1 Chronicles · chapter 23 · verse 29
1 Chronicles 23:29 in Kannada
ಕರ್ತನ ಮಂದಿರದ ಸೇವೆಯ ಕಾರ್ಯದಲ್ಲಿ ಸಮ್ಮುಖದ ರೊಟ್ಟಿ ಅರ್ಪಣೆ ಬಲಿಯ ನಯವಾದ ಹಿಟ್ಟು ಹುಳಿ ಇಲ್ಲದ ರೊಟ್ಟಿ ಬಾಂಡ್ಲಿಯಲ್ಲಿ ಮಾಡಿದ್ದ ಎಣ್ಣೆಯಲ್ಲಿ ಕರಿದಿದ್ದಕ್ಕೋಸ್ಕರವೂ ಸಮಸ್ತ ವಿವಿಧ ಅಳತೆಗೋಸ್ಕರವೂ ಆರೋನನ ಮಕ್ಕಳಿಗೆ ನೇಮಕವಾಗಿತ್ತು.
Kartana mandirada seveya kaaryadalli sammukhada rotti arpane baliya nayavaada hittu huli illada rotti baandliyalli maadidda enneyalli karididdakkoskaravoo samasta vividha alategoskaravoo aaronana makkalige nemakavaagittu.
1 Chronicles 23:29 in English
- King James Version (KJV)
- Both for the shewbread, and for the fine flour for meat offering, and for the unleavened cakes, and for [that which is baked in] the pan, and for that which is fried, and for all manner of measure and size;
- World English Bible (WEB)
- for the show bread also, and for the fine flour for a meal offering, whether of unleavened wafers, or of that which is baked in the pan, or of that which is soaked, and for all measurements of quantity and size;
- American Standard Version (ASV)
- for the showbread also, and for the fine flour for a meal-offering, whether of unleavened wafers, or of that which is baked in the pan, or of that which is soaked, and for all manner of measure and size;
- Bible in Basic English (BBE)
- The holy bread was in their care, and the crushed grain for the meal offering, of unleavened cakes or meal cooked over the fire or in water; they had control of all sorts of weights and measures;
- Darby Translation (DBY)
- and for the loaves to be set in rows, and for the fine flour for the oblation, and for the unleavened cakes, and for [what is baked in] the pan, and for that which is saturated [with oil], and for all measure of capacity and size;
- Webster's Bible (WBS)
- Both for the show-bread, and for the fine flour for meat-offering, and for the unleavened cakes, and for [that which is baked in] the pan, and for that which is fried, and for all manner of measure and size;
- Young's Literal Translation (YLT)
- and for the bread of the arrangement, and for fine flour for present, and for the thin unleavened cakes, and for [the work of] the pan, and for that which is fried, and for all [liquid] measure and [solid] measure;
Read in context
- 27ದಾವೀದನ ಕಡೇಮಾತುಗಳ ಪ್ರಕಾರ ಲೇವಿಯರು ಇಪ್ಪತ್ತುವರುಷ ಮೊದಲುಗೊಂಡು ಅದಕ್ಕೆ ಮೇಲ್ಪಟ್ಟ ಪ್ರಾಯದವರು ಲೆಕ್ಕಿಸಲ್ಪಟ್ಟಿದ್ದರು.
- 28ಕರ್ತನ ಮನೆಯ ಸೇವೆಗೋಸ್ಕರ ಅಂಗಳಗಳಲ್ಲಿಯೂ ಕೊಠಡಿಗಳ ಲ್ಲಿಯೂ ಸಮಸ್ತ ಪರಿಶುದ್ಧವಾದವುಗಳನ್ನು ಪರಿಶುದ್ಧ ಮಾಡುವದರಲ್ಲಿಯೂ
- 29ಕರ್ತನ ಮಂದಿರದ ಸೇವೆಯ ಕಾರ್ಯದಲ್ಲಿ ಸಮ್ಮುಖದ ರೊಟ್ಟಿ ಅರ್ಪಣೆ ಬಲಿಯ ನಯವಾದ ಹಿಟ್ಟು ಹುಳಿ ಇಲ್ಲದ ರೊಟ್ಟಿ ಬಾಂಡ್ಲಿಯಲ್ಲಿ ಮಾಡಿದ್ದ ಎಣ್ಣೆಯಲ್ಲಿ ಕರಿದಿದ್ದಕ್ಕೋಸ್ಕರವೂ ಸಮಸ್ತ ವಿವಿಧ ಅಳತೆಗೋಸ್ಕರವೂ ಆರೋನನ ಮಕ್ಕಳಿಗೆ ನೇಮಕವಾಗಿತ್ತು.
