1 Corinthians · chapter 10 · verse 9
1 Corinthians 10:9 in Kannada
ಇದಲ್ಲದೆ ನಾವು ಕ್ರಿಸ್ತನನ್ನು ಪರಿಶೋಧಿಸದೆ ಇರೋಣ; ಯಾಕಂದರೆ ಅವರಲ್ಲಿಯೂ ಕೆಲವರು ಪರಿಶೋಧಿಸಿ ಸರ್ಪಗಳಿಂದ ಸಂಹಾರವಾದರು.
Idallade naavu kristanannu parishodhisade irona; yaakandare avaralliyoo kelavaru parishodhisi sarpagalinda sanhaaravaadaru.
1 Corinthians 10:9 in English
- King James Version (KJV)
- Neither let us tempt Christ, as some of them also tempted, and were destroyed of serpents.
- World English Bible (WEB)
- Let’s not test Christ, as some of them tested, and perished by the serpents.
- American Standard Version (ASV)
- Neither let us make trial of the Lord, as some of them made trial, and perished by the serpents.
- Bible in Basic English (BBE)
- And let us not put the Lord to the test, as some of them did, and came to their death by snakes.
- Darby Translation (DBY)
- Neither let us tempt the Christ, as some of them tempted, and perished by serpents.
- Webster's Bible (WBS)
- Neither let us tempt Christ, as some of them also tempted, and were destroyed by serpents.
- Young's Literal Translation (YLT)
- neither may we tempt the Christ, as also certain of them did tempt, and by the serpents did perish;
Read in context
- 7ಇಲ್ಲವೆ--ಜನರು ತಿನ್ನುವದಕ್ಕೂ ಕುಡಿಯುವದಕ್ಕೂ ಕೂತುಕೊಂಡರು; ಆಟವಾಡುವದಕ್ಕೆ ಎದ್ದರು ಎಂದು ಬರೆದಿರುವ ಪ್ರಕಾರ ನೀವೂ ಅವರಲ್ಲಿ ಕೆಲವರಂತೆ ವಿಗ್ರಹಾರಾಧಕರಾಗ ಬೇಡಿರಿ.
- 8ಅವರಲ್ಲಿ ಕೆಲವರು ಜಾರತ್ವಮಾಡಿ ಒಂದೇ ದಿನದಲ್ಲಿ ಇಪ್ಪತ್ತುಮೂರು ಸಾವಿರ ಮಂದಿ ಸತ್ತರು; ನಾವು ಜಾರತ್ವ ಮಾಡದೆ ಇರೋಣ.
- 9ಇದಲ್ಲದೆ ನಾವು ಕ್ರಿಸ್ತನನ್ನು ಪರಿಶೋಧಿಸದೆ ಇರೋಣ; ಯಾಕಂದರೆ ಅವರಲ್ಲಿಯೂ ಕೆಲವರು ಪರಿಶೋಧಿಸಿ ಸರ್ಪಗಳಿಂದ ಸಂಹಾರವಾದರು.
- 10ಇದಲ್ಲದೆ ಅವರಲ್ಲಿ ಕೆಲವರು ಗುಣುಗುಟ್ಟಿ ಸಂಹಾರಕನ ಕೈಯಿಂದ ನಾಶ ವಾದರು; ಆದದರಿಂದ ನೀವು ಗುಣುಗುಟ್ಟಬೇಡಿರಿ.
- 11ಅವರಿಗೆ ಸಂಭವಿಸಿದ ಈ ಎಲ್ಲಾ ಸಂಗತಿಗಳು ನಿದರ್ಶನಗಳಾಗಿವೆ; ಲೋಕದ ಅಂತ್ಯಕ್ಕೆ ಬಂದಿರುವ ವರಾದ ನಮಗೆ ಅವು ಬುದ್ಧಿವಾದಗಳಾಗಿ ಬರೆದವೆ.
Cross references
- Numbers 21:5–6 ಅರಣ್ಯಕಾಂಡ 21:5–6ಆದಕಾರಣ ಜನರು ದೇವರಿಗೂ ಮೋಶೆಗೂ ವಿರೋಧವಾಗಿ ಮಾತನಾಡಿ--ನಾವು ಅರಣ್ಯದಲ್ಲಿ ಸಾಯುವಹಾಗೆ ನಮ್ಮನ್ನು ಐಗುಪ್ತದೇಶದಿಂದ ಯಾಕೆ ಬರಮಾಡಿದ್ದೀರಿ? ಇಲ್ಲಿ ರೊಟ್ಟಿ ಇಲ್ಲ, ನೀರೂ ಇಲ್ಲ; ನಾವು ಈ ನಿಸ್ಸಾರ ವಾದ ರೊಟ್ಟಿಯನ್ನು ತಿಂದು ಅಸಹ್ಯಪಡುತ್ತೇವೆ ಅಂದರು. ಆಗ ಕರ್ತನು ಜನರೊಳಗೆ ಉರಿ ಸರ್ಪ ಗಳನ್ನು ಕಳುಹಿಸಿದನು; ಅವು ಜನರನ್ನು ಕಚ್ಚಿದ್ದರಿಂದ ಇಸ್ರಾಯೇಲ್ಯರಲ್ಲಿ ಬಹು ಜನರು ಸತ್ತುಹೋದರು.
