2 Chronicles · chapter 13 · verse 14
2 Chronicles 13:14 in Kannada
ಯೆಹೂದದವರು ಹಿಂದಕ್ಕೆ ನೋಡಿದಾಗ ಇಗೋ, ಯುದ್ಧವು ಅವರ ಮುಂದೆಯೂ ಹಿಂದೆಯೂ ಇತ್ತು. ಆಗ ಅವರು ಕರ್ತನಿಗೆ ಕೂಗಿದರು, ಯಾಜಕರು ತುತೂರಿಗಳನ್ನು ಊದಿದರು.
Yehoodadavaru hindakke nodidaaga igo, yuddhavu avara mundeyoo hindeyoo ittu. Aaga avaru kartanige koogidaru, yaajakaru tutoorigalannu oodidaru.
2 Chronicles 13:14 in English
- King James Version (KJV)
- And when Judah looked back, behold, the battle [was] before and behind: and they cried unto the LORD, and the priests sounded with the trumpets.
- World English Bible (WEB)
- When Judah looked back, behold, the battle was before and behind them; and they cried to the LORD, and the priests sounded with the trumpets.
- American Standard Version (ASV)
- And when Judah looked back, behold, the battle was before and behind them; and they cried unto Jehovah, and the priests sounded with the trumpets.
- Bible in Basic English (BBE)
- And Judah, turning their faces, saw that they were being attacked in front and at the back; and they gave a cry for help to the Lord, while the priests were sounding their horns.
- Darby Translation (DBY)
- And Judah looked back, and behold, they had the battle in front and behind; and they cried to Jehovah, and the priests sounded with the trumpets.
- Webster's Bible (WBS)
- And when Judah looked back, behold, the battle [was] before and behind: and they cried to the LORD, and the priests sounded with the trumpets.
- Young's Literal Translation (YLT)
- And Judah turneth, and lo, against them [is] the battle, before and behind, and they cry to Jehovah, and the priests are blowing with trumpets,
Read in context
- 12ಇದಲ್ಲದೆ ನಿಮಗೆ ವಿರೋಧವಾಗಿ ಜಯಧ್ವನಿ ಮಾಡುವ ತುತೂರಿಗಳನ್ನು ಹಿಡುಕೊಂಡ ಆತನ ಯಾಜಕರು ಇದ್ದಾರೆ. ಇಸ್ರಾಯೇಲಿನ ಮಕ್ಕಳೇ, ನೀವು ನಿಮ್ಮ ಪಿತೃಗಳ ದೇವರಾದ ಕರ್ತನಿಗೆ ವಿರೋಧ ವಾಗಿ ಯುದ್ಧಮಾಡಬೇಡಿರಿ, ನೀವು ಜಯ ಹೊಂದು ವದಿಲ್ಲ ಅಂದನು.
- 13ಆದರೆ ಯಾರೊಬ್ಬಾಮನು ಅಡಗಿಕೊಂಡವರನ್ನು ಸುತ್ತಲೂ ಅವರ ಹಿಂದೆಯೂ ಬರಮಾಡಿದನು. ಆದದರಿಂದ ಅವರು ಯೆಹೂದ ದವರ ಮುಂದೆಯೂ ಅಡಗಿಕೊಂಡವರು ಅವರ ಹಿಂದೆಯೂ ಇದ್ದರು.
- 14ಯೆಹೂದದವರು ಹಿಂದಕ್ಕೆ ನೋಡಿದಾಗ ಇಗೋ, ಯುದ್ಧವು ಅವರ ಮುಂದೆಯೂ ಹಿಂದೆಯೂ ಇತ್ತು. ಆಗ ಅವರು ಕರ್ತನಿಗೆ ಕೂಗಿದರು, ಯಾಜಕರು ತುತೂರಿಗಳನ್ನು ಊದಿದರು.
- 15ಇದಲ್ಲದೆ ಯೆಹೂದದ ಮನುಷ್ಯರು ಆರ್ಭಟಿಸಿದರು; ಯೆಹೂದದ ಮನುಷ್ಯರು ಆರ್ಭಟಿ ಸಿದಾಗ ಏನಾಯಿತಂದರೆ, ದೇವರು ಅಬೀಯನ ಮತ್ತು ಯೆಹೂದದವರ ಮುಂದೆ ಯಾರೊಬ್ಬಾಮ ನನ್ನೂ ಸಮಸ್ತ ಇಸ್ರಾಯೇಲನ್ನೂ ಹೊಡೆದನು.
