2 Chronicles · chapter 14 · verse 6
2 Chronicles 14:6 in Kannada
ಇದಲ್ಲದೆ ಅವನು ಯೆಹೂದದಲ್ಲಿ ಕೋಟೆ ಗಳುಳ್ಳ ಪಟ್ಟಣಗಳನ್ನು ಕಟ್ಟಿಸಿದನು. ದೇಶವು ಶಾಂತವಾ ಗಿತ್ತು. ಕರ್ತನು ಅವನಿಗೆ ವಿಶ್ರಾಂತಿ ಕೊಟ್ಟದ್ದರಿಂದ ಆ ವರುಷಗಳಲ್ಲಿ ಅವನಿಗೆ ಯುದ್ಧವಿರಲಿಲ್ಲ.
Idallade avanu yehoodadalli kote galulla pattanagalannu kattisidanu. Deshavu shaantavaa gittu. Kartanu avanige vishraanti kottaddarinda aa varushagalalli avanige yuddhaviralilla.
2 Chronicles 14:6 in English
- King James Version (KJV)
- And he built fenced cities in Judah: for the land had rest, and he had no war in those years; because the LORD had given him rest.
- World English Bible (WEB)
- He built fortified cities in Judah; for the land was quiet, and he had no war in those years, because the LORD had given him rest.
- American Standard Version (ASV)
- And he built fortified cities in Judah; for the land was quiet, and he had no war in those years, because Jehovah had given him rest.
- Bible in Basic English (BBE)
- He made walled towns in Judah, for the land was quiet and there were no wars in those years, because the Lord had given him rest.
- Darby Translation (DBY)
- And he built fortified cities in Judah, for the land had rest, and he had no war in those years; because Jehovah had given him rest.
- Webster's Bible (WBS)
- And he built fortified cities in Judah: for the land had rest, and he had no war in those years; because the LORD had given him rest.
- Young's Literal Translation (YLT)
- And he buildeth cities of bulwarks in Judah, for the land hath quiet, and there is no war with him in these years, because Jehovah hath given rest to him.
Read in context
- 4ತಮ್ಮ ಪಿತೃಗಳ ದೇವರಾದ ಕರ್ತನನ್ನು ಹುಡುಕಲೂ ನ್ಯಾಯಪ್ರಮಾಣವನ್ನು ಆಜ್ಞೆಯನ್ನು ಕೈಕೊಳ್ಳಲೂ ಯೆಹೂದ್ಯರಿಗೆ ಆಜ್ಞಾಪಿ ಸಿದನು.
- 5ಇದಲ್ಲದೆ ಅವನು ಉನ್ನತ ಸ್ಥಳಗಳನ್ನೂ ವಿಗ್ರಹಗಳನ್ನೂ ಯೆಹೂದದ ಸಮಸ್ತ ಪಟ್ಟಣಗಳಿಂದ ತೆಗೆದುಹಾಕಿದನು. ರಾಜ್ಯವು ಅವನ ಮುಂದೆ ಶಾಂತ ವಾಗಿತ್ತು.
- 6ಇದಲ್ಲದೆ ಅವನು ಯೆಹೂದದಲ್ಲಿ ಕೋಟೆ ಗಳುಳ್ಳ ಪಟ್ಟಣಗಳನ್ನು ಕಟ್ಟಿಸಿದನು. ದೇಶವು ಶಾಂತವಾ ಗಿತ್ತು. ಕರ್ತನು ಅವನಿಗೆ ವಿಶ್ರಾಂತಿ ಕೊಟ್ಟದ್ದರಿಂದ ಆ ವರುಷಗಳಲ್ಲಿ ಅವನಿಗೆ ಯುದ್ಧವಿರಲಿಲ್ಲ.
- 7ಅವನು ಯೆಹೂದದವರಿಗೆ--ದೇಶವು ನಮ್ಮ ಮುಂದೆ ಇರು ವಾಗ ಈ ಪಟ್ಟಣಗಳನ್ನು ಕಟ್ಟಿಸಿ ಅವುಗಳ ಸುತ್ತಲೂ ಗೋಡೆಗಳನ್ನೂ ಗೋಪುರಗಳನ್ನೂ ಬಾಗಲುಗಳನ್ನೂ ಅಗುಳಿಗಳನ್ನೂ ಮಾಡೋಣ; ಯಾಕಂದರೆ ನಾವು ನಮ್ಮ ದೇವರಾದ ಕರ್ತನನ್ನು ಹುಡುಕಿದೆವು; ನಾವು ಆತನನ್ನು ಹುಡುಕಿದ್ದರಿಂದ ಆತನು ಎಲ್ಲಾ ಕಡೆಯಲ್ಲಿ ನಮಗೆ ವಿಶ್ರಾಂತಿಯನ್ನು ಕೊಟ್ಟಿದ್ದಾನೆ ಅಂದನು.
