2 Kings · chapter 8 · verse 4
2 Kings 8:4 in Kannada
ಅರಸನು ದೇವರ ಮನುಷ್ಯನ ಸೇವ ಕನಾದ ಗೇಹಜಿಯ ಸಂಗಡ ಮಾತನಾಡಿ--ಎಲೀ ಷನು ಮಾಡಿದ ಎಲ್ಲಾ ದೊಡ್ಡ ಕ್ರಿಯೆಗಳನ್ನು ನನಗೆ ವಿವರವಾಗಿ ತಿಳಿಸೆಂದು ಅವನಿಗೆ ಹೇಳಿದನು.
Arasanu devara manushyana seva kanaada gehajiya sangada maatanaadi--elee shanu maadida ellaa dodda kriyegalannu nanage vivaravaagi tilisendu avanige helidanu.
2 Kings 8:4 in English
- King James Version (KJV)
- And the king talked with Gehazi the servant of the man of God, saying, Tell me, I pray thee, all the great things that Elisha hath done.
- World English Bible (WEB)
- Now the king was talking with Gehazi the servant of the man of God, saying, “Please tell me all the great things that Elisha has done.”
- American Standard Version (ASV)
- Now the king was talking with Gehazi the servant of the man of God, saying, Tell me, I pray thee, all the great things that Elisha hath done.
- Bible in Basic English (BBE)
- Now the king was talking with Gehazi, the servant of the man of God, saying, Now, give me an account of all the great things Elisha has done.
- Darby Translation (DBY)
- And the king was talking with Gehazi, the servant of the man of God, saying, Tell me, I pray thee, all the great things that Elisha has done.
- Webster's Bible (WBS)
- And the king talked with Gehazi the servant of the man of God, saying, Tell me, I pray thee, all the great things that Elisha hath done.
- Young's Literal Translation (YLT)
- And the king is speaking unto Gehazi, servant of the man of God, saying, 'Recount, I pray thee, to me, the whole of the great things that Elisha hath done.'
Read in context
- 2ಆಗ ಆ ಸ್ತ್ರೀಯು ಎದ್ದು ದೇವರ ಮನುಷ್ಯನ ಮಾತಿನ ಪ್ರಕಾರವೇ ಮಾಡಿ ತನ್ನ ಮನೆಯವರ ಸಂಗಡ ಹೋಗಿ ಫಿಲಿಷ್ಟಿಯರ ದೇಶದಲ್ಲಿ ಏಳು ವರುಷ ವಾಸವಾಗಿದ್ದಳು.
- 3ಏಳು ವರುಷದ ತರುವಾಯ ಏನಾಯಿತಂದರೆ, ಆ ಸ್ತ್ರೀಯು ಫಿಲಿಷ್ಟಿಯರ ದೇಶವನ್ನು ಬಿಟ್ಟು ತಿರಿಗಿ ಬಂದು ತನ್ನ ಮನೆಗೋಸ್ಕರವೂ ಹೊಲಕ್ಕೋಸ್ಕರವೂ ಅರಸನಿಗೆ ಮೊರೆಯಿಟ್ಟಳು.
- 4ಅರಸನು ದೇವರ ಮನುಷ್ಯನ ಸೇವ ಕನಾದ ಗೇಹಜಿಯ ಸಂಗಡ ಮಾತನಾಡಿ--ಎಲೀ ಷನು ಮಾಡಿದ ಎಲ್ಲಾ ದೊಡ್ಡ ಕ್ರಿಯೆಗಳನ್ನು ನನಗೆ ವಿವರವಾಗಿ ತಿಳಿಸೆಂದು ಅವನಿಗೆ ಹೇಳಿದನು.
- 5ಅವನು ಸತ್ತವನನ್ನು ಬದುಕಿಸಿದನೆಂದು, ಗೇಹಜಿಯು ಅರಸ ನಿಗೆ ವಿವರವಾಗಿ ಹೇಳುತ್ತಿರುವಾಗ ಏನಾಯಿತಂದರೆ ಇಗೋ, ಬದುಕಿಸಿದ ಮಗನ ತಾಯಿಯಾದ ಆ ಸ್ತ್ರೀಯು ತನ್ನ ಮನೆಗೋಸ್ಕರವೂ ಹೊಲಕ್ಕೋಸ್ಕರವೂ ಅರಸನಿಗೆ ಮೊರೆಯಿಡುತ್ತಿದ್ದಳು. ಆಗ ಗೇಹಜಿಯುನನ್ನ ಒಡೆಯನೇ, ಅರಸನೇ, ಇವಳೇ ಆ ಸ್ತ್ರೀಯು, ಎಲೀಷನು ಬದುಕಿಸಿದ ಇವಳ ಮಗನು ಇವನೇ ಅಂದನು.
- 6ಅರಸನು ಆ ಸ್ತ್ರೀಯನ್ನು ಕೇಳಿದಾಗ ಅವಳು ವಿವರವಾಗಿ ಹೇಳಿದಳು. ಆಗ ಅರಸನು ಅವಳಿಗಾಗಿ ಒಬ್ಬ ಅಧಿಕಾರಿಯನ್ನು ಕಳುಹಿಸಿಕೊಟ್ಟು ಅವಳಿಗೆ ಉಂಟಾದದ್ದನ್ನೆಲ್ಲಾ ಅವಳು ದೇಶವನ್ನು ಬಿಟ್ಟ ದಿನ ಮೊದಲುಗೊಂಡು ಆ ಕಾಲದ ವರೆಗೂ ಆ ಹೊಲದ ಹುಟ್ಟುವಳಿಯೆಲ್ಲಾ ಅವಳಿಗೆ ಬರುವ ಹಾಗೆ ಮಾಡು ಅಂದನು.
Cross references
- 2 Kings 5:20–27 2 ಅರಸುಗಳು 5:20–27ಆದರೆ ದೇವರ ಮನುಷ್ಯನಾದ ಎಲೀಷನ ಸೇವಕ ನಾಗಿರುವ ಗೇಹಜಿಯು--ಇಗೋ, ನನ್ನ ಯಜಮಾ ನನು ಈ ಅರಾಮ್ಯನಾದ ನಾಮಾನನು ತಕ್ಕೊಂಡು ಬಂದದ್ದನ್ನು ಅವನ ಕೈಯಿಂದ ತಕ್ಕೊಳ್ಳದೆ ಸುಮ್ಮನೆ ಕಳುಹಿಸಿದ್ದಾನೆ. ಆದರೆ ಕರ್ತನ ಜೀವದಾಣೆ, ನಾನು ಅವನ ಹಿಂದೆ ಓಡಿಹೋಗಿ ಅವನ ಕೈಯಿಂದ ಏನಾ ದರೂ ತಕ್ಕೊಳ್ಳುವೆನು ಅಂದುಕೊಂಡನು. ಹಾಗೆಯೇ ಗೇಹಜಿಯು ನಾಮಾನನ ಹಿಂದೆ ಹೋದನು. ನಾಮಾನನು ತನ್ನ ಹಿಂದೆ ಓಡಿ ಬರುವವನನ್ನು ನೋಡಿ ದಾಗ ಅವನನ್ನು ಎದುರುಗೊಳ್ಳಲು ರಥದಿಂದ ಇಳಿದು ಅವನಿಗೆ--ಎಲ್ಲಾ ಕ್ಷೇಮವೋ ಅಂದನು. ಅವನುಕ್ಷೇಮ; ಇಗೋ, ಪ್ರವಾದಿಗಳ ಮಕ್ಕಳಲ್ಲಿ ಇಬ್ಬರು ಯೌವನಸ್ಥರು ಎಫ್ರಾಯಾಮ್ ಬೆಟ್ಟದಿಂದ ಈಗಲೇ ನನ್ನ ಬಳಿಗೆ ಬಂದಿದ್ದಾರೆ; ನೀನು ದಯಮಾಡಿ ಅವರಿಗೆ ಒಂದು ತಲಾಂತು ಬೆಳ್ಳಿಯನ್ನೂ ಎರಡು ದುಸ್ತು