2 Corinthians · chapter 10 · verse 18
2 Corinthians 10:18 in Kannada
ತನ್ನನ್ನು ತಾನೇ ಹೊಗಳಿಕೊಳ್ಳುವವನು ಯೋಗ್ಯ ನಲ್ಲ; ಕರ್ತನು ಯಾರನ್ನು ಹೊಗಳುತ್ತಾನೋ ಅವನೇ ಯೋಗ್ಯನು.
Tannannu taane hogalikolluvavanu yogya nalla; kartanu yaarannu hogaluttaano avane yogyanu.
2 Corinthians 10:18 in English
- King James Version (KJV)
- For not he that commendeth himself is approved, but whom the Lord commendeth.
- World English Bible (WEB)
- For it isn’t he who commends himself who is approved, but whom the Lord commends.
- American Standard Version (ASV)
- For not he that commendeth himself is approved, but whom the Lord commendeth.
- Bible in Basic English (BBE)
- For the Lord's approval of a man is not dependent on his opinion of himself, but on the Lord's opinion of him.
- Darby Translation (DBY)
- For not he that commends himself is approved, but whom the Lord commends.
- Webster's Bible (WBS)
- For not he that commendeth himself is approved, but whom the Lord commendeth.
- Young's Literal Translation (YLT)
- for not he who is commending himself is approved, but he whom the Lord doth commend.
Read in context
- 16ನಿಮಗೆ ಆಚೆ ಇರುವ ಸೀಮೆಗಳಲ್ಲಿ ಸುವಾರ್ತೆಯನ್ನು ಸಾರುವೆವೆಂಬ ನಿರೀಕ್ಷೆ ನಮಗುಂಟು; ಆದರೆ ಮತ್ತೊಬ್ಬರ ಮೇರೆಯಲ್ಲಿ ಸಿದ್ಧವಾಗಿರುವವುಗಳು ನಮಗೆ ಸಿಕ್ಕಿದವುಗಳೆಂದು ನಾವು ಹೆಚ್ಚಳಪಡುವದಿಲ್ಲ.
- 17ಹೆಚ್ಚಳ ಪಡುವವನು ಕರ್ತನಲ್ಲಿಯೇ ಹೆಚ್ಚಳಪಡಲಿ.ತನ್ನನ್ನು ತಾನೇ ಹೊಗಳಿಕೊಳ್ಳುವವನು ಯೋಗ್ಯ ನಲ್ಲ; ಕರ್ತನು ಯಾರನ್ನು ಹೊಗಳುತ್ತಾನೋ ಅವನೇ ಯೋಗ್ಯನು.
- 18ತನ್ನನ್ನು ತಾನೇ ಹೊಗಳಿಕೊಳ್ಳುವವನು ಯೋಗ್ಯ ನಲ್ಲ; ಕರ್ತನು ಯಾರನ್ನು ಹೊಗಳುತ್ತಾನೋ ಅವನೇ ಯೋಗ್ಯನು.
Cross references
- Proverbs 21:2 ಜ್ಞಾನೋಕ್ತಿಗಳು 21:2ತನ್ನ ದೃಷ್ಟಿ ಯಲ್ಲಿ ಮನುಷ್ಯನ ಪ್ರತಿಯೊಂದು ಮಾರ್ಗವು ಸರಿ ಯಾಗಿದೆ; ಕರ್ತನು ಹೃದಯಗಳನ್ನು ಪರೀಕ್ಷಿಸುತ್ತಾನೆ.
- Luke 16:15 ಲೂಕನು 16:15ಆಗ ಆತನು ಅವರಿಗೆ--ಮನುಷ್ಯರ ಮುಂದೆ ನೀತಿವಂತರಾಗಿ ಮಾಡಿ ಕೊಳ್ಳುವವರು ನೀವೇ; ಆದರೆ ದೇವರು ನಿಮ್ಮ ಹೃದಯಗಳನ್ನು ತಿಳಿದಿದ್ದಾನೆ; ಯಾಕಂದರೆ ಮನುಷ್ಯರಲ್ಲಿ ಯಾವದು ಶ್ರೇಷ್ಠವೆಂದು ಎಣಿಸಲ್ಪ ಡುತ್ತದೋ ಅದು ದೇವರ ದೃಷ್ಟಿಯಲ್ಲಿ ಅಸಹ್ಯವಾಗಿದೆ.
