2 Kings · chapter 2 · verse 14
2 Kings 2:14 in Kannada
ಎಲೀಯನಿಂದ ಬಿದ್ದ ಹೊದಿಕೆಯನ್ನು ತಕ್ಕೊಂಡು ನೀರನ್ನು ಹೊಡೆದು--ಎಲೀಯನ ದೇವರಾದ ಕರ್ತನು ಎಲ್ಲಿದ್ದಾನೆ ಅಂದನು. ಅವನು ಹಾಗೆ ನೀರನ್ನು ಹೊಡೆದ ತರುವಾಯ ಅದು ಎರಡು ಭಾಗವಾದದ್ದರಿಂದ ಎಲೀ ಷನು ದಾಟಿಹೋದನು.
Eleeyaninda bidda hodikeyannu takkondu neerannu hodedu--eleeyana devaraada kartanu elliddaane andanu. Avanu haage neerannu hodeda taruvaaya adu eradu bhaagavaadaddarinda elee shanu daatihodanu.
2 Kings 2:14 in English
- King James Version (KJV)
- And he took the mantle of Elijah that fell from him, and smote the waters, and said, Where [is] the LORD God of Elijah? and when he also had smitten the waters, they parted hither and thither: and Elisha went over.
- World English Bible (WEB)
- He took Elijah’s mantle that fell from him, and struck the waters, and said, “Where is the LORD, the God of Elijah?” When he also had struck the waters, they were divided apart, and Elisha went over.
- American Standard Version (ASV)
- And he took the mantle of Elijah that fell from him, and smote the waters, and said, Where is Jehovah, the God of Elijah? and when he also had smitten the waters, they were divided hither and thither; and Elisha went over.
- Bible in Basic English (BBE)
- And he took Elijah's robe, which had been dropped from him, and giving the water a blow with it, said, Where is the Lord, the God of Elijah? and at his blow the waters were parted this way and that; and Elisha went over.
- Darby Translation (DBY)
- and he took the mantle of Elijah which had fallen from him, and smote the waters, and said, Where is Jehovah, the God of Elijah? He also smote the waters, and they parted hither and thither, and Elisha went over.
- Webster's Bible (WBS)
- And he took the mantle of Elijah that fell from him, and smote the waters, and said, Where [is] the LORD God of Elijah? And when he also had smitten the waters, they parted hither and thither: and Elisha went over.
- Young's Literal Translation (YLT)
- and he taketh the robe of Elijah that fell from off him, and smiteth the waters, and saith, 'Where [is] Jehovah, God of Elijah — even He?' and he smiteth the waters, and they are halved, hither and thither, and Elisha passeth over.
Read in context
- 12ಎಲೀ ಷನು ಅದನ್ನು ನೋಡಿ--ನನ್ನ ತಂದೆಯೇ, ನನ್ನ ತಂದೆಯೇ, ಇಸ್ರಾಯೇಲಿನ ರಥವೇ, ಅದರ ಕುದುರೆ ರಾಹುತರಾಗಿದ್ದವನೇ ಎಂದು ಕೂಗಿದನು. ಮತ್ತೆ ಅವ ನನ್ನು ಕಾಣಲಿಲ್ಲ. ಆಗ ಅವನು ತನ್ನ ವಸ್ತ್ರಗಳನ್ನು ತೆಗೆದು ಎರಡು ತುಂಡಾಗಿ ಹರಿದನು.
- 13ಅವನು ಎಲೀಯನಿಂದ ಬಿದ್ದ ಹೊದಿಕೆಯನ್ನು ಎತ್ತಿಕೊಂಡು ಹಿಂದಕ್ಕೆಹೋಗಿ ಯೊರ್ದನಿನ ತೀರದಲ್ಲಿ ನಿಂತನು.
- 14ಎಲೀಯನಿಂದ ಬಿದ್ದ ಹೊದಿಕೆಯನ್ನು ತಕ್ಕೊಂಡು ನೀರನ್ನು ಹೊಡೆದು--ಎಲೀಯನ ದೇವರಾದ ಕರ್ತನು ಎಲ್ಲಿದ್ದಾನೆ ಅಂದನು. ಅವನು ಹಾಗೆ ನೀರನ್ನು ಹೊಡೆದ ತರುವಾಯ ಅದು ಎರಡು ಭಾಗವಾದದ್ದರಿಂದ ಎಲೀ ಷನು ದಾಟಿಹೋದನು.
