Revelation · chapter 11 · verse 1
Revelation 11:1 in Kannada
ತರುವಾಯ ಕೋಲಿನಂತಿದ್ದ ಒಂದು ದಂಡ ನನಗೆ ಕೊಡಲ್ಪಟ್ಟಿತು ಮತ್ತು ಆ ದೂತನು ನಿಂತುಕೊಂಡು ಎದ್ದು ದೇವರ ಆಲಯವನ್ನೂ ಯಜ್ಞವೇದಿಯನ್ನೂ ಆಲಯದಲ್ಲಿ ಆರಾಧನೆ ಮಾಡು ವವರನ್ನೂ ಅಳತೆಮಾಡು.
Taruvaaya kolinantidda ondu danda nanage kodalpattitu mattu aa dootanu nintukondu eddu devara aalayavannoo yajnyavediyannoo aalayadalli aaraadhane maadu vavarannoo alatemaadu.
Revelation 11:1 in English
- King James Version (KJV)
- And there was given me a reed like unto a rod: and the angel stood, saying, Rise, and measure the temple of God, and the altar, and them that worship therein.
- World English Bible (WEB)
- A reed like a rod was given to me. Someone said, “Rise and measure God’s temple, and the altar, and those who worship in it.
- American Standard Version (ASV)
- And there was given me a reed like unto a rod: and one said, Rise, and measure the temple of God, and the altar, and them that worship therein.
- Bible in Basic English (BBE)
- And there was given to me a measuring rod: and one said, Go up and take the measure of the house of God, and the altar, and the worshippers in it.
- Darby Translation (DBY)
- And there was given to me a reed like a staff, saying, Rise, and measure the temple of God, and the altar, and them that worship in it.
- Webster's Bible (WBS)
- And there was given me a reed like a rod: and the angel stood, saying, Rise, and measure the temple of God, and the altar, and them that worship in it.
- Young's Literal Translation (YLT)
- And there was given to me a reed like to a rod, and the messenger stood, saying, 'Rise, and measure the sanctuary of God, and the altar, and those worshipping in it;
Read in context
- 1ತರುವಾಯ ಕೋಲಿನಂತಿದ್ದ ಒಂದು ದಂಡ ನನಗೆ ಕೊಡಲ್ಪಟ್ಟಿತು ಮತ್ತು ಆ ದೂತನು ನಿಂತುಕೊಂಡು ಎದ್ದು ದೇವರ ಆಲಯವನ್ನೂ ಯಜ್ಞವೇದಿಯನ್ನೂ ಆಲಯದಲ್ಲಿ ಆರಾಧನೆ ಮಾಡು ವವರನ್ನೂ ಅಳತೆಮಾಡು.
- 2ಆದರೆ ಆಲಯದ ಹೊರಗಿರುವ ಅಂಗಳವನ್ನು ಅಳೆಯದೆ ಬಿಟ್ಟುಬಿಡು; ಯಾಕಂದರೆ ಅದು ಅನ್ಯ ಜನರಿಗೆ ಕೊಡಲ್ಪಟ್ಟಿದೆ. ಅವರು ಪರಿಶುದ್ಧ ಪಟ್ಟಣವನ್ನು ನಾಲ್ವತ್ತೆರಡು ತಿಂಗಳು ತುಳಿದಾಡುವರು.
- 3ಇದಲ್ಲದೆ ನನ್ನ ಇಬ್ಬರು ಸಾಕ್ಷಿಗಳು ಗೋಣಿತಟ್ಟನ್ನು ಹೊದ್ದುಕೊಂಡು ಸಾವಿರದ ಇನ್ನೂರ ಅರವತ್ತು ದಿನಗಳ ತನಕ ಪ್ರವಾದಿಸುವ ಹಾಗೆ ಅವರಿಗೆ ಅಧಿಕಾರ ಕೊಡುವೆನು.
Cross references
- Revelation 21:15 ಪ್ರಕಟನೆ 21:15ನನ್ನ ಸಂಗಡ ಮಾತನಾಡುತ್ತಿದ್ದವನು ಆ ಪಟ್ಟಣವನ್ನೂ ಅದರ ಹೆಬ್ಬಾಗಿಲುಗಳನ್ನೂ ಗೋಡೆಯನ್ನೂ ಅಳತೆ ಮಾಡು ವದಕ್ಕಾಗಿ ಚಿನ್ನದ ಅಳತೆ ಕೋಲನ್ನು ಹಿಡಿದಿದ್ದನು.