- 8ಹಾಗೆಯೇ ಅವರು ಕಟ್ಟಿಸಿ ವೃದ್ಧಿಹೊಂದಿದರು. ಇದ ಲ್ಲದೆ ಆಸನಿಗೆ ಖೇಡ್ಯಗಳನ್ನೂ ಈಟಿಗಳನ್ನೂ ಹಿಡಿ ಯುವ ರಾಣುವೆ ಇತ್ತು. ಯೆಹೂದದವರು ಮೂರು ಲಕ್ಷಮಂದಿಯೂ ಬೆನ್ಯಾವಿಾನಿನವರು ಗುರಾಣಿಗಳನ್ನು ಹಿಡಿಯುವವರೂ, ಬಿಲ್ಲುಗಳನ್ನು ಎಸೆಯುವವರೂ ಎರಡು ಲಕ್ಷದ ಎಂಭತ್ತು ಸಾವಿರ ಮಂದಿಯೂ ಇದ್ದರು. ಇವರೆಲ್ಲರು ಪರಾಕ್ರಮಶಾಲಿಗಳಾಗಿದ್ದರು.
Cross references
- 2 Chronicles 15:15 2 ಪೂರ್ವಕಾಲವೃತ್ತಾಂತ 15:15ಇದಲ್ಲದೆ ಯೆಹೂದದವರೆಲ್ಲರೂ ಪ್ರಮಾಣಕ್ಕೆ ಸಂತೋಷಪಟ್ಟರು. ಅವರು ತಮ್ಮ ಪೂರ್ಣಹೃದಯ ದಿಂದ ಆಣೆ ಇಟ್ಟು ತಮ್ಮ ಪೂರ್ಣ ಇಷ್ಟದಿಂದ ಆತನನ್ನು ಹುಡುಕಲು ಆತನು ಅವರಿಗೆ ಸಿಕ್ಕಿದನು. ಕರ್ತನು ಸುತ್ತಲೂ ಅವರಿಗೆ ವಿಶ್ರಾಂತಿ ಕೊಟ್ಟನು.
- 1 Chronicles 22:9 1 ಪೂರ್ವಕಾಲವೃತ್ತಾಂತ 22:9ಇಗೋ, ಸಮಾ ಧಾನವುಳ್ಳ ಮನುಷ್ಯನಾಗಿರುವ ಒಬ್ಬ ಮಗನು ನಿನಗೆ ಹುಟ್ಟುವನು; ಸುತ್ತಲಿರುವ ಅವನ ಸಮಸ್ತ ಶತ್ರುಗಳಿಂದ ನಾನು ಅವನಿಗೆ ಸಮಾಧಾನವನ್ನು ಕೊಡುವೆನು. ಅವ ನಿಗೆ ಸೊಲೊಮೋನನೆಂಬ ಹೆಸರಾಗುವದು; ಅವನ ದಿವಸಗಳಲ್ಲಿ ನಾನು ಇಸ್ರಾಯೇಲಿಗೆ ಸಮಾಧಾನ ವನ್ನೂ ವಿಶ್ರಾಂತಿಯನ್ನೂ ಕೊಡುವೆನು.
- Job 34:29 ಯೋಬನು 34:29ಆತನು ಶಾಂತ ಮಾಡಿದರೆ ಯಾವನು ಕೇಡು ಮಾಡುವನು? ಆತನು ಮುಖವನ್ನು ಮರೆಮಾಡಿದರೆ ಆತನನ್ನು ದೃಷ್ಟಿಸುವವನು ಯಾರು? ಜನಾಂಗಕ್ಕೆ ವಿರೋಧವಾಗಿ ಮಾಡಿದರೂ ಸರಿ, ಮನುಷ್ಯ ಮಾತ್ರದ ವರಿಗಾದರೂ ಸರಿಯೇ.