- 15ಯೆರಿಕೋವಿನ ಬಳಿಯಲ್ಲಿ ಎದುರಾಗಿದ್ದ ಪ್ರವಾದಿಗಳ ಮಕ್ಕಳು ಅವನನ್ನು ಕಂಡಾಗ--ಎಲೀಯನ ಆತ್ಮನು ಎಲೀಷನ ಮೇಲೆ ನಿಂತಿರುವನು ಎಂದು ಹೇಳಿ ಅವನನ್ನು ಎದುರುಗೊಂಡು ಅವನಿಗೆ ಸಾಷ್ಟಾಂಗನಮಸ್ಕಾರಮಾಡಿದರು.
- 16ಇದ ಲ್ಲದೆ ಅವರು ಅವನಿಗೆ--ಇಗೋ, ನಿನ್ನ ಸೇವಕರ ಸಂಗಡ ಐವತ್ತು ಮಂದಿ ಬಲಿಷ್ಠರಾದವರಿದ್ದಾರೆ; ಅವರು ಹೋಗಿ ನಿನ್ನ ಯಜಮಾನನನ್ನು ಹುಡುಕಲು ಅಪ್ಪಣೆ ಯಾಗಲಿ, ಒಂದು ವೇಳೆ ಕರ್ತನ ಆತ್ಮನು ಅವನನ್ನು ಎತ್ತಿಕೊಂಡು ಹೋಗಿ ಬೆಟ್ಟದ ಮೇಲಾದರೂ ತಗ್ಗಿನ ಲ್ಲಾದರೂ ಹಾಕಿರಬಹುದು ಅಂದರು.
Cross references
- John 14:12 ಯೋಹಾನನು 14:12ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ನನ್ನನ್ನು ನಂಬುವವನು ನಾನು ಮಾಡುವ ಕ್ರಿಯೆ ಗಳನ್ನು ಸಹ ಮಾಡುವನು; ಇವುಗಳಿಗಿಂತ ಮಹತ್ತಾದ ಕ್ರಿಯೆಗಳನ್ನು ಅವನು ಮಾಡುವನು; ಯಾಕಂದರೆ ನಾನು ನನ್ನ ತಂದೆಯ ಬಳಿಗೆ ಹೋಗುತ್ತೇನೆ.
- Psalm 42:10 ಕೀರ್ತನೆಗಳು 42:10ನನ್ನ ವೈರಿಗಳು--ನಿನ್ನ ದೇವರು ಎಲ್ಲಿ ಎಂದು ದಿನವೆಲ್ಲಾ ನನಗೆ ಹೇಳಿ ನನ್ನನ್ನು ನಿಂದಿಸಿದ್ದರಿಂದ ನನ್ನ ಎಲುಬುಗಳು ಮುರಿದಹಾಗಿವೆ.ನನ್ನ ಪ್ರಾಣವೇ, ಕುಗ್ಗಿಹೋಗಿರುವದೇನು? ಯಾಕೆ ನನ್ನಲ್ಲಿ ವ್ಯಾಕುಲಪಡುತ್ತೀ? ದೇವರನ್ನು ನಿರೀಕ್ಷಿಸು. ನನ್ನ ಮುಖದ ಲಕ್ಷಣವೂ ನನ್ನ ದೇವರೂ ಆಗಿರುವಾತನನ್ನು ನಾನು ಇನ್ನೂ ಕೊಂಡಾಡುವೆನು.
- Psalm 115:2 ಕೀರ್ತನೆಗಳು 115:2ಅವರ ದೇವರು ಎಲ್ಲಿ ಎಂದು ಅನ್ಯ ಜನಾಂಗಗಳು ಯಾಕೆ ಹೇಳಬೇಕು?
