Revelation · chapter 11 · verse 2
Revelation 11:2 in Kannada
ಆದರೆ ಆಲಯದ ಹೊರಗಿರುವ ಅಂಗಳವನ್ನು ಅಳೆಯದೆ ಬಿಟ್ಟುಬಿಡು; ಯಾಕಂದರೆ ಅದು ಅನ್ಯ ಜನರಿಗೆ ಕೊಡಲ್ಪಟ್ಟಿದೆ. ಅವರು ಪರಿಶುದ್ಧ ಪಟ್ಟಣವನ್ನು ನಾಲ್ವತ್ತೆರಡು ತಿಂಗಳು ತುಳಿದಾಡುವರು.
Aadare aalayada horagiruva angalavannu aleyade bittubidu; yaakandare adu anya janarige kodalpattide. Avaru parishuddha pattanavannu naalvatteradu tingalu tulidaaduvaru.
Revelation 11:2 in English
- King James Version (KJV)
- But the court which is without the temple leave out, and measure it not; for it is given unto the Gentiles: and the holy city shall they tread under foot forty [and] two months.
- World English Bible (WEB)
- Leave out the court which is outside of the temple, and don’t measure it, for it has been given to the nations. They will tread the holy city under foot for forty-two months.
- American Standard Version (ASV)
- And the court which is without the temple leave without, and measure it not; for it hath been given unto the nations: and the holy city shall they tread under foot forty and two months.
- Bible in Basic English (BBE)
- But do not take the measure of the space outside the house; because it has been given to the nations: and the holy town will be under their feet for forty-two months.
- Darby Translation (DBY)
- And the court which [is] without the temple cast out, and measure it not; because it has been given [up] to the nations, and the holy city shall they tread under foot forty-two months.
- Webster's Bible (WBS)
- But the court which is without the temple, leave out, and measure it not; for it is given to the Gentiles: and the holy city shall they tread under foot forty [and] two months.
- Young's Literal Translation (YLT)
- and the court that is without the sanctuary leave out, and thou mayest not measure it, because it was given to the nations, and the holy city they shall tread down forty-two months;
Read in context
- 1ತರುವಾಯ ಕೋಲಿನಂತಿದ್ದ ಒಂದು ದಂಡ ನನಗೆ ಕೊಡಲ್ಪಟ್ಟಿತು ಮತ್ತು ಆ ದೂತನು ನಿಂತುಕೊಂಡು ಎದ್ದು ದೇವರ ಆಲಯವನ್ನೂ ಯಜ್ಞವೇದಿಯನ್ನೂ ಆಲಯದಲ್ಲಿ ಆರಾಧನೆ ಮಾಡು ವವರನ್ನೂ ಅಳತೆಮಾಡು.
- 2ಆದರೆ ಆಲಯದ ಹೊರಗಿರುವ ಅಂಗಳವನ್ನು ಅಳೆಯದೆ ಬಿಟ್ಟುಬಿಡು; ಯಾಕಂದರೆ ಅದು ಅನ್ಯ ಜನರಿಗೆ ಕೊಡಲ್ಪಟ್ಟಿದೆ. ಅವರು ಪರಿಶುದ್ಧ ಪಟ್ಟಣವನ್ನು ನಾಲ್ವತ್ತೆರಡು ತಿಂಗಳು ತುಳಿದಾಡುವರು.
- 3ಇದಲ್ಲದೆ ನನ್ನ ಇಬ್ಬರು ಸಾಕ್ಷಿಗಳು ಗೋಣಿತಟ್ಟನ್ನು ಹೊದ್ದುಕೊಂಡು ಸಾವಿರದ ಇನ್ನೂರ ಅರವತ್ತು ದಿನಗಳ ತನಕ ಪ್ರವಾದಿಸುವ ಹಾಗೆ ಅವರಿಗೆ ಅಧಿಕಾರ ಕೊಡುವೆನು.