- Psalm 46:9 ಕೀರ್ತನೆಗಳು 46:9ಯುದ್ಧಗಳನ್ನು ಭೂಮಿಯ ಅಂತ್ಯದ ವರೆಗೆ ನಿಲ್ಲಿಸಿ ಬಿಲ್ಲನ್ನು ಮುರಿದು ಭಲ್ಲೆಯನ್ನು ಕಡಿದು ತುಂಡುಮಾಡಿ ರಥಗಳನ್ನು ಬೆಂಕಿಯಿಂದ ಸುಡುತ್ತಾನೆ.
- Judges 3:11 ನ್ಯಾಯಸ್ಥಾಪಕರು 3:11ದೇಶವು ನಾಲ್ವತ್ತು ವರುಷದ ವರೆಗೆ ವಿಶ್ರಾಂತಿಯಿಂದಿತ್ತು. ಕೆನಜನ ಮಗನಾದ ಒತ್ನೀಯೇಲನು ಸತ್ತನು.
- Judges 5:31 ನ್ಯಾಯಸ್ಥಾಪಕರು 5:31ಓ ಕರ್ತನೇ, ಹೀಗೆಯೇ ನಿನ್ನ ಶತ್ರುಗಳೆಲ್ಲರು ನಾಶವಾಗಲಿ, ಆದರೆ ಆತನನ್ನು ಪ್ರೀತಿಮಾಡುವವರು ತನ್ನ ಪರಾಕ್ರಮದಿಂದ ಹೊರ ಡುವ ಸೂರ್ಯನ ಹಾಗೆಯೇ ಇರಲಿ. ದೇಶವು ನಾಲ್ವತ್ತು ವರುಷ ವಿಶ್ರಾಂತಿಯಲ್ಲಿತ್ತು.
- 2 Chronicles 11:5–12 2 ಪೂರ್ವಕಾಲವೃತ್ತಾಂತ 11:5–12ರೆಹಬ್ಬಾಮನು ಯೆರೂಸಲೇಮಿನಲ್ಲಿ ವಾಸಮಾಡಿ ಯೆಹೂದದಲ್ಲಿ ಕಾವಲು ಪಟ್ಟಣಗಳನ್ನು ಕಟ್ಟಿಸಿದನು. ಯಾವವಂದರೆ ಬೇತ್ಲೆಹೇಮ್ ಏತಾಮ್ ತೆಕೋವ ಬೇತ್ಚೂರ ಸೋಕೋ ಅದುಲ್ಲಾಮ್ ಗತ್ಊರು ಮಾರೇಷ್ ಜೀಫ್ ಅದೋರೈಮ್ ಲಾಕೀಷ್ ಅಜೇಕ ಚೋರ್ಗ ಅಯ್ಯಾಲೋನ್ ಹೆಬ್ರೋನ್ ಕಟ್ಟಿಸಿದನು. ಇವು ಯೆಹೂದ ಬೆನ್ಯಾ ವಿಾನ್ ಪ್ರಾಂತ್ಯಗಳಲ್ಲಿ ಕೋಟೆಯುಳ್ಳ ಪಟ್ಟಣ ಗಳಾಗಿವೆ. ಇದಲ್ಲದೆ ಅವನು ಕೋಟೆಗಳನ್ನು ಬಲ ಪಡಿಸಿ ಅವುಗಳಲ್ಲಿ ನಾಯಕರನ್ನೂ ಆಹಾರ ಎಣ್ಣೆ ದ್ರಾಕ್ಷಾರಸ ಇರುವ ಉಗ್ರಾಣಗಳನ್ನೂ ಇಟ್ಟನು. ಪ್ರತಿ ಪಟ್ಣಣದಲ್ಲಿ ಖೇಡ್ಯಗಳನ್ನೂ ಈಟಿಗಳನ್ನೂ ಇಟ್ಟು ಯೆಹೂದ ಬೆನ್ಯಾವಿಾನಿನವರು ಅವನ ಕಡೆ ಇದ್ದದ್ದರಿಂದ ಅವುಗಳನ್ನು ಬಹಳ ಭದ್ರಪಡಿಸಿದನು.
- 1 Kings 5:4 1 ಅರಸುಗಳು 5:4ಆದರೆ ಈಗ ನನ್ನ ದೇವರಾದ ಕರ್ತನು ಶತ್ರುವಿನಿಂದ ತಗಲುವ ಕೇಡು ಒಂದಾದರೂ ಇಲ್ಲದ ಹಾಗೆ ಸಮಸ್ತ ದಿಕ್ಕುಗಳಲ್ಲಿ ನನಗೆ ಸಮಾಧಾನವನ್ನು ಕೊಟ್ಟಿದ್ದಾನೆ.
