1 Chronicles · chapter 11 · verse 10
1 Chronicles 11:10 in Kannada
ದಾವೀದನಿಗೆ ಇರುವ ಮುಖ್ಯಸ್ಥರಾದ ಪರಾಕ್ರಮ ಶಾಲಿಗಳು ಇವರೇ; ಇಸ್ರಾಯೇಲನ್ನು ಕುರಿತು ಕರ್ತನು ಹೇಳಿದ ವಾಕ್ಯದ ಪ್ರಕಾರ ಅವನನ್ನು ಅರಸನನ್ನಾಗಿ ಮಾಡುವದಕ್ಕೆ ಅವರು ಸಮಸ್ತ ಇಸ್ರಾಯೇಲಿನ ಸಂಗಡ ಅವನ ರಾಜ್ಯದಲ್ಲಿ ತಮ್ಮನ್ನು ದೃಢಪಡಿಸಿಕೊಂಡರು.
Daaveedanige iruva mukhyastharaada paraakrama shaaligalu ivare; israayelannu kuritu kartanu helida vaakyada prakaara avanannu arasanannaagi maaduvadakke avaru samasta israayelina sangada avana raajyadalli tammannu drudhapadisikondaru.
1 Chronicles 11:10 in English
- King James Version (KJV)
- These also [are] the chief of the mighty men whom David had, who strengthened themselves with him in his kingdom, [and] with all Israel, to make him king, according to the word of the LORD concerning Israel.
- World English Bible (WEB)
- Now these are the chief of the mighty men whom David had, who showed themselves strong with him in his kingdom, together with all Israel, to make him king, according to the LORD’s word concerning Israel.
- American Standard Version (ASV)
- Now these are the chief of the mighty men whom David had, who showed themselves strong with him in his kingdom, together with all Israel, to make him king, according to the word of Jehovah concerning Israel.
- Bible in Basic English (BBE)
- Now these are the chief of David's men of war who were his strong supporters in the kingdom, and, with all Israel, made him king, as the Lord had said about Israel.
- Darby Translation (DBY)
- And these are the chief of the mighty men whom David had, who shewed themselves valiant with him in his kingdom, with all Israel, to make him king, according to the word of Jehovah concerning Israel.
- Webster's Bible (WBS)
- These also [are] the chief of the mighty men whom David had, who strengthened themselves with him in his kingdom, [and] with all Israel, to make him king according to the word of the LORD concerning Israel.
- Young's Literal Translation (YLT)
- And these [are] heads of the mighty ones whom David hath, who are strengthening themselves with him in his kingdom, with all Israel, to cause him to reign, according to the word of Jehovah, over Israel.
Read in context
- 8ಅವನು ಮಿಲ್ಲೋವು ಮೊದಲುಗೊಂಡು ಸುತ್ತಲೂ ಪಟ್ಟಣವನ್ನು ಕಟ್ಟಿಸಿದನು. ಆದರೆ ಪಟ್ಟಣ ದಲ್ಲಿ ಮಿಕ್ಕದ್ದನ್ನು ಯೋವಾಬನು ದುರಸ್ತು ಮಾಡಿಸಿ ದನು.
- 9ಹೀಗೆಯೇ ಸೈನ್ಯಗಳ ಕರ್ತನು ಅವನ ಸಂಗಡ ಇದದ್ದರಿಂದ ದಾವೀದನು ಕ್ರಮೇಣವಾಗಿ ಅಭಿವೃದ್ಧಿಯಾದನು.
- 10ದಾವೀದನಿಗೆ ಇರುವ ಮುಖ್ಯಸ್ಥರಾದ ಪರಾಕ್ರಮ ಶಾಲಿಗಳು ಇವರೇ; ಇಸ್ರಾಯೇಲನ್ನು ಕುರಿತು ಕರ್ತನು ಹೇಳಿದ ವಾಕ್ಯದ ಪ್ರಕಾರ ಅವನನ್ನು ಅರಸನನ್ನಾಗಿ ಮಾಡುವದಕ್ಕೆ ಅವರು ಸಮಸ್ತ ಇಸ್ರಾಯೇಲಿನ ಸಂಗಡ ಅವನ ರಾಜ್ಯದಲ್ಲಿ ತಮ್ಮನ್ನು ದೃಢಪಡಿಸಿಕೊಂಡರು.
