1 Chronicles · chapter 19 · verse 14
1 Chronicles 19:14 in Kannada
ಆಗ ಯೋವಾಬನೂ ಅವನ ಸಂಗಡ ಇದ್ದ ಜನರೂ ಅರಾಮ್ಯರ ಮೇಲೆ ಯುದ್ಧ ಮಾಡಲು ಮುಂಗೊಂಡರು.
Aaga yovaabanoo avana sangada idda janaroo araamyara mele yuddha maadalu mungondaru.
1 Chronicles 19:14 in English
- King James Version (KJV)
- So Joab and the people that [were] with him drew nigh before the Syrians unto the battle; and they fled before him.
- World English Bible (WEB)
- So Joab and the people who were with him came near to the front of the Syrians to the battle; and they fled before him.
- American Standard Version (ASV)
- So Joab and the people that were with him drew nigh before the Syrians unto the battle; and they fled before him.
- Bible in Basic English (BBE)
- So Joab and the people who were with him went forward into the fight against the Aramaeans, and they went in flight before him.
- Darby Translation (DBY)
- And Joab and the people that were with him drew near in front of the Syrians to the battle; and they fled before him.
- Webster's Bible (WBS)
- So Joab and the people that [were] with him drew nigh before the Syrians to the battle; and they fled before him.
- Young's Literal Translation (YLT)
- And Joab draweth nigh, and the people who [are] with him, before Aram to battle, and they flee from his face;
Read in context
- 12ಅರಾಮ್ಯರು ನನಗಿಂತ ಬಲವುಳ್ಳವರಾಗಿದ್ದರೆ ನೀನು ನನಗೆ ಸಹಾಯ ಮಾಡಬೇಕು; ಅಮ್ಮೋನಿಯರು ನಿನಗಿಂತ ಬಲವುಳ್ಳ ವರಾಗಿದ್ದರೆ, ನಾನು ನಿನಗೆ ಸಹಾಯ ಮಾಡುವೆನು,
- 13ಧೈರ್ಯವಾಗಿರು; ನಾವು ನಮ್ಮ ಜನರಿಗೋಸ್ಕ ರವೂ ನಮ್ಮ ದೇವರ ಪಟ್ಟಣಗಳಿಗೋಸ್ಕರವೂ ಬಲ ಗೊಳ್ಳೋಣ. ಕರ್ತನು ತನ್ನ ದೃಷ್ಟಿಗೆ ಉತ್ತಮವಾದದ್ದನ್ನು ಮಾಡಲಿ ಅಂದನು.
- 14ಆಗ ಯೋವಾಬನೂ ಅವನ ಸಂಗಡ ಇದ್ದ ಜನರೂ ಅರಾಮ್ಯರ ಮೇಲೆ ಯುದ್ಧ ಮಾಡಲು ಮುಂಗೊಂಡರು.
- 15ಅವರು ಅವನ ಎದುರಿ ನಿಂದ ಓಡಿಹೋದರು. ಅರಾಮ್ಯರು ಓಡಿಹೋದದ್ದನ್ನು ಅಮ್ಮೋನಿಯರು ನೋಡಿದಾಗ ಅವರು ಹಾಗೆಯೇ ಅವನ ಸಹೋದರನಾದ ಅಬ್ಷೈನ ಎದುರಿನಿಂದ ಓಡಿಹೋಗಿ ಪಟ್ಟಣದೊಳಗೆ ಪ್ರವೇಶಿಸಿದರು. ಆಗ ಯೋವಾಬನು ಯೆರೂಸಲೇಮಿಗೆ ಬಂದನು.
- 16ಅರಾಮ್ಯರು ತಾವು ಇಸ್ರಾಯೇಲಿನ ಮುಂದೆ ಸೋತುಹೋದದ್ದನ್ನು ಕಂಡಾಗ ಅವರು ದೂತರನ್ನು ಕಳುಹಿಸಿ ನದಿಯ ಆಚೆಯಲ್ಲಿರುವ ಅರಾಮ್ಯ ರನ್ನು ಕರಕೊಂಡರು. ಹದರೆಜರನ ಸೈನ್ಯಾಧಿಪತಿ ಯಾದ ಶೋಫಕನು ಅವರ ಮೇಲೆ ಇದ್ದನು.