- 30ಇದಲ್ಲದೆ ಉದಯಕಾಲದ ಲ್ಲಿಯೂ ಸಾಯಂಕಾಲದಲ್ಲಿಯೂ ನಿಂತು ಕರ್ತನನ್ನು ಕೊಂಡಾಡುವದಕ್ಕೂ ಸ್ತುತಿಸುವದಕ್ಕೂ ಕರ್ತನ ಮುಂದೆ ನಿರಂತರವಾಗಿ ಅವರಿಗೆ ಆಜ್ಞಾಪಿಸಿದ
- 31ಕಟ್ಟಳೆಯ ಪ್ರಕಾರವಾಗಿ ಸಬ್ಬತ್ ದಿವಸಗಳಲ್ಲಿಯೂ ಅಮವಾಸ್ಯೆ ಗಳಲ್ಲಿಯೂ ನೇಮಕವಾದ ಹಬ್ಬಗಳಲ್ಲಿಯೂ ಲೆಕ್ಕದ ಪ್ರಕಾರ ಎಲ್ಲಾ ದಹನಬಲಿಗಳನ್ನು ಅರ್ಪಿಸುವದಕ್ಕೂಕರ್ತನ ಮನೆಯ ಸೇವೆಯಲ್ಲಿ ಸಭೆಯ ಗುಡಾರದ ಕಾವಲಿಯನ್ನೂ ಪರಿಶುದ್ಧಸ್ಥಾನದ ಕಾವಲಿಯನ್ನೂ ತಮ್ಮ ಸಹೋದರರಾದ ಆರೋನನ ಕುಮಾರರ ಆಜ್ಞೆಯನ್ನೂ ಕೈಕೊಳ್ಳುವದಕ್ಕೆ ಅವರಿಗೆ ನೇಮಕವಾಗಿತ್ತು.
Cross references
- Leviticus 19:35–36 ಯಾಜಕಕಾಂಡ 19:35–36ನ್ಯಾಯವಿಚಾರಣೆ, ತೂಕ, ಅಳತೆ, ಪರಿಮಾಣ ಇವುಗಳಲ್ಲಿ ನೀವು ಅನ್ಯಾಯ ಮಾಡಬೇಡಿರಿ. ನ್ಯಾಯದತ್ರಾಸು, ನ್ಯಾಯದ ಕಲ್ಲುಗಳು, ನ್ಯಾಯದಎಫವು ಮತ್ತು ನ್ಯಾಯದಹೀನ್ ನಿಮಗಿರಬೇಕು. ಐಗುಪ್ತದೇಶದೊಳಗಿಂದ ನಿಮ್ಮನ್ನು ಹೊರಗೆ ತಂದ ನಿಮ್ಮ ದೇವರಾದ ಕರ್ತನು ನಾನೇ.ಆದದರಿಂದ ನನ್ನ ಎಲ್ಲಾ ನಿಯಮಗಳನ್ನೂ ನ್ಯಾಯ ಗಳನ್ನೂ ಕೈಕೊಂಡು ಅವುಗಳನ್ನು ಮಾಡಬೇಕು; ನಾನೇ ಕರ್ತನು ಎಂದು ಹೇಳಿದನು.
