Song of Solomon · chapter 1 · verse 8
Song of Solomon 1:8 in Kannada
ಓ ಸ್ತ್ರೀಯರಲ್ಲಿ ಸೌಂದರ್ಯವಂತಳೇ, ನೀನು ತಿಳಿಯದೆ ಇದ್ದರೆ ನೀನು ಮಂದೆಯ ಜಾಡೆಯನ್ನು ಹಿಡಿದು ಹೊರಟುಹೋಗಿ ಕುರುಬರ ಗುಡಾರಗಳ ಬಳಿಯಲ್ಲಿ ನಿನ್ನ ಮೇಕೆಯ ಮರಿಗಳನ್ನು ಮೇಯಿಸು.
O streeyaralli saundaryavantale, neenu tiliyade iddare neenu mandeya jaadeyannu hididu horatuhogi kurubara gudaaragala baliyalli ninna mekeya marigalannu meyisu.
Song of Solomon 1:8 in English
- King James Version (KJV)
- If thou know not, O thou fairest among women, go thy way forth by the footsteps of the flock, and feed thy kids beside the shepherds’ tents.
- World English Bible (WEB)
- If you don’t know, most beautiful among women, follow the tracks of the sheep. Graze your young goats beside the shepherds’ tents.
- American Standard Version (ASV)
- If thou know not, O thou fairest among women, Go thy way forth by the footsteps of the flock, And feed thy kids beside the shepherds’ tents.
- Bible in Basic English (BBE)
- If you have not knowledge, O most beautiful among women, go on your way in the footsteps of the flock, and give your young goats food by the tents of the keepers.
- Darby Translation (DBY)
- If thou know not, thou fairest among women, Go thy way forth by the footsteps of the flock, And feed thy kids beside the shepherds' booths.
- Webster's Bible (WBS)
- If thou knowest not, O thou fairest among women, go forth by the footsteps of the flock, and feed thy kids beside the shepherds tents.
- Young's Literal Translation (YLT)
- If thou knowest not, O fair among women, Get thee forth by the traces of the flock, And feed thy kids by the shepherds' dwellings!
Read in context
- 6ನನ್ನನ್ನು ನೋಡಬೇಡಿರಿ; ನಾನು ಸೂರ್ಯನ ದೃಷ್ಟಿಗೆ ಬಿದ್ದು ಕಪ್ಪಾಗಿದ್ದೇನೆ; ನನ್ನ ತಾಯಿಯ ಮಕ್ಕಳು ನನ್ನ ಮೇಲೆ ಕೋಪಗೊಂಡು ದ್ರಾಕ್ಷೇ ತೋಟಗಳನ್ನು ಕಾಯಲು ನನ್ನನ್ನು ನೇಮಿಸಿದರು. ನನ್ನ ಸ್ವಂತ ದ್ರಾಕ್ಷೇ ತೋಟವನ್ನು ನಾನು ಕಾಯಲಿಲ್ಲ.
- 7ನನ್ನ ಪ್ರಾಣ ಪ್ರಿಯನೇ, ನೀನು ನಿನ್ನ ಮಂದೆಯನ್ನು ಮೇಯಿಸಿ ಮಧ್ಯಾಹ್ನದಲ್ಲಿ ವಿಶ್ರಮಿಸಿಕೊಳ್ಳುವ ಸ್ಥಳ ಎಲ್ಲಿ ಎಂದು ನನಗೆ ತಿಳಿಸು. ನಾನು ನಿನ್ನ ಜೊತೆಗಾ ರರ ಮಂದೆಗಳ ಬಳಿಯಲ್ಲಿ ಪರಕೀಯಳ ಹಾಗೆ ಇರುವದೇಕೆ?
- 8ಓ ಸ್ತ್ರೀಯರಲ್ಲಿ ಸೌಂದರ್ಯವಂತಳೇ, ನೀನು ತಿಳಿಯದೆ ಇದ್ದರೆ ನೀನು ಮಂದೆಯ ಜಾಡೆಯನ್ನು ಹಿಡಿದು ಹೊರಟುಹೋಗಿ ಕುರುಬರ ಗುಡಾರಗಳ ಬಳಿಯಲ್ಲಿ ನಿನ್ನ ಮೇಕೆಯ ಮರಿಗಳನ್ನು ಮೇಯಿಸು.
- 9ಓ ನನ್ನ ಪ್ರಿಯಳೇ, ಫರೋಹನ ರಥಗಳಲ್ಲಿರುವ ಕುದುರೆಗಳ ಗುಂಪಿಗೆ ನಿನ್ನನ್ನು ಹೋಲಿಸಿದ್ದೇನೆ.
- 10ನಿನ್ನ ಕೆನ್ನೆಗಳು ಆಭರಣಗಳ ಸಾಲಿನಿಂದಲೂ ಕೊರಳು ಕಂಠಮಾಲೆಗಳಿಂದಲೂ ರಮ್ಯವಾಗಿವೆ.
Cross references
- Song of Solomon 6:1 ಪರಮಗೀತೆ 6:1ನಿನ್ನ ಪ್ರಿಯನು ಎಲ್ಲಿಗೆ ಹೋದನು? ಸ್ತ್ರೀಯರಲ್ಲಿ ಅತಿ ಸುಂದರಿಯೇ, ನಾವು ಅವನನ್ನು ನಿನ್ನ ಸಂಗಡ ಹುಡುಕುವ ಹಾಗೆ ನಿನ್ನ ಪ್ರಿಯನು ಯಾವ ಕಡೆಗೆ ತಿರುಗಿದ್ದಾನೆ?
- Song of Solomon 5:9 ಪರಮಗೀತೆ 5:9ಇತರ ಪ್ರಿಯನಿಗಿಂತ ನಿನ್ನ ಪ್ರಿಯನ ಅತಿಶಯ ವೇನು? ಸ್ತ್ರೀಯರಲ್ಲಿ ಅತಿ ಸುಂದರಿಯೇ, ನೀನು ನಮಗೆ ಹೀಗೆ ಆಣೆ ಇಡುವದಕ್ಕೆ ಇತರ ಪ್ರಿಯನಿಗಿಂತ ನಿನ್ನ ಪ್ರಿಯನ ಅತಿಶಯವೇನು?
- James 5:10 ಯಾಕೋಬನು 5:10ನನ್ನ ಸಹೋದರರೇ, ಬಾಧೆಯನ್ನು ತಾಳ್ಮೆಯಿಂದ ಸಹಿಸಿ ಕೊಳ್ಳುವ ವಿಷಯದಲ್ಲಿ ಕರ್ತನ ಹೆಸರಿನಿಂದ ಮಾತ ನಾಡಿದ ಪ್ರವಾದಿಗಳನ್ನೇ ಮಾದರಿ ಮಾಡಿಕೊಳ್ಳಿರಿ.
- James 2:21 ಯಾಕೋಬನು 2:21ನಮ್ಮ ಪಿತೃವಾದ ಅಬ್ರಹಾಮನು ತನ್ನ ಮಗನಾದ ಇಸಾಕನನ್ನು ಯಜ್ಞವೇದಿಯ ಮೇಲೆ ಅರ್ಪಿಸಿದಾಗ ನೀತಿ ನಿರ್ಣಯವನ್ನು ಹೊಂದಿದ್ದು ಕ್ರಿಯೆಗಳಿಂದಲ್ಲವೇ?
- Hebrews 11:4–40 ಇಬ್ರಿಯರಿಗೆ 11:4–40ನಂಬಿಕೆಯಿಂದಲೇ ಹೇಬೆಲನು ಕಾಯಿನನ ಯಜ್ಞ ಕ್ಕಿಂತ ಅತಿ ಶ್ರೇಷ್ಠವಾದ ಯಜ್ಞವನ್ನು ದೇವರಿಗೆ ಸಮ ರ್ಪಿಸಿದನು. ಅದರ ಮೂಲಕ ಅವನು ನೀತಿವಂತ ನೆಂದು ಸಾಕ್ಷಿ ಹೊಂದಿದನು: ದೇವರು ಅವನ ಕಾಣಿಕೆಗಳ ವಿಷಯವಾಗಿ ಸಾಕ್ಷಿಕೊಟ್ಟನು; ಅವನು ಸತ್ತವನಾಗಿದ್ದರೂ ಅದರಿಂದ ಇನ್ನೂ ಮಾತನಾಡುತ್ತಾನೆ. ಹನೋಕನು ಮರಣವನ್ನು ಅನುಭವಿಸದೆ ಒಯ್ಯ ಲ್ಪಟ್ಟದ್ದು ನಂಬಿಕೆಯಿಂದಲೇ; ಅವನನ್ನು ದೇವರು ತೆಗೆದುಕೊಂಡು ಹೋದದರಿಂದ ಅವನು ಯಾರಿಗೂ ಸಿಕ್ಕಲಿಲ್ಲ; ಅವನು ಒಯ್ಯಲ್ಪಡುವದಕ್ಕಿಂತ ಮೊದಲು ದೇವರನ್ನು