1 Kings · chapter 12 · verse 1
1 Kings 12:1 in Kannada
ರೆಹಬ್ಬಾಮನು ಶೆಕೆಮಿಗೆ ಹೋದನು; ಯಾಕಂದರೆ ಅವನನ್ನು ಅರಸನಾಗ ಮಾಡುವದಕ್ಕೆ ಸಮಸ್ತ ಇಸ್ರಾಯೇಲ್ಯರು ಶೆಕೆಮಿಗೆ ಬಂದರು.
Rehabbaamanu shekemige hodanu; yaakandare avanannu arasanaaga maaduvadakke samasta israayelyaru shekemige bandaru.
1 Kings 12:1 in English
- King James Version (KJV)
- And Rehoboam went to Shechem: for all Israel were come to Shechem to make him king.
- World English Bible (WEB)
- Rehoboam went to Shechem, for all Israel had come to Shechem to make him king.
- American Standard Version (ASV)
- And Rehoboam went to Shechem: for all Israel were come to Shechem to make him king.
- Bible in Basic English (BBE)
- And Rehoboam went to Shechem, where all Israel had come together to make him king,
- Darby Translation (DBY)
- And Rehoboam went to Shechem; for all Israel had come to Shechem to make him king.
- Webster's Bible (WBS)
- And Rehoboam went to Shechem: for all Israel had come to Shechem to make him king.
- Young's Literal Translation (YLT)
- And Rehoboam goeth to Shechem, for to Shechem hath all Israel come to make him king.
Read in context
- 1ರೆಹಬ್ಬಾಮನು ಶೆಕೆಮಿಗೆ ಹೋದನು; ಯಾಕಂದರೆ ಅವನನ್ನು ಅರಸನಾಗ ಮಾಡುವದಕ್ಕೆ ಸಮಸ್ತ ಇಸ್ರಾಯೇಲ್ಯರು ಶೆಕೆಮಿಗೆ ಬಂದರು.
- 2(ಅರಸನಾದ ಸೊಲೊಮೋನನ ಸಮ್ಮುಖ ದಿಂದ ಓಡಿಹೋಗಿ ಐಗುಪ್ತದಲ್ಲಿ ವಾಸವಾಗಿದ್ದು) ಇನ್ನೂ ಐಗುಪ್ತದಲ್ಲಿದ್ದ ನೆಬಾಟನ ಮಗನಾದ ಯಾರೊಬ್ಬಾಮನು ಇದನ್ನು ಕೇಳಿದಾಗ ಅವರು ಅವ ನನ್ನು ಕರೇಕಳುಹಿಸಿದರು.
- 3ಆಗ ಯಾರೊಬ್ಬಾಮನೂ ಇಸ್ರಾಯೇಲಿನ ಸಮಸ್ತ ಕೂಟವೂ ರೆಹಬ್ಬಾಮನ ಬಳಿಗೆ ಬಂದು ಅವನ ಸಂಗಡ ಮಾತನಾಡಿ--ನಿನ್ನ ತಂದೆಯು ನಮ್ಮ ನೊಗವನ್ನು ಕಠಿಣವಾಗ ಮಾಡಿದನು;
Cross references
- Judges 9:6 ನ್ಯಾಯಸ್ಥಾಪಕರು 9:6ಶೆಕೆಮಿನ ಜನರೆಲ್ಲರೂ ಮಿಲ್ಲೋನಿನ ಮನೆಯವರೆಲ್ಲರೂ ಕೂಡಿಕೊಂಡು ಹೋಗಿ ಶೆಕೆಮಿನ ಬೈಲಲ್ಲಿ ಇರುವ ಸ್ತಂಭದ ಬಳಿಯಲ್ಲಿ ಅಬೀಮೆಲೆಕನನ್ನು ಅರಸನನ್ನಾಗಿ ನೇಮಿಸಿದರು.