- 4ಭೂಲೋಕದ ದೇವರ ಮುಂದೆ ನಿಂತಿರುವ ಎರಡು ಎಣ್ಣೆಯ ಮರಗಳೂ ಎರಡು ದೀಪಸ್ತಂಭಗಳೂ ಇವರೇ.
Cross references
- Daniel 7:25 ದಾನಿಯೇಲನು 7:25ಅವನು ಮಹೋನ್ನತನಿಗೆ ವಿರೋಧವಾಗಿ ಕೊಚ್ಚಿಕೊಂಡು ಮಾತುಗಳನ್ನಾಡಿ ಪರಿ ಶುದ್ಧರನ್ನು ಬಾಧಿಸಿ, ಕಾಲನಿಯಮಗಳನ್ನು ಬದಲಾಯಿ ಸುವದಕ್ಕೆ ಯೋಚಿಸುವನು; ಕಾಲವು ಕಾಲನಿಯಮವು ವಿಭಾಗಿಸುವ ತನಕ ಅವರು ಅವನ ಕೈಯಲ್ಲಿ ಒಪ್ಪಿಸ ಲ್ಪಡುವರು.
- Luke 21:24 ಲೂಕನು 21:24ಇದಲ್ಲದೆ ಅವರು ಕತ್ತಿಯ ಬಾಯಿಗೆ ಬೀಳುವರು. ಸೆರೆಯಾಗಿ ಎಲ್ಲಾ ಜನಾಂಗಗಳಲ್ಲಿ ಒಯ್ಯ ಲ್ಪಡುವರು;ಅನ್ಯಜನಗಳ ಕಾಲಗಳು ಪರಿಪೂರ್ಣ ವಾಗುವ ವರೆಗೆ ಯೆರೂಸಲೇಮು ಅನ್ಯಜನಗಳಿಂದ ತುಳಿದಾಡಲ್ಪಡುವದು.
- Revelation 12:6 ಪ್ರಕಟನೆ 12:6ಆ ಸ್ತ್ರೀಯು ಅರಣ್ಯಕ್ಕೆ ಓಡಿ ಹೋದಳು; ಅಲ್ಲಿ ಆಕೆಗೆ ಸಾವಿರದ ಇನ್ನೂರ ಅರವತ್ತು ದಿನಗಳವರೆಗೆ ಪೋಷಣೆಯಾಗಬೇಕೆಂದು ದೇವರು ಸ್ಥಳವನ್ನು ಸಿದ್ಧಮಾಡಿದ್ದನು.
- Revelation 11:3 ಪ್ರಕಟನೆ 11:3ಇದಲ್ಲದೆ ನನ್ನ ಇಬ್ಬರು ಸಾಕ್ಷಿಗಳು ಗೋಣಿತಟ್ಟನ್ನು ಹೊದ್ದುಕೊಂಡು ಸಾವಿರದ ಇನ್ನೂರ ಅರವತ್ತು ದಿನಗಳ ತನಕ ಪ್ರವಾದಿಸುವ ಹಾಗೆ ಅವರಿಗೆ ಅಧಿಕಾರ ಕೊಡುವೆನು.
- Daniel 12:7 ದಾನಿಯೇಲನು 12:7ನದಿಯ ನೀರಿನ ಮೇಲೆ ನಿಂತು ನಾರು ಬಟ್ಟೆಯನ್ನು ಧರಿಸಿ ನಿಂತಿದ್ದ ಮನುಷ್ಯನು ತನ್ನ ಎಡಗೈಯನ್ನೂ ಬಲಗೈಯನ್ನೂ ಆಕಾಶದ ಕಡೆಗೆ ಎತ್ತಿ ಸದಾಕಾಲ ಜೀವಂತವಾಗಿರುವಾತನ ಮೇಲೆ ಆಣೆ ಇಟ್ಟು--ಅದು ಕಾಲ, ಕಾಲಗಳು, ಅರ್ಧಕಾಲ ಇರುವದೆಂದೂ ಆತನು ಪರಿಶುದ್ಧ ಜನರ ಬಲವನ್ನು ಚದರಿಸಿದ ಮೇಲೆ ಇವೆಲ್ಲವುಗಳು ಈಡೇರುವವೆಂದೂ ಅಂದದ್ದನ್ನು ನಾನು ಕೇಳಿದೆನು.