- 11ದಾವೀದನ ಸಂಗಡ ಇದ್ದ ಪರಾಕ್ರಮಶಾಲಿಗಳ ಲೆಕ್ಕವೇನಂದರೆ--ಹಕ್ಮೋನಿಯನಾದ ಯಾಷೊಬ್ಬಾ ಮನು ಅಧಿಪತಿಗಳಲ್ಲಿ ಮುಖ್ಯಸ್ಥನಾಗಿದ್ದನು; ಅವನು ಮುನ್ನೂರು ಮಂದಿಗೆ ವಿರೋಧವಾಗಿ ತನ್ನ ಈಟಿ ಯನ್ನು ಎತ್ತಿ ಒಂದೇ ಸಾರಿ ಅವರನ್ನು ಕೊಂದು ಹಾಕಿದನು.
- 12ಅವನ ತರುವಾಯ ಅಹೋಹ್ಯನಾ ದಂಥ ದೋದೋನ ಮಗನಾದಂಥ ಎಲ್ಲಾಜಾರನು ಮೂರು ಮಂದಿ ಪರಾಕ್ರಮಾಶಾಲಿಗಳಲ್ಲಿ ಒಬ್ಬನಾ ಗಿದ್ದನು.
Cross references
- 1 Chronicles 11:3 1 ಪೂರ್ವಕಾಲವೃತ್ತಾಂತ 11:3ಹಾಗೆಯೇ ಇಸ್ರಾ ಯೇಲಿನ ಹಿರಿಯರೆಲ್ಲರು ಹೆಬ್ರೋನಿನಲ್ಲಿದ್ದ ಅರಸನ ಬಳಿಗೆ ಬಂದರು; ದಾವೀದನು ಹೆಬ್ರೋನಿನಲ್ಲಿ ಕರ್ತನ ಮುಂದೆ ಅವರ ಸಂಗಡ ಒಡಂಬಡಿಕೆ ಮಾಡಿದನು; ಕರ್ತನು ಸಮುವೇಲನ ಮುಖಾಂತರ ಹೇಳಿದ ವಾಕ್ಯದ ಪ್ರಕಾರ ಅವರು ದಾವೀದನನ್ನು ಇಸ್ರಾಯೇಲಿನ ಮೇಲೆ ಅರಸನಾಗಿರಲು ಅಭಿಷೇಕ ಮಾಡಿದರು.
- 2 Samuel 23:8–39 2 ಸಮುವೇಲನು 23:8–39ದಾವೀದನಿಗೆ ಇದ್ದ ಪರಾಕ್ರಮಶಾಲಿಗಳ ಹೆಸರು ಗಳು ಇವೇ; ಸೈನ್ಯಾಧಿಪತಿಗಳಲ್ಲಿ ಮುಖ್ಯನಾಗಿ ಆಸನದ ಮೇಲೆ ಕೂತವನಾದ ತಹ್ಕೆಮೋನ್ಯನು; ಇವನೇ ಎಚ್ನಿಯನಾದ ಅದೀನೊ. ಇವನು ಎಂಟು ನೂರು ಜನರ ಮೇಲೆ ಬಿದ್ದು ಅವರನ್ನು ಒಂದೇ ಸಾರಿ ಕೊಂದು ಹಾಕಿದನು. ಇವನ ತರುವಾಯ ಅಹೋಹ್ಯನಾ ಗಿರುವ ದೋದೋನ ಮಗನಾಗಿರುವ ಎಲ್ಲಾಜಾರನು. ಇವನು ಇಸ್ರಾಯೇಲ್ ಜನರು ಓಡಿಹೋದ ತರುವಾಯ ಯುದ್ಧಕ್ಕೆ ಕೂಡಿ ಬಂದ ಫಿಲಿಷ್ಟಿಯರನ್ನು