- 2 Chronicles 10:1–19 2 ಪೂರ್ವಕಾಲವೃತ್ತಾಂತ 10:1–19ಆಗ ರೆಹಬ್ಬಾಮನು ಶೆಕೆಮಿಗೆ ಹೋದನು; ಅವನನ್ನು ಅರಸನಾಗಿ ಮಾಡುವದಕ್ಕೆ ಸಮಸ್ತ ಇಸ್ರಾಯೇಲ್ಯರು ಶೆಕೆಮಿಗೆ ಬಂದರು. ಅರಸ ನಾದ ಸೊಲೊಮೋನನ ಸಮ್ಮುಖದಿಂದ ಓಡಿಹೋಗಿ ಐಗುಪ್ತದಲ್ಲಿ ವಾಸವಾಗಿದ್ದು ಐಗುಪ್ತದಲ್ಲಿರುವ ನೆಬಾ ಟನ ಮಗನಾದ ಯಾರೊಬ್ಬಾಮನು ಇದನ್ನು ಕೇಳಿ ಐಗುಪ್ತದಿಂದ ತಿರಿಗಿ ಬಂದನು. ಅವರು ಅವನನ್ನು ಕರೇಕಳುಹಿಸಿದರು. ಆಗ ಯಾರೊಬ್ಬಾಮನೂ ಸಮಸ್ತ ಇಸ್ರಾಯೇಲ್ಯರೂ ರೆಹಬ್ಬಾಮನ ಬಳಿಗೆ ಬಂದು ಅವನ ಸಂಗಡ ಮಾತನಾಡಿ--ನಿನ್ನ ತಂದೆಯು ನಮ್ಮ ನೊಗವನ್ನು ಕಠಿಣವಾಗಿ ಮಾಡಿದನು; ಈಗ ನೀನು ನಿನ್ನ ತಂದೆಯ ಕಠಿಣವಾದ ಸೇವೆಯನ್ನೂ ಅವನು ನಮ್ಮ ಮೇಲೆ ಹಾಕಿದ ತನ್ನ ಭಾರವಾದ ನೊಗವನ್ನೂ ಹಗುರ ಮಾಡಿದರೆ ನಾವು ನಿನ್ನನ್ನು ಸೇವಿಸುವೆವು ಅಂದರು. ಅವನು ಅವರಿಗೆ--ಮೂರು ದಿವಸಗಳಾದ ತರುವಾಯ ತಿರಿಗಿ ನನ್ನ ಬಳಿಗೆ ಬನ್ನಿರಿ ಎಂದು ಹೇಳಿದ್ದರಿಂದ ಜನರು ಹೊರಟುಹೋದರು. ಆಗ ಅರಸನಾದ ರೆಹಬ್ಬಾಮನು ತನ್ನ ತಂದೆಯಾದ ಸೊಲೊಮೋನನು ಬದುಕಿರುವಾಗ ಅವನ ಮುಂದೆ ನಿಲ್ಲುತ್ತಿದ್ದ ಹಿರಿಯರ ಆಲೋಚನೆಯನ್ನು ಕೇಳಿ-- ಈ ಜನರಿಗೆ ಪ್ರತ್ಯುತ್ತರಕೊಡಲು ನೀವು ಏನು ಆಲೋಚನೆ ಹೇಳುತ್ತೀರಿ ಅಂದನು. ಅವರು ಅವ ನಿಗೆ--ನೀನು ಈ ಜನರಿಗೆ ದಯವುಳ್ಳವನಾಗಿ ಅವ ರನ್ನು ಮೆಚ್ಚಿಸಿ ಅವರಿಗೆ ಒಳ್ಳೇ ಮಾತುಗಳನ್ನು ಆಡಿದರೆ ಅವರು ಎಂದೆಂದಿಗೂ ನಿನ್ನ ಸೇವಕರಾಗಿರುವರು ಅಂದರು. ಆದರೆ ಹಿರಿಯರು ತನಗೆ ಹೇಳಿದ ಆಲೋಚನೆಯನ್ನು ಬಿಟ್ಟು ತನ್ನ ಸಂಗಡ ಬೆಳೆದು ತನ್ನ ಮುಂದೆ ನಿಂತಿರುವ ಯೌವನಸ್ಥರ ಆಲೋಚನೆಯನ್ನು ಅವನು ಕೇಳಿ ಅವರಿಗೆ-- ನಿನ್ನ ತಂದೆಯು ನಮ್ಮ ಮೇಲೆ ಹಾಕಿದ ನೊಗವನ್ನು ಹಗುರ ಮಾಡೆಂದು ನನಗೆ ಹೇಳಿದ ಈ ಜನರಿಗೆ ಪ್ರತ್ಯುತ್ತರಕೊಡಲು ನೀವು ಯಾವ ಯೋಚನೆ ಹೇಳುತ್ತೀರಿ ಅಂದನು. ಆಗ ಅವನ ಕೂಡ ಬೆಳೆದ ಯೌವನಸ್ಥರು ಅವ ನಿಗೆ--ನಿನ್ನ ತಂದೆಯು ನಮ್ಮ ನೊಗವನ್ನು ಭಾರ ಮಾಡಿದನು; ಆದರೆ ನೀನು ಅದನ್ನು ನಮಗೆ ಹಗುರ ಮಾಡೆಂದು ನಿನ್ನ ಸಂಗಡ ಮಾತನಾಡಿ ಹೇಳಿದ ಈ ಜನರಿಗೆ ನೀನು ಹೀಗೆ ಹೇಳಬೇಕು--ನನ್ನ ಕಿರು ಬೆರಳು ನನ್ನ ತಂದೆಯ ನಡುವಿಗಿಂತ ದಪ್ಪವಾಗಿರು ವದು. ನನ್ನ ತಂದೆಯು ನಿಮ್ಮ ಮೇಲೆ ಭಾರವಾದ ನೊಗವನ್ನು ಹೊರಿಸಿದನು; ನಾನಾದರೋ ನಿಮ್ಮ ನೊಗವನ್ನು ಹೆಚ್ಚು ಭಾರವಾಗಿ ಮಾಡುವೆನು. ನನ್ನ ತಂದೆಯು ನಿಮ್ಮನ್ನು ಬೆತ್ತಗಳಿಂದ ಶಿಕ್ಷಿಸಿದನು; ಆದರೆ ನಾನು ನಿಮ್ಮನ್ನು ಚೇಳುಗಳಿಂದ ಶಿಕ್ಷಿಸುವೆನು ಎಂದು ಹೇಳು ಅಂದರು. ಆಗ--ಮೂರನೇ ದಿವಸದಲ್ಲಿ ನನ್ನ ಬಳಿಗೆ ಬನ್ನಿರಿ ಎಂದು ಅರಸನು ಹೇಳಿದ ಪ್ರಕಾರ ಮೂರನೇ ದಿವಸದಲ್ಲಿ ಯಾರೊಬ್ಬಾಮನೂ ಸಮಸ್ತ ಜನರೂ ರೆಹಬ್ಬಾಮನ ಬಳಿಗೆ ಬಂದರು. ಅರಸನು ಜನರಿಗೆ ಕಠಿಣವಾದ ಪ್ರತ್ಯುತ್ತರ ಹೇಳಿದನು; ಹಿರಿಯರು ಅವನಿಗೆ ಕೊಟ್ಟ ಆಲೋಚನೆಯನ್ನು ಬಿಟ್ಟು ಯೌವ ನಸ್ಥರ ಆಲೋಚನೆಯ ಪ್ರಕಾರ ಅವರ ಸಂಗಡ ಮಾತನಾಡಿ ಅವರಿಗೆ-- ನನ್ನ ತಂದೆಯು ನಿಮ್ಮ ನೊಗವನ್ನು ಭಾರ ಮಾಡಿದನು; ನಾನು ಅದನ್ನು ಇನ್ನೂ ಹೆಚ್ಚು ಭಾರ ಮಾಡುತ್ತೇನೆ. ನನ್ನ ತಂದೆಯು ನಿಮ್ಮನ್ನು ಬೆತ್ತಗಳಿಂದ ಶಿಕ್ಷಿಸಿದನು; ನಾನು ನಿಮ್ಮನ್ನು ಚೇಳುಗಳಿಂದ ಶಿಕ್ಷಿಸುವೆನು ಅಂದನು. ಹೀಗೆ ಅರ ಸನು ಜನರ ಮಾತನ್ನು ಕೇಳದೆ ಹೋದನು. ಕರ್ತನು ನೆಬಾಟನ ಮಗನಾದ ಯಾರೊಬ್ಬಾಮನಿಗೆ ಶಿಲೋವಿ ನವನಾದ ಅಹೀಯನ ಮುಖಾಂತರ ಹೇಳಿದ ವಾಕ್ಯವು ಈಡೇರುವದಕ್ಕೆ ಈ ಕಾರಣ ದೇವರಿಂದ ಉಂಟಾ ಯಿತು. ಅರಸನು ತಮಗೆ ಕಿವಿಗೊಡದೆ ಹೋದ ನೆಂದು ಸಮಸ್ತ ಇಸ್ರಾಯೇಲ್ಯರು ನೋಡಿ ಅರಸನಿಗೆ ಪ್ರತ್ಯುತ್ತರವಾಗಿ--ದಾವೀದನಲ್ಲಿ ನಮಗೆ ಭಾಗವೇನು? ಇಷಯನ ಮಗನಲ್ಲಿ ನಮಗೆ ಬಾಧ್ಯತೆ ಇಲ್ಲ. ಇಸ್ರಾ ಯೇಲ್ಯರೇ, ನಿಮ್ಮ ಗುಡಾರಗಳಿಗೆ ಹೋಗಿರಿ; ದಾವೀ ದನೇ, ನಿನ್ನ ಮನೆಯನ್ನು ನೋಡಿಕೋ ಎಂದು ಹೇಳಿ ಇಸ್ರಾಯೇಲ್ಯರೆಲ್ಲರು ತಮ್ಮ ಗುಡಾರಗಳಿಗೆ ಹೋದರು. ಆದರೆ ಯೆಹೂದದ ಪಟ್ಟಣಗಳಲ್ಲಿ ವಾಸವಾಗಿರುವ ಇಸ್ರಾಯೇಲಿನ ಮಕ್ಕಳ ಮೇಲೆ ರೆಹಬ್ಬಾಮನು ಆಳಿದನು. ಆಗ ರೆಹಬ್ಬಾಮನು ಕಪ್ಪಕ್ಕೆ ಗೊತ್ತುಗಾರನಾದ ಹದೋರಾಮನನ್ನು ಕಳು ಹಿಸಲು ಇಸ್ರಾಯೇಲಿನ ಮಕ್ಕಳು ಅವನ ಮೇಲೆ ಕಲ್ಲೆಸೆದು ಕೊಂದುಹಾಕಿದರು, ಆದದರಿಂದ ಅರಸನಾದ ರೆಹಬ್ಬಾಮನು ಯೆರೂಸಲೇಮಿಗೆ ಓಡಿಹೋಗಲು ಆತುರಪಟ್ಟು ತನ್ನ ರಥವನ್ನೇರಿದನು.ಹೀಗೆ ಇಂದಿನ ವರೆಗೂ ಇಸ್ರಾಯೇಲ್ಯರು ದಾವೀದನ ಮನೆಗೆ ವಿರೋಧವಾಗಿ ತಿರುಗಿಬಿದ್ದರು. ಹೀಗೆ ಇಂದಿನ ವರೆಗೂ ಇಸ್ರಾಯೇಲ್ಯರು ದಾವೀದನ ಮನೆಗೆ ವಿರೋಧವಾಗಿ ತಿರುಗಿಬಿದ್ದರು.
