Romans · chapter 7 · verse 3
Romans 7:3 in Kannada
ಹೀಗಿರಲಾಗಿ ಗಂಡನು ಜೀವದಿಂದಿರುವಾಗ ಆಕೆ ಬೇರೊಬ್ಬನನ್ನು ಮದುವೆ ಮಾಡಿಕೊಂಡರೆ ವ್ಯಭಿ ಚಾರಿಣಿ ಎಂದು ಕರೆಯಲ್ಪಡುವಳು; ಗಂಡನು ಸತ್ತರೆ ಆ ನ್ಯಾಯಪ್ರಮಾಣದಿಂದ ಆಕೆಯು ಬಿಡುಗಡೆಯಾಗಿ ದ್ದಾಳೆ. ಹೀಗೆ ಆಕೆ ಮತ್ತೊಬ್ಬನನ್ನು ಮದುವೆ ಮಾಡಿ ಕೊಂಡರೂ ವ್ಯಭಿಚಾರಿಣಿಯಲ್ಲ.
Heegiralaagi gandanu jeevadindiruvaaga aake berobbanannu maduve maadikondare vyabhi chaarini endu kareyalpaduvalu; gandanu sattare aa nyaayapramaanadinda aakeyu bidugadeyaagi ddaale. Heege aake mattobbanannu maduve maadi kondaroo vyabhichaariniyalla.
Romans 7:3 in English
- King James Version (KJV)
- So then if, while [her] husband liveth, she be married to another man, she shall be called an adulteress: but if her husband be dead, she is free from that law; so that she is no adulteress, though she be married to another man.
- World English Bible (WEB)
- So then if, while the husband lives, she is joined to another man, she would be called an adulteress. But if the husband dies, she is free from the law, so that she is no adulteress, though she is joined to another man.
- American Standard Version (ASV)
- So then if, while the husband liveth, she be joined to another man, she shall be called an adulteress: but if the husband die, she is free from the law, so that she is no adulteress, though she be joined to another man.
- Bible in Basic English (BBE)
- So if, while the husband is living, she is joined to another man, she will get the name of one who is untrue to her husband: but if the husband is dead, she is free from the law, so that she is not untrue, even if she takes another man.
- Darby Translation (DBY)
- so then, the husband being alive, she shall be called an adulteress if she be to another man; but if the husband should die, she is free from the law, so as not to be an adulteress, though she be to another man.
- Webster's Bible (WBS)
- So then, if while [her] husband liveth, she is married to another man, she shall be called an adulteress: but if her husband is dead, she is free from that law; so that she is no adulteress, though she be married to another man.
- Young's Literal Translation (YLT)
- so, then, the husband being alive, an adulteress she shall be called if she may become another man's; and if the husband may die, she is free from the law, so as not to be an adulteress, having become another man's.
Read in context
- 1ಸಹೋದರರೇ, (ನ್ಯಾಯಪ್ರಮಾಣವನ್ನು ತಿಳಿದವರಿಗೆ ನಾನು ಹೇಳುವದೇ ನಂದರೆ,) ಒಬ್ಬ ಮನುಷ್ಯನು ಜೀವದಿಂದಿರುವ ತನಕ ಅವನ ಮೇಲೆ ನ್ಯಾಯಪ್ರಮಾಣವು ಪ್ರಭುತ್ವ ಮಾಡುತ್ತ ದೆಂಬದು ನಿಮಗೆ ಗೊತ್ತಿಲ್ಲವೇ?
- 2ಗಂಡನಿರುವ ಸ್ತ್ರೀಯು ಅವನು ಬದುಕಿರುವ ತನಕ ನ್ಯಾಯಪ್ರಮಾಣದಿಂದ ಅವನಿಗೆ ಕಟ್ಟಲ್ಪಟ್ಟಿದ್ದಾಳೆ; ಗಂಡನು ಸತ್ತರೆ ಆಕೆಯು ಅವನ ನ್ಯಾಯಪ್ರಮಾಣದಿಂದ ಬಿಡುಗಡೆಯಾಗಿ ದ್ದಾಳೆ.
