Numbers · chapter 21 · verse 5
Numbers 21:5 in Kannada
ಆದಕಾರಣ ಜನರು ದೇವರಿಗೂ ಮೋಶೆಗೂ ವಿರೋಧವಾಗಿ ಮಾತನಾಡಿ--ನಾವು ಅರಣ್ಯದಲ್ಲಿ ಸಾಯುವಹಾಗೆ ನಮ್ಮನ್ನು ಐಗುಪ್ತದೇಶದಿಂದ ಯಾಕೆ ಬರಮಾಡಿದ್ದೀರಿ? ಇಲ್ಲಿ ರೊಟ್ಟಿ ಇಲ್ಲ, ನೀರೂ ಇಲ್ಲ; ನಾವು ಈ ನಿಸ್ಸಾರ ವಾದ ರೊಟ್ಟಿಯನ್ನು ತಿಂದು ಅಸಹ್ಯಪಡುತ್ತೇವೆ ಅಂದರು.
Aadakaarana janaru devarigoo moshegoo virodhavaagi maatanaadi--naavu aranyadalli saayuvahaage nammannu aiguptadeshadinda yaake baramaadiddeeri? Illi rotti illa, neeroo illa; naavu ee nissaara vaada rottiyannu tindu asahyapadutteve andaru.
Numbers 21:5 in English
- King James Version (KJV)
- And the people spake against God, and against Moses, Wherefore have ye brought us up out of Egypt to die in the wilderness? for [there is] no bread, neither [is there any] water; and our soul loatheth this light bread.
- World English Bible (WEB)
- The people spoke against God and against Moses: “Why have you brought us up out of Egypt to die in the wilderness? For there is no bread, there is no water, and our soul loathes this disgusting food!”
- American Standard Version (ASV)
- And the people spake against God, and against Moses, Wherefore have ye brought us up out of Egypt to die in the wilderness? for there is no bread, and there is no water; and our soul loatheth this light bread.
- Bible in Basic English (BBE)
- And crying out against God and against Moses, they said, Why have you taken us out of Egypt to come to our death in the waste land? For there is no bread and no water, and this poor bread is disgusting to us.
- Darby Translation (DBY)
- and the people spoke against God, and against Moses, Why have ye brought us up out of Egypt that we should die in the wilderness? for there is no bread, and no water, and our soul loathes this light bread.
- Webster's Bible (WBS)
- And the people spoke against God, and against Moses, Why have ye brought us out of Egypt to die in the wilderness? for [there is] no bread, neither [is there any] water; and our soul lotheth this light bread.
- Young's Literal Translation (YLT)
- and the people speak against God, and against Moses, 'Why hast thou brought us up out of Egypt to die in a wilderness? for there is no bread, and there is no water, and our soul hath been weary of this light bread.'
Read in context
- 3ಆಗ ಕರ್ತನು ಇಸ್ರಾಯೇಲ್ಯರ ಪ್ರಾರ್ಥನೆಯನ್ನು ಕೇಳಿ ಕಾನಾನ್ಯರನ್ನು ಕೊಟ್ಟುಬಿಟ್ಟನು; ಇಸ್ರಾಯೇಲ್ಯರು ಅವರನ್ನೂ ಅವರ ಪಟ್ಟಣಗಳನ್ನೂ ಸಂಪೂರ್ಣವಾಗಿ ನಾಶಮಾಡಿದರು. ಅವರು ಆ ಸ್ಥಳಕ್ಕೆ ಹೊರ್ಮಾ ಎಂದು ಹೆಸರಿಟ್ಟರು.
- 4ಅವರು ಹೋರ್ ಎಂಬ ಬೆಟ್ಟದಿಂದ ಹೊರಟು ಎದೋಮ್ಯರ ದೇಶವನ್ನು ಸುತ್ತಿಕೊಂಡು ಹೋಗುವ ದಕ್ಕೆ ಕೆಂಪುಸಮುದ್ರದ ಮಾರ್ಗವಾಗಿ ಪ್ರಯಾಣ ಮಾಡಿದರು. ಆದರೆ ಜನರು ಮಾರ್ಗದ ಆಯಾಸ ದಿಂದ ಬಹಳವಾಗಿ ಕುಂದಿಹೋದರು,
- 5ಆದಕಾರಣ ಜನರು ದೇವರಿಗೂ ಮೋಶೆಗೂ ವಿರೋಧವಾಗಿ ಮಾತನಾಡಿ--ನಾವು ಅರಣ್ಯದಲ್ಲಿ ಸಾಯುವಹಾಗೆ ನಮ್ಮನ್ನು ಐಗುಪ್ತದೇಶದಿಂದ ಯಾಕೆ ಬರಮಾಡಿದ್ದೀರಿ? ಇಲ್ಲಿ ರೊಟ್ಟಿ ಇಲ್ಲ, ನೀರೂ ಇಲ್ಲ; ನಾವು ಈ ನಿಸ್ಸಾರ ವಾದ ರೊಟ್ಟಿಯನ್ನು ತಿಂದು ಅಸಹ್ಯಪಡುತ್ತೇವೆ ಅಂದರು.