- Revelation 13:1–18 ಪ್ರಕಟನೆ 13:1–18ಆಗ ನಾನು ಸಮುದ್ರದ ಮರಳಿನ ಮೇಲೆ ನಿಂತೆನು, ಸಮುದ್ರದೊಳಗಿಂದ ಮೃಗವು ಏರಿ ಬರುವದನ್ನು ಕಂಡೆನು. ಅದಕ್ಕೆ ಏಳು ತಲೆಗಳೂ ಹತ್ತು ಕೊಂಬುಗಳೂ ಕೊಂಬುಗಳ ಮೇಲೆ ಹತ್ತು ಕಿರೀಟಗಳೂ ತಲೆಗಳ ಮೇಲೆ ದೂಷಣೆಯ ನಾಮವೂ ಇದ್ದವು. ನಾನು ಕಂಡ ಮೃಗವು ಚಿರತೆಯಂತಿತ್ತು; ಅದರ ಕಾಲುಗಳು ಕರಡಿಯ ಕಾಲುಗಳಂತೆಯೂ ಅದರ ಬಾಯಿ ಸಿಂಹದ ಬಾಯಂತೆಯೂ ಇದ್ದವು; ಅದಕ್ಕೆ ಘಟಸರ್ಪವು ತನ್ನ ಶಕ್ತಿಯನ್ನೂ ತನ್ನ ಆಸನವನ್ನು ಮಹಾ ಅಧಿಕಾರವನ್ನೂ ಕೊಟ್ಟಿತು. ಅದರ ತಲೆಗಳಲ್ಲಿ ಒಂದು ಗಾಯ ಹೊಂದಿ ಸಾಯುವಹಾಗಿರುವದನ್ನು ನಾನು ಕಂಡೆನು. ಮರಣಕರವಾದ ಆ ಗಾಯವು ವಾಸಿಯಾಯಿತು; ಆಗ ಭೂಲೋಕದವರೆಲ್ಲರು ಆ ಮೃಗದ ವಿಷಯವಾಗಿ ಆಶ್ಚರ್ಯಪಟ್ಟರು. ಘಟ ಸರ್ಪನು ಆ ಮೃಗಕ್ಕೆ ಅಧಿಕಾರವನ್ನು ಕೊಟ್ಟವ ನಾದ್ದರಿಂದ ಅವರು ಆ ಘಟಸರ್ಪನನ್ನು ಆರಾಧನೆ ಮಾಡುವವರಾದರು. ಇದಲ್ಲದೆ ಆ ಮೃಗವನ್ನು ಆರಾ ಧಿಸಿ--ಈ ಮೃಗಕ್ಕೆ ಸಮಾನರು ಯಾರು? ಇದರ ಮೇಲೆ ಯುದ್ಧ ಮಾಡುವದಕ್ಕೆ ಯಾರು ಶಕ್ತರು ಅಂದರು. ಬಡಾಯಿ ಮಾತುಗಳನ್ನೂ ದೂಷಣೆಯ ಮಾತು ಗಳನ್ನೂ ಆಡುವ ಬಾಯಿ ಅದಕ್ಕೆ ಕೊಡಲ್ಪಟ್ಟಿತು. ನಾಲ್ವತ್ತೆರಡು ತಿಂಗಳುಗಳವರೆಗೆ ಮುಂದುವರಿಯುವ ಹಾಗೆ ಅದಕ್ಕೆ ಅಧಿಕಾರವು ಕೊಡಲ್ಪಟ್ಟಿತು. ಆಗ ಅದು ದೇವರ ಹೆಸರನ್ನೂ ಆತನ ಗುಡಾರವನ್ನೂ ಪರಲೋಕದಲ್ಲಿ ವಾಸವಾಗಿರುವವರನ್ನೂ ದೂಷಿಸಿ ದ್ದಲ್ಲದೆ ದೇವರಿಗೆ ವಿರೋಧವಾದ ದೂಷಣೆಗೆ ತನ್ನ ಬಾಯಿಯನ್ನು ತೆರೆಯಿತು. ಇದಲ್ಲದೆ ಪರಿಶುದ್ಧರ ಮೇಲೆ ಯುದ್ಧಮಾಡಿ ಅವರನ್ನು ಗೆಲ್ಲುವಂತೆ ಅದಕ್ಕೆ ಅಧಿಕಾರವು ಕೊಡಲ್ಪಟ್ಟಿತು. ಸಕಲ ಕುಲ ಭಾಷೆ ಜನಾಂಗಗಳ ಮೇಲೆ ಅವನಿಗೆ ಅಧಿಕಾರವು ಕೊಡಲ್ಪಟ್ಟಿತು. ಜಗತ್ತಿಗೆ ಅಸ್ತಿವಾರ ಹಾಕಿದಂದಿನಿಂದ ಯಾರಾರ ಹೆಸರುಗಳು ವಧಿಸಲ್ಪಟ್ಟ ಕುರಿಮರಿಯಾದಾ ತನ ಜೀವಗ್ರಂಥದಲ್ಲಿ ಬರೆದಿರುವದಿಲ್ಲವೋ ಆ ಭೂನಿವಾಸಿಗಳೆಲ್ಲರೂ ಮೃಗವನ್ನು ಆರಾಧಿಸುವರು. ಕಿವಿಯುಳ್ಳವನು ಕೇಳಲಿ. ಸೆರೆಗೆ ನಡಿಸುವವನು ಸೆರೆಗೆ ಹೋಗುವನು; ಕತ್ತಿಯಿಂದ ಕೊಲ್ಲುವವನು ಕತ್ತಿಯಿಂದಲೇ ಕೊಲೆಯಾಗಬೇಕು. ಇದರಲ್ಲಿ ಪರಿ ಶುದ್ಧರ ತಾಳ್ಮೆಯೂ ನಂಬಿಕೆಯೂ ಇರುತ್ತದೆ. ಮತ್ತೊಂದು ಮೃಗವು ಭೂಮಿಯೊಳಗಿಂದ ಬರು ವದನ್ನು ನಾನು ಕಂಡೆನು. ಇದಕ್ಕೆ ಕುರಿಮರಿಗಿರುವಂತೆ ಎರಡು ಕೊಂಬುಗಳಿದ್ದವು; ಇದು ಘಟಸರ್ಪದಂತೆ ಮಾತನಾಡಿತು. ಇದು ಮೊದಲನೆಯ ಮೃಗದ ಅಧಿಕಾರವನ್ನೆಲ್ಲಾ ಅದರ ಮುಂದೆಯೇ ನಡಿಸುತ್ತದೆ. ಮರಣಕರವಾದ ಗಾಯ ವಾಸಿಯಾದ ಮೊದಲನೆಯ ಮೃಗಕ್ಕೆ ಭೂಲೋಕವೂ ಭೂನಿವಾಸಿಗಳೂ ಆರಾಧಿಸು ವಂತೆ ಇದು ಮಾಡುವಂಥದ್ದಾಗಿದೆ. ಇದು ಮಹ ತ್ತಾದ ಸೂಚಕಕಾರ್ಯಗಳನ್ನು ನಡಿಸುವಂಥದ್ದಾಗಿ ಜನರ ಮುಂದೆ ಬೆಂಕಿಯು ಆಕಾಶದಿಂದ ಭೂಮಿಗೆ ಇಳಿದು ಬರುವಂತೆ ಮಾಡುತ್ತದೆ. ಮೃಗದ ಮುಂದೆ ಇಂಥಾ ಮಹತ್ಕಾರ್ಯಗಳನ್ನು ಮಾಡುವ ಅಧಿಕಾರ ವನ್ನು ಹೊಂದಿ ಭೂಮಿಯ ಮೇಲೆ ವಾಸಿಸುವ ಜನರನ್ನು ಮೋಸಗೊಳಿಸುವದಲ್ಲದೆ ಕತ್ತಿಯಿಂದ ಗಾಯಹೊಂದಿ ಬದುಕಿದ ಮೃಗಕ್ಕಾಗಿ ವಿಗ್ರಹವನ್ನು ಮಾಡಿಕೊಳ್ಳ ಬೇಕೆಂದು ಅವರಿಗೆ ಹೇಳುತ್ತದೆ. ಮೃಗದ ವಿಗ್ರಹವು ಮಾತನಾಡುವಂತೆಯೂ ಆ ಮೃಗದ ವಿಗ್ರಹವನ್ನು ಯಾರಾರು ಆರಾಧಿಸುವದಿಲ್ಲವೋ ಅವರನ್ನು ಕೊಲ್ಲಿಸು ವಂತೆಯೂ ಆ ಮೃಗದ ವಿಗ್ರಹಕ್ಕೆ ಜೀವ ಕೊಡುವ ಅಧಿಕಾರವು ಅದಕ್ಕೆ ಇತ್ತು. ಅದು ಚಿಕ್ಕವರು ದೊಡ್ಡ ವರು ಐಶ್ವರ್ಯವಂತರು ಬಡವರು ಸ್ವತಂತ್ರರು ದಾಸರು ಎಲ್ಲರೂ ತಮ್ಮ ತಮ್ಮ ಬಲಗೈಯ ಮೇಲಾಗಲಿ ಹಣೆಗಳ ಮೇಲಾಗಲಿ ಗುರುತು ಹೊಂದಬೇಕೆಂತಲೂ ಆ ಗುರುತಾಗಲಿ ಮೃಗದ ಹೆಸರಾಗಲಿ ಅದರ ಹೆಸರಿನ ಅಂಕೆಯಾಗಲಿ ಇಲ್ಲದವನು ಕ್ರಯ ವಿಕ್ರಯಗಳನ್ನು ಮಾಡದಂತೆಯೂ ಅದು ಮಾಡುತ್ತದೆ.ಇದರಲ್ಲಿ ಜ್ಞಾನವಿದೆ. ತಿಳುವಳಿಕೆಯುಳ್ಳವನು ಆ ಮೃಗದ ಅಂಕೆಯನ್ನು ಎಣಿಸಲಿ; ಯಾಕಂದರೆ ಅದು ಒಬ್ಬ ಮನುಷ್ಯನ ಅಂಕೆಯಾಗಿದೆ; ಅವನ ಅಂಕೆಯು ಆರುನೂರ ಅರವತ್ತಾರು. ಇದರಲ್ಲಿ ಜ್ಞಾನವಿದೆ. ತಿಳುವಳಿಕೆಯುಳ್ಳವನು ಆ ಮೃಗದ ಅಂಕೆಯನ್ನು ಎಣಿಸಲಿ; ಯಾಕಂದರೆ ಅದು ಒಬ್ಬ ಮನುಷ್ಯನ ಅಂಕೆಯಾಗಿದೆ; ಅವನ ಅಂಕೆಯು ಆರುನೂರ ಅರವತ್ತಾರು.