- 3ಹೀಗಿರಲಾಗಿ ಗಂಡನು ಜೀವದಿಂದಿರುವಾಗ ಆಕೆ ಬೇರೊಬ್ಬನನ್ನು ಮದುವೆ ಮಾಡಿಕೊಂಡರೆ ವ್ಯಭಿ ಚಾರಿಣಿ ಎಂದು ಕರೆಯಲ್ಪಡುವಳು; ಗಂಡನು ಸತ್ತರೆ ಆ ನ್ಯಾಯಪ್ರಮಾಣದಿಂದ ಆಕೆಯು ಬಿಡುಗಡೆಯಾಗಿ ದ್ದಾಳೆ. ಹೀಗೆ ಆಕೆ ಮತ್ತೊಬ್ಬನನ್ನು ಮದುವೆ ಮಾಡಿ ಕೊಂಡರೂ ವ್ಯಭಿಚಾರಿಣಿಯಲ್ಲ.
- 4ಹಾಗೆಯೇ ನನ್ನ ಸಹೋದರರೇ, ನೀವು ಸಹ ಕ್ರಿಸ್ತನ ದೇಹದ ಮೂಲಕವಾಗಿ ನ್ಯಾಯಪ್ರಮಾಣದ ಪಾಲಿಗೆ ಸತ್ತಿರಿ. ದೇವರಿಗೆ ಫಲಫಲಿಸುವದಕ್ಕಾಗಿ ಮತ್ತೊಬ್ಬನನ್ನು ಅಂದರೆ ಸತ್ತುಜೀವಿತನಾಗಿ ಎದ್ದಾತನನ್ನು ಸೇರಿಕೊಂಡಿರಿ.
- 5ನಾವು ಶರೀರದಲ್ಲಿದ್ದಾಗ ಪಾಪಗಳ ಇಚ್ಛೆಗಳು ನ್ಯಾಯಪ್ರಮಾಣದಿಂದಲೇ ಮರಣಕ್ಕೆ ಫಲಫಲಿಸುವ ದಕ್ಕಾಗಿ ನಮ್ಮ ಅಂಗಗಳಲ್ಲಿ ಯತ್ನಿಸುತ್ತಿದ್ದವು.
Cross references
- Exodus 20:14 ವಿಮೋಚನಕಾಂಡ 20:14ವ್ಯಭಿಚಾರ ಮಾಡಬಾರದು.
- Matthew 5:32 ಮತ್ತಾಯನು 5:32ಆದರೆ ನಾನು ನಿಮಗೆ ಹೇಳುವದೇನಂದರೆ--ಹಾದರದ ಕಾರಣ ದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟುಬಿಡುವವನು ಆಕೆಯು ವ್ಯಭಿಚಾರ ಮಾಡುವಂತೆ ಕಾರಣನಾಗುವನು; ಮತ್ತು ಬಿಡಲ್ಪಟ್ಟವಳನ್ನು ಯಾವನಾದರೂ ಮದುವೆ ಯಾದರೆ ಅವನು ವ್ಯಭಿಚಾರ ಮಾಡುವವನಾಗಿದ್ದಾನೆ.
- Mark 10:6–12 ಮಾರ್ಕನು 10:6–12ಆದರೆ ಸೃಷ್ಟಿಯ ಪ್ರಾರಂಭದಿಂದಲೇ ದೇವರು ಅವರನ್ನು ಗಂಡು ಹೆಣ್ಣಾಗಿ ಮಾಡಿದನು. ಈ ಕಾರಣದಿಂದ ಒಬ್ಬ ಮನುಷ್ಯನು ತನ್ನ ತಂದೆಯನ್ನೂ ತಾಯಿಯನ್ನೂ ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗಿರುವರು; ಹೀಗೆ ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದದರಿಂದ ದೇವರು ಕೂಡಿಸಿದ್ದನ್ನು ಮನುಷ್ಯನು ಅಗಲಿಸದಿರಲಿ ಅಂದನು. ಆತನ ಶಿಷ್ಯರು ಮನೆಯಲ್ಲಿ ಅದೇ ವಿಷಯವನ್ನು ಆತನಿಗೆ ತಿರಿಗಿ ಕೇಳಿದರು. ಅದಕ್ಕೆ ಆತನು ಅವರಿಗೆ-- ಯಾವನಾದರೂ ತನ್ನ ಹೆಂಡತಿ ಯನ್ನು ಬಿಟ್ಟು ಬಿಟ್ಟು ಇನ್ನೊಬ್ಬಳನ್ನು ಮದುವೆಯಾದರೆ ಅವಳಿಗೆ ವಿರೋಧವಾಗಿ ವ್ಯಭಿಚಾರ ಮಾಡುವವನಾಗಿ ದ್ದಾನೆ. ಇದಲ್ಲದೆ ಒಬ್ಬ ಸ್ತ್ರೀಯು ತನ್ನ ಗಂಡನನ್ನು ಬಿಟ್ಟು ಬೇರೊಬ್ಬನನ್ನು ಮದುವೆಯಾದರೆ ಅವಳು ವ್ಯಭಿಚಾರ ಮಾಡುವವಳಾಗಿದ್ದಾಳೆ ಅಂದನು.