- Leviticus 24:5–9 ಯಾಜಕಕಾಂಡ 24:5–9ನೀನು ನಯವಾದ ಹಿಟ್ಟನ್ನು ತೆಗೆದುಕೊಂಡು ಹನ್ನೆರಡು ರೊಟ್ಟಿಗಳನ್ನು ಸುಡಬೇಕು; ಹತ್ತರಲ್ಲಿ ಎರಡು ಪಾಲು ಒಂದು ರೊಟ್ಟಿಯಲ್ಲಿ ಇರಬೇಕು. ಅವುಗಳನ್ನು ಶುದ್ಧವಾದ ಮೇಜಿನ ಮೇಲೆ ಕರ್ತನ ಸನ್ನಿಧಿಯಲ್ಲಿ ಒಂದು ಸಾಲಿನಲ್ಲಿ ಆರರಂತೆ ಎರಡು ಸಾಲುಗಳನ್ನಾಗಿ ಇಡಬೇಕು. ರೊಟ್ಟಿಯ ಮೇಲೆ ಅದು ಜ್ಞಾಪಕಾರ್ಥವಾ ಗಿರುವಂತೆಯೂ ಬೆಂಕಿಯ ಮೂಲಕ ಕರ್ತನಿಗೆ ಸಮ ರ್ಪಣೆಯಾಗುವಂತೆಯೂ ಪ್ರತಿಯೊಂದು ಸಾಲಿನ ಮೇಲೆ ಶುದ್ಧವಾದ ಸಾಂಬ್ರಾಣಿಯನ್ನು ಹಾಕಬೇಕು. ಪ್ರತಿಯೊಂದು ಸಬ್ಬತ್ತಿನಲ್ಲಿ ಕರ್ತನ ಎದುರಿನಲ್ಲಿ ಯಾವಾಗಲೂ ಅವನು ಅದನ್ನು ಕ್ರಮ ಪಡಿಸಬೇಕು; ಇದು ಇಸ್ರಾಯೇಲ್ ಮಕ್ಕಳ ಕಡೆಯಿಂದ ನಿತ್ಯವಾದ ಒಡಂಬಡಿಕೆಯಾಗಿರಬೇಕು. ಅದು ಆರೋನನ ಮತ್ತು ಅವನ ಕುಮಾರರದ್ದಾಗಿರಬೇಕು; ಅವರು ಅದನ್ನು ಪರಿಶುದ್ಧವಾದ ಸ್ಥಳದಲ್ಲಿ ತಿನ್ನಬೇಕು; ಅದು ನಿತ್ಯವಾದ ನಿಯಮವಾಗಿ ಕರ್ತನಿಗೆ ಬೆಂಕಿಯಿಂದ ಮಾಡಿ ಸಮರ್ಪಿಸುವವುಗಳಲ್ಲಿ ಅವನಿಗೆ ಅತಿ ಪರಿಶುದ್ಧವಾಗಿರುವದು.
- Leviticus 6:20–23 ಯಾಜಕಕಾಂಡ 6:20–23ಆರೋನನೂ ಅವನ ಕುಮಾರರೂ ಅಭಿಷಿಕ್ತರಾದ ದಿನದಲ್ಲಿ ಕರ್ತನಿಗೆ ಸಮರ್ಪಿಸಬೇಕಾದ ಬಲಿಯು ಇದೇ; ಒಂದು ಎಫದ ಹತ್ತನೆಯ ಭಾಗ ನಯವಾದ ಹಿಟ್ಟಿನಲ್ಲಿ ನಿರಂತರವಾಗಿರುವ ಆಹಾರ ಬಲಿಗಾಗಿ ಮುಂಜಾನೆ ಅದರಲ್ಲಿ ಅರ್ಧ ಭಾಗವನ್ನೂ ರಾತ್ರಿ ಅದರಲ್ಲಿ ಅರ್ಧ ಭಾಗವನ್ನೂ ಅರ್ಪಿಸಬೇಕು. ಅದನ್ನು ಒಂದು ಬೋಗುಣಿಯಲ್ಲಿ ಎಣ್ಣೆಯೊಂದಿಗೆ ಮಾಡಬೇಕು; ಅದು ಬೇಯಿಸಲ್ಪಟ್ಟಾಗ ನೀನು ಅದನ್ನು ಒಳಗೆ ತರಬೇಕು; ಬೇಯಿಸಲ್ಪಟ್ಟ ಆಹಾರ ಬಲಿಯ ತುಂಡುಗಳನ್ನು ನೀನು ಕರ್ತನಿಗೆ ಸುವಾಸನೆಗಾಗಿ ಸಮರ್ಪಿಸಬೇಕು. ಅವನ ಕುಮಾರರಲ್ಲಿ ಅವನಿಗೆ ಬದಲಾಗಿ ಅಭಿಷಿಕ್ತನಾದ ಯಾಜಕನು ಅದನ್ನು ಸಮರ್ಪಿಸಬೇಕು; ಇದು ಕರ್ತನಿಗಾಗಿ ನಿರಂತರವಾದ ಒಂದು ಕಟ್ಟಳೆಯಾಗಿದೆ; ಅದು ಸಂಪೂರ್ಣವಾಗಿ ಸುಡಲ್ಪಡಬೇಕು. ಯಾಜಕನಿಗಾಗಿರುವ ಪ್ರತಿ ಯೊಂದು ಆಹಾರ ಬಲಿ ಸಂಪೂರ್ಣವಾಗಿ ಸುಡಲ್ಪಡ ಬೇಕು; ಅದನ್ನು ತಿನ್ನಬಾರದು ಅಂದನು.
