1 Peter · chapter 5 · verse 7
1 Peter 5:7 in Kannada
ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.
Nimma chinteyannellaa aatana mele haakiri, aatanu nimagoskara chintisuttaane.
1 Peter 5:7 in English
- King James Version (KJV)
- Casting all your care upon him; for he careth for you.
- World English Bible (WEB)
- casting all your worries on him, because he cares for you.
- American Standard Version (ASV)
- casting all your anxiety upon him, because he careth for you.
- Bible in Basic English (BBE)
- Putting all your troubles on him, for he takes care of you.
- Darby Translation (DBY)
- having cast all your care upon him, for he cares about you.
- Webster's Bible (WBS)
- Casting all your care upon him; for he careth for you.
- Young's Literal Translation (YLT)
- all your care having cast upon Him, because He careth for you.
Read in context
- 5ಅದೇ ರೀತಿಯಾಗಿ ಯೌವನಸ್ಥರೇ, ಹಿರಿಯರಿಗೆ ಅಧೀನರಾಗಿರ್ರಿ; ನೀವೆಲ್ಲರೂ ದೀನತೆಯೆಂಬ ವಸ್ತ್ರವನ್ನು ಧರಿಸಿಕೊಂಡು ಒಬ್ಬರಿಗೊಬ್ಬರು ಅಧೀನರಾಗಿರ್ರಿ. ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ. ದೀನರಿ ಗಾದರೊ ಕೃಪೆಯನ್ನು ಅನುಗ್ರಹಿಸುತ್ತಾನೆ.
- 6ಹೀಗಿರುವದರಿಂದ ದೇವರ ತ್ರಾಣವುಳ್ಳ ಹಸ್ತದ ಕೆಳಗೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ; ಆತನು ತಕ್ಕ ಕಾಲದಲ್ಲಿ ನಿಮ್ಮನ್ನು ಮೇಲಕ್ಕೆ ತರುವನು.
- 7ನಿಮ್ಮ ಚಿಂತೆಯನ್ನೆಲ್ಲಾ ಆತನ ಮೇಲೆ ಹಾಕಿರಿ, ಆತನು ನಿಮಗೋಸ್ಕರ ಚಿಂತಿಸುತ್ತಾನೆ.
- 8ಸ್ವಸ್ಥಚಿತ್ತರಾಗಿರ್ರಿ. ಎಚ್ಚರವಾಗಿರ್ರಿ; ನಿಮ್ಮ ವಿರೋಧಿ ಯಾಗಿರುವ ಸೈತಾನನು ಗರ್ಜಿಸುವ ಸಿಂಹದಂತೆ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ.
- 9ನೀವು ನಂಬಿಕೆಯಲ್ಲಿ ದೃಢವಾಗಿದ್ದು ಅವನನ್ನು ಎದುರಿಸಿರಿ; ಲೋಕದಲ್ಲಿರುವ ನಿಮ್ಮ ಸಹೋದರರಿಗೂ ಅಂಥ ಬಾಧೆಗಳೇ ಸಂಭವಿಸುತ್ತವೆಯೆಂದು ನಿಮಗೆ ತಿಳಿದದೆಯಲ್ಲಾ.
Cross references
- Psalm 55:22 ಕೀರ್ತನೆಗಳು 55:22ನಿನ್ನ ಭಾರವನ್ನು ಕರ್ತನ ಮೇಲೆ ಹಾಕು; ಆತನು ನಿನಗೆ ಆಧಾರವಾಗಿರುವನು. ಆತನು ಎಂದೆಂದಿಗೂ ನೀತಿವಂತನನ್ನು ಕದಲಗೊಡಿಸನು.ಓ ದೇವರೇ, ನೀನು ಅವರನ್ನು ನಾಶನದ ಕುಣಿಯಲ್ಲಿ ಇಳಿಯ ಮಾಡುವಿ. ಕೊಲೆಪಾತಕರೂ ಮೋಸಗಾರರೂ ತಮ್ಮ ಆಯುಷ್ಯದ ದಿವಸಗಳಲ್ಲಿ ಅರ್ದದಷ್ಟಾದರೂ ಜೀವಿ ಸುವದಿಲ್ಲ; ನಾನು ನಿನ್ನಲ್ಲಿ ಭರವಸವಿಡುತ್ತೇನೆ.
- Philippians 4:6 ಫಿಲಿಪ್ಪಿಯವರಿಗೆ 4:6ಯಾವ ಸಂಬಂಧ ವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆ ಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯ ಪಡಿಸಿರಿ.
- Psalm 37:5 ಕೀರ್ತನೆಗಳು 37:5ನಿನ್ನ ಮಾರ್ಗವನ್ನು ಕರ್ತನಿಗೆ ಒಪ್ಪಿಸು; ಆತನಲ್ಲಿ ಭರವಸ ವಿಡು; ಆತನು ಅದನ್ನು ನೆರವೇರಿಸುವನು.
