1 Chronicles · chapter 29 · verse 14
1 Chronicles 29:14 in Kannada
ಆದರೆ ನಾವು ಈ ಪ್ರಕಾರ ಇಷ್ಟಪೂರ್ತಿಯಾಗಿ ಅರ್ಪಿಸುವದಕ್ಕೆ ಶಕ್ತಿಯನ್ನು ಹೊಂದಲು ನಾನೆಷ್ಟರವನು? ನನ್ನ ಜನರು ಎಷ್ಟರವರು? ಯಾಕಂದರೆ ಸಮಸ್ತವೂ ನಿನ್ನಿಂದಲೇ; ನೀನು ಕೊಟ್ಟದ್ದನ್ನೇ ನಿನಗೆ ಅರ್ಪಿಸಿದೆವು.
Aadare naavu ee prakaara ishtapoortiyaagi arpisuvadakke shaktiyannu hondalu naaneshtaravanu? Nanna janaru eshtaravaru? Yaakandare samastavoo ninnindale; neenu kottaddanne ninage arpisidevu.
1 Chronicles 29:14 in English
- King James Version (KJV)
- But who [am] I, and what [is] my people, that we should be able to offer so willingly after this sort? for all things [come] of thee, and of thine own have we given thee.
- World English Bible (WEB)
- But who am I, and what is my people, that we should be able to offer so willingly as this? For all things come from you, and we have given you of your own.
- American Standard Version (ASV)
- But who am I, and what is my people, that we should be able to offer so willingly after this sort? for all things come of thee, and of thine own have we given thee.
- Bible in Basic English (BBE)
- But who am I and what is my people, that we have power to give so freely in this way? for all things come from you, and what we have given you is yours.
- Darby Translation (DBY)
- But who am I, and what is my people, that we should be able to offer willingly after this manner? for all is of thee, and of that which is from thy hand have we given thee.
- Webster's Bible (WBS)
- But who [am] I, and what [is] my people, that we should be able to offer so willingly after this sort? for all things [come] from thee, and of thy own have we given thee.
- Young's Literal Translation (YLT)
- yea, because, who [am] I, and who [are] my people, that we retain power to offer thus willingly? but of Thee [is] the whole, and out of Thy hand we have given to Thee;
Read in context
- 12ನೀನು ಸಮಸ್ತವನ್ನು ಆಳುವಾತ ನಾಗಿದ್ದೀ. ಶಕ್ತಿಯೂ ಪರಾಕ್ರಮವೂ ನಿನ್ನ ಕೈಯಲ್ಲಿ ಅವೆ. ಎಲ್ಲರಿಗೂ ದೊಡ್ಡಸ್ತಿಕೆಯನ್ನೂ ಬಲವನ್ನೂ ಕೊಡುವದಕ್ಕೆ ನಿನ್ನ ಕೈಯಲ್ಲಿ ಅದೆ.
- 13ಆದದರಿಂದ ನಮ್ಮ ದೇವರೇ, ನಾವು ನಿನ್ನನ್ನು ಸ್ತುತಿಸಿ ನಿನ್ನ ಮಹಿಮೆ ಯುಳ್ಳ ನಾಮವನ್ನು ಕೊಂಡಾಡುತ್ತೇವೆ.
- 14ಆದರೆ ನಾವು ಈ ಪ್ರಕಾರ ಇಷ್ಟಪೂರ್ತಿಯಾಗಿ ಅರ್ಪಿಸುವದಕ್ಕೆ ಶಕ್ತಿಯನ್ನು ಹೊಂದಲು ನಾನೆಷ್ಟರವನು? ನನ್ನ ಜನರು ಎಷ್ಟರವರು? ಯಾಕಂದರೆ ಸಮಸ್ತವೂ ನಿನ್ನಿಂದಲೇ; ನೀನು ಕೊಟ್ಟದ್ದನ್ನೇ ನಿನಗೆ ಅರ್ಪಿಸಿದೆವು.