- Judges 3:30 ನ್ಯಾಯಸ್ಥಾಪಕರು 3:30ಹೀಗೆ ಆ ದಿನದಲ್ಲಿ ಮೋವಾಬ್ ಇಸ್ರಾಯೇಲಿನ ಕೈಕೆಳಗೆ ತಗ್ಗಿಸಲ್ಪಟ್ಟಿತು; ದೇಶವು ಎಂಭತ್ತು ವರುಷ ವಿಶ್ರಾಂತಿಗೊಂಡಿತು.ಅವನ ತರುವಾಯ ಅನಾತನ ಮಗನಾದ ಶಮ್ಗರನು ಎದ್ದನು. ಅವನು ಫಿಲಿಷ್ಟಿಯರಲ್ಲಿ ಆರು ನೂರು ಮನುಷ್ಯರನ್ನು ಎತ್ತಿನ ಮುಳ್ಳುಗೋಲಿನಿಂದ ಹತಮಾಡಿದನು. ಅವನು ಸಹ ಇಸ್ರಾಯೇಲ್ಯರನ್ನು ರಕ್ಷಿಸಿದನು.
- 2 Chronicles 8:2–6 2 ಪೂರ್ವಕಾಲವೃತ್ತಾಂತ 8:2–6ಹೂರಾ ಮನು ಸೊಲೊಮೋನನಿಗೆ ತಿರಿಗಿ ಕೊಟ್ಟ ಪಟ್ಟಣಗ ಳನ್ನು ಸೊಲೊಮೋನನು ಕಟ್ಟಿಸಿ ಇಸ್ರಾಯೇಲ್ ಮಕ್ಕಳನ್ನು ಅಲ್ಲಿ ನಿವಾಸವಾಗಿರುವಂತೆ ಮಾಡಿದನು. ಸೊಲೊಮೋನನು ಹಮಾತು ಚೋಬಕ್ಕೆ ಹೋಗಿ ಅದನ್ನು ಜಯಿಸಿದನು. ಅವನು ಅರಣ್ಯದಲ್ಲಿರುವ ತದ್ಮೋರನ್ನೂ ಹಮಾತಿನಲ್ಲಿರುವ ಉಗ್ರಾಣದ ಪಟ್ಟಣ ಗಳನ್ನೂ ಕಟ್ಟಿಸಿದನು. ಗೋಡೆಗಳೂ ಬಾಗಲುಗಳೂ ಅಗುಳಿಗಳೂ ಉಳ್ಳ ಕೋಟೆ ಪಟ್ಟಣಗಳಾದ ಮೇಲಿನ ಬೇತ್ಹೋರೋನನ್ನೂ ಕೆಳಗಿನ ಬೇತ್ಹೋರೋನನ್ನೂ ಬಾಲಾತೂರನ್ನೂ ಸೊಲೊಮೋನನಿಗೆ ಇದ್ದ ಸಮಸ್ತ ಉಗ್ರಾಣದ ಪಟ್ಟಣಗಳನ್ನೂ ಸಮಸ್ತ ರಥಗಳ ಪಟ್ಟಣ ಗಳನ್ನೂ ರಾಹುತರ ಪಟ್ಟಣಗಳನ್ನೂ ಕಟ್ಟಿಸಿದನು. ಸೊಲೊಮೋನನು ಯೆರೂಸಲೇಮಿನಲ್ಲಿಯೂ ಲೆಬ ನೋನಿನಲ್ಲಿಯೂ ತಾನು ಆಳುವ ಸಮಸ್ತ ದೇಶದ ಲ್ಲೆಲ್ಲಾ ಕಟ್ಟಿಸಲು ಇಚ್ಛೆಯಾದದ್ದನ್ನು ಕಟ್ಟಿಸಿದನು.
- Joshua 23:1 ಯೆಹೋಶುವ 23:1ಕರ್ತನು ಇಸ್ರಾಯೇಲನ್ನು ಸುತ್ತಲಿರುವ ಎಲ್ಲಾ ಶತ್ರುಗಳಿಂದ ತಪ್ಪಿಸಿ ವಿಶ್ರಾಂತಿ ಕೊಟ್ಟ ಬಹಳ ದಿನಗಳ ತರುವಾಯ ಯೆಹೋಶುವನ ದಿನಗಳು ತುಂಬಿ ವೃದ್ಧನಾದನು.