1 Samuel · chapter 9 · verse 17
1 Samuel 9:17 in Kannada
ಸಮುವೇಲನು ಸೌಲನನ್ನು ನೋಡಿದಾಗ ಕರ್ತನು ಅವನಿಗೆ--ಇಗೋ, ನಾನು ನಿನಗೆ ಹೇಳಿದ ಮನು ಷ್ಯನು ಇವನೇ; ಇವನೇ ನನ್ನ ಜನರನ್ನು ಆಳುವನು ಅಂದನು.
Samuvelanu saulanannu nodidaaga kartanu avanige--igo, naanu ninage helida manu shyanu ivane; ivane nanna janarannu aaluvanu andanu.
1 Samuel 9:17 in English
- King James Version (KJV)
- And when Samuel saw Saul, the LORD said unto him, Behold the man whom I spake to thee of! this same shall reign over my people.
- World English Bible (WEB)
- When Samuel saw Saul, the LORD said to him, “Behold, the man of whom I spoke to you! He will have authority over my people.”
- American Standard Version (ASV)
- And when Samuel saw Saul, Jehovah said unto him, Behold, the man of whom I spake to thee! this same shall have authority over my people.
- Bible in Basic English (BBE)
- And when Samuel saw Saul, the Lord said to him, This is the man of whom I gave you word! he it is who is to have authority over my people.
- Darby Translation (DBY)
- And as Samuel saw Saul, Jehovah answered him, Behold the man of whom I spoke to thee! this man shall rule over my people.
- Webster's Bible (WBS)
- And when Samuel saw Saul, the LORD said to him, Behold the man of whom I spoke to thee! this same shall reign over my people.
- Young's Literal Translation (YLT)
- When Samuel hath seen Saul, then hath Jehovah answered him, 'Lo, the man of whom I have spoken unto thee; this [one] doth restrain My people.'
Read in context
- 15ಆದರೆ ಸೌಲನು ಬರುವದಕ್ಕೆ ಒಂದು ದಿವಸ ಮುಂಚೆ ಕರ್ತನು ಸಮುವೇಲನ ಕಿವಿಯಲ್ಲಿ ತಿಳಿಯ ಪಡಿಸಿದ್ದೇನಂದರೆ--
- 16ನಾಳೆ ಇಷ್ಟು ಹೊತ್ತಿಗೆ ಬೆನ್ಯಾ ವಿಾನನ ದೇಶದವನಾದ ಒಬ್ಬ ಮನುಷ್ಯನನ್ನು ನಿನ್ನ ಬಳಿಗೆ ಕಳುಹಿಸುವೆನು; ನೀನು ಅವನನ್ನು ನನ್ನ ಜನರಾದ ಇಸ್ರಾಯೇಲಿನ ಮೇಲೆ ನಾಯಕನಾಗಿರಲು ಅಭಿಷೇಕಿಸ ಬೇಕು; ಅವನು ನನ್ನ ಜನರನ್ನು ಫಿಲಿಷ್ಟಿಯರ ಕೈಯಿಂದ ತಪ್ಪಿಸಿ ರಕ್ಷಿಸುವನು; ನನ್ನ ಜನರ ಕೂಗು ನನ್ನ ಬಳಿಗೆ ಬಂದದರಿಂದ ಅವರನ್ನು ನೋಡಿದ್ದೇನೆ ಎಂಬದು.
- 17ಸಮುವೇಲನು ಸೌಲನನ್ನು ನೋಡಿದಾಗ ಕರ್ತನು ಅವನಿಗೆ--ಇಗೋ, ನಾನು ನಿನಗೆ ಹೇಳಿದ ಮನು ಷ್ಯನು ಇವನೇ; ಇವನೇ ನನ್ನ ಜನರನ್ನು ಆಳುವನು ಅಂದನು.
- 18ಸೌಲನು ಬಾಗಲಲ್ಲಿ ಇರುವ ಸಮು ವೇಲನ ಸವಿಾಪಕ್ಕೆ ಬಂದು ಅವನಿಗೆ--ದರ್ಶಿಯ ಮನೆಯು ಎಲ್ಲಿ ಇದೆ ದಯಮಾಡಿ ನೀನು ನನಗೆ ತಿಳಿಸು ಅಂದನು.
