Zechariah · chapter 8 · verse 2
Zechariah 8:2 in Kannada
ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಾನು ಚೀಯೋನಿನ ವಿಷಯವಾಗಿ ಅತಿ ರೋಷಗೊಂಡಿದ್ದೆನು; ಅತಿ ಉಗ್ರದಿಂದ ಅದರ ವಿಷಯದಲ್ಲಿ ರೋಷವುಳ್ಳವನಾಗಿದ್ದೆನು.
Sainyagala kartanu heege heluttaane--naanu cheeyonina vishayavaagi ati roshagondiddenu; ati ugradinda adara vishayadalli roshavullavanaagiddenu.
Zechariah 8:2 in English
- King James Version (KJV)
- Thus saith the LORD of hosts; I was jealous for Zion with great jealousy, and I was jealous for her with great fury.
- World English Bible (WEB)
- The LORD of Armies says: “I am jealous for Zion with great jealousy, and I am jealous for her with great wrath.”
- American Standard Version (ASV)
- Thus saith Jehovah of hosts: I am jealous for Zion with great jealousy, and I am jealous for her with great wrath.
- Bible in Basic English (BBE)
- These are the words of the Lord of armies: I am angry about the fate of Zion, I am angry about her with great wrath.
- Darby Translation (DBY)
- Thus saith Jehovah of hosts: I am jealous for Zion with great jealousy, and I am jealous for her with great fury.
- Webster's Bible (WBS)
- Thus saith the LORD of hosts; I was jealous for Zion with great jealousy, and I was jealous for her with great fury.
- Young's Literal Translation (YLT)
- 'Thus said Jehovah of Hosts: I have been zealous for Zion with great zeal, With great heat I have been zealous for her.
Read in context
- 1ಕರ್ತನ ವಾಕ್ಯವು ನನಗೆ ಉಂಟಾಗಿ ಹೇಳಿದ್ದೇನಂದರೆ--
- 2ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನಾನು ಚೀಯೋನಿನ ವಿಷಯವಾಗಿ ಅತಿ ರೋಷಗೊಂಡಿದ್ದೆನು; ಅತಿ ಉಗ್ರದಿಂದ ಅದರ ವಿಷಯದಲ್ಲಿ ರೋಷವುಳ್ಳವನಾಗಿದ್ದೆನು.
- 3ಕರ್ತನು ಹೀಗೆ ಹೇಳುತ್ತಾನೆ--ಚೀಯೋನಿಗೆ ನಾನು ತಿರಿಗಿ ಕೊಂಡಿದ್ದೇನೆ; ಯೆರೂಸಲೇಮಿನ ಮಧ್ಯದಲ್ಲಿ ವಾಸಿಸು ವೆನು; ಯೆರೂಸಲೇಮು ಸತ್ಯದ ಪಟ್ಟಣವೆಂದೂ ಸೈನ್ಯಗಳ ಕರ್ತನ ಪರ್ವತವು ಪರಿಶುದ್ಧ ಪರ್ವತ ವೆಂದೂ ಕರೆಯಲ್ಪಡುವದು.
- 4ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ಇನ್ನು ಯೆರೂಸಲೇಮಿನ ಬೀದಿಗಳಲ್ಲಿ ಮುದುಕರೂ ಮುದುಕಿಯರೂ ವಾಸವಾಗಿರುವರು; ಕೇವಲ ವೃದ್ಧಾಪ್ಯದಿಂದ ಒಬ್ಬೊಬ್ಬನ ಕೈಯಲ್ಲಿ ಅವನವನ ಕೋಲು ಇರುವದು.
Cross references
- Joel 2:18 ಯೋವೇಲ 2:18ಆಗ ಕರ್ತನು ತನ್ನ ದೇಶಕ್ಕೋಸ್ಕರ ರೋಷ ಗೊಂಡು ತನ್ನ ಜನರನ್ನು ಕನಿಕರಿಸುವನು.
- Psalm 78:58–59 ಕೀರ್ತನೆಗಳು 78:58–59ತಮ್ಮ ಉನ್ನತ ಸ್ಥಳಗಳಿಂದ ಆತನಿಗೆ ಕೋಪವನ್ನೆಬ್ಬಿಸಿ ಕೆತ್ತಿದ ತಮ್ಮ ವಿಗ್ರಹಗಳಿಂದ ಆತನಿಗೆ ರೋಷವನ್ನೆಬ್ಬಿಸಿದರು. ದೇವರು ಇದನ್ನು ಕೇಳಿ ಉಗ್ರನಾಗಿ ಇಸ್ರಾಯೇಲನ್ನು ಬಹು ಅಸಹ್ಯಿಸಿ ಬಿಟ್ಟು,
- Zechariah 1:14–16 ಜೆಕರ್ಯ 1:14–16ನನ್ನ ಸಂಗಡ ಮಾತ ನಾಡಿದ ದೂತನು ನನಗೆ ಹೇಳಿದ್ದೇನಂದರೆ--ಕೂಗಿ ಹೇಳು; ಏನಂದರೆ--ಸೈನ್ಯಗಳ ಕರ್ತನು ಹೀಗೆ ಹೇಳು ತ್ತಾನೆ--ನಾನು ಯೆರೂಸಲೇಮಿಗಾಗಿಯೂ ಚೀಯೋನಿ ಗಾಗಿಯೂ ಬಹುರೋಷವುಳ್ಳವನಾಗಿದ್ದೇನೆ. ನಿಶ್ಚಿಂತೆ ಯುಳ್ಳವರಾಗಿರುವ ಅನ್ಯಜನಾಂಗದ ಮೇಲೆ ನಾನು ಬಹಳ ಕೋಪಿಸಿಕೊಂಡಿದ್ದೇನೆ. ನಾನು ಸ್ವಲ್ಪ ಕೋಪ ಮಾಡಿಕೊಂಡಾಗ ಅವರು ಸಂಕಟಕ್ಕೆ ಸಹಾಯಮಾಡಿ ದರು. ಆದದರಿಂದ ಕರ್ತನು ಹೀಗೆ ಹೇಳುತ್ತಾನೆ --ನಾನು ಕನಿಕರದಿಂದ ಯೆರೂಸಲೇಮಿನ ಕಡೆಗೆ ತಿರುಗಿಕೊಂಡಿದ್ದೇನೆ; ನನ್ನ ಆಲಯವು ಅದರಲ್ಲಿ ಕಟ್ಟ ಲ್ಪಡುವದೆಂದು ಸೈನ್ಯಗಳ ಕರ್ತನು ಅನ್ನುತ್ತಾನೆ; ಯೆರೂ ಸಲೇಮಿನ ಮೇಲೆ ಅಳತೆ ನೂಲು ಚಾಚಲ್ಪಡುವದು.
- Isaiah 42:13–14 ಯೆಶಾಯ 42:13–14ಕರ್ತನು ಪರಾಕ್ರಮ ಶಾಲಿಯಾಗಿ ಮುಂದೆ ಹೋಗುವನು; ಯುದ್ಧ ವೀರನ ಹಾಗೆ ತನ್ನ ರೌದ್ರವನ್ನು ಎಬ್ಬಿಸು ವನು; ತನ್ನ ಶತ್ರುಗಳಿಗೆ ವಿರೋಧವಾಗಿ ಜಯ ಶಾಲಿಯಾಗುವನು. ಬಹುಕಾಲದಿಂದ ಸುಮ್ಮನೆ ಮೌನವಾಗಿ ನನ್ನನ್ನುಬಿಗಿಹಿಡಿದಿದ್ದೆನು. ಈಗ ನಾನು ಹೆರುವವಳಂತೆ ಕೂಗುವೆನು ನಾನು ನಾಶಮಾಡಿ ಒಂದೇ ಸಾರಿ ನುಂಗಿಬಿಡುವೆನು.
- Nahum 1:2 ನಹೂಮ 1:2ಕರ್ತನು ರೋಷವುಳ್ಳಂಥ, ಮುಯ್ಯಿಗೆಮುಯ್ಯಿ ಕೊಡುವಂಥ ದೇವರು; ಕರ್ತನು ಮುಯ್ಯಿಗೆ ಮುಯ್ಯಿ ಕೊಡುವಂಥ ಉಗ್ರವುಳ್ಳಾತನು, ಕರ್ತನು ತನ್ನ ವೈರಿ ಗಳಿಗೆ ಮುಯ್ಯಿಗೆಮುಯ್ಯಿ ತೀರಿಸಿ ತನ್ನ ಶತ್ರುಗಳ ಮೇಲೆ ಕೋಪವನ್ನು ಇಟ್ಟುಕೊಳ್ಳುತ್ತಾನೆ.
