1 Samuel · chapter 23 · verse 17
1 Samuel 23:17 in Kannada
ನನ್ನ ತಂದೆಯಾದ ಸೌಲನ ಕೈ ನಿನ್ನನ್ನು ಹಿಡಿಯುವದಿಲ್ಲ. ನೀನು ಇಸ್ರಾಯೇಲಿನ ಮೇಲೆ ಅರಸನಾಗಿರುವಿ; ನಾನು ನಿನ್ನ ತರುವಾಯ ಇರುವೆನು. ಹೀಗೆ ಆಗುವದೆಂದು ನನ್ನ ತಂದೆಯಾದ ಸೌಲನು ಸಹ ತಿಳಿದಿದ್ದಾನೆ ಅಂದನು.
Nanna tandeyaada saulana kai ninnannu hidiyuvadilla. Neenu israayelina mele arasanaagiruvi; naanu ninna taruvaaya iruvenu. Heege aaguvadendu nanna tandeyaada saulanu saha tilididdaane andanu.
1 Samuel 23:17 in English
- King James Version (KJV)
- And he said unto him, Fear not: for the hand of Saul my father shall not find thee; and thou shalt be king over Israel, and I shall be next unto thee; and that also Saul my father knoweth.
- World English Bible (WEB)
- He said to him, “Don’t be afraid, for the hand of Saul my father won’t find you; and you will be king over Israel, and I will be next to you; and Saul my father knows that also.”
- American Standard Version (ASV)
- And he said unto him, Fear not; for the hand of Saul my father shall not find thee; and thou shalt be king over Israel, and I shall be next unto thee; and that also Saul my father knoweth.
- Bible in Basic English (BBE)
- And said to him, Have no fear, for Saul my father will not get you into his power; and you will be king of Israel, and I will be by your side, and my father Saul is certain of this.
- Darby Translation (DBY)
- And he said to him, Fear not; for the hand of Saul my father will not find thee; and thou shalt be king over Israel, and I shall be next to thee; and that also Saul my father knows.
- Webster's Bible (WBS)
- And he said to him, Fear not: for the hand of Saul my father shall not find thee; and thou wilt be king over Israel, and I shall be next to thee; and that also Saul my father knoweth.
- Young's Literal Translation (YLT)
- and saith unto him, 'Fear not, for the hand of Saul my father doth not find thee, and thou dost reign over Israel, and I am to thee for second, and also so knoweth Saul my father.'
Read in context
- 15ತನ್ನ ಪ್ರಾಣವನ್ನು ಹುಡುಕುವದಕ್ಕೆ ಸೌಲನು ಹೊರಟನೆಂದು ದಾವೀದನು ತಿಳಿದಾಗ ತಾನು ಜೀಫ್ ಎಂಬ ಅಡವಿಯೊಳಗೆ ಅರಣ್ಯದ ಒಂದು ಸ್ಥಳದಲ್ಲಿದ್ದನು.
- 16ಆಗ ಸೌಲನ ಮಗನಾದ ಯೋನಾತಾನನು ಎದ್ದು ಅರಣ್ಯದಲ್ಲಿರುವ ದಾವೀದನ ಬಳಿಗೆ ಹೋಗಿ ದೇವರಲ್ಲಿ ಅವನ ಕೈಯನ್ನು ಬಲಪಡಿಸಿ ಅವನಿಗೆ--ಭಯಪಡಬೇಡ;
- 17ನನ್ನ ತಂದೆಯಾದ ಸೌಲನ ಕೈ ನಿನ್ನನ್ನು ಹಿಡಿಯುವದಿಲ್ಲ. ನೀನು ಇಸ್ರಾಯೇಲಿನ ಮೇಲೆ ಅರಸನಾಗಿರುವಿ; ನಾನು ನಿನ್ನ ತರುವಾಯ ಇರುವೆನು. ಹೀಗೆ ಆಗುವದೆಂದು ನನ್ನ ತಂದೆಯಾದ ಸೌಲನು ಸಹ ತಿಳಿದಿದ್ದಾನೆ ಅಂದನು.
- 18ಅವರಿಬ್ಬರೂ ಕರ್ತನ ಮುಂದೆ ಒಡಂಬಡಿಕೆಯನ್ನು ಮಾಡಿಕೊಂಡರು. ದಾವೀದನು ಅರಣ್ಯದಲ್ಲೇ ಉಳಿದನು; ಆದರೆ ಯೋನಾತಾನನು ತನ್ನ ಮನೆಗೆ ಹೋದನು.
