1 Chronicles · chapter 18 · verse 13
1 Chronicles 18:13 in Kannada
ದಾವೀದನು ಎಲ್ಲಿ ಹೋದನೋ ಅಲ್ಲಿ ಕರ್ತನು ಅವನನ್ನು ರಕ್ಷಿಸಿದನು.
Daaveedanu elli hodano alli kartanu avanannu rakshisidanu.
1 Chronicles 18:13 in English
- King James Version (KJV)
- And he put garrisons in Edom; and all the Edomites became David’s servants. Thus the LORD preserved David whithersoever he went.
- World English Bible (WEB)
- He put garrisons in Edom; and all the Edomites became servants to David. The LORD gave victory to David wherever he went.
- American Standard Version (ASV)
- And he put garrisons in Edom; and all the Edomites became servants to David. And Jehovah gave victory to David whithersoever he went.
- Bible in Basic English (BBE)
- David put armed forces in all the towns of Edom; and all the Edomites became servants to David. The Lord made David overcome wherever he went.
- Darby Translation (DBY)
- And he put garrisons in Edom; and all they of Edom became servants to David. And Jehovah preserved David whithersoever he went.
- Webster's Bible (WBS)
- And he put garrisons in Edom; and all the Edomites became David's servants. Thus the LORD preserved David whithersoever he went.
- Young's Literal Translation (YLT)
- and he putteth in Edom garrisons, and all the Edomites are servants to David; and Jehovah saveth David whithersoever he hath gone.
Read in context
- 11ಇವುಗಳನ್ನು ಅರಸನಾದ ದಾವೀದನು ಎದೋಮ್ಯರು ಮೋವಾಬ್ಯರು ಅಮ್ಮೋನನ ಮಕ್ಕಳು ಫಿಲಿಷ್ಟಿಯರು ಅಮಾಲೇಕ್ಯರು ಎಂಬ ಸಕಲ ಜನಾಂಗಗಳ ಬಳಿಯಿಂದ ತೆಗೆದುಕೊಂಡು ಬಂದ ಬೆಳ್ಳಿ ಬಂಗಾರವನ್ನು ಕರ್ತನಿಗೆ ಪ್ರತಿಷ್ಠೆಮಾಡಿದನು.
- 12ಇದಲ್ಲದೆ, ಚೆರೂಯಳ ಮಗನಾದ ಅಬ್ಷೈಯು ಉಪ್ಪಿನ ತಗ್ಗಿನಲ್ಲಿ ಎದೋಮ್ಯರೊಳಗೆ ಹದಿನೆಂಟು ಸಾವಿರ ಮಂದಿಯನ್ನು ಕೊಂದು ಎದೋಮಿನಲ್ಲಿ ಠಾಣ ಗಳನ್ನು ಇಟ್ಟನು. ಎದೋಮ್ಯರೆಲ್ಲರೂ ದಾವೀದನ ಸೇವಕರಾದರು.
- 13ದಾವೀದನು ಎಲ್ಲಿ ಹೋದನೋ ಅಲ್ಲಿ ಕರ್ತನು ಅವನನ್ನು ರಕ್ಷಿಸಿದನು.
- 14ಹೀಗೆಯೇ ದಾವೀದನು ಸಮಸ್ತ ಇಸ್ರಾಯೇಲಿನ ಮೇಲೆ ಆಳುತ್ತಾ, ತನ್ನ ಸಮಸ್ತ ಜನರಿಗೆ ನ್ಯಾಯವನ್ನೂ ನೀತಿಯನ್ನೂ ನಡಿಸಿದನು.
- 15ಚೆರೂಯಳ ಮಗನಾದ ಯೋವಾಬನು ಸೈನ್ಯಾಧಿಪತಿಯಾಗಿದ್ದನು; ಅಹೀಲೂ ದನ ಮಗನಾದ ಯೆಹೋಷಾಫಾಟನು ಲೇಖಕ ನಾಗಿದ್ದನು.