- 15ನಾವು ನಿನ್ನ ಸಮ್ಮುಖದಲ್ಲಿ ನಮ್ಮ ಸಮಸ್ತ ಪಿತೃಗಳ ಹಾಗೆ ಪರದೇಶಸ್ಥರೂ ಪ್ರವಾಸಿಗಳೂ ಆಗಿದ್ದೇವೆ. ಭೂಮಿಯ ಮೇಲೆ ನಮ್ಮ ದಿವಸಗಳು ನೆರಳಿನ ಹಾಗೆ ಅವೆ; ನೆಲೆಯು ಇಲ್ಲ.
- 16ನಮ್ಮ ದೇವರಾದ ಕರ್ತನೇ, ನಿನ್ನ ಪರಿಶುದ್ಧ ನಾಮಕ್ಕೋಸ್ಕರ ನಿನಗೆ ಮನೆಯನ್ನು ಕಟ್ಟಿಸಲು ನಾವು ಸಿದ್ಧಮಾಡಿದ ಈ ರಾಶಿಯೆಲ್ಲಾ ನಿನ್ನಿಂದ ಬಂದದ್ದು; ಸಮಸ್ತವೂ ನಿನ್ನದು.
Cross references
- James 1:17 ಯಾಕೋಬನು 1:17ಪ್ರತಿಯೊಂದು ಒಳ್ಳೇ ದಾನವೂ ಸಂಪೂರ್ಣವಾದ ಪ್ರತಿವರವೂ ಮೇಲಣ ವುಗಳೇ; ಅವು ಬೆಳಕುಗಳ ತಂದೆಯಿಂದ ಇಳಿದು ಬರುತ್ತವೆ. ಆತನಲ್ಲಿ ಚಂಚಲತ್ವವೇನೂ ಇಲ್ಲ, ವ್ಯತ್ಯಾಸದ ನೆರಳೂ ಇಲ್ಲ.
- 2 Corinthians 3:5 2 ಕೊರಿಂಥದವರಿಗೆ 3:5ನಮ್ಮಿಂದಲೇ ಏನಾದರೂ ಉಂಟಾಯಿ ತೆಂದು ಆಲೋಚಿಸಿಕೊಳ್ಳುವದಕ್ಕೆ ನಮ್ಮಷ್ಟಕ್ಕೆ ನಾವೇ ಸಮರ್ಥರೆಂತಲ್ಲ; ನಮಗಿರುವ ಸಾಮರ್ಥ್ಯವು ದೇವರಿಂದಲೇ ಬಂದದ್ದು;
- Romans 11:36 ರೋಮಾಪುರದವರಿಗೆ 11:36ಸಮಸ್ತವು ಆತನಿಂದಲೂ ಆತನ ಮುಖಾಂತರವೂ ಆತನಿಗಾಗಿಯೂ ಇರುತ್ತದೆ; ಆತನಿಗೆ ಸದಾಕಾಲವೂ ಮಹಿಮೆಯಾಗಲಿ. ಆಮೆನ್.
- 2 Corinthians 12:9–11 2 ಕೊರಿಂಥದವರಿಗೆ 12:9–11ಅದಕ್ಕಾತನು--ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ನನ್ನ ಬಲವು ಪರಿಪೂರ್ಣವಾಗುತ್ತದೆ ಎಂದು ನನಗೆ ಹೇಳಿದನು. ಹೀಗಿರಲಾಗಿ ಕ್ರಿಸ್ತನ ಬಲವು ನನ್ನಲ್ಲಿ ನೆಲೆಸಿ ಕೊಂಡಿರಬೇಕೆಂದು ನನಗುಂಟಾಗುವ ನಿರ್ಬಲಾ ವಸ್ಥೆಗಳ ವಿಷಯದಲ್ಲಿಯೇ ಬಹು ಸಂತೋಷವಾಗಿ ಹೆಚ್ಚಳಪಡುವೆನು. ಆದದರಿಂದ ನಾನು ಕ್ರಿಸ್ತನ ನಿಮಿತ್ತ ನಿರ್ಬಲಾವಸ್ಥೆಗಳಲ್ಲಿ ಅವಮಾನಗಳಲ್ಲಿ ಕೊರತೆ ಗಳಲ್ಲಿ ಹಿಂಸೆಗಳಲ್ಲಿ ಇಕ್ಕಟ್ಟುಗಳಲ್ಲಿ ಸಂತೋಷವಾಗಿ ದ್ದೇನೆ; ಯಾಕಂದರೆ ನಾನು ಯಾವಾಗ ನಿರ್ಬಲ ನಾಗಿದ್ದೇನೋ ಅವಾಗಲೇ ಬಲವುಳ್ಳವನಾಗಿದ್ದೇನೆ. ನಾನು ಹೀಗೆ ಹೊಗಳಿಕೊಳ್ಳುವದರಲ್ಲಿ ಬುದ್ಧಿಹೀನ ನಾದೆನು; ಅದಕ್ಕೆ ನೀವೇ ನನ್ನನ್ನು ಬಲವಂತ ಮಾಡಿದಿರಿ. ನಿಮ್ಮಿಂದಲೇ ನನಗೆ ಹೊಗಳಿಕೆಯು ಉಂಟಾಗಬೇಕಾಗಿತ್ತು; ಯಾಕಂದರೆ ನಾನು ಏನೂ ಅಲ್ಲದವನಾದರೂ ಅತಿಶ್ರೇಷ್ಠರಾದ ಅಪೊಸ್ತಲರಿಗಿಂತ ಯಾವದರಲ್ಲಿಯೂ ನಾನು ಕಡಿಮೆಯಾದವನಲ್ಲ.
- Psalm 50:10–12 ಕೀರ್ತನೆಗಳು 50:10–12ಅಡವಿಯ ಮೃಗಗಳೆಲ್ಲವೂ ಬೆಟ್ಟಗಳಲ್ಲಿರುವ ಸಾವಿರ ಪಶುಗಳೂ ನನ್ನವೇ. ಬೆಟ್ಟಗಳ ಪಕ್ಷಿಗಳನ್ನೆಲ್ಲಾ ನಾನು ಬಲ್ಲೆನು; ಕಾಡುಮೃಗಗಳು ನನ್ನವುಗಳಾಗಿವೆ. ನಾನು ಹಸಿದಿದ್ದರೆ ನಿನಗೆ ಹೇಳೆನು; ಭೂಲೋಕವೂ ಅದರ ಪರಿಪೂರ್ಣತೆಯೂ ನನ್ನವೇ.
- Psalm 115:1 ಕೀರ್ತನೆಗಳು 115:1ನಮಗಲ್ಲ, ಓ ಕರ್ತನೇ, ನಮಗಲ್ಲ, ನಿನ್ನ ಹೆಸರಿಗೆ ಮಾತ್ರ, ನಿನ್ನ ಕರುಣೆಯ ನಿಮಿತ್ತವೂ ನಿನ್ನ ಸತ್ಯದ ನಿಮಿತ್ತವೂ ಘನವುಂಟಾಗಲಿ.
- Philippians 2:13 ಫಿಲಿಪ್ಪಿಯವರಿಗೆ 2:13ತನ್ನ ಸುಚಿತ್ತದ ಪ್ರಕಾರ ನಿಮ್ಮಲ್ಲಿ ಉದ್ದೇಶವನ್ನೂ ಕಾರ್ಯ ವನ್ನೂ ಸಾಧಿಸುವಾತನು ದೇವರೇ.
- Genesis 32:10 ಆದಿಕಾಂಡ 32:10ನೀನು ನಿನ್ನ ದಾಸನಿಗೆ ತೋರಿಸಿದ ಎಲ್ಲಾ ಕರುಣೆಗಳಿಗೂ ಎಲ್ಲಾ ಸತ್ಯಕ್ಕೂ ಅಯೋಗ್ಯನಾಗಿದ್ದೇನೆ. ಯಾಕಂದರೆ ನಾನು ಮೊದಲು ಈ ಯೊರ್ದನ್ ಹೊಳೆಯನ್ನು ದಾಟಿದಾಗ ನನಗೆ ಕೋಲು ಮಾತ್ರವೇ ಇತ್ತು; ಈಗ ಎರಡು ಗುಂಪುಗಳುಳ್ಳವನಾದೆನು.