ನಿಂದಿಸಿದ ದಾವೀದನ ಸಂಗಡ ಇದ್ದ ಮೂವರು ಪರಾಕ್ರಮಶಾಲಿಗಳಲ್ಲಿ ಒಬ್ಬನಾಗಿದ್ದನು. ಇವನು ಎದ್ದು ತನ್ನ ಕೈ ದಣಿದು ಕತ್ತಿಗೆ ಹತ್ತಿಕೊಳ್ಳುವ ವರೆಗೂ ಫಿಲಿಷ್ಟಿಯರನ್ನು ಹೊಡೆದುಬಿಟ್ಟನು. ಆ ದಿನ ಕರ್ತನು ದೊಡ್ಡ ರಕ್ಷಣೆಯನ್ನುಂಟು ಮಾಡಿದನು. ಜನರು ಸುಲು ಕೊಳ್ಳುವದಕ್ಕೆ ಮಾತ್ರ ಅವನ ಹಿಂದೆ ಹಿಂತಿರುಗಿದರು. ಇವನ ತರುವಾಯ ಹರಾರ್ಯನಾಗಿರುವ ಆಗೇಯನ ಮಗನಾದ ಶಮ್ಮ. ಅಲಸಂದಿಯಿಂದ ತುಂಬಿದ ಹೊಲ ದಲ್ಲಿ ಫಿಲಿಷ್ಟಿಯರು ದಂಡಾಗಿ ಕೂಡಿ ಬಂದಾಗ ಜನರು ಫಿಲಿಷ್ಟಿಯರ ಮುಂದೆ ಓಡಿಹೋದರು. ಆದರೆ ಅವನು ಆ ಹೊಲದಲ್ಲಿ ನಿಂತುಕೊಂಡು ಅದನ್ನು ಕಾಪಾಡಿ ಫಿಲಿಷ್ಟಿಯರನ್ನು ಕೊಂದುಬಿಟ್ಟನು. ಹೀಗೆ ಕರ್ತನು ದೊಡ್ಡರಕ್ಷಣೆಯನ್ನುಂಟು ಮಾಡಿದನು. ಮೂವತ್ತು ಮಂದಿ ಮುಖ್ಯಸ್ಥರಲ್ಲಿ ಆ ಮೂರು ಮಂದಿ ಹೊರಟು ಸುಗ್ಗಿಯ ಕಾಲದಲ್ಲಿ ಅದುಲ್ಲಾಮ್ ಗವಿಯಲ್ಲಿರುವ ದಾವೀದನ ಬಳಿಗೆ ಬಂದರು; ಆಗ ಫಿಲಿಷ್ಟಿಯರ ದಂಡು ರೆಫಾಯಾಮ್ ತಗ್ಗಿನಲ್ಲಿ ಇಳಿ ದಿತ್ತು. ದಾವೀದನು ಗಡಿ ಸ್ಥಳದಲ್ಲಿರುವಾಗ ಫಿಲಿಷ್ಟಿಯರ ದಂಡು ಬೇತ್ಲೆಹೇಮಿನಲ್ಲಿತ್ತು. ಆಗ ದಾವೀದನು ಬೇತ್ಲೆಹೇಮಿನ ಬಾಗಲ ಬಳಿಯಲ್ಲಿರುವ ಬಾವಿಯ ನೀರನ್ನು ನನಗೆ ಕುಡಿಯಲು ಕೊಡುವ ವನಾರೆಂದು ಬಹು ಆಶೆಯಿಂದ ಹೇಳಿದನು. ಆಗ ಆ ಮೂರು ಮಂದಿ ಪರಾಕ್ರಮಶಾಲಿಗಳು ಫಿಲಿಷ್ಟಿ ಯರ ದಂಡನ್ನು ಭೇದಿಸಿ ಹೊರಟು ಬೇತ್ಲೆಹೇಮಿನ ಬಾಗಲ ಬಳಿಯಲ್ಲಿರುವ ಬಾವಿಯ ನೀರನ್ನು ಸೇದಿ ದಾವೀದನಿಗೆ ತಕ್ಕೊಂಡು ಬಂದರು. ಆದರೆ ಅವನು ಅದನ್ನು ಕುಡಿಯಲ್ಲೊಲ್ಲದೆ ಕರ್ತನಿಗಾಗಿ ಹೊಯಿ ದನು. ಅವನು--ಕರ್ತನೇ, ಇದನ್ನು ಕುಡಿಯುವದು ನನಗೆ ದೂರವಾಗಿರಲಿ. ಇದು ತಮ್ಮ ಪ್ರಾಣದಾಶೆ ಬಿಟ್ಟು ಹೋದ ಮನುಷ್ಯರ ರಕ್ತವಲ್ಲವೇ ಎಂದು ಹೇಳಿ ಕುಡಿಯಲೊಲ್ಲದೆ ಇದ್ದನು. ಇವುಗಳನ್ನು ಆ ಮೂರು ಮಂದಿ ಪರಾಕ್ರಮಶಾಲಿಗಳು ಮಾಡಿದರು. ಯೋವಾಬನ ಸಹೋದರನಾದ ಚೆರೂಯಳ ಮಗನಾಗಿರುವ ಅಬೀಷೈಯು ಮೂರು ಮಂದಿಯಲ್ಲಿ ಮುಖ್ಯಸ್ಥನು. ಅವನು ತನ್ನ ಈಟಿಯನ್ನು ಎತ್ತಿ ಮುನ್ನೂರು ಜನರನ್ನು ಸಂಹರಿಸಿದ್ದರಿಂದ ಮೂವ ರೊಳಗೆ ಹೆಸರುಗೊಂಡನು. ಈ ಮೂರು ಮಂದಿ ಯಲ್ಲಿ ಅವನು ಬಹು ಘನವುಳ್ಳವನಾಗಿದ್ದದ್ದು ಇದ ರಿಂದಲೇ. ಆದದರಿಂದ ಅವನು ಅವರಲ್ಲಿ ಪ್ರಧಾನ ನಾದನು. ಹೇಗಿದ್ದರೂ ಆ ಮೊದಲಿನ ಮೂರು ಜನಕ್ಕೆ ಅವನು ಸಮಾನನಾಗಿರಲಿಲ್ಲ. ಕಬ್ಜಯೇಲಿನಲ್ಲಿದ್ದ ಪರಾಕ್ರಮಶಾಲಿಯ ಮಗನಾದ ಯೆಹೋಯಾದಾ ವನ ಮಗನಾಗಿರುವ ಬೆನಾಯನು ಅನೇಕ ಶೂರ ಕೃತ್ಯಗಳನ್ನು ಮಾಡಿದ್ದನು. ಅವನು ಸಿಂಹದಹಾಗಿರುವ ಮೋವಾಬಿನ ಇಬ್ಬರು ಮನುಷ್ಯರನ್ನು ಕೊಂದುಬಿಟ್ಟನು. ಇದಲ್ಲದೆ ಹಿಮಕಾಲದಲ್ಲಿ ಕುಣಿಯೊಳಗೆ ಇಳಿದು ಒಂದು ಸಿಂಹವನ್ನು ಕೊಂದುಬಿಟ್ಟನು. ಅವನು ರೂಪವುಳ್ಳ ಒಬ್ಬ ಐಗುಪ್ತದ ಮನುಷ್ಯನನ್ನು ಕೊಂದು ಬಿಟ್ಟನು. ಆ ಐಗುಪ್ತನ ಕೈಯಲ್ಲಿ ಒಂದು ಈಟಿಯು ಇತ್ತು. ಇವನು ಒಂದು ಕೋಲನ್ನು ತಕ್ಕೊಂಡು ಅವನ ಬಳಿಗೆ ಹೋಗಿ ಆ ಈಟಿಯನ್ನು