Cross references
- 1 Chronicles 18:6 1 ಪೂರ್ವಕಾಲವೃತ್ತಾಂತ 18:6ದಾವೀದನು ದಮಸ್ಕದ ಅರಾಮಿನಲ್ಲಿ ಠಾಣಗಳನ್ನು ಇಟ್ಟನು. ಅರಾಮ್ಯರು ದಾವೀದನಿಗೆ ಸೇವಕರಾಗಿ ಕಪ್ಪ ವನ್ನು ಕೊಡುವವರಾದರು. ದಾವೀದನು ಹೋದ ಸ್ಥಳಗಳಲ್ಲೆಲ್ಲಾ ಕರ್ತನು ಅವನನ್ನು ರಕ್ಷಿಸಿದನು.
- Psalm 144:10 ಕೀರ್ತನೆಗಳು 144:10ಅರಸುಗಳಿಗೆ ರಕ್ಷಣೆಯನ್ನು ಕೊಡು ವಾತನೇ, ನಿನ್ನ ಸೇವಕನಾದ ದಾವೀದನನ್ನು ಕೇಡಿನ ಕತ್ತಿಯಿಂದ ತಪ್ಪಿಸುವಾತನೇ,
- 2 Samuel 7:14–17 2 ಸಮುವೇಲನು 7:14–17ಅವನು ಕೆಟ್ಟತನ ಮಾಡಿದರೆ ನಾನು ಅವನನ್ನು ಮನುಷ್ಯರ ಕೋಲಿನಿಂದಲೂ ಮನುಷ್ಯರ ಮಕ್ಕಳ ಪೆಟ್ಟುಗಳಿಂದಲೂ ದಂಡಿಸುವೆನು. ಆದರೆ ನಾನು ನಿನ್ನ ಮುಂದೆ ತೊರೆದುಬಿಟ್ಟ ಸೌಲ ನಿಂದ ನನ್ನ ಕೃಪೆಯನ್ನು ನಾನು ತೊಲಗಿಸಿದ ಹಾಗೆ ಅವನಿಂದ ತೊಲಗಿಸುವದಿಲ್ಲ. ನಿನ್ನ ಮನೆಯೂ ನಿನ್ನ ರಾಜ್ಯವೂ ನಿನ್ನ ಮುಂದೆ ಸದಾಕಾಲಕ್ಕೂ ಸ್ಥಿರಮಾಡಲ್ಪಡುವವು; ನಿನ್ನ ಸಿಂಹಾಸನವು ಯುಗ ಯುಗಾಂತರಕ್ಕೂ ಶಾಶ್ವತವಾಗಿರುವದು ಎಂದು ಹೇಳಿ ದನು. ನಾತಾನನು ಈ ಸಕಲ ವಾಕ್ಯಗಳ ಪ್ರಕಾರ ವಾಗಿಯೂ ಸಕಲ ದರ್ಶನದ ಪ್ರಕಾರವಾಗಿಯೂ ದಾವೀದನ ಸಂಗಡ ಮಾತನಾಡಿದನು.