- Daniel 12:11–12 ದಾನಿಯೇಲನು 12:11–12ಪ್ರತಿದಿನದ ಯಜ್ಞವು ಸಕಾಲಕ್ಕೆ ತೆಗೆದುಹಾಕಲ್ಪಟ್ಟು ಹಾಳುಮಾಡುವಂಥ ಅಸಹ್ಯವು ಇರಿಸಲ್ಪಡುವ ವರೆಗೂ ಸಾವಿರದ ಇನ್ನೂರ ತೊಂಭತ್ತೊಂಭತ್ತು ದಿನಗಳು ಇರುವವು. ಸಾವಿರದ ಮುನ್ನೂರ ಮೂವತ್ತೈದು ದಿನಗಳು ಬರುವ ವರೆಗೆ ಕಾದಿರುವವನೇ ಭಾಗ್ಯವಂತನು.ಆದರೆ ನೀನು ಅಂತ್ಯದ ವರೆಗೂ ಹೋಗು; ಯಾಕಂದರೆ ನೀನು ವಿಶ್ರಮಿಸಿಕೊಳ್ಳುವಿ ಮತ್ತು ದಿನಗಳ ಅಂತ್ಯದಲ್ಲಿ ನಿನ್ನ ಭಾಗದಲ್ಲಿ ನಿಲ್ಲುವಿ (ಎಂದು ಹೇಳಿದನು.)
- Isaiah 52:1 ಯೆಶಾಯ 52:1ಓ ಚೀಯೋನೇ, ಎಚ್ಚರವಾಗು, ಎಚ್ಚರವಾಗು, ನಿನ್ನ ಬಲವನ್ನು ಹೊಂದಿಕೋ, ಓ ಯೆರೂಸಲೇಮೇ, ಪರಿಶುದ್ಧ ಪಟ್ಟಣವೇ, ನಿನ್ನ ಸೌಂದರ್ಯವಾದ ಉಡುಪುಗಳನ್ನು ಧರಿಸಿಕೋ; ಯಾಕಂದರೆ ಇಂದಿನಿಂದ ಸುನ್ನತಿಯಿಲ್ಲದವರೂ ಅಶುದ್ಧರೂ ನಿನ್ನೊಳಗೆ ಬರುವದಿಲ್ಲ.
- Revelation 21:2 ಪ್ರಕಟನೆ 21:2ಇದಲ್ಲದೆ ಪರಲೋಕದಿಂದ ಪರಿಶುದ್ಧ ಪಟ್ಟಣವಾದ ಹೊಸ ಯೆರೂಸಲೇಮು ದೇವರ ಬಳಿಯಿಂದ ಇಳಿದು ಬರುವದನ್ನು ಯೋಹಾನನೆಂಬ ನಾನು ಕಂಡೆನು; ಅದು ತನ್ನ ಮದಲಿಂಗನಿಗೋಸ್ಕರ ಅಲಂಕೃತಳಾದ ಮದಲಗಿತ್ತಿಯಂತೆ ಸಿದ್ಧವಾಗಿತ್ತು.
- Ezekiel 40:17–20 ಯೆಹೆಜ್ಕೇಲನು 40:17–20ಆಗ ಅವನು ನನ್ನನ್ನು ಹೊರಗಿನ ಅಂಗಳಕ್ಕೆ ತಂದನು; ಇಗೋ, ಕೊಠಡಿಗಳೂ ಕಲ್ಲು ಹಾಸಿದ ನೆಲವೂ ಅಂಗಳದ ಸುತ್ತಲೂ ಮಾಡಲ್ಪಟ್ಟಿದ್ದವು; ಕಲ್ಲು ಹಾಸಿದ ನೆಲದ ಬದಿಯಲ್ಲಿ ಮೂವತ್ತು ಕೊಠಡಿ ಗಳಿದ್ದವು. ಬಾಗಲುಗಳ ಪಾರ್ಶ್ವದಲ್ಲಿ ಬಾಗಲುಗಳ ಉದ್ದಕ್ಕೆ ಸರಿಯಾಗಿ ಇದ್ದ ಆ ಕಲ್ಲು ಹಾಸಿದನೆಲವು ಕೆಳಗಿನ ನೆಲಗಟ್ಟಾಗಿತ್ತು. ಆಗ ಅವನು ಕೆಳಗಿನ ಬಾಗಲಿನ ಮುಂದುಗಡೆಯಿಂದ ಒಳಗಿನ ಅಂಗಳದ ಹೊರಗಡೆಯ ವರೆಗೂ ಪೂರ್ವಕ್ಕೂ ಉತ್ತರಕ್ಕೂ ಇರುವ ಅಗಲವನ್ನು ನೂರು ಮೊಳವೆಂದು ಅಳೆದನು. ಇದಲ್ಲದೆ ಉತ್ತರದ ಕಡೆಗೆ ಅಭಿಮುಖವಾದ ಹೊರ ಗಿನ ಬಾಗಲಿನ ಉದ್ದವನ್ನೂ ಅಗಲವನ್ನೂ ಅಳೆದನು.