- 19ಸಮುವೇಲನು ಸೌಲನಿಗೆ ಪ್ರತ್ಯುತ್ತ ರವಾಗಿ--ದರ್ಶಿಯು ನಾನೇ; ನೀನು ನನ್ನ ಮುಂದೆ ಗುಡ್ಡದ ಮೇಲಕ್ಕೆ ಏರಿ ಹೋಗು, ಈ ಹೊತ್ತು ನೀವು ನನ್ನ ಸಂಗಡ ತಿನ್ನಬೇಕು; ನಾಳೆ ಹೊತ್ತಾರೆ ನಿಮ್ಮನ್ನು ಕಳುಹಿಸುವೆನು; ನಿಮ್ಮ ಹೃದಯದಲ್ಲಿರುವದನ್ನೆಲ್ಲಾ ನಿಮಗೆ ತಿಳಿಯಪಡಿಸುವೆನು ಅಂದನು.
Cross references
- Acts 13:21 ಅಪೊಸ್ತಲರ ಕೃತ್ಯಗಳು 13:21ತರುವಾಯ ಅವರು ತಮಗೆ ಅರಸನು ಬೇಕೆಂದು ಅಪೇಕ್ಷೆಪಟ್ಟಾಗ ದೇವರು ಅವರಿಗೆ ಬೆನ್ಯಾವಿಾನನ ಗೋತ್ರದ ಕೀಷನ ಮಗನಾದ ಸೌಲನನ್ನು ನಾಲ್ವತ್ತು ವರುಷದ ವರೆಗೆ ಕೊಟ್ಟನು.
- Hosea 13:11 ಹೋಶೇಯ 13:11ನನ್ನ ಕೋಪದಲ್ಲಿ ನಿನಗೆ ಅರಸನನ್ನು ಕೊಟ್ಟೆನು, ನನ್ನ ರೌದ್ರದಲ್ಲಿ ಅವನನ್ನು ತೆಗೆದುಹಾಕಿದೆನು.
- 2 Samuel 23:6–7 2 ಸಮುವೇಲನು 23:6–7ಆದರೆ ಬೆಲಿಯಾಳನ ಮಕ್ಕಳೆಲ್ಲರೂ ತಳ್ಳಲ್ಪಡುವ ಮುಳ್ಳುಗಳ ಹಾಗೆ ಇರುವರು. ಅವರು ಕೈಯಿಂದ ತೆಗೆಯಲ್ಪಡುವ ವರಲ್ಲ; ಅವರನ್ನು ಮುಟ್ಟುವ ಮನುಷ್ಯನು ಕಬ್ಬಿಣ ವನ್ನೂ ಈಟಿಯ ಕಟ್ಟಿಗೆಯನ್ನೂ ಧರಿಸಿಕೊಂಡಿರ ಬೇಕು. ಅದೇ ಸ್ಥಳದಲ್ಲಿ ಬೆಂಕಿಯಿಂದ ಸುಟ್ಟು ಬಿಡಲ್ಪಡುವರು.
- Nehemiah 13:19 ನೆಹೆಮೀಯ 13:19ಆದಕಾರಣ ಸಬ್ಬತ್ ಆಗುವದಕ್ಕಿಂತ ಮುಂಚೆ ಯೆರೂಸಲೇಮಿನ ಬಾಗಲು ಗಳಲ್ಲಿ ಕತ್ತಲು ಆಗಲಾರಂಭಿಸಿದಾಗ ಬಾಗಲುಗಳನ್ನು ಹಾಕುವ ಹಾಗೆಯೂ ಸಬ್ಬತ್ ದಿವಸವು ತೀರುವ ವರೆಗೆ ಅವುಗಳನ್ನು ತೆರೆಯದೆ ಇರುವ ಹಾಗೆಯೂ ನಾನು ಅವರಿಗೆ ಹೇಳಿದೆನು. ಮತ್ತು ಸಬ್ಬತ್ ದಿವಸದಲ್ಲಿ ಹೊರೆ ಏನಾದರೂ ಒಳಗೆ ತಾರದ ಹಾಗೆ ನನ್ನ ಸೇವಕರಲ್ಲಿ ಕೆಲವರನ್ನು ಬಾಗಲುಗಳ ಬಳಿಯಲ್ಲಿ ಇಟ್ಟೆನು.