- Psalm 18:48–50 ಕೀರ್ತನೆಗಳು 18:48–50ನನ್ನ ಶತ್ರುಗಳಿಂದ ನನ್ನನ್ನು ತಪ್ಪಿಸುವನು; ಹೌದು, ನೀನು ನನ್ನ ಎದುರಾಳಿಗಳಿಂದ ತಪ್ಪಿಸಿ ನನ್ನನ್ನು ಮೇಲೆ ಎತ್ತುತ್ತೀ; ಬಲಾತ್ಕಾರ ಮಾಡುವವನಿಂದ ನನ್ನನ್ನು ಬಿಡಿಸಿದ್ದೀ. ಆದ್ದರಿಂದ ಓ ಕರ್ತನೇ, ಅನ್ಯಜನಾಂಗ ಗಳಲ್ಲಿ ನಿನಗೆ ಉಪಕಾರಸ್ತುತಿ ಮಾಡುತ್ತೇನೆ. ನಿನ್ನನ್ನು ಕೊಂಡಾಡಿ ನಿನ್ನ ಹೆಸರನ್ನು ಕೀರ್ತಿಸುವೆನು.ಆತನು ತನ್ನ ಅರಸನಿಗೆ ದೊಡ್ಡ ಬಿಡುಗಡೆಯನ್ನು ಕೊಟ್ಟು ತನ್ನ ಅಭಿಷಕ್ತನಾದ ದಾವೀದನಿಗೂ ಅವನ ಸಂತತಿಗೂ ಕೃಪೆಯನ್ನು ಎಂದೆಂದಿಗೂ ತೋರಿಸುತ್ತಾನೆ. ಆತನು ತನ್ನ ಅರಸನಿಗೆ ದೊಡ್ಡ ಬಿಡುಗಡೆಯನ್ನು ಕೊಟ್ಟು ತನ್ನ ಅಭಿಷಕ್ತನಾದ ದಾವೀದನಿಗೂ ಅವನ ಸಂತತಿಗೂ ಕೃಪೆಯನ್ನು ಎಂದೆಂದಿಗೂ ತೋರಿಸುತ್ತಾನೆ.
- Genesis 27:37 ಆದಿಕಾಂಡ 27:37ಇಸಾಕನು ಪ್ರತ್ಯುತ್ತರವಾಗಿ ಏಸಾವನಿಗೆ--ಇಗೋ, ಅವನನ್ನು ನಿನಗೆ ದೊರೆಯಾಗಿ ಇಟ್ಟು ಅವನ ಸಹೋದರರೆಲ್ಲರನ್ನೂ ಅವನಿಗೆ ಸೇವಕ ರನ್ನಾಗಿ ಕೊಟ್ಟು ಧಾನ್ಯದಿಂದಲೂ ದ್ರಾಕ್ಷಾರಸ ದಿಂದಲೂ ಅವನನ್ನು ಪೋಷಿಸಿದ್ದೇನೆ. ಈಗ ನನ್ನ ಮಗನೇ, ನಿನಗೆ ನಾನು ಏನು ಮಾಡಲಿ ಅಂದನು.
- Psalm 121:7 ಕೀರ್ತನೆಗಳು 121:7ಕರ್ತನು ಎಲ್ಲಾ ಕೇಡಿನಿಂದ ನಿನ್ನನೂ ನಿನ್ನ ಪ್ರಾಣವನ್ನೂ ಕಾಪಾಡುವನು.ಕರ್ತನು ನಿನ್ನ ಹೋಗೋಣವನ್ನೂ ಬರೋಣವನ್ನೂ ಇಂದಿನಿಂದ ಸದಾಕಾಲವೂ ಕಾಪಾಡುವನು.
- Genesis 25:23 ಆದಿಕಾಂಡ 25:23ಕರ್ತನು ಆಕೆಗೆ--ನಿನ್ನ ಹೊಟ್ಟೆಯಲ್ಲಿ ಎರಡು ಜನಾಂಗಗಳು ಇವೆ. ನಿನ್ನ ಗರ್ಭದೊಳಗಿನಿಂದಲೇ ಎರಡು ತರವಾದ ಜನಗಳು ಬೇರೆಬೇರೆಯಾಗುವರು. ಒಂದು ತರವಾದ ಜನಕ್ಕಿಂತ ಇನ್ನೊಂದು ಬಲಗೊಳ್ಳು ವದು. ಇದಲ್ಲದೆ ಹಿರಿಯನು ಕಿರಿಯನನ್ನು ಸೇವಿಸುವನು ಎಂದು ಹೇಳಿದನು.
