Psalms · chapter 91 · verse 5
Psalm 91:5 in Kannada
ರಾತ್ರಿಯ ಭಯಂಕರತೆಗೂ ಹಗಲಲ್ಲಿ ಹಾರುವ ಬಾಣಕ್ಕೂ
Raatriya bhayankarategoo hagalalli haaruva baanakkoo
Psalm 91:5 in English
- King James Version (KJV)
- Thou shalt not be afraid for the terror by night; [nor] for the arrow [that] flieth by day;
- World English Bible (WEB)
- You shall not be afraid of the terror by night, nor of the arrow that flies by day,
- American Standard Version (ASV)
- Thou shalt not be afraid for the terror by night, Nor for the arrow that flieth by day;
- Bible in Basic English (BBE)
- You will have no fear of the evil things of the night, or of the arrow in flight by day,
- Darby Translation (DBY)
- Thou shalt not be afraid for the terror by night, for the arrow that flieth by day,
- Webster's Bible (WBS)
- Thou shalt not be afraid for the terror by night; [nor] for the arrow [that] flieth by day;
- Young's Literal Translation (YLT)
- Thou art not afraid of fear by night, Of arrow that flieth by day,
Read in context
- 3ನಿಶ್ಚಯವಾಗಿ ಆತನು ನಿನ್ನನ್ನು ಬೇಡನ ಉರ್ಲಿ ನಿಂದಲೂ ಅಪಾಯದ ಜಾಡ್ಯದಿಂದಲೂ ಬಿಡಿಸು ವನು.
- 4ತನ್ನ ರೆಕ್ಕೆಗಳಿಂದ ನಿನ್ನನ್ನು ಹೊದಗಿಸುವನು; ಆತನ ರೆಕ್ಕೆಗಳ ಕೆಳಗೆ ಆಶ್ರಯಿಸಿಕೊಳ್ಳುವಿ; ಆತನ ಸತ್ಯವು ನಿನ್ನ ಖೇಡ್ಯವೂ ಡಾಲೂ ಆಗಿದೆ.
- 5ರಾತ್ರಿಯ ಭಯಂಕರತೆಗೂ ಹಗಲಲ್ಲಿ ಹಾರುವ ಬಾಣಕ್ಕೂ
- 6ಅಂಧಕಾರದಲ್ಲಿ ನಡೆಯುವ ಜಾಡ್ಯಕ್ಕೂ ಇಲ್ಲವೆ ಮಧ್ಯಾಹ್ನದಲ್ಲಿ ಹಾಳು ಮಾಡುವ ನಾಶನಕ್ಕೂ ನೀನು ಭಯಪಡದೆ ಇರುವಿ.
- 7ನಿನ್ನ ಕಡೆಯಲ್ಲಿ ಸಾವಿರ ಜನರೂ ನಿನ್ನ ಬಲಗಡೆಯಲ್ಲಿ ಹತ್ತು ಸಾವಿರ ಜನರೂ ಬಿದ್ದಾಗ್ಯೂ ನಿನ್ನ ಸವಿಾಪಕ್ಕೆ ಅದು ಬರುವದಿಲ್ಲ.
Cross references
- Isaiah 43:2 ಯೆಶಾಯ 43:2ನೀನು ಜಲರಾಶಿಯನ್ನು ದಾಟಿ ಹೋಗುವಾಗ ನಾನು ನಿನ್ನೊಂದಿಗಿರುವೆನು; ನದಿಗಳನ್ನು ನೀನು ದಾಟುವಾಗ ಅವು ನಿನ್ನನ್ನು ಮುಳುಗಿಸುವದಿಲ್ಲ; ಬೆಂಕಿಯಲ್ಲಿ ನೀನು ನಡೆಯುವಾಗ ಸುಡಲ್ಪಡುವದಿಲ್ಲ; ಇಲ್ಲವೆ ಜ್ವಾಲೆಯು ನಿನ್ನನ್ನು ದಹಿಸದು.