- 16ಇಸ್ರಾಯೇಲಿನ ಮಕ್ಕಳು ಯೆಹೂದದವರ ಎದುರಿ ನಿಂದ ಓಡಿಹೋದರು. ದೇವರು ಅವರನ್ನು ಅವರ ಕೈಯಲ್ಲಿ ಒಪ್ಪಿಸಿದನು.
Cross references
- 2 Chronicles 14:11 2 ಪೂರ್ವಕಾಲವೃತ್ತಾಂತ 14:11ಆಗ ಆಸನು ತನ್ನ ದೇವರಾದ ಕರ್ತನನ್ನು ಕರೆದು--ಕರ್ತನೇ, ಅನೇಕರ ಮಧ್ಯದಲ್ಲಿ ಬಲಹೀನರಿಗೆ ಸಹಾಯಕೊಡು ವವನು ನಮ್ಮ ದೇವರಾದ ಕರ್ತನೇ, ನಮಗೆ ಸಹಾಯ ಕೊಡು; ಯಾಕಂದರೆ ನಾವು ನಿನ್ನ ಮೇಲೆ ಆತುಕೊಂಡಿ ದ್ದೇವೆ; ನಿನ್ನ ಹೆಸರಿನಲ್ಲಿ ನಾವು ಈ ಗುಂಪಿನ ಮೇಲೆ ಹೋಗುತ್ತೇವೆ; ಓ ಕರ್ತನೇ, ನಿನ್ನ ಹೊರತು ಬೇರೆ ಯಾರೂ ಇಲ್ಲ, ನೀನೇ ನಮ್ಮ ದೇವರು; ಮನುಷ್ಯನು ನಿನ್ನೆದುರಿನಲ್ಲಿ ಬಲಗೊಳ್ಳದಿರಲಿ ಅಂದನು.
- Exodus 14:10 ವಿಮೋಚನಕಾಂಡ 14:10ಫರೋಹನು ಸವಿಾಪಕ್ಕೆ ಬರುತ್ತಿರಲು ಇಗೋ, ಇಸ್ರಾಯೇಲ್ ಮಕ್ಕಳು ತಮ್ಮ ಕಣ್ಣುಗಳನ್ನೆತ್ತಿ ಹಿಂದೆ ಬರುತ್ತಿರುವ ಐಗುಪ್ತ್ಯರನ್ನು ಕಂಡು ಇಸ್ರಾಯೇಲ್ ಮಕ್ಕಳು ಬಹಳವಾಗಿ ಭಯಪಟ್ಟು ಕರ್ತನಿಗೆ ಮೊರೆಯಿ ಟ್ಟರು.
- Psalm 50:15 ಕೀರ್ತನೆಗಳು 50:15ಇಕ್ಕಟ್ಟಿನ ದಿವಸದಲ್ಲಿ ನನ್ನನ್ನು ಕರೆ; ನಾನು ನಿನ್ನನ್ನು ತಪ್ಪಿಸಿಬಿಡುವೆನು; ಆಗ ನನ್ನನ್ನು ಘನಪಡಿಸುವಿ.