- Joshua 24:1 ಯೆಹೋಶುವ 24:1ಯೆಹೋಶುವನು ಶೆಕೆಮಿನಲ್ಲಿ ಇಸ್ರಾಯೇಲಿನ ಸಮಸ್ತ ಗೋತ್ರದವರನ್ನು ಕೂಡಿಸಿ ಇಸ್ರಾಯೇಲಿನ ಹಿರಿಯರನ್ನೂ ಅವರ ಮುಖ್ಯಸ್ಥ ರನ್ನೂ ನ್ಯಾಯಾಧಿಪತಿಗಳನ್ನೂ ಅಧಿಕಾರಿಗಳನ್ನೂ ಕರೆಸಿದನು. ಅವರು ದೇವರ ಮುಂದೆ ಬಂದು ನಿಂತರು.
- 1 Kings 11:43 1 ಅರಸುಗಳು 11:43ಸೊಲೊಮೋನನು ತನ್ನ ಪಿತೃ ಗಳ ಸಂಗಡ ಮಲಗಿದನು; ಅವನು ತನ್ನ ತಂದೆ ಯಾದ ದಾವೀದನ ಪಟ್ಟಣದಲ್ಲಿ ಹೂಣಲ್ಪಟ್ಟನು; ಅವನ ಮಗನಾದ ರೆಹಬ್ಬಾಮನು ಅವನಿಗೆ ಬದಲಾಗಿ ಆಳಿದನು.
- Judges 9:1 ನ್ಯಾಯಸ್ಥಾಪಕರು 9:1ಯೆರುಬ್ಬಾಳನ ಮಗನಾದ ಅಬೀಮೆಲೆಕನು ಶೆಕೆಮಿನಲ್ಲಿರುವ ತನ್ನ ತಾಯಿಯ ಸಹೋದರರ ಬಳಿಗೆ ಹೋಗಿ ಅವರ ಸಂಗಡವೂ ತನ್ನ ತಾಯಿಯ ತಂದೆ ಮನೆಯ ಕುಟುಂಬದವರೆ ಲ್ಲರ ಸಂಗಡವೂ ಮಾತನಾಡಿ--
- Joshua 20:7 ಯೆಹೋಶುವ 20:7ಹಾಗೆಯೇ ಅವರು ನಫ್ತಾಲಿಯ ಬೆಟ್ಟದ ಗಲಿಲಾಯದಲ್ಲಿ ಇರುವ ಕೆದೆಷನ್ನೂ ಎಫ್ರಾ ಯಾಮನ ಬೆಟ್ಟಗಳಲ್ಲಿರುವ ಶೆಕೇಮನ್ನೂ ಯೂದದ ಬೆಟ್ಟಗಳಲ್ಲಿರುವ ಹೆಬ್ರೋನ್ ಎಂಬ ಕಿರ್ಯರ್ತ್ಬ ವನ್ನೂ ನೇಮಿಸಿದರು.
- Genesis 12:6 ಆದಿಕಾಂಡ 12:6ಅಬ್ರಾಮನು ಆ ದೇಶದಲ್ಲಿ ಶೆಕೆಮ್ ಎಂಬ ಸ್ಥಳದ ಮೋರೆಯೆಂಬ ಮೈದಾನದ ವರೆಗೆ ಹಾದು ಹೋದನು. ಆಗ ಕಾನಾನ್ಯರು ದೇಶದಲ್ಲಿ ಇದ್ದರು.