- Job 5:19–27 ಯೋಬನು 5:19–27ಆರು ಇಕ್ಕಟ್ಟುಗಳಿಂದ ನಿನ್ನನ್ನು ತಪ್ಪಿಸುವನು; ಹೌದು, ಏಳರಲ್ಲಿಯೂ ಕೇಡು ನಿನ್ನನ್ನು ಮುಟ್ಟದು. ಬರದಲ್ಲಿ ನಿನ್ನನ್ನು ಮರಣದೊಳ ಗಿಂದಲೂ ಯುದ್ಧದಲ್ಲಿ ಕತ್ತಿಯ ಬಲದಿಂದಲೂ ವಿಮೋಚಿಸುವನು. ನಾಲಿಗೆಯೆಂಬ ಬೆತ್ತಕ್ಕೆ ಮರೆ ಯಾಗುವಿ; ಅದು ಬಂದಾಗ ನೀನು ನಾಶಕ್ಕೆ ಭಯ ಪಡುವದಿಲ್ಲ. ನಾಶನಕ್ಕೂ ಕ್ಷಾಮಕ್ಕೂ ನಗುವಿ; ಭೂಮಿಯ ಮೃಗಗಳಿಗೂ ಭಯಪಡುವದಿಲ್ಲ. ಹೊಲದ ಕಲ್ಲುಗಳ ಸಂಗಡ ನಿನಗೆ ಒಡಂಬಡಿಕೆ ಇರುವದು; ಹೊಲದ ಮೃಗಗಳು ನಿನ್ನೊಂದಿಗೆ ಸಮಾ ಧಾನವಾಗಿರುವವು. ನಿನ್ನ ಗುಡಾರವು ಕ್ಷೇಮವಾಗಿದೆ ಎಂದು ತಿಳಿದುಕೊಳ್ಳುವಿ, ನೀನು ನಿನ್ನ ನಿವಾಸ ಸ್ಥಾನ ವನ್ನು ತಿಳಿದುಕೊಳ್ಳುವಿ ಪಾಪಮಾಡುವದಿಲ್ಲ. ನಿನ್ನ ಸಂತತಿಯು ಬಹಳವಾಗಿದೆ ಎಂದೂ ನಿನ್ನ ಸಂತಾನವು ಭೂಮಿಯ ಹುಲ್ಲಿನಂತಿದೆ ಎಂದೂ ತಿಳಿದುಕೊಳ್ಳುವಿ. ಸಿವುಡು ತನ್ನ ಕಾಲದಲ್ಲಿ ಏಳುವಂತೆ ನೀನು ಪೂರ್ಣ ಪ್ರಾಯದವನಾಗಿ ಸಮಾಧಿಗೆ ಸೇರುವಿ.ಇಗೋ, ಇದನ್ನೇ ನಾವು ವಿಚಾರಿಸಿದೆವು; ಅದು ಇದೇ; ಇದನ್ನು ಆಲಿಸು; ನಿನ್ನ ಹಿತಕ್ಕಾಗಿ ಇದನ್ನು ತಿಳುಕೋ. ಇಗೋ, ಇದನ್ನೇ ನಾವು ವಿಚಾರಿಸಿದೆವು; ಅದು ಇದೇ; ಇದನ್ನು ಆಲಿಸು; ನಿನ್ನ ಹಿತಕ್ಕಾಗಿ ಇದನ್ನು ತಿಳುಕೋ.
- Proverbs 3:23–25 ಜ್ಞಾನೋಕ್ತಿಗಳು 3:23–25ನಿನ್ನ ಮಾರ್ಗದಲ್ಲಿ ನೀನು ನಿರ್ಭಯವಾಗಿ ನಡೆಯುವಿ, ನಿನ್ನ ಪಾದವು ಎಡವುವದಿಲ್ಲ. ನೀನು ಮಲಗುವಾಗ ನಿನಗೆ ಹೆದರಿಕೆ ಇರುವದಿಲ್ಲ, ಹೌದು, ನೀನು ಮಲಗಿಕೊಳ್ಳುವಿ. ನಿನ್ನ ನಿದ್ರೆಯು ಸುಖವಾಗಿರುವದು. ಆಕಸ್ಮತ್ತಾದ ಭಯ ಕ್ಕಾಗಲಿ ಇಲ್ಲವೆ ಅವರ ಮೇಲೆ ಬರುವ ದುಷ್ಟರ ನಾಶನಕ್ಕಾಗಲಿ ನೀನು ಭಯಪಡದಿರು.
- Psalm 3:5–6 ಕೀರ್ತನೆಗಳು 3:5–6ಕರ್ತನೇ ನನ್ನನ್ನು ಕಾಪಾಡಿದ್ದರಿಂದ ನಾನು ಮಲಗಿ ನಿದ್ದೆಗೈದು ಎಚ್ಚತ್ತೆನು. ನನಗೆ ವಿರೋಧವಾಗಿ ಸುತ್ತಲೂ ಮುತ್ತಿದ ಹತ್ತು ಸಾವಿರ ಜನರಿಗೆ ಭಯಪಡೆನು.
- Hebrews 13:6 ಇಬ್ರಿಯರಿಗೆ 13:6ಆದದರಿಂದ--ಕರ್ತನು ನನ್ನ ಸಹಾಯಕನು, ಭಯಪಡೆನು, ಮನುಷ್ಯನು ನನಗೆ ಏನು ಮಾಡಾನು ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು.
- Psalm 112:7 ಕೀರ್ತನೆಗಳು 112:7ಅವನು ಕೆಟ್ಟಸುದ್ದಿಗೆ ಭಯಪಡನು; ಅವನ ಹೃದಯವು ಕರ್ತನಲ್ಲಿ ಭರವಸವಿಟ್ಟು ಸ್ಥಿರವಾಗಿದೆ.