- 2 Samuel 10:8–14 2 ಸಮುವೇಲನು 10:8–14ಆಗ ಅಮ್ಮೋನನ ಮಕ್ಕಳು ಹೊರಟು ಪಟ್ಟಣದ ಬಾಗಲ ಮುಂದೆ ವ್ಯೂಹಕಟ್ಟಿದರು. ಆದರೆ ಚೋಬಾದಿಂದಲೂ ರೆಹೋಬ್ನಿಂದಲೂ ಇಷ್ಟೋಬ್ ನಿಂದಲೂ ಮಾಕನಿಂದಲೂ ಬಂದ ಅರಾಮ್ಯರು ಹೊರಗೆ ಬೈಲಿನಲ್ಲಿ ಬೇರೆ ಇಳಿದಿದ್ದರು. ಯೋವಾಬನು ಯುದ್ಧದ ಮುಖವು ಹಿಂದೆ ಮುಂದೆ ತನಗೆ ಎದುರಾ ಗಿರುವದನ್ನು ನೋಡಿದಾಗ ಅವನು ಇಸ್ರಾಯೇಲಿನ ಆಯಲ್ಪಟ್ಟ ಎಲ್ಲಾ ಜನರನ್ನು ಆದುಕೊಂಡು ಅರಾಮ್ಯ ರಿಗೆ ಎದುರಾಗಿ ವ್ಯೂಹಕಟ್ಟಿದನು. ಆದರೆ ಮಿಕ್ಕಾದ ವರು ಅಮ್ಮೋನನ ಮಕ್ಕಳಿಗೆದುರಾಗಿ ವ್ಯೂಹಕಟ್ಟುವ ಹಾಗೆ ಅವರನ್ನು ತನ್ನ ಸಹೋದರನಾದ ಅಬೀಷೈಯ ಕೈಯಲ್ಲಿ ಒಪ್ಪಿಸಿಕೊಟ್ಟು-- ಅರಾಮ್ಯರು ನನಗಿಂತ ಬಲವುಳ್ಳವರಾದರೆ ನೀನು ನನಗೆ ಸಹಾಯ ಕೊಡ ಬೇಕು; ಅಮ್ಮೋನನ ಮಕ್ಕಳು ನಿನಗಿಂತ ಬಲವುಳ್ಳವ ರಾದರೆ ನಾನು ಬಂದು ನಿನಗೆ ಸಹಾಯ ಮಾಡುವೆನು. ಬಲವಾಗಿರು; ನಾವು ನಮ್ಮ ಜನರಿಗೋಸ್ಕರವೂ ನಮ್ಮ ದೇವರ ಪಟ್ಟಣಗಳಿಗೋಸ್ಕರವೂ ಬಲಗೊ ಳ್ಳೋಣ. ಕರ್ತನು ತನ್ನ ದೃಷ್ಟಿಗೆ ಉತ್ತಮವಾದದ್ದನ್ನು ಮಾಡಲಿ ಅಂದನು. ಆಗ ಯೋವಾಬನೂ ಅವನ ಸಂಗಡ ಇದ್ದ ಜನರೂ ಅರಾಮ್ಯರ ಮೇಲೆ ಯುದ್ಧ ಮಾಡುವದಕ್ಕೆ ಸವಿಾಪಕ್ಕೆ ಬಂದರು. ಅವರು ಅವನ ಎದುರಿನಿಂದ ಓಡಿಹೋದರು. ಅರಾಮ್ಯರು ಓಡಿ ಹೋದದ್ದನ್ನು ಅಮ್ಮೋನನ ಮಕ್ಕಳು ನೋಡಿದಾಗ ಅವರು ಅಬೀಷೈಯ ಎದುರಿನಿಂದ ಓಡಿ ಪಟ್ಟಣ ದೊಳಗೆ ಹೊಕ್ಕರು. ಆಗ ಯೋವಾಬನು ಅಮ್ಮೊನನ ಮಕ್ಕಳನ್ನು ಬಿಟ್ಟು ತಿರುಗಿ ಯೆರೂಸಲೇಮಿಗೆ ಬಂದನು.
- Joshua 8:20 ಯೆಹೋಶುವ 8:20ಆಯಿಯ ಮನುಷ್ಯರು ಹಿಂದಕ್ಕೆ ತಿರಿಗಿ ನೋಡಿದಾಗ ಇಗೋ, ಪಟ್ಟಣದ ಹೊಗೆ ಹೊತ್ತಿ ಆಕಾಶಕ್ಕೆ ಏಳು ವದನ್ನು ಕಂಡರು; ಆಗ ಈ ಮಾರ್ಗವಾದರೂ ಆ ಮಾರ್ಗವಾದರೂ ಓಡಿಹೋಗಲು ಅವರಿಗೆ ತ್ರಾಣ ವಿಲ್ಲದೆ ಹೋಯಿತು. ಆಗ ಅರಣ್ಯಕ್ಕೆ ಓಡಿ ಹೋದ ಜನರು ಹಿಂದಟ್ಟಿದವರ ಕಡೆಗೆ ತಿರುಗಿದರು.