ಬಟ್ಟೆ ಗಳನ್ನೂ ಕೊಡಬೇಕೆಂದು ನಿನಗೆ ಹೇಳು ಎಂದು ನನ್ನ ಯಜಮಾನನು ಕಳುಹಿಸಿದ್ದಾನೆ ಅಂದನು. ಆಗ ನಾಮಾನನು--ನೀನು ದಯಮಾಡಿ ಎರಡು ತಲಾಂತು ಗಳನ್ನು ತಕ್ಕೋ ಎಂದು ಹೇಳಿ ಅವನನ್ನು ಬಲವಂತ ಮಾಡಿದನು. ಹಾಗೆಯೇ ಎರಡು ತಲಾಂತು ಬೆಳ್ಳಿಯನ್ನು ಎರಡು ಚೀಲಗಳಲ್ಲಿ ಕಟ್ಟಿಸಿ ಅದರ ಸಂಗಡ ಎರಡು ದುಸ್ತು ಬಟ್ಟೆಗಳನ್ನು ಕೊಟ್ಟು ತನ್ನ ಸೇವಕರಲ್ಲಿ ಇಬ್ಬರ ಮೇಲೆ ಹೊರಿಸಿದನು; ಅವರು ಇವನ ಮುಂದೆ ಹೊತ್ತುಕೊಂಡು ಹೋದರು. ಅವನು ದುರ್ಗಕ್ಕೆ ಬಂದು ಅವುಗಳನ್ನು ಅವರ ಕೈಯಿಂದ ತಕ್ಕೊಂಡು ಮನೆಯಲ್ಲಿಟ್ಟು ಆ ಮನುಷ್ಯರನ್ನು ಕಳುಹಿಸಿಬಿಟ್ಟದ್ದರಿಂದ ಅವರು ಹೋದರು. ಆಗ ಇವನು ಒಳಗೆ ಪ್ರವೇಶಿಸಿ ತನ್ನ ಯಜಮಾನನ ಮುಂದೆ ನಿಂತನು. ಎಲೀಷನು ಅವನಿಗೆ--ಗೇಹಜಿಯೇ, ಎಲ್ಲಿಂದ ಬಂದಿ ಅಂದನು. ಅದಕ್ಕವನು--ನಿನ್ನ ಸೇವಕನು ಎಲ್ಲಿಗೂ ಹೋಗಲಿಲ್ಲ ಅಂದನು. ಆಗ ಅವನು ಇವನಿಗೆ--ಆ ಮನುಷ್ಯನು ನಿನ್ನನ್ನು ಎದುರುಗೊಳ್ಳಲು ತನ್ನ ರಥದಿಂದ ಇಳಿದು ನಿನ್ನ ಬಳಿಗೆ ಬಂದಾಗ ನನ್ನ ಹೃದಯವು ನಿನ್ನ ಸಂಗಡ ಹೋಗಲಿಲ್ಲವೋ? ದ್ರವ್ಯವನ್ನೂ ವಸ್ತ್ರಗಳನ್ನೂ ಆಲಿದ್ ತೋಪುಗಳನ್ನೂ ದ್ರಾಕ್ಷೆಯ ತೋಟಗಳನ್ನೂ ಕುರಿ ದನಗಳನ್ನೂ ದಾಸದಾಸಿಯರನ್ನೂ ಪಡಕೊಳ್ಳುವದಕ್ಕೆ ಇದು ಸಮಯವೋ?ಆದದರಿಂದ ನಾಮಾನನ ಕುಷ್ಠರೋಗವು ನಿನಗೂ ನಿನ್ನ ಸಂತಾನಕ್ಕೂ ನಿತ್ಯವಾಗಿ ಹತ್ತುವದು ಅಂದನು. ಆಗ ಅವನು ಮಂಜಿನ ಹಾಗೆಯೇ ಕುಷ್ಠರೋಗಿಯಾಗಿ ಅವನ ಸಮ್ಮುಖದಿಂದ ಹೊರಟುಹೋದನು. ಆದದರಿಂದ ನಾಮಾನನ ಕುಷ್ಠರೋಗವು ನಿನಗೂ ನಿನ್ನ ಸಂತಾನಕ್ಕೂ ನಿತ್ಯವಾಗಿ ಹತ್ತುವದು ಅಂದನು. ಆಗ ಅವನು ಮಂಜಿನ ಹಾಗೆಯೇ ಕುಷ್ಠರೋಗಿಯಾಗಿ ಅವನ ಸಮ್ಮುಖದಿಂದ ಹೊರಟುಹೋದನು.