- Exodus 25:30 ವಿಮೋಚನಕಾಂಡ 25:30ಮೇಜಿನ ಮೇಲೆ ಸಮ್ಮುಖದ ರೊಟ್ಟಿಯನ್ನು ಯಾವಾಗಲೂ ನನ್ನ ಮುಂದೆ ಇಡಬೇಕು.
- Leviticus 2:4–7 ಯಾಜಕಕಾಂಡ 2:4–7ನೀನು ಒಲೆಯಲ್ಲಿ ಸುಟ್ಟ ಆಹಾರ ಸಮರ್ಪಣೆ ಯನ್ನು ಕಾಣಿಕೆಯಾಗಿ ತರುವದಾದರೆ ಅದು ಹುಳಿ ಯಿಲ್ಲದ್ದಾಗಿ ಎಣ್ಣೆಯಿಂದ ಬೆರೆಸಿದ ನಯವಾದ ಹಿಟ್ಟಿನ ರೊಟ್ಟಿಗಳು ಇಲ್ಲವೆ ಹುಳಿಯಿಲ್ಲದ ಎಣ್ಣೆ ಹೊಯ್ದ ದೋಸೆಗಳಾಗಿರಬೇಕು. ನಿನ್ನ ಕಾಣಿಕೆಯು ಬೋಗುಣಿ ಯಲ್ಲಿ ಬೇಯಿಸಿದ ಆಹಾರ ಸಮರ್ಪಣೆಯಾಗಿದ್ದರೆ ಅದು ಹುಳಿಯಿಲ್ಲದ ನಯವಾದ ಹಿಟ್ಟಿನಿಂದ ಎಣ್ಣೆ ಮಿಶ್ರಿತವಾದದ್ದು ಆಗಿರಬೇಕು. ನೀನು ಅದನ್ನು ತುಂಡುಗಳನ್ನಾಗಿ ವಿಭಾಗಿಸಿ ಅದರ ಮೇಲೆ ಎಣ್ಣೆ ಸುರಿಯಬೇಕು; ಅದು ಆಹಾರ ಸಮರ್ಪಣೆಯಾಗಿದೆ. ನಿನ್ನ ಕಾಣಿಕೆಯು ಬಾಂಡ್ಲೆಯಲ್ಲಿ ಬೇಯಿಸಿದ ಆಹಾರ ವಾಗಿದ್ದರೆ ಅದು ನಯವಾದ ಎಣ್ಣೆಯಿಂದ ಕೂಡಿದ ಹಿಟ್ಟಿನಿಂದ ಮಾಡಿದ್ದಾಗಿರಬೇಕು.
- Numbers 3:50 ಅರಣ್ಯಕಾಂಡ 3:50ಇಸ್ರಾಯೇಲ್ ಮಕ್ಕಳಲ್ಲಿ ಚೊಚ್ಚಲಾದವರಿಂದ ಪರಿಶುದ್ಧ ಸ್ಥಳದ ಶೇಕೆಲಿನ ಮೇರೆಗೆ ಸಾವಿರದ ಮುನ್ನೂರ ಅರವ ತ್ತೈದು ಶೇಕೆಲುಗಳ ಬೆಳ್ಳಿಯನ್ನು ತೆಗೆದುಕೊಂಡನು.ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ವಿಮೋ ಚನೆಯ ಬೆಳ್ಳಿಯನ್ನು ಆರೋನನಿಗೂ ಅವನ ಕುಮಾರರಿಗೂ ಕೊಟ್ಟನು.