Cross references
- 1 Kings 20:28–30 1 ಅರಸುಗಳು 20:28–30ಆಗ ದೇವರ ಮನುಷ್ಯನೊಬ್ಬನು ಬಂದು ಇಸ್ರಾ ಯೇಲಿನ ಅರಸನಿಗೆ--ಕರ್ತನು ತಗ್ಗುಗಳ ದೇವರಾ ಗಿರದೆ ಪರ್ವತಗಳ ದೇವರಾಗಿದ್ದಾನೆಂಬದಾಗಿ ಅರಾ ಮ್ಯರು ಹೇಳಿದ್ದರಿಂದ ನಾನು ಕರ್ತನಾಗಿದ್ದೇನೆಂದು ನೀವು ತಿಳಿಯುವ ಹಾಗೆ ಆ ದೊಡ್ಡ ಸಮೂಹವನ್ನೆಲ್ಲಾ ನಿನ್ನ ಕೈಯಲ್ಲಿ ಒಪ್ಪಿಸುವೆನೆಂದು ಕರ್ತನು ಹೇಳುತ್ತಾನೆ ಅಂದನು. ಏಳು ದಿವಸ ಇವರು ಅವರಿಗೆ ಎದುರಾಗಿ ದಂಡಿಳಿದಿದ್ದರು. ಆದರೆ ಏಳನೇ ದಿವಸದಲ್ಲಿ ಯುದ್ಧಕ್ಕೆ ಕೂಡಿದಾಗ ಇಸ್ರಾಯೇಲಿನ ಮಕ್ಕಳು ಅರಾಮ್ಯದಲ್ಲಿ ಲಕ್ಷ ಕಾಲ್ಬಲವನ್ನು ಒಂದೇ ದಿವಸದಲ್ಲಿ ಸಂಹರಿಸಿದರು. ಮಿಕ್ಕಾದವರು ಅಫೇಕ್ ಪಟ್ಟಣದೊಳಗೆ ಓಡಿ ಹೋದರು. ಅಲ್ಲಿ ಒಂದು ಗೋಡೆಯು ಉಳಿದ ಇಪ್ಪತ್ತೇಳು ಸಾವಿರ ಮಂದಿಯ ಮೇಲೆ ಬಿತ್ತು. ಆದರೆ ಬೆನ್ಹದದನು ಪಟ್ಟಣಕ್ಕೆ ಓಡಿಬಂದು ಕೊಠಡಿಯ ಒಳ ಕೊಠಡಿಯಲ್ಲಿ ಬಚ್ಚಿಟ್ಟುಕೊಂಡನು.
- 1 Kings 20:19–21 1 ಅರಸುಗಳು 20:19–21ಪ್ರಾಂತಗಳ ಪ್ರಧಾನರ ಯೌವನಸ್ಥರೂ ಅವರ ಹಿಂದೆ ಬಂದ ಸೈನಿಕರೂ ಪಟ್ಟಣದಿಂದ ಹೊರಗೆ ಬಂದಾಗ ಪ್ರತಿ ಮನುಷ್ಯನು ತನಗೆ ಎದುರು ಬಿದ್ದವರನ್ನು ಕೊಂದುಹಾಕಿದನು. ಆಗ ಅರಾಮ್ಯರು ಓಡಿಹೋದರು; ಇಸ್ರಾಯೇಲ್ಯರು ಅವರನ್ನು ಹಿಂದಟ್ಟಿದರು; ಅರಾಮಿನ ಅರಸನಾದ ಬೆನ್ಹದದನು ಕುದುರೆ ಹತ್ತಿಕೊಂಡು ಕುದುರೆ ರಾಹುತರ ಸಂಗಡ ತಪ್ಪಿಸಿಕೊಂಡನು. ಇದಲ್ಲದೆ ಇಸ್ರಾಯೇಲಿನ ಅರಸನು ಹೊರಟು ಕುದುರೆಗಳನ್ನೂ ರಥಗಳನ್ನೂ ಹೊಡೆದು ರಾಮ್ಯರನ್ನು ಮಹಾ ಸಂಹಾರದಿಂದ ಹೊಡೆದುಬಿಟ್ಟನು.