- 6ಆಗ ಕರ್ತನು ಜನರೊಳಗೆ ಉರಿ ಸರ್ಪ ಗಳನ್ನು ಕಳುಹಿಸಿದನು; ಅವು ಜನರನ್ನು ಕಚ್ಚಿದ್ದರಿಂದ ಇಸ್ರಾಯೇಲ್ಯರಲ್ಲಿ ಬಹು ಜನರು ಸತ್ತುಹೋದರು.
- 7ಆದದರಿಂದ ಜನರು ಮೋಶೆಯ ಬಳಿಗೆ ಬಂದು --ನಾವು ಕರ್ತನಿಗೂ ನಿನಗೂ ವಿರೋಧವಾಗಿ ಮಾತನಾಡಿ ಪಾಪಮಾಡಿದ್ದೇವೆ; ಆತನು ನಮ್ಮಿಂದ ಸರ್ಪಗಳನ್ನು ದೂರ ಮಾಡುವ ಹಾಗೆ ಆತನಿಗೆ ಪ್ರಾರ್ಥನೆಮಾಡು ಅಂದರು. ಮೋಶೆಯು ಜನರಿ ಗೋಸ್ಕರ ಪ್ರಾರ್ಥನೆಮಾಡಿದನು.
Cross references
- Psalm 78:19 ಕೀರ್ತನೆಗಳು 78:19ಹೌದು, ಅವರು ದೇವರಿಗೆ ವಿರೋಧ ವಾಗಿ ಮಾತನಾಡಿ--ದೇವರು ಅರಣ್ಯದಲ್ಲಿ ಮೇಜನ್ನು ಸಿದ್ಧ ಮಾಡಬಲ್ಲನೋ ಅಂದರು.
- Exodus 17:2–3 ವಿಮೋಚನಕಾಂಡ 17:2–3ಆದಕಾರಣ ಜನರು ಮೋಶೆಯ ಸಂಗಡ ವಿವಾದಮಾಡಿ--ನಮಗೆ ಕುಡಿ ಯುವದಕ್ಕೆ ನೀರು ಕೊಡು ಅಂದಾಗ ಮೋಶೆಯು ಅವರಿಗೆ--ಯಾಕೆ ನನ್ನ ಸಂಗಡ ವಿವಾದ ಮಾಡುತ್ತೀರಿ? ಕರ್ತನನ್ನು ಯಾಕೆ ಪರೀಕ್ಷಿಸುತ್ತೀರಿ ಅಂದನು. ಅಲ್ಲಿ ಜನರು ದಾಹಗೊಂಡು ಮೋಶೆಗೆ ವಿರುದ್ಧವಾಗಿ ಗುಣು ಗುಟ್ಟಿ--ನಮ್ಮನ್ನೂ ನಮ್ಮ ಮಕ್ಕಳನ್ನೂ ನಮ್ಮ ದನಗಳನ್ನೂ ದಾಹದಿಂದ ಕೊಲ್ಲುವದಕ್ಕಾಗಿ ಯಾಕೆ ಐಗುಪ್ತದೊಳ ಗಿಂದ ಇಲ್ಲಿಗೆ ಬರಮಾಡಿದಿ ಅಂದರು.
- Numbers 16:41 ಅರಣ್ಯಕಾಂಡ 16:41ಆದರೆ ಮರುದಿನದಲ್ಲಿ ಇಸ್ರಾಯೇಲ್ ಮಕ್ಕಳ ಸಭೆಯಲ್ಲಾ ಮೋಶೆ ಆರೋನರಿಗೆ ವಿರೋಧವಾಗಿ ಗುಣುಗುಟ್ಟುತ್ತಾ--ನೀವು ಕರ್ತನ ಜನರನ್ನು ಕೊಂದು ಹಾಕಿದ್ದೀರಿ ಅಂದರು.