- 2 Kings 2:20–22 2 ಅರಸುಗಳು 2:20–22ಅದಕ್ಕ ವನು--ನನ್ನ ಬಳಿಗೆ ಹೊಸ ಗಡಿಗೆಯನ್ನು ತಕ್ಕೊಂಡು ಬಂದು ಅದರಲ್ಲಿ ಉಪ್ಪು ಹಾಕಿರಿ ಅಂದನು. ಅವರು ಅದನ್ನು ಅವನ ಬಳಿಗೆ ತಕ್ಕೊಂಡು ಬಂದರು. ಅವನು ನೀರು ಬುಗ್ಗೆಯ ಬಳಿಗೆ ಹೊರಟುಹೋಗಿ ಅದರಲ್ಲಿ ಉಪ್ಪು ಹಾಕಿ ಹೇಳಿದ್ದೇನಂದರೆ--ಈ ನೀರನ್ನು ಶುದ್ಧ ಮಾಡಿದೆನು; ಇನ್ನು ಮೇಲೆ ಅದರಿಂದ ಮರಣವೂ ಬಂಜೆತನವೂ ಆಗದಿರಲೆಂದು ಕರ್ತನು ಹೇಳುತ್ತಾನೆ ಅಂದನು. ಎಲೀಷನು ಹೇಳಿದ ವಾಕ್ಯದ ಪ್ರಕಾರವೇ ಆ ನೀರು ಇಂದಿನ ವರೆಗೂ ಹಾಗೆಯೇ ಇರುತ್ತದೆ.
- Acts 24:24 ಅಪೊಸ್ತಲರ ಕೃತ್ಯಗಳು 24:24ಕೆಲವು ದಿವಸಗಳಾದ ಮೇಲೆ ಯೆಹೂದ್ಯಳಾದ ದ್ರೂಸಿಲ್ಲಳೆಂಬ ತನ್ನ ಹೆಂಡತಿಯೊಂದಿಗೆ ಫೇಲಿಕ್ಸನು ಬಂದು ಪೌಲನನ್ನು ಕರೆಯಿಸಿ ಕ್ರಿಸ್ತನಲ್ಲಿ ಇಡಬೇಕಾದ ನಂಬಿಕೆಯ ವಿಷಯವಾಗಿ ಅವನು ಹೇಳಿದ್ದನ್ನು ಕೇಳಿದನು.
- 2 Kings 3:14–16 2 ಅರಸುಗಳು 3:14–16ಆಗ ಎಲೀಷನು--ನಾನು ಯಾವಾತನ ಸಮ್ಮುಖ ದಲ್ಲಿ ನಿಂತಿರುತ್ತೇನೋ ಆ ಸೈನ್ಯಗಳ ಕರ್ತನ ಜೀವದಾಣೆ, ನಿಶ್ಚಯವಾಗಿ ಯೆಹೂದದ ಅರಸನಾದ ಯೆಹೋಷಾ ಫಾಟನ ಸಮ್ಮುಖವನ್ನು ನಾನು ಗೌರವಿಸದಿದ್ದರೆ ನಾನು ನಿನ್ನ ಕಡೆ ಕಣ್ಣಿಡುವದಿಲ್ಲ, ನೋಡುವದೂ ಇಲ್ಲ. ಆದರೆ ಈಗ ವಾದ್ಯ ಬಾರಿಸುವವನನ್ನು ನನ್ನ ಬಳಿಗೆ ಕರಕೊಂಡು ಬಾ ಅಂದನು. ಆಗ ವಾದ್ಯ ಬಾರಿಸುವ ವನು ಬಾರಿಸಿದಾಗ ಕರ್ತನ ಕೈ ಅವನ ಮೇಲೆ ಬಂತು. ಅವನು ಹೇಳಿದ್ದೇನಂದರೆ -- ಈ ತಗ್ಗನ್ನು ಹಳ್ಳ ಕೊಳ್ಳಗಳಾಗಿ ಮಾಡಿರೆಂದು ಕರ್ತನು ಹೇಳುತ್ತಾನೆ.