- Revelation 22:19 ಪ್ರಕಟನೆ 22:19ಯಾವನಾದರೂ ಈ ಪ್ರವಾದನಾ ಪುಸ್ತಕದಲ್ಲಿರುವ ವಾಕ್ಯಗಳಿಂದ ತೆಗೆದು ಬಿಟ್ಟರೆ ಜೀವಗ್ರಂಥದಿಂದಲೂ ಪರಿಶುದ್ಧ ಪಟ್ಟಣ ದಿಂದಲೂ ಈ ಪುಸ್ತಕದಲ್ಲಿ ಬರೆದಿರುವವುಗಳಿಂದಲೂ ಅವನ ಪಾಲನ್ನು ದೇವರು ತೆಗೆದುಬಿಡುವನು.
- Daniel 8:24–25 ದಾನಿಯೇಲನು 8:24–25ಅವನ ಶಕ್ತಿಯು ಬಲವಾಗಿರುವದು, ಆದರೆ ಅದು ಸ್ವಂತ ಶಕ್ತಿಯಿಂದಲ್ಲ; ಅವನು ಆಶ್ಚರ್ಯದ ರೀತಿಯಲ್ಲಿ ನಾಶಮಾಡಿ ವೃದ್ಧಿಗೊಂಡು ಅಭ್ಯಾಸಮಾಡಿ, ಬಲವಾದ ಮತ್ತು ಪರಿಶುದ್ಧ ಜನರನ್ನು ನಾಶಮಾಡುವನು. ಅವನು ತನ್ನ ಯುಕ್ತಿಯಿಂದಲೇ ತಂತ್ರವನ್ನು ತನ್ನ ಕೈಯಲ್ಲಿಯೇ ಸಿದ್ಧಮಾಡಿಕೊಳ್ಳುವನು; ಅವನು ಹೃದಯ ದಲ್ಲಿ ತನ್ನನ್ನು ತಾನೇ ಹೆಚ್ಚಿಸಿಕೊಂಡು ಶಾಂತಿಯಿಂದಲೇ ಅನೇಕರನ್ನು ನಾಶಮಾಡುವನು; ಅಲ್ಲದೆ ಅವನು ಪ್ರಭುಗಳ ಪ್ರಭುವಿಗೆ ವಿರುದ್ಧವಾಗಿ ಹೇಳುವನು; ಆದರೆ ಅವನು ಯಾರ ಕೈಸೋಕದೆ ಮುರಿಯಲ್ಪಡು ವನು.
Original words (Greek)
- But · G2532καί kaí
- court · G833αὐλή aulḗ
- without · G2081ἔσωθεν ésōthen
- temple · G3485ναός naós
- leave · G1544ἐκβάλλω ekbállō
- out · G1854ἔξω éxō
- and · G2532καί kaí
- measure · G3354μετρέω metréō
- it · G846αὐτός autós
- not · G3361μή mḗ
- for · G3754ὅτι hóti
- given · G1325δίδωμι dídōmi
- Gentiles · G1484ἔθνος éthnos
- and · G2532καί kaí
- holy · G40ἅγιος hágios
- city · G4172πόλις pólis
- foot · G3961πατέω patéō
- forty · G5062τεσσαράκοντα tessarákonta
- two · G1417δύο dýo
- months · G3376μήν mḗn