ಮೆಚ್ಚಿಸುವವನಾಗಿದ್ದನೆಂದು ಸಾಕ್ಷಿ ಉಂಟು. ಆದರೆ ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ; ಯಾಕಂದರೆ ದೇವರ ಬಳಿಗೆ ಬರುವವನು ದೇವರು ಇದ್ದಾನೆ, ತನ್ನನ್ನು ಜಾಗ್ರತೆಯಾಗಿ ಹುಡುಕು ವವನಿಗೆ ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬು ವದು ಅವಶ್ಯ. ನಂಬಿಕೆಯಿಂದಲೇ ನೋಹನು ಇನ್ನೂ ಕಾಣದಿದ್ದವುಗಳ ವಿಷಯವಾಗಿ ದೇವರಿಂದ ಎಚ್ಚರಿಸ ಲ್ಪಟ್ಟು ಭಯಗ್ರಸ್ತನಾಗಿ ತನ್ನ ಮನೆಯವರ ರಕ್ಷಣೆಗಾಗಿ ನಾವೆಯನ್ನು ಸಿದ್ಧ ಮಾಡಿದನು. ಆದರಿಂದ ಅವನು ಲೋಕದವರನ್ನು ಖಂಡಿಸಿ ತರುವಾಯ ನಂಬಿಕೆಯಿಂ ದುಂಟಾಗುವ ನೀತಿಗೆ ಬಾಧ್ಯನಾದನು. ನಂಬಿಕೆಯಿಂದಲೇ ಅಬ್ರಹಾಮನು ಕರೆಯ ಲ್ಪಟ್ಟಾಗ ವಿಧೇಯನಾಗಿ ತಾನು ಬಾಧ್ಯವಾಗಿ ಹೊಂದ ಬೇಕಾಗಿದ್ದ ಸ್ಥಳಕ್ಕೆ ಹೊರಟುಹೋದನು; ತಾನು ಹೋಗಬೇಕಾದ ಸ್ಥಳವು ಯಾವದೆಂದು ತಿಳಿಯದೆ ಹೊರಟನು. ನಂಬಿಕೆಯಿಂದಲೇ ಅವನು ವಾಗ್ದತ್ತ ದೇಶದಲ್ಲಿ ಅನ್ಯದೇಶದಲ್ಲಿ ಇದ್ದವನಂತೆ ಗುಡಾರಗಳಲ್ಲಿ ಇದ್ದುಕೊಂಡು ಪ್ರವಾಸಿಯಾಗಿದ್ದನು. ಅದೇ ವಾಗ್ದಾನಕ್ಕೆ ಬಾಧ್ಯರಾಗಿದ್ದ ಇಸಾಕ ಯಾಕೋಬರೊಂದಿಗೆ ಗುಡಾರಗಳಲ್ಲಿ ವಾಸಿಸಿದನು. ಯಾಕಂದರೆ ದೇವರು ಯಾವದನ್ನು ಕಟ್ಟುವಾತನೂ ಮಾಡುವಾತನೂ ಆಗಿದ್ದಾನೋ ಅಸ್ತಿವಾರಗಳ್ಳುಳ್ಳ ಆ ಪಟ್ಟಣಕ್ಕೋಸ್ಕರ ಅವನು ಎದುರುನೋಡುತ್ತಿದ್ದನು. ಇದಲ್ಲದೆ ಸಾರಳು ಸಹ ವಾಗ್ದಾನ ಮಾಡಿದಾತ ನನ್ನು ನಂಬತಕ್ಕವನೆಂದು ತೀರ್ಮಾನಿಸಿ ತಾನು ಪ್ರಾಯ ವಿಾರಿದವಳಾಗಿದ್ದರೂ ನಂಬಿಕೆಯಿಂದಲೇ ಗರ್ಭವತಿ ಯಾಗುವದಕ್ಕೆ ಶಕ್ತಿಯನ್ನು ಹೊಂದಿ ಒಂದು ಮಗುವನ್ನು ಹೆತ್ತಳು. ಆದದರಿಂದ ಮೃತಪ್ರಾಯನಾಗಿದ್ದ ಒಬ್ಬ ನಿಂದ ಆಕಾಶದ ನಕ್ಷತ್ರಗಳಂತೆ ಗುಂಪುಗುಂಪಾಗಿಯೂ ಸಮುದ್ರ ತೀರದಲ್ಲಿರುವ ಉಸುಬಿನಂತೆ ಅಸಂಖ್ಯ ವಾಗಿಯೂ ಹುಟ್ಟಿದರು. ಇವರೆಲ್ಲರು ವಾಗ್ದಾನಗಳ ಫಲವನ್ನು ಹೊಂದದೆ ಅವುಗಳನ್ನು ದೂರದಿಂದ ನೋಡಿ ನಿಶ್ಚಯದೊಡನೆ ಅಪ್ಪಿಕೊಂಡು ನಂಬಿಕೆಯುಳ್ಳವರಾಗಿ ಮೃತರಾದರು; ತಾವು ಭೂಮಿಯ ಮೇಲೆ ಪರದೇಶದವರೂ ಪ್ರವಾಸಿ ಗಳೂ ಆಗಿದ್ದೇವೆಂದು ಒಪ್ಪಿಕೊಂಡರು. ಇಂಥ ಮಾತುಗಳನ್ನಾಡುವವರು ತಾವು ಒಂದು ದೇಶವನ್ನು ಹುಡುಕುವವರೆಂದು ಸ್ಪಷ್ಟವಾಗಿ ವ್ಯಕ್ತಪಡಿಸುತ್ತಾರೆ. ತಾವು ಹೊರಟು ಬಂದಿದ್ದ ದೇಶದ ಮೇಲೆ ನಿಜವಾಗಿ ಮನಸ್ಸಿಟ್ಟವರಾಗಿದ್ದರೆ ತಿರಿಗಿ ಅಲ್ಲಿಗೆ ಹೋಗುವದಕ್ಕೆ ಅವರಿಗೆ ಅವಕಾಶವಿತ್ತು. ಆದರೆ ಈಗ ಅವರು ಪರಲೋಕವೆಂಬ ಉತ್ತಮದೇಶವನ್ನು ಹಾರೈಸುವವ ರಾಗಿದ್ದಾರೆ. ಆದದರಿಂದ ದೇವರು ಅವರ ದೇವರೆನಿ ಸಿಕೊಳ್ಳುವದಕ್ಕೆ ನಾಚಿಕೊಳ್ಳದೆ ಅವರಿಗೋಸ್ಕರ ಒಂದು ಪಟ್ಟಣವನ್ನು ಸಿದ್ಧಮಾಡಿದ್ದಾನೆ. ಅಬ್ರಹಾಮನು ಶೋಧಿತನಾಗಿ ನಂಬಿಕೆ ಯಿಂದಲೇ ಇಸಾಕನನ್ನು ಸಮರ್ಪಿಸಿದನು; ಆ ವಾಗ್ದಾನ ಗಳನ್ನು ಹೊಂದಿದ ಅವನು ತನ್ನ ಒಬ್ಬನೇ ಮಗನನ್ನು ಸಮರ್ಪಿಸಿದನು. ಅವನ ವಿಷಯದಲ್ಲಿ ಇಸಾಕ ನಲ್ಲಿಯೇ ನಿನ್ನ ಸಂತತಿ ಕರೆಯಲ್ಪಡುವದೆಂದು ಹೇಳ ಲ್ಪಟ್ಟಿತು. ತನ್ನ ಮಗನನ್ನು ಸತ್ತವರೊಳಗಿಂದಲೂ ದೇವರು ಎಬ್ಬಿಸ ಸಮರ್ಥನಾಗಿದ್ದಾನೆಂದು ಎಣಿಸಿದನು. ಸತ್ತವರೊಳಗಿಂದಲೇ ಜೀವಿತನಾಗಿ ಬಂದವನಂತೆ ಅವನನ್ನು ಉಪಮಾನವಾಗಿ ಹೊಂದಿದನು. ನಂಬಿಕೆಯಿಂದಲೇ ಇಸಾಕನು ಮುಂದೆ ಬರ ಬೇಕಾದವುಗಳ ವಿಷಯದಲ್ಲಿ ಯಾಕೋಬನನ್ನೂ ಏಸಾವನನ್ನೂ ಆಶೀರ್ವದಿಸಿದನು. ನಂಬಿಕೆಯಿಂದಲೇ ಯಾಕೋಬನು ಸಾಯುತ್ತಿರುವಾಗ ಯೋಸೇಫನ ಇಬ್ಬರು ಮಕ್ಕಳನ್ನು ಆಶೀರ್ವದಿಸಿದನು. ತನ್ನ ಕೋಲಿನ ಮೇಲೆ ಒರಗಿಕೊಂಡು ದೇವರನ್ನು ಆರಾಧಿಸಿದನು. ಯೋಸೇಫನು ಸಾಯುವಾಗ ಇಸ್ರಾಯೇಲಿನ ಮಕ್ಕಳು