- Romans 2:29 ರೋಮಾಪುರದವರಿಗೆ 2:29ಆದರೆ ಒಳಗೆ ಯೆಹೂದ್ಯ ನಾಗಿರುವವನೇ ಯೆಹೂದ್ಯನು; ಸುನ್ನತಿಯು ಹೃದಯಕ್ಕೆ ಸಂಬಂಧಪಟ್ಟದ್ದಾಗಿ ಅಕ್ಷರೀಕವಾಗಿರದೆ ಆತ್ಮೀಕವಾದದ್ದೇ ಆಗಿದೆ. ಹೀಗೆ ಅವನ ಹೊಗಳಿಕೆಯು ಮನುಷ್ಯರಿಂದಾ ಗಿರದೆ ದೇವರಿಂದಲೇ ಆಗಿರುವದು.
- 1 Corinthians 4:5 1 ಕೊರಿಂಥದವರಿಗೆ 4:5ಆದದರಿಂದ ಕಾಲಕ್ಕೆ ಮೊದಲು ಕರ್ತನು ಬರುವತನಕ ಯಾವದನ್ನೂ ಕುರಿತು ತೀರ್ಪು ಮಾಡಬೇಡಿರಿ; ಆತನು ಕತ್ತಲೆಯ ಲ್ಲಿರುವ ಗುಪ್ತಕಾರ್ಯಗಳನ್ನು ಬೆಳಕಿಗೆ ತರುವನು; ಹೃದಯದ ಯೋಚನೆಗಳನ್ನು ಪ್ರತ್ಯಕ್ಷಪಡಿಸುವನು; ಆಗ ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವ ರಿಂದ ಬರುವದು.
- 2 Corinthians 10:12 2 ಕೊರಿಂಥದವರಿಗೆ 10:12ತಮ್ಮನ್ನು ತಾವೇ ಹೊಗಳಿಕೊಳ್ಳುವ ಕೆಲವರಲ್ಲಿ ನಮ್ಮನ್ನು ಸೇರಿಸಿಕೊಳ್ಳುವದಕ್ಕಾಗಲಿ ಅವರಿಗೆ ಹೋಲಿಸಿ ಕೊಳ್ಳುವದಕ್ಕಾಗಲಿ ನಮಗೆ ಧೈರ್ಯ ಸಾಲದು; ಅವರಂತೂ ತಮ್ಮೊಳಗೆ ತಮ್ಮ ತಮ್ಮನ್ನು ಅಳತೆ ಮಾಡಿಕೊಂಡು ತಮತಮಗೆ ಹೋಲಿಸಿಕೊಂಡು ವಿವೇಕವಿಲ್ಲದವರಾಗಿದ್ದಾರೆ.
- John 12:43 ಯೋಹಾನನು 12:43ಯಾಕಂದರೆ ಅವರು ದೇವರ ಹೊಗಳಿ ಕೆಗಿಂತ ಮನುಷ್ಯರ ಹೊಗಳಿಕೆಯನ್ನೇ ಹೆಚ್ಚಾಗಿ ಪ್ರೀತಿಸಿದರು.
- Luke 18:10–14 ಲೂಕನು 18:10–14ಇಬ್ಬರು ಪ್ರಾರ್ಥನೆ ಮಾಡುವದಕ್ಕೆ ದೇವಾಲಯದೊಳಗೆ ಹೋದರು; ಒಬ್ಬನು ಫರಿಸಾಯನು, ಮತ್ತೊಬ್ಬನು ಸುಂಕದವನು. ಫರಿಸಾಯನು ನಿಂತುಕೊಂಡು ತನ್ನೊಳಗೆ ಹೀಗೆ ಪ್ರಾರ್ಥಿಸುತ್ತಾ--ದೇವರೇ, ಸುಲು ಕೊಳ್ಳುವವರೂ ಅನೀತಿವಂತರೂ ವ್ಯಭಿಚಾರಿಗಳೂ ಆಗಿರುವ ಮಿಕ್ಕಾದವರಂತೆ ಇಲ್ಲವೆ ಈ ಸುಂಕದವನ ಹಾಗೆ ನಾನು ಅಲ್ಲ, ಆದದರಿಂದ ನಾನು ನಿನಗೆ ಸ್ತೋತ್ರ ಸಲ್ಲಿಸುತ್ತೇನೆ. ನಾನು ವಾರದಲ್ಲಿ ಎರಡು ಸಾರಿ ಉಪವಾಸ ಮಾಡುತ್ತೇನೆ; ನನಗಿರುವದೆ ಲ್ಲವುಗಳಲ್ಲಿ ದಶಾಂಶ ಕೊಡುತ್ತೇನೆ ಎಂದು ಹೇಳಿದನು. ಆದರೆ ಸುಂಕದವನು ದೂರದಲ್ಲಿ ನಿಂತುಕೊಂಡು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವದಕ್ಕೂ ಮನಸ್ಸಿಲ್ಲದೆ ತನ್ನ ಎದೆಯನ್ನು ಬಡುಕೊಳ್ಳುತ್ತಾ--ದೇವರು ಪಾಪಿ ಯಾದ ನನ್ನನ್ನು ಕರುಣಿಸಲಿ ಅಂದನು. ಇವನೇ ಫರಿಸಾಯನಿಗಿಂತ ನೀತಿವಂತನೆಂದು ನಿರ್ಣಯಿಸಲ್ಪಟ್ಟ ವನಾಗಿ ತನ್ನ ಮನೆಗೆ ಹೋದನು; ಯಾಕಂದರೆ ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು ಮತ್ತು ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಎಂದು ನಾನು ನಿಮಗೆ ಹೇಳುತ್ತೇನೆ ಅಂದನು.