- Numbers 16:13–14 ಅರಣ್ಯಕಾಂಡ 16:13–14ನೀನು ಅರಣ್ಯ ದಲ್ಲಿ ನಮ್ಮನ್ನು ಸಾಯಿಸುವದಕ್ಕೆ ಹಾಲೂ ಜೇನೂ ಹರಿಯುವ ದೇಶದೊಳಗಿಂದ ನಮ್ಮನ್ನು ಕರೆದುಕೊಂಡು ಬಂದದ್ದು ನಿನಗೆ ಅಲ್ಪವಾಯಿತೋ? ಮತ್ತು ನೀನು ಅರಸನಾಗಿ ನಮ್ಮನ್ನು ಆಳಬೇಕೋ? ಇದಲ್ಲದೆ ನೀನು ನಮ್ಮನ್ನು ಹಾಲೂ ಜೇನೂ ಹರಿಯುವ ದೇಶಕ್ಕೆ ತಕ್ಕೊಂಡು ಬರಲಿಲ್ಲ; ಇಲ್ಲವೆ ಹೊಲಗಳನ್ನೂ ದ್ರಾಕ್ಷೇ ತೋಟಗಳನ್ನೂ ನಮಗೆ ಸ್ವಾಸ್ತ್ಯವಾಗಿ ಕೊಡಲಿಲ್ಲ; ಈ ಮನುಷ್ಯರ ಕಣ್ಣುಗಳನ್ನು ಕಿತ್ತುಬಿಡುವಿಯೋ? ನಾವು ಬರುವದಿಲ್ಲ ಅಂದರು.
- Numbers 17:12 ಅರಣ್ಯಕಾಂಡ 17:12ಆಗ ಇಸ್ರಾಯೇಲ್ ಮಕ್ಕಳು ಮೋಶೆಯ ಸಂಗಡ ಮಾತನಾಡಿ--ಇಗೋ, ಸಾಯುತ್ತೇವೆ. ನಾಶವಾಗು ತ್ತೇವೆ: ನಾವೆಲ್ಲರೂ ನಾಶವಾಗುತ್ತೇವೆ.ಕರ್ತನ ಗುಡಾರದ ಸವಿಾಪಕ್ಕೆ ಬರುವವರೆಲ್ಲರೂ ಸಾಯುವರು. ಸಾಯುವದರಿಂದ ನಾವು ನಾಶವಾಗಬೇಕೋ ಎಂದು ಹೇಳಿದರು.
- Numbers 14:1–4 ಅರಣ್ಯಕಾಂಡ 14:1–4ಆಗ ಸಭೆಯವರೆಲ್ಲಾ ತಮ್ಮ ಸ್ವರವೆತ್ತಿ ಕೂಗುವವರಾಗಿ ಆ ರಾತ್ರಿಯೆಲ್ಲಾ ಅತ್ತರು. ಇಸ್ರಾಯೇಲ್ ಮಕ್ಕಳೆಲ್ಲರೂ ಮೋಶೆಗೂ ಆರೋನ ರಿಗೂ ವಿರೋಧವಾಗಿ ಗುಣುಗುಟ್ಟಿದರು. ಸಭೆಯಲ್ಲಾ ಅವರಿಗೆ--ನಾವು ಐಗುಪ್ತ ದೇಶದಲ್ಲಿ ಸತ್ತಿದ್ದರೆ ಇಲ್ಲವೆ ಈ ಅರಣ್ಯದಲ್ಲಿ ಸತ್ತರೆ ನಮಗೆ ಒಳ್ಳೇದಾಗಿತ್ತು. ನಾವು ಕತ್ತಿಯಿಂದ ಕೊಲೆಯಾಗುವಂತೆ ನಮ್ಮ ಹೆಂಡತಿ ಮಕ್ಕಳೂ ಸುಲಿಗೆಯಾಗುವ ಹಾಗೆಯೂ ಕರ್ತನು ನಮ್ಮನ್ನು ಈ ದೇಶಕ್ಕೆ ಯಾಕೆ ಬರಮಾಡಿದ್ದಾನೆ? ಐಗುಪ್ತದೇಶಕ್ಕೆ ನಾವು ತಿರಿಗಿ ಹೋಗುವದು ನಮಗೆ ಒಳ್ಳೇದಲ್ಲವೋ? ನಾವು ನಾಯಕನೊಬ್ಬನನ್ನು ಮಾಡಿ ಕೊಂಡು ಐಗುಪ್ತದೇಶಕ್ಕೆ ಹಿಂತಿರುಗೋಣ ಬನ್ನಿರಿ ಎಂದು ಒಬ್ಬರಿಗೊಬ್ಬರು ಹೇಳಿಕೊಂಡರು.