ಹೊರಡುವದನ್ನು ಕುರಿತು ನಂಬಿಕೆಯಿಂದಲೇ ಮಾತನಾಡಿ ತನ್ನ ಎಲುಬುಗಳ ವಿಷಯದಲ್ಲಿ ಅಪ್ಪಣೆಕೊಟ್ಟನು. ಮೋಶೆ ಹುಟ್ಟಿದಾಗ ಕೂಸು ಸುಂದರವಾಗಿರು ವದನ್ನು ಅವನ ತಂದೆತಾಯಿಗಳು ನೋಡಿ ಅರಸನ ಅಪ್ಪಣೆಗೆ ಭಯಪಡದೆ ನಂಬಿಕೆಯಿಂದಲೇ ಅವನನ್ನು ಮೂರು ತಿಂಗಳು ಬಚ್ಚಿಟ್ಟರು. ಮೋಶೆಯು ದೊಡ್ಡವ ನಾದ ಮೇಲೆ ಫರೋಹನ ಕುಮಾರ್ತೆಯ ಮಗನೆನಿಸಿ ಕೊಳ್ಳುವದು ಬೇಡವೆಂದದ್ದು ನಂಬಿಕೆಯಿಂದಲೇ. ಸ್ವಲ್ಪ ಕಾಲ ಪಾಪಭೋಗಗಳನ್ನನುಭವಿಸುವದಕ್ಕಿಂತ ದೇವಜನರೊಂದಿಗೆ ಕಷ್ಟವನ್ನನುಭವಿಸುವದನ್ನೇ ಆರಿಸಿ ಕೊಂಡನು. ಐಗುಪ್ತದಲ್ಲಿನ ಐಶ್ವರ್ಯಗಳಿಗಿಂತಲೂ ಕ್ರಿಸ್ತನ ವಿಷಯವಾದ ನಿಂದೆಯು ಅಧಿಕ ಐಶ್ವರ್ಯ ವೆಂದೆಣಿಸಿಕೊಂಡನು; ಯಾಕಂದರೆ ಪ್ರತಿಫಲದ ಬಹು ಮಾನವನ್ನು ಅವನು ಗೌರವಿಸಿದನು. ನಂಬಿಕೆ ಯಿಂದಲೇ ಅವನು ಅರಸನ ರೌದ್ರಕ್ಕೆ ಭಯಪಡದೆ ಐಗುಪ್ತ ದೇಶವನ್ನು ತೊರೆದುಬಿಟ್ಟನು. ಯಾಕಂದರೆ ಅವನು ಅದೃಶ್ಯನಾಗಿರುವಾತನನ್ನು ದೃಷ್ಟಿಸುವವನೋ ಎಂಬಂತೆ ದೃಢಚಿತ್ತನಾಗಿದ್ದನು. ಇಸ್ರಾಯೇಲ್ಯರ ಚೊಚ್ಚಲಮಕ್ಕಳನ್ನು ಸಂಹರಿಸುವವನು ಅವರನ್ನು ಮುಟ್ಟದಂತೆ ಅವನು ಪಸ್ಕವನ್ನೂ ರಕ್ತ ಪ್ರೋಕ್ಷಣೆಯನ್ನೂ ಆಚರಿಸಿದ್ದು ನಂಬಿಕೆಯಿಂದಲೇ. ನಂಬಿಕೆಯಿಂದಲೇ ಇಸ್ರಾಯೇಲ್ಯರು ಒಣ ಭೂಮಿಯನ್ನು ದಾಟುವಂತೆ ಕೆಂಪು ಸಮುದ್ರವನ್ನು ದಾಟಿದರು; ಐಗುಪ್ತ ದೇಶದವರು ಅದನ್ನು ದಾಟು ವದಕ್ಕೆ ಪ್ರಯತ್ನಿಸಿ ಮುಳುಗಿಹೋದರು. ನಂಬಿಕೆ ಯಿಂದಲೇ ಅವರು ಸುಮಾರು ಏಳು ದಿವಸಗಳು ಯೆರಿಕೋವಿನ ಗೋಡೆಗಳನ್ನು ಸುತ್ತಿದ ಮೇಲೆ ಅವು ಬಿದ್ದವು. ನಂಬಿಕೆಯಿಂದಲೇ ರಹಾಬಳೆಂಬ ಸೂಳೆಯು ಗೂಢಚಾರರನ್ನು ಸಮಾಧಾನವಾಗಿ ಸೇರಿಸಿ ಕೊಂಡು ನಂಬದವರೊಂದಿಗೆ ನಾಶವಾಗಲಿಲ್ಲ. ಇನ್ನೂ ಏನು ಹೇಳಬೇಕು? ಗಿಡಿಯೋನ್ ಬಾರಾಕ್ ಸಂಸೋನ್ ಎಫ್ಥ ದಾವೀದ್ ಸಮುವೇಲ್ ಮತ್ತು ಪ್ರವಾದಿಗಳ ವಿಷಯವಾಗಿ ಹೇಳುವದಕ್ಕೆ ನನಗೆ ಸಮಯ ಸಾಲದು. ನಂಬಿಕೆಯ ಮೂಲಕ ಅವರು ರಾಜ್ಯಗಳನ್ನು ಸ್ವಾಧೀನ ಮಾಡಿಕೊಂಡರು; ನೀತಿಯನ್ನು ನಡಿಸಿದರು; ವಾಗ್ದಾನಗಳನ್ನು ಪಡ ಕೊಂಡರು; ಸಿಂಹಗಳ ಬಾಯಿ ಕಟ್ಟಿದರು. ಬೆಂಕಿಯ ಬಲವನು ಆರಿಸಿದರು; ಕತ್ತಿಯ ಬಾಯಿಗೆ ತಪ್ಪಿಸಿಕೊಂಡರು; ನಿರ್ಬಲರಾಗಿದ್ದು ಬಲಿಷ್ಠರಾದರು; ಯುದ್ಧದಲ್ಲಿ ಪರಾಕ್ರಮಶಾಲಿಗಳಾದರು; ಪರರ ದಂಡುಗಳನ್ನು ಓಡಿಸಿಬಿಟ್ಟರು. ಸ್ತ್ರೀಯರು ಸತ್ತುಹೋಗಿದ್ದ ತಮ್ಮವರನ್ನು ಜೀವದಿಂದ ತಿರಿಗಿ ಹೊಂದಿದರು; ಕೆಲವರು ತಾವು ಯಾತನೆ ಹೊಂದುತ್ತಿರುವಾಗ ಶ್ರೇಷ್ಠ ಪುನರುತ್ಥಾನವನ್ನು ಹೊಂದುವದಕ್ಕೋಸ್ಕರ ಬಿಡುಗಡೆ ಬೇಡವೆಂದು ಹೇಳಿದರು. ಬೇರೆ ಕೆಲವರು ಅಪಹಾಸ್ಯ ಕೊರಡೆಯಪೆಟ್ಟು, ಹೌದು, ಇನ್ನು ಬೇಡಿ ಸೆರೆಮನೆ ಇವುಗಳನ್ನು ಅನುಭವಿಸಿದರು. ಕೆಲವರನ್ನು ಕಲ್ಲೆಸೆ ದರು; ಕೆಲವರನ್ನು ಗರಗಸದಿಂದ ಕೊಯ್ದುಕೊಂದರು. ಕೆಲವರನ್ನು ಪರಿಶೋಧಿಸಿದರು, ಕೆಲವರನ್ನು ಕತ್ತಿಯಿಂದ ಕೊಂದರು; ಕೆಲವರು ಕೊರತೆ ಹಿಂಸೆ ಬಾಧೆ ಇವುಗಳನ್ನು ಅನುಭವಿಸುವವರಾಗಿದ್ದು ಕುರಿ ಮೇಕೆಗಳ ಚರ್ಮ ಗಳನ್ನು ಉಟ್ಟುಕೊಂಡವರಾಗಿ ಅಲೆದಾಡಿದರು. ಇಂಥವರಿಗೆ ಈ ಲೋಕವು ಯೋಗ್ಯವಾದದ್ದಲ್ಲ; ಅವರು ಭೂಮಿಯ ಕಾಡು ಬೆಟ್ಟ ಗವಿ ಕುಣಿಗಳಲ್ಲಿ ಅಲೆಯುವವರಾಗಿದ್ದರು. ಇವರೆಲ್ಲರೂ ನಂಬಿಕೆಯ ಮೂಲಕ ಒಳ್ಳೇ ಸಾಕ್ಷಿಯನ್ನು ಹೊಂದಿದವರಾಗಿದ್ದರೂ ವಾಗ್ದಾನವನ್ನು ಹೊಂದಲಿಲ್ಲ;ನಾವಿಲ್ಲದೆ ಅವರು ಸಿದ್ಧಿಗೆ ಬರಬಾರದೆಂದು ದೇವರು ನಮಗೋಸ್ಕರ ಶ್ರೇಷ್ಠ ವಾದದ್ದನ್ನು ಏರ್ಪಡಿಸಿದ್ದನು. ನಾವಿಲ್ಲದೆ ಅವರು ಸಿದ್ಧಿಗೆ ಬರಬಾರದೆಂದು ದೇವರು ನಮಗೋಸ್ಕರ ಶ್ರೇಷ್ಠ ವಾದದ್ದನ್ನು ಏರ್ಪಡಿಸಿದ್ದನು.