- Ezekiel 42:15–20 ಯೆಹೆಜ್ಕೇಲನು 42:15–20ಹೀಗೆ ಅವನು ಒಳಗಿನ ಆಲಯದ ಅಳತೆ ಮಾಡಿ ಮುಗಿಸಿದ ಮೇಲೆ ನನ್ನನ್ನು ಪೂರ್ವದ ಕಡೆಗೆ ಅಭಿಮುಖವಾಗಿರುವ ಬಾಗಲಿನಿಂದ ಹೊರಗೆ ತಂದು ಅದನ್ನು ಸುತ್ತಲಾಗಿ ಅಳೆದನು. ಅವನು ಅಳೆಯುವ ಕೋಲಿನಿಂದ ಪೂರ್ವದ ಭಾಗವನ್ನು ಅಳೆದನು. ಅದು ಅಳೆಯುವ ಕೋಲಿನ ಪ್ರಕಾರ ಸುತ್ತಲೂ ಐನೂರು ಕೋಲಾಗಿತ್ತು. ಉತ್ತರ ಕಡೆಯಲ್ಲಿ ಸಹ ಅವನು ಉತ್ತರದ ಭಾಗವನ್ನು ಅಳತೆಯ ಕೋಲಿನ ಪ್ರಕಾರ ಸುತ್ತಲಾಗಿ ಐನೂರು ಕೋಲೆಂದು ಅಳೆದನು. ಅವನು ಅಳತೆಯ ಕೋಲಿನಿಂದ ದಕ್ಷಿಣದ ಭಾಗ ವನ್ನು ಐನೂರು ಕೋಲೆಂದು ಅಳೆದನು. ಅವನು ಪಶ್ಚಿಮದ ಕಡೆಗೆ ತಿರುಗಿ ಅಳತೆಯ ಕೋಲಿನಿಂದ ಐನೂರು ಕೋಲೆಂದು ಅಳೆದನು.ಅವನು ನಾಲ್ಕೂ ಕಡೆಗಳಿಂದ ಅಳೆದನು; ಪರಿಶುದ್ಧ ಸ್ಥಳವನ್ನೂ ಅಪವಿತ್ರ ವಾದ ಸ್ಥಳವನ್ನೂ ಪ್ರತ್ಯೇಕ ಪಡಿಸುವ ಹಾಗೆ ಅದಕ್ಕೆ ಸುತ್ತಲಾಗಿ ಐನೂರು ಕೋಲು ಉದ್ದವಾದಂತ ಮತ್ತು ಐನೂರು ಕೋಲು ಅಗಲವಾದಂತ ಗೋಡೆ ಇತ್ತು. ಅವನು ನಾಲ್ಕೂ ಕಡೆಗಳಿಂದ ಅಳೆದನು; ಪರಿಶುದ್ಧ ಸ್ಥಳವನ್ನೂ ಅಪವಿತ್ರ ವಾದ ಸ್ಥಳವನ್ನೂ ಪ್ರತ್ಯೇಕ ಪಡಿಸುವ ಹಾಗೆ ಅದಕ್ಕೆ ಸುತ್ತಲಾಗಿ ಐನೂರು ಕೋಲು ಉದ್ದವಾದಂತ ಮತ್ತು ಐನೂರು ಕೋಲು ಅಗಲವಾದಂತ ಗೋಡೆ ಇತ್ತು.
- Zechariah 2:1–2 ಜೆಕರ್ಯ 2:1–2ತಿರುಗಿ ನನ್ನ ಕಣ್ಣುಗಳನ್ನೆತ್ತಿ ನೋಡಲು ಇಗೋ, ತನ್ನ ಕೈಯಲ್ಲಿ ಅಳೆಯುವ ನೂಲಿದ್ದ ಒಬ್ಬ ಮನುಷ್ಯನನ್ನು ಕಂಡೆನು. ಆಗ ನಾನು--ನೀನು ಎಲ್ಲಿಗೆ ಹೋಗುತ್ತೀ ಅಂದೆನು; ಅದಕ್ಕವನು ನನಗೆ--ಯೆರೂಸಲೇಮನ್ನು ಅಳತೆಮಾಡಿ ಅದರ ಅಗಲವೆಷ್ಟು ಅದರ ಉದ್ದವೆಷ್ಟು ಎಂದು ನೋಡುವದಕ್ಕೆ ಬಂದಿದ್ದಾರೆ ಅಂದನು.
- Ezekiel 40:1–48 ಯೆಹೆಜ್ಕೇಲನು 40:1–48ನಮ್ಮ ಸೆರೆಯ ಇಪ್ಪತ್ತೈದನೆಯ ವರ್ಷದ ಆರಂಭದ ತಿಂಗಳಿನ ಹತ್ತನೇ ದಿನದಲ್ಲಿ ಪಟ್ಟಣವು ಒಡೆದು ಹಾಕಲ್ಪಟ್ಟ ಮೇಲೆ, ಹದಿನಾಲ್ಕನೇ ವರುಷದ ಅದೇ ದಿನದಲ್ಲಿ, ಕರ್ತನ ಕೈ ನನ್ನ ಮೇಲೆ ಇದ್ದು ನನ್ನನ್ನು ಅಲ್ಲಿಗೆ ಬರಮಾಡಿತು. ದೇವರ ದರ್ಶನಗಳಲ್ಲಿ ಆತನು ನನ್ನನ್ನು ಇಸ್ರಾಯೇಲ್ ದೇಶಕ್ಕೆ ತಂದು ಅತಿ ಎತ್ತರವಾದ ಪರ್ವತಗಳ ಮೇಲೆ ನನ್ನನ್ನು ಇರಿಸಿದನು, ಅದರ ಮೇಲೆ ದಕ್ಷಿಣದ ಕಡೆಯಲ್ಲಿ ಪಟ್ಟಣವು