- Psalm 78:18 ಕೀರ್ತನೆಗಳು 78:18ದೇವರನ್ನು ತಮ್ಮ ಹೃದಯದಲ್ಲಿ ಶೋಧಿಸು ವವರಾಗಿ ತಮ್ಮ ದುರಾಶೆಗಳಿಗ್ಕೋಸ್ಕರ ಆಹಾರವನ್ನು ಕೇಳಿದರು.
- Hebrews 3:8–11 ಇಬ್ರಿಯರಿಗೆ 3:8–11ಅರಣ್ಯ ದಲ್ಲಿದ್ದಾಗ ಶೋಧನೆಯ ದಿನದಲ್ಲಿ ದೇವರಿಗೆ ಕೋಪ ವನ್ನೆಬ್ಬಿಸಿದಂತೆ ನಿಮ್ಮ ಹೃದಯಗಳನ್ನು ಕಠಿಣಮಾಡಿ ಕೊಳ್ಳಬೇಡಿರಿ. ನಿಮ್ಮ ಪಿತೃಗಳು ನನ್ನನ್ನು ಶೋಧಿಸಿ ದರು, ನನ್ನನ್ನು ಪರೀಕ್ಷಿಸಿದರು, ನಾಲ್ವತ್ತು ವರುಷ ನನ್ನ ಕಾರ್ಯಗಳನ್ನು ನೋಡಿದರು. ಆದದರಿಂದ ನಾನು ಆ ಸಂತತಿಯವರ ಮೇಲೆ ಬಹಳವಾಗಿ ಸಂತಾಪಗೊಂಡು--ಅವರು ಯಾವಾ ಗಲೂ ಹೃದಯದಲ್ಲಿ ತಪ್ಪಿಹೋಗುತ್ತಾರೆ ಎಂದು ಹೇಳಿದನು. ಅವರು ನನ್ನ ಮಾರ್ಗಗಳನ್ನು ತಿಳ್ಳುಕೊಳ್ಳ ಲಿಲ್ಲ. ಹೀಗಿರಲು--ಅವರು ನನ್ನ ವಿಶ್ರಾಂತಿಯಲ್ಲಿ ಸೇರುವದೇ ಇಲ್ಲವೆಂದು ನಾನು ನನ್ನ ಕೋಪದಲ್ಲಿ ಪ್ರಮಾಣಮಾಡಿದೆನು ಎಂದು ಆತನು ಹೇಳಿದ್ದಾನೆ).
- Exodus 17:2 ವಿಮೋಚನಕಾಂಡ 17:2ಆದಕಾರಣ ಜನರು ಮೋಶೆಯ ಸಂಗಡ ವಿವಾದಮಾಡಿ--ನಮಗೆ ಕುಡಿ ಯುವದಕ್ಕೆ ನೀರು ಕೊಡು ಅಂದಾಗ ಮೋಶೆಯು ಅವರಿಗೆ--ಯಾಕೆ ನನ್ನ ಸಂಗಡ ವಿವಾದ ಮಾಡುತ್ತೀರಿ? ಕರ್ತನನ್ನು ಯಾಕೆ ಪರೀಕ್ಷಿಸುತ್ತೀರಿ ಅಂದನು.
- Deuteronomy 6:16 ಧರ್ಮೋಪದೇಶಕಾಂಡ 6:16ನೀವು ಮಸ್ಸದಲ್ಲಿ ಶೋಧಿಸಿದ ಹಾಗೆ ನಿಮ್ಮ ದೇವರಾದ ಕರ್ತನನ್ನು ಶೋಧಿಸಬೇಡಿರಿ.
- Psalm 78:56 ಕೀರ್ತನೆಗಳು 78:56ಆದರೆ ಅವರು ಮಹೋನ್ನತನಾದ ದೇವರನ್ನು ಪರೀಕ್ಷಿಸಿ ರೇಗಿಸಿದರು; ಆತನ ವಿಧಿಗಳನ್ನು ಕೈಕೊಳ್ಳ ಲಿಲ್ಲ.