- Romans 14:18 ರೋಮಾಪುರದವರಿಗೆ 14:18ಕ್ರಿಸ್ತನ ಸೇವೆಯನ್ನು ಮಾಡುವವನು ಈ ವಿಷಯಗಳಲ್ಲಿ ದೇವರಿಗೆ ಮೆಚ್ಚಿಕೆಯಾದವನಾಗಿಯೂ ಮನುಷ್ಯರಿಗೆ ಸಂಭಾವಿತನಾಗಿಯೂ ಇರುವನಷ್ಟೆ.
- John 5:42–44 ಯೋಹಾನನು 5:42–44ಆದರೆ ನಾನು ನಿಮ್ಮನ್ನು ಬಲ್ಲೆನು, ನಿಮ್ಮಲ್ಲಿ ದೇವರ ಪ್ರೀತಿ ಇಲ್ಲ. ನಾನು ನನ್ನ ತಂದೆಯ ಹೆಸರಿನಲ್ಲಿ ಬಂದಿದ್ದೇನೆ, ನೀವು ನನ್ನನ್ನು ಅಂಗೀಕರಿ ಸುವದಿಲ್ಲ; ಮತ್ತೊಬ್ಬನು ತನ್ನ ಸ್ವಂತ ಹೆಸರಿನಲ್ಲಿ ಬಂದರೆ ನೀವು ಅವನನ್ನು ಅಂಗೀಕರಿಸುವಿರಿ. ದೇವರಿಂದ ಮಾತ್ರ ಬರುವ ಮಾನವನ್ನು ಹುಡುಕದೆ ಒಬ್ಬರಿಂದೊ ಬ್ಬರಿಗೆ ಬರುವ ಮಾನವನ್ನು ಹೊಂದುವ ನೀವು ಹೇಗೆ ನಂಬೀರಿ?
- Proverbs 27:2 ಜ್ಞಾನೋಕ್ತಿಗಳು 27:2ನಿನ್ನ ಸ್ವಂತ ಬಾಯಲ್ಲ, ಮತ್ತೊಬ್ಬನು ನಿನ್ನನ್ನು ಹೊಗಳಲಿ; ನಿನ್ನ ಸ್ವಂತ ತುಟಿಗಳಲ್ಲ, ಪರನೇ ನಿನ್ನನ್ನು ಹೊಗಳಲಿ.
- 2 Corinthians 13:7 2 ಕೊರಿಂಥದವರಿಗೆ 13:7ನೀವು ಕೆಟ್ಟದ್ದೇನೂ ಮಾಡಬಾರದೆಂದು ನಾನು ದೇವರನ್ನು ಪ್ರಾರ್ಥಿಸುತ್ತೇನೆ; ಇದರಲ್ಲಿ ನಾವೇ ಯೋಗ್ಯರಾಗಿ ತೋರಿಬರಬೇಕೆಂದಲ್ಲ, ನಾವು ಭ್ರಷ್ಠರೆನಿಸಿಕೊಂಡರೂ ನೀವು ಒಳ್ಳೇದನ್ನು ಮಾಡುವವ ರಾಗ ಬೇಕೆಂಬದೇ.
- 1 Peter 1:7 1 ಪೇತ್ರನು 1:7ಭಂಗಾರವು ನಾಶವಾಗುವಂಥದ್ದಾಗಿದ್ದರೂ ಅದನ್ನು ಬೆಂಕಿಯಿಂದ ಶೋಧಿಸುವದುಂಟಷ್ಟೆ. ಭಂಗಾರಕ್ಕಿಂತ ಬಹು ಅಮೂಲ್ಯವಾಗಿರುವ ನಿಮ್ಮ ನಂಬಿಕೆಯು ಈ ಕಷ್ಟಗಳಿಂದ ಶೋಧಿತವಾಗಿ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವಾಗ ನಿಮಗೆ ಕೀರ್ತಿ ಪ್ರಭಾವಮಾನ ಗಳನ್ನು ಉಂಟುಮಾಡುವದು.