ಕಟ್ಟಿರುವಂತಿತ್ತು. ನನ್ನನ್ನು ಅಲ್ಲಿಗೆ ತಂದಾಗ ಇಗೋ, ಅಲ್ಲಿ ಹಿತ್ತಾಳೆಯಂತೆ ತೋರುವ ಒಬ್ಬ ಮನುಷ್ಯನು ಇದ್ದನು. ಅವನ ಕೈಯಲ್ಲಿ ನಾರಿನ ನೂಲು ಅಳತೆಯ ಕೋಲು ಇತ್ತು. ಅವನು ಬಾಗಿಲಲ್ಲೇ ನಿಂತಿ ದ್ದನು. ಆ ಮನುಷ್ಯನು ನನಗೆ--ಮನುಷ್ಯ ಪುತ್ರನೇ, ನಿನ್ನ ಕಣ್ಣುಗಳಿಂದ ನೋಡಿ ನಿನ್ನ ಕಿವಿಗಳಿಂದ ಕೇಳು ನಾನು ನಿನಗೆ ತೋರಿಸುವ ಎಲ್ಲಾ ಸಂಗತಿಗಳಿಗೆ ನಿನ್ನ ಮನಸ್ಸಿಡು, ನಾನು ನಿನಗೆ ತೋರಿಸುವ ಹಾಗೆಯೇ ನೀನು ಇಲ್ಲಿಗೆ ತರಲ್ಪಟ್ಟಿರುವೆ. ನೀನು ನೋಡುವವು ಗಳನ್ನೆಲ್ಲಾ ಇಸ್ರಾಯೇಲ್ಯರ ಮನೆತನದವರಿಗೆ ತಿಳಿಸು ಅಂದನು. ನೋಡು, ಮನೆಯ ಹೊರಗೆ ಸುತ್ತಮುತ್ತಲೂ ಇರುವ ಗೋಡೆ; ಆ ಮನುಷ್ಯನ ಕೈಯಲ್ಲಿ ಒಂದು ಹಿಡಿ ಉದ್ಧವಾದಂಥ ಆರುಮೊಳ ಉದ್ದ ಅಳತೆ ಕೋಲು ಇತ್ತು; ಹಾಗೆಯೇ ಅವನು ಆ ಕಟ್ಟಡದ ಅಗಲವನ್ನು ಅಳತೆ ಮಾಡಿದಾಗ ಅದರ ಎತ್ತರ ಅಗಲ ಒಂದೇ ಕೋಲಾಗಿತ್ತು. ಆಮೇಲೆ ಅವನು ಮೂಡಣಕ್ಕೆ ಅಭಿಮುಖವಾಗಿರುವ ಬಾಗಲಿಗೆ ಬಂದು, ಅದರ ಮೆಟ್ಟಲುಗಳನ್ನು ಹತ್ತಿ ಆ ಬಾಗಲಿನ ಹೊಸ್ತಿಲನ್ನು ಅಳೆದನು, ಅದು ಒಂದೇ ಕೋಲಿನ ಅಗಲವಾಗಿತ್ತು, ಮತ್ತು ಒಂದೇ ಕೋಲು ಅಗಲವಾದ ಹೊಸ್ತಿಲಿನ ಬಾಗಲೂ ಅಲ್ಲಿ ಇತ್ತು. ಪ್ರತಿಯೊಂದು ಚಿಕ್ಕ ಕೋಣೆಯು ಒಂದು ಕೋಲು ಉದ್ದವಾಗಿ ಒಂದು ಕೋಲು ಅಗಲವಾಗಿ ಇತ್ತು; ಕೊಠಡಿಗಳ ನಡುವೆ ಐದು ಮೊಳ ಒಳಬಾಗಲಿನ ಪಡಸಾಲೆಯ ಬಳಿಯಲ್ಲಿ ರುವ ಬಾಗಲಿನ ಹೊಸ್ತಿಲು ಒಂದು ಕೋಲಿನ ಅಳತೆ ಯಷ್ಟಿತ್ತು. ಅವನು ಒಳಬಾಗಲಿನ ದ್ವಾರಾಂಗಣವನ್ನು ಒಂದು ಕೋಲೆಂದು ಅಳೆದನು. ಆಮೇಲೆ ಬಾಗಲಿನ ದ್ವಾರಾಂಗಣವನ್ನು ಎಂಟು ಮೊಳವೆಂದೂ ಅದರ ಕಂಬಗಳನ್ನು ಎರಡು ಮೊಳವೆಂದೂ ಅಳೆದನು; ದ್ವಾರಾಂಗಣದ ಬಾಗಲು ಒಳಗಡೆ ಇತ್ತು. ಮೂಡ ಣದ ಕಡೆಗಿರುವ ಬಾಗಲಿನ ಕೊಠಡಿಗಳು ಈ ಕಡೆ ಯಲ್ಲಿ ಮೂರು ಆ ಕಡೆಯಲ್ಲಿ ಮೂರು ಇದ್ದವು; ಆ ಮೂರಕ್ಕೂ ಒಂದೇ ಅಳತೆ ಇತ್ತು. ಈ ಕಡೆಯೂ ಆ ಕಡೆಯೂ ಕಂಬಗಳಿಗೂ ಸಹ ಒಂದೇ ಅಳತೆ ಇತ್ತು. ಅವನು ಬಾಗಲಿನ ಪ್ರವೇಶದ ಅಗಲವು ಹತ್ತು ಮೊಳವೆಂದೂ ಬಾಗಲಿನ ಉದ್ದವು ಹದಿಮೂರು ಮೊಳವೆಂದೂ ಅಳೆದನು. ಆ ಚಿಕ್ಕ ಕೊಠಡಿಗಳ ಮುಂದೆ ಇದ್ದ ಜಾಗವು ಸಹ ಆ ಕಡೆ ಈ ಕಡೆ ಒಂದೊಂದು ಮೊಳವಾಗಿತ್ತು; ಈ ಚಿಕ್ಕ ಕೊಠಡಿಗಳು ಆ ಕಡೆಗೂ ಈ ಕಡೆಗೂ ಆರಾರು ಮೊಳಗಳಾಗಿದ್ದವು. ಆಗ ಅವನು ಬಾಗಲನ್ನು ಒಂದು ಕೊಠಡಿಯ ಮಾಳಿಗೆಯಿಂದ ಇನ್ನೊಂದು ಕೊಠಡಿಯ ಮಾಳಿಗೆಗೆ ಅಳೆದನು. ಆ ದ್ವಾರದಿಂದ ಈ ದ್ವಾರಕ್ಕೇರುವ ಅಗಲವು ಇಪ್ಪತ್ತೈದು ಮೊಳಗಳಾಗಿತ್ತು. ಕಂಬಗಳನ್ನು ಸಹ ಅರವತ್ತು ಮೊಳಗಳ ಹಾಗೆ ಮಾಡಿದನು; ಅದು ಬಾಗಲಿನ ಸುತ್ತಮುತ್ತಲಿರುವ (ಅಂಗಳದ) ಕಂಬದ ವರೆಗೂ ಇತ್ತು. ಪ್ರವೇಶದ ಬಾಗಲಿನ ಮುಂದುಗಡೆ ಯಿಂದ ಒಳ ಬಾಗಲಿನ ದ್ವಾರದ ಅಂಗಳದ ವರೆಗೂ ಐವತ್ತು ಮೊಳವಿತ್ತು. ಚಿಕ್ಕ ಕೊಠಡಿಗಳಲ್ಲಿಯೂ ಬಾಗಲಿನ ಒಳಗಡೆ ಇರುವ ಅವುಗಳ ಕಂಬಗಳಲ್ಲಿಯೂ ಇಕ್ಕಟ್ಟಾದ ಕಿಟಕಿಗಳಿದ್ದವು; ಕೈಸಾಲೆಗಳಿಗೂ ಸಹ ಒಳಗಡೆ ಸುತ್ತಲೂ ಕಿಟಕಿಗಳಿದ್ದವು; ಒಂದೊಂದು ಕಂಬದ ಮೇಲೆ ಖರ್ಜೂರದ ಮರಗಳಿದ್ದವು. ಆಗ ಅವನು ನನ್ನನ್ನು ಹೊರಗಿನ ಅಂಗಳಕ್ಕೆ ತಂದನು; ಇಗೋ, ಕೊಠಡಿಗಳೂ ಕಲ್ಲು ಹಾಸಿದ ನೆಲವೂ ಅಂಗಳದ ಸುತ್ತಲೂ ಮಾಡಲ್ಪಟ್ಟಿದ್ದವು; ಕಲ್ಲು ಹಾಸಿದ ನೆಲದ ಬದಿಯಲ್ಲಿ ಮೂವತ್ತು ಕೊಠಡಿ ಗಳಿದ್ದವು. ಬಾಗಲುಗಳ ಪಾರ್ಶ್ವದಲ್ಲಿ ಬಾಗಲುಗಳ ಉದ್ದಕ್ಕೆ ಸರಿಯಾಗಿ ಇದ್ದ ಆ ಕಲ್ಲು ಹಾಸಿದನೆಲವು ಕೆಳಗಿನ ನೆಲಗಟ್ಟಾಗಿತ್ತು. ಆಗ ಅವನು ಕೆಳಗಿನ ಬಾಗಲಿನ ಮುಂದುಗಡೆಯಿಂದ ಒಳಗಿನ ಅಂಗಳದ ಹೊರಗಡೆಯ ವರೆಗೂ ಪೂರ್ವಕ್ಕೂ ಉತ್ತರಕ್ಕೂ ಇರುವ ಅಗಲವನ್ನು ನೂರು ಮೊಳವೆಂದು ಅಳೆದನು. ಇದಲ್ಲದೆ ಉತ್ತರದ ಕಡೆಗೆ ಅಭಿಮುಖವಾದ ಹೊರ ಗಿನ ಬಾಗಲಿನ ಉದ್ದವನ್ನೂ ಅಗಲವನ್ನೂ ಅಳೆದನು. ಅದರ ಚಿಕ್ಕ ಕೊಠಡಿಗಳು ಈ ಕಡೆಗೂ ಆ ಕಡೆಗೂ ಮೂರು ಮೂರು ಇದ್ದವು; ಅದರ ಕಂಬಗಳು ಕೈಸಾಲೆ ಗಳು ಮೊದಲನೇ ಭಾಗಲಿನ ಅಳತೆಯ ಹಾಗಿದ್ದವು; ಅದರ ಉದ್ದ ಐವತ್ತು ಮೊಳ ಅಗಲ ಇಪ್ಪತ್ತೈದು ಮೊಳ. ಅದರ ಕಿಟಕಿಗಳೂ ಕೈಸಾಲೆಗಳೂ ಖರ್ಜೂ ರದ ಗಿಡಗಳೂ ಮೂಡಣ ಕಡೆಯ ಬಾಗಲಿನ ಕಡೆಗೆ ಅಭಿಮುಖವಾಗಿದ್ದವು; ಅವರು ಏಳು ಮೆಟ್ಟಲುಗಳನ್ನು ಏರಿದಾಗ, ಅದರ ಕೈಸಾಲೆಗಳು ಅದರ ಮುಂದಿದ್ದವು. ಒಳಗಿನ ಅಂಗಳದ ಬಾಗಲು ಉತ್ತರ ಮತ್ತು ಪೂರ್ವಕ್ಕಿರುವ ಬಾಗಲಿಗೆ ಎದುರಾಗಿತ್ತು; ಅವನು ಬಾಗಲಿನಿಂದ ಬಾಗಲಿಗೆ ನೂರು ಮೊಳವೆಂದು ಅಳೆ ದನು. ಆಮೇಲೆ ಅವನು ನನ್ನನ್ನು ದಕ್ಷಿಣದ ಕಡೆಗೆ ತಂದನು; ಇಗೋ, ದಕ್ಷಿಣದ ಕಡೆಗೆ ಬಾಗಲು ಇತ್ತು, ಅವನು ಅದರ ಕಂಬಗಳನ್ನು ಕೈಸಾಲೆಗಳನ್ನು ಈ ಅಳತೆಯ ಪ್ರಕಾರವೇ ಅಳೆದನು. ಅದರಲ್ಲಿಯೂ ಅದರ ಕೈಸಾಲೆಗಳಲ್ಲಿಯೂ ಸುತ್ತಲೂ ಆ ಕಿಟಕಿಗಳ ಹಾಗೆಯೇ ಕಿಟಕಿಗಳೂ ಇದ್ದವು. ಉದ್ದವು ಐವತ್ತು ಮೊಳ ಅಗಲವು ಇಪ್ಪತ್ತೈದು ಮೊಳ; ಅದಕ್ಕೆ ಏರುವ ಹಾಗೆ ಏಳು ಮೆಟ್ಟಲುಗಳು ಇದ್ದವು. ಅದರ ಕೈಸಾಲೆಗಳು ಅದರ ಮುಂದೆ ಇದ್ದವು; ಅದರ ಕಂಬಗಳ ಮೇಲೆ ಆ ಕಡೆಗೂ ಈ ಕಡೆಗೂ ಒಂದೊಂದು ಖರ್ಜೂರದ ಮರವಿತ್ತು. ಒಳಗಿನ ಅಂಗಳದಲ್ಲಿ ದಕ್ಷಿಣದ ಕಡೆಗೆ ಬಾಗಲಿತ್ತು; ಅವನು ಒಂದು ಬಾಗಲಿನಿಂದ ಮತ್ತೊಂದು ಬಾಗಲಿಗೆ ದಕ್ಷಿಣವಾಗಿ ನೂರು ಮೊಳ ಅಳೆದನು. ಆಮೇಲೆ ಅವನು ನನ್ನನ್ನು ದಕ್ಷಿಣ ಬಾಗಲಿನಿಂದ ಒಳಗಿನ ಅಂಗಳಕ್ಕೆ ಕರೆದುಕೊಂಡು ಹೋಗಿ ಅವನು ಈ ಅಳತೆಗಳ ಪ್ರಕಾರ ದಕ್ಷಿಣದ ಬಾಗಲನ್ನು ಅಳೆದನು; ಅಲ್ಲಿನ ಆ ಚಿಕ್ಕ ಕೊಠಡಿಗಳನ್ನೂ ಅದರ ಕಂಬ ಗಳನ್ನೂ ಕಮಾನುಗಳನ್ನೂ ಈ ಅಳತೆಯ ಪ್ರಕಾರ ಅಳೆದನು. ಅದರಲ್ಲಿಯೂ ಅದರ ಸುತ್ತಲಿರುವ ಕಮಾ ನುಗಳಲ್ಲಿಯೂ ಕಿಟಕಿಗಳಿದ್ದವು ಅದರ ಉದ್ದ ಐವತ್ತು ಮೊಳ, ಅಗಲ ಇಪ್ಪತ್ತೈದು ಮೊಳ; ಸುತ್ತಲಿ ರುವ ಕಮಾನುಗಳು ಇಪ್ಪತ್ತೈದು ಮೊಳ ಉದ್ದವಾಗಿ ಐದು ಮೊಳ ಅಗಲವಾಗಿಯೂ ಇದ್ದವು. ಅದರ ಕಮಾ ನುಗಳು ಹೊರಗಿನ ಅಂಗಳದ ಕಡೆಗಿದ್ದವು; ಅದರ ಕಂಬಗಳಲ್ಲಿ ಖರ್ಜೂರದ ಮರಗಳಿದ್ದವು. ಅದಕ್ಕೆ ಏರುವದಕ್ಕೆ ಎಂಟು ಮೆಟ್ಟಲುಗಳು ಇದ್ದವು. ಅವನು ನನ್ನನ್ನು ಪೂರ್ವದ ಕಡೆಗಿರುವ ಒಳಗಿನ ಅಂಗಳಕ್ಕೆ ಕರೆದುಕೊಂಡು ಹೋಗಿ ಈ ಅಳತೆಗಳ ಪ್ರಕಾರ ಬಾಗಲನ್ನು ಅಳೆದನು. ಅಲ್ಲಿನ ಚಿಕ್ಕ ಕೊಠಡಿಗಳನ್ನೂ ಕಂಬಗಳನ್ನೂ ಕಮಾನುಗಳನ್ನೂ ಈ ಅಳತೆಗಳ ಪ್ರಕಾರವೇ ಅವನು ಅಳೆದನು; ಅದರಲ್ಲಿ ಸಹ ಸುತ್ತಲೂ ಇರುವ ಅದರ ಕಮಾನುಗಳಲ್ಲಿಯೂ ಕಿಟಕಿಗಳು ಇದ್ದವು. ಅದರ ಉದ್ದವು ಐವತ್ತು ಮೊಳ ಅಗಲವು ಇಪ್ಪತ್ತೈದು ಮೊಳ. ಅದರ ಕಮಾನುಗಳು ಹೊರಗಿನ ಅಂಗಳದ ಕಡೆಗೆ ಇದ್ದವು; ಖರ್ಜೂರದ ಮರಗಳು ಆ ಕಡೆ ಈ ಕಡೆ ಅಲ್ಲಿನ ಕಂಬಗಳ ಮೇಲೆ ಇದ್ದವು; ಮೇಲೆ ಹೋಗುವದಕ್ಕೆ ಅದಕ್ಕೆ ಎಂಟು ಮೆಟ್ಟಲುಗಳು ಇದ್ದವು. ಇದಲ್ಲದೆ ಅವನು ನನ್ನನ್ನು ಉತ್ತರದ ಬಾಗಲಿನ ಬಳಿಗೆ ಕರೆದುಕೊಂಡು ಹೋಗಿ ಈ ಅಳತೆಗಳ ಪ್ರಕಾರ ಅಳೆದನು; ಅಲ್ಲಿನ ಚಿಕ್ಕ ಕೋಣೆಗಳು, ಕಂಬಗಳು ಕಮಾನುಗಳು ಮತ್ತು ಅದರ ಸುತ್ತಲೂ ಇರುವ ಕಿಟಕಿಗಳ ಉದ್ದವು ಐವತ್ತು ಮೊಳ, ಅಗಲವು ಇಪ್ಪತ್ತೈದು ಮೊಳ; ಅದರ ಕಂಬಗಳು ಹೊರಗಿನ ಅಂಗಳದ ಕಡೆಗೆ ಇದ್ದವು; ಅದರ ಕಂಬಗಳ ಮೇಲೆ ಆ ಕಡೆಗೂ ಈ ಕಡೆಗೂ ಖರ್ಜೂರದ ಮರಗಳಿದ್ದವು; ಅದರ ಮೇಲೆ ಹೋಗುವ ಹಾಗೆ ಎಂಟು ಮೆಟ್ಟಲುಗಳು ಇದ್ದವು. ಕೊಠಡಿಗಳೂ ಅವುಗಳ ಪ್ರವೇಶಗಳೂ ಬಾಗಲುಗಳ ಕಂಬಗಳ ಬಳಿಯಲ್ಲಿ, ದಹನ ಬಲಿಯನ್ನು ತೊಳೆ ಯುವಲ್ಲಿ ಇದ್ದವು; ಬಾಗಲ ದ್ವಾರಾಂಗಣದಲ್ಲಿ ಎರಡು ಮೇಜುಗಳು ಆ ಕಡೆಗೆ ಇದ್ದವು. ದಹನಬಲಿ ಯನ್ನೂ ಪಾಪ ಬಲಿಯನ್ನೂ ಅಪರಾಧ ಬಲಿಯನ್ನೂ ವಧಿಸುವ ಹಾಗೆ ಅವು ಇದ್ದವು. ಹೊರಗಡೆಯಲ್ಲಿ ಉತ್ತರದ ಬಾಗಲಿನ ಪ್ರವೇಶಕ್ಕೆ ಏರಿಹೋಗುವಲ್ಲಿ ಎರಡು ಮೇಜುಗಳೂ ಬಾಗಲಿನ ದ್ವಾರಾಂಗಣದ ಕಡೆಯಲ್ಲಿ ಎರಡು ಮೇಜುಗಳೂ ಇದ್ದವು. ಬಾಗಲಿನ ಕೊನೆಯಲ್ಲಿ ಈ ಕಡೆ ನಾಲ್ಕು ಮೇಜುಗಳೂ ಆ ಕಡೆ ನಾಲ್ಕು ಮೇಜುಗಳೂ ಈ ರೀತಿ ಎಂಟು ಮೇಜುಗಳಿದ್ದವು; ಇವುಗಳ ಮೇಲೆ ಅವರು ಯಜ್ಞ ಗಳನ್ನು ಅರ್ಪಿಸುತ್ತಿದ್ದರು. ದಹನಬಲಿಗಾಗಿ ಇದ್ದ ಆ ನಾಲ್ಕು ಮೇಜುಗಳು ಕೆತ್ತಿದ ಕಲ್ಲುಗಳಿಂದ ಮಾಡಲ್ಪಟ್ಟಿದ್ದವು; ಅವುಗಳ ಉದ್ದ ಅಗಲ ಒಂದುವರೆ ಮೊಳ, ಎತ್ತರ ಒಂದುವರೆ ಮೊಳ, ಇವುಗಳ ಮೇಲೆ ಅವರು ದಹನಬಲಿಯನ್ನೂ ಅರ್ಪಣೆಯನ್ನೂ ವಧಿ ಸುವ ಸಾಮಾನುಗಳನ್ನೂ ಇಟ್ಟರು. ಒಳಗೆ ಸುತ್ತಲಾಗಿ ಕೈ ಅಗಲದಷ್ಟು ಕೊಂಡಿಗಳು ಜಡಿಯಲ್ಪಟ್ಟಿದ್ದವು. ಮೇಜುಗಳ ಮೇಲೆ ಅರ್ಪಣೆಯ ಮಾಂಸವಿತ್ತು. ಒಳಗಿನ ಬಾಗಲಿನ ಹೊರಗೆ ಒಳಗಿನ ಅಂಗಳದಲ್ಲಿ ಹಾಡುವವರ ಕೊಠಡಿಗಳು ಇದ್ದವು; ಒಂದು ಉತ್ತರದ ಬಾಗಲಿನ ಕಡೆಗೆ ದಕ್ಷಿಣಕ್ಕೆ ಅಭಿಮುಖವಾಗಿತ್ತು; ಮತ್ತೊಂದು ಪೂರ್ವದ ಬಾಗಲಿನ ಕಡೆಗೆ ಉತ್ತರಕ್ಕೆ ಅಭಿಮುಖ ವಾಗಿತ್ತು. ಅವನು ನನಗೆ ಹೇಳಿದ್ದೇ ನಂದರೆ--ದಕ್ಷಿಣಕ್ಕೆ ಅಭಿಮುಖವಾಗಿರುವ ಈ ಕೊಠಡಿ ಮನೆಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುವ ಯಾಜಕರದು. ಉತ್ತರಕ್ಕೆ ಅಭಿಮುಖವಾಗಿರುವ ಕೊಠಡಿ ಯಜ್ಞವೇದಿಯ ಮೇಲ್ವಿಚಾರಕರಾದ ಯಾಜಕ ರದು. ಚಾದೋಕನ ಕುಮಾರರಾದ ಇವರು ಲೇವಿಯ ಕುಮಾರ ರಲ್ಲಿ ಕರ್ತನ ಸನ್ನಿಧಿಯ ಸೇವಕರಾಗಿದ್ದಾರೆ. ಹೀಗೆ ಅವನು ಅಂಗಳವನ್ನು ಅಳೆದನು, ಅದರ ಉದ್ದ ನೂರು ಮೊಳ, ಅಗಲ ನೂರು ಮೊಳ, ಅದು ಚಚ್ಚೌಕವಾಗಿತ್ತು; ಆ ಯಜ್ಞವೇದಿಯು ಮನೆಯ ಮುಂದೆ ಇತ್ತು. ಅವನು ನನ್ನನ್ನು ಮನೆಯ ದ್ವಾರಾಂಗಣಕ್ಕೆ ಕರೆದು ಕೊಂಡು ಹೋಗಿ ದ್ವಾರಾಂಗಣದ ಪ್ರತಿಯೊಂದು ಕಂಬವನ್ನು ಅಳೆದನು; ಆ ಕಡೆ ಈ ಕಡೆ ಐದುಮೊಳ ಮತ್ತು ಬಾಗಲಿನ ಅಗಲ ಆ ಕಡೆ ಮೂರುಮೊಳ, ಈ ಕಡೆ ಮೂರುಮೊಳ ಇತ್ತು.