- 2 Corinthians 11:32 2 ಕೊರಿಂಥದವರಿಗೆ 11:32ದಮಸ್ಕದಲ್ಲಿ ಅರಸನಾದ ಅರೇತನ ಅಧೀನದಲ್ಲಿದ್ದ ಅಧಿಪತಿಯು ನನ್ನನ್ನು ಹಿಡಿಯಬೇಕೆಂದು ದಮಸ್ಕದವರ ಪಟ್ಟಣವನ್ನು ಸೈನ್ಯದೊಂದಿಗೆ ಕಾಯುತ್ತಿದ್ದನು.ಆಗ ನಾನು ಒಂದು ಕಲ್ಲಿಯಲ್ಲಿ ಕೂತು ಗೋಡೆಯಲ್ಲಿದ್ದ ಕಿಟಕಿ ಯೊಳಗಿಂದ ಇಳಿಸಲ್ಪಟ್ಟು ಅವನ ಕೈಯಿಂದ ತಪ್ಪಿಸಿಕೊಂಡೆನು.
- Numbers 24:18 ಅರಣ್ಯಕಾಂಡ 24:18ಎದೋಮು ಸ್ವಾಸ್ತ್ಯವಾಗುವದು; ಸೇಯಾರು ತನ್ನ ಶತ್ರುಗಳಿಗೆ ಸ್ವಾಸ್ತ್ಯವಾಗುವದು; ಮತ್ತು ಇಸ್ರಾಯೇಲು ಪರಾಕ್ರಮ ಕಾರ್ಯ ಮಾಡುವದು,
- 1 Samuel 10:5 1 ಸಮುವೇಲನು 10:5ತರುವಾಯ ಫಿಲಿಷ್ಟಿಯರ ಠಾಣವಿರುವ ದೇವರ ಗುಡ್ಡಕ್ಕೆ ಹೋಗುವಿ. ಅಲ್ಲಿಂದ ನೀನು ಪಟ್ಟಣದಲ್ಲಿ ಪ್ರವೇಶಿಸುವಾಗ ನಿನಗೆದುರಾಗಿ ವೀಣೆ, ದಮ್ಮಡಿ, ಪಿಳ್ಳಂಗೋವಿ, ಕಿನ್ನರಿಗಳನ್ನು ತಮ್ಮ ಮುಂದೆ ಇಟ್ಟುಕೊಂಡವರಾಗಿ ಮೇಲಿನಿಂದ ಇಳಿದು ಬರುವ ಪ್ರವಾದಿಗಳ ಗುಂಪು ಬರುವದು. ಅವರು ಪ್ರವಾದಿಸುವರು.
- 1 Samuel 13:3 1 ಸಮುವೇಲನು 13:3ಯೋನಾತಾನನು ಗಿಬೆಯದಲ್ಲಿ ಫಿಲಿಷ್ಟಿಯರ ಠಾಣವನ್ನು ಹೊಡೆದನು; ಫಿಲಿಷ್ಟಿಯರಿಗೆ ಅದು ಕೇಳಿಬಂತು. ಆದದರಿಂದ ಸೌಲನು ದೇಶದಲ್ಲೆಲ್ಲಾ ಇಬ್ರಿಯರು ಕೇಳಲೆಂದು ತುತೂರಿಯನ್ನು ಊದಿಸಿದನು.
- Genesis 27:29 ಆದಿಕಾಂಡ 27:29ಜನಗಳು ನಿನ್ನನ್ನು ಸೇವಿಸಲಿ, ಜನಾಂಗಗಳು ನಿನಗೆ ಅಡ್ಡಬೀಳಲಿ, ನಿನ್ನ ಸಹೋದರರಿಗೆ ನೀನು ದೊರೆ ಯಾಗಿರು. ನಿನ್ನ ತಾಯಿಯ ಮಕ್ಕಳು ನಿನಗೆ ಅಡ್ಡಬೀಳಲಿ, ನಿನ್ನನ್ನು ಶಪಿಸುವವರಿಗೆ ಶಾಪವೂ ಆಶೀರ್ವದಿಸುವ ವರಿಗೆ ಆಶೀರ್ವಾದವೂ ಆಗಲಿ ಅಂದನು.