- Ezekiel 36:5–6 ಯೆಹೆಜ್ಕೇಲನು 36:5–6ಆದದರಿಂದ ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಿಶ್ಚಯವಾಗಿ ನನ್ನ ರೋಷದ ಬೆಂಕಿ ಯಿಂದ ಅನ್ಯಜನಾಂಗಗಳಲ್ಲಿ ಉಳಿದವರಿಗೂ ಎಲ್ಲಾ ಎದೋಮಿಗೆ ವಿರುದ್ಧವಾಗಿ ನಾನು ಮಾತನಾಡಿದ್ದೇನೆ; ಅವರ ಸಂಪೂರ್ಣ ಹೃದಯದ ಸಂತೋಷದಿಂದಲೂ ತಮ್ಮ ಹಗೆಯ ಮನೋಭಾವದಿಂದಲೂ ನನ್ನ ದೇಶ ವನ್ನು ಕೊಳ್ಳೆಯಾಗಿ ಹೊರಗೆ ಹಾಕುವ ಹಾಗೆ ತಮಗೆ ಸ್ವಾಸ್ತ್ಯವಾಗಿ ಕೊಟ್ಟಿದ್ದಾರೆ. ಆದದರಿಂದ ಇಸ್ರಾಯೇಲ್ ದೇಶಕ್ಕೆ ಸಂಬಂಧಪಟ್ಟ ಹಾಗೆ ಪ್ರವಾದಿಸು; ಪರ್ವತ ಗಳಿಗೂ ಬೆಟ್ಟಗಳಿಗೂ ಹಳ್ಳಕೊಳ್ಳಗಳಿಗೂ ಹೇಳಬೇಕಾ ದದ್ದೇನಂದರೆ, ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಇಗೋ, ಅನ್ಯಜನಾಂಗಗಳ ಅವಮಾನವನ್ನು ನೀನು ಹೊತ್ತದ್ದರಿಂದ ನಾನು ರೋಷದಿಂದಲೂ ರೌದ್ರ ದಿಂದಲೂ ಮಾತನಾಡಿದ್ದೇನೆ.
- Isaiah 59:17 ಯೆಶಾಯ 59:17ಅವನು ನೀತಿಯನ್ನು ಕವಚದ ಹಾಗೆ ಧರಿಸಿಕೊಂಡು, ರಕ್ಷಣೆಯ ಶಿರಸ್ತ್ರಾಣವನ್ನು ತನ್ನ ತಲೆಯ ಮೇಲೆ ಇಟ್ಟುಕೊಂಡನು; ಪ್ರತೀಕಾರದ ವಸ್ತ್ರ ಗಳನ್ನು ಹೊದಿಕೆಯಾಗಿ ಹೊದ್ದುಕೊಂಡು ಆಸಕ್ತಿಯನ್ನು ಮೇಲಂಗಿಯಾಗಿ ತೊಟ್ಟುಕೊಂಡನು.
- Nahum 1:6 ನಹೂಮ 1:6ಆತನ ರೌದ್ರದ ಎದುರಿಗೆ ಯಾರು ನಿಲ್ಲುವರು? ಆತನ ರೋಷಾಗ್ನಿಗೆ ಯಾರು ನಿಂತುಕೊಳ್ಳುವರು? ಆತನ ಉಗ್ರವು ಬೆಂಕಿಯ ಹಾಗೆ ಸುರಿಸಲ್ಪಟ್ಟಿದೆ; ಬಂಡೆಗಳು ಆತನಿಂದ ಕೆಡವಲ್ಪಟ್ಟಿವೆ.
- Isaiah 63:15 ಯೆಶಾಯ 63:15ಆಕಾಶದಿಂದ, ನಿನ್ನ ಪರಿ ಶುದ್ಧ ಮಹಿಮೆಯ ನಿವಾಸದಿಂದ ದೃಷ್ಟಿಸಿನೋಡು; ನಿನ್ನ ಆಸಕ್ತಿಯೂ ನಿನ್ನ ಪರಾಕ್ರಮವೂ ನಿನ್ನ ಕರುಳುಗಳ ಘೋಷವೂ ನನ್ನ ವಿಷಯವಾದ ನಿನ್ನ ಕರುಣೆಗಳೂ ಎಲ್ಲಿ? ಬಿಗಿ ಹಿಡುಕೊಂಡಿದ್ದೀಯೋ?
- Isaiah 63:4–6 ಯೆಶಾಯ 63:4–6ಮುಯ್ಯಿ ತೀರಿಸುವ ದಿನವು ನನ್ನ ಹೃದಯದಲ್ಲಿ ಇದೆ; ನಾನು ವಿಮೋಚಿಸಿದವರ ವರುಷವು ಬಂತು. ನಾನು ನೋಡಲು ಸಹಾಯಕರು ಯಾರೂ ಇರಲಿಲ್ಲ; ಉದ್ಧಾರ ಮಾಡುವವನು ಇಲ್ಲದ್ದರಿಂದ ಆಶ್ಚರ್ಯಪಟ್ಟೆನು; ಆದದರಿಂದ ನನ್ನ ಸ್ವಂತ ಬಾಹುವು ನನಗೆ ರಕ್ಷಣೆಯನ್ನುಂಟುಮಾಡಿತು; ನನ್ನ ರೋಷವು ನನ್ನನ್ನು ಮೆಲಕ್ಕೆತ್ತಿತು. ನನ್ನ ಕೋಪ ದಲ್ಲಿ ಜನಗಳನ್ನು ತುಳಿದು ಬಿಟ್ಟೆನು; ನನ್ನ ರೋಷ ದಲ್ಲಿ ಅವರನ್ನು ಕುಡಿಯುವಂತೆ ಮಾಡಿದೆನು; ಅವರ ಶಕ್ತಿಯನ್ನು ಭೂಮಿಗೆ ಇಳಿಯುವಂತೆ ಮಾಡಿದೆನು.