Exodus · chapter 20 · verse 14
Exodus 20:14 in Kannada
ವ್ಯಭಿಚಾರ ಮಾಡಬಾರದು.
Vyabhichaara maadabaaradu.
Exodus 20:14 in English
- King James Version (KJV)
- Thou shalt not commit adultery.
- World English Bible (WEB)
- “You shall not commit adultery.
- American Standard Version (ASV)
- Thou shalt not commit adultery.
- Bible in Basic English (BBE)
- Do not be false to the married relation.
- Darby Translation (DBY)
- Thou shalt not commit adultery.
- Webster's Bible (WBS)
- Thou shalt not commit adultery.
- Young's Literal Translation (YLT)
- 'Thou dost not commit adultery.
Read in context
- 12ನಿನ್ನ ಕರ್ತನಾದ ದೇವರು ನಿನಗೆ ಕೊಡುವ ದೇಶದಲ್ಲಿ ನಿನ್ನ ದಿವಸಗಳು ಹೆಚ್ಚಾಗುವಂತೆ ನಿನ್ನ ತಂದೆ ತಾಯಿಗಳನ್ನು ಸನ್ಮಾನಿಸು.
- 13ಕೊಲೆ ಮಾಡಬಾರದು.
- 14ವ್ಯಭಿಚಾರ ಮಾಡಬಾರದು.
- 15ಕದಿಯಬಾರದು.
- 16ನಿನ್ನ ನೆರೆಯವನಿಗೆ ವಿರೋಧವಾಗಿ ಸುಳ್ಳು ಸಾಕ್ಷಿ ಹೇಳಬಾರದು.
Cross references
- Hebrews 13:4 ಇಬ್ರಿಯರಿಗೆ 13:4ವಿವಾಹವು ಎಲ್ಲಾದರಲ್ಲಿ ಗೌರವವಾದದ್ದೂ ಹಾಸಿಗೆಯು ನಿಷ್ಕಳಂಕವಾದದ್ದೂ ಆಗಿದೆ. ಆದರೆ ಜಾರರಿಗೂ ವ್ಯಭಿಚಾರಿಗಳಿಗೂ ದೇವರು ನ್ಯಾಯತೀರಿಸುವನು.
- Deuteronomy 5:18 ಧರ್ಮೋಪದೇಶಕಾಂಡ 5:18ವ್ಯಭಿಚಾರ ಮಾಡಬೇಡ.
- Romans 7:2–3 ರೋಮಾಪುರದವರಿಗೆ 7:2–3ಗಂಡನಿರುವ ಸ್ತ್ರೀಯು ಅವನು ಬದುಕಿರುವ ತನಕ ನ್ಯಾಯಪ್ರಮಾಣದಿಂದ ಅವನಿಗೆ ಕಟ್ಟಲ್ಪಟ್ಟಿದ್ದಾಳೆ; ಗಂಡನು ಸತ್ತರೆ ಆಕೆಯು ಅವನ ನ್ಯಾಯಪ್ರಮಾಣದಿಂದ ಬಿಡುಗಡೆಯಾಗಿ ದ್ದಾಳೆ. ಹೀಗಿರಲಾಗಿ ಗಂಡನು ಜೀವದಿಂದಿರುವಾಗ ಆಕೆ ಬೇರೊಬ್ಬನನ್ನು ಮದುವೆ ಮಾಡಿಕೊಂಡರೆ ವ್ಯಭಿ ಚಾರಿಣಿ ಎಂದು ಕರೆಯಲ್ಪಡುವಳು; ಗಂಡನು ಸತ್ತರೆ ಆ ನ್ಯಾಯಪ್ರಮಾಣದಿಂದ ಆಕೆಯು ಬಿಡುಗಡೆಯಾಗಿ ದ್ದಾಳೆ. ಹೀಗೆ ಆಕೆ ಮತ್ತೊಬ್ಬನನ್ನು ಮದುವೆ ಮಾಡಿ ಕೊಂಡರೂ ವ್ಯಭಿಚಾರಿಣಿಯಲ್ಲ.