- Joshua 1:1–9 ಯೆಹೋಶುವ 1:1–9ಕರ್ತನ ಸೇವಕನಾದ ಮೋಶೆ ಸತ್ತ ತರುವಾಯ ಕರ್ತನು ಮೋಶೆಯ ಸೇವಕನಾದ ನೂನನ ಮಗನಾಗಿರುವ ಯೆಹೋಶುವನಿಗೆ-- ನನ್ನ ಸೇವಕನಾದ ಮೋಶೆಯು ಸತ್ತನು; ಈಗ ನೀನು ಈ ಜನರೆಲ್ಲರ ಸಹಿತವಾಗಿ ನಾನು ಇಸ್ರಾಯೇಲ್ ಮಕ್ಕಳಿಗೆ ಕೊಡುವ ದೇಶಕ್ಕೆ ಹೋಗು. ನಾನು ಮೋಶೆಗೆ ಹೇಳಿದ ಹಾಗೆ ನಿಮ್ಮ ಪಾದವು ತುಳಿಯುವ ಎಲ್ಲಾ ಸ್ಥಳವನ್ನು ನಿಮಗೆ ಕೊಟ್ಟೆನು. ಅರಣ್ಯವೂ ಈ ಲೆಬನೋನೂ ಮೊದಲುಗೊಂಡು ಯೂಫ್ರೇಟೀಸ್ ಮಹಾನದಿಯ ವರೆಗೆ ಇರುವ ಹಿತ್ತಿಯರ ದೇಶವೆಲ್ಲಾ ಸೂರ್ಯನು ಅಸ್ತಮಿಸುವ ಕಡೆಗೆ ಮಹಾಸಮುದ್ರದ ವರೆಗೂ ನಿಮ್ಮ ಮೇರೆಯಾಗಿರುವದು. ಆದರೆ ನೀನು ಜೀವಿಸುವ ದಿವಸಗಳಲ್ಲೆಲ್ಲಾ ಯಾವನೂ ನಿನ್ನ ಮುಂದೆ ನಿಲ್ಲಲಾರನು. ನಾನು ಮೋಶೆಯ ಸಂಗಡ ಇದ್ದ ಹಾಗೆಯೇ ನಿನ್ನ ಸಂಗಡ ಇರುವೆನು. ನಾನು ನಿನ್ನನ್ನು ಕೈಬಿಡುವುದಿಲ್ಲ, ಇಲ್ಲವೆ ನಿನ್ನನ್ನು ತೊರೆಯುವದಿಲ್ಲ. ಬಲವಾಗಿರು, ದೃಢವಾಗಿರು; ಈ ಜನರಿಗೆ ನಾನು ಅವರ ತಂದೆಗಳಿಗೆ ಕೊಡುವೆನೆಂದು ಆಣೆ ಇಟ್ಟ ದೇಶವನ್ನು ನೀನು ಬಾದ್ಯವಾಗಿ ಹಂಚಿಕೊಡುವಿ. ನನ್ನ ಸೇವಕನಾದ ಮೋಶೆಯು ನಿನಗೆ ಆಜ್ಞಾಪಿಸಿದ ನ್ಯಾಯ ಪ್ರಮಾಣವೆಲ್ಲಾದರ ಪ್ರಕಾರ ನೀನು ಕೈಕೊಂಡು ನಡೆ ಯುವ ಹಾಗೆ ಬಲವಾಗಿರು, ಬಹು ಧೈರ್ಯದಿಂದಿರು, ನೀನು ಹೋಗುವ ಸ್ಥಳದಲ್ಲೆಲ್ಲಾ ಸಫಲವಾಗುವ ಹಾಗೆ ಅದನ್ನು (ನ್ಯಾಯಪ್ರಮಾಣವನ್ನು) ಬಿಟ್ಟು ಬಲ ಕ್ಕಾದರೂ ಎಡಕ್ಕಾದರೂ ತಿರುಗಬೇಡ. ಈ ಪುಸ್ತಕದಲ್ಲಿ ಬರೆದಿರುವ ನ್ಯಾಯಪ್ರಮಾಣವು ನಿನ್ನ ಬಾಯಿಂದ ಹೋಗಬಾರದು; ಅದರಲ್ಲಿ ಬರೆದಿರುವ ಪ್ರಕಾರವೇ ಕೈಕೊಂಡು ನಡೆಯುವ ಹಾಗೆ ರಾತ್ರಿಹಗಲು ಅದನ್ನು ಧ್ಯಾನಿಸಬೇಕು. ಆಗ ನಿನ್ನ ಮಾರ್ಗವನ್ನು ಸಫಲಮಾಡಿ ಕೊಂಡು ಮಹಾ ಜಯಶಾಲಿಯಾಗುವಿ. ನಿನಗೆ ಆಜ್ಞಾ ಪಿಸಿದ್ದೇನಲ್ಲಾ; ಬಲವಾಗಿರು, ಒಳ್ಳೆ ಧೈರ್ಯದಿಂದಿರು; ಭಯಪಡಬೇಡ, ನಿರಾಶೆಗೊಳ್ಳಬೇಡ. ನೀನು ಹೋಗು ವಲ್ಲೆಲ್ಲಾ ನಿನ್ನ ದೇವರಾದ ಕರ್ತನು ನಿನ್ನ ಸಂಗಡ ಇದ್ದಾನೆ ಎಂದು ಹೇಳಿದನು.
- Acts 3:12–13 ಅಪೊಸ್ತಲರ ಕೃತ್ಯಗಳು 3:12–13ಪೇತ್ರನು ಇದನ್ನು ನೋಡಿ ಜನರಿಗೆ--ಇಸ್ರಾ ಯೇಲ್ ಜನರೇ, ನೀವು ಯಾಕೆ ಇದಕ್ಕೆ ಆಶ್ಚರ್ಯ ಪಡುತ್ತೀರಿ? ಇಲ್ಲವೆ ನಮ್ಮ ಸ್ವಂತ ಶಕ್ತಿಯಿಂದಾಗಲಿ ಪರಿಶುದ್ಧತೆಯಿಂದಾಗಲಿ ಈ ಮನುಷ್ಯನನ್ನು ನಡೆಯು ವಂತೆ ಮಾಡಿದೆವೋ ಎಂಬಂತೆ ನಮ್ಮ ಮೇಲೆ ಯಾಕೆ ನೀವು ದೃಷ್ಟಿ ಇಟ್ಟು ನೋಡುತ್ತೀರಿ? ಅಬ್ರಹಾಮ ಇಸಾಕ ಯಾಕೋಬರ ದೇವರು, ನಮ್ಮ ಪಿತೃಗಳ ದೇವರು, ತನ್ನ ಮಗನಾದ ಯೇಸುವನ್ನು ಮಹಿಮೆ ಪಡಿಸಿದ್ದಾನೆ; ನೀವಾದರೋ ಆತನನ್ನು ಒಪ್ಪಿಸಿಕೊಟ್ಟಿರಿ; ಪಿಲಾತನು ಆತನನ್ನು ಬಿಟ್ಟುಬಿಡಬೇಕೆಂದು ನಿರ್ಣಯಿಸಿ ದಾಗ ನೀವು ಆತನನ್ನು ಅವನ ಮುಂದೆ ಅಲ್ಲಗಳೆದಿರಿ.
- Judges 6:13 ನ್ಯಾಯಸ್ಥಾಪಕರು 6:13ಆಗ ಗಿದ್ಯೋನನು ಅವನಿಗೆ--ನನ್ನ ಕರ್ತನೇ, ಕರ್ತನು ನಮ್ಮ ಸಂಗಡ ಇದ್ದರೆ ಇದೆಲ್ಲಾ ನಮಗೆ ಸಂಭವಿಸಿದ್ದೇನು? ಕರ್ತನು ನಮ್ಮನ್ನು ಐಗುಪ್ತದಿಂದ ಬರಮಾಡಲಿಲ್ಲವೋ ಎಂದು ನಮ್ಮ ತಂದೆಗಳು ನಮಗೆ ವಿವರಿಸಿ ಹೇಳಿದ ಆತನ ಅದ್ಭುತಗಳೆಲ್ಲಾ ಎಲ್ಲಿ? ಈಗ ಕರ್ತನು ನಮ್ಮನ್ನು ಕೈಬಿಟ್ಟು ಮಿದ್ಯಾನ್ಯರ ಕೈಗೆ ಒಪ್ಪಿಸಿ ದ್ದಾನೆ ಅಂದನು.