- Exodus 16:2–3 ವಿಮೋಚನಕಾಂಡ 16:2–3ಆಗ ಇಸ್ರಾಯೇಲ್ ಮಕ್ಕಳ ಸಭೆಯೆಲ್ಲಾ ಅರಣ್ಯದಲ್ಲಿ ಮೋಶೆಗೂ ಆರೋನನಿಗೂ ವಿರೋಧ ವಾಗಿ ಗುಣುಗುಟ್ಟಿತು. ಇಸ್ರಾಯೇಲ್ ಮಕ್ಕಳು ಅವರಿಗೆ--ನಾವು ಐಗುಪ್ತದೇಶದಲ್ಲಿ ಮಾಂಸದ ಪಾತ್ರೆ ಗಳ ಬಳಿಯಲ್ಲಿ ಕೂತುಕೊಂಡು ಸಾಕಾಗುವಷ್ಟು ರೊಟ್ಟಿ ಯನ್ನು ತಿನ್ನುತ್ತಿದ್ದಾಗ ಕರ್ತನ ಕೈಯಿಂದ ಸತ್ತುಹೋಗಿದ್ದರೆ ಒಳ್ಳೆದಾಗಿತ್ತು. ಈ ಸಭೆಯನ್ನೆಲ್ಲಾ ಸಾಯಿಸುವಂತೆ ನಮ್ಮನ್ನು ಈ ಅರಣ್ಯಕ್ಕೆ ಬರಮಾಡಿದ್ದೀರಿ ಅಂದರು.
- Numbers 11:1–9 ಅರಣ್ಯಕಾಂಡ 11:1–9ಜನರು ಗುಣುಗುಟ್ಟಿದಾಗ ಅದು ಕರ್ತನಿಗೆ ಮೆಚ್ಚಿಗೆಯಾಗಲಿಲ್ಲ. ಕರ್ತನು ಅದನ್ನು ಕೇಳಿ ಕೋಪಿಸಿಗೊಂಡನು. ಕರ್ತನ ಬೆಂಕಿಯು ಅವರಲ್ಲಿ ಹತ್ತಿ ಪಾಳೆಯದ ಕಟ್ಟಕಡೆಯ ಭಾಗದಲ್ಲಿ ದಹಿಸಿತು. ಆಗ ಜನರು ಮೋಶೆಗೆ ಕೂಗಿಕೊಂಡದ್ದರಿಂದ ಮೋಶೆಯು ಕರ್ತನಿಗೆ ಪ್ರಾರ್ಥನೆ ಮಾಡಿದನು. ಆಗ ಬೆಂಕಿಯು ಆರಿಹೋಯಿತು. ಕರ್ತನ ಬೆಂಕಿಯು ಅವರಲ್ಲಿ ದಹಿಸಿದ್ದರಿಂದ ಆ ಸ್ಥಳಕ್ಕೆ ತಬೇರ ಎಂದು ಹೆಸರಿಟ್ಟರು. ಆಗ ಅವರೊಳಗಿದ್ದ ಮಿಶ್ರವಾದ ಗುಂಪಿನ ಜನರು ದುರಾಶೆಪಟ್ಟರು. ಇಸ್ರಾಯೇಲ್ ಮಕ್ಕಳು ಸಹ ತಿರಿಗಿ ಅತ್ತು--ನಮಗೆ ತಿನ್ನುವದಕ್ಕೆ ಮಾಂಸವನ್ನು ಕೊಡು ವವರು ಯಾರು? ನಾವು ಐಗುಪ್ತದೇಶದಲ್ಲಿ ಉಚಿತ ವಾಗಿ ತಿಂದ ವಿಾನು ಸವತೆಕಾಯಿ ಕರ್ಬೂಜ ಕಾಡುಳ್ಳಿ ನೀರುಳ್ಳಿ ಬೆಳ್ಳುಳ್ಳಿ ಇವುಗಳನ್ನು ಜ್ಞಾಪಿಸಿಕೊಳ್ಳುತ್ತೇವೆ. ಆದರೆ ಈಗ ನಮ್ಮ ಪ್ರಾಣವು ಬತ್ತಿಹೋಯಿತು; ಈ ಮನ್ನವಲ್ಲದೆ ಮತ್ತೆ ಬೇರೆ ಯಾವದೂ ನಮ್ಮ ಕಣ್ಣುಗಳ ಮುಂದೆ ಇರುವದಿಲ್ಲ ಅಂದರು. ಆ ಮನ್ನವು ಕೊತ್ತುಂಬರಿ ಬೀಜದ ಹಾಗೆ ಇತ್ತು. ಅದರ ಬಣ್ಣವು ಬದೋಲಖ ಬಣ್ಣದ ಹಾಗಿತ್ತು. ಜನರು ಹೊರಗೆಹೋಗಿ ಅದನ್ನು ಕೂಡಿಸಿ ಬೀಸುವ ಕಲ್ಲುಗಳಲ್ಲಿ ಬೀಸಿ ಇಲ್ಲವೆ ಒರಳಿನಲ್ಲಿ ಕುಟ್ಟಿ ತವೆಗಳಲ್ಲಿ ಸುಟ್ಟು ಅದರಿಂದ ರೊಟ್ಟಿಗಳನ್ನು ಮಾಡುತ್ತಿದ್ದರು. ಅದು ಶುದ್ಧ ಎಣ್ಣೇ ರೊಟ್ಟಿಯ ರುಚಿಯ ಹಾಗೆ ಇತ್ತು. ರಾತ್ರಿಯಲ್ಲಿ ಮಂಜು ಪಾಳೆಯದ ಮೇಲೆ ಬೀಳುತ್ತಿ ದ್ದಾಗ ಮನ್ನವು ಅದರ ಮೇಲೆ ಬೀಳುತ್ತಿತ್ತು.