- John 8:3–5 ಯೋಹಾನನು 8:3–5ಆಗ ವ್ಯಭಿಚಾರದಲ್ಲಿ ಸಿಕ್ಕಿದ ಒಬ್ಬ ಹೆಂಗಸನ್ನು ಶಾಸ್ತ್ರಿಗಳು ಮತ್ತು ಫರಿಸಾಯರು ಆತನ ಬಳಿಗೆ ತಂದು ಆಕೆಯನ್ನು ನಡುವೆ ನಿಲ್ಲಿಸಿ ಆತನಿಗೆ -- ಬೋಧಕನೇ, ಈ ಹೆಂಗಸು ವ್ಯಭಿಚಾರ ಮಾಡುವಾಗಲೇ ಹಿಡಿಯ ಲ್ಪಟ್ಟಳು. ಇಂಥವರು ಕಲ್ಲೆಸೆಯಲ್ಪಡಬೇಕೆಂದು ಮೋಶೆಯು ನ್ಯಾಯಪ್ರಮಾಣದಲ್ಲಿ ನಮಗೆ ಅಪ್ಪಣೆ ಕೊಟ್ಟಿದ್ದಾನೆ; ಆದರೆ ನೀನು ಏನು ಹೇಳುತ್ತೀ ಎಂದು ಕೇಳಿದರು.
- 1 Timothy 5:11–14 1 ತಿಮೊಥೆಯನಿಗೆ 5:11–14ಆದರೆ ಯೌವನಸ್ಥ ವಿಧವೆಯರನ್ನು ಲೆಕ್ಕಕ್ಕೆ ಸೇರಿಸಬೇಡ; ಯಾಕಂದರೆ ಅವರು ಕ್ರಿಸ್ತನಿಗೆ ಒಳಗಾಗಲೊಲ್ಲದೆ ಮದಿಸಿ ಮದುವೆ ಮಾಡಿಕೊಳ್ಳಬೇಕೆಂದು ಇಷ್ಟಪ ಟ್ಟಾರು. ಅಂಥವರು ತಮ್ಮ ಮೊದಲಿನ ನಂಬಿಕೆಯನ್ನು ತೊರೆದು ದಂಡನೆಗೆ ಗುರಿಯಾಗಿದ್ದಾರೆ. ಇದಲ್ಲದೆ ಅವರು ಮನೆಯಿಂದ ಮನೆಗೆ ತಿರುಗಾಡುತ್ತಾ ಮೈಗಳ್ಳತನವನ್ನು ಕಲಿಯುತ್ತಾರೆ; ಮೈಗಳ್ಳರಾಗುವದ ಲ್ಲದೆ ಹರಟೆ ಮಾತನ್ನಾಡುವರು ಮತ್ತು ಇತರರ ಕೆಲಸ ದಲ್ಲಿ ಕೈಹಾಕುವವರಾಗಿ ಆಡಬಾರದ ಮಾತುಗಳನ್ನಾಡು ತ್ತಾರೆ. ಆದದರಿಂದ ಯೌವನಸ್ಥ ವಿಧವೆಯರು ಮದುವೆ ಮಾಡಿಕೊಂಡು ಮಕ್ಕಳನ್ನು ಹೆತ್ತು ಮನೆಯ ಕೆಲಸ ನಡಿಸುವದೇ ನನ್ನ ಅಪೇಕ್ಷೆ; ಹಾಗೆ ಮಾಡುವದ ರಿಂದ ವಿರೋಧಿಯ ನಿಂದೆಗೆ ಆಸ್ಪದಕೊಡದೆ ಇರುವರು.
