1 Samuel · chapter 26 · verse 10
1 Samuel 26:10 in Kannada
ಇದಲ್ಲದೆ ಇನ್ನೂ ದಾವೀದನು--ಕರ್ತನ ಜೀವ ದಾಣೆ, ಕರ್ತನು ಅವನನ್ನು ಹೊಡೆಯುವನು; ಇಲ್ಲವೆ ಅವನ ಕಾಲ ಬಂದು ಅವನು ಸಾಯುವನು; ಇಲ್ಲವೆ ಯುದ್ಧಕ್ಕೆ ಹೋಗಿ ನಾಶವಾಗುವನು.
Idallade innoo daaveedanu--kartana jeeva daane, kartanu avanannu hodeyuvanu; illave avana kaala bandu avanu saayuvanu; illave yuddhakke hogi naashavaaguvanu.
1 Samuel 26:10 in English
- King James Version (KJV)
- David said furthermore, [As] the LORD liveth, the LORD shall smite him; or his day shall come to die; or he shall descend into battle, and perish.
- World English Bible (WEB)
- David said, “As the LORD lives, the LORD will strike him; or his day shall come to die, or he shall go down into battle and perish.
- American Standard Version (ASV)
- And David said, As Jehovah liveth, Jehovah will smite him; or his day shall come to die; or he shall go down into battle and perish.
- Bible in Basic English (BBE)
- And David said, By the living Lord, the Lord will send destruction on him; the natural day of his death will come, or he will go into the fight and come to his end.
- Darby Translation (DBY)
- And David said, [As] Jehovah liveth, Jehovah will surely smite him; either his day shall come to die, or he shall descend into battle and perish.
- Webster's Bible (WBS)
- David said furthermore, [As] the LORD liveth, the LORD will smite him; or his day will come to die; or he will descend into battle and perish.
- Young's Literal Translation (YLT)
- And David saith, 'Jehovah liveth; except Jehovah doth smite him, or his day come that he hath died, or into battle he go down, and hath been consumed —
Read in context
- 8ಆಗ ಅಬೀಷೈಯು ದಾವೀ ದನಿಗೆ--ಈ ಹೊತ್ತು ದೇವರು ನಿನ್ನ ಶತ್ರುವನ್ನು ನಿನ್ನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದಾನೆ; ಈಗ ನಾನು ಅವನನ್ನು ಈಟಿಯಿಂದ ಒಂದೇ ಪೆಟ್ಟಿನಲ್ಲಿ ನೆಲಕ್ಕೆ ಹತ್ತುವಂತೆ ಹೊಡೆಯಲು ಅಪ್ಪಣೆ ಕೊಡಬೇಕು; ಎರಡು ಸಾರಿ ಹೊಡೆಯುವದಿಲ್ಲ ಅಂದನು.
- 9ಆದರೆ ದಾವೀದನು ಅಬೀಷೈಯನಿಗೆ -- ಅವನನ್ನು ಸಂಹರಿಸಬೇಡ; ಯಾಕಂದರೆ ಕರ್ತನ ಅಭಿಷಿಕ್ತನಿಗೆ ವಿರೋಧವಾಗಿ ಕೈ ಹಾಕುವವನು ನಿರಪರಾಧಿಯಾಗುವದಿಲ್ಲ ಅಂದನು.
- 10ಇದಲ್ಲದೆ ಇನ್ನೂ ದಾವೀದನು--ಕರ್ತನ ಜೀವ ದಾಣೆ, ಕರ್ತನು ಅವನನ್ನು ಹೊಡೆಯುವನು; ಇಲ್ಲವೆ ಅವನ ಕಾಲ ಬಂದು ಅವನು ಸಾಯುವನು; ಇಲ್ಲವೆ ಯುದ್ಧಕ್ಕೆ ಹೋಗಿ ನಾಶವಾಗುವನು.
