Romans · chapter 9 · verse 19
Romans 9:19 in Kannada
ಆಗ ನೀನು ನನಗೆ--ಹಾಗಾದರೆ ಆತನು ಇನ್ನು ತಪ್ಪು ಕಂಡುಹಿಡಿಯುವದು ಹೇಗೆ? ಆತನ ಚಿತ್ತವನ್ನು ಎದುರಿಸುವದು ಯಾರಿಂದಾದೀತು ಎಂದು ಕೇಳುವಿ.
Aaga neenu nanage--haagaadare aatanu innu tappu kanduhidiyuvadu hege? Aatana chittavannu edurisuvadu yaarindaadeetu endu keluvi.
Romans 9:19 in English
- King James Version (KJV)
- Thou wilt say then unto me, Why doth he yet find fault? For who hath resisted his will?
- World English Bible (WEB)
- You will say then to me, “Why does he still find fault? For who withstands his will?”
- American Standard Version (ASV)
- Thou wilt say then unto me, Why doth he still find fault? For who withstandeth his will?
- Bible in Basic English (BBE)
- But you will say to me, Why does he still make us responsible? who is able to go against his purpose?
- Darby Translation (DBY)
- Thou wilt say to me then, Why does he yet find fault? for who resists his purpose?
- Webster's Bible (WBS)
- Thou wilt say then to me, Why doth he yet find fault? for who hath resisted his will?
- Young's Literal Translation (YLT)
- Thou wilt say, then, to me, 'Why yet doth He find fault? for His counsel who hath resisted?'
Read in context
- 17ಬರಹವು ಫರೋ ಹನಿಗೆ--ನನ್ನ ಬಲವನ್ನು ನಿನ್ನಲ್ಲಿ ತೋರಿಸುವ ಹಾಗೆಯೂ ನನ್ನ ನಾಮವು ಭೂಮಿಯ ಎಲ್ಲಾ ಕಡೆಯಲ್ಲಿ ಪ್ರಸಿದ್ಧಿ ಹೊಂದಬೇಕೆಂಬ ಉದ್ದೇಶದಿಂದಲೂ ನಾನು ನಿನ್ನನ್ನು ಉನ್ನತ ಸ್ಥಿತಿಗೆ ತಂದಿದ್ದೇನೆ ಎಂದು ಹೇಳುತ್ತದೆ.
- 18ಆದದರಿಂದ ಆತನು ಯಾವನನ್ನು ಕರುಣಿಸಬೇಕೆಂದಿ ರುವನೋ ಅವನನ್ನು ಕರುಣಿಸುವನು; ಯಾವನನ್ನು ಕಠಿಣಪಡಿಸಬೇಕೆಂದಿರುವನೋ ಅವನನ್ನು ಕಠಿಣ ಪಡಿಸುವನು.
- 19ಆಗ ನೀನು ನನಗೆ--ಹಾಗಾದರೆ ಆತನು ಇನ್ನು ತಪ್ಪು ಕಂಡುಹಿಡಿಯುವದು ಹೇಗೆ? ಆತನ ಚಿತ್ತವನ್ನು ಎದುರಿಸುವದು ಯಾರಿಂದಾದೀತು ಎಂದು ಕೇಳುವಿ.
- 20ಆದರೆ ಓ ಮನುಷ್ಯನೇ, ದೇವರಿಗೆ ಎದುರು ಮಾತನಾಡುವದಕ್ಕೆ ನೀನು ಯಾರು? ರೂಪಿಸಲ್ಪಟ್ಟದ್ದು ರೂಪಿಸಿದವನಿಗೆ--ನನ್ನನ್ನು ಹೀಗೇಕೆ ಮಾಡಿದೆ ಎಂದು ಕೇಳುವದುಂಟೇ?
- 21ಒಂದು ಪಾತ್ರೆಯನ್ನು ಗೌರ ವಕ್ಕೂ ಇನ್ನೊಂದನ್ನು ಅಗೌರವಕ್ಕೂ ಒಂದೇ ಮುದ್ದೆ ಯಿಂದ ಮಾಡುವದಕ್ಕೆ ಕುಂಬಾರನಿಗೆ ಮಣ್ಣಿನ ಮೇಲೆ ಅಧಿಕಾರವಿಲ್ಲವೋ?
Cross references
- Daniel 4:35 ದಾನಿಯೇಲನು 4:35ಭೂ ನಿವಾಸಿಗಳೆಲ್ಲರೂ ಏನೂ ಇಲ್ಲದ ಹಾಗೆ ಎಣಿಸಲ್ಪಟ್ಟಿ ದ್ದಾರೆ; ಆತನು ಪರಲೋಕದ ಸೈನ್ಯದಲ್ಲಿಯೂ ಭೂ ನಿವಾಸಿಗಳಲ್ಲಿಯೂ ತನ್ನ ಚಿತ್ತದ ಪ್ರಕಾರವೇ ಮಾಡು ತ್ತಾನೆ. ಯಾರೂ ಆತನ ಹಸ್ತವನ್ನು ಹಿಂತೆಗೆಯಲಾರರು; ನೀನು ಏನು ಮಾಡುತ್ತಿರುವಿ ಎಂದು ಆತನಿಗೆ ಯಾರೂ ಕೇಳಲಾರರು.