- 19ಜೀಫ್ಯರು ಗಿಬೆಯಲ್ಲಿದ್ದ ಸೌಲನ ಬಳಿಗೆ ಬಂದುದಾವೀದನು ನಮ್ಮ ಪಕ್ಷವಾಗಿಯೇ ಯೆಷಿಮೋನಿನ ದಕ್ಷಿಣದಲ್ಲಿ ಹಕೀಲಾ ಗುಡ್ಡದಲ್ಲಿರುವ ಘೋರಾರಣ್ಯ ದಲ್ಲಿ ನಮ್ಮೊಂದಿಗೆ ಅಡಗಿಕೊಂಡಿದ್ದಾನಲ್ಲವೇ?
Cross references
- 1 Samuel 20:31 1 ಸಮುವೇಲನು 20:31ಇಷಯನ ಮಗನು ಭೂಮಿಯ ಮೇಲೆ ಬದುಕುವ ದಿವಸಗಳ ವರೆಗೂ ನೀನಾದರೂ ನಿನ್ನ ರಾಜ್ಯವಾದರೂ ಸ್ಥಿರವಾಗುವದಿಲ್ಲ. ಆದದರಿಂದ ಈಗ ನೀನು ಅವನನ್ನು ಕರೆಯಕಳುಹಿಸಿ ನನ್ನ ಬಳಿಗೆ ಕರಕೊಂಡು ಬಾ; ಅವನು ನಿಜವಾಗಿ ಸಾಯಲೇಬೇಕು ಅಂದನು.
- 1 Samuel 24:20 1 ಸಮುವೇಲನು 24:20ಇಗೋ, ನೀನು ನಿಶ್ಚಯವಾಗಿ ಅರಸನಾಗುವಿ ಎಂದೂ ಇಸ್ರಾಯೇಲಿನ ರಾಜ್ಯವು ನಿನ್ನ ಕೈಯಲ್ಲಿ ಸ್ಥಿರಮಾಡಲ್ಪಡುವದೆಂದೂ ನಾನು ಚೆನ್ನಾಗಿ ಬಲ್ಲೆನು.
- Hebrews 13:6 ಇಬ್ರಿಯರಿಗೆ 13:6ಆದದರಿಂದ--ಕರ್ತನು ನನ್ನ ಸಹಾಯಕನು, ಭಯಪಡೆನು, ಮನುಷ್ಯನು ನನಗೆ ಏನು ಮಾಡಾನು ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು.
- Job 5:11–15 ಯೋಬನು 5:11–15ಹೀಗೆ ತಗ್ಗಿದವರನ್ನು ಉನ್ನತದಲ್ಲಿಡುತ್ತಾನೆ. ದುಃಖವುಳ್ಳವರು ರಕ್ಷಣೆಗೆ ಎತ್ತ ಲ್ಪಡುತ್ತಾರೆ. ಆತನು ಯುಕ್ತಿವಂತರ ಯೋಚನೆಗಳನ್ನು ಭಂಗಪಡಿಸುತ್ತಾನೆ; ಅವರ ಕೈಗಳು ಪ್ರಯತ್ನವನ್ನು ನಡಿಸುವದಿಲ್ಲ. ಜ್ಞಾನಿಗಳನ್ನು ಅವರ ಯುಕ್ತಿಯಲ್ಲಿ ಹಿಡಿಯುತ್ತಾನೆ--ಮೂರ್ಖರ ಆಲೋಚನೆ ಉರುಳಿ ಬೀಳುವದು. ಹಗಲಿನಲ್ಲಿ ಕತ್ತಲೆಯನ್ನು ಸಂಧಿಸು ತ್ತಾರೆ; ರಾತ್ರಿಯಲ್ಲಿ ಇದ್ದ ಹಾಗೆ ಮಧ್ಯಾಹ್ನದಲ್ಲಿ ತಡವಾಡುತ್ತಾರೆ ಆತನು ಕತ್ತಿಯಿಂದಲೂ ಅದರ ಬಾಯಿಂದಲೂ ಬಲಿಷ್ಠನ ಕೈಯೊಳಗಿಂದಲೂ ಬಡವ ನನ್ನು ರಕ್ಷಿಸುತ್ತಾನೆ.
- Isaiah 54:17 ಯೆಶಾಯ 54:17ನಿನಗೆ ವಿರೋಧವಾಗಿ ರೂಪಿಸಲ್ಪಟ್ಟ ಆಯು ಧಗಳು ಸಫಲವಾಗುವದಿಲ್ಲ; ನಿನಗೆ ವಿರೋಧವಾಗಿ ನಿಂತುಕೊಳ್ಳುವ ಪ್ರತಿಯೊಂದು ನಾಲಿಗೆಯನ್ನು ನ್ಯಾಯ ತೀರ್ಪಿನಲ್ಲಿ ನೀನು ಖಂಡಿಸುವಿ. ಇದೇ ಕರ್ತನ ಸೇವ ಕರ ಬಾಧ್ಯತೆಯೂ ಮತ್ತು ಅವರ ನೀತಿಯೂ ನನ್ನದೇ ಎಂದು ಕರ್ತನು ಹೇಳುತ್ತಾನೆ.