- 11ನಾನು ನನ್ನ ಕೈಯನ್ನು ಕರ್ತನ ಅಭಿಷಿಕ್ತನ ಮೇಲೆ ಹಾಕದಹಾಗೆ ಕರ್ತನು ನನಗೆ ಆಟಂಕಮಾಡಲಿ. ಆದರೆ ನೀನು ಅವನ ತಲೆದಿಂಬಿನ ಬಳಿಯಲ್ಲಿರುವ ಈಟಿಯನ್ನೂ ನೀರಿನ ತಂಬಿಗೆಯನ್ನೂ ತೆಗೆದುಕೋ;
- 12ನಾವು ಹೋಗೋಣ ಅಂದನು. ದಾವೀದನು ಸೌಲನ ತಲೆ ದಿಂಬಿನ ಬಳಿಯಲ್ಲಿದ್ದ ಈಟಿಯನ್ನೂ ನೀರಿನ ತಂಬಿಗೆ ಯನ್ನೂ ತೆಗೆದುಕೊಂಡ ಮೇಲೆ ಅವರು ಹೊರಟು ಹೋದರು. ಒಬ್ಬರಾದರೂ ನೋಡಿದ್ದಿಲ್ಲ; ಅರಿತಿದ್ದಿಲ್ಲ; ಯಾರೂ ಎಚ್ಚತ್ತಿರಲಿಲ್ಲ. ಯಾಕಂದರೆ ಕರ್ತನಿಂದ ಅಗಾಧ ನಿದ್ರೆಯು ಅವರ ಮೇಲೆ ಇಳಿದ ಕಾರಣ ಅವರೆಲ್ಲರೂ ನಿದ್ರೆ ಮಾಡುತ್ತಿದ್ದರು.
Cross references
- Romans 12:19 ರೋಮಾಪುರದವರಿಗೆ 12:19ಅತಿ ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ಯಾಕಂದರೆ--ಮುಯ್ಯಿಗೆ ಮುಯ್ಯಿ ತೀರಿಸು ವದು ನನ್ನ ಕೆಲಸ, ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು ಹೇಳುತ್ತಾನೆ ಎಂಬದಾಗಿ ಬರೆದದೆ.
- Genesis 47:29 ಆದಿಕಾಂಡ 47:29ಇಸ್ರಾಯೇಲನು ಸಾಯುವ ಸಮಯವು ಸವಿಾಪಿಸಿ ದಾಗ ಅವನು ತನ್ನ ಮಗನಾದ ಯೋಸೇಫನನ್ನು ಕರೆಯಿಸಿ ಅವನಿಗೆ--ಈಗ ನಿನ್ನ ಸಮ್ಮುಖದಲ್ಲಿ ನಾನು ಕೃಪೆ ಹೊಂದಿದ್ದೇಯಾದರೆ ನಿನ್ನ ಕೈಯನ್ನು ನನ್ನ ತೊಡೆಯ ಕೆಳಗೆ ಇಟ್ಟು ನನ್ನ ಕಡೆಗೆ ದಯೆಯನ್ನೂ ಸತ್ಯವನ್ನೂ ತೋರಿಸು. ಹೇಗಂದರೆ ಐಗುಪ್ತದಲ್ಲಿ ನನ್ನನ್ನು ಹೂಣಿಡಬೇಡ.
- Deuteronomy 31:14 ಧರ್ಮೋಪದೇಶಕಾಂಡ 31:14ಇದಲ್ಲದೆ ಕರ್ತನು ಮೋಶೆಗೆ--ಇಗೋ, ನೀನು ಸಾಯುವ ದಿನಗಳು ಸವಿಾಪವಾದವು. ಯೆಹೋಶುವ ನನ್ನು ಕರೆದು ನೀವು ಸಭೆಯ ಗುಡಾರದಲ್ಲಿ ನಿಂತು ಕೊಳ್ಳಿರಿ; ಆಗ ಅವನಿಗೆ ಆಜ್ಞೆ ಕೊಡುವೆನು ಅಂದನು. ಈ ಪ್ರಕಾರ ಮೋಶೆಯೂ ಯೆಹೋಶುವನೂ ಹೋಗಿ ಸಭೆಯ ಗುಡಾರದಲ್ಲಿ ನಿಂತುಕೊಂಡರು.
- Psalm 37:13 ಕೀರ್ತನೆಗಳು 37:13ಕರ್ತನು ಅವನ ದಿನ ಬರುತ್ತದೆಂದು ನೋಡಿ ನಗುತ್ತಾನೆ.
- 1 Samuel 25:38 1 ಸಮುವೇಲನು 25:38ಹೆಚ್ಚು ಕಡಿಮೆ ಹತ್ತು ದಿವಸಗಳಾದ ತರುವಾಯ ಏನಾಯಿತಂದರೆ, ಕರ್ತನು ನಾಬಾಲನನ್ನು ಹೊಡೆದದ್ದರಿಂದ ಅವನು ಸತ್ತನು.
- 1 Samuel 31:6 1 ಸಮುವೇಲನು 31:6ಹೀಗೆ ಆ ದಿನ ಸೌಲನೂ ಅವನ ಮೂವರು ಮಕ್ಕಳೂ ಅವನ ಆಯುಧ ಹಿಡಿಯುವವನೂ ಎಲ್ಲಾ ಜನರೂ ಸತ್ತರು.