- 2 Chronicles 20:6 2 ಪೂರ್ವಕಾಲವೃತ್ತಾಂತ 20:6ಓ ಕರ್ತನೇ, ಪರಲೋಕದಲ್ಲಿರುವ ದೇವರು ನೀನಲ್ಲವೋ? ನೀನು ಜನಾಂಗಗಳ ಸಕಲ ರಾಜ್ಯಗಳ ಮೇಲೆ ಆಳುತ್ತೀಯಲ್ಲವೋ? ಯಾವನೂ ನಿನ್ನನ್ನು ಎದುರಿಸಕೂಡದ ಹಾಗೆ ನಿನ್ನ ಕೈಯಲ್ಲಿ ಶಕ್ತಿಯೂ ಪರಾಕ್ರಮವೂ ಇಲ್ಲವೋ?
- 1 Corinthians 15:35 1 ಕೊರಿಂಥದವರಿಗೆ 15:35ಆದರೆ ಒಬ್ಬನು--ಸತ್ತವರು ಹೇಗೆ ಎಬ್ಬಿಸ ಲ್ಪಡುತ್ತಾರೆ? ಎಂಥ ದೇಹದಿಂದ ಅವರು ಬರುತ್ತಾರೆ ಎಂದು ಕೇಳಾನು.
- 1 Corinthians 15:12 1 ಕೊರಿಂಥದವರಿಗೆ 15:12ಕ್ರಿಸ್ತನು ಸತ್ತವರೊಳಗಿಂದ ಎದ್ದನೆಂದು ಸಾರೋಣ ವಾಗುತ್ತಿರುವಲ್ಲಿ ಸತ್ತವರಿಗೆ ಪುನರುತ್ಥಾನವೇ ಇಲ್ಲ ವೆಂದು ನಿಮ್ಮೊಳಗೆ ಕೆಲವರು ಹೇಳುವದು ಹೇಗೆ?
- Genesis 50:20 ಆದಿಕಾಂಡ 50:20ನೀವು ನನಗೆ ವಿರೋಧವಾಗಿ ಕೇಡನ್ನು ಆಲೋಚಿ ಸಿದಿರಿ; ಆದರೆ ದೇವರು ಈಗ ಮಾಡಿದ ಹಾಗೆ ಬಹುಜನರನ್ನು ಬದುಕಿಸುವದಕ್ಕೋಸ್ಕರ ಮೇಲಿಗಾಗಿ ಆಲೋಚನೆ ಮಾಡಿದನು.
- Isaiah 10:6–7 ಯೆಶಾಯ 10:6–7ನಾನು ಅವನನ್ನು ಭ್ರಷ್ಠಜನರಿಗೆ ವಿರುದ್ಧವಾಗಿ ಕಳುಹಿಸಿ ನನ್ನ ಕೋಪಕ್ಕೆ ಗುರಿಯಾದ (ನನ್ನ) ಪ್ರಜೆಯನ್ನು ಸೂರೆ ಮಾಡಿ ಕೊಳ್ಳೆಹೊಡೆದು ಬೀದಿಯ ಕೆಸರನ್ನೋ ಎಂಬಂತೆ ತುಳಿದು ಹಾಕಬೇಕೆಂದು ಅಪ್ಪಣೆ ಕೊಡು ವೆನು. ಅದರ ಅಭಿಪ್ರಾಯವೋ ಹಾಗಲ್ಲ; ಇಲ್ಲವೇ ಅದರ ಹೃದಯವು ಈ ಪ್ರಕಾರ ಆಲೋಚಿಸುವದಿಲ್ಲ; ಜನಾಂಗಗಳನ್ನು ಕಡಿದು ಬಿಡುವದು ಕೊಂಚವಾಗಿ ಅಲ್ಲ. ಆದರೆ ನಾಶಮಾಡುವದು ಅವನ ಹೃದಯದಲ್ಲಿ ಇದೆ.
- Psalm 76:10 ಕೀರ್ತನೆಗಳು 76:10ನಿಶ್ಚಯವಾಗಿ ಮನುಷ್ಯನ ಕೋಪವು ನಿನ್ನನ್ನು ಕೊಂಡಾಡುವದು; ಕೋಪಶೇಷವನ್ನು ನೀನು ಬಿಗಿ ಹಿಡಿದು ಕೊಳ್ಳುವಿ.