- Hebrews 9:2 ಇಬ್ರಿಯರಿಗೆ 9:2ಅಂದರೆ ಒಂದು ಗುಡಾರವು ಕಟ್ಟಲ್ಪ ಟ್ಟಿತು. ಅದರ ಮೊದಲನೆಯ ಭಾಗದಲ್ಲಿ ದೀಪಸ್ತಂಭ, ಮೇಜು, ಸಮ್ಮುಖದ ರೊಟ್ಟಿ ಇವುಗಳಿದ್ದವು; ಅದಕ್ಕೆ ಪವಿತ್ರ ಸ್ಥಳ ಎಂದು ಹೆಸರು.
- 1 Chronicles 9:29–34 1 ಪೂರ್ವಕಾಲವೃತ್ತಾಂತ 9:29–34ಅವರಲ್ಲಿ ಕೆಲವರು ಸಾಮಾನುಗಳನ್ನೂ ಪರಿಶುದ್ಧಸ್ಥಾನದಲ್ಲಿರುವ ಎಲ್ಲಾ ಸಾಮಾನುಗಳನ್ನೂ ನಯವಾದ ಹಿಟ್ಟನ್ನೂ ದ್ರಾಕ್ಷಾ ರಸವನ್ನೂ ಎಣ್ಣೆಯನ್ನೂ ಸಾಂಬ್ರಾಣಿಯನ್ನೂ ಸುಗಂಧದ್ರವ್ಯಗಳನ್ನೂ ಕಾಯಲು ನೇಮಿಸಲ್ಪಟ್ಟಿದ್ದರು. ಯಾಜಕರ ಕುಮಾರರಲ್ಲಿ ಕೆಲವರು ಸುಗಂಧಗಳಿಂದ ತೈಲವನ್ನು ಮಾಡಿದರು. ಕೋರಹಿಯನಾದ ಶಲ್ಲೂಮನ ಚೊಚ್ಚಲ ಮಗನಾದ ಮತ್ತಿತ್ಯನು ಲೇವಿ ಯರಲ್ಲಿ ಒಬ್ಬನಾಗಿದ್ದು ತಟ್ಟೆಗಳ ಮೇಲೆ ಮಾಡಲ್ಪಟ್ಟ ಭಕ್ಷ್ಯಗಳ ಕೆಲಸಕ್ಕೆ ನೇಮಿಸಲ್ಪಟ್ಟಿದ್ದನು. ಸಮ್ಮುಖದ ರೊಟ್ಟಿಯನ್ನು ಪ್ರತಿಸಬ್ಬತ್ ದಿವಸದಲ್ಲಿ ಸಿದ್ಧಮಾಡು ವದಕ್ಕೆ ಕೆಹಾತ್ಯರ ಕುಮಾರರಾದ ಅವರ ಸಹೋದರ ರಲ್ಲಿ ಕೆಲವರು ನೇಮಿಸಲ್ಪಟ್ಟಿದ್ದರು. ಇದಲ್ಲದೆ ಲೇವಿಯರ ಪಿತೃಗಳಲ್ಲಿ ಮುಖ್ಯಸ್ಥರಾದ ಇವರು ಹಾಡುಗಾರರಾಗಿದ್ದು ಸ್ವತಂತ್ರವಾಗಿ ಕೊಠಡಿ ಗಳಲ್ಲಿ ವಾಸವಾಗಿದ್ದರು; ಅವರು ರಾತ್ರಿ ಹಗಲು ಅದೇ ಕಾರ್ಯದಲ್ಲಿದ್ದರು. ಲೇವಿಯರ ಪಿತೃಗಳಲ್ಲಿ ಮುಖ್ಯಸ್ಥರಾದ ಇವರು ತಮ್ಮ ವಂಶಗಳಲ್ಲಿ ಮುಖ್ಯಸ್ಥರಾಗಿದ್ದು ಯೆರೂಸಲೇಮಿ ನಲ್ಲಿ ವಾಸವಾಗಿದ್ದರು.
