2 Chronicles · chapter 31 · verse 8
2 Chronicles 31:8 in Kannada
ಹಿಜ್ಕೀಯನೂ ಪ್ರಧಾನರೂ ಬಂದು ರಾಶಿಗಳನ್ನು ನೋಡಿದಾಗ ಅವರು ಕರ್ತನನ್ನೂ ಆತನ ಜನವಾದ ಇಸ್ರಾಯೇ ಲನ್ನೂ ಸ್ತುತಿಸಿದರು.
Hijkeeyanoo pradhaanaroo bandu raashigalannu nodidaaga avaru kartanannoo aatana janavaada israaye lannoo stutisidaru.
2 Chronicles 31:8 in English
- King James Version (KJV)
- And when Hezekiah and the princes came and saw the heaps, they blessed the LORD, and his people Israel.
- World English Bible (WEB)
- When Hezekiah and the princes came and saw the heaps, they blessed the LORD and his people Israel.
- American Standard Version (ASV)
- And when Hezekiah and the princes came and saw the heaps, they blessed Jehovah, and his people Israel.
- Bible in Basic English (BBE)
- And when Hezekiah and the rulers came and saw all the store of goods, they gave praise to the Lord and to his people Israel.
- Darby Translation (DBY)
- And Hezekiah and the princes came and saw the heaps, and they blessed Jehovah, and his people Israel.
- Webster's Bible (WBS)
- And when Hezekiah and the princes came and saw the heaps, they blessed the LORD, and his people Israel.
- Young's Literal Translation (YLT)
- And Hezekiah and the heads come in and see the heaps, and bless Jehovah and His people Israel,
Read in context
- 6ಇದಲ್ಲದೆ ಯೆಹೂದ ಪಟ್ಟಣಗಳಲ್ಲಿ ನಿವಾಸವಾಗಿರುವ ಇಸ್ರಾಯೇಲ್ ಯೆಹೂದ ಮಕ್ಕಳು ದನಗಳಲ್ಲಿಯೂ ಕುರಿಗಳಲ್ಲಿಯೂ ದಶಮಾಂಶ ತಂದರು. ತಮ್ಮ ದೇವರಾದ ಕರ್ತನಿಗೆ ಪರಿಶುದ್ಧ ಮಾಡಿದ ಪರಿಶುದ್ಧ ವಸ್ತುಗಳಲ್ಲಿ ದಶ ಮಾಂಶದ ಪಾಲು ತಂದು ರಾಶಿರಾಶಿಯಾಗಿ ಇಟ್ಟರು.
- 7ಮೂರನೇ ತಿಂಗಳಲ್ಲಿ ರಾಶಿಗಳ ತಳಹದಿ ಆರಂಭಿಸಿ ಏಳನೇ ತಿಂಗಳಲ್ಲಿ ತೀರಿಸಿದರು.
- 8ಹಿಜ್ಕೀಯನೂ ಪ್ರಧಾನರೂ ಬಂದು ರಾಶಿಗಳನ್ನು ನೋಡಿದಾಗ ಅವರು ಕರ್ತನನ್ನೂ ಆತನ ಜನವಾದ ಇಸ್ರಾಯೇ ಲನ್ನೂ ಸ್ತುತಿಸಿದರು.
- 9ಆಗ ಹಿಜ್ಕೀಯನು ರಾಶಿಗಳನ್ನು ಕುರಿತು ಯಾಜಕರನ್ನೂ ಲೇವಿಯರನ್ನೂ ವಿಚಾರಿಸಿದನು.