- 1 Samuel 25:26 1 ಸಮುವೇಲನು 25:26ಆದಕಾರಣ ನನ್ನ ಒಡೆಯನೇ, ನೀನು ರಕ್ತ ಚೆಲ್ಲುವದಕ್ಕೂ ನಿನ್ನ ಕೈಯಿಂದ ನಿನಗೆ ಮುಯ್ಯಿ ತೀರಿಸಿಕೊಳ್ಳುವದಕ್ಕೂ ಹೋಗುವದನ್ನು ದೇವರು ಆಟಂಕ ಮಾಡಿದ್ದರಿಂದ ಕರ್ತನ ಜೀವದಾಣೆ, ನಿನ್ನ ಪ್ರಾಣದ ಜೀವದಾಣೆ, ನಿನ್ನ ಶತ್ರುಗಳೂ ನನ್ನ ಒಡೆಯನಿಗೆ ಕೇಡನ್ನು ಹುಡುಕು ವವರೂ ನಾಬಾಲನ ಹಾಗೆಯೇ ಆಗಲಿ.
- Deuteronomy 32:35 ಧರ್ಮೋಪದೇಶಕಾಂಡ 32:35ಮುಯ್ಯಿಗೆ ಮುಯ್ಯಿ ಕೊಡುವದೂ ಪ್ರತಿಫಲ ಕೊಡುವದೂ ನನ್ನದೇ; ತಕ್ಕ ಕಾಲದಲ್ಲಿ ಅವರ ಕಾಲು ಜಾರುವದು; ಅವರ ಕಳವಳದ ದಿವಸವು ಸವಿಾಪ ವಾಗಿದೆ. ಅವರ ಮೇಲೆ ಬರುವವುಗಳು ಬೇಗ ಬರುತ್ತವೆ.
- Psalm 94:1–2 ಕೀರ್ತನೆಗಳು 94:1–2ಓ ಕರ್ತನೇ, ದೇವರೇ ಮುಯ್ಯಿ ತೀರಿಸುವದು ನಿನ್ನದು; ಓ ದೇವರೇ, ಮುಯ್ಯಿ ತೀರಿಸುವದು ನಿನಗೆ ಸೇರಿದ್ದು. ನಿನ್ನನ್ನು ಪ್ರಕಟಿಸಿಕೋ. ಭೂಮಿಯ ನ್ಯಾಯಾಧಿಪತಿಯೇ, ನೀನು ಎದ್ದೇಳು; ಗರ್ವಿಷ್ಠರಿಗೆ ಪ್ರತೀಕಾರವನ್ನು ಕೊಡು.
- Job 7:1 ಯೋಬನು 7:1ಭೂಮಿಯ ಮೇಲೆ ಮನುಷ್ಯನಿಗೆ ನೇಮಿಸಲ್ಪಟ್ಟ ಕಾಲ ಉಂಟಲ್ಲವೋ? ಅವನ ದಿವಸಗಳು ಕೂಲಿಯವನ ದಿವಸಗಳ ಹಾಗಲ್ಲವೋ?
- Job 14:5 ಯೋಬನು 14:5ಅವನ ದಿವಸಗಳು ನೇಮಕವಾಗಿವೆ; ಅವನ ತಿಂಗಳುಗಳ ಲೆಕ್ಕ ನಿನ್ನ ಬಳಿಯಲ್ಲಿ ಅದೆ; ಅವನು ದಾಟಲಾರದ ಹಾಗೆ ಅವನ ಮೇರೆಗಳನ್ನು ಮಾಡಿದಿ.
- Hebrews 9:27 ಇಬ್ರಿಯರಿಗೆ 9:27ಒಂದೇ ಸಾರಿ ಸಾಯುವದೂ ತರುವಾಯ ನ್ಯಾಯತೀರ್ಪೂ ಮನುಷ್ಯರಿಗೆ ನೇಮಕವಾಗಿದೆ.ಹಾಗೆಯೇ ಕ್ರಿಸ್ತನು ಬಹು ಜನರ ಪಾಪಗಳನ್ನು ಹೊತ್ತುಕೊಳ್ಳುವದಕ್ಕೋಸ್ಕರ ಒಂದೇ ಸಾರಿ ಸಮರ್ಪಿತ ನಾದನು. ತನ್ನನ್ನು ನಿರೀಕ್ಷಿಸಿ ಕೊಂಡಿರುವವರಿಗೆ ರಕ್ಷಣೆ ಯನ್ನುಂಟು ಮಾಡುವದಕ್ಕೋಸ್ಕರ ಪಾಪವಿಲ್ಲದವನಾಗಿ ಎರಡನೆಯ ಸಾರಿ ಕಾಣಿಸಿಕೊಳ್ಳುವನು.