- 2 Kings 2:8–10 2 ಅರಸುಗಳು 2:8–10ಎಲೀಯನು ತನ್ನ ಹೊದಿಕೆಯನ್ನು ತೆಗೆದು ಮಡಚಿಕೊಂಡು ನೀರನ್ನು ಹೊಡೆದನು. ಆಗ ಆ ನೀರು ವಿಭಾಗವಾದದರಿಂದ ಅವರಿಬ್ಬರೂ ಒಣ ಭೂಮಿಯ ಮೇಲೆ ದಾಟಿಹೋದರು. ಅವರು ದಾಟಿಹೋದ ತರುವಾಯ ಆದದ್ದೇ ನಂದರೆ, ಎಲೀಯನು ಎಲೀಷನಿಗೆ--ನಾನು ನಿನ್ನ ಬಳಿ ಯಿಂದ ತಕ್ಕೊಳ್ಳಲ್ಪಡುವದಕ್ಕಿಂತ ಮುಂಚೆ ನಿನಗೋಸ್ಕರ ನಾನು ಮಾಡಬೇಕಾದದ್ದನ್ನು ಕೇಳು ಅಂದನು. ಅದಕ್ಕೆ ಎಲೀಷನು ದಯಮಾಡಿ ನಿನಗಿರುವ ಆತ್ಮದಲ್ಲಿ ನನಗೆ ಎರಡು ಪಾಲನ್ನು ಅನುಗ್ರಹಿಸು ಅಂದನು. ಅದಕ್ಕ ವನು--ನೀನು ಕಠಿಣವಾದದ್ದನ್ನು ಕೇಳಿದಿ; ಆದಾಗ್ಯೂ ನಾನು ನಿನ್ನ ಬಳಿಯಿಂದ ತೆಗೆಯಲ್ಪಡುವಾಗ ನೀನು ನನ್ನನ್ನು ನೋಡುವದಾದರೆ ನಿನಗೆ ದೊರಕುವದು; ಇಲ್ಲದಿದ್ದರೆ ದೊರಕುವುದಿಲ್ಲ ಅಂದನು.
- Joel 2:17 ಯೋವೇಲ 2:17ಕರ್ತನ ಸೇವಕರಾದ ಯಾಜಕರು ಅಂಗಳಕ್ಕೂ ಬಲಿಪೀಠಕ್ಕೂ ನಡುವೆ ಅತ್ತು ಹೀಗೆ ಹೇಳಲಿ--ಓ ಕರ್ತನೇ, ನಿನ್ನ ಜನರನ್ನು ಕನಿಕರಿಸು, ಜನಾಂಗಗಳು ಅವರ ಮೇಲೆ ಆಳುವ ಹಾಗೆ ನಿನ್ನ ಬಾಧ್ಯತೆಯನ್ನು ನಿಂದೆಗೆ ಒಪ್ಪಿಸಬೇಡ; ಅವರ ದೇವರು ಎಲ್ಲಿ ಎಂದು ಅವರು ಜನಗಳಲ್ಲಿ ಯಾಕೆ ಹೇಳಬೇಕು?
- Psalm 42:2 ಕೀರ್ತನೆಗಳು 42:2ದೇವರಿ ಗೋಸ್ಕರ ಹೌದು, ಜೀವವುಳ್ಳ ದೇವರಿಗೋಸ್ಕರ ನನ್ನ ಪ್ರಾಣವು ದಾಹಗೊಳ್ಳುತ್ತದೆ; ಯಾವಾಗ ಬಂದು ದೇವರ ಮುಂದೆ ಕಾಣಿಸಿಕೊಳ್ಳಲಿ?
- Acts 2:33 ಅಪೊಸ್ತಲರ ಕೃತ್ಯಗಳು 2:33ದೇವರ ಬಲಗೈಯಿಂದ ಆತನು ಉನ್ನತ ಸ್ಥಾನಕ್ಕೆ ಏರಿಸಲ್ಪಟ್ಟು ತಂದೆಯಿಂದ ಪವಿತ್ರಾತ್ಮನ ವಾಗ್ದಾನವನ್ನು ಹೊಂದಿ ನೀವು ಈಗ ನೋಡಿ ಕೇಳುವದನ್ನು ಆತನು ಸುರಿಸಿದ್ದಾನೆ.