- Exodus 14:11 ವಿಮೋಚನಕಾಂಡ 14:11ಅವರು ಮೋಶೆಗೆ--ಐಗುಪ್ತದಲ್ಲಿ ಸಮಾಧಿ ಗಳು ಇಲ್ಲದ ಕಾರಣ ನಾವು ಅರಣ್ಯದಲ್ಲಿ ಸಾಯುವ ಹಾಗೆ ನಮ್ಮನ್ನು ಕರಕೊಂಡು ಬಂದಿಯೋ? ಯಾಕೆ ನೀನು ಈ ಪ್ರಕಾರ ನಮಗೆ ಮಾಡಿ ನಮ್ಮನ್ನು ಐಗುಪ್ತ ದಿಂದ ಕರಕೊಂಡು ಬಂದಿ?
- Exodus 15:24 ವಿಮೋಚನಕಾಂಡ 15:24ಆದದ ರಿಂದ ಜನರು--ನಾವು ಏನು ಕುಡಿಯೋಣ ಎಂದು ಹೇಳಿ ಮೋಶೆಗೆ ವಿರೋಧವಾಗಿ ಗುಣುಗುಟ್ಟಿದರು.
- Psalm 78:24–25 ಕೀರ್ತನೆಗಳು 78:24–25ಉಣ್ಣುವದಕ್ಕೆ ಮನ್ನವನ್ನು ಅವರ ಮೇಲೆ ಸುರಿಸಿ ಪರಲೋಕದ ಧಾನ್ಯವನ್ನು ಅವರಿಗೆ ಕೊಟ್ಟನು. ಮನುಷ್ಯನು ದೂತರ ಆಹಾರ ವನ್ನು ತಿಂದನು; ತೃಪ್ತಿಯಾಗುವಷ್ಟು ಆಹಾರವನ್ನು ಅವರಿಗೆ ಆತನು ಕಳುಹಿಸಿದನು.
- Exodus 16:31 ವಿಮೋಚನಕಾಂಡ 16:31ಆಗ ಇಸ್ರಾಯೇಲ್ ಮನೆತನವು ಅದಕ್ಕೆ ಮನ್ನ ಎಂದು ಹೆಸರಿಟ್ಟಿತು. ಅದು ಕೊತ್ತಂಬರಿ ಬೀಜದಂತೆ ಬೆಳ್ಳಗಿತ್ತು. ಅದರ ರುಚಿಯು ಜೇನಿನಲ್ಲಿ ಕಲಸಿದ ದೋಸೆಯಂತೆ ಇತ್ತು.
Original words (Hebrew)
- people · H5971עַם ʻam
- spake · H1696דָבַר dâbar
- God · H430אֱלֹהִים ʼĕlôhîym
- Moses · H4872מֹשֶׁה Môsheh
- up · H5927עָלָה ʻâlâh
- Egypt · H4714מִצְרַיִם Mitsrayim
- die · H4191מוּת mûwth
- wilderness · H4057מִדְבָּר midbâr
- bread · H3899לֶחֶם lechem
- water · H4325מַיִם mayim
- soul · H5315נֶפֶשׁ nephesh
- loatheth · H6973קוּץ qûwts
- light · H7052קְלֹקֵל qᵉlôqêl
- bread · H3899לֶחֶם lechem