- 1 Samuel 16:6–12 1 ಸಮುವೇಲನು 16:6–12ಅವರು ಬಂದಾಗ ಏನಾಯಿತಂದರೆ, ಅವನು ಎಲೀಯಾಬನನ್ನು ನೋಡಿ--ನಿಶ್ಚಯವಾಗಿ ಕರ್ತನ ಅಭಿಷಿಕ್ತನು ಆತನ ಮುಂದೆ ಇದ್ದಾನೆ ಅಂದುಕೊಂಡನು. ಆದರೆ ಕರ್ತನು ಸಮುವೇಲನಿಗೆ--ನೀನು ಅವನ ರೂಪವನ್ನೂ ಅವನ ದೇಹದ ಉದ್ದವನ್ನೂ ದೃಷ್ಟಿಸಬೇಡ; ಅವನನ್ನು ನಾನು ತಿರಸ್ಕರಿಸಿದೆನು; ಕರ್ತನು ಮನುಷ್ಯರಂತೆ ಹೊರಗಿನ ತೋರಿಕೆಯನ್ನು ಮಾತ್ರ ನೋಡದೆ ಹೃದಯವನ್ನೇ ನೋಡುವನು ಅಂದನು. ಆಗ ಇಷಯನು ಅಬೀನಾ ದಾಬನನ್ನು ಕರೆದು ಅವನನ್ನು ಸಮುವೇಲನ ಮುಂದೆ ಬರಮಾಡಿದನು; ಆದರೆ ಅವನು--ಇವನನ್ನು ಕರ್ತನು ಆದುಕೊಳ್ಳಲಿಲ್ಲ ಅಂದನು. ಇಷಯನು ಶಮ್ಮನನ್ನು ಬರಮಾಡಿದನು; ಆದರೆ ಅವನು--ಇವನನ್ನು ಕರ್ತನು ಆದುಕೊಳ್ಳಲಿಲ್ಲ ಅಂದನು. ಅನಂತರ ಇಷಯನು ತನ್ನ ಏಳುಮಂದಿ ಕುಮಾರರನ್ನು ಸಮುವೇಲನ ಮುಂದೆ ಬರಮಾಡಿದನು; ಆದರೆ ಸಮುವೇಲನು ಇಷಯ ನಿಗೆ--ಕರ್ತನು ಇವರಲ್ಲಿ ಒಬ್ಬನನ್ನಾದರೂ ಆದುಕೊಳ್ಳ ಲಿಲ್ಲ ಅಂದನು. ಸಮುವೇಲನು--ನಿನಗಿರುವ ಮಕ್ಕ ಳೆಲ್ಲಾ ಇಷ್ಟೇ ಮಂದಿಯೋ? ಎಂದು ಇಷಯನನ್ನು ಕೇಳಿದನು. ಅದಕ್ಕವನು--ಇವರೆಲ್ಲರಿಗಿಂತಲೂ ಚಿಕ್ಕವ ನೊಬ್ಬನು ಉಳಿದಿದ್ದಾನೆ; ಇಗೋ, ಅವನು ಕುರಿಗಳನ್ನು ಕಾಯುತ್ತಾ ಇದ್ದಾನೆ ಅಂದನು. ಆಗ ಸಮುವೇಲನು ಇಷಯನಿಗೆ--ಅವನನ್ನು ಕರೆಯ ಕಳುಹಿಸು; ಯಾಕಂದರೆ ಅವನು ಇಲ್ಲಿಗೆ ಬರುವವರೆಗೆ ನಾವು ಕೂತುಕೊಳ್ಳಬಾರದು ಅಂದನು. ಆಗ ಇಷಯನು ಅವನನ್ನು ಕರೇಕಳುಹಿಸಿದನು. ಅವನು ಕೆಂಪಾದ ಮೈಬಣ್ಣದವನಾಗಿಯೂ ಸುಂದರ ಮುಖವುಳ್ಳವ ನಾಗಿಯೂ ನೋಟಕ್ಕೆ ಚೆಲುವಿಕೆಯುಳ್ಳವನಾಗಿಯೂ ಇದ್ದನು. ಆಗ ಕರ್ತನು ಸಮುವೇಲನಿಗೆ--ನೀನೆದ್ದು ಇವನನ್ನು ಅಭಿಷೇಕಿಸು; ಇವನೇ ಅವನು ಅಂದನು.