- Deuteronomy 22:22–24 ಧರ್ಮೋಪದೇಶಕಾಂಡ 22:22–24ಒಬ್ಬ ಮನುಷ್ಯನು ಮುತ್ತೈದೆಯ ಸಂಗಡ ಮಲಗಿ ಕೊಂಡವನಾಗಿ ಸಿಕ್ಕಿದರೆ ಆ ಸ್ತ್ರೀಯ ಸಂಗಡ ಮಲಗಿ ಕೊಂಡ ಮನುಷ್ಯನೂ ಆ ಸ್ತ್ರೀಯೂ ಅವರಿಬ್ಬರೂ ಸಾಯಬೇಕು; ಹೀಗೆ ಕೆಟ್ಟದ್ದನ್ನು ಇಸ್ರಾಯೇಲಿನಿಂದ ತೆಗೆದುಹಾಕಬೇಕು. ಕನ್ಯಾ ಸ್ತ್ರೀಯಾದ ಹುಡುಗಿ ಒಬ್ಬ ಮನುಷ್ಯನಿಗೆ ನಿಶ್ಚಯಮಾಡಿರಲಾಗಿ ಮತ್ತೊಬ್ಬ ಮನುಷ್ಯನು ಪಟ್ಟಣ ದಲ್ಲಿ ಅವಳನ್ನು ಕಂಡು ಅವಳ ಸಂಗಡ ಮಲಗಿದರೆ ಅವರಿಬ್ಬರನ್ನು ಆ ಪಟ್ಟಣದ ಬಾಗಲಿನ ಹೊರಗೆ ತಂದು ಅವರು ಸಾಯುವ ಹಾಗೆ ಕಲ್ಲೆಸೆಯಬೇಕು; ಆ ಹುಡುಗಿಯು ಪಟ್ಟಣದಲ್ಲಿ ಇದ್ದಾಗ್ಯೂ ಕೂಗದೆ ಇದ್ದದ್ದರಿಂದಲೂ ಆ ಮನುಷ್ಯನು, ತನ್ನ ನೆರೆಯವನ ಹೆಂಡತಿಯನ್ನು ಕೆಡಿಸಿದ್ದರಿಂದಲೂ ಅವರನ್ನು ಸಾಯಿಸ ಬೇಕು. ಹೀಗೆ ಕೆಟ್ಟದ್ದನ್ನು ನಿನ್ನ ಮಧ್ಯದಲ್ಲಿಂದ ತೆಗೆದು ಹಾಕಬೇಕು.
- Leviticus 20:10 ಯಾಜಕಕಾಂಡ 20:10ಒಬ್ಬನು ಮತ್ತೊಬ್ಬನ ಹೆಂಡತಿಯೊಡನೆ ವ್ಯಭಿ ಚಾರಮಾಡಿದರೆ, ಅಂದರೆ ತನ್ನ ನೆರೆಯವನ ಹೆಂಡ ತಿಯೊಡನೆ ವ್ಯಭಿಚಾರಮಾಡಿದರೆ ವ್ಯಭಿಚಾರ ಮಾಡುವವನಿಗೂ ವ್ಯಭಿಚಾರಮಾಡುವವಳಿಗೂ ನಿಶ್ಚಯವಾಗಿ ಮರಣದಂಡನೆ ವಿಧಿಸಬೇಕು.