ದ್ವಾರಾಂಗಣದ ಉದ್ದ ಇಪ್ಪತ್ತು ಮೊಳ ಅಗಲ ಹನ್ನೊಂದು ಮೊಳ ಮತ್ತು ಅವರು ಮೇಲಕ್ಕೆ ಹತ್ತುವ ಮೆಟ್ಟಲುಗಳಿಂದ ನನ್ನನ್ನು ಕರೆತಂದರು. ಪಡಸಾಲೆಯಲ್ಲಿ ಈ ಕಡೆ ಒಂದು, ಆ ಕಡೆ ಒಂದು; ಎರಡು ಸ್ತಂಭಗಳಿದ್ದವು.
- 1 Corinthians 3:16–17 1 ಕೊರಿಂಥದವರಿಗೆ 3:16–17ನೀವು ದೇವರ ಆಲಯವಾಗಿದ್ದೀರೆಂದೂ ದೇವರ ಆತ್ಮನು ನಿಮ್ಮಲ್ಲಿ ವಾಸಮಾಡುತ್ತಾನೆಂದೂ ನಿಮಗೆ ಗೊತ್ತಿಲ್ಲವೋ? ಯಾವನಾದರೂ ದೇವರ ಆಲಯವನ್ನು ಹೊಲೆಮಾಡಿದರೆ ದೇವರು ಅವನನ್ನು ನಾಶಮಾಡುವನು; ಯಾಕಂದರೆ ದೇವರ ಆಲಯವು ಪವಿತ್ರವಾದದ್ದು, ಆ ಆಲಯವು ನೀವೇ.
- 1 Peter 2:5 1 ಪೇತ್ರನು 2:5ನೀವು ಸಹ ಜೀವವುಳ್ಳ ಕಲ್ಲುಗಳಾಗಿದ್ದು ಆತ್ಮಸಂಬಂಧ ವಾದ ಮಂದಿರವಾಗುವದಕ್ಕೆ ಕಟ್ಟಲ್ಪಡುತ್ತಾ ಇದ್ದೀರಿ, ಮತ್ತು ಯೇಸು ಕ್ರಿಸ್ತನ ಮೂಲಕ ದೇವರಿಗೆ ಸಮರ್ಪಕ ವಾದ ಆತ್ಮೀಯ ಯಜ್ಞಗಳನ್ನು ಸಮರ್ಪಿಸುವದಕ್ಕೆ ಪವಿತ್ರ ಯಾಜಕ ವರ್ಗದವರಾಗಿದ್ದೀರಿ.
- Isaiah 28:17 ಯೆಶಾಯ 28:17ನಾನು ನ್ಯಾಯವನ್ನು ನೂಲ ನ್ನಾಗಿಯೂ ನೀತಿಯನ್ನು ಮಟ್ಟಗೋಲನ್ನಾಗಿಯೂ ಮಾಡುವೆನು, ಕಲ್ಮಳೆಯು ಸುಳ್ಳಿನ ಆಶ್ರಯವನ್ನು (ಗುಡಿಸಿ) ಬಡಿದುಕೊಂಡು ಹೋಗುವದು, ಅಡ ಗುವ ಸ್ಥಾನವನ್ನು ಜಲಪ್ರವಾಹವು ಮುಳುಗಿಸಿಬಿಡು ವದು.
- Ephesians 2:20–22 ಎಫೆಸದವರಿಗೆ 2:20–22ಅಪೊಸ್ತಲರೂ ಪ್ರವಾದಿಗಳೂ ಎಂಬ ಅಸ್ತಿವಾರದ ಮೇಲೆ ನೀವು ಕಟ್ಟಲ್ಪಟ್ಟಿದ್ದೀರಿ. ಯೇಸು ಕ್ರಿಸ್ತನೇ ಮುಖ್ಯ ವಾದ ಮೂಲೆಗಲ್ಲು; ಆತನಲ್ಲಿ ಕಟ್ಟಡವು ಹೊಂದಿಕೆ ಯಾಗಿ ವೃದ್ಧಿಯಾಗುತ್ತಾ ಕರ್ತನಲ್ಲಿ ಪರಿಶುದ್ದ ದೇವಾ ಲಯವಾಗುತ್ತದೆ.ಆತನಲ್ಲಿ ನೀವು ಸಹ ಆತ್ಮನ ಮೂಲಕವಾಗಿ ದೇವರಿಗೆ ನಿವಾಸಸ್ಥಾನವಾಗುವಂತೆ ಒಟ್ಟಾಗಿ ಕಟ್ಟಲ್ಪಡುತ್ತಾ ಇದ್ದೀರಿ. ಆತನಲ್ಲಿ ನೀವು ಸಹ ಆತ್ಮನ ಮೂಲಕವಾಗಿ ದೇವರಿಗೆ ನಿವಾಸಸ್ಥಾನವಾಗುವಂತೆ ಒಟ್ಟಾಗಿ ಕಟ್ಟಲ್ಪಡುತ್ತಾ ಇದ್ದೀರಿ.
