1 Chronicles · chapter 6 · verse 53
1 Chronicles 6:53 in Kannada
ಇವನ ಮಗನು ಚಾದೋಕನು, ಇವನ ಮಗನು ಅಹಿಮಾಚನು.
Ivana maganu chaadokanu, ivana maganu ahimaachanu.
1 Chronicles 6:53 in English
- King James Version (KJV)
- Zadok his son, Ahimaaz his son.
- World English Bible (WEB)
- Zadok his son, and Ahimaaz his son.
- American Standard Version (ASV)
- Zadok his son, Ahimaaz his son.
- Bible in Basic English (BBE)
- Zadok his son, Ahimaaz his son.
- Darby Translation (DBY)
- Zadok his son, Ahimaaz his son.
- Webster's Bible (WBS)
- Zadok his son, Ahimaaz his son.
- Young's Literal Translation (YLT)
- Zadok his son, Ahimaaz his son.
Read in context
- 51ಇವನ ಮಗನು ಬುಕ್ಕೀಯು, ಇವನ ಮಗನು ಉಜ್ಜೀಯು, ಇವನ ಮಗನು ಜೆರಹ್ಯಾಹನು, ಇವನ ಮಗನು ಮೆರಾಯೋತನು,
- 52ಇವನ ಮಗನು ಅಮರ್ಯನು, ಇವನ ಮಗನು ಅಹೀಟೂಬನು,
- 53ಇವನ ಮಗನು ಚಾದೋಕನು, ಇವನ ಮಗನು ಅಹಿಮಾಚನು.
- 54ತಮ್ಮ ಮೇರೆಗಳೊಳಗೆ ಇರುವ ತಮ್ಮ ಕೋಟೆ ಗಳಲ್ಲಿ ಆರೋನನ ಕುಮಾರರ ನಿವಾಸ ಸ್ಥಾನಗಳು
- 55ಯಾವವೆಂದರೆ--ಕೆಹಾತನ ಕುಟುಂಬಗಳಿಗೆ ಚೀಟು ಬಿದ್ದ ಪ್ರಕಾರ ಯೆಹೂದದ ದೇಶದಲ್ಲಿ ಹೆಬ್ರೋನ್ ಪಟ್ಟಣವೂ ಅದರ ಸುತ್ತಲಿರುವ ಉಪನಗರಗಳೂ ಅವರಿಗೆ ಕೊಡಲ್ಪಟ್ಟವು.
Cross references
- 2 Samuel 8:17 2 ಸಮುವೇಲನು 8:17ಅಹೀಟೂಬನ ಮಗನಾದ ಚಾದೋಕನೂ ಎಬ್ಯಾತಾರನ ಮಗನಾದ ಅಹೀಮೆಲೆಕನೂ ಯಾಜ ಕರಾಗಿದ್ದರು; ಸೆರಾಯನು ಮಂತ್ರಿಯಾಗಿದ್ದನು.ಯೆಹೋಯಾದಾವನ ಮಗನಾದ ಬೆನಾಯನು ಕೆರೇತ್ಯರ ಪೆಲೇತ್ಯರ ಮೇಲೆ ಯಜಮಾನನಾಗಿದ್ದನು. ಆದರೆ ದಾವೀದನ ಕುಮಾರರು ಮುಖ್ಯ ಪ್ರಭು ಗಳಾಗಿದ್ದರು.
- 2 Samuel 20:25 2 ಸಮುವೇಲನು 20:25ಶೆವನು ಶಾಸ್ತ್ರಿಯಾಗಿದ್ದನು. ಚಾದೋಕನೂ ಎಬ್ಯಾತಾರನೂ ಯಾಜಕರಾಗಿದ್ದರು;ಯಾಯಾರಿನವನಾದ ಈರನೂ ದಾವೀದನ ಬಳಿಯಲ್ಲಿ ಮುಖ್ಯ ಅಧಿಪತಿಯಾಗಿದ್ದನು.