- Song of Solomon 7:1–13 ಪರಮಗೀತೆ 7:1–13ಓ ರಾಜಪುತ್ರನ ಮಗಳೇ! ಕೆರಗಳು ಮೆಟ್ಟಿರುವ ನಿನ್ನ ಪಾದಗಳು ಎಷ್ಟು ಸುಂದ ರವಾಗಿವೆ; ನಿನ್ನ ಸೊಂಟದ ಕೀಲುಗಳು ಪ್ರವೀಣನ ಕೈಕೆಲಸವಾದ ವಿಚಿತ್ರ ಆಭರಣಗಳಂತಿವೆ ನಿನ್ನ ಹೊಕ್ಕಳು ಮದ್ಯ ಕಡಿಮೆ ಇಲ್ಲದೆ ದುಂಡಾಗಿರುವ ಬಟ್ಟಲಿನ ಹಾಗಿದೆ. ನಿನ್ನ ಉದರವು ತಾವರೆಯ ಹೂವು ಗಳು ಸುತ್ತಿಕೊಂಡಿರುವ ಗೋಧಿಯ ರಾಶಿಯಾಗಿದೆ. ನಿನ್ನ ಎರಡು ಸ್ತನಗಳು ಅವಳಿ ಜವಳಿಯಾದ ಎರಡು ಜಿಂಕೆಮರಿಗಳ ಹಾಗಿವೆ. ನಿನ್ನ ಕುತ್ತಿಗೆ ದಂತ ಗೋಪುರದ ಹಾಗಿದೆ; ನಿನ್ನ ಕಣ್ಣುಗಳು ಬತ್ರಬ್ಬಿ ಮ್ನ ಬಾಗಲ ಬಳಿಯಲ್ಲಿರುವ ಹೆಷ್ಬೋನಿನ ಕೊಳ ಗಳಾಗಿವೆ; ನಿನ್ನ ಮೂಗು ದಮಸ್ಕದ ಕಡೆಗೆ ನೋಡುವ ಲೆಬನೋನಿನ ಗೋಪುರದ ಹಾಗಿದೆ. ನಿನ್ನ ತಲೆಯು ಕರ್ಮೆಲಿನ ಹಾಗೆಯೂ ನಿನ್ನ ತಲೆಯ ಕೂದಲು ಧೂಮ್ರದ ಹಾಗೆಯೂ ಇವೆ. ಅರಸನು ವೇದಿಕೆಗಳಲ್ಲಿ ಹಿಡಿಯಲ್ಪಟ್ಟಿದ್ದಾನೆ. ಓ ಪ್ರಿಯಳೇ, ನೀನು ಆನಂದಗಳಿಗಾಗಿ ಎಷ್ಟೋ ಸುಂದರಿಯು, ಎಷ್ಟೋ ಮನೋಹರಳು ಆಗಿದ್ದೀ. ನಿನ್ನ ನೀಳವು ಖರ್ಜೂರ ಮರದ ಹಾಗೆ ಇದೆ; ನಿನ್ನ ಸ್ತನಗಳು ದ್ರಾಕ್ಷೇ ಗೊಂಚಲುಗಳ ಹಾಗೆ ಇವೆ. ನಾನು ಖರ್ಜೂರದ ಮರದ ಬಳಿಗೆ ಹೋಗಿ ಅದರ ಗರಿಗಳನ್ನು ಹಿಡುಕೊಳ್ಳುವೆ ಅಂದುಕೊಂಡೆನು. ಇದಲ್ಲದೆ ಈಗ ನಿನ್ನ ಸ್ತನಗಳು ದ್ರಾಕ್ಷೇ ಗೊಂಚಲು ಗಳ ಹಾಗೆಯೂ ನಿನ್ನ ಮೂಗಿನ ವಾಸನೆಯು ಸೇಬುಹಣ್ಣಿನ ಹಾಗೆಯೂ ಇರುವವು. ನಿನ್ನ ಬಾಯಿಯ ಅಂಗಳವು ನನ್ನ ಪ್ರಿಯನ ಉತ್ತಮವಾದ ದ್ರಾಕ್ಷಾರಸದ ಹಾಗಿರುವದು. ಅದು ಸಿಹಿಯಾಗಿ ಹೋಗುವಂಥದ್ದು, ನಿದ್ರೆಮಾಡುವವರ ತುಟಿಗಳನ್ನು ಮಾತಾಡಿಸುವಂಥದ್ದು. ನಾನು ನನ್ನ ಪ್ರಿಯನವಳು; ಅವನ ಇಚ್ಛೆಯು ನನ್ನ ಕಡೆಗಿರುವದು. ನನ್ನ ಪ್ರಿಯನೇ, ನಾವು ಹೊಲಕ್ಕೆ ಹೋಗಿ ಗ್ರಾಮಗಳಲ್ಲಿ ವಸತಿಯಾಗಿರುವ ಬಾ. ನಾವು ಉದಯದಲ್ಲಿ ಎದ್ದು,ದ್ರಾಕ್ಷೇ ತೋಟಗಳಿಗೆ ಹೋಗಿ, ದ್ರಾಕ್ಷೇ ಬಳ್ಳಿಯು ಬೆಳೆಯುವದೋ? ಅದರ ಎಳೆಗಾಯಿಗಳು ಕಾಣಿ ಸುತ್ತವೋ? ದಾಳಿಂಬರ ಗಿಡಗಳು ಚಿಗುರುತ್ತವೋ ನೋಡುವ. ಅಲ್ಲಿ ನನ್ನ ಪ್ರೀತಿಯನ್ನು ನಿನಗೆ ತೋರಿಸುವೆನು.