- Nehemiah 13:25 ನೆಹೆಮೀಯ 13:25ಆಗ ನಾನು ಅವರನ್ನು ಗದರಿಸಿ ಶಪಿಸಿ ಅವರಲ್ಲಿ ಕೆಲವರನ್ನು ಹೊಡೆದು ಅವರ ಕೂದಲನ್ನು ಕಿತ್ತು--ನೀವು ನಿಮ್ಮ ಕುಮಾರ್ತೆಯರನ್ನು ಅವರ ಕುಮಾರರಿಗೂ ಅವರ ಕುಮಾರ್ತೆಯರನ್ನು ನಿಮ್ಮ ಕುಮಾರರಿಗೂ ನಿಮಗೂ ತಕ್ಕೊಳ್ಳದೆ ಮತ್ತು ಕೊಡದೆ ಇರ್ರಿ ಎಂದು ದೇವರ ಹೆಸರಿನಲ್ಲಿ ಅವರಿಗೆ ಆಣೆ ಇಟ್ಟೆನು;
- Romans 13:3–4 ರೋಮಾಪುರದವರಿಗೆ 13:3–4ಕೆಟ್ಟಕೆಲಸ ಮಾಡುವವನಿಗೆ ಅಧಿಕಾರಿಗಳ ಭಯವಿರುವದೇ ಹೊರತು ಒಳ್ಳೇಕೆಲಸ ಮಾಡುವವ ನಿಗೆ ಇರುವದಿಲ್ಲ; ನೀನು ಅಧಿಕಾರಿಗೆ ಭಯಪಡದೆ ಇರಬೇಕೆಂದು ಅಪೇಕ್ಷಿಸುತ್ತೀಯೋ? ಒಳ್ಳೆಯದನ್ನು ಮಾಡು; ಆಗ ಆ ಅಧಿಕಾರಿಯಿಂದಲೇ ನಿನಗೆ ಹೊಗ ಳಿಕೆಯುಂಟಾಗುವದು. ಅವನು ನಿನ್ನ ಹಿತಕ್ಕೋಸ್ಕರ ದೇವರ ಸೇವಕನಾಗಿದ್ದಾನಲ್ಲಾ; ಆದರೆ ನೀನು ಕೆಟ್ಟದ್ದನ್ನು ಮಾಡಿದರೆ ಭಯಪಡಬೇಕು; ಅವನು ಸುಮ್ಮನೆ ಕೈಯಲ್ಲಿ ಕತ್ತಿಯನ್ನು ಹಿಡಿದಿಲ್ಲ; ಅವನು ದೇವರ ಸೇವಕನಾಗಿದ್ದು ಕೆಟ್ಟದ್ದನ್ನು ನಡಿಸುವವನಿಗೆ ದಂಡನೆಯನ್ನು ವಿಧಿಸುತ್ತಾನೆ.
- 1 Samuel 3:13 1 ಸಮುವೇಲನು 3:13ತನ್ನ ಕುಮಾರರು ತಮ್ಮ ಭ್ರಷ್ಟತ ನಕ್ಕೆ ಈಡಾದಾಗ ಅವರನ್ನು ಹತೋಟಿಗೆ ತರಲಿಲ್ಲ. ಆದದರಿಂದ ಅವನಿಗೆ, ಅವನು ತಿಳಿದ ದುಷ್ಟತನದ ನಿಮಿತ್ತ ನಾನು ಎಂದೆಂದಿಗೂ ಅವನ ಮನೆಗೆ ನ್ಯಾಯ ತೀರಿಸುವೆನು ಎಂದು ಹೇಳಿದ್ದೇನೆ.