- 2 Samuel 17:15–17 2 ಸಮುವೇಲನು 17:15–17ಹೂಷೈಯು ಯಾಜಕರಾದ ಚಾದೋಕನಿಗೂ ಎಬ್ಯಾತಾರನಿಗೂ--ಅಹೀತೋಫೆಲನು ಅಬ್ಷಾಲೋ ಮನಿಗೂ ಇಸ್ರಾಯೇಲಿನ ಹಿರಿಯರಿಗೂ ಇಂಥಿಂಥ ಆಲೋಚನೆ ಹೇಳಿದನು. ಆದರೆ ನಾನು ಇಂಥಿಂಥ ಆಲೋಚನೆ ಹೇಳಿದೆನು. ಆದದರಿಂದ ನೀವು ತ್ವರೆ ಯಾಗಿ ಕಳುಹಿಸಿ ದಾವೀದನಿಗೆ ತಿಳಿಸಬೇಕಾದದ್ದೇ ನಂದರೆ--ನೀನು ರಾತ್ರಿಯಲ್ಲಿ ಅರಣ್ಯದ ಬೈಲುಗಳಲ್ಲಿ ತಂಗಬೇಡ; ಅರಸನೂ ಅವನ ಸಂಗಡವಿರುವ ಎಲ್ಲಾ ಜನರೂ ನಾಶವಾಗದ ಹಾಗೆ ಬೇಗ ದಾಟಿಹೋಗು ಅಂದನು. ಆದರೆ ಯೋನಾತಾನನೂ ಅಹೀಮಾ ಚನೂ ಪಟ್ಟಣದಲ್ಲಿ ಪ್ರವೇಶಿಸಿ ಯಾರೂ ನೋಡ ದಂತೆ ಎನ್ರೋಗೆಲಿನ ಬಳಿಯಲ್ಲಿ ಇದ್ದರು. ಆದದರಿಂದ ಅವರು ಅರಸನಾದ ದಾವೀದನಿಗೆ ಅದನ್ನು ತಿಳಿಸುವ ಹಾಗೆ ಒಬ್ಬ ದಾಸಿಯು ಹೋಗಿ ಅವರಿಗೆ ಹೇಳಿದಳು.
- 1 Kings 1:26 1 ಅರಸುಗಳು 1:26ಆದರೆ ನನ್ನನ್ನೂ ಅಂದರೆ ನಿನ್ನ ಸೇವಕನಾದ ನನ್ನನ್ನೂ ಯೆಹೋಯಾ ದಾವನ ಮಗನಾದ ಬೆನಾಯನನ್ನೂ ನಿನ್ನ ಸೇವಕನಾದ ಸೊಲೊಮೋನನನ್ನೂ ಅವನು ಕರೆಯಲೇ ಇಲ್ಲ.
- 1 Chronicles 23:16 1 ಪೂರ್ವಕಾಲವೃತ್ತಾಂತ 23:16ಗೇರ್ಷೋಮನ ಕುಮಾರರಲ್ಲಿ ಶೆಬೂ ವೇಲನು ಮುಖ್ಯಸ್ಥನಾಗಿದ್ದನು.
- 1 Kings 1:8 1 ಅರಸುಗಳು 1:8ಆದರೆ ಯಾಜಕ ನಾದ ಚಾದೋಕನೂ ಯೆಹೋಯಾದಾವನ ಮಗ ನಾದ ಬೆನಾಯನೂ ಪ್ರವಾದಿಯಾದ ನಾತಾನನೂ ಶಿಮ್ಮಿಯೂ ರೇಗಿಯೂ ದಾವೀದನ ಪರಾಕ್ರಮ ಶಾಲಿಗಳೂ ಅದೋನೀಯನ ಸಂಗಡ ಹೋಗಲಿಲ್ಲ.
- 1 Kings 2:35 1 ಅರಸುಗಳು 2:35ಆಗ ಅರಸನು ಯೆಹೋಯಾದಾವನ ಮಗನಾದ ಬೆನಾಯನನ್ನು ಯೋವಾಬನಿಗೆ ಬದಲಾಗಿ ಸೈನ್ಯದ ಮೇಲೆ ನೇಮಿಸಿದನು. ಇದಲ್ಲದೆ ಅರಸನು ಎಬ್ಯಾ ತಾರನಿಗೆ ಬದಲಾಗಿ ಯಾಜಕನಾದ ಚಾದೋಕನನ್ನು ನೇಮಿಸಿದನು.
- Ezekiel 44:15 ಯೆಹೆಜ್ಕೇಲನು 44:15ಆದರೆ ಇಸ್ರಾಯೇಲಿನ ಮಕ್ಕಳು ನನ್ನನ್ನು ಬಿಟ್ಟು ಹೋದಾಗ ನನ್ನ ಪರಿಶುದ್ಧ ಸ್ಥಳದ ಕಾಯಿದೆಯನ್ನು ಕೈಕೊಂಡ ಚಾದೋಕನ ಮಕ್ಕಳಾಗಿರುವ ಲೇವಿಯರಾದ ಯಾಜಕರೂ ಇವರು ನನಗೆ ಸೇವೆಮಾಡುವ ಹಾಗೆ ನನ್ನ ಸವಿಾಪಕ್ಕೆ ಬಂದು, ನನ್ನ ಮುಂದೆ ನಿಂತು, ನನಗೆ ಕೊಬ್ಬನ್ನೂ ರಕ್ತವನ್ನೂ ಅರ್ಪಿಸುವರೆಂದು ದೇವರಾದ ಕರ್ತನು ಹೇಳುತ್ತಾನೆ.