- 10ಚಾದೋಕನ ಮನೆಯವನಾಗಿರುವ ಪ್ರಧಾನ ಯಾಜಕನಾದ ಅಜರ್ಯನು ಅವನಿಗೆ -- ಕರ್ತನ ಮನೆಗೆ ಕಾಣಿಕೆಗಳನ್ನು ತರಲು ಆರಂಭಿಸಿದಂದಿನಿಂದ ನಿಮಗೆ ತಿನ್ನುವದಕ್ಕೆ ಸಂಪೂರ್ಣವಿತ್ತು; ಉಳಿದದ್ದು ಬಹಳವಾಯಿತು; ಯಾಕಂದರೆ ಕರ್ತನು ತನ್ನ ಜನ ರನ್ನು ಆಶೀರ್ವದಿಸಿದ್ದಾನೆ. ಆದದರಿಂದ ಉಳಿದದ್ದು ಈ ರಾಶಿಯಾಯಿತು ಎಂದು ಹೇಳಿದನು.
Cross references
- Ephesians 1:3 ಎಫೆಸದವರಿಗೆ 1:3ನಮ್ಮ ಕರ್ತನಾದ ಯೇಸು ಕ್ರಿಸ್ತನ ದೇವರೂ ತಂದೆಯೂ ಆಗಿರುವಾತನಿಗೆ ಸ್ತೋತ್ರ. ಆತನು ಪರಲೋಕದಲ್ಲಿನ ಸಕಲ ಆತ್ಮೀಯ ಆಶೀರ್ವಾದ ಗಳನ್ನು ನಮಗೆ ಕ್ರಿಸ್ತನಲ್ಲಿ ಅನುಗ್ರಹಿಸಿದ್ದಾನೆ.
- Psalm 144:15 ಕೀರ್ತನೆಗಳು 144:15ಹೀಗಿರುವ ಜನರು ಧನ್ಯರು; ಕರ್ತನು ತಮಗೆ ದೇವರಾಗಿರುವ ಜನರು ಧನ್ಯರು.
- 1 Thessalonians 3:9 1 ಥೆಸಲೊನೀಕದವರಿಗೆ 3:9ನಿಮ್ಮ ನಿಮಿತ್ತ ನಮ್ಮ ದೇವರ ಮುಂದೆ ನಮಗಿರುವ ಎಲ್ಲಾ ಸಂತೋಷ ಕ್ಕಾಗಿ ತಿರಿಗಿ ದೇವರಿಗೆ ಎಂಥ ಕೃತಜ್ಞತಾಸ್ತುತಿಗಳನ್ನು ಸಲ್ಲಿಸುವದಕ್ಕಾದೀತು?
- 2 Samuel 6:18 2 ಸಮುವೇಲನು 6:18ದಾವೀದನು ದಹನಬಲಿಗಳನ್ನೂ ಸಮಾಧಾನದಬಲಿಗಳನ್ನೂ ಅರ್ಪಿಸಿ ತೀರಿಸಿದ ತರುವಾಯ ಸೈನ್ಯಗಳ ಕರ್ತನ ಹೆಸರಿನಲ್ಲಿ ಜನರನ್ನು ಆಶೀರ್ವದಿಸಿ ಜನರಿಗೆಲ್ಲಾ ಅಂದರೆ ಇಸ್ರಾಯೇಲಿನ ಸಮೂಹಕ್ಕೆಲ್ಲಾ
- 2 Chronicles 6:3 2 ಪೂರ್ವಕಾಲವೃತ್ತಾಂತ 6:3ಅರಸನು ಇಸ್ರಾಯೇಲಿನ ಸಭೆಯವರ ಕಡೆಗೆ ತಿರುಗಿಕೊಂಡು ಆಶೀರ್ವದಿಸಿದಾಗ ಇಸ್ರಾಯೇಲಿನ ಸಭೆಯು ನಿಂತಿತ್ತು.
- Genesis 14:19–20 ಆದಿಕಾಂಡ 14:19–20ಇವನು ಅಬ್ರಾಮನನ್ನು ಆಶೀರ್ವದಿಸಿ--ಅಬ್ರಾಮನು ಆಕಾಶವನ್ನು ಭೂಮಿ ಯನ್ನು ಹೊಂದಿರುವ ಮಹೋನ್ನತನಾದ ದೇವರಿಂದ ಆಶೀರ್ವದಿಸಲ್ಪಡಲಿ. ನಿನ್ನ ಶತ್ರುಗಳನ್ನು ನಿನ್ನ ಕೈಗೆ ಒಪ್ಪಿಸಿದ ಮಹೋನ್ನತ ನಾದ ದೇವರು ಸ್ತುತಿಹೊಂದಲಿ ಅಂದನು. ಅಬ್ರಾ ಮನು ಅವನಿಗೆ ಎಲ್ಲಾದರಲ್ಲಿ ದಶಮಭಾಗವನ್ನು ಕೊಟ್ಟನು.