ಓ ನನ್ನ ಪ್ರಿಯನೇ, ದುದಾಯಗಳು ವಾಸನೆಕೊಡುತ್ತವೆ; ನಮ್ಮ ಬಾಗಲುಗಳ ಬಳಿಯಲ್ಲಿ ನಿನಗೋಸ್ಕರ ನಾನು ಇಟ್ಟುಕೊಂಡ ವಿವಿಧ ಹೊಸ ಹಳೇ ರಮ್ಯವಾದ ಫಲಗಳು ಅವೆ. ಓ ನನ್ನ ಪ್ರಿಯನೇ, ದುದಾಯಗಳು ವಾಸನೆಕೊಡುತ್ತವೆ; ನಮ್ಮ ಬಾಗಲುಗಳ ಬಳಿಯಲ್ಲಿ ನಿನಗೋಸ್ಕರ ನಾನು ಇಟ್ಟುಕೊಂಡ ವಿವಿಧ ಹೊಸ ಹಳೇ ರಮ್ಯವಾದ ಫಲಗಳು ಅವೆ.
- Psalm 16:3 ಕೀರ್ತನೆಗಳು 16:3ಭೂಮಿಯಲ್ಲಿರುವ ಪರಿಶುದ್ಧರಿಗೂ ನನ್ನ ಸಂತೋಷ ವಾಗಿರುವ ಮುಖ್ಯಸ್ಥರಿಗೂ ಸೇರುತ್ತದೆಂದು ಓ ನನ್ನ ಆತ್ಮವೇ, ನೀನು ಕರ್ತನಿಗೆ ಹೇಳಿದ್ದೀ.
- Proverbs 8:34 ಜ್ಞಾನೋಕ್ತಿಗಳು 8:34ನನ್ನ ದ್ವಾರಗಳ ಬಳಿಯಲ್ಲಿ ಪ್ರತಿದಿನ ಕಾಯುತ್ತಾ ನನ್ನ ಬಾಗಲುಗಳ ನಿಲುವು ಗಳಲ್ಲಿ ನಿರೀಕ್ಷಿಸುತ್ತಾ ನನ್ನ ಮಾತುಗಳನ್ನು ಕೇಳುವವನು ಧನ್ಯನು.
- Song of Solomon 4:7 ಪರಮಗೀತೆ 4:7ನನ್ನ ಪ್ರಿಯಳೇ, ನೀನು ಪೂರ್ಣ ಸುಂದರಿಯು, ನಿನ್ನಲ್ಲಿ ಕಳಂಕವೇನೂ ಇಲ್ಲ.
- Song of Solomon 2:10 ಪರಮಗೀತೆ 2:10ನನ್ನ ಪ್ರಿಯನು ಮಾತಾಡಿ--ಏಳು, ನನ್ನ ಪ್ರಿಯಳೇ, ನನ್ನ ಸುಂದರಿಯೇ, ಹೊರಟು ಬಾ.
- Psalm 45:13 ಕೀರ್ತನೆಗಳು 45:13ಅರಸನ ಮಗಳು ತನ್ನಲ್ಲಿ ಪೂರ್ಣ ಘನವುಳ್ಳವ ಳಾಗಿದ್ದಾಳೆ; ಅವಳ ವಸ್ತ್ರವು ಚಿನ್ನದಿಂದ ನೆಯಿದದೆ.
- 1 Peter 3:6 1 ಪೇತ್ರನು 3:6ಹಾಗೆಯೇ ಸಾರಳು ಅಬ್ರಹಾಮನಿಗೆ ವಿಧೇಯಳಾಗಿದ್ದು ಅವನನ್ನು ಯಜಮಾನ ಎಂದು ಕರೆದಳು. ನೀವು ಸಾರಳ ಕುಮಾರ್ತೆಗಳಾಗಿದ್ದೀರಲ್ಲಾ; ನೀವು ಒಳ್ಳೇದನ್ನು ಮಾಡುವದಾದರೆ ಯಾವ ಭೀತಿಗೂ ಗಾಬರಿ ಪಡುವದಿಲ್ಲ.