- 1 Samuel 2:35 1 ಸಮುವೇಲನು 2:35ಆದರೆ ನನ್ನ ಹೃದಯಕ್ಕೂ ನನ್ನ ಮನಸ್ಸಿಗೂ ಸಮ ರ್ಪಕವಾದ ಹಾಗೆ ಮಾಡುವ ನಂಬಿಕೆಯಾದ ಒಬ್ಬ ಯಾಜಕನನ್ನು ನನಗೋಸ್ಕರ ಎಬ್ಬಿಸಿ ಅವನಿಗೆ ಸ್ಥಿರ ವಾದ ಮನೆಯನ್ನು ಕಟ್ಟುವೆನು. ಅವನು ನನ್ನ ಅಭಿಷಿಕ್ತನ ಮುಂದೆ ನಿರಂತರವಾಗಿ ನಡೆದುಕೊಳ್ಳುವನು.ನಿನ್ನ ಮನೆಯಲ್ಲಿ ಉಳಿದವರೆಲ್ಲಾ ಬಂದು ಅವನಿಗೆ ಅಡ್ಡ ಬಿದ್ದು ಒಂದು ಬೆಳ್ಳಿ ಹಣವನ್ನೂ ಒಂದು ರೊಟ್ಟಿಯ ಚೂರನ್ನೂ ಬೇಡುತ್ತಾ--ನಾನು ಸ್ವಲ್ಪ ರೊಟ್ಟಿಯನ್ನು ತಿನ್ನುವ ಹಾಗೆ ದಯಮಾಡಿ ನನ್ನನ್ನು ಯಾಜಕ ಸೇವೆ ಯಲ್ಲಿ ಸೇರಿಸಿಕೋ ಎಂದು ಹೇಳುವರು ಅಂದನು.
- 1 Kings 4:4 1 ಅರಸುಗಳು 4:4ಅಹೀಲೂದನ ಮಗನಾದ ಯೆಹೋಷಾಫಾಟನು ಲೇಖಕನು. ಯೆಹೋಯಾದಾ ವನ ಮಗನಾದ ಬೆನಾಯನು ಸೈನ್ಯದ ಅಧಿಪತಿಯು; ಚಾದೋಕನೂ ಎಬ್ಯಾತಾರನೂ ಯಾಜಕರು.
- 1 Chronicles 6:8 1 ಪೂರ್ವಕಾಲವೃತ್ತಾಂತ 6:8ಅಹೀಟೂಬನು ಚಾದೋಕನನ್ನು ಪಡೆದನು; ಚಾದೋಕನು ಅಹೀಮಾಚನನ್ನು ಪಡೆದನು;
- 2 Samuel 15:35–36 2 ಸಮುವೇಲನು 15:35–36ಅಲ್ಲಿ ಯಾಜಕ ರಾದ ಚಾದೋಕನೂ ಎಬ್ಯಾತಾರನೂ ನಿನ್ನ ಬಳಿಯಲ್ಲಿ ಲ್ಲವೋ? ಆದದರಿಂದ ನೀನು ಅರಸನ ಮನೆಯಲ್ಲಿ ಯಾವ ವರ್ತಮಾನವನ್ನು ಕೇಳುತ್ತೀಯೋ ಅದನ್ನು ಯಾಜಕರಾದ ಚಾದೋಕನಿಗೂ ಎಬ್ಯಾತಾರನಿಗೂ ತಿಳಿಸು. ಇಗೋ, ಅಲ್ಲಿ ಅವರ ಸಂಗಡ ಅವರ ಇಬ್ಬರು ಮಕ್ಕಳು ಇದ್ದಾರೆ: ಚಾದೋಕನ ಮಗನಾದ ಅಹೀಮಾಚನೂ ಎಬ್ಯಾತಾರನ ಮಗನಾದ ಯೋನಾ ತಾನನೂ. ನೀವು ಕೇಳಿದ ವರ್ತಮಾನವನ್ನೆಲ್ಲಾ ಅವರ ಮೂಲಕ ನನಗೆ ಹೇಳಿ ಕಳುಹಿಸಬೇಕು ಅಂದನು.ಹಾಗೆಯೇ ದಾವೀದನ ಸ್ನೇಹಿತನಾದ ಹೂಷೈ ಪಟ್ಟಣಕ್ಕೆ ಬಂದನು; ಅಬ್ಷಾಲೋಮನು ಯೆರೂಸಲೇಮಿಗೆ ಬಂದನು.