- Romans 13:9 ರೋಮಾಪುರದವರಿಗೆ 13:9ಹೇಗಂದರೆ ವ್ಯಭಿಚಾರ ಮಾಡಬಾರದು, ನರಹತ್ಯ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳ ಬಾರದು, ಆಶಿಸಬಾರದು ಈ ಮೊದಲಾದ ಎಲ್ಲಾ ಕಟ್ಟಳೆಗಳು--ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬ ಒಂದೇ ಮಾತಿನಲ್ಲಿ ಅಡಕವಾಗಿವೆ.
- Leviticus 20:10 ಯಾಜಕಕಾಂಡ 20:10ಒಬ್ಬನು ಮತ್ತೊಬ್ಬನ ಹೆಂಡತಿಯೊಡನೆ ವ್ಯಭಿ ಚಾರಮಾಡಿದರೆ, ಅಂದರೆ ತನ್ನ ನೆರೆಯವನ ಹೆಂಡ ತಿಯೊಡನೆ ವ್ಯಭಿಚಾರಮಾಡಿದರೆ ವ್ಯಭಿಚಾರ ಮಾಡುವವನಿಗೂ ವ್ಯಭಿಚಾರಮಾಡುವವಳಿಗೂ ನಿಶ್ಚಯವಾಗಿ ಮರಣದಂಡನೆ ವಿಧಿಸಬೇಕು.
- Revelation 21:8 ಪ್ರಕಟನೆ 21:8ಆದರೆ ಭಯ ಗ್ರಸ್ಥರು, ನಂಬಿಕೆಯಿಲ್ಲದವರು, ಅಸಹ್ಯವಾದವರು, ಕೊಲೆಗಾರರು, ಜಾರರು, ಮಾಟಗಾರರು, ವಿಗ್ರಹಾ ರಾಧಕರು ಎಲ್ಲಾ ಸುಳ್ಳುಗಾರರು ಇವರಿಗೆ ಸಿಕ್ಕುವ ಪಾಲು ಬೆಂಕಿ ಗಂಧಕಗಳು ಉರಿಯುವ ಕೆರೆಯೇ; ಅದು ಎರಡನೆಯ ಮರಣವು ಎಂದು ನನಗೆ ಹೇಳಿದನು.
- Matthew 5:27–28 ಮತ್ತಾಯನು 5:27–28ವ್ಯಭಿಚಾರ ಮಾಡಬಾರದು ಎಂದು ಪೂರ್ವಿಕರು ಹೇಳಿರುವದನ್ನು ನೀವು ಕೇಳಿದ್ದೀರಿ; ಆದರೆ ನಾನು ನಿಮಗೆ ಹೇಳುವದೇನಂದರೆ--ಒಬ್ಬ ಸ್ತ್ರೀಯನ್ನು ಮೋಹಿಸುವದಕ್ಕೆ ನೋಡುವ ಪ್ರತಿಯೊಬ್ಬನು ಆಗಲೇ ತನ್ನ ಹೃದಯದಲ್ಲಿ ಆಕೆಯ ಕೂಡ ವ್ಯಭಿಚಾರ ಮಾಡಿದ್ದಾನೆ.
- Leviticus 18:20 ಯಾಜಕಕಾಂಡ 18:20ಇದಲ್ಲದೆ ಅವಳಿಂದ ನಿನ್ನನ್ನು ಹೊಲೆಮಾಡಿ ಕೊಳ್ಳದಂತೆ ನಿನ್ನ ನೆರೆಯವನ ಹೆಂಡತಿಯೊಂದಿಗೆ ನೀನು ಸಂಗಮಿಸಬೇಡ.