- Matthew 2:8 ಮತ್ತಾಯನು 2:8ಅವರನ್ನು ಬೇತ್ಲೆಹೇಮಿಗೆ ಕಳುಹಿ ಸುವಾಗ--ನೀವು ಹೋಗಿ ಆ ಶಿಶುವಿನ ವಿಷಯದಲ್ಲಿ ಪರಿಷ್ಕಾರವಾಗಿ ಹುಡುಕಿ ಆತನನ್ನು ಕಂಡುಕೊಂಡ ಮೇಲೆ ತಿರಿಗಿ ಬಂದು ನನಗೆ ತಿಳಿಸಿರಿ; ಆಗ ನಾನು ಸಹ ಬಂದು ಆತನನ್ನು ಆರಾಧಿಸುವೆನು ಅಂದನು.
- 2 Kings 5:14 2 ಅರಸುಗಳು 5:14ಆಗ ಅವನು ಇಳಿದುಹೋಗಿ ದೇವರ ಮನುಷ್ಯನ ವಾಕ್ಯದ ಪ್ರಕಾರ ಯೊರ್ದನಿನಲ್ಲಿ ಏಳುಸಾರಿ ಮುಣುಗಿದನು; ಆಗ ಅವನ ಶರೀರವು ಚಿಕ್ಕ ಮಗುವಿನ ಶರೀರದ ಹಾಗೆ ಮಾರ್ಪಟ್ಟಿತು; ಅವನು ಶುದ್ಧನಾದನು.
- 2 Kings 6:9–12 2 ಅರಸುಗಳು 6:9–12ಆಗ ದೇವರ ಮನು ಷ್ಯನು ಇಸ್ರಾಯೇಲಿನ ಅರಸನಿಗೆ--ಅಂಥಾ ಸ್ಥಳವನ್ನು ಹಾದು ಹೋಗದೆ ಜಾಗ್ರತೆಯಾಗಿ ಇರು; ಯಾಕಂದರೆ ಅರಾಮ್ಯರು ಅಲ್ಲಿಗೆ ಇಳಿದು ಬಂದಿದ್ದಾರೆಂದು ಹೇಳಿ ಕಳುಹಿಸಿದನು. ಹೀಗೆಯೇ ದೇವರ ಮನುಷ್ಯನು ತನ್ನನ್ನು ಎಚ್ಚರಿಸಿ ತನಗೆ ಹೇಳಿದ ಸ್ಥಳಕ್ಕೆ ಇಸ್ರಾಯೇಲಿನ ಅರಸನು ಹೇಳಿಕಳುಹಿಸಿ ತನ್ನನ್ನು ರಕ್ಷಿಸಿಕೊಂಡನು; ಹೀಗಾದದ್ದು ಒಂದೆರಡು ಸಾರಿ ಮಾತ್ರವೇ ಅಲ್ಲ. ಆದದರಿಂದ ಅರಾಮ್ಯರ ಅರಸನ ಹೃದಯವು ಇದರ ನಿಮಿತ್ತ ಕಳವಳಗೊಂಡು ಅವನು ತನ್ನ ಸೇವಕರನ್ನು ಕರೆದು ಅವರಿಗೆ--ನಮ್ಮಲ್ಲಿ ಇಸ್ರಾಯೇ ಲಿನ ಅರಸನ ಕಡೆಯವನು ಯಾರು? ನೀವು ನನಗೆ ತಿಳಿಸುವದಿಲ್ಲವೋ ಅಂದನು. ಅವನ ಸೇವಕರಲ್ಲಿ ಒಬ್ಬನು--ನನ್ನ ಒಡೆಯನೇ, ಅರಸನೇ, ಯಾವನೂ ಇಲ್ಲ. ಆದರೆ ಇಸ್ರಾಯೇಲಿನಲ್ಲಿರುವ ಪ್ರವಾದಿಯಾದ ಎಲೀಷನು ಇದ್ದಾನೆ; ನೀನು ನಿನ್ನ ಮಲಗುವ ಮನೆ ಯಲ್ಲಿ ಹೇಳುವ ಮಾತುಗಳನ್ನು ಇಸ್ರಾಯೇಲಿನ ಅರಸ ನಿಗೆ ಹೇಳುತ್ತಾನೆ ಅಂದನು.