- 1 Peter 2:9 1 ಪೇತ್ರನು 2:9ಕತ್ತಲೆಯೊಳಗಿದ್ದ ನಿಮ್ಮನ್ನು ತನ್ನ ಆಶ್ಚರ್ಯವಾದ ಬೆಳಕಿಗೆ ಸೇರಿಸಿದಾತನ ಸ್ತುತಿಗಳನ್ನು ಪ್ರಕಟಿಸುವವ ರಾಗುವಂತೆ ನೀವು ಆಯಲ್ಪಟ್ಟ ವಂಶದವರೂ ರಾಜರಾದ ಯಾಜಕವರ್ಗದವರೂ ಪರಿಶುದ್ಧ ಜನಾಂಗವೂ ಅಸಮಾನ್ಯರಾದ ಜನರೂ ಆಗಿದ್ದೀರಿ.
- 2 Corinthians 6:16 2 ಕೊರಿಂಥದವರಿಗೆ 6:16ವಿಗ್ರಹಗಳ ಕೂಡ ದೇವರ ಮಂದಿರಕ್ಕೆ ಒಪ್ಪಿಗೆ ಏನು? ಯಾಕಂದರೆ ನೀವು ಜೀವವುಳ್ಳ ದೇವರ ಮಂದಿರವಾಗಿದ್ದೀರಲ್ಲಾ, ಇದರ ಸಂಬಂಧವಾಗಿ ದೇವರು--ನಾನು ಅವರಲ್ಲಿ ವಾಸಿಸುತ್ತಾ ತಿರುಗಾಡುವೆನು, ನಾನು ಅವರಿಗೆ ದೇವರಾಗಿರುವೆನು, ಅವರು ನನಗೆ ಪ್ರಜೆಯಾಗಿರುವರು ಎಂದು ಹೇಳಿದ್ದಾನೆ.
- Revelation 10:1–5 ಪ್ರಕಟನೆ 10:1–5ಮೇಘವನ್ನು ಧರಿಸಿಕೊಂಡಿದ್ದ ಬಲಿಷ್ಠ ನಾದ ಮತ್ತೊಬ್ಬ ದೂತನು ಪರಲೋಕ ದಿಂದ ಇಳಿದು ಬರುವದನ್ನು ನಾನು ಕಂಡೆನು. ಅವನ ತಲೆಯ ಮೇಲೆ ಮಳೆ ಬಿಲ್ಲು ಇತ್ತು; ಅವನ ಮುಖವು ಸೂರ್ಯನಂತಿತ್ತು; ಅವನ ಪಾದಗಳು ಬೆಂಕಿಯ ಕಂಬಗಳಂತಿದ್ದವು; ತೆರೆದಿದ್ದ ಒಂದು ಚಿಕ್ಕ ಪುಸ್ತಕವು ಅವನ ಕೈಯಲ್ಲಿ ಇತ್ತು; ಅವನು ತನ್ನ ಬಲಗಾಲನ್ನು ಸಮುದ್ರದ ಮೇಲೆಯೂ ಎಡಗಾಲನ್ನು ಭೂಮಿಯ ಮೇಲೆಯೂ ಇಟ್ಟು ಸಿಂಹವು ಗರ್ಜಿಸುವ ಪ್ರಕಾರ ಮಹಾಶಬ್ದದಿಂದ ಕೂಗಿದನು. ಅವನು ಕೂಗಿದಾಗ ಏಳು ಗುಡುಗುಗಳು ತಮ್ಮ ಧ್ವನಿಕೊಟ್ಟವು. ಆ ಏಳು ಗುಡುಗುಗಳು ತಮ್ಮ ಧ್ವನಿಕೊಟ್ಟಾಗ ನಾನು ಬರೆಯ ಬೇಕೆಂದಿದ್ದೆನು. ಅದಕ್ಕೆ--ಆ ಏಳು ಗುಡುಗುಗಳು ನುಡಿದವುಗಳನ್ನು ನೀನು ಬರೆಯದೆ ಮುದ್ರಿಸು ಎಂದು ಪರಲೋಕದಿಂದ ಬಂದ ಶಬ್ದವು ನನಗೆ ಹೇಳುವದನ್ನು ಕೇಳಿದೆನು. ಅನಂತರ ಸಮುದ್ರದ ಮೇಲೆಯೂ ಭೂಮಿಯ ಮೇಲೆಯೂ ನಿಂತಿದ್ದ ದೂತನನ್ನು ನಾನು ಕಂಡೆನು. ಅವನು ತನ್ನ ಕೈಯನ್ನು ಪರಲೋಕದ ಕಡೆಗೆ ಎತ್ತಿ--
Original words (Greek)
- And · G2532καί kaí
- given · G1325δίδωμι dídōmi
- me · G3427μοί moí
- reed · G2563κάλαμος kálamos
- unto · G3664ὅμοιος hómoios
- rod · G4464ῥάβδος rhábdos
- saying · G3004λέγω légō
- Rise · G1453ἐγείρω egeírō
- and · G2532καί kaí
- measure · G3354μετρέω metréō
- temple · G3485ναός naós
- God · G2316θεός theós
- and · G2532καί kaí
- altar · G2379θυσιαστήριον thysiastḗrion
- and · G2532καί kaí
- that · G3588ὁ ho
- worship · G4352προσκυνέω proskynéō
- therein · G846αὐτός autós