- Psalm 91:5 ಕೀರ್ತನೆಗಳು 91:5ರಾತ್ರಿಯ ಭಯಂಕರತೆಗೂ ಹಗಲಲ್ಲಿ ಹಾರುವ ಬಾಣಕ್ಕೂ
- Judges 20:33–43 ನ್ಯಾಯಸ್ಥಾಪಕರು 20:33–43ಇಸ್ರಾಯೇಲ್ ಮಕ್ಕಳೆಲ್ಲರೂ ತಮ್ಮ ಸ್ಥಳದಲ್ಲಿಂದ ಎದ್ದು ಬಾಳ್ತಾಮರಿನಲ್ಲಿ ವ್ಯೂಹವನ್ನು ಕಟ್ಟಿದರು. ಆಗ ಗಿಬೆಯದ ಗವಿಯಲ್ಲಿ ಹೊಂಚಿ ನೋಡುತ್ತಿದ್ದ ಇಸ್ರಾಯೇಲ್ಯರು ಹೊರಟುಬಂದರು. ಅವರಲ್ಲಿ ಆದುಕೊಳ್ಳಲ್ಪಟ್ಟ ಹತ್ತು ಸಾವಿರ ಮನುಷ್ಯರು ಗಿಬೆಯಕ್ಕೆ ವಿರೋಧವಾಗಿ ಬಂದರು. ಯುದ್ಧವು ಘೋರವಾಗಿತ್ತು. ಆದರೆ ಅವರು ತಮಗೆ ಕೇಡು ಸವಿಾಪವಾಗಿತ್ತೆಂದು ಅರಿಯದೆ ಇದ್ದರು. ಆಗ ಕರ್ತನು ಇಸ್ರಾಯೇಲಿನ ಮುಂದೆ ಬೆನ್ಯಾವಿಾನನನ್ನು ಹೊಡೆದನು. ಆ ದಿನದಲ್ಲಿ ಇಸ್ರಾಯೇಲ್ ಮಕ್ಕಳು ಬೆನ್ಯಾವಿಾನ್ಯರಲ್ಲಿ ಕತ್ತಿ ಹಿಡಿ ಯುವವರಾದ ಇಪ್ಪತ್ತೈದು ಸಾವಿರದ ನೂರು ಮನುಷ್ಯ ರನ್ನು ನಾಶಮಾಡಿದರು. ಹೀಗೆ ಬೆನ್ಯಾವಿಾನನ ಮಕ್ಕಳು ತಾವು ಹೊಡೆಯಲ್ಪಟ್ಟಿದೇವೆಂದು ಕಂಡರು; ಯಾಕಂದರೆ ಇಸ್ರಾಯೇಲ್ ಮನುಷ್ಯರು ಗಿಬೆಯದ ಬಳಿಯಲ್ಲಿ ಹೊಂಚು ಹಾಕುವದಕ್ಕೆ ಇಟ್ಟವರನ್ನು ನಂಬಿದ್ದದರಿಂದ ಬೆನ್ಯಾವಿಾನ್ಯರಿಗೆ ಸ್ಥಳವನ್ನು ಕೊಟ್ಟರು. ಆಗ ಹೊಂಚುಹಾಕಿಕೊಂಡಿದ್ದವರು ತೀವ್ರವಾಗಿ ಗಿಬೆಯಕ್ಕೆ ಹೋದರು. ಹೊಂಚುಹಾಕಿದ್ದವರು ಸಾಲಾಗಿ ಹೊರಟು ಪಟ್ಟಣದಲ್ಲಿರುವವರೆಲ್ಲರನ್ನು ಕತ್ತಿಯಿಂದ ಹೊಡೆದರು. ಇಸ್ರಾಯೇಲ್ ಮನುಷ್ಯರು ಹೊಂಚು ಹಾಕಿಕೊಂಡಿದ್ದವರ ಸಂಗಡ ನೇಮಿಸಿಕೊಂಡ ಗುರುತೇ ನಂದರೆ, ಪಟ್ಟಣದಲ್ಲಿಂದ ಮಹಾದೊಡ್ಡ ಹೊಗೆಯನ್ನು ಏಳಮಾಡುವದೇ. ಇಸ್ರಾಯೇಲ್ ಮನುಷ್ಯರು ಯುದ್ಧದಲ್ಲಿ ಹಿಂದೆಗೆದಾಗ ಬೆನ್ಯಾವಿಾನ್ಯರು ಇಸ್ರಾ ಯೇಲ್ಯರನ್ನು ಹೊಡೆಯುವದಕ್ಕೆ ಪ್ರಾರಂಭಿಸಿ ಅವರಲ್ಲಿ ಹೆಚ್ಚುಕಡಿಮೆ ಮೂವತ್ತು ಜನರನ್ನು ಕೊಂದಾಗ ಮೊದಲು ಯುದ್ಧದಲ್ಲಿ ಆದ ಹಾಗೆ ನಿಶ್ಚಯವಾಗಿ ಅವರು ನಮ್ಮ ಮುಂದೆ ಮುರಿಯಲ್ಪಡುತ್ತಾರೆ ಅಂದು ಕೊಂಡರು. ಆದರೆ ಪಟ್ಟಣದೊಳಗಿಂದ ಅಗ್ನಿ ಜ್ವಾಲೆಯು ಹೊಗೆಯ ಸ್ತಂಭ ಸಹಿತವಾಗಿ ಏಳುವದಕ್ಕೆ ಪ್ರಾರಂಭಿಸಿತು. ಬೆನ್ಯಾವಿಾನ್ಯರು ಹಿಂದಕ್ಕೆ ಅದನ್ನು ತಿರುಗಿ ನೋಡಿದಾಗ ಇಗೋ, ಪಟ್ಟಣದ ಜ್ವಾಲೆಯು ಆಕಾಶಕ್ಕೆ ಏರಿತು. ಇಸ್ರಾಯೇಲ್ ಮನುಷ್ಯರು ತಿರುಗಿ ಕೊಂಡು ಬಂದಾಗ ಬೆನ್ಯಾವಿಾನನ ಜನರು ತಲ್ಲಣ ಗೊಂಡರು. ತಮ್ಮ ಮೇಲೆ ಕೇಡು ಪ್ರಾಪ್ತವಾಯಿತೆಂದು ಕಂಡರು. ಆದದರಿಂದ ಅವರು ಇಸ್ರಾಯೇಲ್ ಮನು ಷ್ಯರ ಮುಂದೆ ಅರಣ್ಯದ ಮಾರ್ಗಕ್ಕೆ ತಿರುಗಿಕೊಂಡು ಹೋದರು. ಆದರೆ ಯುದ್ಧವು ಅವರನ್ನು ಹಿಡಿ ಯಿತು. ಪಟ್ಟಣದಿಂದ ಹೊರಟು ಬರುವ ಜನರನ್ನು ಮಧ್ಯದಲ್ಲೇ ಕೊಂದುಹಾಕಿದರು. ಹೀಗೆ ಬೆನ್ಯಾ ವಿಾನ್ಯರನ್ನು ಸುತ್ತಲೂ ಮುತ್ತಿಕೊಂಡು ಅವರನ್ನು ಹಿಂದಟ್ಟಿ, ಗಿಬೆಯಕ್ಕೆ ಮೂಡಣ ದಿಕ್ಕಿನಲ್ಲಿ ಸಾವಕಾಶ ವಿಲ್ಲದೆ ತುಳಿದುಹಾಕಿದರು.
- 2 Chronicles 18:31 2 ಪೂರ್ವಕಾಲವೃತ್ತಾಂತ 18:31ಆದದರಿಂದ ರಥಗಳ ಅಧಿಪತಿ ಗಳು ಯೆಹೋಷಾಫಾಟನನ್ನು ನೋಡಿದಾಗ--ನಿಶ್ಚ ಯವಾಗಿ ಇವನೇ ಇಸ್ರಾಯೇಲಿನ ಅರಸನೆಂದು ಹೇಳಿ ಅವನ ಸಂಗಡ ಯುದ್ಧಮಾಡುವದಕ್ಕೆ ಸುತ್ತಿಕೊಂಡರು. ಯೆಹೋಷಾಫಾಟನು ಕೂಗಿಕೊಳ್ಳಲು ಕರ್ತನು ಅವ ನಿಗೆ ಸಹಾಯಕೊಟ್ಟನು. ಇದಲ್ಲದೆ ದೇವರು ಅವರನ್ನು ಅವನ ಕಡೆಯಿಂದ ತೊಲಗಿಸಿದನು.