- Numbers 5:13–31 ಅರಣ್ಯಕಾಂಡ 5:13–31ಇಲ್ಲವೆ ಒಬ್ಬನು ಅವಳ ಸಂಗಡ ಮಲಗಿ ಸಂಗಮ ಮಾಡಿದ್ದು ಅವಳ ಗಂಡನ ಕಣ್ಣುಗಳಿಗೆ ಮರೆಯಾಗಿದ್ದರೆ, ಅವಳು ಅಶುದ್ಧಳೆಂಬದು ಗುಪ್ತವಾಗಿ ದ್ದರೆ, ಅವಳಿಗೆ ವಿರೋಧವಾಗಿ ಸಾಕ್ಷಿ ಇಲ್ಲದೆ ಅವಳು ಹಿಡಿಯಲ್ಪಡದಿದ್ದರೆ, ಗಂಡನ ಮೇಲೆ ರೋಷದ ಆತ್ಮ ಬಂದು ಅವನು ಅಶುದ್ಧಳಾದ ತನ್ನ ಹೆಂಡತಿಯ ಮೇಲೆ ರೋಷಗೊಂಡರೆ ಇಲ್ಲವೆ ರೋಷದ ಆತ್ಮವು ಅವನ ಮೇಲೆ ಬಂದು ಅಶುದ್ಧಳಾಗದೆ ಇರುವ ತನ್ನ ಹೆಂಡತಿಯ ಮೇಲೆ ರೋಷಗೊಂಡರೆ, ಆ ಮನು ಷ್ಯನು ತನ್ನ ಹೆಂಡತಿಯನ್ನು ಯಾಜಕನ ಬಳಿಗೆ ತಂದು ಅವಳಿಗೋಸ್ಕರ ಕಾಣಿಕೆಯಾಗಿ ಏಫದ ಹತ್ತನೇ ಪಾಲನ್ನು ಜವೆಗೋಧಿಯ ಹಿಟ್ಟನ್ನು ತರಬೇಕು. ಅದರ ಮೇಲೆ ಎಣ್ಣೆಯನ್ನಾದರೂ ಸಾಂಬ್ರಾಣಿಯನ್ನಾದರೂ ಹಾಕ ಬಾರದು; ಅದು ರೋಷದ ಕಾಣಿಕೆಯೂ ಅಪರಾಧ ವನ್ನು ಜ್ಞಾಪಕಕ್ಕೆ ತರುವ ಕಾಣಿಕೆಯೂ ಆಗಿದೆ. ಯಾಜಕನು ಅವಳನ್ನು ಸವಿಾಪಕ್ಕೆ ಕರೆದು ಕರ್ತನ ಸಮ್ಮುಖದಲ್ಲಿ ನಿಲ್ಲಿಸಬೇಕು. ಆಗ ಯಾಜಕನು ಪವಿತ್ರ ವಾದ ನೀರನ್ನು ಮಣ್ಣಿನ ಗಡಿಗೆಗಳಲ್ಲಿ ತೆಗೆದು ಕೊಳ್ಳಬೇಕು; ಗುಡಾರದ ನೆಲದಲ್ಲಿರುವ ಧೂಳನ್ನು ಯಾಜಕನು ತಕ್ಕೊಂಡು ಆ ನೀರಿನೊಳಗೆ ಹಾಕಬೇಕು. ಯಾಜಕನು ಆ ಸ್ತ್ರೀಯನ್ನು ಕರ್ತನ ಸಮ್ಮುಖದಲ್ಲಿ ನಿಲ್ಲಿಸಿ ಆಕೆಯ ತಲೆಯ ಮೇಲಿರುವ ಮುಸುಕನ್ನು ತೆಗೆದು ಅವಳ ಕೈಗಳಲ್ಲಿ ರೋಷದ ಕಾಣಿಕೆಯಾಗಿರುವ ಜ್ಞಾಪಕದ ಕಾಣಿಕೆಯನ್ನು ಇಡಬೇಕು. ಆದರೆ ಯಾಜಕನ ಕೈಯಲ್ಲಿ ಶಪಿಸುವಂತ ಕಹಿಯಾದ ನೀರು ಇರಬೇಕು. ಆಗ ಯಾಜಕನು ಅವಳನ್ನು ಪ್ರಮಾಣಮಾಡಿಸಿ ಹೇಳಬೇಕಾದದ್ದು: ಒಬ್ಬ ಮನುಷ್ಯನು ನಿನ್ನ ಸಂಗಡ ಮಲಗದೆ ನೀನು ಅಪವಿತ್ರಳಾಗಿ ನಿನ್ನ ಗಂಡನನ್ನು ಬಿಟ್ಟು ಜಾರತ್ವಮಾಡದೆ ಇದ್ದರೆ ಶಪಿಸುವ ಈ ಕಹಿಯಾದ ನೀರಿಗೆ ನಿರಪರಾಧಿಯಾಗು. ಆದರೆ ನೀನು ನಿನ್ನ ಗಂಡನನ್ನು ಬಿಟ್ಟು ಜಾರತ್ವಮಾಡಿ ಅಶುದ್ಧಳಾಗಿದ್ದರೆ ನಿನ್ನ ಗಂಡನನ್ನು ಬಿಟ್ಟು ಮತ್ತೊಬ್ಬನು