- Mark 14:21 ಮಾರ್ಕನು 14:21ತನ್ನ ವಿಷಯವಾಗಿ ಬರೆದಿರುವ ಪ್ರಕಾರ ಮನುಷ್ಯ ಕುಮಾರನು ನಿಜವಾಗಿಯೂ ಹೋಗುತ್ತಾನೆ; ಆದರೆ ಯಾವನಿಂದ ಮನುಷ್ಯಕುಮಾರನು ಹಿಡುಕೊಡಲ್ಪಡು ತ್ತಾನೋ ಆ ಮನುಷ್ಯನಿಗೆ ಅಯ್ಯೋ! ಆ ಮನುಷ್ಯನು ಹುಟ್ಟದೆಹೋಗಿದ್ದರೆ ಅವನಿಗೆ ಒಳ್ಳೇದಾಗುತ್ತಿತ್ತು ಎಂದು ಹೇಳಿದನು.
- Job 9:12–15 ಯೋಬನು 9:12–15ಇಗೋ, ಆತನು ತೆಗೆದುಕೊಂಡು ಹೋಗುತ್ತಾನೆ. ಆತನಿಗೆ ಅಡ್ಡಿಮಾಡುವವರು ಯಾರು? ಆತನನ್ನು--ನೀನು ಏನು ಮಾಡುತ್ತೀ ಎಂದು ಕೇಳುವ ವರಾರು? ದೇವರು ತನ್ನ ಕೋಪವನ್ನು ಹಿಂತೆಗೆಯ ದಿದ್ದರೆ ಸೊಕ್ಕಿನ ಸಹಾಯಕರು ಆತನ ಕೆಳಗೆ ಬೊಗ್ಗಿ ಕೊಳ್ಳುತ್ತಾರೆ. ಆತನಿಗೆ ಉತ್ತರ ಕೊಡುವದಕ್ಕೂ ಆತನೊಂದಿಗೆ ತರ್ಕಿಸುವದಕ್ಕೆ ನನ್ನ ಮಾತುಗಳನ್ನು ಆದುಕೊಳ್ಳು ವದಕ್ಕೂ ನಾನು ಎಷ್ಟು ಮಾತ್ರದವನು; ನಾನು ನೀತಿವಂತನಾಗಿದ್ದರೂ ಉತ್ತರಕೊಡೆನು; ಆದರೆ ನನ್ನ ನ್ಯಾಯಾಧಿಪತಿಗೆ ಮೊರೆಯಿಡುವೆನು.
- Job 9:19 ಯೋಬನು 9:19ಶಕ್ತಿಯ ವಿಷಯದಲ್ಲಿ ಮಾತನಾಡಲೋ? ಇಗೋ, ಆತನು ಬಲವುಳ್ಳವನಾಗಿದ್ದಾನೆ. ನ್ಯಾಯದ ವಿಷಯವೋ ವಾದಿ ಸುವದಕ್ಕೆ ನನಗೆ ಕಾಲವನ್ನು ನಿಯಮಿಸುವವನು ಯಾರು?
- Isaiah 46:10–11 ಯೆಶಾಯ 46:10–11ಆರಂಭದಲ್ಲಿಯೇ ಅಂತ್ಯವನ್ನೂ ಪೂರ್ವಕಾಲದಿಂದ ಇನ್ನೂ ನಡೆಯದ ಸಂಗತಿಗಳನ್ನೂ ಪ್ರಕಟಿಸಿದ್ದೇನೆ; ನನ್ನ ಆಲೋಚನೆಯು ನಿಲ್ಲುವ ದೆಂದೂ ನಾನು ಮೆಚ್ಚಿದ್ದನ್ನೆಲ್ಲಾ ಮಾಡುವೆನೆಂದೂ ಅರುಹಿದ್ದೇನೆ. ಮೂಡಲಿಂದ ಒಂದು ಕ್ರೂರವಾದ ಪಕ್ಷಿಯೂ ದೂರದೇಶದಿಂದ ನನ್ನ ಆಜ್ಞೆಯನ್ನು ನಡಿ ಸುವ ಮನುಷ್ಯನೂ ಬರಲಿ ಎಂದು ಕರೆದಿದ್ದೇನೆ; ಹೌದು, ನಾನು ನುಡಿದಿದ್ದೇನೆ, ಅದನ್ನು ನಾನು ಈಡೇರಿಸುವೆನು; ನಾನು ನಿರ್ಣಯಿಸಿದ್ದೇನೆ, ಅದನ್ನು ನಾನು ಮಾಡುವೆನು.
- Job 23:13–14 ಯೋಬನು 23:13–14ಆದರೆ ಆತನು ಒಂದೇ ಮನಸ್ಸುಳ್ಳವನು, ಆತ ನನ್ನು ತಿರುಗಿಸುವವನ್ಯಾರು? ತನ್ನ ಪ್ರಾಣವು ಅಪೇ ಕ್ಷಿಸುವ ಪ್ರಕಾರವೇ ಮಾಡುತ್ತಾನೆ. ನನಗೆ ನೇಮಿಸಿ ದ್ದನ್ನು ಆತನು ಈಡೇರಿಸುತ್ತಾನೆ; ಇವುಗಳಂತೆ ಅನೇಕವು ಆತನಲ್ಲಿ ಅವೆ.