- Mark 16:20 ಮಾರ್ಕನು 16:20ಮತ್ತು ಅವರು ಹೊರಟುಹೋಗಿ ಎಲ್ಲಾ ಕಡೆಯಲ್ಲಿ ಸಾರಿದರು. ಇದಲ್ಲದೆ ಕರ್ತನು ಅವರ ಜೊತೆಯಲ್ಲಿ ಕೆಲಸಮಾಡುತ್ತಾ ನಡೆದ ಸೂಚಕ ಕಾರ್ಯಗಳಿಂದ ವಾಕ್ಯವನ್ನು ಸ್ಥಿರಪಡಿಸುತ್ತಾ ಇದ್ದನು. ಆಮೆನ್.
- 1 Kings 18:36–39 1 ಅರಸುಗಳು 18:36–39ಸಾಯಂಕಾಲದ ಬಲಿಯನ್ನು ಅರ್ಪಿಸುವ ವೇಳೆ ಯಲ್ಲಿ ಪ್ರವಾದಿಯಾದ ಎಲೀಯನು ಸವಿಾಪಕ್ಕೆ ಬಂದು--ಅಬ್ರಹಾಮನಿಗೂ ಇಸಾಕನಿಗೂ ಇಸ್ರಾ ಯೇಲಿಗೂ ದೇವರಾದ ಕರ್ತನೇ, ಇಸ್ರಾಯೇಲಿನಲ್ಲಿ ನೀನು ದೇವರೆಂದೂ ನಾನು ನಿನ್ನ ಸೇವಕನೆಂದೂ ನಾನು ಈ ಕಾರ್ಯಗಳನ್ನೆಲ್ಲಾ ನಿನ್ನ ಮಾತಿನ ಹಾಗೆಯೇ ಮಾಡಿದೆನೆಂದೂ ಇಂದು ತಿಳಿಯಲ್ಪಡಲಿ. ನೀನು ದೇವರಾದ ಕರ್ತನೆಂದೂ ನೀನು ಅವರ ಹೃದಯವನ್ನು ಮರಳಿ ತಿರಿಗಿಸುತ್ತಿ ಎಂದೂ ಈ ಜನವು ತಿಳಿಯುವ ಹಾಗೆ ನನಗೆ ಉತ್ತರಕೊಡು, ಓ ಕರ್ತನೇ, ನನಗೆ ಉತ್ತರಕೊಡು ಎಂದು ಬೇಡಿದನು. ಆಗ ಕರ್ತನ ಬೆಂಕಿಯು ಇಳಿದು ಬಂದು ದಹನಬಲಿಯನ್ನೂ ಕಟ್ಟಿಗೆ ಗಳನ್ನೂ ಕಲ್ಲುಗಳನ್ನೂ ಮಣ್ಣನ್ನೂ ಸುಟ್ಟುಬಿಟ್ಟು ಕಾಲುವೆ ಯಲ್ಲಿದ್ದ ನೀರನ್ನು ಹೀರಿಬಿಟ್ಟಿತು. ಜನರೆಲ್ಲರು ಇದನ್ನು ನೋಡಿದಾಗ ಬೋರಲು ಬಿದ್ದು--ಕರ್ತನು ತಾನೇ ದೇವರು, ಕರ್ತನು ತಾನೇ ದೇವರು ಅಂದರು.
Original words (Hebrew)
- took · H3947לָקַח lâqach
- mantle · H155אַדֶּרֶת ʼaddereth
- Elijah · H452אֵלִיָּה ʼÊlîyâh
- fell · H5307נָפַל nâphal
- smote · H5221נָכָה nâkâh
- waters · H4325מַיִם mayim
- said · H559אָמַר ʼâmar
- God · H430אֱלֹהִים ʼĕlôhîym
- Elijah · H452אֵלִיָּה ʼÊlîyâh
- smitten · H5221נָכָה nâkâh
- waters · H4325מַיִם mayim
- parted · H2673חָצָה châtsâh
- Elisha · H477אֱלִישָׁע ʼĔlîyshâʻ
- over · H5674עָבַר ʻâbar