- Psalm 56:3–4 ಕೀರ್ತನೆಗಳು 56:3–4ನನಗೆ ಹೆದರಿಕೆ ಉಂಟಾದಾಗ ನಿನ್ನಲ್ಲಿ ಭರವಸವಿ ಡುವೆನು. ದೇವರಲ್ಲಿ ಆತನ ವಾಕ್ಯವನ್ನು ನಾನು ಸ್ತುತಿಸುವೆನು; ದೇವರಲ್ಲಿ ನಾನು ಭರವಸವಿಟ್ಟಿದ್ದೇನೆ; ನಾನು ಭಯಪಡೆನು, ಮನುಷ್ಯನು ನನಗೆ ಏನು ಮಾಡಬಲ್ಲನು?
- Matthew 6:25–26 ಮತ್ತಾಯನು 6:25–26ಆದಕಾರಣ ನಾನು ನಿಮಗೆ ಹೇಳುವದೇ ನಂದರೆ--ನಿಮ್ಮ ಪ್ರಾಣಕ್ಕೋಸ್ಕರ ನೀವು ಏನು ತಿನ್ನಬೇಕು ಮತ್ತು ಏನು ಕುಡಿಯಬೇಕು ಎಂಬದರ ವಿಷಯಕ್ಕಾಗಲೀ ಇಲ್ಲವೆ ನಿಮ್ಮ ಶರೀರಕ್ಕೆ ನೀವು ಏನು ಹೊದ್ದುಕೊಳ್ಳಬೇಕೆಂತಾಗಲೀ ಚಿಂತೆ ಮಾಡ ಬೇಡಿರಿ; ಊಟಕ್ಕಿಂತ ಪ್ರಾಣವೂ ಉಡುಪಿಗಿಂತ ಶರೀರವೂ ಹೆ ಆಕಾಶದ ಪಕ್ಷಿಗಳನ್ನು ನೋಡಿರಿ; ಅವು ಬಿತ್ತುವದಿಲ್ಲ, ಕೊಯ್ಯುವದೂ ಇಲ್ಲ, ಇಲ್ಲವೆ ಕಣಜದಲ್ಲಿ ಕೂಡಿಸಿಟ್ಟುಕೊಳ್ಳುವದೂ ಇಲ್ಲ; ಆದರೂ ಪರಲೋಕದ ನಿಮ್ಮ ತಂದೆಯು ಅವುಗಳನ್ನು ಪೋಷಿಸುತ್ತಾನೆ. ಅವುಗಳಿಗಿಂತ ನೀವು ಎಷ್ಟೋ ಶ್ರೇಷ್ಠರಾದವರಲ್ಲವೇ?
- Matthew 6:33–34 ಮತ್ತಾಯನು 6:33–34ಆದರೆ ಮೊದಲು ನೀವು ದೇವರ ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕಿರಿ. ಇವುಗಳ ಕೂಡ ಅವೆಲ್ಲವುಗಳು ಕೂಡಿಸಲ್ಪಡುವವು.ಆದಕಾರಣ ನಾಳೆಗೋಸ್ಕರ ಚಿಂತೆ ಮಾಡಬೇಡಿರಿ; ಯಾಕಂದರೆ ನಾಳಿನ ದಿನವು ತನಗೆ ಸಂಬಂಧ ಪಟ್ಟವುಗಳಿಗಾಗಿ ತಾನೇ ಚಿಂತಿಸುವದು. ಆ ದಿನಕ್ಕೆ ಅದರ ಕಾಟ ಸಾಕು. ಆದಕಾರಣ ನಾಳೆಗೋಸ್ಕರ ಚಿಂತೆ ಮಾಡಬೇಡಿರಿ; ಯಾಕಂದರೆ ನಾಳಿನ ದಿನವು ತನಗೆ ಸಂಬಂಧ ಪಟ್ಟವುಗಳಿಗಾಗಿ ತಾನೇ ಚಿಂತಿಸುವದು. ಆ ದಿನಕ್ಕೆ ಅದರ ಕಾಟ ಸಾಕು.
- Hebrews 13:5–6 ಇಬ್ರಿಯರಿಗೆ 13:5–6ನಿಮ್ಮ ನಡತೆಯು ದ್ರವ್ಯಾಶೆ ಯಿಲ್ಲದ್ದಾಗಿರಲಿ; ನಿಮಗಿರುವವುಗಳಲ್ಲಿ ತೃಪ್ತರಾಗಿರ್ರಿ; ಯಾಕಂದರೆ--ನಾನು ನಿನ್ನನ್ನು ಎಂದಿಗೂ ಕೈಬಿಡುವದಿಲ್ಲ ಇಲ್ಲವೆ ತೊರೆಯುವದಿಲ್ಲವೆಂದು ಆತನು ಹೇಳಿದ್ದಾನೆ. ಆದದರಿಂದ--ಕರ್ತನು ನನ್ನ ಸಹಾಯಕನು, ಭಯಪಡೆನು, ಮನುಷ್ಯನು ನನಗೆ ಏನು ಮಾಡಾನು ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು.
- Psalm 34:15 ಕೀರ್ತನೆಗಳು 34:15ಕರ್ತನ ಕಣ್ಣುಗಳು ನೀತಿವಂತರ ಮೇಲೆಯೂ ಆತನ ಕಿವಿಗಳು ಅವರ ಮೊರೆಯ ಕಡೆಗೂ ಅವೆ.
- Luke 12:22 ಲೂಕನು 12:22ಆತನು ತನ್ನ ಶಿಷ್ಯರಿಗೆ--ನೀವು ನಿಮ್ಮ ಪ್ರಾಣಕ್ಕೆ ಏನು ತಿನ್ನಬೇಕು ಇಲ್ಲವೆ ನಿಮ್ಮ ದೇಹಕ್ಕೆ ಏನು ಹೊದ್ದು ಕೊಳ್ಳಬೇಕು ಎಂದು ಚಿಂತೆ ಮಾಡಬೇಡಿರಿ ಎಂದು ನಾನು ನಿಮಗೆ ಹೇಳುತ್ತೇನೆ.
- Psalm 27:13–14 ಕೀರ್ತನೆಗಳು 27:13–14ಜೀವಿತರ ದೇಶದಲ್ಲಿ ಕರ್ತನ ಒಳ್ಳೇತನ ವನ್ನು ನೋಡುವೆನೆಂದು ನಾನು ನಂಬದೆ ಹೋಗಿದ್ದರೆ ಮೂರ್ಛೆ ಹೋಗುತ್ತಿದ್ದೆನು.ಕರ್ತನಿಗಾಗಿ ಕಾದಿರು, ಧೈರ್ಯವಾಗಿರು; ಆತನು ನಿನ್ನ ಹೃದಯವನ್ನು ಬಲ ಪಡಿಸುವನು. ಕರ್ತನಿಗಾಗಿ ಕಾದಿರು ಎಂದು ನಾನು ಹೇಳುವೆನು. ಕರ್ತನಿಗಾಗಿ ಕಾದಿರು, ಧೈರ್ಯವಾಗಿರು; ಆತನು ನಿನ್ನ ಹೃದಯವನ್ನು ಬಲ ಪಡಿಸುವನು. ಕರ್ತನಿಗಾಗಿ ಕಾದಿರು ಎಂದು ನಾನು ಹೇಳುವೆನು.
- 1 Samuel 30:6 1 ಸಮುವೇಲನು 30:6ಆದರೆ ಜನರಲ್ಲಿ ಪ್ರತಿಯೊಬ್ಬನೂ ತನ್ನ ತನ್ನ ಕುಮಾರ ಕುಮಾರ್ತೆಯರಿಗೋಸ್ಕರವಾಗಿಯೂ ಮನೋವ್ಯಥೆಪಟ್ಟು ದಾವೀದನನ್ನು ಕಲ್ಲೆಸೆಯಬೇಕೆಂದು ಹೇಳಿಕೊಂಡದ್ದರಿಂದ ಅವನು ಬಹಳ ಇಕ್ಕಟ್ಟಿನಲ್ಲಿ ಬಿದ್ದನು. ಆದರೂ ದಾವೀದನು ಕರ್ತನಾದ ದೇವರಲ್ಲಿ ತನ್ನನ್ನು ಬಲಪಡಿಸಿಕೊಂಡನು.
- Luke 12:30–32 ಲೂಕನು 12:30–32ಯಾಕಂದರೆ ಇವೆಲ್ಲವುಗಳಿಗಾಗಿ ಲೋಕದ ಜನಾಂಗಗಳು ಬಹಳವಾಗಿ ತವಕಪಡುತ್ತಾರೆ; ಆದರೆ ಇವುಗಳು ನಿಮಗೆ ಅಗತ್ಯವೆಂದು ನಿಮ್ಮ ತಂದೆಯು ಬಲ್ಲನು. ಆದರೆ ನೀವು ದೇವರ ರಾಜ್ಯವನ್ನೇ ಹುಡುಕಿರಿ. ಆಗ ಇವೆಲ್ಲವುಗಳು ನಿಮಗೆ ಕೂಡಿಸಲ್ಪಡುವವು. ಚಿಕ್ಕ ಹಿಂಡೇ, ಭಯಪಡಬೇಡ; ಯಾಕಂದರೆ ನಿಮಗೆ ರಾಜ್ಯವನ್ನು ಕೊಡುವದಕ್ಕೆ ನಿಮ್ಮ ತಂದೆಯು ಸಂತೋಷವುಳ್ಳವನಾಗಿದ್ದಾನೆ.