- Psalm 27:1–3 ಕೀರ್ತನೆಗಳು 27:1–3ಕರ್ತನು ನನ್ನ ಬೆಳಕೂ ರಕ್ಷಣೆಯೂ ಆಗಿದ್ದಾನೆ; ನಾನು ಯಾರಿಗೆ ಭಯಪಡು ವೆನು? ಕರ್ತನು ನನ್ನ ಜೀವದ ಬಲವಾಗಿದ್ದಾನೆ; ನಾನು ಯಾರಿಗೆ ಹೆದರುವೆನು? ನನ್ನ ಮಾಂಸವನ್ನು ತಿನ್ನಬೇಕೆಂದು ದುಷ್ಟರು ಅಂದರೆ ನನ್ನ ವೈರಿಗಳೂ ಶತ್ರುಗಳೂ ಬಂದಾಗ ಅವರು ಎಡವಿಬಿದ್ದರು. ನನಗೆ ವಿರೋಧವಾಗಿ ದಂಡು ಇಳಿದರೂ ನನ್ನ ಹೃದಯವು ಭಯಪಡದು; ಯುದ್ಧವು ನನ್ನ ಮೇಲೆ ಎದ್ದರೂ ಇದರಲ್ಲಿಯೂ ನಾನು ಭರವಸವಾಗಿರುವೆನು.
- Proverbs 28:1 ಜ್ಞಾನೋಕ್ತಿಗಳು 28:1ಹಿಂದಟ್ಟುವವನು ಇಲ್ಲದಿದ್ದರೂ ದುಷ್ಟರು ಓಡಿಹೋಗುತ್ತಾರೆ; ಸಿಂಹದ ಹಾಗೆ ನೀತಿವಂತರು ಧೈರ್ಯದಿಂದ ಇರುತ್ತಾರೆ.
- Isaiah 21:4 ಯೆಶಾಯ 21:4ನನ್ನ ಹೃದಯವು (ಎದುರಿಸುತ್ತದೆ) ಗಾಬರಿಗೊಂಡಿದೆ, ನಡು ಗುವಿಕೆಯು ನನ್ನನ್ನು ಕಳವಳಗೊಳಿಸಿದೆ, ನನ್ನ ಆನಂ ದದ ರಾತ್ರಿಯನ್ನು ನನಗೆ ಭಯಭ್ರಾಂತಿಯಾಗಿ ಮಾಡಿದ್ದಾನೆ.
- Psalm 46:2 ಕೀರ್ತನೆಗಳು 46:2ಆದದರಿಂದ ಭೂಮಿಯು ತೆಗೆದು ಹಾಕಲ್ಪಟ್ಟರೂ ಬೆಟ್ಟಗಳು ಸಮುದ್ರದ ಮಧ್ಯಕ್ಕೆ ಒಯ್ಯ ಲ್ಪಟ್ಟರೂ
- Job 24:14–16 ಯೋಬನು 24:14–16ಬೆಳಿಗ್ಗೆ ಕೊಲೆಗಾರನು ಎದ್ದು ದೀನನನ್ನೂ ದರಿದ್ರನನ್ನೂ ಕೊಲ್ಲುತ್ತಾನೆ; ರಾತ್ರಿ ಯಲ್ಲಿ ಕಳ್ಳನ ಹಾಗೆ ಇದ್ದಾನೆ. ವ್ಯಭಿಚಾರಿಯ ಕಣ್ಣು ಮುಂಗತ್ತಲೆಗೆ ಕಾದುಕೊಂಡು -- ಯಾವ ಕಣ್ಣೂ ನನ್ನನ್ನು ನೋಡುವದಿಲ್ಲವೆಂದು ಹೇಳುತ್ತದೆ; ಮುಖ ವನ್ನು ಮುಚ್ಚಿಕೊಳ್ಳುತ್ತಾನೆ. ಹಗಲು ಹೊತ್ತು ಗೊತ್ತು ಮಾಡಿಕೊಂಡ ಮನೆಗಳನ್ನು ಕತ್ತಲೆಯಲ್ಲಿ ಕೊರೆಯು ತ್ತಾರೆ; ಅವರು ಬೆಳಕನ್ನು ತಿಳಿಯರು.
- Job 4:13–15 ಯೋಬನು 4:13–15ರಾತ್ರಿಯ ದರ್ಶನಗಳ ಆಲೋಚನೆಗಳಲ್ಲಿ ಗಾಢ ನಿದ್ರೆಯು ಜನರ ಮೇಲೆ ಬೀಳುವಾಗ ಭಯವೂ ನಡುಗೂ ನನ್ನನ್ನು ಹಿಡಿದವು; ನನ್ನ ಎಲ್ಲಾ ಎಲುಬು ಗಳನ್ನು ನಡುಗಿಸಿತು. ಒಂದು ಆತ್ಮವು ನನ್ನ ಮುಂದೆ ಹಾದುಹೋಯಿತು. ನನ್ನ ಕೂದಲು ನೆಟ್ಟಗಾಯಿತು.