ಐಗುಪ್ತನ ಕೈಯಿಂದ ಕಸಕೊಂಡು ಅವನನ್ನು ಅವನ ಈಟಿಯಿಂದಲೇ ಕೊಂದುಹಾಕಿದನು. ಇವುಗಳನ್ನು ಯೆಹೋಯಾ ದಾವನ ಮಗನಾದ ಬೆನಾಯನು ಮಾಡಿದ್ದರಿಂದ ಮೂರು ಮಂದಿ ಪರಾಕ್ರಮಶಾಲಿಗಳಲ್ಲಿ ಹೆಸರು ಗೊಂಡವನಾಗಿದ್ದನು. ಇವನು ಮೂವತ್ತು ಜನರಿ ಗಿಂತ ಹೆಚ್ಚು ಘನವುಳ್ಳವನಾಗಿದ್ದನು; ಆದರೆ ಆ ಮೊದಲಿನ ಮೂರು ಮಂದಿಗೆ ಅವನು ಸಮಾನ ನಾಗಿರಲಿಲ್ಲ; ದಾವೀದನು ಅವನನ್ನು ತನ್ನ ಮೈಗಾವಲಿ ನವರ ಮೇಲೆ ಯಜಮಾನನನ್ನಾಗಿಟ್ಟನು. ಯೋವಾಬನ ಸಹೋದರನಾದ ಅಸಾಹೇಲನು ಮೂವತ್ತು ಮಂದಿಯಲ್ಲಿ ಒಬ್ಬನಾಗಿದ್ದನು. ಈ ಮೂವತ್ತು ಮಂದಿ ಯಾರಂದರೆ; ಬೇತ್ಲೆಹೇಮ್ ಊರಿನ ದೋದೋವಿನ ಮಗನಾದ ಎಲ್ಹಾನಾನು; ಹರೋದಿನವನಾದ ಶಮ್ಮನು, ಎಲೀಕನು, ಪೆಲೆಟ ನಾದ ಹೆಲೆಚ್, ತೆಕೋವಿಯನಾದ ಇಕ್ಕೇಷನ ಮಗನಾದ ಈರಾ. ಅಣತೋತಿನವನಾದ ಅಬೀ ಯೆಜರ್, ಹುಷಾ ಊರಿನವನಾದ ಮೆಬುನೈ, ಅಹೋಹಿನವನಾದ ಚಲ್ಮೋನ್, ನೆಟೋಫದ ವನಾದ ಮಹರೈ, ನೆಟೋಫದವನಾದ ಬಾಣನ ಮಗ ಹೆಲೇಬ್, ಬೆನ್ಯಾವಿಾನನ ಮಕ್ಕಳ ಗಿಬೆ ಊರಿನವನಾದ ರೀಬೈ ಮಗನಾದ ಇತೈ, ಪಿತೋನ್ಯ ನಾದ ಬೆನಾಯನು, ನಹಲೇ ಗಾಷ್ ಊರಿನವನಾದ ಹಿದೈ ಅರಾಬಾದ ಅಬೀಅಲ್ಬೋನ್, ಬರ್ಹುಮ್ಯನಾದ ಅಜ್ಮಾವೇತನು, ಶಾಲ್ಬೋನ್ಯನಾದ ಎಲೆಯಖ್ಬಾ ಯಾಷೇನನ ಕುಮಾರರಲ್ಲಿ ಒಬ್ಬನಾದ ಯೋನಾತಾ ನನು, ಹರಾರ್ಯನಾದ ಶಮ್ಮನು, ಅರಾರ್ಯನಾದ ಶಾರಾರನ ಮಗನಾದ ಅಹೀಯಾಮ್, ಮಾಕಾತ್ಯರಲ್ಲಿ ಒಬ್ಬನ ಮಗನಾಗಿರುವ ಅಹಸ್ಬೈ ಮಗನಾದ ಎಲೀಫೆ ಲೆಟನು, ಗಿಲೋವಿಯನಾಗಿರುವ ಅಹೀತೋಫೆಲನ ಮಗನಾದ ಎಲೀಯಾಮನು, ಕರ್ಮೇಲ್ಯನಾದ ಹೆಚ್ರೊ, ಅರ್ಬಿಯನಾದ ಪಾರೈ, ಚೋಬದವನಾದ ನಾತಾನ್ ಮಗನಾಗಿರುವ ಇಗಾಲ್, ಗಾದ್ಯನಾದ ಬಾನಿ, ಅಮ್ಮೋನ್ಯನಾದ ಚೇಲೆಕ್, ಚೆರೂಯಳ ಮಗನಾದ ಯೋವಾಬನ ಆಯುಧಗಳನ್ನು ಹಿಡಿಯುವ ಬೇರೋತ್ಯನಾದ ನಹರೈ, ಇತ್ರಿಯರಾದ ಈರಾ ಗಾರೇಬನು,ಹಿತ್ತಿಯನಾದ ಊರೀಯನು ಇವ ರೆಲ್ಲಾ ಮೂವತ್ತೇಳು ಮಂದಿಯು. ಹಿತ್ತಿಯನಾದ ಊರೀಯನು ಇವ ರೆಲ್ಲಾ ಮೂವತ್ತೇಳು ಮಂದಿಯು.
- 2 Samuel 3:17–18 2 ಸಮುವೇಲನು 3:17–18ಅಬ್ನೇರನು ಇಸ್ರಾಯೇಲಿನ ಹಿರಿಯರ ಸಂಗಡ ಮಾತನಾಡಿ--ದಾವೀದನು ನಿಮ್ಮ ಮೇಲೆ ಅರಸನಾಗಿ ರುವದಕ್ಕೆ ನೀವು ಕಳೆದ ಕಾಲದಲ್ಲಿ ಹುಡುಕುತ್ತಿದ್ದಿರಿ. ಆದರೆ ಈಗ ಅದನ್ನು ಮಾಡಿರಿ; ಯಾಕಂದರೆ--ನಾನು ನನ್ನ ಜನರಾದ ಇಸ್ರಾಯೇಲನ್ನು ಫಿಲಿಷ್ಟಿಯರ ವಶದಿಂದಲೂ ಅವರ ಎಲ್ಲಾ ಶತ್ರುಗಳ ವಶದಿಂದಲೂ ನನ್ನ ದಾಸನಾದ ದಾವೀದನ ಕೈಯಿಂದ ತಪ್ಪಿಸಿ ರಕ್ಷಿಸು ವೆನು ಎಂದು ಕರ್ತನು ದಾವೀದನ ವಿಷಯದಲ್ಲಿ ಹೇಳಿದ್ದಾನೆ ಅಂದನು.
- 1 Chronicles 12:38 1 ಪೂರ್ವಕಾಲವೃತ್ತಾಂತ 12:38ಯುದ್ಧಕ್ಕೆ ಸಿದ್ಧರಾದ ಈ ಸಮಸ್ತ ಸೈನಿಕರು ದಾವೀದನನ್ನು ಸಮಸ್ತ ಇಸ್ರಾಯೇಲ್ಯರ ಮೇಲೆ ಅರಸನಾಗ ಮಾಡಲು ಪೂರ್ಣಹೃದಯದಿಂದ ಹೆಬ್ರೋನಿಗೆ ಬಂದರು. ಇದಲ್ಲದೆ ಇಸ್ರಾಯೇಲಿ ನಲ್ಲಿದ್ದ ಮಿಕ್ಕಾದವರೆಲ್ಲರೂ ದಾವೀದನನ್ನು ಅರಸ ನಾಗ ಮಾಡಲು ಒಂದೇ ಹೃದಯವುಳ್ಳವರಾಗಿದ್ದರು.