- Exodus 17:7 ವಿಮೋಚನಕಾಂಡ 17:7ಅವನು ಆ ಸ್ಥಳಕ್ಕೆ ಮಸ್ಸಾ ಮೆರಿಬಾ ಎಂದು ಹೆಸರಿಟ್ಟನು. ಯಾಕಂದರೆ ಅಲ್ಲಿ ಇಸ್ರಾಯೇಲ್ ಮಕ್ಕಳು ವಿವಾದ ಮಾಡಿದರು.-- ಕರ್ತನು ನಮ್ಮ ಮಧ್ಯದಲ್ಲಿ ಇದ್ದಾನೋ ಇಲ್ಲವೋ ಎಂದು ಪರೀಕ್ಷಿಸಿದರು.
- Exodus 23:20–21 ವಿಮೋಚನಕಾಂಡ 23:20–21ಇಗೋ, ಮಾರ್ಗದಲ್ಲಿ ನಿಮ್ಮನ್ನು ಕಾಪಾಡುವದ ಕ್ಕೋಸ್ಕರವೂ ನಾನು ಸಿದ್ಧಮಾಡಿದ ಸ್ಥಳಕ್ಕೆ ನಿಮ್ಮನ್ನು ತರುವದಕ್ಕೋಸ್ಕರವೂ ಒಬ್ಬ ದೂತನನ್ನು ನಿಮ್ಮ ಮುಂದೆ ಕಳುಹಿಸುತ್ತೇನೆ. ಆತನ ವಿಷಯದಲ್ಲಿ ಜಾಗ್ರತೆ ಯಾಗಿದ್ದು ಆತನ ಮಾತಿಗೆ ವಿಧೇಯನಾಗು. ಆತನಿಗೆ ಕೋಪವನ್ನೆಬ್ಬಿಸಬೇಡ; ನನ್ನ ಹೆಸರು ಆತನಲ್ಲಿ ಇರುವ ದರಿಂದ ಆತನು ನಿಮ್ಮ ದ್ರೋಹಗಳನ್ನು ಮನ್ನಿಸುವದಿಲ್ಲ.
- Psalm 95:9 ಕೀರ್ತನೆಗಳು 95:9ಅಲ್ಲಿ ನಿಮ್ಮ ತಂದೆಗಳು ನನ್ನನ್ನು ಶೋಧಿಸಿ, ಪರೀಕ್ಷಿಸಿದರು; ನನ್ನ ಕೆಲಸವನ್ನು ನೋಡಿದರು.
- Psalm 106:14 ಕೀರ್ತನೆಗಳು 106:14ಅರಣ್ಯದಲ್ಲಿ ದುರಾಶೆಯಿಂದ ಆಶಿಸಿ ಮರುಭೂಮಿ ಯಲ್ಲಿ ದೇವರನ್ನು ಪರೀಕ್ಷಿಸಿದರು.
- Hebrews 10:28–30 ಇಬ್ರಿಯರಿಗೆ 10:28–30ಮೋಶೆಯ ನ್ಯಾಯಪ್ರಮಾಣವನ್ನು ಅಸಡ್ಡೆ ಮಾಡಿ ದವನನ್ನು ಇಬ್ಬರು ಇಲ್ಲವೆ ಮೂವರು ಸಾಕ್ಷಿಗಳಿಂದ ಕನಿಕರವಿಲ್ಲದೆ ಕೊಲ್ಲುತ್ತಿದ್ದರು. ಯಾವನು ದೇವ ಕುಮಾರನನ್ನು ತುಳಿದು ತನ್ನನ್ನು ಪವಿತ್ರಮಾಡಿದಂಥ ಒಡಂಬಡಿಕೆಯ ರಕ್ತವನ್ನು ಅಶುದ್ಧವೆಂದೆಣಿಸಿ ಕೃಪೆಯ ಆತ್ಮನನ್ನು ತಿರಸ್ಕಾರ ಮಾಡಿದ್ದಾನೋ ಅವನು ಇನ್ನೂ ಎಷ್ಟೋ ಕ್ರೂರವಾದ ದಂಡನೆಗೆ ಪಾತ್ರನಾಗಬೇಕೆಂಬ ದನ್ನು ಯೋಚಿಸಿರಿ. ಮುಯ್ಯಿ ತೀರಿಸುವದು ನನಗೆ ಸಂಬಂಧಪಟ್ಟದ್ದು, ನಾನೇ ಪ್ರತಿಫಲವನ್ನು ಕೊಡುವೆ ನೆಂದು ಹೇಳಿದ ಕರ್ತನನ್ನು ನಾವು ಬಲ್ಲೆವು; ಇದ ಲ್ಲದೆ--ಕರ್ತನು ತನ್ನ ಜನರಿಗೆ ನ್ಯಾಯತೀರಿಸುವ ನೆಂತಲೂ ಹೇಳಿಯದೆ.