- 2 Chronicles 13:11 2 ಪೂರ್ವಕಾಲವೃತ್ತಾಂತ 13:11ಅವರು ಪ್ರತಿ ಉದಯದಲ್ಲಿಯೂ ಸಾಯಂಕಾಲದಲ್ಲಿಯೂ ಕರ್ತನಿಗೆ ದಹನಬಲಿಗಳನ್ನೂ ಸುಗಂಧ ಧೂಪವನ್ನೂ ಸುಡುತ್ತಾರೆ. ಇದಲ್ಲದೆ ಪರಿಶುದ್ಧ ಮೇಜಿನ ಮೇಲೆ ರೊಟ್ಟಿಗಳನ್ನು ಇಡುವದುಂಟು; ಪ್ರತಿ ಸಾಯಂಕಾಲ ದಲ್ಲಿ ಬಂಗಾರದ ದೀಪಸ್ಥಂಭವನ್ನೂ ಅದರ ದೀಪ ಗಳನ್ನೂ ಸಿದ್ಧಮಾಡಿ ಹಚ್ಚುತ್ತಾರೆ. ನಾವು ನಮ್ಮ ದೇವರಾದ ಕರ್ತನ ಕಟ್ಟಳೆಯನ್ನು ಕೈಕೊಳ್ಳುತ್ತೇವೆ; ಆದರೆ ನೀವು ಆತನನ್ನು ಬಿಟ್ಟಿದ್ದೀರಿ. ಇಗೋ, ದೇವರು ತಾನೇ ಅಧಿಪತಿಯಾಗಿ ನಮ್ಮ ಸಂಗಡ ಇದ್ದಾನೆ.
- Matthew 12:4 ಮತ್ತಾಯನು 12:4ಅವನು ದೇವರ ಮನೆ ಯೊಳಗೆ ಪ್ರವೇಶಿಸಿ ಯಾಜಕರೇ ಹೊರತು ತಾನಾಗಲೀ ತನ್ನ ಕೂಡ ಇದ್ದವರಾಗಲೀ ತಿನ್ನಬಾರದಾಗಿದ್ದ ಸಮ್ಮುಖ ರೊಟ್ಟಿಯನ್ನು ಹೇಗೆ ತಿಂದನು?
- 2 Chronicles 29:18 2 ಪೂರ್ವಕಾಲವೃತ್ತಾಂತ 29:18ಆಗ ಅವರು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನಿಗೆ--ಕರ್ತನ ಸಮಸ್ತ ಆಲಯವನ್ನೂ ದಹನಬಲಿಯ ಯಜ್ಞವೇದಿಯನ್ನೂ ಅದರ ಎಲ್ಲಾ ಪಾತ್ರೆಗಳನ್ನೂ ಸಮ್ಮುಖದ ರೊಟ್ಟಿಯ ಮೇಜನ್ನೂ ಅದರ ಎಲ್ಲಾ ಪಾತ್ರೆಗಳನ್ನೂ ಶುಚಿಮಾಡಿದೆವು.
- 1 Kings 7:48 1 ಅರಸುಗಳು 7:48ಇದಲ್ಲದೆ ಕರ್ತನ ಮನೆಗೆ ಸಂಬಂಧವಾದ ಪಾತ್ರೆ ಗಳನ್ನೆಲ್ಲಾ ಸೊಲೊಮೋನನು ಮಾಡಿಸಿದನು; ಯಾವ ವಂದರೆ, ಚಿನ್ನದ ಧೂಪದ ವೇದಿ, ಸಮ್ಮುಖದ ರೊಟ್ಟಿ ಗಳನ್ನು ಇಡುವದಕ್ಕೆ ಚಿನ್ನದ ಮೇಜು, ದೈವೋಕ್ತಿಯ ಸ್ಥಾನದ ಮುಂಭಾಗದ ಬಲಪಾರ್ಶ್ವದಲ್ಲಿ ಐದು,