ನಿನ್ನ ಸಂಗಡ ಮಲಗಿದ್ದರೆ ಯಾಜಕನು ಶಾಪದ ಪ್ರಮಾಣ ದಿಂದ ಆ ಸ್ತ್ರೀಗೆ ಹೇಳಬೇಕಾದದ್ದೇನಂದರೆ--ಕರ್ತನು ನಿನ್ನ ತೊಡೆಯನ್ನು ಕ್ಷೀಣವಾಗುವಂತೆಯೂ ನಿನ್ನ ಹೊಟ್ಟೆಯನ್ನು ಉಬ್ಬುವಂತೆಯೂ ಮಾಡುವದರಿಂದ ಕರ್ತನು ನಿನ್ನನ್ನು ನಿನ್ನ ಜನರೊಳಗೆ ಶಾಪವನ್ನಾಗಿಯೂ ದೂಷಣೆಯನ್ನಾಗಿಯೂ ಇಡಲಿ. ಶಪಿಸುವಂಥ ಈ ನೀರು ಹೊಟ್ಟೆಯನ್ನು ಉಬ್ಬಿಸುವದಕ್ಕೂ ತೊಡೆಯನ್ನು ಕ್ಷೀಣಿಸುವದಕ್ಕೂ ನಿನ್ನ ಕರುಳುಗಳ ಒಳಗೆ ಹೋಗು ವದು; ಈ ಪ್ರಕಾರ ಯಾಜಕನು ಆ ಸ್ತ್ರೀಯನ್ನು ಶಾಪದ ಪ್ರಮಾಣದಿಂದ ಪ್ರಮಾಣ ಮಾಡಿಸಬೇಕು. ಅದಕ್ಕೆ ಆ ಸ್ತ್ರೀಯು--ಹಾಗೆಯೇ ಆಗಲಿ ಅನ್ನಬೇಕು. ಯಾಜ ಕನು ಈ ಶಾಪವನ್ನು ಪುಸ್ತಕದಲ್ಲಿ ಬರೆದು, ಕಹಿಯಾದ ನೀರಿನಿಂದ ಅಳಿಸಿ, ಆ ಸ್ತ್ರೀಗೆ ಶಪಿಸುವಂತ ಕಹಿಯಾದ ನೀರನ್ನು ಕುಡಿಸಬೇಕು. ಆಗ ಶಪಿಸುವ ನೀರು ಅವಳಲ್ಲಿ ಸೇರಿ ಕಹಿಯಾಗುವದು. ಯಾಜಕನು ಆ ಸ್ತ್ರೀಯ ಕೈಯಿಂದ ರೋಷದ ಕಾಣಿಕೆಯನ್ನು ತಕ್ಕೊಂಡು ಆ ಕಾಣಿಕೆಯನ್ನು ಕರ್ತನ ಸಮ್ಮುಖದಲ್ಲಿ ಅಲ್ಲಾಡಿಸಿ ಬಲಿ ಪೀಠದ ಸವಿಾಪಕ್ಕೆ ತರಬೇಕು. ಆಗ ಯಾಜಕನು ಕಾಣಿಕೆಯಿಂದ ಜ್ಞಾಪಕಭಾಗವಾಗಿ ಒಂದು ಹಿಡಿ ತಕ್ಕೊಂಡು ಯಜ್ಞವೇದಿಯ ಮೇಲೆ ಸುಟ್ಟು ಸ್ತ್ರೀಗೆ ಆ ನೀರನ್ನು ಕುಡಿಸಬೇಕು. ಆಕೆಗೆ ಆ ನೀರನ್ನು ಕುಡಿಸಿದ ಮೇಲೆ ಆಕೆಯು ಅಶುದ್ಧಳಾಗಿ ತನ್ನ ಗಂಡನಿಗೆ ಅಪರಾಧ ಮಾಡಿದ್ದಾಗಿದ್ದರೆ ಶಪಿಸುವ ನೀರು ಆಕೆ ಯೊಳಗೆ ಸೇರಿ ಕಹಿಯಾಗುವದು; ಅವಳ ಹೊಟ್ಟೆ ಉಬ್ಬಿ ತೊಡೆ ಕ್ಷೀಣವಾಗುವದು. ಆಗ ಆ ಸ್ತ್ರೀ ತನ್ನ ಜನರ ಮಧ್ಯದಲ್ಲಿ ಶಾಪವಾಗಿರುವಳು. ಆದರೆ ಆ ಸ್ತ್ರೀ ಅಶುದ್ಧಳಲ್ಲದೆ ಶುದ್ಧಳಾಗಿದ್ದರೆ ಅವಳು ನಿರಪರಾಧಿ ಯಾಗಿದ್ದು ಸಂತಾನವನ್ನು ಪಡೆಯುವಳು. ರೋಷಕ್ಕೆ ನಿಯಮವು ಇದೇ. ಒಬ್ಬ ಹೆಂಡತಿ ತನ್ನ ಗಂಡನನ್ನು ಬಿಟ್ಟು ಜಾರತ್ವಮಾಡಿ ಅಶುದ್ಧಳಾಗಿದ್ದರೆ ಅಥವಾ ಪುರುಷನ ಮೇಲೆ ರೋಷದ ಆತ್ಮ ಬಂದು ಅವನು ತನ್ನ ಹೆಂಡತಿಯ ಮೇಲೆ ರೋಷಗೊಂಡಿದ್ದರೆ ಅವನು ತನ್ನ ಹೆಂಡತಿಯನ್ನು ಕರ್ತನ ಸಮ್ಮುಖದಲ್ಲಿ ನಿಲ್ಲಿಸಲಿ; ಯಾಜಕನು ಅವಳಿಗೆ ಈ ಸಮಸ್ತ ಆಜ್ಞೆ ಪ್ರಕಾರ ಮಾಡುವನು.