Proverbs · chapter 19 · verse 21
Proverbs 19:21 in Kannada
ಮನುಷ್ಯನ ಹೃದಯದಲ್ಲಿ ಅನೇಕ ಕಲ್ಪನೆಗಳಿವೆ; ಆದರೂ ಕರ್ತನ ಸಂಕಲ್ಪವೇ ಈಡೇರು ವದು.
Manushyana hrudayadalli aneka kalpanegalive; aadaroo kartana sankalpave eederu vadu.
Proverbs 19:21 in English
- King James Version (KJV)
- [There are] many devices in a man’s heart; nevertheless the counsel of the LORD, that shall stand.
- World English Bible (WEB)
- There are many plans in a man’s heart, but the LORD’s counsel will prevail.
- American Standard Version (ASV)
- There are many devices in a man’s heart; But the counsel of Jehovah, that shall stand.
- Bible in Basic English (BBE)
- A man's heart may be full of designs, but the purpose of the Lord is unchanging.
- Darby Translation (DBY)
- Many are the thoughts in a man's heart, but the counsel of Jehovah, that doth stand.
- Webster's Bible (WBS)
- [There are] many devices in a man's heart; nevertheless the counsel of the LORD, that shall stand.
- Young's Literal Translation (YLT)
- Many [are] the purposes in a man's heart, And the counsel of Jehovah it standeth.
Read in context
- 19ಮಹಾಕೋಪಿಷ್ಠನು ಶಿಕ್ಷೆಯನ್ನು ಅನುಭವಿಸುವನು; ಅವನನ್ನು ನೀನು ಬಿಡಿಸಿದರೆ ತಿರುಗಿ ನೀನು ಅದನ್ನು ಮಾಡಬೇಕಾಗುತ್ತದೆ.
- 20ಆಲೋಚನೆಯನ್ನು ಕೇಳಿ ಶಿಕ್ಷಣವನ್ನು ಅಂಗೀಕರಿಸು. ಕಡೆಯಲ್ಲಿ ನೀನು ಜ್ಞಾನಿ ಯಾಗುವಿ.
- 21ಮನುಷ್ಯನ ಹೃದಯದಲ್ಲಿ ಅನೇಕ ಕಲ್ಪನೆಗಳಿವೆ; ಆದರೂ ಕರ್ತನ ಸಂಕಲ್ಪವೇ ಈಡೇರು ವದು.
- 22ಮನುಷ್ಯನ ಆಕಾಂಕ್ಷೆಯು ಆತನ ದಯೆಯೇ; ಬಡವನು ಸುಳ್ಳುಗಾರನಿಗಿಂತ ಒಳ್ಳೆಯವನು.
- 23ಕರ್ತನ ಭಯವು ಜೀವಕ್ಕೆ ಒಲಿಯುತ್ತದೆ; ಅದನ್ನು ಹೊಂದಿದ ವನು ತೃಪ್ತನಾಗಿ ನೆಲೆಗೊಳ್ಳುವನು; ಅವನಿಗೆ ಕೇಡು ಸಂಭವಿಸುವದಿಲ್ಲ.
Cross references
- Proverbs 16:9 ಜ್ಞಾನೋಕ್ತಿಗಳು 16:9ಒಬ್ಬ ಮನುಷ್ಯನ ಹೃದಯವು ಅವನ ಮಾರ್ಗವನ್ನು ಕಲ್ಪಿಸುತ್ತದೆ; ಆದರೆ ಕರ್ತನು ಅವನ ಹೆಜ್ಜೆಗಳನ್ನು ನಡಿಸುತ್ತಾನೆ.
- Isaiah 14:24 ಯೆಶಾಯ 14:24ಸೈನ್ಯಗಳ ಕರ್ತನು ಆಣೆಯಿಟ್ಟು ಹೇಳುವದೇನ ಂದರೆ--ನಾನು ನೆನಸಿದ ಪ್ರಕಾರವೇ ನೆರವೇರುವದು; ನಾನು ಉದ್ದೇಶಿಸಿದ್ದೇ ನಿಲ್ಲುವದು.
- Proverbs 16:1 ಜ್ಞಾನೋಕ್ತಿಗಳು 16:1ಮನುಷ್ಯನಲ್ಲಿ ಹೃದಯದ ಸಿದ್ಧತೆಗಳೂ ಬಾಯಿಯ ಪ್ರತ್ಯುತ್ತರವೂ ಕರ್ತನಿಂದಲೇ ಆಗುವವು.
- Psalm 33:10–11 ಕೀರ್ತನೆಗಳು 33:10–11ಕರ್ತನು ಜನಾಂಗಗಳ ಆಲೋಚನೆಯನ್ನು ವ್ಯರ್ಥ ಮಾಡುವನು; ಜನರ ಕಲ್ಪನೆಗಳನ್ನು ನಿಷ್ಫಲಮಾಡು ತ್ತಾನೆ. ಕರ್ತನ ಆಲೋಚನೆಯು ಎಂದೆಂದಿಗೂ ಆತನ ಹೃದಯದ ಆಲೋಚನೆಗಳು ತಲತಲಾಂತ ರಕ್ಕೂ ನಿಲ್ಲುವವು.
- Isaiah 46:10 ಯೆಶಾಯ 46:10ಆರಂಭದಲ್ಲಿಯೇ ಅಂತ್ಯವನ್ನೂ ಪೂರ್ವಕಾಲದಿಂದ ಇನ್ನೂ ನಡೆಯದ ಸಂಗತಿಗಳನ್ನೂ ಪ್ರಕಟಿಸಿದ್ದೇನೆ; ನನ್ನ ಆಲೋಚನೆಯು ನಿಲ್ಲುವ ದೆಂದೂ ನಾನು ಮೆಚ್ಚಿದ್ದನ್ನೆಲ್ಲಾ ಮಾಡುವೆನೆಂದೂ ಅರುಹಿದ್ದೇನೆ.