- Acts 28:16 ಅಪೊಸ್ತಲರ ಕೃತ್ಯಗಳು 28:16ನಾವು ರೋಮ್ಗೆ ಬಂದಾಗ ಕಾವಲುಗಾರರ ನಾಯಕನಿಗೆ ಶತಾಧಿಪತಿಯು ಸೆರೆಯವರನ್ನು ಒಪ್ಪಿಸಿ ದನು; ಆದರೆ ತನ್ನನ್ನು ಕಾಯುತ್ತಿದ್ದ ಒಬ್ಬ ಸೈನಿಕನೊಂದಿಗೆ ಪೌಲನು ಪ್ರತ್ಯೇಕವಾಗಿ ಇರಬಹುದೆಂದು ಅಪ್ಪಣೆ ಹೊಂದಿದನು.
- Proverbs 14:26 ಜ್ಞಾನೋಕ್ತಿಗಳು 14:26ಕರ್ತನ ಭಯವೇ ಬಲವಾದ ಭರವಸವು; ಆತನ ಮಕ್ಕಳಿಗೆ ಆಶ್ರಯ ಸ್ಥಳವು ಇರುವದು.
- Romans 15:24 ರೋಮಾಪುರದವರಿಗೆ 15:24ನಾನು ಸ್ಪೇನ್ ದೇಶಕ್ಕೆ ಯಾವ ಸಮಯದಲ್ಲಿಯಾದರೂ ಪ್ರಯಾಣ ಕೈಕೊಂಡರೆ ನಿಮ್ಮ ಬಳಿಗೆ ಬರುವೆನು; ಯಾಕಂದರೆ ನನ್ನ ಪ್ರಯಾಣದಲ್ಲಿ ನಾನು ನಿಮ್ಮನ್ನು ನೋಡುವೆನೆಂದು ಭರವಸವುಂಟು. ಇದಲ್ಲದೆ ಮೊದಲು ನಿಮ್ಮ ಅನ್ಯೋನ್ಯತೆಯಲ್ಲಿ ಸಂತೃಪ್ತನಾಗಿ ಮುಂದೆ ನನ್ನ ಮಾರ್ಗದಲ್ಲಿ ನಿಮ್ಮಿಂದ ಸಾಗಕ
- Isaiah 41:14 ಯೆಶಾಯ 41:14ಹುಳುವಾದ ಯಾಕೋಬೇ, ಮತ್ತು ಇಸ್ರಾಯೇಲ್ ಜನವೇ, ಭಯಪಡಬೇಡ; ನಾನೇ ನಿನಗೆ ಸಹಾಯ ಮಾಡುತ್ತೇನೆಂದು ಕರ್ತನೂ ನಿನ್ನ ವಿಮೋಚಕನೂ ಇಸ್ರಾಯೇಲಿನ ಪರಿಶುದ್ಧನೂ ಹೇಳುತ್ತಾನಲ್ಲಾ!
- Proverbs 19:21 ಜ್ಞಾನೋಕ್ತಿಗಳು 19:21ಮನುಷ್ಯನ ಹೃದಯದಲ್ಲಿ ಅನೇಕ ಕಲ್ಪನೆಗಳಿವೆ; ಆದರೂ ಕರ್ತನ ಸಂಕಲ್ಪವೇ ಈಡೇರು ವದು.
- Acts 5:39 ಅಪೊಸ್ತಲರ ಕೃತ್ಯಗಳು 5:39ಅದು ದೇವರಿಂದಾಗಿದ್ದರೆ ನೀವು ಅದನ್ನು ಗೆಲ್ಲಲಾರಿರಿ; ಒಂದು ವೇಳೆ ನೀವು ದೇವರಿಗೆ ವಿರುದ್ಧ ವಾಗಿ ಹೋರಾಡುವವರಾಗಿ ಕಾಣಿಸಿಕೊಂಡೀರಿ ಎಂದು ಹೇಳಿದನು.
- Isaiah 41:10 ಯೆಶಾಯ 41:10ನೀನಂತೂ ಹೆದರಬೇಡ; ನಾನೇ ನಿನ್ನೊಂದಿಗಿದ್ದೇನೆ; ದಿಗ್ಭ್ರಮೆಗೊಳ್ಳದಿರು. ನಾನೇ ನಿನ್ನ ದೇವರು; ನಾನು ನಿನ್ನನ್ನು ಬಲಪಡಿ ಸುತ್ತೇನೆ; ಹೌದು, ನಾನು ನಿನಗೆ ಸಹಾಯ ಮಾಡು ತ್ತೇನೆ. ಹೌದು, ನನ್ನ ನೀತಿಯ ಬಲಗೈಯಿಂದ ನಿನ್ನನ್ನು ಎತ್ತಿ ಹಿಡಿಯುತ್ತೇನೆ.