನಾನು ಮಾಡುವ ಒಡಂಬಡಿಕೆಗೆ ಇದೇ ಗುರುತು. ನನ್ನ ಬಿಲ್ಲು ಮೇಘಗಳಲ್ಲಿ ಇಟ್ಟಿದ್ದೇನೆ. ಅದು ನನಗೂ ಭೂಮಿಗೂ ಮಾಡಿಕೊಂಡ ಒಡಂಬಡಿಕೆಗೆ ಗುರುತಾಗಿರುವದು. ನಾನು ಭೂಮಿಯ ಮೇಲೆ ಮೇಘಗಳನ್ನು ಬರ ಮಾಡುವಾಗ ಆ ಬಿಲ್ಲು ಮೇಘಗಳಲ್ಲಿ ಕಾಣುವದು. ಆಗ ನಾನು ನನಗೂ ನಿಮಗೂ ದೇಹಗಳಿರುವ ಎಲ್ಲಾ ಜೀವಜಂತುಗಳಿಗೂ ಮಧ್ಯೆ ಇರುವ ನನ್ನ ಒಡಂಬಡಿಕೆಯನ್ನು ಜ್ಞಾಪಕಮಾಡಿಕೊಳ್ಳುವೆನು. ಇನ್ನು ಶರೀರಗಳನ್ನೆಲ್ಲಾ ನಾಶಮಾಡುವ ಜಲಪ್ರಳಯವಾ ಗುವದೇ ಇಲ್ಲ. ಆ ಬಿಲ್ಲು ಮೇಘಗಳಲ್ಲಿರುವಾಗ ದೇವರಾದ ನನಗೂ ಭೂಮಿಯ ಮೇಲಿರುವ ದೇಹಗಳುಳ್ಳ ಎಲ್ಲಾ ಜೀವಜಂತುಗಳಿಗೂ ಮಧ್ಯದಲ್ಲಿ ನಿತ್ಯವಾಗಿರುವ ಒಡಂಬಡಿಕೆಯನ್ನು ಜ್ಞಾಪಕಮಾಡಿ ಕೊಳ್ಳುವ ಹಾಗೆ ನಾನು ಅದನ್ನು ನೋಡುವೆನು ಅಂದನು. ದೇವರು ನೋಹನಿಗೆ--ನಾನು ನನಗೂ ಭೂಮಿಯ ಮೇಲಿರುವ ಎಲ್ಲಾ ದೇಹಗಳಿಗೂ ಮಧ್ಯ ದಲ್ಲಿ ಸ್ಥಾಪಿಸಿದ ಒಡಂಬಡಿಕೆಯ ಗುರುತು ಇದೇ ಎಂದು ಹೇಳಿದನು.
- Revelation 7:1–2 ಪ್ರಕಟನೆ 7:1–2ಇವುಗಳಾದ ಮೇಲೆ ನಾಲ್ಕು ಮಂದಿ ದೂತರು ಭೂಮಿಯ ನಾಲ್ಕು ಮೂಲೆ ಗಳಲ್ಲಿ ನಿಂತುಕೊಂಡು ಭೂಮಿಯ ಮೇಲಾಗಲಿ ಸಮುದ್ರದ ಮೇಲಾಗಲಿ ಯಾವ ಮರದ ಮೇಲಾಗಲಿ ಗಾಳಿ ಬೀಸದಂತೆ ಭೂಮಿಯ ನಾಲ್ಕು ದಿಕ್ಕಿನ ಗಾಳಿ ಗಳನ್ನು ಹಿಡಿದಿರುವದನ್ನು ನಾನು ಕಂಡೆನು. ಇದಲ್ಲದೆ ಮತ್ತೊಬ್ಬ ದೂತನು ಜೀವವುಳ್ಳ ದೇವರ ಮುದ್ರೆಯನ್ನು ಹಿಡಿದುಕೊಂಡು ಮೂಡಲದಿಂದ ಏರಿ ಬರುವದನ್ನು ಕಂಡೆನು. ಅವನು ಭೂಮಿಯನ್ನೂ ಸಮುದ್ರವನ್ನೂ ಕೆಡಿಸುವ ಅಧಿಕಾರ ಹೊಂದಿದ ಆ ನಾಲ್ಕು ಮಂದಿ ದೂತರಿಗೆ--
- Psalm 97:2 ಕೀರ್ತನೆಗಳು 97:2ಮೇಘಗಳೂ ಕಾರ್ಗತ್ತಲೂ ಆತನ ಸುತ್ತಲು ಅವೆ; ನೀತಿಯೂ ನ್ಯಾಯವೂ ಆತನ ಸಿಂಹಾಸನದ ಸ್ಥಳವಾಗಿದೆ.
Original words (Greek)
- And · G2532καί kaí
- saw · G1492εἴδω eídō
- another · G243ἄλλος állos
- mighty · G2478ἰσχυρός ischyrós
- angel · G32ἄγγελος ángelos
- down · G2597καταβαίνω katabaínō
- from · G1537ἐκ ek
- heaven · G3772οὐρανός ouranós
- with · G4016περιβάλλω peribállō
- cloud · G3507νεφέλη nephélē
- and · G2532καί kaí
- rainbow · G2463ἶρις îris
- upon · G1909ἐπί epí
- head · G2776κεφαλή kephalḗ
- and · G2532καί kaí
- his · G846αὐτός autós
- face · G4383πρόσωπον prósōpon
- were · G5613ὡς hōs
- sun · G2246ἥλιος hḗlios
- and · G2532καί kaí
- his · G846αὐτός autós
- feet · G4228πούς poús
- as · G5613ὡς hōs
- pillars · G4769στῦλος stŷlos
- fire · G4442πῦρ pŷr