- 2 Kings 7:16–20 2 ಅರಸುಗಳು 7:16–20ಆಗ ಜನರು ಹೊರಟುಹೋಗಿ ಅರಾಮ್ಯರ ಡೇರೆಗಳನ್ನು ಸುಲುಕೊಂಡರು. ಆದದ ರಿಂದ ಕರ್ತನ ವಾಕ್ಯದ ಪ್ರಕಾರವೇ ಒಂದು ಸೇರು ನಯವಾದ ಹಿಟ್ಟು ಒಂದು ಶೇಕೆಲಿಗೂ ಎರಡು ಸೇರು ಜವೆಗೋದಿಯು ಒಂದು ಶೇಕೆಲಿಗೂ ಮಾರಲ್ಪಟ್ಟಿತು. ಅರಸನಿಗೆ ಹಸ್ತಕನಾದ ಆ ಅಧಿಕಾರಿಯನ್ನು ಅರಸನು ಪಟ್ಟಣದ ಬಾಗಲಿನ ಕಾವಲಿಗೆ ನೇಮಿಸಿದ್ದನು. ಅರಸನು ದೇವರ ಮನುಷ್ಯನ ಬಳಿಗೆ ಬಂದಾಗ ದೇವರ ಮನು ಷ್ಯನು ಹೇಳಿದ್ದ ಪ್ರಕಾರವೇ ಜನರು ಅವನನ್ನು ಪಟ್ಟ ಣದ ಬಾಗಲಲ್ಲಿ ತುಳಿದು ಹಾಕಿದ್ದರಿಂದ ಅವನು ಸತ್ತುಹೋದನು. ಹಾಗೆಯೇ--ಎರಡು ಸೇರು ಜವೆ ಗೋದಿಯು ಒಂದು ಶೇಕೆಲಿಗೂ ಒಂದು ಸೇರು ನಯವಾದ ಹಿಟ್ಟು ಒಂದು ಶೇಕೆಲಿಗೂ ನಾಳೆ ಇಷ್ಟು ಹೊತ್ತಿಗೆ ಸಮಾರ್ಯದ ಬಾಗಲಲ್ಲಿ ಮಾರಲ್ಪಡುವ ವೆಂದು ದೇವರ ಮನುಷ್ಯನು ಅರಸನಿಗೆ ಹೇಳಿದ ಪ್ರಕಾರವೇ ಸಂಭವಿಸಿತು. ಆ ಅಧಿಕಾರಿ ದೇವರ ಮನುಷ್ಯನಿಗೆ ಪ್ರತ್ಯುತ್ತರವಾಗಿ--ಇಗೋ, ಕರ್ತನು ಆಕಾಶದಲ್ಲಿ ಕಿಟಕಿಗಳನ್ನು ಉಂಟುಮಾಡಿದರೂ ಹಾಗಾ ಗುವದೋ ಅಂದನು; ಅದಕ್ಕವನು--ಇಗೋ, ನೀನು ನಿನ್ನ ಕಣ್ಣುಗಳಿಂದ ನೋಡುವಿ; ಆದರೆ ಅದನ್ನು ತಿನ್ನು ವದಿಲ್ಲ ಎಂದು ಹೇಳಿದ್ದನು.ಆ ಪ್ರಕಾರವೇ ಅವನಿಗೆ ಸಂಭವಿಸಿತು; ಏನಂದರೆ ಬಾಗಲಲ್ಲಿ ಜನರು ಅವನನ್ನು ತುಳಿದಿದ್ದರಿಂದ ಅವನು ಸತ್ತನು. ಆ ಪ್ರಕಾರವೇ ಅವನಿಗೆ ಸಂಭವಿಸಿತು; ಏನಂದರೆ ಬಾಗಲಲ್ಲಿ ಜನರು ಅವನನ್ನು ತುಳಿದಿದ್ದರಿಂದ ಅವನು ಸತ್ತನು.