- 2 Chronicles 13:5–16 2 ಪೂರ್ವಕಾಲವೃತ್ತಾಂತ 13:5–16ಇಸ್ರಾಯೇಲಿನ ದೇವರಾದ ಕರ್ತನು ಇಸ್ರಾ ಯೇಲಿನ ಮೇಲೆ ರಾಜ್ಯವನ್ನು ಎಂದೆಂದಿಗೂ ದಾವೀ ದನಿಗೆ, ಅವನಿಗೂ ಅವನ ಮಕ್ಕಳಿಗೂ ಉಪ್ಪಿನ ಒಡಂಬಡಿಕೆಯಿಂದ ಕೊಟ್ಟನೆಂದು ನೀವು ತಿಳಿಯ ತಕ್ಕ ದ್ದಲ್ಲವೋ? ಆದರೆ ದಾವೀದನ ಮಗನಾದ ಸೊಲೊ ಮೋನನ ಸೇವಕನಾಗಿದ್ದ ನೆಬಾಟನ ಮಗನಾದ ಯಾರೋಬ್ಬಾಮನು ಎದ್ದು ತನ್ನ ಯಜಮಾನನ ಮೇ ತಿರುಗಿಬಿದ್ದಿದ್ದಾನೆ. ಇದಲ್ಲದೆ ನಿಷ್ಪ್ರಯೋಜಕರಾದ ಬೆಲಿಯಾಳನ ಮಕ್ಕಳು ಅವನ ಬಳಿಗೆ ಕೂಡಿ ಬಂದು ಸೊಲೊಮೋನನ ಮಗನಾದ ರೆಹಬ್ಬಾಮನು ಹುಡುಗ ನಾಗಿಯೂ ಮೃದು ಹೃದಯವುಳ್ಳವನಾಗಿಯೂ ಅವ ರನ್ನು ಎದುರಿಸಲು ಬಲವಿಲ್ಲದೆ ಇರುವಾಗ ಅವ ನಿಗೆ ವಿರೋಧವಾಗಿ ತಮ್ಮನ್ನು ಬಲಪಡಿಸಿಕೊಂಡಿ ದ್ದಾರೆ. ಈಗ ದಾವೀದನ ಕುಮಾರರ ಕೈಯಲ್ಲಿರುವ ಕರ್ತನ ರಾಜ್ಯವನ್ನು ಎದುರಿಸುತ್ತೇವೆಂದು ನೀವು ಹೇಳಿ ಕೊಳ್ಳುತ್ತೀರಿ. ಇದಲ್ಲದೆ ನೀವು ಬಹು ಗುಂಪಾಗಿದ್ದೀರಿ. ಯಾರೋಬ್ಬಾಮನು ದೇವರುಗಳಾಗಿ ನಿಮಗೆ ಮಾಡಿದ ಬಂಗಾರದ ಕರುಗಳು ನಿಮ್ಮಲ್ಲಿ ಉಂಟು. ನೀವು ಆರೋನನ ಮಕ್ಕಳಾದ ಕರ್ತನ ಯಾಜಕರನ್ನೂ ಲೇವಿ ಯರನ್ನೂ ತಳ್ಳಿ ಹಾಕಿ ದೇಶಗಳ ಜನರ ಹಾಗೆ ನಿಮಗೆ ಯಾಜಕರನ್ನು ಮಾಡಲಿಲ್ಲವೋ? ಯಾವನಾದರೂ ಒಂದು ಎಳೇ ಹೋರಿಯನ್ನೂ ಏಳು ಟಗರುಗಳನ್ನೂ ತಕ್ಕೊಂಡು ಬಂದು ತನ್ನನ್ನು ಪ್ರತಿಷ್ಠೆಮಾಡಿದರೆ ಅವನು ದೇವರಲ್ಲದವುಗಳಿಗೆ ಯಾಜಕನಾಗಿರುವನು. ನಮಗಾದರೋ ಕರ್ತನು ನಮ್ಮ ದೇವರಾಗಿದ್ದಾನೆ; ನಾವು ಆತನನ್ನು ಬಿಡಲಿಲ್ಲ. ಇದಲ್ಲದೆ ಕರ್ತನಿಗೆ ಸೇವೆಮಾಡುವ ಯಾಜಕರು ಆರೋನನ ಮಕ್ಕಳು; ಲೇವಿಯರು ತಮ್ಮ ಕೆಲಸದಲ್ಲಿ ಇದ್ದಾರೆ. ಅವರು ಪ್ರತಿ ಉದಯದಲ್ಲಿಯೂ ಸಾಯಂಕಾಲದಲ್ಲಿಯೂ ಕರ್ತನಿಗೆ ದಹನಬಲಿಗಳನ್ನೂ ಸುಗಂಧ ಧೂಪವನ್ನೂ ಸುಡುತ್ತಾರೆ. ಇದಲ್ಲದೆ ಪರಿಶುದ್ಧ ಮೇಜಿನ ಮೇಲೆ ರೊಟ್ಟಿಗಳನ್ನು ಇಡುವದುಂಟು; ಪ್ರತಿ ಸಾಯಂಕಾಲ ದಲ್ಲಿ ಬಂಗಾರದ ದೀಪಸ್ಥಂಭವನ್ನೂ ಅದರ ದೀಪ ಗಳನ್ನೂ ಸಿದ್ಧಮಾಡಿ ಹಚ್ಚುತ್ತಾರೆ. ನಾವು ನಮ್ಮ ದೇವರಾದ ಕರ್ತನ ಕಟ್ಟಳೆಯನ್ನು ಕೈಕೊಳ್ಳುತ್ತೇವೆ; ಆದರೆ ನೀವು ಆತನನ್ನು ಬಿಟ್ಟಿದ್ದೀರಿ. ಇಗೋ, ದೇವರು ತಾನೇ ಅಧಿಪತಿಯಾಗಿ ನಮ್ಮ ಸಂಗಡ ಇದ್ದಾನೆ. ಇದಲ್ಲದೆ ನಿಮಗೆ ವಿರೋಧವಾಗಿ ಜಯಧ್ವನಿ ಮಾಡುವ ತುತೂರಿಗಳನ್ನು ಹಿಡುಕೊಂಡ ಆತನ ಯಾಜಕರು ಇದ್ದಾರೆ. ಇಸ್ರಾಯೇಲಿನ ಮಕ್ಕಳೇ, ನೀವು ನಿಮ್ಮ ಪಿತೃಗಳ ದೇವರಾದ ಕರ್ತನಿಗೆ ವಿರೋಧ ವಾಗಿ ಯುದ್ಧಮಾಡಬೇಡಿರಿ, ನೀವು ಜಯ ಹೊಂದು ವದಿಲ್ಲ ಅಂದನು. ಆದರೆ ಯಾರೊಬ್ಬಾಮನು ಅಡಗಿಕೊಂಡವರನ್ನು ಸುತ್ತಲೂ ಅವರ ಹಿಂದೆಯೂ ಬರಮಾಡಿದನು. ಆದದರಿಂದ ಅವರು ಯೆಹೂದ ದವರ ಮುಂದೆಯೂ ಅಡಗಿಕೊಂಡವರು ಅವರ ಹಿಂದೆಯೂ ಇದ್ದರು. ಯೆಹೂದದವರು ಹಿಂದಕ್ಕೆ ನೋಡಿದಾಗ ಇಗೋ, ಯುದ್ಧವು ಅವರ ಮುಂದೆಯೂ ಹಿಂದೆಯೂ ಇತ್ತು. ಆಗ ಅವರು ಕರ್ತನಿಗೆ ಕೂಗಿದರು, ಯಾಜಕರು ತುತೂರಿಗಳನ್ನು ಊದಿದರು. ಇದಲ್ಲದೆ ಯೆಹೂದದ ಮನುಷ್ಯರು ಆರ್ಭಟಿಸಿದರು; ಯೆಹೂದದ ಮನುಷ್ಯರು ಆರ್ಭಟಿ ಸಿದಾಗ ಏನಾಯಿತಂದರೆ, ದೇವರು ಅಬೀಯನ ಮತ್ತು ಯೆಹೂದದವರ ಮುಂದೆ ಯಾರೊಬ್ಬಾಮ ನನ್ನೂ ಸಮಸ್ತ ಇಸ್ರಾಯೇಲನ್ನೂ ಹೊಡೆದನು. ಇಸ್ರಾಯೇಲಿನ ಮಕ್ಕಳು ಯೆಹೂದದವರ ಎದುರಿ ನಿಂದ ಓಡಿಹೋದರು. ದೇವರು ಅವರನ್ನು ಅವರ ಕೈಯಲ್ಲಿ ಒಪ್ಪಿಸಿದನು.
- Jeremiah 46:15–16 ಯೆರೆಮೀಯ 46:15–16ನಿನ್ನ ಬಲಿಷ್ಠರು ಯಾಕೆ ಬಡಕೊಂಡು ಹೋಗಿದ್ದಾರೆ? ಕರ್ತನು ಅವರನ್ನು ಓಡಿಸಿದ್ದದರಿಂದ ಅವರು ನಿಲ್ಲಲಿಲ್ಲ. ಅನೇಕರನ್ನು ಎಡವುವಂತೆ ಮಾಡಿದನು. ಹೌದು, ಒಬ್ಬರ ಮೇಲೊ ಬ್ಬರು ಬಿದ್ದರು; ಅವರು--ಏಳು ಉಪದ್ರಪಡಿಸುವ ಕತ್ತಿಯನ್ನು ಬಿಟ್ಟು, ಸ್ವಂತ ಜನರ ಬಳಿಗೂ ನಾವು ಹುಟ್ಟಿದ ದೇಶದ ಬಳಿಗೂ ತಿರುಗಿ ಹೋಗೋಣ ಎಂದು ಹೇಳಿದರು.
- 1 Kings 20:13 1 ಅರಸುಗಳು 20:13ಆಗ ಇಗೋ, ಒಬ್ಬ ಪ್ರವಾದಿಯು ಇಸ್ರಾಯೇ ಲಿನ ಅರಸನಾದ ಅಹಾಬನ ಬಳಿಗೆ ಬಂದು--ಈ ದೊಡ್ಡ ಗುಂಪನ್ನು ನೋಡಿದಿಯೋ? ಇಗೋ, ನಾನೇ ಕರ್ತನೆಂದು ನೀನು ತಿಳಿಯುವ ಹಾಗೆ ಈ ಹೊತ್ತು ಅದನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಡುವೆನೆಂದು ಕರ್ತನು ಹೇಳುತ್ತಾನೆ ಅಂದನು.