- 1 Samuel 16:12–14 1 ಸಮುವೇಲನು 16:12–14ಆಗ ಇಷಯನು ಅವನನ್ನು ಕರೇಕಳುಹಿಸಿದನು. ಅವನು ಕೆಂಪಾದ ಮೈಬಣ್ಣದವನಾಗಿಯೂ ಸುಂದರ ಮುಖವುಳ್ಳವ ನಾಗಿಯೂ ನೋಟಕ್ಕೆ ಚೆಲುವಿಕೆಯುಳ್ಳವನಾಗಿಯೂ ಇದ್ದನು. ಆಗ ಕರ್ತನು ಸಮುವೇಲನಿಗೆ--ನೀನೆದ್ದು ಇವನನ್ನು ಅಭಿಷೇಕಿಸು; ಇವನೇ ಅವನು ಅಂದನು. ಸಮುವೇಲನು ಎಣ್ಣೆ ಇರುವ ಕೊಂಬನ್ನು ತಕ್ಕೊಂಡು ಅವನನ್ನು ಅವನ ಸಹೋದರರ ಮಧ್ಯದಲ್ಲಿ ಅಭಿಷೇಕ ಮಾಡಿದನು. ಆ ದಿವಸದಲ್ಲೇ ಕರ್ತನ ಆತ್ಮನು ದಾವೀದನ ಮೇಲೆ ಬಂದನು. ಸಮುವೇಲನು ಎದ್ದು ರಾಮಕ್ಕೆ ಹೋದನು. ಆದರೆ ಕರ್ತನ ಆತ್ಮನು ಸೌಲನನ್ನು ಬಿಟ್ಟು ಹೋದನು;
- 1 Samuel 16:1 1 ಸಮುವೇಲನು 16:1ಕರ್ತನು ಸಮುವೇಲನಿಗೆ--ಇಸ್ರಾಯೇ ಲಿನ ಅರಸನಾಗಿರದ ಹಾಗೆ ನಾನು ತಿರಸ್ಕರಿಸಿದ ಸೌಲನಿಗೋಸ್ಕರ ನೀನು ಎಷ್ಟರ ವರೆಗೆ ದುಃಖವುಳ್ಳವನಾಗಿರುವಿ? ನೀನು ನಿನ್ನ ಕೊಂಬನ್ನು ತೈಲದಿಂದ ತುಂಬಿಸಿಕೊಂಡು ಬಾ, ಬೇತ್ಲೆಹೇಮಿನ ವನಾದ ಇಷಯನ ಬಳಿಗೆ ನಿನ್ನನ್ನು ಕಳುಹಿಸುವೆನು; ಯಾಕಂದರೆ ನಾನು ಅವನ ಮಕ್ಕಳಲ್ಲಿ ಒಬ್ಬನನ್ನು ಅರಸನನ್ನಾಗಿ ಆದುಕೊಂಡೆನು ಅಂದನು.
- 2 Samuel 3:21 2 ಸಮುವೇಲನು 3:21ಆಗ ಅಬ್ನೇರನು ದಾವೀದನಿಗೆಎಲ್ಲಾ ಇಸ್ರಾಯೇಲ್ಯರು ನಿನ್ನ ಸಂಗಡ ಒಡಂಬಡಿಕೆ ಯನ್ನು ಮಾಡುವ ಹಾಗೆಯೂ ನಿನ್ನ ಪ್ರಾಣವು ಇಚ್ಚಿ ಸಿದ ಹಾಗೆ ಎಲ್ಲರ ಮೇಲೆ ಆಳುವ ಹಾಗೆಯೂ ನಾನು ಎದ್ದು ಹೋಗಿ ಎಲ್ಲಾ ಇಸ್ರಾಯೇಲ್ಯರನ್ನು ಅರಸನಾದ ನನ್ನ ಒಡೆಯನ ಬಳಿಗೆ ಕೂಡಿಸಿಕೊಂಡು ಬರುವೆನು ಅಂದನು. ದಾವೀದನು ಅಬ್ನೇರನಿಗೆ ಅಪ್ಪಣೆ ಕೊಟ್ಟದ್ದರಿಂದ ಅವನು ಸಮಾಧಾನವಾಗಿ ಹೋದನು.