- 1 Chronicles 29:9 1 ಪೂರ್ವಕಾಲವೃತ್ತಾಂತ 29:9ಆಗ ಜನರು ಸಂತೋಷವಾಗಿ ಕಾಣಿಕೆಗಳನ್ನು ಅರ್ಪಿಸಿದ್ದರಿಂದ ಜನರು ಸಂತೋಷಪಟ್ಟರು. ಅವರು ಪೂರ್ಣ ಮನಸ್ಸಿನಿಂದ ಮನಃಪೂರ್ವಕವಾಗಿ ಕರ್ತನಿಗೆ ಅರ್ಪಿಸಿದರು. ಅರಸನಾದ ದಾವೀದನು ಮಹಾ ಸಂತೋಷದಿಂದ ಸಂತೋಷಪಟ್ಟನು.
- 1 Corinthians 15:9–10 1 ಕೊರಿಂಥದವರಿಗೆ 15:9–10ನಾನಂತೂ ಅಪೊಸ್ತಲರಲ್ಲಿ ಕನಿಷ್ಠನಷ್ಟೆ. ಯಾಕಂದರೆ ನಾನು ದೇವರ ಸಭೆಯನ್ನು ಹಿಂಸೆಪಡಿಸಿ ದ್ದರಿಂದ ಆಪೊಸ್ತಲನೆನಿಸಿಕೊಳ್ಳುವದಕ್ಕೆ ಯೋಗ್ಯನಲ್ಲ. ಆದರೆ ನಾನು ಎಂಥವನಾಗಿದ್ದೇನೋ ದೇವರ ಕೃಪೆಯಿಂದಲೇ ಅಂಥವನಾಗಿದ್ದೇನೆ; ನನಗುಂಟಾದ ಆತನ ಕೃಪೆಯು ನಿಷ್ಪಲವಾಗಲಿಲ್ಲ; ನಾನು ಅವರೆಲ್ಲರಿ ಗಿಂತಲೂ ಎಷ್ಟೋ ಹೆಚ್ಚಾಗಿ ಪ್ರಯಾಸಪಟ್ಟೆನು; ಆದರೆ ಪ್ರಯಾಸಪಟ್ಟವನು ನಾನಲ್ಲ, ನನ್ನೊಂದಿಗಿದ್ದ ದೇವರ ಕೃಪೆಯೇ.
- Genesis 28:22 ಆದಿಕಾಂಡ 28:22ಇದಲ್ಲದೆ ಸ್ತಂಭವಾಗಿ ನಾನು ನಿಲ್ಲಿಸಿದ ಈ ಕಲ್ಲು ದೇವರ ಮನೆಯಾಗಿರುವದು. ಆಗ ನೀನು ನನಗೆ ಕೊಡುವದ ರಲ್ಲೆಲ್ಲಾ ಹತ್ತರಲ್ಲಿ ಒಂದು ಭಾಗವನ್ನು ನಿನಗೆ ನಾನು ಖಂಡಿತವಾಗಿ ಕೊಡುವೆನು ಅಂದನು.
- 2 Samuel 7:18 2 ಸಮುವೇಲನು 7:18ಆಗ ಅರಸ ನಾದ ದಾವೀದನು ಒಳಗೆ ಪ್ರವೇಶಿಸಿ ಕರ್ತನ ಸನ್ನಿಧಿ ಯಲ್ಲಿ ಕೂತುಕೊಂಡು--ಓ ಕರ್ತನಾದ ದೇವರೇ, ನನ್ನನ್ನು ನೀನು ಇಷ್ಟರ ಮಟ್ಟಿಗೆ ತಂದದ್ದಕ್ಕೆ ನಾನು ಎಷ್ಟರವನು? ನನ್ನ ಮನೆ ಎಷ್ಟರದು?