ಆಗ ಗಂಡನು ನಿರಪರಾಧಿ ಯಾಗಿರುವನು. ಆದರೆ ಹೆಂಡತಿಯು ತನ್ನ ಅಕ್ರಮವನ್ನು ಹೊತ್ತುಕೊಳ್ಳುವಳು ಎಂಬದೇ. ಆಗ ಗಂಡನು ನಿರಪರಾಧಿ ಯಾಗಿರುವನು. ಆದರೆ ಹೆಂಡತಿಯು ತನ್ನ ಅಕ್ರಮವನ್ನು ಹೊತ್ತುಕೊಳ್ಳುವಳು ಎಂಬದೇ.
- Ruth 2:13 ರೂತಳು 2:13ಅದಕ್ಕೆ ಅವಳು ನನ್ನ ಒಡೆಯನೇ, ನನಗೆ ನಿನ್ನ ದೃಷ್ಟಿಯಲ್ಲಿ ದಯೆದೊರಕಲಿ. ಯಾಕಂದರೆ ನನ್ನನ್ನು ನೀನು ಆದರಿಸಿದಿ; ನಾನು ನಿನ್ನ ದಾಸಿಗಳಲ್ಲಿ ಒಬ್ಬಳಲ್ಲ ದಿದ್ದರೂ ನನ್ನ ಕೂಡ ಸ್ನೇಹದಿಂದ ಮಾತನಾಡಿದಿಅಂದಳು.
Original words (Greek)
- So · G686ἄρα ára
- then · G3767οὖν oûn
- if · G1437ἐάν eán
- while · G2198ζάω záō
- husband · G435ἀνήρ anḗr
- liveth · G2198ζάω záō
- married · G1096γίνομαι gínomai
- to · G435ἀνήρ anḗr
- another · G2087ἕτερος héteros
- man · G435ἀνήρ anḗr
- called · G5537χρηματίζω chrēmatízō
- adulteress · G3428μοιχαλίς moichalís
- but · G1161δέ dé
- if · G1437ἐάν eán
- husband · G435ἀνήρ anḗr
- dead · G599ἀποθνήσκω apothnḗskō
- is · G2076ἐστί estí
- free · G1658ἐλεύθερος eleútheros
- from · G575ἀπό apó
- law · G3551νόμος nómos
- that · G3588ὁ ho
- she · G846αὐτός autós
- is · G1511εἶναι eînai
- no · G3361μή mḗ
- adulteress · G3428μοιχαλίς moichalís
- married · G1096γίνομαι gínomai
- to · G435ἀνήρ anḗr
- another · G2087ἕτερος héteros
- man · G435ἀνήρ anḗr