- Genesis 33:18–19 ಆದಿಕಾಂಡ 33:18–19ಯಾಕೋಬನು ಪದ್ದನ್ ಅರಾಮಿನಿಂದ ಬಂದು ಕಾನಾನ್ ದೇಶದ ಶೆಕೆಮಿನಲ್ಲಿರುವ ಸಾಲೆಮ್ ಪಟ್ಟಣಕ್ಕೆ ಬಂದು ಪಟ್ಟಣದ ಮುಂದೆ ತನ್ನ ಗುಡಾರಗಳನ್ನು ಹಾಕಿದನು. ಅವನು ತನ್ನ ಗುಡಾರಗಳನ್ನು ಹಾಕಿದ ಭೂಮಿಯನ್ನು ಶೆಕೆಮಿನ ತಂದೆಯಾದ ಹಮೋರನ ಮಕ್ಕಳ ಕೈಯಿಂದ ನೂರು ನಾಣ್ಯಗಳಿಗೆ ಕೊಂಡು ಕೊಂಡನು.ಅಲ್ಲಿ ಯಜ್ಞವೇದಿಯನ್ನು ಕಟ್ಟಿಸಿ ಅದಕ್ಕೆ ಏಲೆಲೋಹೇ ಇಸ್ರಾಯೇಲ್ ಎಂದು ಹೆಸರಿಟ್ಟನು.
- Psalm 60:6 ಕೀರ್ತನೆಗಳು 60:6ದೇವರು ತನ್ನ ಪರಿಶುದ್ಧತ್ವದಿಂದ ನುಡಿದಿದ್ದಾನೆ; ನಾನು ಉತ್ಸಾಹಪಡುವೆನು; ಶೆಕೆಮನ್ನು ವಿಭಾಗಿ ಸುವೆನು; ಸುಖೋತಿನ ತಗ್ಗನ್ನು ಅಳೆಯುವೆನು.
- Joshua 24:32 ಯೆಹೋಶುವ 24:32ಇದ ಲ್ಲದೆ ಇಸ್ರಾಯೇಲ್ ಮಕ್ಕಳು ಐಗುಪ್ತದಿಂದ ತಂದ ಯೋಸೇಫನ ಎಲುಬುಗಳನ್ನು ಅವರು ಶೆಕೆಮಿನಲ್ಲಿ ಯಾಕೋಬನು ಶೆಕೆಮನ ತಂದೆಯಾದ ಹಮೋರನ ಮಕ್ಕಳಿಂದ ನೂರು ಬೆಳ್ಳಿನಾಣ್ಯಗಳಿಗೆ ಕೊಂಡು ಕೊಂಡಿದ್ದ, ಯೋಸೇಫನ ಮಕ್ಕಳಿಗೆ ಬಾಧ್ಯತೆ ಯಾದ, ನೆಲದ ಭಾಗದಲ್ಲಿ ಹೂಣಿಟ್ಟರು.ಆರೋ ನನ ಮಗನಾದ ಎಲೀಯಾಜರನು ಸತ್ತನು; ಅವ ನನ್ನು ಅವನ ಮಗನಾದ ಫೀನೆಹಾಸನಿಗೆ ಎಫ್ರಾ ಯಾಮ್ ಬೆಟ್ಟದ ದೇಶದಲ್ಲಿ ಕೊಡಲ್ಪಟ್ಟ ಗುಡ್ಡದಲ್ಲಿ ಹೂಣಿಟ್ಟರು.
- Acts 7:16 ಅಪೊಸ್ತಲರ ಕೃತ್ಯಗಳು 7:16ಅವರನ್ನು ಶೇಕೆಮಿಗೆ ತೆಗೆದುಕೊಂಡು ಹೋಗಿ ಶೆಕೆಮನ ತಂದೆಯಾದ ಹಮೋರನ ಮಕ್ಕಳಿಂದ ಅಬ್ರಹಾಮನು ಹಣಕೊಟ್ಟು ಕೊಂಡುಕೊಂಡಿದ್ದ ಸಮಾಧಿಯೊಳಗೆ ಇಟ್ಟರು.