- Judges 5:9 ನ್ಯಾಯಸ್ಥಾಪಕರು 5:9ಜನರಲ್ಲಿ ಉಚಿತವಾಗಿ ಬಂದ ನ್ಯಾಯಾಧಿಪತಿಗಳ ಮೇಲೆ ನನ್ನ ಹೃದಯ ಅದೆ. ಕರ್ತನನ್ನು ಸ್ತುತಿಸಿರಿ.
- 1 Peter 1:3 1 ಪೇತ್ರನು 1:3ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯೂ ದೇವರೂ ಆಗಿರುವಾತನಿಗೆ ಸ್ತೋತ್ರವಾಗಲಿ. ಆತನು ಯೇಸು ಕ್ರಿಸ್ತನನ್ನು ಸತ್ತವರೊಳಗಿಂದ ಎಬ್ಬಿಸಿದ್ದರಲ್ಲಿ ತನ್ನ ಮಹಾ ಕರುಣಾನುಸಾರವಾಗಿ ಜೀವಕರವಾದ ನಿರೀಕ್ಷೆಗೂ
- 1 Chronicles 29:10–20 1 ಪೂರ್ವಕಾಲವೃತ್ತಾಂತ 29:10–20ಆಗ ದಾವೀದನು ಸಮಸ್ತ ಕೂಟದ ಮುಂದೆ ಕರ್ತನನ್ನು ಕೊಂಡಾಡಿ ಹೇಳಿದ್ದೇನಂದರೆ -- ನಮ್ಮ ತಂದೆ ಯಾದ ಇಸ್ರಾಯೇಲಿನ ದೇವರಾದ ಕರ್ತನೇ, ನೀನು ಯುಗಯುಗಾಂತರಗಳಿಂದ ಯುಗಯುಗಾಂತರ ಗಳಿಗೂ ಸ್ತುತಿಸಲ್ಪಡುವವನಾಗಿದ್ದೀ. ಕರ್ತನೇ, ದೊಡ್ಡಸ್ತಿಕೆಯೂ ಪರಾಕ್ರಮವೂ ಸೌಂದರ್ಯವೂ ಜಯವೂ ಮಹಿಮೆಯೂ ನಿನ್ನದೇ; ಆಕಾಶಗಳಲ್ಲಿಯೂ ಭೂಮಿಯಲ್ಲಿಯೂ ಇರುವದೆಲ್ಲಾ ನಿನ್ನದೇ. ಕರ್ತನೇ, ರಾಜ್ಯವು ನಿನ್ನದು; ನೀನು ಸಮಸ್ತಕ್ಕೂ ತಲೆಯಾಗಿ ಉನ್ನತವಾಗಿದ್ದೀ. ಐಶ್ವರ್ಯವೂ ಘನವೂ ನಿನ್ನ ಬಳಿ ಯಿಂದ ಬರುತ್ತದೆ. ನೀನು ಸಮಸ್ತವನ್ನು ಆಳುವಾತ ನಾಗಿದ್ದೀ. ಶಕ್ತಿಯೂ ಪರಾಕ್ರಮವೂ ನಿನ್ನ ಕೈಯಲ್ಲಿ ಅವೆ. ಎಲ್ಲರಿಗೂ ದೊಡ್ಡಸ್ತಿಕೆಯನ್ನೂ ಬಲವನ್ನೂ ಕೊಡುವದಕ್ಕೆ ನಿನ್ನ ಕೈಯಲ್ಲಿ ಅದೆ. ಆದದರಿಂದ ನಮ್ಮ ದೇವರೇ, ನಾವು ನಿನ್ನನ್ನು ಸ್ತುತಿಸಿ ನಿನ್ನ ಮಹಿಮೆ ಯುಳ್ಳ ನಾಮವನ್ನು