- Mark 10:11–12 ಮಾರ್ಕನು 10:11–12ಅದಕ್ಕೆ ಆತನು ಅವರಿಗೆ-- ಯಾವನಾದರೂ ತನ್ನ ಹೆಂಡತಿ ಯನ್ನು ಬಿಟ್ಟು ಬಿಟ್ಟು ಇನ್ನೊಬ್ಬಳನ್ನು ಮದುವೆಯಾದರೆ ಅವಳಿಗೆ ವಿರೋಧವಾಗಿ ವ್ಯಭಿಚಾರ ಮಾಡುವವನಾಗಿ ದ್ದಾನೆ. ಇದಲ್ಲದೆ ಒಬ್ಬ ಸ್ತ್ರೀಯು ತನ್ನ ಗಂಡನನ್ನು ಬಿಟ್ಟು ಬೇರೊಬ್ಬನನ್ನು ಮದುವೆಯಾದರೆ ಅವಳು ವ್ಯಭಿಚಾರ ಮಾಡುವವಳಾಗಿದ್ದಾಳೆ ಅಂದನು.
- Jeremiah 5:8–9 ಯೆರೆಮೀಯ 5:8–9ಬೆಳಗಿ ನಲ್ಲಿ ಕೊಬ್ಬಿದ ಕುದುರೆಗಳ ಹಾಗಿದ್ದಾರೆ; ತಮ್ಮ ತಮ್ಮ ನೆರೆಯವರ ಹೆಂಡತಿಯರಿಗೋಸ್ಕರ ಹೂಂಕರಿ ಸುತ್ತಾರೆ. ಇವುಗಳ ನಿಮಿತ್ತ ನಾನು ವಿಚಾರಿಸುವ ದಿಲ್ಲವೋ? ಇಂಥಾ ಜನಾಂಗಕ್ಕೆ ನನ್ನ ಪ್ರಾಣವು ಮುಯ್ಯಿಗೆ ಮುಯ್ಯಿ ತೀರಿಸುವದಿಲ್ಲವೋ? ಎಂದು ಕರ್ತನು ಅನ್ನುತ್ತಾನೆ.
- Ephesians 5:3–5 ಎಫೆಸದವರಿಗೆ 5:3–5ಆದರೆ ನಿಮ್ಮೊಳಗೆ ಜಾರತ್ವವಾಗಲಿ ಯಾವ ಅಶುದ್ಧತ್ವವಾಗಲಿ ಇಲ್ಲವೆ ಲೋಭವಾಗಲಿ ಪರಿಶುದ್ಧರಿಗೆ ತಕ್ಕ ಹಾಗೆ ಇವುಗಳ ಹೆಸರನ್ನು ಒಂದು ಸಲವಾದರೂ ಎತ್ತಬಾರದು. ಇಲ್ಲವೆ ಹೊಲಸುತನ ಹುಚ್ಚು ಮಾತು ಕುಚೋದ್ಯ ಇವು ಬೇಡ, ಅಯುಕ್ತವಾಗಿವೆ; ಇವು ಗಳನ್ನು ಬಿಟ್ಟು ಆತನಿಗೆ ಉಪಕಾರ ಸ್ತುತಿಮಾಡುವದೇ ಉತ್ತಮ. ಯಾವ ಜಾರನಾಗಲಿ, ಅಶುದ್ಧನಾಗಲಿ, ವಿಗ್ರಹಾರಾಧಕನಂತಿರುವ ಲೋಭಿಯಾಗಲಿ ಕ್ರಿಸ್ತನ ಮತ್ತು ದೇವರ ರಾಜ್ಯದಲ್ಲಿ ಬಾಧ್ಯನಾಗುವದಿಲ್ಲವೆಂದು ನೀವು ಬಲ್ಲಿರಲ್ಲವೇ.
- 2 Samuel 11:27 2 ಸಮುವೇಲನು 11:27ದುಃಖದ ದಿವ ಸಗಳು ತೀರಿದ ತರುವಾಯ ದಾವೀದನು ಅವಳನ್ನು ತನ್ನ ಮನೆಗೆ ಕರೇಕಳುಹಿಸಿದನು; ಅವಳು ಅವನಿಗೆ ಹೆಂಡತಿಯಾಗಿ ಒಬ್ಬ ಮಗನನ್ನು ಹೆತ್ತಳು; ಆದರೆ ದಾವೀದನು ಮಾಡಿದ ಈ ಕಾರ್ಯವು ಕರ್ತನ ದೃಷ್ಟಿಗೆ ಕೆಟ್ಟದ್ದಾಗಿತ್ತು.