- 2 Kings 7:3 2 ಅರಸುಗಳು 7:3ಆಗ ಊರು ಬಾಗಲ ದ್ವಾರದಲ್ಲಿ ನಾಲ್ಕುಮಂದಿ ಕುಷ್ಠರೋಗಿಗಳು ಇದ್ದರು. ಅವರು ಒಬ್ಬರಿಗೊಬ್ಬರುನಾವು ಸಾಯುವ ವರೆಗೂ ಇಲ್ಲಿ ಕುಳಿತುಕೊಂಡಿ ರುವದೇನು?
- 2 Kings 7:1 2 ಅರಸುಗಳು 7:1ಆಗ ಎಲೀಷನು--ನೀವು ಕರ್ತನ ವಾಕ್ಯವನ್ನು ಕೇಳಿರಿ; ಕರ್ತನು ಹೀಗೆ ಹೇಳು ತ್ತಾನೆ -- ನಾಳೆ ಹೆಚ್ಚು ಕಡಿಮೆ ಇಷ್ಟು ಹೊತ್ತಿಗೆ ಸಮಾರ್ಯದ ಬಾಗಲಲ್ಲಿ ಒಂದು ಸೇರು ನಯವಾದ ಹಿಟ್ಟು ಒಂದು ಶೇಕೆಲಿಗೂ ಎರಡು ಸೇರು ಜವೆ ಗೋದಿಯು ಒಂದು ಶೇಕೆಲಿಗೂ ಮಾರಲ್ಪಡುವವು ಅಂದನು.
- Luke 23:8 ಲೂಕನು 23:8ಹೆರೋದನು ಯೇಸುವನ್ನು ನೋಡಿದಾಗ ಅತ್ಯಂತ ಸಂತೋಷಪಟ್ಟನು; ಯಾಕಂದರೆ ಅವನು ಆತನ ವಿಷಯವಾಗಿ ಅನೇಕ ಸಂಗತಿಗಳನ್ನು ಕೇಳಿದ್ದರಿಂದ ಆತನನ್ನು ನೋಡುವಂತೆ ಬಹಳ ಕಾಲದಿಂದ ಆಶೆಪಟ್ಟಿ ದ್ದನು. ಆತನಿಂದಾಗುವ ಅದ್ಭುತ ಕಾರ್ಯವನ್ನು ನೋಡ ಲು ನಿರೀಕ್ಷಿಸುತ್ತಿದ್ದನು.
- 2 Kings 2:14 2 ಅರಸುಗಳು 2:14ಎಲೀಯನಿಂದ ಬಿದ್ದ ಹೊದಿಕೆಯನ್ನು ತಕ್ಕೊಂಡು ನೀರನ್ನು ಹೊಡೆದು--ಎಲೀಯನ ದೇವರಾದ ಕರ್ತನು ಎಲ್ಲಿದ್ದಾನೆ ಅಂದನು. ಅವನು ಹಾಗೆ ನೀರನ್ನು ಹೊಡೆದ ತರುವಾಯ ಅದು ಎರಡು ಭಾಗವಾದದ್ದರಿಂದ ಎಲೀ ಷನು ದಾಟಿಹೋದನು.