- Proverbs 21:30 ಜ್ಞಾನೋಕ್ತಿಗಳು 21:30ಕರ್ತನಿಗೆ ವಿರೋಧವಾಗಿ ಯಾವ ಜ್ಞಾನವೂ ವಿವೇಕವೂ ಆಲೋಚನೆಯೂ ಇಲ್ಲ.ಯುದ್ಧದ ದಿನಕ್ಕಾಗಿ ಕುದುರೆಯು ಸಿದ್ಧವಾಗಿರುತ್ತದೆ; ಭದ್ರತೆಯು ಕರ್ತನಿಂದಲೇ.
- Ephesians 1:11 ಎಫೆಸದವರಿಗೆ 1:11ಆತನ ಸ್ವಚಿತ್ತದ ಆಲೋಚನೆಗನುಸಾರವಾಗಿ ಎಲ್ಲಾ ಕಾರ್ಯ ಗಳನ್ನು ಸಾಧಿಸುವ ಆತನ ಉದ್ದೇಶದ ಮೇರೆಗೆ ಮೊದಲೇ ನೇಮಿಸಲ್ಪಟ್ಟವರಾದ ನಾವು ಆತನಲ್ಲಿ ಬಾಧ್ಯತೆಯನ್ನು ಸಹ ಹೊಂದಿದೆವು.
- Job 23:13 ಯೋಬನು 23:13ಆದರೆ ಆತನು ಒಂದೇ ಮನಸ್ಸುಳ್ಳವನು, ಆತ ನನ್ನು ತಿರುಗಿಸುವವನ್ಯಾರು? ತನ್ನ ಪ್ರಾಣವು ಅಪೇ ಕ್ಷಿಸುವ ಪ್ರಕಾರವೇ ಮಾಡುತ್ತಾನೆ.
- Proverbs 21:1 ಜ್ಞಾನೋಕ್ತಿಗಳು 21:1ನೀರಿನ ನದಿಗಳಂತೆ ಅರಸನ ಹೃದಯವು ಕರ್ತನ ಕೈಯಲ್ಲಿದೆ; ತನಗೆ ಇಷ್ಟವಾದ ಕಡೆಗೆ ಆತನು ಅದನ್ನು ತಿರುಗಿಸುತ್ತಾನೆ.
- Isaiah 14:26–27 ಯೆಶಾಯ 14:26–27ಇದೇ ಸಮಸ್ತ ಭೂಮಿಯ ವಿಷಯ ಆಲೋ ಚಿಸಿದ ಉದ್ದೇಶ. ಇದೇ ಜನಾಂಗಗಳ ಮೇಲೆಲ್ಲಾ ಚಾಚಿದ ನನ್ನ ಕೈ. ಸೈನ್ಯಗಳ ಕರ್ತನುಉದ್ದೇಶಿಸಿ ದ್ದಾನೆ; ಅದನ್ನು ಯಾರು ವ್ಯರ್ಥಪಡಿಸುವರು. ಆತನ ಕೈಚಾಚಿದೆ, ಹಿಂದಕ್ಕೆ ತಳ್ಳುವವರು ಯಾರು ಎಂಬದೇ.
- Acts 5:38–39 ಅಪೊಸ್ತಲರ ಕೃತ್ಯಗಳು 5:38–39ಈಗ ನಾನು ನಿಮಗೆ ಹೇಳುವದೇನಂದರೆ--ಈ ಮನುಷ್ಯರ ಗೊಡವೆಗೆ ಹೋಗಬೇಡಿರಿ, ಅವರನ್ನು ಬಿಡಿರಿ; ಈ ಯೋಚನೆಯು ಅಥವಾ ಈ ಕಾರ್ಯವು ಮನುಷ್ಯರಿಂದಾಗಿದ್ದರೆ ಅದು ನಿಷ್ಫಲವಾಗುವದು. ಅದು ದೇವರಿಂದಾಗಿದ್ದರೆ ನೀವು ಅದನ್ನು ಗೆಲ್ಲಲಾರಿರಿ; ಒಂದು ವೇಳೆ ನೀವು ದೇವರಿಗೆ ವಿರುದ್ಧ ವಾಗಿ ಹೋರಾಡುವವರಾಗಿ ಕಾಣಿಸಿಕೊಂಡೀರಿ ಎಂದು ಹೇಳಿದನು.
- Daniel 4:35 ದಾನಿಯೇಲನು 4:35ಭೂ ನಿವಾಸಿಗಳೆಲ್ಲರೂ ಏನೂ ಇಲ್ಲದ ಹಾಗೆ ಎಣಿಸಲ್ಪಟ್ಟಿ ದ್ದಾರೆ; ಆತನು ಪರಲೋಕದ ಸೈನ್ಯದಲ್ಲಿಯೂ ಭೂ ನಿವಾಸಿಗಳಲ್ಲಿಯೂ ತನ್ನ ಚಿತ್ತದ ಪ್ರಕಾರವೇ ಮಾಡು ತ್ತಾನೆ. ಯಾರೂ ಆತನ ಹಸ್ತವನ್ನು ಹಿಂತೆಗೆಯಲಾರರು; ನೀನು ಏನು ಮಾಡುತ್ತಿರುವಿ ಎಂದು ಆತನಿಗೆ ಯಾರೂ ಕೇಳಲಾರರು.