ಕೊಂಡಾಡುತ್ತೇವೆ. ಆದರೆ ನಾವು ಈ ಪ್ರಕಾರ ಇಷ್ಟಪೂರ್ತಿಯಾಗಿ ಅರ್ಪಿಸುವದಕ್ಕೆ ಶಕ್ತಿಯನ್ನು ಹೊಂದಲು ನಾನೆಷ್ಟರವನು? ನನ್ನ ಜನರು ಎಷ್ಟರವರು? ಯಾಕಂದರೆ ಸಮಸ್ತವೂ ನಿನ್ನಿಂದಲೇ; ನೀನು ಕೊಟ್ಟದ್ದನ್ನೇ ನಿನಗೆ ಅರ್ಪಿಸಿದೆವು. ನಾವು ನಿನ್ನ ಸಮ್ಮುಖದಲ್ಲಿ ನಮ್ಮ ಸಮಸ್ತ ಪಿತೃಗಳ ಹಾಗೆ ಪರದೇಶಸ್ಥರೂ ಪ್ರವಾಸಿಗಳೂ ಆಗಿದ್ದೇವೆ. ಭೂಮಿಯ ಮೇಲೆ ನಮ್ಮ ದಿವಸಗಳು ನೆರಳಿನ ಹಾಗೆ ಅವೆ; ನೆಲೆಯು ಇಲ್ಲ. ನಮ್ಮ ದೇವರಾದ ಕರ್ತನೇ, ನಿನ್ನ ಪರಿಶುದ್ಧ ನಾಮಕ್ಕೋಸ್ಕರ ನಿನಗೆ ಮನೆಯನ್ನು ಕಟ್ಟಿಸಲು ನಾವು ಸಿದ್ಧಮಾಡಿದ ಈ ರಾಶಿಯೆಲ್ಲಾ ನಿನ್ನಿಂದ ಬಂದದ್ದು; ಸಮಸ್ತವೂ ನಿನ್ನದು. ನನ್ನ ಕರ್ತನೇ, ನೀನು ಹೃದಯವನ್ನು ಶೋಧಿಸಿ ಯಥಾರ್ಥವಾದವು ಗಳಲ್ಲಿ ಸಂತೋಷವಾಗಿದ್ದೀ ಎಂದು ನಾನು ಬಲ್ಲೆನು. ನಾನು ಯಥಾರ್ಥವಾದ ಹೃದಯದಿಂದ ಇವುಗಳನ್ನೆಲ್ಲಾ ಮನಃಪೂರ್ವಕವಾಗಿ ಅರ್ಪಿಸಿದ್ದೇನೆ. ಇದಲ್ಲದೆ ಇಲ್ಲಿ ರುವ ನಿನ್ನ ಜನರು ನಿನಗೆ ಮನಃಪೂರ್ವಕವಾಗಿ ಅರ್ಪಿ ಸುವದನ್ನು ಈಗ ಸಂತೋಷವಾಗಿ ಕಂಡೆನು. ನಮ್ಮ ಪಿತೃಗಳಾದ ಅಬ್ರಹಾಕಮ್, ಇಸಾಕ್, ಇಸ್ರಾಯೇ ಲಿನ ದೇವರಾದ ಕರ್ತನೇ, ಇದನ್ನು ನಿನ್ನ ಜನರ ಹೃದಯದ ಯೋಚನೆಗಳ ಭಾವನೆಯಲ್ಲಿ ನಿರಂತರ ವಾಗಿ ಕಾಪಾಡಿ ಅವರ ಹೃದಯವನ್ನು ನಿನಗೆ ಸಿದ್ಧ ಮಾಡು. ಇದಲ್ಲದೆ ನಿನ್ನ ಆಜ್ಞೆಗಳನ್ನೂ ಸಾಕ್ಷಿಗಳನ್ನೂ ಕಟ್ಟಳೆಗಳನ್ನು ಕೈಕೊಳ್ಳಲೂ ಸಮಸ್ತವನ್ನು ಮಾಡಲೂ ನಾನು ಯಾವದಕ್ಕೋಸ್ಕರ ಸಿದ್ಧಮಾಡಿದೆನೋ ಆ ಅರಮನೆಯನ್ನು ಕಟ್ಟಿಸಲೂ ನನ್ನ ಮಗನಾದ ಸೊಲೊ ಮೋನನಿಗೆ ಪೂರ್ಣ ಹೃದಯವನ್ನು ಕೊಡು ಅಂದನು. ದಾವೀದನು ಸಮಸ್ತ ಸಭೆಗೆ--ಈಗ ನಿಮ್ಮ ದೇವರಾದ ಕರ್ತನನ್ನು ಸ್ತುತಿಸಿರಿ ಅಂದನು. ಆಗ ಸಭೆಯವರೆಲ್ಲರೂ ತಮ್ಮ ಪಿತೃಗಳ ದೇವರಾದ ಕರ್ತ ನನ್ನು ಸ್ತುತಿಸುತ್ತಾ ತಮ್ಮ ತಲೆಗಳನ್ನು ಬಾಗಿಸಿ ಕರ್ತನನ್ನೂ ಅರಸನನ್ನೂ ಆರಾಧಿಸಿದರು.
- Philippians 4:19 ಫಿಲಿಪ್ಪಿಯವರಿಗೆ 4:19ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿ ಯೊಂದು ಕೊರತೆಯನ್ನು ನೀಗಿಸುವನು.
- 1 Kings 8:55 1 ಅರಸುಗಳು 8:55ಆಗ ಅವನು ಮಹಾ ಶಬ್ದದಿಂದ ಇಸ್ರಾಯೇಲಿನ ಸಮಸ್ತ ಸಭೆಯನ್ನು ಆಶೀರ್ವದಿಸಿ--ತನ್ನ ಜನರಾದ ಇಸ್ರಾಯೇಲ್ಯರಿಗೆ ತಾನು ಮಾತು ಕೊಟ್ಟ ಎಲ್ಲಾದರ ಪ್ರಕಾರ ವಿಶ್ರಾಂತಿಯನ್ನು ಕೊಟ್ಟ ಕರ್ತನು ಸ್ತುತಿಸ ಲ್ಪಡಲಿ.
- Ezra 7:27 ಎಜ್ರನು 7:27ಆಗ ಎಜ್ರನು -- ಯೆರೂಸಲೇಮಿನಲ್ಲಿರುವ ಕರ್ತನ ಆಲಯವನ್ನು ಅಲಂಕರಿಸುವದಕ್ಕೆ ಅರ ಸನ ಹೃದಯದಲ್ಲಿ ಇಂಥಾದ್ದನ್ನು ಇಟ್ಟು ಅರಸನ ಮುಂದೆಯೂ ಅವನ ಸಲಹೆಗಾರರ ಮುಂದೆಯೂ ಅರಸನ ಪರಾಕ್ರಮವುಳ್ಳ ಪ್ರಧಾನರ ಮುಂದೆಯೂ ನನಗೆ ಕೃಪೆ ಮಾಡಿದ ನಮ್ಮ ತಂದೆಗಳ ದೇವರಾಗಿ ರುವ ಕರ್ತನು ಸ್ತುತಿಸಲ್ಪಡಲಿ.ಹೀಗೆಯೇ ನನ್ನ ದೇವರಾಗಿರುವ ಕರ್ತನ ಹಸ್ತವು ನನ್ನ ಮೇಲೆ ಇದ್ದದ್ದರಿಂದ ನಾನು ಬಲಗೊಂಡು ಇಸ್ರಾಯೇಲಿ ನೊಳಗಿಂದ ಮುಖ್ಯಸ್ಥರನ್ನು ನನ್ನ ಸಂಗಡ ಹೋಗಲು ಕೂಡಿಸಿಕೊಂಡೆನು ಅಂದನು.